YouTube ನಲ್ಲಿ NFL ಸಂಡೇ ಟಿಕೆಟ್ ಅನ್ನು ವೀಕ್ಷಿಸಿ

YouTube Primetime ಚಾನಲ್‌‌ಗಳಲ್ಲಿ NFL ಸಂಡೇ ಟಿಕೆಟ್, ನಿಮ್ಮ ಪ್ರದೇಶದ ಸ್ಥಳೀಯ ಪ್ರಸಾರಗಳಲ್ಲಿ ಒಳಗೊಂಡಿರದ ಸಂಡೇ ಆಫ್ಟರ್‌ನೂನ್ ನಿಯಮಿತ ಸೀಸನ್ NFL ಗೇಮ್‌ಗಳನ್ನು, YouTube TV ಬೇಸ್ ಪ್ಲಾನ್ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸುವ ಅಗತ್ಯವಿಲ್ಲದೆಯೇ ನಿಮಗೆ ಒದಗಿಸುತ್ತದೆ. YouTube ನಲ್ಲಿ NFL ಸಂಡೇ ಟಿಕೆಟ್ ಅನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.

YouTube ನಲ್ಲಿ NFL ಸಂಡೇ ಟಿಕೆಟ್ ಗೇಮ್‌ಗಳನ್ನು ವೀಕ್ಷಿಸಿ - ಯು.ಎಸ್‌ನಲ್ಲಿ ಮಾತ್ರ

CBS ಹಾಗೂ FOX ಚಾನಲ್‌ಗಳು ಪ್ರಸಾರ ಮಾಡುವ, ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಲಭ್ಯವಿಲ್ಲದ ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ ಔಟ್ ಆಫ್ ಮಾರ್ಕೆಟ್ NFL ಗೇಮ್‌ಗಳನ್ನು ನೀವು NFL ಸಂಡೇ ಟಿಕೆಟ್ Primetime ಚಾನಲ್‌ನ ಮೂಲಕ ವೀಕ್ಷಿಸಬಹುದು. YouTube ನಲ್ಲಿನ NFL ಸಂಡೇ ಟಿಕೆಟ್‌ನಲ್ಲಿ, NBC ಯಲ್ಲಿ ಸಂಡೇ ನೈಟ್ ಫುಟ್‌ಬಾಲ್, ESPN ನಲ್ಲಿ ಮಂಡೇ ನೈಟ್ ಫುಟ್‌ಬಾಲ್, ಆಯ್ದ ಡಿಜಿಟಲ್-ಮಾತ್ರ ಗೇಮ್‌ಗಳು ಹಾಗೂ ಅಂತಾರಾಷ್ಟ್ರೀಯ ಗೇಮ್‌ಗಳು ಹಾಗೂ ಪ್ರೀ-ಸೀಸನ್ ಮತ್ತು ಪೋಸ್ಟ್-ಸೀಸನ್ ಗೇಮ್‌ಗಳು ಒಳಗೊಂಡಿರುವುದಿಲ್ಲ. ನಿಯಮಿತ ಸೀಸನ್ ಗೇಮ್‌ಗಳು ಭಾನುವಾರ, ಸೆಪ್ಟೆಂಬರ್ 10 ರಂದು ಸ್ಟ್ರೀಮ್ ಆಗಲು ಪ್ರಾರಂಭವಾಗುತ್ತವೆ.

ಈ ಲೇಖನದಲ್ಲಿ, ಗೇಮ್‌ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಎಂಬುದು ಒಳಗೊಂಡಂತೆ ಗೇಮ್‌ಗಳನ್ನು ಎಲ್ಲಿ ಹುಡುಕಬೇಕು, ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಅವುಗಳನ್ನು ಹೇಗೆ ಸ್ಟ್ರೀಮ್ ಮಾಡಬಹುದು ಮತ್ತು ಇನ್ನಷ್ಟು ವಿಷಯಗಳನ್ನು ನೀವು ತಿಳಿದುಕೊಳ್ಳಬಹುದು.

ನಿಮ್ಮ ಸ್ಮಾರ್ಟ್ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ NFL ಸಂಡೇ ಟಿಕೆಟ್ ಅನ್ನು ವೀಕ್ಷಿಸಿ

ನಿಮ್ಮ ಸ್ಮಾರ್ಟ್ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ NFL ಸಂಡೇ ಟಿಕೆಟ್ ಅನ್ನು ವೀಕ್ಷಿಸುವುದಕ್ಕೆ ಮೊದಲು, ಇವುಗಳನ್ನು ಖಚಿತಪಡಿಸಿಕೊಳ್ಳಿ: 

ನಿಮ್ಮ ಸ್ಮಾರ್ಟ್ ಟಿವಿ ಅಥವಾ ನಿಮ್ಮ ಸ್ಟ್ರೀಮಿಂಗ್ ಸಾಧನದಲ್ಲಿ ವೀಕ್ಷಿಸುವುದನ್ನು ಪ್ರಾರಂಭಿಸಲು:

  1. YouTube ಆ್ಯಪ್ ಅನ್ನು ತೆರೆಯಿರಿ ನಂತರ NFL ಸಂಡೇ ಟಿಕೆಟ್ ಅನ್ನು ಖರೀದಿಸಲು ನೀವು ಬಳಸಿದ Google ಖಾತೆಯೊಂದಿಗೆ ಸೈನ್ ಇನ್ ಮಾಡಿ. ನಿಮ್ಮ ಟಿವಿಯಲ್ಲಿ YouTube ಆ್ಯಪ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಮತ್ತು ಅದರಲ್ಲಿ ಸೈನ್ ಇನ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
  2. ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ, ಲೈವ್ ಮತ್ತು ಮುಂಬರುವ ಗೇಮ್‌ಗಳು ಹೋಮ್  ಟ್ಯಾಬ್‌ನಲ್ಲಿ ಮತ್ತು NFL ಚಾನಲ್ ಪುಟದಲ್ಲಿ ಕಾಣಿಸಿಕೊಳ್ಳುತ್ತವೆ. ಹುಡುಕಾಟ ಪಟ್ಟಿಯಲ್ಲಿ “NFL” ಎಂದು ನಮೂದಿಸುವ ಮೂಲಕ ನೀವು NFL ಚಾನಲ್ ಪುಟವನ್ನು ಹುಡುಕಬಹುದು.
    1. ಗೇಮ್ ಲೈವ್ ಆಗಿದ್ದರೆ, ವೀಕ್ಷಿಸಲು ಆರಂಭಿಸುವುದಕ್ಕಾಗಿ ಗೇಮ್ ಅನ್ನು ಆಯ್ಕೆ ಮಾಡಿ.
    2. ಗೇಮ್ ಅನ್ನು ಆನಂತರಕ್ಕಾಗಿ ನಿಗದಿಪಡಿಸಿದ್ದರೆ, ಗೇಮ್ ಲೈವ್ ಆದಾಗ ನಿಮ್ಮ ಫೋನ್‌ನಲ್ಲಿ ಎಚ್ಚರಿಕೆಯೊಂದನ್ನು ಪಡೆಯಲು, ಗೇಮ್ ಅನ್ನು ಆಯ್ಕೆ ಮಾಡಿ ನಂತರ ನನಗೆ ಸೂಚನೆ ನೀಡಿ ಎಂಬುದನ್ನು ಆಯ್ಕೆ ಮಾಡಿ.
NFL ಸಂಡೇ ಟಿಕೆಟ್ ಅನ್ನು ವೀಕ್ಷಿಸಲು ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ಖಚಿತಪಡಿಸಿ
 
ವೀಕ್ಷಿಸುವಾಗ ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ಖಚಿತಪಡಿಸಲು ನಿಮ್ಮನ್ನು ಕೇಳಬಹುದಾಗಿದೆ. ಇದನ್ನು ಮಾಡಲು, ದೃಢೀಕರಿಸುವುದಕ್ಕಾಗಿ ನೀವು ಬಳಸಲು ಉದ್ದೇಶಿಸಿರುವ ಮೊಬೈಲ್ ಸಾಧನ ಹಾಗೂ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ಸ್ಥಳ ಹಂಚಿಕೆಯನ್ನು ಆನ್ ಮಾಡಲಾಗಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಮೊಬೈಲ್ ಸಾಧನದಲ್ಲಿ ಸ್ಥಳ ಹಂಚಿಕೆಯನ್ನು ಆನ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ನಿಮ್ಮ ಸ್ಮಾರ್ಟ್ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ ಗೇಮ್ ಅನ್ನು ನಿಯಂತ್ರಿಸಿ

ಗೇಮ್ ಅನ್ನು ನಿಯಂತ್ರಿಸಲು ನಿಮ್ಮ ಸಾಧನದ ರಿಮೋಟ್ ಅನ್ನು ಬಳಸಿ:

  • ವಿರಾಮಗೊಳಿಸಲು, ಆಯ್ಕೆ ಮಾಡಿ ಎಂಬುದನ್ನು ಒತ್ತಿ.
  • ರಿವೈಂಡ್ ಮಾಡಲು, ನಿರ್ದೇಶನಗಳ ಪ್ಯಾಡ್‌ನಲ್ಲಿ ಎಡಕ್ಕೆ ಎಂಬುದನ್ನು ಒತ್ತಿ. ನೀವು ವೀಕ್ಷಿಸಲು ಪ್ರಾರಂಭಿಸಿದ ಸ್ಥಳದವರೆಗೆ ಮಾತ್ರ ನೀವು ರಿವೈಂಡ್ ಮಾಡಬಹುದು. ನೀವು ಗೇಮ್‌ಗಳ ನಡುವೆ ಬದಲಿಸಿದರೆ, ನೀವು ರಿವೈಂಡ್ ಮಾಡಬಹುದಾದ ಸ್ಥಳವು ರೀಸೆಟ್ ಆಗುತ್ತದೆ.
  • ಫಾಸ್ಟ್-ಫಾರ್ವರ್ಡ್ ಮಾಡಲು, ನಿರ್ದೇಶನಗಳ ಪ್ಯಾಡ್‌ನಲ್ಲಿ ಬಲಕ್ಕೆ ಎಂಬುದನ್ನು ಒತ್ತಿ. DVR ರೆಕಾರ್ಡ್ ಮಾಡಿದ ಗೇಮ್‌ಗಳಲ್ಲಿ (YouTube TV ಆ್ಯಪ್‌ನಲ್ಲಿ ಲಭ್ಯವಿದೆ) ಮತ್ತು ಈ ಹಿಂದೆ ಪ್ರಸಾರವಾದ ಬೇಡಿಕೆಯ ಮೇರೆಗಿನ ಗೇಮ್‌ಗಳಲ್ಲಿ ಲೈವ್ ಪ್ರೋಗ್ರಾಮ್ ವೀಕ್ಷಿಸುವುದಕ್ಕೆ ಮಾತ್ರ ಫಾಸ್ಟ್-ಫಾರ್ವರ್ಡ್ ಲಭ್ಯವಿದೆ.

ಅನೇಕ NFL ಗೇಮ್‌ಗಳನ್ನು ಏಕಕಾಲದಲ್ಲಿ ವೀಕ್ಷಿಸಿ

Attention: NFL Sunday Ticket subscribers without NFL RedZone.
 
If you purchased NFL Sunday Ticket without NFL RedZone, you may still see multiview options that include NFL RedZone. Choosing these multiviews won't work without an NFL RedZone subscription.

ಮಲ್ಟಿವ್ಯೂ ಮೂಲಕ ನೀವು ನಾಲ್ಕರಷ್ಟು NFL ಗೇಮ್‌ಗಳನ್ನು ಸ್ಮಾರ್ಟ್ ಟಿವಿಯಲ್ಲಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ ಒಂದೇ ಸಮಯದಲ್ಲಿ ವೀಕ್ಷಿಸಬಹುದು. YouTube ನಲ್ಲಿ ಗೇಮ್ ಪ್ರಾರಂಭವಾಗುವುದಕ್ಕಿಂತ ಸುಮಾರು 20 ನಿಮಿಷಗಳ ಮೊದಲು ಮಲ್ಟಿವ್ಯೂ ಆಯ್ಕೆಗಳು ನಿಮಗೆ ಕಾಣಿಸುತ್ತವೆ.

ಗೇಮ್‌ಗಳ ಆಯ್ದ ಸಂಯೋಜನೆಗಾಗಿ ಮಲ್ಟಿವ್ಯೂ ಅನ್ನು ಹುಡುಕಲು ಅತ್ಯಂತ ವೇಗದ ವಿಧಾನವೆಂದರೆ:

  1. ನಿಮ್ಮ ಮೆಚ್ಚಿನ ತಂಡವೊಂದರ ಗೇಮ್ ಅನ್ನು ವೀಕ್ಷಿಸಲು ಪ್ರಾರಂಭಿಸಿ.
  2. ಮಲ್ಟಿವ್ಯೂ ಸಂಯೋಜನೆಗಳು ಕಾಣಿಸುವವರೆಗೆ ನಿಮ್ಮ ರಿಮೋಟ್‌ನಲ್ಲಿ ಡೌನ್ ಆ್ಯರೋ ಒತ್ತಿರಿ.
  3. ನಿಮ್ಮ ಆಯ್ಕೆಯ ಗೇಮ್ ಸಂಯೋಜನೆಯನ್ನು ಆಯ್ಕೆ ಮಾಡಿ.

ನೀವು ಲೈವ್ ಗೇಮ್‌ಗಳನ್ನು ವೀಕ್ಷಿಸುವಾಗ, ಹೋಮ್  ಟ್ಯಾಬ್‌ನಲ್ಲಿ, NFL ಚಾನಲ್ ಪುಟದಲ್ಲಿ, ಮತ್ತು ಮುಂದೆ ವೀಕ್ಷಿಸಿ ಶಿಫಾರಸುಗಳಲ್ಲಿ ನೀವು ಮಲ್ಟಿವ್ಯೂಗಳನ್ನು ನೋಡಬಹುದು. YouTube ನಲ್ಲಿ ಮಲ್ಟಿವ್ಯೂಗಳ ಕುರಿತು ಇನ್ನಷ್ಟು ತಿಳಿಯಿರಿ.

NFL ಗೇಮ್‌ಗಳನ್ನು ರೆಕಾರ್ಡ್ ಮಾಡಿ

YouTube ನಲ್ಲಿ NFL ಸಂಡೇ ಟಿಕೆಟ್‌ನೊಂದಿಗೆ ನೀವು ಅಸೀಮಿತ ಡಿಜಿಟಲ್ ವೀಡಿಯೊ ರೆಕಾರ್ಡಿಂಗ್ (DVR) ಸಂಗ್ರಹಣೆಯನ್ನು ಪಡೆಯುವಿರಿ. ಆದರೆ ಗೇಮ್‌ಗಳನ್ನು ರೆಕಾರ್ಡ್ ಮಾಡಲು ಮತ್ತು ನಿಮ್ಮ ರೆಕಾರ್ಡಿಂಗ್‌ಗಳನ್ನು ವೀಕ್ಷಿಸಲು, ನೀವು YouTube TV ಆ್ಯಪ್‌ಗೆ ಹೋಗಬೇಕಾಗುತ್ತದೆ. YouTube TV ಬೇಸ್ ಪ್ಲಾನ್ ಸಬ್‌ಸ್ಕ್ರಿಪ್ಶನ್ ಇಲ್ಲದೆಯೂ, YouTube TV ಮೂಲಕ NFL ಸಂಡೇ ಟಿಕೆಟ್ Primetime ಚಾನಲ್ ಸಬ್‌ಸ್ಕ್ರೈಬರ್‌ಗಳಿಗೆ DVR ಲಭ್ಯವಿದೆ.

ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ ಪ್ರಾರಂಭಿಸುವುದು ಹೇಗೆ ಎಂಬುದು ಇಲ್ಲಿದೆ:

  1. YouTube TV ಆ್ಯಪ್ ಅನ್ನು ತೆರೆಯಿರಿ ನಂತರ NFL ಸಂಡೇ ಟಿಕೆಟ್ ಅನ್ನು ಖರೀದಿಸಲು ನೀವು ಬಳಸಿದ Google ಖಾತೆಯೊಂದಿಗೆ ಸೈನ್ ಇನ್ ಮಾಡಿ. ನಿಮ್ಮ ಟಿವಿಯಲ್ಲಿ YouTube TV ಆ್ಯಪ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಮತ್ತು ಸೈನ್ ಇನ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
  2. ನಿಮ್ಮ ಮನೆಯ ಸ್ಥಳವನ್ನು ಸೆಟ್ ಮಾಡಿ:
    1. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್‌ನಲ್ಲಿ, tv.youtube.com ಗೆ ಹೋಗಿ ನಂತರ ಸೈನ್ ಇನ್ ಮಾಡಿ.
    2. ನೀವು ಸೈನ್ ಇನ್ ಮಾಡಿದ ಬಳಿಕ, "YouTube TV ಗೆ ಸುಸ್ವಾಗತ" ಪುಟದಲ್ಲಿ ಈಗ ಬೇಡ ಎಂಬುದನ್ನು ಆಯ್ಕೆ ಮಾಡಿ ನಂತರ ಪ್ರಾಂಪ್ಟ್ ಮಾಡಿದಾಗ ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಿ.
  3. ನೀವು ಸೈನ್ ಇನ್ ಮಾಡಿದ ಬಳಿಕ ಮತ್ತು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ನಿಮ್ಮ ಸ್ಥಳವನ್ನು ದೃಢೀಕರಿಸಿದ ಬಳಿಕ, ನಿಮ್ಮ YouTube TV ಲೈಬ್ರರಿಯಲ್ಲಿ ನೀವು ತಂಡಗಳು ಹಾಗೂ NFL ಅನ್ನು ಸೇರಿಸಬಹುದು. NFL ಅನ್ನು ನಿಮ್ಮ ಲೈಬ್ರರಿಗೆ ಸೇರಿಸುವುದರಿಂದ NFL ಸಂಡೇ ಟಿಕೆಟ್ Primetime ಚಾನಲ್‌ನ ಮೂಲಕ ನಿಮಗೆ ಲಭ್ಯವಿರುವ NFL ಗೇಮ್‌ಗಳ ಪ್ರಸ್ತುತ ಮತ್ತು ಭವಿಷ್ಯದ ಪ್ರಸಾರಗಳನ್ನು ರೆಕಾರ್ಡ್ ಮಾಡಲಾಗುತ್ತದೆ. YouTube TV ಯಲ್ಲಿ ರೆಕಾರ್ಡ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ರೆಕಾರ್ಡಿಂಗ್‌ಗಳನ್ನು ಸ್ವಯಂಚಾಲಿತವಾಗಿ ನಿಮ್ಮ YouTube TV ಲೈಬ್ರರಿಗೆ ಸೇರಿಸಲಾಗುತ್ತದೆ, ಇದರಿಂದ ನೀವು ಅವುಗಳನ್ನು ನಿಮ್ಮ ಟಿವಿ, ಮೊಬೈಲ್ ಸಾಧನದಲ್ಲಿನ YouTube TV ಆ್ಯಪ್‌ನಲ್ಲಿ ಅಥವಾ ಕಂಪ್ಯೂಟರ್‌ನಿಂದ tv.youtube.com ನಲ್ಲಿ ವೀಕ್ಷಿಸಬಹುದು. ರೆಕಾರ್ಡಿಂಗ್‌ಗಳನ್ನು ನಿಮ್ಮ ಸಾಧನದಲ್ಲಿ ಸಂಗ್ರಹಣೆ ಮಾಡಲಾಗುವುದಿಲ್ಲ, ಆದ್ದರಿಂದ ಅವು ಸಾಧನದ ಮೆಮೊರಿಯನ್ನು ಬಳಸುವುದಿಲ್ಲ, ಆದರೆ ಅವುಗಳನ್ನು ವೀಕ್ಷಿಸಲು ನಿಮಗೆ ಇಂಟರ್ನೆಟ್ ಕನೆಕ್ಷನ್‌ನ ಅಗತ್ಯವಿದೆ.

ನಿಮ್ಮ ಮೊಬೈಲ್ ಸಾಧನದಲ್ಲಿ NFL ಗೇಮ್‌ಗಳನ್ನು ಡೌನ್‌ಲೋಡ್ ಮಾಡಿ

ನಿಮ್ಮ ರೆಕಾರ್ಡಿಂಗ್‌ಗಳನ್ನು ನಿಮ್ಮ ಮೊಬೈಲ್ ಸಾಧನದಲ್ಲಿ ಆಫ್‌ಲೈನ್‌ನಲ್ಲಿ ವೀಕ್ಷಿಸಲು, ಅವುಗಳನ್ನು YouTube TV ಆ್ಯಪ್‌ನಲ್ಲಿ ನೀವು ಡೌನ್‌ಲೋಡ್ ಮಾಡಬಹುದು:

  1. YouTube TV ಆ್ಯಪ್ ಅನ್ನು ತೆರೆಯಿರಿ ನಂತರ NFL ಸಂಡೇ ಟಿಕೆಟ್ ಅನ್ನು ಖರೀದಿಸಲು ನೀವು ಬಳಸಿದ Google ಖಾತೆಯೊಂದಿಗೆ ಸೈನ್ ಇನ್ ಮಾಡಿ.
  2. ನಿಮ್ಮ ಲೈಬ್ರರಿಗೆ ಹೋಗಿ.
  3. ನೀವು ಡೌನ್‌ಲೋಡ್ ಮಾಡಲು ಬಯಸುವ ಗೇಮ್ ಅನ್ನು ಹುಡುಕಿನಂತರ ಡೌನ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಪೂರ್ಣಗೊಂಡ ಡೌನ್‌ಲೋಡ್‌ಗಳು ನಿಮ್ಮ ಲೈಬ್ರರಿಯಲ್ಲಿ “ಡೌನ್‌ಲೋಡ್‌ಗಳು” ಟ್ಯಾಬ್‌ನ ಅಡಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಈ ಹಿಂದೆ ಪ್ರಸಾರ ಮಾಡಲಾದ NFL ಗೇಮ್‌ಗಳನ್ನು ಬೇಡಿಕೆಯ ಮೇರೆಗೆ (VOD) ವೀಕ್ಷಿಸಿ

YouTube ನಲ್ಲಿ NFL ಸಂಡೇ ಟಿಕೆಟ್‌ನ ಮೂಲಕ ಲಭ್ಯವಿರುವ ಎಲ್ಲಾ ಗೇಮ್‌ಗಳು, ಅವು ಪ್ರಸಾರವಾದ ಬಳಿಕ ಈಸ್ಟರ್ನ್ ಸ್ಟ್ಯಾಂಡರ್ಡ್ ಸಮಯದಲ್ಲಿ ಮಧ್ಯರಾತ್ರಿಗೆ ನಿಮಗೆ ಲಭ್ಯವಾಗುತ್ತವೆ. ಈ ಗೇಮ್‌ಗಳಲ್ಲಿನ ಆ್ಯಡ್‌‌ಗಳನ್ನು ಹಾಗೂ ಪ್ಲೇಗಳ ನಡುವಿನ ಡೌನ್‌ಟೈಮ್ ಅನ್ನು ತೆಗೆದುಹಾಕಿ, ಸುಮಾರು 45 ನಿಮಿಷಗಳಷ್ಟು ಉದ್ದವಿರುವ ಸಾರಾಂಶ ಮರುಪ್ಲೇಗಳ ರೂಪದಲ್ಲಿ, ನಂತರದ ಬುಧವಾರ 11:59 PM PT ವರೆಗೆ ಬೇಡಿಕೆಯ ಮೇರೆಗೆ ವೀಕ್ಷಿಸಲು ಲಭ್ಯಗೊಳಿಸಲಾಗುತ್ತದೆ.

VOD ಗೇಮ್‌ಗಳನ್ನು ಹುಡುಕಲು, NFL ಚಾನಲ್ ಪುಟಕ್ಕೆ ಹೋಗಿ. ಹುಡುಕಾಟ ಪಟ್ಟಿಯಲ್ಲಿ “NFL” ಎಂದು ನಮೂದಿಸುವ ಮೂಲಕವೂ ಸಹ ನೀವು NFL ಚಾನಲ್ ಪುಟವನ್ನು ಹುಡುಕಬಹುದು.

YouTube ನಲ್ಲಿ NFL ಸಂಡೇ ಟಿಕೆಟ್ ಅನ್ನು ವೀಕ್ಷಿಸುವ ಕುರಿತು ತಿಳಿಯಿರಿ

ಲಭ್ಯವಿರುವ NFL ಗೇಮ್‌ಗಳು ಹಾಗೂ ನನ್ನ ಸ್ಥಳದ ಕುರಿತು ನನ್ನಲ್ಲಿ ಪ್ರಶ್ನೆಗಳಿವೆ.

ನೀವು ನೋಡುವ ಗೇಮ್‌ಗಳು ನಿಮ್ಮ ಪ್ರಸ್ತುತ ಪ್ಲೇಬ್ಯಾಕ್ ಪ್ರದೇಶವನ್ನು ಅವಲಂಬಿಸಿರುತ್ತವೆ. ನೀವು ಇರುವ ಸ್ಥಳದ ಮಾರ್ಕೆಟ್‌ನಲ್ಲಿ ಒಂದು ಗೇಮ್ ಸ್ಥಳೀಯ ಚಾನಲ್‌ನಲ್ಲಿ ಲಭ್ಯವಿದ್ದರೆ, ಗೇಮ್ “ಲಭ್ಯವಿಲ್ಲ” ಎಂಬುದಾಗಿ ಪಟ್ಟಿ ಮಾಡಿರುವುದನ್ನು ನೀವು ನೋಡುವಿರಿ. NFL ಸಂಡೇ ಟಿಕೆಟ್ ಕೇವಲ ಔಟ್ ಆಫ್ ಮಾರ್ಕೆಟ್ NFL ಗೇಮ್‌ಗಳನ್ನು ಮಾತ್ರ ಒಳಗೊಂಡಿರುತ್ತದೆ. NFL ಸಂಡೇ ಟಿಕೆಟ್‌ನಲ್ಲಿ, NBC ಯಲ್ಲಿ ಸಂಡೇ ನೈಟ್ ಫುಟ್‌ಬಾಲ್, ESPN ನಲ್ಲಿ ಮಂಡೇ ನೈಟ್ ಫುಟ್‌ಬಾಲ್, ಆಯ್ದ ಡಿಜಿಟಲ್-ಮಾತ್ರ ಗೇಮ್‌ಗಳು ಹಾಗೂ ಅಂತಾರಾಷ್ಟ್ರೀಯ ಗೇಮ್‌ಗಳು ಹಾಗೂ ಪ್ರೀ-ಸೀಸನ್ ಮತ್ತು ಪೋಸ್ಟ್-ಸೀಸನ್ ಗೇಮ್‌ಗಳು ಒಳಗೊಂಡಿರುವುದಿಲ್ಲ.

CBS ಹಾಗೂ FOX ಚಾನಲ್‌ಗಳು ಪ್ರಸಾರ ಮಾಡುವ, ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಲಭ್ಯವಿಲ್ಲದ ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ ಔಟ್ ಆಫ್ ಮಾರ್ಕೆಟ್ NFL ಗೇಮ್‌ಗಳನ್ನು ನೀವು NFL ಸಂಡೇ ಟಿಕೆಟ್ Primetime ಚಾನಲ್‌ನ ಮೂಲಕ ವೀಕ್ಷಿಸಬಹುದು. ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ, ಲೈವ್ ಮತ್ತು ಮುಂಬರುವ ಗೇಮ್‌ಗಳು ಹೋಮ್  ಟ್ಯಾಬ್‌ನಲ್ಲಿ ಮತ್ತು NFL ಚಾನಲ್ ಪುಟದಲ್ಲಿ ಕಾಣಿಸಿಕೊಳ್ಳುತ್ತವೆ. ಹುಡುಕಾಟ ಪಟ್ಟಿಯಲ್ಲಿ “NFL” ಎಂದು ನಮೂದಿಸುವ ಮೂಲಕ ನೀವು NFL ಚಾನಲ್ ಪುಟವನ್ನು ಹುಡುಕಬಹುದು.

ನಿಮ್ಮ ಪ್ರಸ್ತುತ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸುವುದು ಹೇಗೆ

ನಿಮ್ಮ ಟಿವಿಯಲ್ಲಿ Primetime ಚಾನಲ್‌ಗಳನ್ನು ವೀಕ್ಷಿಸಲು ಸ್ಥಳ ಹಂಚಿಕೆಯನ್ನು ಆನ್ ಮಾಡುವುದು ಹೇಗೆ

YouTube ನಲ್ಲಿ NFL ಗೇಮ್‌ಗಳನ್ನು ವೀಕ್ಷಿಸಲು, ನಿಮ್ಮ ಸ್ಥಳವನ್ನು ದೃಢೀಕರಿಸುವುದಕ್ಕಾಗಿ 2 ಹಂತಗಳ ಅಗತ್ಯವಿದೆ:

  1. ನಿಮ್ಮ ಮೊಬೈಲ್ ಸಾಧನ ಹಾಗೂ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ನೀವು ಸ್ಥಳ ಹಂಚಿಕೆಯನ್ನು ಆನ್ ಮಾಡಬೇಕಾಗುತ್ತದೆ.
  2. ನಿಮ್ಮ ಸ್ಥಳವನ್ನು ದೃಢೀಕರಿಸುವುದಕ್ಕಾಗಿ ನಿಮ್ಮ ಟಿವಿಯಲ್ಲಿ ನೀವು YouTube ಆ್ಯಪ್ ಅನ್ನು ಬಳಸಬೇಕಾಗುತ್ತದೆ.

1. ನಿಮ್ಮ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ಸ್ಥಳ ಹಂಚಿಕೆಯನ್ನು ಆನ್ ಮಾಡಿ

ನಿಮ್ಮ ಪ್ರಸ್ತುತ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸಲು, ನಿಮ್ಮ ಮೊಬೈಲ್ ಸಾಧನ ಹಾಗೂ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ನೀವು ಸ್ಥಳ ಹಂಚಿಕೆಯನ್ನು ಆನ್ ಮಾಡಬೇಕು. ಸ್ಥಳ ಹಂಚಿಕೆಯನ್ನು ಆನ್ ಮಾಡುವ ಹಂತಗಳು ಸಾಧನವನ್ನು ಆಧರಿಸಿ ವ್ಯತ್ಯಾಸವಾಗುತ್ತವೆ, ಆದರೆ ನೀವು ಅವುಗಳನ್ನು ಇಲ್ಲಿ ನೋಡಬಹುದು:

2. ನಿಮ್ಮ ಸ್ಮಾರ್ಟ್ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸಿ

NFL ಸಂಡೇ ಟಿಕೆಟ್‌ನಲ್ಲಿ ಲೈವ್ ಅಥವಾ ಮುಂಬರುವ ಗೇಮ್‌ನ ಹಾಗೆ, ಸ್ಥಳ ದೃಢೀಕರಣದ ಅಗತ್ಯವಿರುವ ಪ್ರೋಗ್ರಾಂ ಅನ್ನು ವೀಕ್ಷಿಸಲು ನೀವು ಆಯ್ಕೆ ಮಾಡಿಕೊಂಡಾಗ, ಮೊಬೈಲ್ ಸಾಧನವನ್ನು ಬಳಸಿಕೊಂಡು ನಿಮ್ಮ ಸ್ಥಳವನ್ನು ದೃಢೀಕರಿಸಲು ಸೂಚಿಸುವ ಪ್ರಾಂಪ್ಟ್ ನಿಮಗೆ ಕಾಣಿಸುತ್ತದೆ. ನಿಮ್ಮ ಸ್ಥಳವನ್ನು ದೃಢೀಕರಿಸಲು ಪ್ರಯತ್ನಿಸುವ ಮೊದಲು ನಿಮ್ಮ ಮೊಬೈಲ್ ಸಾಧನದಲ್ಲಿ ಸ್ಥಳ ಹಂಚಿಕೆಯನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರಾಂಪ್ಟ್ ಮಾಡಿದಾಗ, ಈ ಹಂತಗಳನ್ನು ಅನುಸರಿಸಿ:

  1. ಮೊಬೈಲ್ ಬ್ರೌಸರ್‌ನಿಂದ youtube.com/locate ಗೆ ಹೋಗಿ ನಂತರ NFL ಸಂಡೇ ಟಿಕೆಟ್ ಅನ್ನು ಖರೀದಿಸಲು ನೀವು ಬಳಸಿದ ಅದೇ Google ಖಾತೆಗೆ ಸೈನ್ ಇನ್ ಮಾಡಿ ಮತ್ತು ನಿಮ್ಮ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ. ಸಲಹೆ: ನಿಮ್ಮ ಖಾತೆಯ ಇಮೇಲ್ ವಿಳಾಸವನ್ನು ನಿಮ್ಮ ಟಿವಿ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ.
  2. ಸೈನ್ ಇನ್ ಮಾಡಿದ ನಂತರ, ನಿಮ್ಮ ಬ್ರೌಸರ್‌ಗಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಲು ಒಂದು ಪಾಪ್ಅಪ್‌ ಕಾಣಿಸುತ್ತದೆ. ಮುಂದೆ ನಂತರ ಅನುಮತಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಮೊಬೈಲ್ ಸಾಧನದಲ್ಲಿ youtube.com/locate ಪುಟವನ್ನು ರಿಫ್ರೆಶ್ ಮಾಡಿ ನಂತರ ತೊರೆಯಿರಿ ಮತ್ತು ನಿಮ್ಮ ಟಿವಿಯಲ್ಲಿ ಆ್ಯಪ್ ಅನ್ನು ಮತ್ತೊಮ್ಮೆ ತೆರೆಯಿರಿ.

ನಿಮ್ಮ ಟಿವಿಯಲ್ಲಿ ನಿಮ್ಮ ಸ್ಥಳ ಅಪ್‍ಡೇಟ್ ಆಗಿರುವುದು ಈಗಲೂ ಕಾಣಿಸದಿದ್ದರೆ, ನಿಮ್ಮ ಮೊಬೈಲ್ ಬ್ರೌಸರ್ ಹಾಗೂ ನಿಮ್ಮ ಟಿವಿ - ಎರಡರಲ್ಲೂ ಸರಿಯಾದ Google ಖಾತೆಗೆ ಸೈನ್ ಇನ್ ಮಾಡಿದ್ದೀರಾ ಎಂಬುದನ್ನು ಡಬಲ್ ಚೆಕ್ ಮಾಡಿ. ನಂತರ, ನಿಮ್ಮ ಟಿವಿಯಲ್ಲಿ ಆ್ಯಪ್ ಅನ್ನು ಮುಚ್ಚಲು ಮತ್ತು ಪುನಃ ತೆರೆಯಲು ಪ್ರಯತ್ನಿಸಿ.

ಸ್ಥಳ ಹಂಚಿಕೆಯನ್ನು ಆನ್ ಮಾಡುವುದು ಹೇಗೆ ಮತ್ತು ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

YouTube ನಲ್ಲಿ NFL ಸಂಡೇ ಟಿಕೆಟ್ ಅನ್ನು ವೀಕ್ಷಿಸಲು ನಾನು ಯಾವ ಸಾಧನಗಳನ್ನು ಬಳಸಬಹುದು?
ಗೇಮ್ ಕನ್ಸೋಲ್‌ಗಳು
  • PlayStation 5
  • PlayStation 4
  • PlayStation 4 Pro
  • Xbox Series X
  • Xbox Series S
  • Xbox One X
  • Xbox One S
  • Xbox One
ಸ್ಮಾರ್ಟ್ ಡಿಸ್‌ಪ್ಲೇಗಳು
  • Nest Hub Max
  • Nest Hub
ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು Android 6.0 Marshmallow ಅಥವಾ ನಂತರದ ಆವೃತ್ತಿಗಳನ್ನು ರನ್ ಮಾಡುತ್ತಿರುವ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು
iOS 12 ಅಥವಾ ನಂತರದ ಆವೃತ್ತಿಗಳನ್ನು ರನ್ ಮಾಡುತ್ತಿರುವ iPhone ಗಳು ಹಾಗೂ iPad ಗಳು
ಸ್ಮಾರ್ಟ್ ಟಿವಿಗಳು Hisense ಸ್ಮಾರ್ಟ್ ಟಿವಿಗಳು (ಆಯ್ದ ಮಾಡೆಲ್‌ಗಳು)
LG ಸ್ಮಾರ್ಟ್ ಟಿವಿಗಳು (2016+ ಮಾಡೆಲ್‌ಗಳು ಮಾತ್ರ)
Roku ಟಿವಿಗಳು (ಎಲ್ಲಾ ಮಾಡೆಲ್‌ಗಳು)
Samsung ಸ್ಮಾರ್ಟ್ ಟಿವಿಗಳು (2017+ ಮಾಡೆಲ್‌ಗಳು ಮಾತ್ರ)
Sharp ಸ್ಮಾರ್ಟ್ ಟಿವಿಗಳು (ಆಯ್ದ ಮಾಡೆಲ್‌ಗಳು)
Sony ಸ್ಮಾರ್ಟ್ ಟಿವಿಗಳು (ಆಯ್ದ ಮಾಡೆಲ್‌ಗಳು)
Vizio SmartCast ಟಿವಿಗಳು (ಆಯ್ದ ಮಾಡೆಲ್‌ಗಳು)
Android TV ಬಿಲ್ಟ್-ಇನ್ ಮತ್ತು NVIDIA ಶೀಲ್ಡ್ ಹೊಂದಿರುವ ಆಯ್ದ ಟಿವಿಗಳು
ಆಯ್ದ Fire TV ಎಡಿಷನ್ ಸ್ಮಾರ್ಟ್ ಟಿವಿಗಳು
ಸ್ಟ್ರೀಮಿಂಗ್ ಸಾಧನಗಳು Apple TV (4ನೇ ಜನರೇಶನ್ ಮತ್ತು 4K)
Chromecast ಜೊತೆಗೆ Google TV
  • Fire TV Stick (3ನೇ ಜನರೇಶನ್)
  • Fire TV Stick Lite
  • Fire TV Stick (2ನೇ ಜನರೇಶನ್)
  • Fire TV Stick 4K
  • Fire TV Cube
  • Fire TV Cube (1ನೇ ಜನರೇಶನ್)
ಆಯ್ದ ಕೇಬಲ್ ಟಿವಿ ಸಾಧನಗಳು (Xfinity X1 ರೀತಿಯದು)

ಸ್ಟ್ರೀಮಿಂಗ್ ಮಿತಿಗಳ ಕುರಿತು ಅಥವಾ ಅದಕ್ಕೆ ಸಂಬಂಧಿಸಿದಂತೆ ನನಗೆ ಸಮಸ್ಯೆಗಳಿವೆ.

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವದ ಸಬ್‌ಸ್ಕ್ರೈಬರ್‌ಗಳು ಒಂದು ಸೈನ್ ಇನ್ ಮಾಡಿದ ಸಾಧನಕ್ಕೆ ಮತ್ತು ಒಂದು ಏಕಕಾಲೀನ ಸ್ಟ್ರೀಮ್‌ಗೆ ಸೀಮಿತರಾಗಿರುತ್ತಾರೆ. ಇನ್ನಷ್ಟು ತಿಳಿಯಿರಿ.

ನಿಮ್ಮ ಮನೆಯಲ್ಲಿ NFL ಸಂಡೇ ಟಿಕೆಟ್ ವೀಕ್ಷಿಸುವಾಗ ನೀವು ಪಡೆಯುವ ಸ್ಟ್ರೀಮ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿರುವುದಿಲ್ಲ. ಉದಾಹರಣೆಗೆ, ಕುಟುಂಬದ ಸದಸ್ಯರೊಬ್ಬರು ಬೇರೊಂದು ರೂಮ್‌ನಲ್ಲಿ ತಮ್ಮ ಟ್ಯಾಬ್ಲೆಟ್‌ನಲ್ಲಿ ವೀಕ್ಷಿಸುವಾಗ, ಹಾಗೂ ಮತ್ತೊಬ್ಬ ಸದಸ್ಯರು ಅದೇ ಸಮಯದಲ್ಲಿ, ನಿಮ್ಮ ಮನೆಯ ವೈ-ಫೈಗೆ ಕನೆಕ್ಟ್ ಆಗಿರುವ ತಮ್ಮ ಫೋನ್‌ನಲ್ಲಿ ವೀಕ್ಷಿಸುವಾಗ, ನಿಮ್ಮ ಲಿವಿಂಗ್ ರೂಮ್ ಟಿವಿಯಲ್ಲಿ ನೀವು ವೀಕ್ಷಿಸಬಹುದು. ಸೈನ್ ಇನ್ ಮಾಡಲು ನೀವು ಬಳಸಬಹುದಾದ ಸಾಧನಗಳ ಸಂಖ್ಯೆಯ ಮೇಲೆ ಯಾವುದೇ ಮಿತಿಯಿರುವುದಿಲ್ಲ.

ನಿಮ್ಮ ಮನೆಯ ಹೊರಗೆ, ನೀವು ಗರಿಷ್ಠ ಎರಡು ಪ್ರತ್ಯೇಕ ಸ್ಟ್ರೀಮ್‌ಗಳನ್ನು ವೀಕ್ಷಿಸಬಹುದು.

ಗೃಹ ನೆಟ್‌ವರ್ಕ್ ಅನ್ನು ಸೆಟ್ ಮಾಡಿ

ನೀವು ಬೇರೆ ಸ್ಥಳಕ್ಕೆ ಸ್ಥಾನಾಂತರ ಮಾಡಿದ್ದರೆ ಅಥವಾ ಅಸೀಮಿತ ಇನ್-ಹೋಮ್ ಸ್ಟ್ರೀಮ್‌ಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದ್ದರೆ, ಅಸೀಮಿತ ಸ್ಟ್ರೀಮ್‌ಗಳನ್ನು ಆನಂದಿಸುವುದಕ್ಕಾಗಿ, YouTube TV ಆ್ಯಪ್ ಅನ್ನು ಬಳಸಿಕೊಂಡು “ಗೃಹ ನೆಟ್‌ವರ್ಕ್ ಅನ್ನು ಸೆಟ್ ಮಾಡುವುದನ್ನು” ಖಚಿತಪಡಿಸಿಕೊಳ್ಳಿ.

ಗಮನಿಸಿ: YouTube TV ಎಂಬುದು YouTube ಆ್ಯಪ್‌ಗಿಂತ ಪ್ರತ್ಯೇಕವಾಗಿದೆ. ನಿಮ್ಮ ಸ್ಮಾರ್ಟ್ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದ ಆ್ಯಪ್ ಮೆನುವಿನಲ್ಲಿ “YouTube TV” ಅನ್ನು ಹುಡುಕಿ. YouTube TV ಆ್ಯಪ್ ಅನ್ನು ಬಳಸಿಕೊಂಡು ನಿಮ್ಮ ಗೃಹ ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ಸೆಟ್ ಮಾಡಿದ ಬಳಿಕ, ನೀವು ಯಾವ ಆ್ಯಪ್/ವೆಬ್‌ಸೈಟ್ (YouTube ಅಥವಾ YouTube TV) ಅನ್ನು ಬಳಸಿದರೂ ಈ ನೆಟ್‌ವರ್ಕ್‌ನಲ್ಲಿ ನೀವು ಅಸೀಮಿತ NFL ಸಂಡೇ ಟಿಕೆಟ್ ಸ್ಟ್ರೀಮ್‌ಗಳನ್ನು ಆನಂದಿಸಬಹುದು.

ನಿಮ್ಮ ಗೃಹ ನೆಟ್‌ವರ್ಕ್ ಅನ್ನು ನೀವು ಸ್ಮಾರ್ಟ್ ಟಿವಿಗಳಲ್ಲಿ ಮಾತ್ರ ಸೆಟ್ ಅಪ್ ಮಾಡಬಹುದು. ನಿಮ್ಮ ಪ್ರಸ್ತುತ ವೈ-ಫೈ ನೆಟ್‌ವರ್ಕ್ ಅನ್ನು ನಿಮ್ಮ YouTube TV ಗೃಹ ನೆಟ್‌ವರ್ಕ್ ಆಗಿ ಸೆಟ್ ಮಾಡಲು, ಈ ಕೆಳಗೆ ಉಲ್ಲೇಖಿಸಿರುವ ಹಂತಗಳನ್ನು ಅನುಸರಿಸಿ.

  1. ಸ್ಮಾರ್ಟ್ ಟಿವಿಯನ್ನು ನಿಮ್ಮ ಮನೆಯ ವೈ-ಫೈಗೆ ಕನೆಕ್ಟ್ ಮಾಡಿ.
  2. ಸ್ಮಾರ್ಟ್ ಟಿವಿಯಲ್ಲಿ YouTube TV ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತೆರೆಯಿರಿ.
  3. YouTube TV ಆ್ಯಪ್‌ಗೆ ಸೈನ್‌ ಇನ್ ಮಾಡಿ.
  4. ನಿಮ್ಮ ಪ್ರೊಫೈಲ್ ಫೋಟೋ ನಂತರ ಸೆಟ್ಟಿಂಗ್‌ಗಳು ನಂತರ ಸ್ಟ್ರೀಮಿಂಗ್ ಮಿತಿಗಳು ಎಂಬುದನ್ನು ಆಯ್ಕೆ ಮಾಡಿ.
  5. ಕೆಳಗೆ, ಪ್ರಸ್ತುತ ನೆಟ್‌ವರ್ಕ್ ಅನ್ನು ಗೃಹ ನೆಟ್‌ವರ್ಕ್ ಎಂಬುದಾಗಿ ಸೆಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  6. "ಗೃಹ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲಾಗಿದೆ" ಎಂದು ಹೇಳುವ ಹಸಿರು ಟಿಕ್ ಕಾಣಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಗಮನಿಸಿ: ನೀವು ಕುಟುಂಬ ಗುಂಪಿನ ಮೂಲಕ ಆ್ಯಕ್ಸೆಸ್ ಹೊಂದಿದ್ದರೆ, ಕುಟುಂಬ ನಿರ್ವಾಹಕರು ಮಾತ್ರ ಪ್ರಸ್ತುತ ನೆಟ್‌ವರ್ಕ್ ಅನ್ನು ಗೃಹ ನೆಟ್‌ವರ್ಕ್ ಎಂಬುದಾಗಿ ಸೆಟ್ ಮಾಡಬಹುದು. ಕುಟುಂಬದ ಇತರ ಸದಸ್ಯರಿಗೆ ಈ ಆಯ್ಕೆ ಕಾಣಿಸುವುದಿಲ್ಲ.

“ಗೃಹ ನೆಟ್‌ವರ್ಕ್ ಅನ್ನು ಸೆಟ್ ಮಾಡಿ”, ಅಥವಾ “ಗೃಹ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲಾಗಿದೆ” ಆಯ್ಕೆಯು ನಿಮಗೆ ಕಾಣಿಸದಿದ್ದರೆ:

  • ನೀವು ಸರಿಯಾದ ಆ್ಯಪ್ (YouTube TV ಬಳಸುತ್ತಿರುವಿರೇ ಹೊರತು YouTube ಅಲ್ಲ) ಅನ್ನು ಬಳಸುತ್ತಿದ್ದೀರಿ ಮತ್ತು ಆ ಆ್ಯಪ್ ಅನ್ನು ಸ್ಮಾರ್ಟ್ ಟಿವಿಯಲ್ಲಿ ಆ್ಯಕ್ಸೆಸ್ ಮಾಡುತ್ತಿರುವಿರೇ ಹೊರತು ಮೊಬೈಲ್ ಸಾಧನ ಅಥವಾ ಕಂಪ್ಯೂಟರ್‌ನಲ್ಲಿ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • NFL ಸಂಡೇ ಟಿಕೆಟ್ ಸದಸ್ಯತ್ವವನ್ನು ಹೊಂದಿರುವ, ಸರಿಯಾದ ಖಾತೆಗೆ ನೀವು ಲಾಗ್ ಇನ್ ಮಾಡಿದ್ದೀರಾ ಎಂಬುದನ್ನು ಪರಿಶೀಲಿಸಿ.
  • ನಿಮ್ಮ ಮನೆಯ ಸ್ಥಳದ ಹೊರಗಿದ್ದೀರಾ ಎಂಬುದನ್ನು ಪರಿಶೀಲಿಸಿ. ನೀವು ಮನೆಯಲ್ಲಿದ್ದರೆ ಮತ್ತು ನಿಮ್ಮ ಆದ್ಯತೆಯ ಹೋಮ್ ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿದ್ದರೆ, ನೀವು ಈ ಹಂತಗಳನ್ನು ಅನುಸರಿಸಿದರೆ ಸಾಕು.

ಹಸಿರು ಟಿಕ್ ಕಾಣಿಸದಿದ್ದರೆ, ಅಥವಾ “ಅಪ್‌ಡೇಟ್ ಮಾಡಲು ಸಾಧ್ಯವಾಗಲಿಲ್ಲ. ಪುನಃ ಪ್ರಯತ್ನಿಸಿ” ಎಂದು ಹೇಳುವ ದೋಷ ಸಂದೇಶ ಕಾಣಿಸಿದರೆ, ಮೇಲಿನ ಹಂತಗಳನ್ನು ಪುನರಾವರ್ತಿಸಿ.

NFL ಸಂಡೇ ಟಿಕೆಟ್ ಅನ್ನು ನನ್ನ ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವು ಫ್ಯಾಮಿಲಿ ಶೇರಿಂಗ್ ಒಳಗೊಂಡಿರುವುದಿಲ್ಲ. ಇನ್ನಷ್ಟು ತಿಳಿಯಿರಿ.

ಹೌದು. ನೀವು Google ಕುಟುಂಬ ಗುಂಪನ್ನು ರಚಿಸಿದಾಗ, NFL ಸಂಡೇ ಟಿಕೆಟ್‌ನಂತಹ Primetime ಚಾನಲ್‌ಗಳ ಆ್ಯಕ್ಸೆಸ್ ಅನ್ನು, ನಿಮ್ಮ ಮನೆಯಿಂದ ಗರಿಷ್ಠ ಇತರ 5 ಸದಸ್ಯರೊಂದಿಗೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀವು ಹಂಚಿಕೊಳ್ಳಬಹುದು.

ಪ್ರಮುಖ ಸೂಚನೆ: Google Workspace ಖಾತೆಯನ್ನು ಬಳಸಿಕೊಂಡು ನೀವು Google ಕುಟುಂಬ ಗುಂಪನ್ನು ಪ್ರಾರಂಭಿಸಲು ಅಥವಾ ಸೇರಿಕೊಳ್ಳಲು ಸಾಧ್ಯವಾಗುವುದಿಲ್ಲ. NFL ಸಂಡೇ ಟಿಕೆಟ್ ಅನ್ನು ನಿಮ್ಮ ಕುಟುಂಬ ಗುಂಪಿನ ಜೊತೆ ಹಂಚಿಕೊಳ್ಳಲು, ನಿಮ್ಮ ಸಾಮಾನ್ಯ Google ಖಾತೆಯನ್ನು ರಚಿಸಿ ಅಥವಾ ಅದಕ್ಕೆ ಸೈನ್ ಇನ್ ಮಾಡಿ.

ಫ್ಯಾಮಿಲಿ ಶೇರಿಂಗ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೀರಾ? ಇದರ ಕುರಿತು ಇನ್ನಷ್ಟು ತಿಳಿಯಿರಿ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2630933095417073335
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false