ಯಾವುದೇ ಶೋ, ಕ್ರೀಡೆಗಳು, ಈವೆಂಟ್ ಅಥವಾ ಚಲನಚಿತ್ರವನ್ನು ಮಿಸ್ ಮಾಡಿಕೊಳ್ಳದಿರಲು, ನಿಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು YouTube TV ಯಲ್ಲಿ ನಿಮ್ಮ ವೈಯಕ್ತಿಕ ಲೈಬ್ರರಿಯಲ್ಲಿ ರೆಕಾರ್ಡ್ ಮಾಡಿ. ನಿಮ್ಮ ಲೈಬ್ರರಿಯಲ್ಲಿ ನೀವು ಎಷ್ಟು ಪ್ರೋಗ್ರಾಮ್‌ಗಳನ್ನು ಬೇಕಾದರೂ ಸೇರಿಸಬಹುದು—YouTube TV ಯಲ್ಲಿ ಸಂಗ್ರಹಣೆಯ ಸ್ಥಳದ ಮಿತಿಯಿಲ್ಲದ DVR ಒಳಗೊಂಡಿದೆ. ಕೆಲವೊಂದು ಸಂದರ್ಭಗಳಲ್ಲಿ, ನಿರ್ದಿಷ್ಟ ಕ್ರೀಡಾ ಈವೆಂಟ್‌ಗಳು ಲಭ್ಯವಿಲ್ಲದಿರಬಹುದು. YouTube TV ಯಲ್ಲಿ ವೀಕ್ಷಣೆಯ ನಿರ್ಬಂಧಗಳ ಕುರಿತು ಇನ್ನಷ್ಟು ತಿಳಿಯಿರಿ. ಗಮನಿಸಿ: ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ನಲ್ಲಿ ತೋರಿಸಲಾಗುವುದಿಲ್ಲ. YouTube TV ಯಲ್ಲಿ ಆ್ಯಡ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.
ಪ್ರೋಗ್ರಾಮ್‌ಗಳನ್ನು ರೆಕಾರ್ಡ್ ಮಾಡಿ ಅಥವಾ ತೆಗೆದುಹಾಕಿ
- YouTube TV ಗೆ ಹೋಗಿ.
- ನೀವು ರೆಕಾರ್ಡ್ ಮಾಡಲು ಬಯಸುವ ಶೋ, ಕ್ರೀಡಾ ತಂಡ ಅಥವಾ ಈವೆಂಟ್‌ನ ಪಕ್ಕದಲ್ಲಿ, ಸೇರಿಸಿ
ಎಂಬುದನ್ನು ಟ್ಯಾಪ್ ಮಾಡಿ. ಎಲ್ಲಾ ಪ್ರಸ್ತುತ ಮತ್ತು ಮುಂಬರುವ ಪ್ರಸಾರಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ನಿಮ್ಮ ಲೈಬ್ರರಿಯಲ್ಲಿ ಸೇರಿಸಲಾಗುತ್ತದೆ.
- ಒಂದು ಎಪಿಸೋಡ್ ಪ್ರಗತಿಯಲ್ಲಿರುವಾಗ ನೀವು ಪ್ರೋಗ್ರಾಮ್ ಅನ್ನು ನಿಮ್ಮ ಲೈಬ್ರರಿಯಲ್ಲಿ ಸೇರಿಸಿದರೆ, ನೀವು ಪ್ರೋಗ್ರಾಮ್ ಅನ್ನು ಸೇರಿಸಿದ ಸಮಯದಿಂದ ನಿಮ್ಮ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ಒಂದು ಎಪಿಸೋಡ್ ಮರುಪ್ರಸಾರವಾದರೆ, ನಿಮ್ಮ ಆಂಶಿಕ ರೆಕಾರ್ಡಿಂಗ್‌ನ ಬದಲಿಗೆ ಪೂರ್ಣ ಎಪಿಸೋಡ್ ಅನ್ನು ಸೇರಿಸಲಾಗುತ್ತದೆ.
- ನೀವು ತೆಗೆದುಹಾಕಲು ಬಯಸುವ ಒಂದು ಶೋ, ಕ್ರೀಡಾ ತಂಡ ಅಥವಾ ಈವೆಂಟ್‌ನ ಪಕ್ಕದಲ್ಲಿ, ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ. ಎಲ್ಲಾ ಪ್ರಸ್ತುತ ಮತ್ತು ಮುಂಬರುವ ಪ್ರಸಾರಗಳನ್ನು ತೆಗೆದುಹಾಕಲಾಗುವುದು. ನೀವು ರೆಕಾರ್ಡ್ ಮಾಡಿದ ಪ್ರೋಗ್ರಾಮ್‌ಗಳ ಅವಧಿ ಮುಗಿಯುವವರೆಗೆ ಅವು ಲಭ್ಯವಿರುತ್ತವೆ.
ರೆಕಾರ್ಡಿಂಗ್‌ಗಳಿಗಾಗಿ ಪ್ಲೇಬ್ಯಾಕ್ ಆಯ್ಕೆಗಳು (DVR)
ನೀವು ಒಂದು ಗೇಮ್ ಅಥವಾ ಪ್ರೋಗ್ರಾಮ್ ಅನ್ನು ರೆಕಾರ್ಡ್ ಮಾಡುತ್ತಿದ್ದರೆ, ನೀವು ಹೀಗೆ ಮಾಡಲು ಆಯ್ಕೆ ಮಾಡಬಹುದು:
- ನಿಮ್ಮ ಪ್ರೋಗ್ರಾಮ್ ಅನ್ನು ಮೊದಲಿನಿಂದ ಪ್ರಾಂಭಿಸಿ
- ನೀವು ಪ್ರೋಗ್ರಾಮ್ ಅನ್ನು ವಿರಾಮಗೊಳಿಸಿದಲ್ಲಿಂದ ಪುನರಾರಂಭಿಸಿ
- ಪ್ರಸ್ತುತ ಲೈವ್ ಆಗಿರುವ ಪ್ರೋಗ್ರಾಮ್ ಅನ್ನು ವೀಕ್ಷಿಸಿ
- ಕೀ ಪ್ಲೇಗಳನ್ನು ವೀಕ್ಷಿಸಿ (ಗಮನಿಸಿ: ನೀವು ವೀಕ್ಷಿಸುತ್ತಿರುವ ಲೀಗ್‌ಗಾಗಿ ಮತ್ತು ನಿಮ್ಮ ಸಾಧನದಲ್ಲಿ ಅಂಕಿಅಂಶಗಳು ಮತ್ತು ಕೀ ಪ್ಲೇಗಳ ಫೀಚರ್‌ಗೆ ಬೆಂಬಲವಿದೆಯೇ ಎಂಬುದನ್ನು ಪರಿಶೀಲಿಸಿ)
ಗಮನಿಸಿ: YouTube TV ಯಲ್ಲಿ ನಿಮಗೆ ಕೆಟ್ಟ ರೆಕಾರ್ಡಿಂಗ್ ಕಂಡುಬಂದರೆ, ವೀಡಿಯೊ ಪ್ಲೇಯರ್‌ನಲ್ಲಿ ನೀವು ಅದನ್ನು ವರದಿ ಮಾಡಬಹುದು.