YouTube ಚಾನಲ್ ಮಾನಿಟೈಸೇಶನ್ ನೀತಿಗಳು

ದೀರ್ಘ-ರೂಪದ ವೀಡಿಯೊದಲ್ಲಿ ಡ್ರೀಮ್ ಟ್ರ್ಯಾಕ್‌ನಿಂದ ರಚಿಸಲಾದ ಸಂಗೀತವನ್ನು ನೀವು ಬಳಸಿದಾಗ, ಆ್ಯಡ್‌ಗಳು ಅಥವಾ ಸಬ್‌ಸ್ಕ್ರಿಪ್ಶನ್ (YouTube Premium) ಆದಾಯ ಹಂಚಿಕೆಯ ಮೂಲಕ ನಿಮ್ಮ ವೀಡಿಯೊ ಮಾನಿಟೈಸ್ ಮಾಡಲಾಗುವುದಿಲ್ಲ.

ಮಾರ್ಚ್ 10, 2022 ರಷ್ಯಾದಲ್ಲಿ ಇತ್ತೀಚೆಗೆ Google ಜಾಹೀರಾತು ಸಿಸ್ಟಮ್‌ಗಳನ್ನು ಅಮಾನತುಗೊಳಿಸಿರುವುದರಿಂದ, AdSense, YouTube ಗಾಗಿ AdSense, AdMob ಮತ್ತು Google Ad Manager ನಲ್ಲಿ ಹೊಸ ರಷ್ಯನ್ ಖಾತೆಗಳ ರಚನೆಯನ್ನು ನಾವು ವಿರಾಮಗೊಳಿಸುತ್ತಿದ್ದೇವೆ. ಇದರ ಜೊತೆ, ರಷ್ಯಾ ಮೂಲದ ಜಾಹೀರಾತುದಾರರಿಗಾಗಿ ನಾವು ಜಾಗತಿಕವಾಗಿ Google ಪ್ರಾಪರ್ಟಿಗಳು ಮತ್ತು ನೆಟ್‌ವರ್ಕ್‌ಗಳಲ್ಲಿ ಜಾಹೀರಾತುಗಳನ್ನು ವಿರಾಮಗೊಳಿಸುತ್ತೇವೆ. ಇದರ ಪರಿಣಾಮವಾಗಿ, ರಷ್ಯಾದಲ್ಲಿರುವ ರಚನೆಕಾರರು ಈ ಸಮಯದಲ್ಲಿ ಹೊಸ YPP ಸೈನ್‌ ಅಪ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.

ಮಾರ್ಚ್ 3, 2022: ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ, ನಾವು ರಷ್ಯಾದಲ್ಲಿ ನೆಲೆಸಿರುವ ಬಳಕೆದಾರರಿಗೆ Google ಮತ್ತು YouTube ಜಾಹೀರಾತುಗಳನ್ನು ಸರ್ವ್ ಮಾಡುವುದನ್ನು ತಾತ್ಕಾಲಿಕವಾಗಿ ವಿರಾಮಗೊಳಿಸುತ್ತಿದ್ದೇವೆ. ಜೊತೆಗೆ, ನಾವು ರಷ್ಯಾದಲ್ಲಿ ನೆಲೆಸಿರುವ ವೀಕ್ಷಕರಿಗೆ ಎಲ್ಲಾ ಮಾನಿಟೈಸೇಶನ್ ಫೀಚರ್‌ಗಳಿಗೆ (ಉದಾಹರಣೆಗೆ ಚಾನಲ್ ಸದಸ್ಯತ್ವಗಳು, ಸೂಪರ್‌ ಚಾಟ್‌, ಸೂಪರ್ ಸ್ಟಿಕ್ಕರ್ಸ್, ಮತ್ತು ವ್ಯಾಪಾರದ ವಸ್ತುಗಳಿಗೆ) ಇರುವ ಆ್ಯಕ್ಸೆಸ್ ಅನ್ನು ವಿರಾಮಗೊಳಿಸುತ್ತಿದ್ದೇವೆ. ಇನ್ನಷ್ಟು ತಿಳಿಯಿರಿ.

ಫೆಬ್ರವರಿ 25, 2022: ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ, ನಾವು ರಷ್ಯನ್ ಫೆಡರೇಶನ್ ಸ್ಟೇಟ್-ಫಂಡೆಡ್ ಮೀಡಿಯಾ ಚಾನಲ್‌ಗಳ YouTube ನ ಮಾನಿಟೈಸೇಶನ್ ಅನ್ನು ವಿರಾಮಗೊಳಿಸುತ್ತಿದ್ದೇವೆ. 

ನಾವು ಪರಿಸ್ಥಿತಿಯ ಸಕ್ರಿಯ ಮೇಲ್ವಿಚಾರಣೆಯನ್ನು ಮುಂದುವರಿಸುತ್ತೇವೆ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡುತ್ತೇವೆ.

ಏಪ್ರಿಲ್ 2024 ರಂದು ಅಪ್‌ಡೇಟ್ ಮಾಡಲಾಗಿದೆ: ರಚನೆಕಾರರಿಗಾಗಿ ರಿಪೀಟ್ ಆಗುವ ಮತ್ತು ಮರುಬಳಸಿದ ಕಂಟೆಂಟ್‌ನ ಅರ್ಥವನ್ನು ಸ್ಪಷ್ಟಪಡಿಸಲು ನಮ್ಮ ಪ್ರೋಗ್ರಾಮ್ ನೀತಿಗಳಲ್ಲಿನ ಭಾಷೆಯನ್ನು ಅಪ್‌ಡೇಟ್ ಮಾಡಲಾಗಿದೆ. ನಮ್ಮ ರಿಪೀಟ್ ಆಗುವ ಮತ್ತು ಮರುಬಳಸಿದ ಕಂಟೆಂಟ್ ನೀತಿಗಳು ಬದಲಾಗಿಲ್ಲ.

ನೀವು YouTube ನಲ್ಲಿ ಮಾನಿಟೈಸ್ ಮಾಡುತ್ತಿದ್ದರೆ, ನಿಮ್ಮ ಚಾನಲ್ YouTube ಮಾನಿಟೈಸೇಶನ್ ನೀತಿಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇವುಗಳಲ್ಲಿ ಕೆಳಗೆ ಉಲ್ಲೇಖಿಸಲಾದ ಪಾಲಿಸಿಗಳ ಜೊತೆಗೆ YouTube ನ ಸಮುದಾಯ ಮಾರ್ಗಸೂಚಿಗಳು, ಸೇವಾ ನಿಯಮಗಳು, ಕೃತಿಸ್ವಾಮ್ಯ, ಹಕ್ಕುಗಳ ಕ್ಲಿಯರೆನ್ಸ್ ಅಡ್ಜಸ್ಟ್‌ಮೆಂಟ್ ನೀತಿಗಳು ಮತ್ತು ನಮ್ಮ ಪ್ರೋಗ್ರಾಮ್ ನೀತಿಗಳು ಸೇರಿವೆ.

ಈ ನೀತಿಗಳು, YouTube ಪಾಲುದಾರ ಕಾರ್ಯಕ್ರಮದಲ್ಲಿರುವ ಅಥವಾ ಇದಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವ ಪ್ರತಿಯೊಬ್ಬರಿಗೆ ಅನ್ವಯಿಸುತ್ತದೆ. ನೀವು YouTube ನಲ್ಲಿ Shorts ಅನ್ನು ಮಾನಿಟೈಸ್ ಮಾಡುತ್ತಿದ್ದರೆ, YouTube Shorts ಮಾನಿಟೈಸೇಶನ್ ನೀತಿಗಳು ಸಹ ಅನ್ವಯಿಸುತ್ತವೆ.

ಜಾಹೀರಾತುಗಳ ಮೂಲಕ ಮಾನಿಟೈಸ್ ಮಾಡುವ ಎಲ್ಲಾ ಕಂಟೆಂಟ್‍ಗಳು, ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಫ್ಯಾನ್ ಫಂಡಿಂಗ್ ಫೀಚರ್‌ಗಳಿಂದ ಆದಾಯ ಗಳಿಸಲು, ಮೊದಲ ಬಾರಿಯ ಬಳಕೆದಾರರು ಪ್ರತ್ಯೇಕ ಫೀಚರ್‌ಗಳನ್ನು ಆನ್ ಮಾಡುವ ಮೊದಲು, ವಾಣಿಜ್ಯ ಉತ್ಪನ್ನ ಮಾಡ್ಯೂಲ್ (CPM) ಅನ್ನು ಸಮ್ಮತಿಸಬೇಕು. ನೀವು ಫ್ಯಾನ್ ಫಂಡಿಂಗ್ ಫೀಚರ್‌ಗಳೊಂದಿಗೆ ಮಾನಿಟೈಸ್ ಮಾಡುತ್ತಿರುವಾಗ ವಾಣಿಜ್ಯ ಉತ್ಪನ್ನಗಳ ಮಾನಿಟೈಸೇಶನ್ ಕಾರ್ಯನೀತಿಗಳನ್ನು ಅನುಸರಿಸಬೇಕು.

ಪ್ರತಿಯೊಂದು ಪ್ರಮುಖ ನೀತಿಯ ಕುರಿತಾದ ತ್ವರಿತ ಅವಲೋಕನ ಇಲ್ಲಿದೆ. ನೀವು ಪ್ರತಿಯೊಂದು ನೀತಿಯನ್ನು ಸೂಕ್ಷ್ಮವಾಗಿ ಓದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಚಾನಲ್ ಅನ್ನು ಮಾನಿಟೈಸ್ ಮಾಡಲು ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸಲು ಈ ನೀತಿಗಳನ್ನು ಬಳಸಲಾಗುತ್ತದೆ. ಮಾನಿಟೈಸ್ ಮಾಡುತ್ತಿರುವ ಚಾನಲ್‌ಗಳು ಈ ಕಾರ್ಯನೀತಿಗಳನ್ನು ಅನುಸರಿಸುತ್ತಿವೆಯೇ ಎಂಬುದನ್ನು ನಮ್ಮ ವಿಮರ್ಶಕರು ನಿಯಮಿತವಾಗಿ ಪರಿಶೀಲಿಸುತ್ತಿರುತ್ತಾರೆ. ನಾವು ನಮ್ಮ ಕಾರ್ಯನೀತಿಗಳನ್ನು ಹೇಗೆ ಜಾರಿಗೊಳಿಸುತ್ತೇವೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ನಾವು ಈ ಪುಟದಲ್ಲಿ ವೀಡಿಯೊ ಎಂಬ ಪದವನ್ನು ಬಳಸುವಾಗ, ಇದು Shorts, ದೀರ್ಘಾವಧಿ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮಿಂಗ್ ಅನ್ನು ಸೂಚಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವೀಕ್ಷಣಾ ಪುಟ (YouTube, YouTube Music ಅಥವಾ YouTube Kids ಒಳಗಿನ ಪುಟಗಳು), YouTube ವೀಡಿಯೊ ಪ್ಲೇಯರ್ (ಇತರ ಸೈಟ್‌ಗಳಲ್ಲಿ YouTube ಕಂಟೆಂಟ್ ಅನ್ನು ಎಂಬೆಡ್ ಮಾಡುವ ಪ್ಲೇಯರ್) ಮತ್ತು YouTube Shorts ಪ್ಲೇಯರ್ (Shorts ಅನ್ನು ಲಭ್ಯವಾಗಿಸುವ ಪ್ಲೇಯರ್) ಅನ್ನು ಒಳಗೊಂಡಂತೆ ಎಲ್ಲಿಯಾದರೂ ವೀಡಿಯೊಗಳನ್ನು ವೀಕ್ಷಿಸಿದರೆ ಈ ನೀತಿಗಳು ಅನ್ವಯವಾಗುತ್ತವೆ.

ನಿಮ್ಮ ಚಾನಲ್ ಅನ್ನು ಪರಿಶೀಲಿಸುವಾಗ ನಾವು ಏನನ್ನು ಪರಿಶೀಲಿಸುತ್ತೇವೆ

ನೀವು YouTube ನಲ್ಲಿ ಹಣ ಸಂಪಾದಿಸುತ್ತಿದ್ದರೆ, ನಿಮ್ಮ ಕಂಟೆಂಟ್ ನಿಮ್ಮ ಸ್ವಂತದ್ದಾಗಿರಬೇಕು ಮತ್ತು ಅಧಿಕೃತವಾಗಿರಬೇಕು. ಇದರರ್ಥ ನಿಮ್ಮ ಕಂಟೆಂಟ್ ಈ ಅಂಶಗಳನ್ನು ಪಾಲಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ: 

  • ಅದು ನಿಮ್ಮ ಸ್ವಂತ ರಚನೆಯಾಗಿರಬೇಕು. ನೀವು ಬೇರೆಯವರಿಂದ ಕಂಟೆಂಟ್ ಅನ್ನು ಎರವಲು ಪಡೆದರೆ, ಅದನ್ನು ನಿಮ್ಮದಾಗಿಸಿಕೊಳ್ಳಲು ನೀವು ಅದನ್ನು ಗಣನೀಯವಾಗಿ ಬದಲಾಯಿಸಬೇಕಾಗುತ್ತದೆ.
  • ಅದು ನಕಲು ಆಗಿರಬಾರದು ಅಥವಾ ರಿಪೀಟ್ ಆಗಿರಬಾರದು. ನಿಮ್ಮ ಕಂಟೆಂಟ್ ಅನ್ನು ವೀಕ್ಷಣೆಗಳನ್ನು ಪಡೆಯುವ ಏಕೈಕ ಉದ್ದೇಶಕ್ಕಿಂತ ಹೆಚ್ಚಾಗಿ ವೀಕ್ಷಕರಿಗೆ ಆನಂದ ನೀಡುವ ಅಥವಾ ಅವರಿಗೆ ಏನಾದರೂ ತಿಳಿಸುವ ಉದ್ದೇಶದಿಂದ ರಚಿಸಿರಬೇಕು. 

ನಮ್ಮ ವಿಮರ್ಶಕರು ನಿಮ್ಮ ಚಾನಲ್ ಮತ್ತು ಕಂಟೆಂಟ್ ಅನ್ನು ನಮ್ಮ ನೀತಿಗಳಿಗೆ ಬದ್ಧವಾಗಿದೆಯೆ ಎಂದು ಪರಿಶೀಲಿಸುತ್ತಾರೆ. ಅವರು ಪ್ರತಿ ವೀಡಿಯೊವನ್ನು ಪರಿಶೀಲಿಸಲು ಸಾಧ್ಯವಾಗದ ಕಾರಣ, ನಮ್ಮ ವಿಮರ್ಶಕರು ನಿಮ್ಮ ಚಾನಲ್‌ನ ಈ ಅಂಶಗಳ ಮೇಲೆ ಗಮನ ಹರಿಸಬಹುದು:

  • ಮುಖ್ಯ ಥೀಮ್
  • ಅತಿಹೆಚ್ಚು ವೀಕ್ಷಿಸಲಾದ ವೀಡಿಯೊಗಳು
  • ಹೊಚ್ಚಹೊಸ ವೀಡಿಯೊಗಳು
  • ವೀಕ್ಷಣೆ ಸಮಯದ ಅತೀ ದೊಡ್ಡ ಅನುಪಾತ
  • ವೀಡಿಯೊ ಮೆಟಾಡೇಟಾ (ಶೀರ್ಷಿಕೆಗಳು, ಥಂಬ್‌ನೇಲ್‌ಗಳು ಮತ್ತು ವಿವರಣೆಗಳ ಸಹಿತ)
  • ಚಾನಲ್‌ನ “ಕುರಿತು” ವಿಭಾಗ

ಮೇಲೆ ನೀಡಲಾಗಿರುವುದು ನಮ್ಮ ವಿಮರ್ಶಕರು ಪರಿಶೀಲಿಸಬಹುದಾದ ಕಂಟೆಂಟ್‌ನ ಉದಾಹರಣೆಗಳು ಮಾತ್ರ. ನಮ್ಮ ವಿಮರ್ಶಕರು ನಿಮ್ಮ ಚಾನಲ್‌ನ ಇತರ ಅಂಶಗಳನ್ನು ಪರಿಶೀಲಿಸಬಹುದು ಮತ್ತು ಅದು ನಮ್ಮ ನೀತಿಗಳನ್ನು ಸಂಪೂರ್ಣವಾಗಿ ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂಬುದನ್ನು ಗಮನಿಸಿ.

YouTube ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಿ

ಈ ಮಾರ್ಗಸೂಚಿಗಳು ವೀಕ್ಷಕರು, ರಚನೆಕಾರರು ಮತ್ತು ಜಾಹೀರಾತುದಾರರಿಗಾಗಿ YouTube ಅನ್ನು ಒಂದು ಉತ್ತಮ ಸಮುದಾಯವನ್ನಾಗಿಸಲು ಸಹಾಯ ಮಾಡುತ್ತವೆ. YouTube ನಲ್ಲಿರುವ ಪ್ರತಿಯೊಬ್ಬರು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ನೀವು ಪೋಸ್ಟ್ ಮಾಡುವ ಯಾವುದೇ ಕಂಟೆಂಟ್ ನಮ್ಮ ಎಲ್ಲಾ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಈ ಮಾರ್ಗಸೂಚಿಗಳು ಪ್ರತ್ಯೇಕ ವೀಡಿಯೊಗಳಿಗೆ ಮಾತ್ರವಲ್ಲದೆ ನಿಮ್ಮ ಒಟ್ಟಾರೆ ಚಾನಲ್‌ಗೆ ಅನ್ವಯಿಸುತ್ತವೆ ಎಂದು ಮಾನಿಟೈಸ್ ಮಾಡುವ ರಚನೆಕಾರರು ತಿಳಿದಿರಬೇಕು. YouTube ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್, ಮಾನಿಟೈಸೇಶನ್‍ಗೆ ಅರ್ಹವಾಗಿರುವುದಿಲ್ಲ ಮತ್ತು ಅದನ್ನು YouTube ನಿಂದ ತೆಗೆದುಹಾಕಲಾಗುತ್ತದೆ.
ನಮ್ಮ ಪ್ರೋಗ್ರಾಂ ನೀತಿಗಳನ್ನು ಅನುಸರಿಸಿ
YouTube ಪಾಲುದಾರರು ತಮ್ಮ ವೀಡಿಯೊಗಳನ್ನು ಮಾನಿಟೈಸ್ ಮಾಡುವ ಮೂಲಕ ಹಣ ಗಳಿಸಲು YouTube ಗಾಗಿ AdSense ಅನುಮತಿಸುತ್ತದೆ. ನಮ್ಮ ಪ್ರೋಗ್ರಾಂ ನೀತಿಗಳು ಮತ್ತು YouTube ನ ಸೇವಾ ನಿಯಮಗಳನ್ನು ಅನುಸರಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ರಿಪೀಟ್ ಆಗುವ ಕಂಟೆಂಟ್

ರಿಪೀಟ್ ಆಗುವ ಕಂಟೆಂಟ್ ಎಂದರೆ, ಚಾನಲ್ ಒಂದರಲ್ಲಿ ವೀಡಿಯೊಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ವೀಕ್ಷಕರಿಗೆ ತೊಂದರೆಯಾಗುತ್ತಿರಬಹುದಾದ ಒಂದೇ ರೀತಿಯ ಕಂಟೆಂಟ್ ಆಗಿದೆ. ಇದು ಒಂದು ಟೆಂಪ್ಲೇಟ್ ಅನ್ನು ಬಳಸಿಕೊಂಡು ಯಾವುದೇ ವ್ಯತ್ಯಾಸಗಳಿಲ್ಲದ ವೀಡಿಯೊಗಳಿಂದ ಹಿಡಿದು, ಸ್ವಲ್ಪ ಪ್ರಮಾಣದ ವ್ಯತ್ಯಾಸವನ್ನು ಮಾಡಿರುವ ವೀಡಿಯೊಗಳು ಅಥವಾ ಸುಲಭವಾಗಿ ದೊಡ್ಡ ಪ್ರಮಾಣದಲ್ಲಿ ನಕಲು ಮಾಡಬಹುದಾದ ವೀಡಿಯೊಗಳನ್ನು ಒಳಗೊಂಡಿದೆ.

ಈ ನೀತಿಯು ಒಟ್ಟಾರೆಯಾಗಿ ನಿಮ್ಮ ಚಾನಲ್‌ಗೆ ಅನ್ವಯಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ಹಲವು ವೀಡಿಯೊಗಳನ್ನು ಹೊಂದಿದ್ದರೆ, ನಿಮ್ಮ ಸಂಪೂರ್ಣ ಚಾನಲ್‌ನಿಂದ ಮಾನಿಟೈಸೇಶನ್ ಅನ್ನು ತೆಗೆದುಹಾಕಲಾಗಬಹುದು.

ಏನನ್ನು ಮಾನಿಟೈಸ್ ಮಾಡಲು ಅನುಮತಿ ಇದೆ

ಈ ಪಾಲಿಸಿಯು ಮಾನಿಟೈಸ್ ಆಗುವ ಕಂಟೆಂಟ್ ವೀಕ್ಷಕರಿಗೆ ವೀಕ್ಷಿಸಲು ಇಷ್ಟವಾಗುವಂತಹ ಮತ್ತು ಆಸಕ್ತಿದಾಯಕ ವಿಷಯವನ್ನು ಒದಗಿಸುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಚಾನಲ್‌ನಲ್ಲಿನ ಕಂಟೆಂಟ್ ವೀಡಿಯೊದಿಂದ ವೀಡಿಯೊಗೆ ಭಿನ್ನವಾಗಿದೆ ಎಂದು ಸಾಮಾನ್ಯ ವೀಕ್ಷಕರು ಸುಲಭವಾಗಿ ಗುರುತಿಸಬಹುದಾದರೆ, ಅದು ಮಾನಿಟೈಸ್ ಮಾಡಲು ಸೂಕ್ತವಾಗಿರುತ್ತದೆ. ಒಂದೇ ರೀತಿಯ ಪ್ಯಾಟರ್ನ್ ಅನ್ನು ಅನುಸರಿಸುವ ಕಂಟೆಂಟ್ ಅನ್ನು ರಚಿಸುವ ಹಲವಾರು ಚಾನಲ್‌ಗಳ ಬಗ್ಗೆ ನಮಗೆ ತಿಳಿದಿದೆ. ಪ್ರತಿ ವೀಡಿಯೊದ ವಿಷಯವಸ್ತುವು ತುಲನಾತ್ಮಕವಾಗಿ ವಿಭಿನ್ನವಾಗಿರಬೇಕು ಎಂಬುದು ಮುಖ್ಯವಾಗಿದೆ.

ಏನನ್ನು ಮಾನಿಟೈಸ್ ಮಾಡಲು ಅನುಮತಿಸಲಾಗಿದೆ ಎಂಬುದರ ಕುರಿತಾದ ಉದಾಹರಣೆಗಳು (ಇವುಗಳನ್ನು ಒಳಗೊಂಡಿದೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ):

  • ವೀಡಿಯೊ ಪರಿಚಯ ಮತ್ತು ಅಂತ್ಯವು ಒಂದೇ ಆಗಿರುತ್ತದೆ, ಆದರೆ ಬಹುತೇಕ ಕಂಟೆಂಟ್ ವಿಭಿನ್ನವಾಗಿರುತ್ತದೆ
  • ಒಂದೇ ರೀತಿಯ ಕಂಟೆಂಟ್, ಇಲ್ಲಿ ಪ್ರತಿಯೊಂದು ವೀಡಿಯೊ ನೀವು ತೋರಿಸುತ್ತಿರುವ ವಿಷಯದ ಕುರಿತಾದ ಗುಣಗಳನ್ನು ಹೇಳುತ್ತದೆ
  • ಒಂದೇ ರೀತಿಯ ವಿಷಯಗಳ ಚಿಕ್ಕ ಕ್ಲಿಪ್‌ಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಲಾಗಿದೆ ಮತ್ತು ಇವು ಪರಸ್ಪರ ಹೇಗೆ ಸಂಬಂಧ ಹೊಂದಿವೆ ಎಂಬುದನ್ನು ನೀವು ತಿಳಿಸುತ್ತೀರಿ

ಈ ಮಾರ್ಗಸೂಚಿಯನ್ನು ಉಲ್ಲಂಘಿಸುವಂತಹ ಕಂಟೆಂಟ್

ಚಾನಲ್‌ನ ಕಂಟೆಂಟ್, ಒಂದೇ ಬಗೆಯ ಕಂಟೆಂಟ್ ಅನ್ನು ಒಳಗೊಂಡಿದ್ದರೆ, ಆಕರ್ಷಕ ಮತ್ತು ಆಸಕ್ತಿದಾಯಕ ವೀಡಿಯೊಗಳಿಗಾಗಿ YouTube ಗೆ ಬರುವ ವೀಕ್ಷಕರಿಗೆ ನಿರಾಶೆಯಾಗಬಹುದು. ಇದರರ್ಥ, ವೀಡಿಯೊದಿಂದ ವೀಡಿಯೊಗೆ ಸ್ವಲ್ಪವೇ ವ್ಯತ್ಯಾಸವನ್ನು ಹೊಂದಿರುವ ಕಂಟೆಂಟ್ ಇರುವ ಚಾನಲ್‌ಗಳಿಗೆ ಮಾನಿಟೈಸ್ ಮಾಡಲು ಅನುಮತಿ ಇರುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಚಾನಲ್ ಒಂದು ಟೆಂಪ್ಲೇಟ್ ಬಳಸಿ ನಿರ್ಮಿಸಲಾದ ಮತ್ತು ಬಹುತೇಕ ರಿಪೀಟ್ ಆಗಿರುವ ಕಂಟೆಂಟ್ ಅನ್ನು ಹೊಂದಿರಬಾರದು.

ಏನನ್ನು ಮಾನಿಟೈಸ್ ಮಾಡಲು ಅನುಮತಿ ಇಲ್ಲ ಎಂಬುದಕ್ಕೆ ಉದಾಹರಣೆಗಳು (ಈ ಪಟ್ಟಿಯು ಸಮಗ್ರವಾಗಿಲ್ಲ):

  • ಮೂಲತಃ ನೀವು ರಚಿಸಿರದ ಇತರ ವಿಷಯವಸ್ತುಗಳನ್ನು, ಉದಾಹರಣೆಗೆ ವೆಬ್‌ಸೈಟ್‌ಗಳಿಂದ ಅಥವಾ ಸುದ್ದಿ ಫೀಡ್‌ಗಳಿಂದ ಪಠ್ಯ ಓದುವುದನ್ನು ವಿಶೇಷವಾಗಿ ತೋರಿಸುವ ಕಂಟೆಂಟ್
  • ಪಿಚ್ ಅಥವಾ ವೇಗವನ್ನು ಬದಲಾಯಿಸಲು ಹಾಡುಗಳನ್ನು ಮಾರ್ಪಡಿಸಲಾಗಿದೆ, ಆದರೆ ಮೂಲ ಹಾಡಿಗೆ ಹೋಲುತ್ತದೆ
  • ಒಂದೇ ರೀತಿಯ ರಿಪೀಟ್ ಆಗುವ ಕಂಟೆಂಟ್ ಅಥವಾ ಶೈಕ್ಷಣಿಕ ಮೌಲ್ಯ ಹೊಂದಿರದ, ಕಳಪೆ ಕಾಮೆಂಟರಿ ಅಥವಾ ನಿರೂಪಣೆಗಳನ್ನು ಹೊಂದಿರುವ ಅರ್ಥಹೀನ ಕಂಟೆಂಟ್
  • ಹೆಚ್ಚಿನ ಸಂಖ್ಯೆಯ ಉತ್ಪಾದನೆಗಳು ಅಥವಾ ಬಹು ವೀಡಿಯೊಗಳಾದ್ಯಂತ ಒಂದೇ ಟೆಂಪ್ಲೇಟ್ ಅನ್ನು ಬಳಸುತ್ತಿರುವ ಕಂಟೆಂಟ್
  • ಒಂದಿಷ್ಟು ಅಥವಾ ಸ್ವಲ್ಪವೂ ನಿರೂಪಣೆ, ಕಾಮೆಂಟರಿ ಅಥವಾ ಶೈಕ್ಷಣಿಕ ಮೌಲ್ಯವಿಲ್ಲದ ಚಿತ್ರಗಳ ಸ್ಲೈಡ್‌ಶೋಗಳು ಅಥವಾ ಸ್ಕ್ರಾಲ್ ಆಗುತ್ತಿರುವ ಪಠ್ಯ

ಮರುಬಳಕೆ ಮಾಡಲಾದ ಕಂಟೆಂಟ್

ಮರುಬಳಕೆ ಮಾಡಲಾದ ಕಂಟೆಂಟ್ ಎಂದರೆ, ಗಮನಾರ್ಹವಾದ ಮೂಲ ಕಾಮೆಂಟರಿ, ಗಣನೀಯವಾದ ಮಾರ್ಪಾಡುಗಳು ಅಥವಾ ಶೈಕ್ಷಣಿಕ ಅಥವಾ ಮನರಂಜನಾ ಮೌಲ್ಯವನ್ನು ಸೇರಿಸದೆಯೇ ಈಗಾಗಲೇ YouTube ಅಥವಾ ಇನ್ನೊಂದು ಆನ್‌ಲೈನ್ ಮೂಲದಲ್ಲಿರುವ ಕಂಟೆಂಟ್ ಅನ್ನು ಮರು ಬಳಕೆ ಮಾಡುವ ಚಾನಲ್‌ಗಳನ್ನು ಉಲ್ಲೇಖಿಸುತ್ತದೆ. ಮರುಬಳಕೆ ಮಾಡಲಾದ ಕಂಟೆಂಟ್ ಅನ್ನು ನಕಲು ಮಾಡಿದ ಅಥವಾ ಸ್ಕ್ರ್ಯಾಪ್ ಮಾಡಿದ ಕಂಟೆಂಟ್ (ಇತರ ವೆಬ್‌ಸೈಟ್‌ಗಳಿಂದ ಅನನ್ಯವಾದ ಅಥವಾ ಮೂಲ ಕಂಟೆಂಟ್ ತೆಗೆದುಕೊಂಡು ಅದನ್ನು ನಿಮ್ಮದೇ ಎಂದು ಪ್ರಕಟಿಸುವುದು) ಎಂದೂ ಸಹ ಕರೆಯಬಹುದು. 

ನಿಮ್ಮ ಕಂಟೆಂಟ್ ಅನ್ನು ಮರುಬಳಕೆ ಮಾಡಿರುವುದೇ ಎಂದು ತಿಳಿಯಲು, ನಿಮ್ಮ ಕಂಟೆಂಟ್ ನೀವು ಹೇಗೆ ರಚಿಸಿದ್ದೀರಿ, ಭಾಗವಹಿಸಿದ್ದೀರಿ ಅಥವಾ ನಿರ್ಮಿಸಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ವಿಮರ್ಶಕರು ನಿಮ್ಮ ಚಾನಲ್ ಅನ್ನು ಪರಿಶೀಲಿಸುತ್ತಾರೆ. ನಮ್ಮ ವಿಮರ್ಶಕರು ನಿಮ್ಮ ಚಾನಲ್‌ನಲ್ಲಿ ಇವುಗಳನ್ನು ಪರಿಶೀಲಿಸಬಹುದು: 

  • ವೀಡಿಯೊಗಳು 
  • ಚಾನಲ್ ವಿವರಣೆ
  • ವೀಡಿಯೊ ಶೀರ್ಷಿಕೆ
  • ವೀಡಿಯೊ ವಿವರಣೆಗಳು

ನಮ್ಮ ಮರುಬಳಕೆ ಮಾಡಲಾದ ಕಂಟೆಂಟ್ ನೀತಿಯು ಒಟ್ಟಾರೆಯಾಗಿ ನಿಮ್ಮ ಚಾನಲ್‌ಗೆ ಅನ್ವಯಿಸುತ್ತದೆ. ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವೀಡಿಯೊಗಳನ್ನು ನೀವು ಹೊಂದಿದ್ದರೆ ಅಥವಾ ನೀವು ಕಂಟೆಂಟ್ ಅನ್ನು ಮಾಡಿದ್ದೀರಿ ಎಂದು ನಮಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೆ, ನಿಮ್ಮ ಸಂಪೂರ್ಣ ಚಾನಲ್‌ನಿಂದ ಮಾನಿಟೈಸೇಶನ್ ಅನ್ನು ತೆಗೆದುಹಾಕಬಹುದು.

ಏನನ್ನು ಮಾನಿಟೈಸ್ ಮಾಡಲು ಅನುಮತಿ ಇದೆ

ವೀಕ್ಷಕರಿಗೆ ಮೌಲ್ಯವನ್ನು ನೀಡುವ ಮೂಲ ಮತ್ತು ಅಧಿಕೃತ ಕಂಟೆಂಟ್ ಅನ್ನು ಒದಗಿಸುವ ರಚನೆಕಾರರಿಗೆ ನಾವು ರಿವಾರ್ಡ್ ನೀಡಲು ಬಯಸುತ್ತೇವೆ. ನೀವು ಮೂಲತಃ ರಚಿಸಿರದ ಯಾವುದಾದರೂ ಕಂಟೆಂಟ್‌ನಲ್ಲಿ ಒಂದು ಮೋಜಿನ ಅಥವಾ ಚಿಂತನಶೀಲ ಸ್ಪಿನ್ ಸೇರಿಸಿದರೆ (ಕೆಳಗಿನ ನಮ್ಮ ಮಾರ್ಗಸೂಚಿಗಳಿಗೆ ಅನುಗುಣವಾಗಿ), ನೀವು ಕೆಲವು ರೀತಿಯಲ್ಲಿ ಕಂಟೆಂಟ್ ಅನ್ನು ಪರಿವರ್ತಿಸುತ್ತೀರಿ. ನಿಮ್ಮ ಚಾನಲ್‌ನಲ್ಲಿ ಈ ರೀತಿಯ ಕಂಟೆಂಟ್‌ ಅನ್ನು ಹೊಂದುವುದು ಸರಿ, ಆದರೆ ವೈಯಕ್ತಿಕ ವೀಡಿಯೊಗಳು ಕೃತಿಸ್ವಾಮ್ಯ ರೀತಿಯ ನೀತಿಗಳಿಗೆ ಒಳಪಟ್ಟಿರಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಮೂಲ ವೀಡಿಯೊ ಮತ್ತು ನಿಮ್ಮ ವೀಡಿಯೊ ಮಧ್ಯೆ ಒಂದು ಅರ್ಥಪೂರ್ಣವಾದ ವ್ಯತ್ಯಾಸವಿದೆ ಎಂದು ವೀಕ್ಷಕರು ಹೇಳುವುದಾದರೆ, ನಾವು ಮರುಬಳಕೆಯಾದ ಕಂಟೆಂಟ್ ಅನ್ನು ಅನುಮತಿಸುತ್ತೇವೆ.

ಗಮನಿಸಿ: ಈ ಉದಾಹರಣೆಗಳು ಮರುಬಳಕೆ ಕಂಟೆಂಟ್‍ನ ಮಾನಿಟೈಸೇಶನ್ ನೀತಿ, ಇತರೆ ನೀತಿಗಳನ್ನು ಉಲ್ಲಂಘಿಸುತ್ತಿಲ್ಲವಾದರೂ, ಕೃತಿಸ್ವಾಮ್ಯ ರೀತಿಯ ನೀತಿಗಳು ಅನ್ವಯಿಸುತ್ತವೆ.

ಏನನ್ನು ಮಾನಿಟೈಸ್ ಮಾಡಲು ಅನುಮತಿ ಇದೆ ಎಂಬುದರ ಉದಾಹರಣೆಗಳು (ಇವುಗಳನ್ನು ಒಳಗೊಂಡಿದೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ):

  • ಗಂಭೀರ ಪರಿಶೀಲನೆಗಾಗಿ ಕ್ಲಿಪ್‌ಗಳನ್ನು ಬಳಸುವುದು
  • ನೀವು ಚಲನಚಿತ್ರದ ಒಂದು ಸಂಭಾಷಣೆಯನ್ನು ಪುನಃ ಬರೆದು, ಅದರ ವಾಯ್ಸ್ಓವರ್ ಅನ್ನು ಬದಲಿಸಿರುವ ದೃಶ್ಯ
  • ಸ್ಪರ್ಧಿಯೊಬ್ಬರು ವಿಫಲರಾಗಲು ಏನು ಕಾರಣ ಎಂಬುದನ್ನು ನೀವು ವಿವರಿಸುತ್ತಿರುವಂತಹ, ಪಂದ್ಯಾವಳಿಯ ರೀಪ್ಲೇಗಳು
  • ನೀವು ಮೂಲ ವೀಡಿಯೊದ ಕುರಿತು ಕಾಮೆಂಟ್ ಮಾಡುತ್ತಿರುವ ಪ್ರತಿಕ್ರಿಯೆ ವೀಡಿಯೊಗಳು
  • ನೀವು ಕಥೆ ಮತ್ತು ಕಾಮೆಂಟರಿಯನ್ನು ಸೇರಿಸಿ ಎಡಿಟ್ ಮಾಡಿರುವ ಇತರ ರಚನೆಕಾರರ ಫೂಟೇಜ್‌
  • ನಮ್ಮ ಲೈಬ್ರರಿಯಲ್ಲಿನ ಹಾಡಿಗೆ ಮೂಲ ಕಂಟೆಂಟ್ ಅನ್ನು ಸೇರಿಸುವುದು ಅಥವಾ ನಿಮ್ಮ ಕಂಟೆಂಟ್‌ಗೆ ಇತರ ವೀಡಿಯೊಗಳಿಂದ ಮೂಲ ಆಡಿಯೊ ಅಥವಾ ವೀಡಿಯೊ ಸೆಗ್ಮೆಂಟ್ ಅನ್ನು ಸೇರಿಸುವಂತಹ Shorts ನಲ್ಲಿ ರೀಮಿಕ್ಸ್ ಮಾಡಲಾದ ಕಂಟೆಂಟ್‌ನ ಎಡಿಟ್‌ಗಳು
  • ವೀಡಿಯೊದಲ್ಲಿ ಅಪ್‌ಲೋಡ್ ಮಾಡುವ ರಚನೆಕಾರರನ್ನು ಮುಖ್ಯವಾಗಿ ಒಳಗೊಂಡಿರುವ ಕಂಟೆಂಟ್
  • ಇತರ ಆನ್‌ಲೈನ್ ಮೂಲಗಳಿಂದ ಮರುಬಳಕೆ ಮಾಡಲಾದ ಕಂಟೆಂಟ್, ಇಲ್ಲಿ ರಚನೆಕಾರರು ಕಂಟೆಂಟ್‌ನಲ್ಲಿ ಗೋಚರಿಸುತ್ತಾರೆ ಅಥವಾ ರಚನೆಕಾರರು ಈ ಕಂಟೆಂಟ್‌ನ ರಚನೆಕಾರರು ಹೇಗೆ ಇದನ್ನು ನಿರ್ಮಿಸಿದ್ದಾರೆ ಎಂಬುದನ್ನು ವಿವರಿಸುತ್ತಾರೆ
  • ಗಣನೀಯವಾದ ಎಡಿಟಿಂಗ್ ಪ್ರದರ್ಶಿಸುತ್ತದೆ ಮತ್ತು ಅದು ನಿಮ್ಮ ಚಾನಲ್‌ಗೆ ಅನನ್ಯವಾಗಿದೆ ಎಂದು ತೋರಿಸುವ ವೀಡಿಯೊದ ಮರುಬಳಕೆ ಮಾಡಲಾದ ಕಂಟೆಂಟ್‌ನ ಜೊತೆಗೆ ಆಡಿಯೊ ಮತ್ತು ವಿಷುವಲ್ ಎಫೆಕ್ಟ್‌ಗಳೊಂದಿಗೆ ಎಡಿಟ್ ಮಾಡಿದ ಫೂಟೇಜ್

ಈ ಮಾರ್ಗಸೂಚಿಯನ್ನು ಉಲ್ಲಂಘಿಸುವಂತಹ ಕಂಟೆಂಟ್

ಬೇರೊಬ್ಬರ ಕಂಟೆಂಟ್ ಅನ್ನು ತೆಗೆದುಕೊಂಡು, ಕನಿಷ್ಠ ಬದಲಾವಣೆಗಳನ್ನು ಮಾಡಿ, ಅದನ್ನು ನಿಮ್ಮ ಸ್ವಂತ ಮೂಲ ರಚನೆ ಎಂದು ಕರೆದರೆ ಅದು ಈ ಮಾರ್ಗಸೂಚಿಯ ಉಲ್ಲಂಘನೆಯಾಗುತ್ತದೆ. ಕಂಟೆಂಟ್ ನಿಮ್ಮದಾಗಿದೆ ಎಂದು ನಮಗೆ ಹೇಳಲಾಗದಿದ್ದರೆ, ಅದು ನಮ್ಮ ಮರುಬಳಕೆ ಮಾಡಲಾದ ಕಂಟೆಂಟ್ ನೀತಿಗೆ ಒಳಪಟ್ಟಿರಬಹುದು. ನೀವು ಮೂಲ ರಚನೆಕಾರರಿಂದ ಅನುಮತಿಯನ್ನು ಪಡೆದಿದ್ದರೂ ಸಹ ಈ ನೀತಿ ಅನ್ವಯಿಸುತ್ತದೆ. ಮರುಬಳಕೆಯಾದ ಕಂಟೆಂಟ್ YouTube ನ ಕೃತಿಸ್ವಾಮ್ಯ ಜಾರಿಗೊಳಿಸುವಿಕೆಗಿಂತ ಭಿನ್ನವಾಗಿದೆ, ಅಂದರೆ ಇದು ಕೃತಿಸ್ವಾಮ್ಯ, ಅನುಮತಿ ಅಥವಾ ನ್ಯಾಯಯುತ ಬಳಕೆಯನ್ನು ಆಧರಿಸಿಲ್ಲ. ಈ ಮಾರ್ಗಸೂಚಿಯ ಅರ್ಥವೇನೆಂದರೆ, ಕೆಲವೊಮ್ಮೆ ನೀವು ನಿಮ್ಮ ಕಂಟೆಂಟ್ ವಿರುದ್ಧ ಕ್ಲೇಮ್‌ಗಳನ್ನು ಪಡೆಯದಿರಬಹುದು, ಆದರೂ ಸಹ ನಿಮ್ಮ ಚಾನಲ್‌ ನಮ್ಮ ಮರುಬಳಕೆಯಾದ ಕಂಟೆಂಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಬಹುದು.

ಏನನ್ನು ಮಾನಿಟೈಸ್ ಮಾಡಲು ಅನುಮತಿ ಇಲ್ಲ ಎಂಬುದಕ್ಕೆ ಇನ್ನಷ್ಟು ಉದಾಹರಣೆಗಳು (ಈ ಪಟ್ಟಿಯು ಸಮಗ್ರವಲ್ಲ):

  • ನಿಮ್ಮ ಮೆಚ್ಚಿನ ಶೋದಿಂದ ಕೆಲವು ದೃಶ್ಯಗಳ ಕ್ಲಿಪ್‌ಗಳನ್ನು ಒಂದಿಷ್ಟು ನಿರೂಪಣೆಯೊಂದಿಗೆ ಅಥವಾ ನಿರೂಪಣೆಯೇ ಇಲ್ಲದೆ ಎಡಿಟ್ ಮಾಡಿರುವುದು
  • ಇತರ ಸೋಷಿಯಲ್ ಮೀಡಿಯಾ ವೆಬ್‌ಸೈಟ್‌ಗಳಿಂದ ನೀವು ಸಂಯೋಜಿಸಿರುವ ಚಿಕ್ಕ ವೀಡಿಯೊಗಳು
  • ವಿವಿಧ ಕಲಾವಿದರ ಹಾಡುಗಳ ಸಂಗ್ರಹಗಳು (ನೀವು ಅವರ ಅನುಮತಿಯನ್ನು ಹೊಂದಿದ್ದರೂ ಸಹ)
  • ಇತರ ರಚನೆಕಾರರು ಹಲವಾರು ಬಾರಿ ಅಪ್‌ಲೋಡ್ ಮಾಡಿರುವ ಕಂಟೆಂಟ್
  • ಇತರ ಜನರ ಕಂಟೆಂಟ್‌ನ ಪ್ರೊಮೋಷನ್ (ನಿಮಗೆ ಅನುಮತಿ ಇದ್ದರೂ ಸಹ)
  • ಯಾವುದೇ ಪ್ರಮುಖ ಮಾರ್ಪಾಡುಗಳಿಲ್ಲದೆ ಇನ್ನೊಂದು ಆನ್‌ಲೈನ್ ಮೂಲದಿಂದ ಡೌನ್‌ಲೋಡ್ ಮಾಡಲಾದ ಅಥವಾ ಕಾಪಿ ಮಾಡಲಾದ ಕಂಟೆಂಟ್ 
  • ಹೆಚ್ಚುವರಿ ಧ್ವನಿ ಕಾಮೆಂಟರಿ ಇಲ್ಲದೆಯೇ, ನಿಮ್ಮ ವೀಡಿಯೊಗಳಿಗೆ ಬಹುತೇಕ ಮೌಖಿಕವಲ್ಲದ ಪ್ರತಿಕ್ರಿಯೆಗಳಿಂದ ವೀಕ್ಷಣೆಗಳನ್ನು ಪಡೆಯುವ ಕಂಟೆಂಟ್
ಮಕ್ಕಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‌ಗಾಗಿ ಗುಣಮಟ್ಟದ ತತ್ವಗಳು
ಪ್ಲಾಟ್‍ಫಾರ್ಮ್‌ಗೆ ಉತ್ತಮ ಗುಣಮಟ್ಟದ ಕಂಟೆಂಟ್ ಅನ್ನು ಒದಗಿಸುವ ರಚನೆಕಾರರಿಗೆ ರಿವಾರ್ಡ್ ನೀಡಲು ಹೊಸ ಮಾರ್ಗಗಳನ್ನು ಹುಡುಕುವುದು, ಹಾಗೆಯೇ ಮಕ್ಕಳು ಮತ್ತು ಕುಟುಂಬಗಳಿಗೆ ಸುರಕ್ಷಿತ ಮತ್ತು ಉತ್ಕೃಷ್ಟವಾದ YouTube ಅನುಭವವನ್ನು ನೀಡುವುದು ನಮ್ಮ ಗುರಿಯಾಗಿದೆ.

‌ನಿಮ್ಮ ಚಾನಲ್ "ಮಕ್ಕಳಿಗಾಗಿ ರಚಿಸಲಾಗಿದೆ" ಕಂಟೆಂಟ್ ಅನ್ನು ಹೊಂದಿದ್ದರೆ, ನಾವು ಆ ಕಂಟೆಂಟ್‌ನ ಮಾನಿಟೈಸೇಶನ್ ಸ್ಥಿತಿಯನ್ನು ನಿರ್ಧರಿಸಲು ನಾವು YouTube ನ ಮಕ್ಕಳ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‍ಗೆ ಗುಣಮಟ್ಟದ ತತ್ವಗಳು ಅನ್ನು ಬಳಸುತ್ತೇವೆ.

ಚಾನಲ್‌ "ಮಕ್ಕಳಿಗಾಗಿ ರಚಿಸಲಾಗಿದೆ" ಕಂಟೆಂಟ್‍ಗೆ ಕಳಪೆ ಗುಣಮಟ್ಟವನ್ನು ಬಲವಾಗಿ ಅವಲಂಬಿಸುವುದು ಕಂಡುಬಂದರೆ, ಆಗ ಅದನ್ನು YouTube ಪಾಲುದಾರ ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗುವುದು. ಒಂದು ಪ್ರತ್ಯೇಕ ವೀಡಿಯೊ ಈ ಗುಣಮಟ್ಟದ ತತ್ವಗಳನ್ನು ಉಲ್ಲಂಘಿಸುವುದು ಕಂಡುಬಂದರೆ, ಅದು ಸೀಮಿತ ಅಥವಾ ಜಾಹೀರಾತು ರಹಿತವಾಗಿ ಕಾಣಬಹುದು.

ನಿಮ್ಮ "ಮಕ್ಕಳಿಗಾಗಿ ರಚಿಸಲಾಗಿದೆ" ಕಂಟೆಂಟ್ ಕಳಪೆ ಗುಣಮಟ್ಟದ್ದಾಗಿದೆಯೇ ಅಥವಾ ಉನ್ನತ ಗುಣಮಟ್ಟದ್ದಾಗಿದೆಯೇ ಎಂದು ಪರಿಶೀಲಿಸುವಾಗ ಸೂಕ್ಷ್ಮತೆ ಮತ್ತು ಸಂದರ್ಭ ಮುಖ್ಯವಾಗಿವೆ. ಮಾರ್ಗದರ್ಶಿಗಳು ಮತ್ತು ಉದಾಹರಣೆಗಳಿಗೆ ನಮ್ಮ ಮಕ್ಕಳ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‌ಗಳಿಗಾಗಿ ಉತ್ತಮ ಅಭ್ಯಾಸಗಳು ಪುಟಕ್ಕೆ ಭೇಟಿ ನೀಡಿ.

ಅರ್ಹತಾ ಮಾನದಂಡಗಳಲ್ಲಿ ಗುಣಮಟ್ಟದ ನೀತಿಗಳನ್ನು ಸೇರಿಸಿ

ಒಂದು ನಿರ್ದಿಷ್ಟ ವೀಡಿಯೊದ ಒಟ್ಟಾರೆ ಗುಣಮಟ್ಟದ ಮೇಲೆ ಪರಿಣಾಮವನ್ನು ಬೀರಬಹುದಾದ ಹಲವು ಕಳಪೆ ಗುಣಮಟ್ಟದ ತತ್ವಗಳಿವೆ. ನಾವು ರೋಲಿಂಗ್ ಆಧಾರದ ಮೇಲೆ, ಪ್ರತಿಯೊಂದು ತತ್ವವನ್ನೂ ಮಾನಿಟೈಸೇಶನ್ ಅರ್ಹತೆಯ ಅಂಶವಾಗಿ ಪರಿಗಣಿಸುತ್ತೇವೆ. ನಾವು ಪ್ರಸ್ತುತವಾಗಿ ಕೆಳಗೆ ನೀಡಲಾದ ಮಕ್ಕಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‌ನ ಕಳಪೆ ಗುಣಮಟ್ಟದ ತತ್ವಗಳ ವಿರುದ್ಧ ಜಾರಿಗೊಳಿಸುತ್ತಿದ್ದೇವೆ. ಸಮಯ ಕಳೆದಂತೆ ಇನ್ನಷ್ಟು ಗುಣಮಟ್ಟದ ತತ್ವಗಳನ್ನು ಸೇರಿಸಲು ನಾವು ವ್ಯಾಪ್ತಿಯನ್ನು ಹೆಚ್ಚಿಸಬಹುದು.

  • ನಕಾರಾತ್ಮಕ ನಡವಳಿಕೆಗಳು ಅಥವಾ ವರ್ತನೆಗಳನ್ನು ಪ್ರೋತ್ಸಾಹಿಸುವುದು: ಅಪಾಯಕಾರಿ ಚಟುವಟಿಕೆಗಳು, ದುಂದುಗಾರಿಕೆ, ಬೆದರಿಸುವುದು, ಅಪ್ರಾಮಾಣಿಕತೆ ಅಥವಾ ಇತರರಿಗೆ ಅಗೌರವ (ಉದಾಹರಣೆಗೆ ಅಪಾಯಕಾರಿ/ಅಸುರಕ್ಷಿತ ಕೀಟಲೆಗಳು, ಅನಾರೋಗ್ಯಕರ ಆಹಾರ ಪದ್ಧತಿ) ನೀಡುವುದನ್ನು ಪ್ರೋತ್ಸಾಹಿಸುವಂತಹ ಕಂಟೆಂಟ್.
  • ಅತಿಯಾಗಿ ವಾಣಿಜ್ಯಾತ್ಮಕ ಅಥವಾ ಪ್ರಚಾರಾತ್ಮಕವಾಗಿರುವುದು: ಉತ್ಪನ್ನಗಳನ್ನು ಖರೀದಿಸುವುದು ಅಥವಾ ಬ್ರ್ಯಾಂಡ್‌ಗಳು ಹಾಗೂ ಲೋಗೋಗಳನ್ನು (ಆಟಿಕೆಗಳು ಮತ್ತು ಆಹಾರದ ಹಾಗೆ) ಪ್ರಚಾರ ಮಾಡುವುದರ ಮೇಲೆ ಪ್ರಾಥಮಿಕವಾಗಿ ಗಮನ ಕೇಂದ್ರೀಕರಿಸಿರುವ ಕಂಟೆಂಟ್. ಇದು ಅತ್ಯಧಿಕ ಗ್ರಾಹಕೀಕರಣದ ಮೇಲೆ ಕೇಂದ್ರೀಕೃತವಾದ ಕಂಟೆಂಟ್ ಅನ್ನು ಸಹ ಒಳಗೊಂಡಿದೆ. YouTube Kids ಗಾಗಿ ಅತಿಯಾಗಿ ವಾಣಿಜ್ಯಿಕವಾದ ಕಂಟೆಂಟ್ ಬಗ್ಗೆ ಇನ್ನಷ್ಟು ತಿಳಿಯಿರಿ.
  • ವಂಚನಾತ್ಮಕವಾಗಿ ಶೈಕ್ಷಣಿಕ: ಕಂಟೆಂಟ್‌ನಲ್ಲಿ ಶೈಕ್ಷಣಿಕ ಮೌಲ್ಯವಿದೆ ಎಂದು ಪ್ರತಿಪಾದಿಸುವ ಶೀರ್ಷಿಕೆ ಅಥವಾ ಥಂಬ್‌ನೇಲ್ ಅನ್ನು ಹೊಂದಿರುವ, ಆದರೆ ವಾಸ್ತವಿಕವಾಗಿ ಮಾರ್ಗದರ್ಶನ ಅಥವಾ ವಿವರಣೆಯನ್ನು ಹೊಂದಿರದ ಅಥವಾ ಮಕ್ಕಳಿಗೆ ಸೂಕ್ತವಾಗಿರದ ಕಂಟೆಂಟ್. ಉದಾಹರಣೆಗಾಗಿ, “ಬಣ್ಣಗಳ ಬಗ್ಗೆ ಕಲಿಯಲು” ಅಥವಾ “ಸಂಖ್ಯೆಗಳನ್ನು ಕಲಿಯಲು” ವೀಕ್ಷಕರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡುವ, ಆದರೆ ನಿಖರವಲ್ಲದ ಮಾಹಿತಿಯನ್ನು ಒಳಗೊಂಡಿರುವ ವೀಡಿಯೊ.
  • ಗ್ರಹಿಕೆಗೆ ಅಡ್ಡಿಪಡಿಸುವುದು: ವಿಚಾರಹೀನವಾದ, ಸಂಯೋಜಿತ ನಿರೂಪಣೆಯನ್ನು ಹೊಂದಿರದ ಅಥವಾ ಕೇಳಿಸಲು ಸಾಧ್ಯವಾಗದ ಆಡಿಯೋದ ಹಾಗೆ, ಗ್ರಹಿಸಲು ಸಾಧ್ಯವಾಗದಿರುವ ಕಂಟೆಂಟ್. ಸಾಮೂಹಿಕ ಉತ್ಪಾದನೆ ಅಥವಾ ಸ್ವಯಂಚಾಲಿತ ರಚನೆಯಿಂದಾಗಿ ಹೆಚ್ಚಾಗಿ ಈ ರೀತಿಯ ವೀಡಿಯೊ ಉಂಟಾಗುತ್ತದೆ.
  • ಸಂವೇದನಾಶೀಲವಾಗಿರುವುದು ಅಥವಾ ದಾರಿ ತಪ್ಪಿಸುವುದು: ಸತ್ಯವಲ್ಲದ, ಉತ್ಪ್ರೇಕ್ಷಿತವಾದ ಅಥವಾ ಅಭಿಪ್ರಾಯ-ಆಧಾರಿತವಾದ ಮತ್ತು ಎಳೆಯ ಪ್ರೇಕ್ಷಕರನ್ನು ಗೊಂದಲಕ್ಕೆ ಈಡುಮಾಡಬಹುದಾದ ಕಂಟೆಂಟ್. ಇದು "ಕೀವರ್ಡ್ ಸ್ಟಫಿಂಗ್" ಒಳಗೊಂಡಿರಬಹುದು, ಇದರ ಜೊತೆಗೆ ಮಕ್ಕಳನ್ನು ಆಕರ್ಷಿಸುವ ಜನಪ್ರಿಯ ಕೀವರ್ಡ್‌ಗಳನ್ನು ಪುನರಾವರ್ತಿತ, ಮಾರ್ಪಾಡು ಮಾಡಿದ ಅಥವಾ ಉತ್ಪ್ರೇಕ್ಷಿತವಾದ ರೀತಿಯಲ್ಲಿ ಬಳಸುವುದನ್ನು ಒಳಗೊಂಡಿರಬಹುದು. ಕೀವರ್ಡ್‌ಗಳನ್ನು ಅರ್ಥವಾಗದ ರೀತಿಯಲ್ಲಿಯೂ ಬಳಸಲಾಗಬಹುದು.
ರಚನೆಕಾರರ ಜವಾಬ್ದಾರಿ
ನಿಮ್ಮ ಚಾನಲ್‌ನ ಮತ್ತು YouTube ಪಾಲುದಾರ ಕಾರ್ಯಕ್ರಮದ ಯಶಸ್ಸು ತಮ್ಮ ಬ್ರ್ಯಾಂಡ್‌ಗಳನ್ನು YouTube ಕಂಟೆಂಟ್‌ನೊಂದಿಗೆ ಕೈಜೋಡಿಸುವ ಜಾಹೀರಾತುದಾರರ ಇಚ್ಛೆಯನ್ನು ಅವಲಂಬಿಸುತ್ತದೆ. ಜಾಹೀರಾತುದಾರರು ನಂಬಿಕೆಯನ್ನು ಕಳೆದುಕೊಂಡಾಗ ಎಲ್ಲಾ YouTube ರಚನೆಕಾರರ ಗಳಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಸಮುದಾಯದ ಮೇಲೆ ಭಾರೀ ನಕಾರಾತ್ಮಕ ಪರಿಣಾಮವನ್ನು ಬೀರುವ ಅತಿರೇಕದ ನಡವಳಿಕೆಯನ್ನು ನಾವು ಅನುಮತಿಸುವುದಿಲ್ಲ. ಈ ಕಾರ್ಯನೀತಿಯ ಅರ್ಥವೇನೆಂದರೆ ನೀವು YouTube ಒಳಗೆ ಮತ್ತು ಹೊರಗೆ -- ನಿಮ್ಮ ವೀಕ್ಷಕರು, ನಿಮ್ಮ ಸಹ ರಚನೆಕಾರರು ಮತ್ತು ನಮ್ಮ ಜಾಹೀರಾತುದಾರರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು.
ನೀವು ಈ ಕಾರ್ಯನೀತಿಯನ್ನು ಉಲ್ಲಂಘಿಸಿದರೆ ನಾವು ನಿಮ್ಮ ಮಾನಿಟೈಸೇಶನ್ ಅನ್ನು ತಾತ್ಕಾಲಿಕವಾಗಿ ಆಫ್ ಮಾಡಬಹುದು ಅಥವಾ ನಿಮ್ಮ ಖಾತೆಗಳನ್ನು ಕೊನೆಗೊಳಿಸಬಹುದು. ಇದು ನಿಮ್ಮ ಅಸ್ತಿತ್ವದಲ್ಲಿರುವ ಎಲ್ಲಾ ಚಾನಲ್‌ಗಳು, ನೀವು ರಚಿಸುವ ಯಾವುದೇ ಹೊಸ ಚಾನಲ್‌ಗಳು ಹಾಗೂ ನೀವು ನಿಯಮಿತವಾಗಿ ಕಾಣಿಸಿಕೊಳ್ಳುವ ಚಾನಲ್‌ಗಳಿಗೆ ಅನ್ವಯಿಸಬಹುದು.
ನಿಮ್ಮ ಯಾವುದೇ ಚಾನಲ್‌ಗಳನ್ನು ಡಿಮೋನಿಟೈಸ್ ಮಾಡಲಾಗಿದ್ದರೆ ಅಥವಾ ಕೊನೆಗೊಳಿಸಲಾಗಿದ್ದರೆ, ಈ ನಿರ್ಬಂಧಗಳನ್ನು ತಪ್ಪಿಸಲು ನೀವು ಹೊಸ ಚಾನಲ್‌ಗಳನ್ನು ರಚಿಸಬಾರದು (ಅಥವಾ ಅಸ್ತಿತ್ವದಲ್ಲಿರುವ ಚಾನೆಲ್‌ಗಳನ್ನು ಬಳಸಬಾರದು) ಅಥವಾ ನಿಮ್ಮನ್ನು ಅಮಾನತುಗೊಳಿಸಿದ ಅವಧಿಯಲ್ಲಿ ಸಂಬಂಧಿತ ಚಾನಲ್‌ಗಳೊಂದಿಗೆ YPP ಗೆ ಅನ್ವಯಿಸಬಾರದು. ಹೀಗೆ ಮಾಡುವುದು ಎಲ್ಲಾ ಚಾನಲ್‌ಗಳ ಕೊನೆಗೊಳಿಸುವಿಕೆಗೆ ಕಾರಣವಾಗಬಹುದು.
ರಚನೆಕಾರರ ಜವಾಬ್ದಾರಿ ಬಗ್ಗೆ ಇನ್ನಷ್ಟು ತಿಳಿಯಿರಿ.
ರಚನೆಕಾರ ಇಂಟಿಗ್ರಿಟಿ

YouTube ಪಾಲುದಾರ ಕಾರ್ಯಕ್ರಮದ ರಚನೆಕಾರರು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿನ ಚಟುವಟಿಕೆಯನ್ನು ಕುಶಲತೆಯಿಂದ ಅಥವಾ ಮೋಸಗೊಳಿಸುವ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮನ್ನು ತಪ್ಪಾಗಿ ಪ್ರತಿನಿಧಿಸಬಾರದು ಎಂದು ನಾವು ನಿರೀಕ್ಷಿಸುತ್ತೇವೆ.

ಇದರರ್ಥ, ರಚನೆಕಾರರು ಒಂದು ಚಾನಲ್‌ನ ವೀಕ್ಷಣೆಗಳು, ಸಬ್‍ಸ್ಕ್ರೈಬ್‍ಗಳು, ಲೈಕ್‍ಗಳು, ವೀಕ್ಷಣೆ ಸಮಯ ಮತ್ತು ಆ್ಯಡ್ ಇಂಪ್ರೆಶನ್‍ಗಳಂತಹ ತೊಡಗಿಸಿಕೊಳ್ಳುವಿಕೆಯನ್ನು ಕೃತಕವಾಗಿ ಹಿಗ್ಗಿಸಬಾರದು. ಅದೇ ರೀತಿ, ರಚನೆಕಾರರು ಅಂತಹ ಕಂಟೆಂಟ್ ಅನ್ನು ಅಳಿಸುವ ಅಥವಾ ಅಸ್ಪಷ್ಟಗೊಳಿಸುವ ಮೊದಲು ಅನುವರ್ತನೆಯಿಲ್ಲದ ಕಂಟೆಂಟ್ ಮೇಲೆ ಆರ್ಗಾನಿಕ್ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸಬಾರದು. ಈ ರೀತಿಯ ನಡವಳಿಕೆಯಲ್ಲಿ ತೊಡಗುವುದು, YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕಲು ಅಥವಾ ನಿಮ್ಮ ಚಾನಲ್‌ಗಳ ಕೊನೆಗೊಳಿಸುವಿಕೆಗೆ ಕಾರಣವಾಗಬಹುದು. ಹೆಚ್ಚಿನ ಮಾಹಿತಿಗಾಗಿ, ನಮ್ಮ ಪ್ರೋಗ್ರಾಮ್ ನೀತಿಗಳು ಎಂಬುದನ್ನು ನೋಡಿ

ರಚನೆಕಾರರು ಕಾನೂನುಬಾಹಿರ, ವಂಚನಾತ್ಮಕ ಅಥವಾ ಮೋಸದ ವಹಿವಾಟುಗಳಿಗಾಗಿ ನಮ್ಮ ಮಾನಿಟೈಸೇಶನ್ ಫೀಚರ್‌ಗಳನ್ನು ಬಳಸಿಕೊಳ್ಳುವಂತಹ, ಆರ್ಥಿಕವಾಗಿ ನಿಂದನೀಯ ನಡವಳಿಕೆಗಳಲ್ಲಿ ಭಾಗಿಯಾಗುವ ಮೂಲಕ ಬಳಕೆದಾರರನ್ನು ಅಥವಾ YouTube ಅನ್ನು ದಾರಿತಪ್ಪಿಸಬಾರದು. ನೀವು ಈ ಕಾರ್ಯನೀತಿಯನ್ನು ಉಲ್ಲಂಘಿಸಿದರೆ, ನಾವು ನಿಮ್ಮನ್ನು YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕಬಹುದು ಅಥವಾ ನಿಮ್ಮ ಚಾನಲ್‌ಗಳನ್ನು ಕೊನೆಗೊಳಿಸಬಹುದು.

ನಿಮಗೆ ಕಾರ್ಯನೀತಿ ಬದಲಾವಣೆಗಳ ಬಗ್ಗೆ ಹೇಗೆ ತಿಳಿಸುತ್ತೇವೆ

YouTube ನಿರಂತರವಾಗಿ ಬದಲಾಗುತ್ತಾ ತನ್ನ ಸೇವೆಯನ್ನು ಸುಧಾರಿಸುತ್ತಿದ್ದು, ನಮ್ಮ ಸುತ್ತಲಿನ ಜಗತ್ತಿಗೆ ಹೊಂದಿಕೊಳ್ಳುತ್ತಿದೆ. ನಮ್ಮ ಸೇವೆಗೆ ಅಥವಾ ಕಾನೂನು, ನಿಯಂತ್ರಕ ಅಥವಾ ಭದ್ರತಾ ಕಾರಣಗಳಿಗಾಗಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ, ಸೇವಾ ನಿಯಮಗಳು ಮತ್ತು YouTube ಪಾಲುದಾರ ಕಾರ್ಯಕ್ರಮದ ನಿಯಮಗಳು, ನಮ್ಮ ನೀತಿಗಳು ಮತ್ತು ಇತರ ಒಪ್ಪಂದದ ದಾಖಲೆಗಳು ಸೇರಿದಂತೆ, ಸೇವೆಯ ನಿಮ್ಮ ಬಳಕೆಗೆ ಅನ್ವಯಿಸುವ ನಿಯಮಗಳು ಮತ್ತು ಷರತ್ತುಗಳು ಅಥವಾ ನೀತಿಗಳಿಗೆ ನಾವು ಬದಲಾವಣೆಗಳನ್ನು ಮಾಡಬೇಕಾಗಬಹುದು.

ನಿಮ್ಮ ಮೇಲೆ ಪರಿಣಾಮ ಬೀರಬಲ್ಲ ಬದಲಾವಣೆಗಳನ್ನು ಮಾಡಿದಾಗ ನಾವು ನಿಮಗೆ ಲಿಖಿತರೂಪದಲ್ಲಿ ತಿಳಿಸುತ್ತೇವೆ. ಮಾರ್ಪಾಡು ಮಾಡಲಾದ ನಿಯಮಗಳಿಗೆ ನೀವು ಒಪ್ಪದಿದ್ದರೆ, ನೀವು ಅದಕ್ಕೆ ಸಂಬಂಧಿತ ಫೀಚರ್ ಅನ್ನು ಬಳಸುವುದನ್ನು ನಿಲ್ಲಿಸಬಹುದು ಅಥವಾ ನಮ್ಮೊಂದಿಗೆ ನಿಮ್ಮ ಒಪ್ಪಂದವನ್ನು ಕೊನೆಗೊಳಿಸಬಹುದು.

ನಮ್ಮ ಕಾರ್ಯನೀತಿಗಳೊಂದಿಗೆ ಅಪ್‌ ಟು ಡೇಟ್‌‌ ಆಗಿರಲು ನಿಮಗೆ ಸಹಾಯ ಮಾಡಲು ನಾವು ಅಪ್‌ಡೇಟ್‌ಗಳ ಒಂದು ಶಾಶ್ವತ ಲಾಗ್‌ ಅನ್ನು ಸಹ ನಿರ್ವಹಿಸುತ್ತೇವೆ. ನಮ್ಮ ಬದಲಾವಣೆ ಲಾಗ್ ಅನ್ನು ಇಲ್ಲಿ ವೀಕ್ಷಿಸಿ.

ನಾವು YouTube ಮಾನಿಟೈಸೇಶನ್ ನೀತಿಗಳನ್ನು ಹೇಗೆ ಜಾರಿಗೊಳಿಸುತ್ತೇವೆ

YouTube ನಿಂದ ಹಣ ಗಳಿಸುತ್ತಿರುವ ಯಾರಾದರೂ YouTube ನ ಚಾನಲ್‌ ಮಾನಿಟೈಸೇಶನ್ ಕಾರ್ಯನೀತಿಗಳನ್ನು ಅನುಸರಿಸಬೇಕು. ನೀವು ನಮ್ಮ ಯಾವುದೇ ಕಾರ್ಯನೀತಿಯನ್ನು ಉಲ್ಲಂಘಿಸಿದರೂ YouTube ಈ ಕೆಳಗೆ ನೀಡಲಾದ ಕ್ರಮಗಳನ್ನು ಕೈಗೊಳ್ಳಬಹುದು.

ಸಂಪಾದನೆಗಳು ಅಥವಾ ಪಾವತಿಯನ್ನು ತಡೆಯುವುದು, ಅಡ್ಜಸ್ಟ್ ಮಾಡುವುದು, ಚಾರ್ಜ್ ಬ್ಯಾಕ್ ಮಾಡುವುದು ಅಥವಾ ಆಫ್‌ಸೆಟ್ ಮಾಡುವುದು

YouTube ಚಾನಲ್ ಮಾನಿಟೈಸೇಶನ್ ನೀತಿಗಳಿಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ನಾವು ನಿಮ್ಮ ಸಂಪಾದನೆಗಳನ್ನು ತಡೆಹಿಡಿಯಬಹುದು ಅಥವಾ ಅಡ್ಜಸ್ಟ್‌ ಮಾಡಬಹುದು. ನಾವು ಇನ್ನೂ ಪಾವತಿಯಾಗದ ಯಾವುದೇ YouTube ಗಾಗಿ AdSense ಬ್ಯಾಲೆನ್ಸ್‌ನ ವಿರುದ್ಧ ಸಂಬಂಧಿತ ಗಳಿಕೆಯ ಚಾರ್ಜ್ ಬ್ಯಾಕ್ ಪಡೆಯಬಹುದು ಅಥವಾ ನಿಮಗೆ ಪಾವತಿಸಬೇಕಾದ ಭವಿಷ್ಯದ ಸಂಪಾದನೆಗಳ ವಿರುದ್ಧ ಅಂತಹ ಮೊತ್ತವನ್ನು ಆಫ್‌ಸೆಟ್ ಮಾಡಬಹುದು.

ಇಂತಹ ಯಾವುದೇ ಉಲ್ಲಂಘನೆಗಳಿಗಾಗಿ, ಸಂಪಾದನೆಗಳನ್ನು ತಡೆಹಿಡಿಯಬೇಕೇ ಅಡ್ಜಸ್ಟ್ ಮಾಡಬೇಕೇ ಅಥವಾ ಆಫ್‌ಸೆಟ್ ಮಾಡಬೇಕೇ ಎಂಬ ತನಿಖೆಯನ್ನು ನಡೆಸಲು ನಮಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಇದು 90 ದಿನಗಳವರೆಗೆ ಅಥವಾ ಯಾವುದೇ ಥರ್ಡ್ ಪಾರ್ಟಿ ಹಕ್ಕುಗಳ ವಿವಾದಗಳನ್ನು ಇತ್ಯರ್ಥಪಡಿಸುವವರೆಗೆ ಪಾವತಿ ವಿಳಂಬಕ್ಕೆ ಕಾರಣವಾಗಬಹುದು.

ನಾವು ನಿಮ್ಮ ಸಂಪಾದನೆಗಳನ್ನು ಅಡ್ಜಸ್ಟ್‌ಮಾಡುವ ಅಥವಾ ತಡೆಹಿಡಿಯುವ ಉಲ್ಲಂಘನೆಗಳ ಉದಾಹರಣೆಗಳಲ್ಲಿ ಈ ನಿದರ್ಶನಗಳು ಸೇರಿವೆ (ಇದಕ್ಕೆ ಸೀಮಿತವಾಗಿರದೆ):

YouTube ಪಾಲುದಾರ ಕಾರ್ಯಕ್ರಮದಿಂದ ನಿಮ್ಮ ಚಾನಲ್ ಅನ್ನು ಕೊನೆಗೊಳಿಸಿದ್ದರೆ ಅಥವಾ ಅಮಾನತುಗೊಳಿಸಿದ್ದರೆ, ನೀವು ಇನ್ನು ಮುಂದೆ ಯಾವುದೇ ರೀತಿಯಲ್ಲಿ ಆದಾಯವನ್ನು ಗಳಿಸಲು ಅರ್ಹರಾಗಿರುವುದಿಲ್ಲ. YouTube ನಿಮ್ಮ ಸಂಪಾದನೆಗಳನ್ನು ತಡೆಹಿಡಿಯಬಹುದು ಮತ್ತು ಜಾಹೀರಾತುದಾರರು ಅಥವಾ ವೀಕ್ಷಕರಿಗೆ ಸೂಕ್ತವಾದಾಗ ಮತ್ತು ಸಾಧ್ಯವಾದಾಗ ಮರುಪಾವತಿ ಖರೀದಿಗಳನ್ನು ಮಾಡಬಹುದು.

ನಾವು ನಮ್ಮ ಕಾರ್ಯನೀತಿಗಳನ್ನು ಜಾರಿಗೊಳಿಸಬೇಕಾದಾಗ ನಿಮಗೆ ಲಿಖಿತ ರೂಪದಲ್ಲಿ ಇಮೇಲ್ ‌ಮೂಲಕ ಅಥವಾ ಉತ್ಪನ್ನದಲ್ಲಿ ತಿಳಿಸುತ್ತೇವೆ. ನಿಮಗೆ ಯಾವ ಆಯ್ಕೆಗಳು ಲಭ್ಯವಾಗಿವೆ ಎಂಬುದನ್ನು ಸಹ ನಾವು ನಿಮಗೆ ತಿಳಿಸುತ್ತೇವೆ.

ನಿಮ್ಮ ವೀಡಿಯೊಗಳಿಂದ ಜಾಹೀರಾತು ಆದಾಯವನ್ನು ಸೀಮಿತಗೊಳಿಸುವುದು

YouTube ಪಾಲುದಾರ ಕಾರ್ಯಕ್ರಮದ ಸದಸ್ಯರಾಗಿ, ನಿಮ್ಮ ವೀಡಿಯೊಗಳು ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸುವಂತಿದ್ದರೆ, ನೀವು ಅವುಗಳನ್ನು ಜಾಹೀರಾತು ಆದಾಯದ ಮೂಲಕ ಹಣ ಗಳಿಸಲು ಅರ್ಹವಾಗಿಸಬಹುದು. ಅದಾಗ್ಯೂ, ನಿಮ್ಮ ವೀಡಿಯೊಗಳು ನಮ್ಮ ಜಾಹೀರಾತುದಾರ-ಸ್ನೇಹಿ ಮಾರ್ಗಸೂಚಿಗಳನ್ನು ಪೂರೈಸದೇ ಇರುವುದು ಕಂಡುಬಂದಲ್ಲಿ ಅಥವಾ ನಮ್ಮ ಇತರ ಕಾರ್ಯನೀತಿಗಳಾದ ವಯಸ್ಸಿನ ನಿರ್ಬಂಧ ಅಥವಾ ಕೃತಿಸ್ವಾಮ್ಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ವೀಡಿಯೊಗಳು ಸೀಮಿತವಾದ ಅಥವಾ ಶೂನ್ಯ ಜಾಹೀರಾತು ಆದಾಯವನ್ನು ಗಳಿಸಬಹುದು.

ಕಂಟೆಂಟ್ ಯಾಕೆ ಮಾನಿಟೈಸೇಶನ್‌ಗೆ ಅರ್ಹತೆಯನ್ನು ಪಡೆಯಲಾರದು ಎಂಬುದಕ್ಕೆ ಸಂಬಂಧಿಸಿದ ಕಾರಣಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ, ನೋಡಿ: YouTube Studio ಗಾಗಿ ಮಾನಿಟೈಸೇಶನ್ ಐಕಾನ್ ಗೈಡ್

YouTube ಪಾಲುದಾರ ಕಾರ್ಯಕ್ರಮದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಅಮಾನತುಗೊಳಿಸುವುದು

ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳ ಉಲ್ಲಂಘನೆಯು, ನಿಮ್ಮ ಯಾವುದೇ ಖಾತೆ ಅಥವಾ ಎಲ್ಲಾ ಖಾತೆಗಳಲ್ಲಿ ಮಾನಿಟೈಸೇಶನ್‌ನ ಅಮಾನತು ಅಥವಾ ಶಾಶ್ವತ ನಿಷ್ಕ್ರಿಯತೆಗೆ ಕಾರಣವಾಗಬಹುದು. ನಿಮ್ಮ ಚಾನಲ್‌ ಇನ್ನುಮುಂದೆ ಮಾನಿಟೈಸೇಶನ್‌ಗೆ ಅರ್ಹತೆ ಹೊಂದಿರುವುದಿಲ್ಲ ಎಂದು ನಿರ್ಧರಿಸಲಾಗಿದ್ದರೆ, ನಿಮ್ಮ ಚಾನಲ್‌ YouTube ಪಾಲುದಾರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಮಾನಿಟೈಸೇಶನ್ ಟೂಲ್‌ಗಳು, ಫೀಚರ್‌ಗಳು, ಮಾಡ್ಯುಲ್‌ಗಳಿಗೆ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳಬಹುದು. ನೀವು ರಚನೆಕಾರರ ಬೆಂಬಲವನ್ನು ಸಂಪರ್ಕಿಸುವ ಮೂಲಕ ಯಾವ ಸಮಯದಲ್ಲಿ ಬೇಕಾದರೂ ನಿರ್ದಿಷ್ಟ ಮಾನಿಟೈಸೇಶನ್ ಮಾಡ್ಯುಲ್‌‌ಗಳಿಂದ ಹೊರಗುಳಿಯುವ ಆಯ್ಕೆಯನ್ನು ಮಾಡಬಹುದು.

ಡೇಟಾ ಉಳಿಸಿಕೊಳ್ಳುವಿಕೆ

YouTube ನೊಂದಿಗೆ ನಿಮ್ಮ ಮಾನಿಟೈಸೇಶನ್ ಅಗ್ರಿಮೆಂಟ್ ಕೊನೆಗೊಂಡರೆ, ನೀವು ರಚನೆಕಾರರ ಬೆಂಬಲವನ್ನು ಸಂಪರ್ಕಿಸುವ ಮೂಲಕ ನೀವು ಕಾರ್ಯಕ್ರಮದಲ್ಲಿದ್ದ ಸಮಯದವರೆಗಿನ ನಿಮ್ಮ YouTube Analytics ಡೇಟಾವನ್ನು ವಿನಂತಿಸಿಕೊಳ್ಳಬಹುದು.

ಟ್ರಬಲ್‍ಶೂಟಿಂಗ್ ಸಲಹೆಗಳು ಮತ್ತು ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಮರು-ಅರ್ಜಿ ಸಲ್ಲಿಸುವ ಕುರಿತಾದ ವಿವರಗಳನ್ನು ಒಳಗೊಂಡಂತೆ, ಅಮಾನತುಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ನೋಡಿ: ನನ್ನ ಚಾನಲ್‌ಗೆ ಮಾನಿಟೈಸೇಶನ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

ನಿಮ್ಮ YouTube ಚಾನಲ್ ಅನ್ನು ಅಮಾನತುಗೊಳಿಸಿ ಅಥವಾ ಕೊನೆಗೊಳಿಸಿ

ಅಸಾಧಾರಣ ಸಂದರ್ಭಗಳಲ್ಲಿ ಪ್ಲಾಟ್‌ಫಾರ್ಮ್‌ನ ಇಂಟಿಗ್ರಿಟಿಯನ್ನು ರಕ್ಷಿಸಲು ಅಥವಾ ನಮ್ಮ ಬಳಕೆದಾರರನ್ನು ಹಾನಿಯಿಂದ ರಕ್ಷಿಸುವ ನಿಟ್ಟಿನಲ್ಲಿ ನಾವು ಚಾನಲ್, ಖಾತೆಯನ್ನು ಕೊನೆಗೊಳಿಸಬೇಕಾಗಬಹುದು ಅಥವಾ ಸೇವೆಗೆ ಬಳಕೆದಾರರ ಆ್ಯಕ್ಸೆಸ್ ಅನ್ನು ನಿಷ್ಕ್ರಿಯಗೊಳಿಸಬೇಕಾಗಬಹುದು. ಚಾನಲ್‌ ಕೊನೆಗೊಳಿಸುವಿಕೆಗಳು ಮತ್ತು ನಿಷ್ಕ್ರಿಯವಾದ Google ಖಾತೆಗಳ ಬಗ್ಗೆ ಹಾಗೂ, ನಿಮ್ಮ ಚಾನಲ್‌ ಅಥವಾ ಖಾತೆಯನ್ನು ತಪ್ಪಾಗಿ ಕೊನೆಗೊಳಿಸಲಾಯಿತು ಎಂದು ನಿಮಗನಿಸಿದರೆ ನೀವು ಏನು ಮಾಡಬಹುದು ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ನಿಮ್ಮ ಮಾನಿಟೈಸೇಶನ್ ಮೇಲೆ ಪರಿಣಾಮ ಬೀರುವ ಕ್ರಮಗಳ ಬಗ್ಗೆ ನಾವು ನಿಮಗೆ ಹೇಗೆ ತಿಳಿಸುತ್ತೇವೆ

ನಾವು ನಮ್ಮ ಕಾರ್ಯನೀತಿಗಳನ್ನು ಜಾರಿಗೊಳಿಸಬೇಕಾದಾಗ ನಿಮಗೆ ಲಿಖಿತ ರೂಪದಲ್ಲಿ ಇಮೇಲ್ ‌ಮೂಲಕ ಅಥವಾ ಉತ್ಪನ್ನದಲ್ಲಿ ತಿಳಿಸುತ್ತೇವೆ. ನಿಮಗೆ ಯಾವ ಆಯ್ಕೆಗಳು ಲಭ್ಯವಾಗಿವೆ ಎಂಬುದನ್ನು ಸಹ ನಾವು ನಿಮಗೆ ತಿಳಿಸುತ್ತೇವೆ.

ನಿಮ್ಮ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಿಗಾಗಿ ಸಹಾಯವನ್ನು ಪಡೆಯುವುದು ಹೇಗೆ

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ನೀವು ನಮ್ಮ ರಚನೆಕಾರರ ಬೆಂಬಲ ತಂಡಕ್ಕೆ ಆ್ಯಕ್ಸೆಸ್ ಅನ್ನು ಪಡೆಯಬಹುದು.

ನೀವು ಒಂದು ನಿರ್ದಿಷ್ಟ ತೊಂದರೆಯನ್ನು ಎದುರಿಸುತ್ತಿದ್ದರೆ ಅಥವಾ ಒಬ್ಬ ರಚನೆಕಾರರಾಗಿ YouTube ನಿಂದ ಆದಷ್ಟು ಪ್ರಯೋಜನವನ್ನು ಪಡೆಯುವುದು ಹೇಗೆ ಎಂದು ತಿಳಿಯಬೇಕೆಂದಿದ್ದರೆ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ:

  • ನಿಮ್ಮ YouTube ಬಳಕೆಯನ್ನು ಆಪ್ಟಿಮೈಸ್ ಮಾಡಿ
  • ನಮ್ಮ Analytics ಟೂಲ್‌ಗಳ ಅತ್ಯುತ್ತಮ ಉಪಯೋಗ ಪಡೆಯುವುದು ಹೇಗೆಂದು ಅರ್ಥಮಾಡಿಕೊಳ್ಳಿ
  • YouTube ನ ತಾಂತ್ರಿಕ ಅಥವಾ ಸೇವಾ ಅಂಶಗಳ ಕುರಿತು ಸಲಹೆ ಪಡೆಯಿರಿ
  • ಕಾರ್ಯನೀತಿ ಮತ್ತು ಕೃತಿಸ್ವಾಮ್ಯ ಮಾರ್ಗಸೂಚಿಗಳನ್ನು ನ್ಯಾವಿಗೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
  • ಖಾತೆ ಮತ್ತು ಚಾನಲ್ ನಿರ್ವಹಣೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ
  • Content ID ಮತ್ತು ಹಕ್ಕುಗಳ ನಿರ್ವಹಣೆಯ ಸಮಸ್ಯೆಗಳನ್ನು ಬಗೆಹರಿಸಿ
  • ನಿಮ್ಮ ಖಾತೆಯ ಬಗ್‌ಗಳನ್ನು ಅಥವಾ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ ಬಗ್‌ಗಳನ್ನು ನಿವಾರಿಸಿ

ನೀವು ರಚನೆಕಾರರ ಬೆಂಬಲ ಸಂಪರ್ಕ ಮತ್ತು ಒಬ್ಬ YouTube ರಚನೆಕಾರರಾಗಿ ಸಹಾಯ ಪಡೆಯುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ವಿವರವಾದ ಸೂಚನೆಗಳನ್ನು ಪಡೆಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1764582516566000420
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false