ನಿಮ್ಮ YouTube ಚಾನಲ್ ಸದಸ್ಯತ್ವಗಳ ಪ್ರೋಗ್ರಾಂ ಅನ್ನು ವಿಶ್ಲೇಷಿಸಿ ಮತ್ತು ನಿರ್ವಹಿಸಿ

YouTube ನಲ್ಲಿ ಮಕ್ಕಳ ಕಂಟೆಂಟ್‌ನಲ್ಲಿ ಡೇಟಾವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದಕ್ಕೆ ನಾವು ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಇದರಿಂದಾಗಿ, ಈ ಲೇಖನದಲ್ಲಿರುವ ಕೆಲವು ಸೂಚನೆಗಳು ಬದಲಾಗಿರಬಹುದು. ಇನ್ನಷ್ಟು ತಿಳಿಯಿರಿ.

ಸದಸ್ಯತ್ವಗಳನ್ನು ಆನ್ ಮಾಡಿರುವ ಚಾನಲ್‌ಗಳು ತಮ್ಮ ಚಾನಲ್‌ನ ಸದಸ್ಯರಿಗಾಗಿ ವಿವಿಧ ಹಂತಗಳು ಹಾಗೂ ಸದಸ್ಯರಿಗೆ-ಮಾತ್ರ ಮೀಸಲಾದ ಪರ್ಕ್‌ಗಳೊಂದಿಗೆ ಚಾನಲ್ ಸದಸ್ಯತ್ವ ಪ್ರೋಗ್ರಾಂ ಅನ್ನು ರಚಿಸಬಹುದು. ನಿಮ್ಮ ಸದಸ್ಯರಿಗೆ ನೀವು ಲಭ್ಯಗೊಳಿಸಬಹುದಾದ ವಿವಿಧ ಪರ್ಕ್‌ಗಳು ಮತ್ತು ಹಂತಗಳು ಇವೆ. ವೀಕ್ಷಕರು ನಿಮ್ಮ ಚಾನಲ್ ಅನ್ನು ಹೇಗೆ ಸೇರಿಕೊಳ್ಳಬಹುದು ಮತ್ತು ಅವರು ಸದಸ್ಯತ್ವಗಳನ್ನು ಹೇಗೆ ಅನುಭವಿಸುತ್ತಾರೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

YouTube Studio ದಲ್ಲಿ ಈ ಕೆಳಗಿನವುಗಳು ಸೇರಿದಂತೆ, ನಿಮ್ಮ ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂ ಅನ್ನು ನೀವು ನಿರ್ವಹಿಸಬಹುದಾದ ಮತ್ತು ಮಾಪನ ಮಾಡಬಹುದಾದ ವಿವಿಧ ಸ್ಥಳಗಳಿವೆ:

ನಿಮ್ಮ ಸದಸ್ಯರು ಮತ್ತು ಪರ್ಕ್‌ಗಳ ಕುರಿತು ನೀವು ಇನ್ನಷ್ಟು ತಿಳಿಯಲು ಸಹಾಯ ಮಾಡುವುದಕ್ಕಾಗಿ ನಾವು ಸದಸ್ಯರ API ಸೇವೆಯನ್ನು ಸಹ ಹೊಂದಿದ್ದೇವೆ ಮತ್ತು ಇತರ ಥರ್ಡ್-ಪಾರ್ಟಿ ಇಂಟಿಗ್ರೇಶನ್‌ಗಳು ಇವೆ.

ಚಾನಲ್ ಸದಸ್ಯತ್ವಗಳು

ಚಾನಲ್ ಸದಸ್ಯತ್ವಗಳಲ್ಲಿ ಭಾಗವಹಿಸುವ ರಚನೆಕಾರರು ಮತ್ತು MCN ಗಳು ನಮ್ಮ ನಿಯಮಗಳು ಮತ್ತು ನೀತಿಗಳು, ಹಾಗೂ ಎಲ್ಲಾ ಸೂಕ್ತ ಕಾನೂನುಗಳು ಮತ್ತು ನಿಯಮಗಳನ್ನು ಅನುಸರಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ.

ಸದಸ್ಯತ್ವಗಳ ಟ್ಯಾಬ್

YouTube Studio ದಲ್ಲಿ ಸದಸ್ಯತ್ವಗಳ ಟ್ಯಾಬ್‌ನಲ್ಲಿ ನಿಮ್ಮ ಸದಸ್ಯತ್ವಗಳ ಪ್ರೋಗ್ರಾಂ ಮತ್ತು ನಿಮ್ಮ ಸದಸ್ಯರ ಕುರಿತು ನೀವು ಹೆಚ್ಚಿನ ಮಾಹಿತಿಯನ್ನು ನೋಡಬಹುದು. ಸದಸ್ಯತ್ವಗಳ ಟ್ಯಾಬ್‌ಗೆ ಹೋಗಲು, ಗಳಿಸಿ ನಂತರ ಸದಸ್ಯತ್ವಗಳು ಎಂಬುದನ್ನು ಕ್ಲಿಕ್ ಮಾಡಿ.

ನೀವು ಆಫ್‌ಲೈನ್‌ನಲ್ಲಿರುವಾಗ ಹೊಸ ಸದಸ್ಯರನ್ನು ಪಡೆದರೆ, ನಾವು ನಿಮಗೆ ನೋಟಿಫಿಕೇಶನ್ ಕಳುಹಿಸುವುದಿಲ್ಲ. ಆದರೆ, ಸದಸ್ಯತ್ವಗಳ ಟ್ಯಾಬ್‌ನಲ್ಲಿ ನಿಮ್ಮ ಸದಸ್ಯರನ್ನು ನೀವು ವೀಕ್ಷಿಸಬಹುದು. ಹೊಸ ವೀಕ್ಷಕರು ನಿಮ್ಮ ಚಾನಲ್ ಸದಸ್ಯತ್ವಕ್ಕೆ ಸೇರಿದಾಗ ನೀವು ಲೈವ್ ಸ್ಟ್ರೀಮ್ ಮಾಡುತ್ತಿದ್ದರೆ, ಲೈವ್ ಚಾಟ್‌ನಲ್ಲಿ ಪ್ರಕಾಶಮಾನವಾದ ಹಸಿರು "ಸುಸ್ವಾಗತ" ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಸಂದೇಶವನ್ನು ಚಾಟ್‌ನ ಮೇಲ್ಭಾಗದಲ್ಲಿ 5 ನಿಮಿಷಗಳ ಕಾಲ ಪಿನ್ ಮಾಡಲಾಗುತ್ತದೆ.

ಸದಸ್ಯತ್ವಗಳ ಟ್ಯಾಬ್‌ನಲ್ಲಿ ನಿಮ್ಮ ಸದಸ್ಯತ್ವಗಳ ಪ್ರೋಗ್ರಾಂ ಕುರಿತಾದ ಮಾಹಿತಿಯನ್ನು ವೀಕ್ಷಿಸಿ

ಸದಸ್ಯತ್ವಗಳ ಟ್ಯಾಬ್‌ನಲ್ಲಿ ನಿಮ್ಮ ಸದಸ್ಯತ್ವಗಳ ಪ್ರೋಗ್ರಾಂನ ಕುರಿತು ಈ ಕೆಳಗಿನವುಗಳು ಸೇರಿದಂತೆ ನೀವು ಮಾಹಿತಿಯನ್ನು ಪಡೆಯಬಹುದು:
  1. ಒಟ್ಟು ಸದಸ್ಯರು: ಪರ್ಕ್‌ಗಳಿಗೆ ಪ್ರಸ್ತುತ ಆ್ಯಕ್ಸೆಸ್ ಹೊಂದಿರುವ ಎಲ್ಲಾ ಸದಸ್ಯರು. ರದ್ದುಗೊಳಿಸಿದ, ಆದರೆ ತಮ್ಮ ಬಿಲ್ಲಿಂಗ್ ಅವಧಿಯ ಉಳಿದ ಅವಧಿಗೆ ಪರ್ಕ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿರುವ ಸದಸ್ಯರನ್ನು ಒಳಗೊಂಡಿರುತ್ತದೆ.
  2. ಸಕ್ರಿಯ ಸದಸ್ಯರು: ಸಕ್ರಿಯ ಸಬ್‌ಸ್ಕ್ರಿಪ್ಶನ್‌ಗಳಿರುವ ಸದಸ್ಯರು ಮಾತ್ರ. ಸಕ್ರಿಯ ಸದಸ್ಯರು ಎಂದರೆ ಒಟ್ಟು ಸದಸ್ಯರ ಸಂಖ್ಯೆಯಿಂದ ರದ್ದುಗೊಳಿಸಿದ ಸದಸ್ಯರ ಸಂಖ್ಯೆಯನ್ನು ಕಳೆದಿರುವುದು.
  3. ಆದಾಯ: ಕೊನೆಯ ಬಿಲ್ಲಿಂಗ್ ಅವಧಿಗಾಗಿ ಗಳಿಕೆಗಳು. ನಿಮ್ಮ ಗಳಿಕೆಗಳನ್ನು ಈ ಹಿಂದಿನ ಬಿಲ್ಲಿಂಗ್ ಅವಧಿಯೊಂದಿಗೆ ಸಹ ನೀವು ಹೋಲಿಸಬಹುದು.
  4. ಹಂತದ ಪ್ರಕಾರ ಸದಸ್ಯರು: ಕಾಲಕ್ರಮೇಣ ಹಂತದ ಪ್ರಕಾರ ಸದಸ್ಯರ ಸಂಖ್ಯೆ (ಒಟ್ಟು ಅಥವಾ ಸಕ್ರಿಯ).
  5. ಸೈನ್ ಅಪ್‌ಗಳು ಮತ್ತು ರದ್ದತಿಗಳು: ಕಳೆದ ಬಿಲ್ಲಿಂಗ್ ಅವಧಿಯಲ್ಲಿ ಸದಸ್ಯರಾದ ಅಥವಾ ಸದಸ್ಯತ್ವವನ್ನು ರದ್ದುಗೊಳಿಸಿದ ಬಳಕೆದಾರರ ಸಂಖ್ಯೆ. ನೀವು ಈ ಹಿಂದಿನ ಬಿಲ್ಲಿಂಗ್ ಅವಧಿಯೊಂದಿಗೆ ಸಹ ಹೋಲಿಸಬಹುದು.
  6. ರದ್ದತಿ ಫೀಡ್‌ಬ್ಯಾಕ್: ತಾವು ಏಕೆ ರದ್ದುಗೊಳಿಸಿದ್ದೇವೆ ಎಂಬ ಕುರಿತು ಕೆಲವು ಬಳಕೆದಾರರು ಫೀಡ್‌ಬ್ಯಾಕ್ ನೀಡಲು ಪೂರ್ವನಿಯೋಜಿತ ಬಹು ಆಯ್ಕೆಗಳನ್ನು ಬಳಸುತ್ತಾರೆ. ನಿಮ್ಮ ಚಾನಲ್ ಅನ್ನು ರದ್ದುಗೊಳಿಸುವಾಗ ಸದಸ್ಯರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನೋಡಲು ‘ರದ್ದತಿಗಳು’ ಎಂಬುದರತ್ತ ಪಾಯಿಂಟ್ ಮಾಡಿ.
ಗಮನಿಸಿ: ಬಿಲ್ಲಿಂಗ್ ಅವಧಿಯು ಪ್ರಸ್ತುತ ಕ್ಯಾಲೆಂಡರ್ ತಿಂಗಳಿಗೆ ಅನುಗುಣವಾಗಿ 28, 30 ಅಥವಾ 31 ದಿನಗಳು ಆಗಿರಬಹುದು. ಉದಾಹರಣೆಗೆ, ಸೆಪ್ಟೆಂಬರ್‌ನಲ್ಲಿ ಖರೀದಿಸಿದ ಸದಸ್ಯತ್ವವು ಮುಂದಿನ ಪಾವತಿಯ ಮೊದಲು, ಪರ್ಕ್‌ಗಳಿಗೆ 30 ದಿನಗಳ ಆ್ಯಕ್ಸೆಸ್ ಅನ್ನು ನೀಡುತ್ತದೆ.

ಸದಸ್ಯತ್ವಗಳ ಟ್ಯಾಬ್‌ನಲ್ಲಿ ನಿಮ್ಮ ಚಾನಲ್‌ನ ಸದಸ್ಯರ ಕುರಿತು ಮಾಹಿತಿಯನ್ನು ವೀಕ್ಷಿಸಿ

ಸದಸ್ಯತ್ವಗಳ ಟ್ಯಾಬ್‌ನಲ್ಲಿ ಈ ಕೆಳಗಿನವುಗಳು ಸೇರಿದಂತೆ ನಿಮ್ಮ ಪ್ರಸ್ತುತ ಸದಸ್ಯರ ಕುರಿತು ನೀವು ಮಾಹಿತಿಯನ್ನು ಪಡೆಯಬಹುದು:
  1. ಸದಸ್ಯರಾಗಿ ಒಟ್ಟು ಅವಧಿ: ಬಳಕೆದಾರರು ಎಷ್ಟು ಸಮಯದಿಂದ ನಿಮ್ಮ ಚಾನಲ್‌ನ ಸಕ್ರಿಯ ಪಾವತಿಸಿದ ಸದಸ್ಯರಾಗಿದ್ದಾರೆ. ಸದಸ್ಯರಾಗಿರುವ ಈ ಹಿಂದಿನ ಎಲ್ಲಾ ಅವಧಿಗಳ ಸಮಯವನ್ನು ಒಳಗೊಂಡಿದೆ.
  2. ಕೊನೆಯ ಅಪ್‌ಡೇಟ್: ಕೊನೆಯ ಬಾರಿ ಸದಸ್ಯರು ತಮ್ಮ ಸದಸ್ಯತ್ವವನ್ನು ಸೇರಿಕೊಂಡ, ಮರುಸೇರಿಕೊಂಡ, ಅಪ್‌ಗ್ರೇಡ್ ಮಾಡಿದ ಅಥವಾ ಡೌನ್‌ಗ್ರೇಡ್ ಮಾಡಿದಂದಿನಿಂದ ದಿನಗಳು.

ಈ ಮಾಹಿತಿಯ ಸ್ನ್ಯಾಪ್‌ಶಾಟ್ ಅನ್ನು CSV ಗೆ ಎಕ್ಸ್‌ಪೋರ್ಟ್ ಮಾಡಲು, ಮೇಲೆ ಬಲ ಮೂಲೆಯಲ್ಲಿರುವ ಡೌನ್‌ಲೋಡ್ ಅನ್ನು ಕ್ಲಿಕ್ ಮಾಡಿ. ಎಕ್ಸ್‌ಪೋರ್ಟ್ ಪೂರ್ಣಗೊಳ್ಳಲು ಕೆಲವು ನಿಮಿಷಗಳಷ್ಟು ಸಮಯಾವಕಾಶ ಬೇಕಾಗಬಹುದು. ನೀವು ಕಾಯುತ್ತಿರುವಾಗ ನೀವು ಈ ವಿಂಡೋವನ್ನು ಮುಚ್ಚಬಹುದು. 

ಸದಸ್ಯತ್ವಗಳ ಟ್ಯಾಬ್‌ನಲ್ಲಿರುವ ಇತರ ಕಾರ್ಡ್‌ಗಳು ಮತ್ತು ಟೂಲ್‌ಗಳು

ನಿಮ್ಮ ಸದಸ್ಯತ್ವಗಳ ಪ್ರೋಗ್ರಾಂಗೆ ಸಂಬಂಧಿಸಿದಂತೆ ನಿಮಗೆ ಸಹಾಯ ಮಾಡಲು, ಸದಸ್ಯತ್ವಗಳ ಟ್ಯಾಬ್‌ನಲ್ಲಿ ನೀವು ಇತರ ಕಾರ್ಡ್‌ಗಳು ಮತ್ತು ಟೂಲ್‌ಗಳನ್ನು ಕಾಣಬಹುದು.
  1. ಮಾಹಿತಿಯ ಮೂಲಗಳು: ಉತ್ತಮ ಅಭ್ಯಾಸಗಳು, ಇತರ ಮಾಹಿತಿ ಮೂಲಗಳಿಗೆ ಲಿಂಕ್‌ಗಳು ಮತ್ತು ನೀವು ಸಕ್ರಿಯಗೊಳಿಸಬಹುದಾದ ಮತ್ತು ನಿಷ್ಕ್ರಿಯಗೊಳಿಸಬಹುದಾದ, ಸದಸ್ಯತ್ವಗಳಿಗೆ-ನಿರ್ದಿಷ್ಟವಾದ ಪ್ರಯೋಗಗಳು.
  2. ಸದಸ್ಯರು ಸೇರಿಕೊಂಡ ಇತ್ತೀಚಿನ ವೀಡಿಯೊಗಳು : ವೀಕ್ಷಕರು ಸದಸ್ಯರಾಗಿರುವ ಟಾಪ್ ಪರ್ಫಾರ್ಮೆನ್ಸ್ ವೀಡಿಯೊಗಳನ್ನು ಮೇಲ್ವಿಚಾರಣೆ ಮಾಡಿ. 
  3. ಸದಸ್ಯರಿಂದ ಇತ್ತೀಚಿನ ಕಾಮೆಂಟ್‌ಗಳು: ಸದಸ್ಯರ ಇತ್ತೀಚಿನ ಕಾಮೆಂಟ್‌ಗಳನ್ನು ಸುಲಭವಾಗಿ ಹುಡುಕಿ, ಇದರಿಂದ ನೀವು ಅವರಿಗೆ ಪ್ರತ್ಯುತ್ತರಿಸಲು ಆದ್ಯತೆ ನೀಡಬಹುದು.
  4. ಸದಸ್ಯತ್ವಗಳ ಆಫರ್: ನಿಮ್ಮ ಸದಸ್ಯತ್ವಗಳ ಪರ್ಕ್‌ಗಳು ಮತ್ತು ಹಂತಗಳನ್ನು ನಿರ್ವಹಿಸಿ ಮತ್ತು ಎಡಿಟ್ ಮಾಡಿ. ಕಾರ್ಡ್, ಪ್ರತಿ ದರದಲ್ಲಿ ನೀವು ನೀಡಲು ಬಯಸುವ ಪರ್ಕ್‌ಗಳ ಪ್ರಕಾರಗಳಿಗಾಗಿ ಸಲಹೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಸಹ ಹೊಂದಿರಬಹುದು.
    1. ಪರಿಚಯದ ವೀಡಿಯೊ: ಸದಸ್ಯತ್ವಗಳಿಗೆ ಸೈನ್ ಅಪ್ ಮಾಡಲು ವೀಕ್ಷಕರು ‘ಸೇರಿಕೊಳ್ಳಿ’ ಎಂಬುದನ್ನು ಕ್ಲಿಕ್ ಮಾಡಿದಾಗ ಪ್ರದರ್ಶಿಸುವುದಕ್ಕಾಗಿ ಒಂದು ವೀಡಿಯೊವನ್ನು ಅಪ್‌ಲೋಡ್ ಮಾಡಿ.

YouTube Analytics

YouTube Analytics ನಲ್ಲಿ ನಿಮ್ಮ ಸದಸ್ಯರು ಮತ್ತು ಆದಾಯದ ಕುರಿತು ನೀವು ಇನ್ನಷ್ಟು ಡೇಟಾವನ್ನು ನೋಡಬಹುದು. YouTube Analytics ಗೆ ಹೋಗಲು, YouTube Studio ಗೆ ಸೈನ್ ಇನ್ ಮಾಡಿ ನಂತರ Analytics.

YouTube Analytics ನಲ್ಲಿ ಸದಸ್ಯತ್ವಗಳ ಪ್ರೇಕ್ಷಕರ ಮಾಹಿತಿಯನ್ನು ನೋಡಿ

ನಿಮ್ಮ ಚಾನಲ್ ಸದಸ್ಯರ ಕುರಿತಾದ ಮಾಹಿತಿಯನ್ನು ವೀಕ್ಷಿಸಲು:
  1. YouTube Studio ಗೆ ಸೈನ್ ಇನ್ ಮಾಡಿ ನಂತರ Analytics ನಂತರ ಪ್ರೇಕ್ಷಕರು
  2. ಒಟ್ಟು ಸದಸ್ಯರು’ ಕಾರ್ಡ್ ಅನ್ನು ಕ್ಲಿಕ್ ಮಾಡಿ. ಪ್ರತಿ ದಿನ ಅಥವಾ ಕಾಲಕ್ರಮೇಣ ಒಟ್ಟು ಮತ್ತು ಸಕ್ರಿಯ ಸದಸ್ಯರ ಸಂಖ್ಯೆಯನ್ನು ಕಾರ್ಡ್ ತೋರಿಸುತ್ತದೆ. 
    • ನಿಮ್ಮ ಸದಸ್ಯರ ಕುರಿತು ಇನ್ನಷ್ಟು ಡೇಟಾ ಬೇಕಿದ್ದರೆ,ಇನ್ನಷ್ಟು ನೋಡಿ ಎಂಬುದನ್ನು ಕ್ಲಿಕ್ ಮಾಡಿ. ಕಸ್ಟಮ್ ಸಮಯಾವಧಿಯಲ್ಲಿ ಈ ಕೆಳಗಿನ ಮೆಟ್ರಿಕ್‌ಗಳ ಪರ್ಫಾರ್ಮೆನ್ಸ್ ಹೇಗಿತ್ತು ಎಂಬುದನ್ನು ಅಂದಾಜಿಸಲು ನೀವು ಸಮಯದ ಸರಣಿಯನ್ನು ಬದಲಿಸಬಹುದು:
      1. ಒಟ್ಟು ಮತ್ತು ಸಕ್ರಿಯ ಸದಸ್ಯರು
      2. ಪಡೆದುಕೊಂಡ ಸದಸ್ಯರ ಸಂಖ್ಯೆ
      3. ರದ್ದುಗೊಳಿಸಿದ ಸದಸ್ಯರ ಸಂಖ್ಯೆ
      4. ಕಳೆದುಕೊಂಡ ಸದಸ್ಯರ ಸಂಖ್ಯೆ (ತಮ್ಮ ಬಿಲ್ಲಿಂಗ್ ಅವಧಿ ಕೊನೆಗೊಂಡ ಪರಿಣಾಮವಾಗಿ ಪರ್ಕ್‌ಗಳಿಗೆ ಆ್ಯಕ್ಸೆಸ್ ಅನ್ನು ಕಳೆದುಕೊಂಡು ರದ್ದುಗೊಳಿಸಿದ ಸದಸ್ಯರ ಸಂಖ್ಯೆ)
  3. ಕಾಲಕ್ರಮೇಣ ಎಷ್ಟು ಸದಸ್ಯರನ್ನು ಗಳಿಸಲಾಗಿದೆ ಅಥವಾ ಕಳೆದುಕೊಳ್ಳಲಾಗಿದೆ ಎಂಬುದನ್ನು 'ಕೀ ಮೆಟ್ರಿಕ್ಸ್' ಕಾರ್ಡ್ ಚಾರ್ಟ್ ತೋರಿಸುತ್ತದೆ.

YouTube Analytics ನಲ್ಲಿ ಸದಸ್ಯತ್ವಗಳ ಆದಾಯವನ್ನು ವೀಕ್ಷಿಸಿ

ನಿಮ್ಮ ಸದಸ್ಯತ್ವಗಳ ಪ್ರೋಗ್ರಾಂಗಾಗಿ ಉನ್ನತ ಮಟ್ಟದ ಆದಾಯ ಡೇಟಾವನ್ನು ವೀಕ್ಷಿಸಲು:
  1. YouTube Studio ಗೆ ಸೈನ್ ಇನ್ ಮಾಡಿ ನಂತರ Analytics ನಂತರ ಆದಾಯ.
  2. ವಹಿವಾಟುಗಳ ಆದಾಯ’ ಕಾರ್ಡ್ ಅನ್ನು ಕ್ಲಿಕ್ ಮಾಡಿ. ನಿರ್ದಿಷ್ಟ ಸಮಯಾವಧಿಯಲ್ಲಿ ಎಷ್ಟು ವಹಿವಾಟುಗಳು ಸಂಭವಿಸಿವೆ ಎಂಬುದನ್ನು ಕಾರ್ಡ್ ತೋರಿಸುತ್ತದೆ. ವಹಿವಾಟುಗಳು, ಹೊಸ ಸೈನ್-ಅಪ್‌ಗಳು ಅಥವಾ ಪುನರಾವರ್ತನೆಗಳಾಗಿವೆ.

ನಿಮ್ಮ ಸದಸ್ಯತ್ವಗಳ ಪ್ರೋಗ್ರಾಂನಿಂದ ಆದಾಯ ಡೇಟಾದ ಕುರಿತು ಹೆಚ್ಚು ವಿವರವಾದ ಬ್ರೇಕ್‌ಡೌನ್ ಅನ್ನು ವೀಕ್ಷಿಸಲು:

  1. YouTube Studio ಗೆ ಸೈನ್ ಇನ್ ಮಾಡಿ ನಂತರ Analytics ನಂತರ ಆದಾಯ.
  2. ನೀವು ಹಣವನ್ನು ಹೇಗೆ ಗಳಿಸುತ್ತೀರಿ ಎಂಬ ಕಾರ್ಡ್ ಅನ್ನು ಹುಡುಕಿ ಹಾಗೂ ಆಯ್ಕೆ ಮಾಡಿ.
  3. ಸದಸ್ಯತ್ವಗಳು ಎಂಬುದನ್ನು ಆಯ್ಕೆ ಮಾಡಿ. ನೀವು ಕಸ್ಟಮ್ ಅವಧಿಯನ್ನು ಸೆಟ್ ಮಾಡಬಹುದು ಅಥವಾ ವೀಡಿಯೊ ಫಾರ್ಮ್ಯಾಟ್ ಮೂಲಕ ಫಿಲ್ಟರ್ ಮಾಡಬಹುದು.

YouTube Analytics ನಲ್ಲಿ ಉಡುಗೊರೆ ಸದಸ್ಯತ್ವಗಳ ಕುರಿತಾದ ಡೇಟಾವನ್ನು ವೀಕ್ಷಿಸಿ

YouTube Analytics ನಲ್ಲಿ ಉಡುಗೊರೆ ಸದಸ್ಯತ್ವಗಳ ಕುರಿತಾದ ವರದಿಯನ್ನು ನೀವು ಕಾಣಬಹುದು. ಆಯ್ಕೆ ಮಾಡಿದ ಸಮಯಾವಧಿಯಲ್ಲಿ ಎಷ್ಟು ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಮತ್ತು ರಿಡೀಮ್ ಮಾಡಲಾಗಿದೆ ಎಂಬುದನ್ನು ವೀಕ್ಷಿಸಲು 'ಸದಸ್ಯತ್ವಗಳ ಪ್ರಕಾರ' ಎಂಬುದನ್ನು ಆಯ್ಕೆ ಮಾಡಿ. 

ಚಾನಲ್ ಸದಸ್ಯತ್ವಗಳ ಆದಾಯ ಹಂಚಿಕೆ ಮತ್ತು ಮರುಪಾವತಿಗಳು

ಸದಸ್ಯತ್ವಗಳ ಆದಾಯ ಹಂಚಿಕೆ

ರಚನೆಕಾರರಿಗಾಗಿ ಆದಾಯ ಹಂಚಿಕೆ

ಅನ್ವಯವಾಗುವ ತೆರಿಗೆಗಳು ಮತ್ತು ಶುಲ್ಕಗಳನ್ನು ಕಡಿತಗೊಳಿಸಿದ ನಂತರ, ಸದಸ್ಯತ್ವದ ಆದಾಯದ ಶೇಕಡಾ 70% ಅನ್ನು ರಚನೆಕಾರರು ಪಡೆಯುತ್ತಾರೆ. ಪ್ರಸ್ತುತ, ಎಲ್ಲಾ ವಹಿವಾಟಿನ ವೆಚ್ಚಗಳನ್ನು (ಕ್ರೆಡಿಟ್ ಕಾರ್ಡ್ ಶುಲ್ಕ ಸೇರಿದ ಹಾಗೆ) YouTube ಪಾವತಿಸುತ್ತಿದೆ.

MCN ಗಳಲ್ಲಿ ರಚನೆಕಾರರಿಗೆ ಆದಾಯದ ಪಾಲು

ನೀವು MCN ನ ಭಾಗವಾಗಿದ್ದರೆ, ನಿಮ್ಮ ನೆಟ್‌ವರ್ಕ್ ಜೊತೆಗೆ ನೀವು ಸಮಾಲೋಚಿಸಬೇಕು. ಕೆಲವು MCN ಗಳು ಹೆಚ್ಚುವರಿ ಆದಾಯ ಹಂಚಿಕೆಯನ್ನು ತೆಗೆದುಕೊಳ್ಳಬಹುದು, ಅಂದರೆ ಸದಸ್ಯತ್ವಗಳಿಂದ ನಿಮ್ಮ ಆದಾಯ 70% ಗಿಂತ ಕಡಿಮೆಯಾಗಿರಬಹುದು.
ನಿಮ್ಮ ಸದಸ್ಯತ್ವದ ಆದಾಯಕ್ಕೆ ಅನ್ವಯಿಸುವ ಎಲ್ಲಾ ತೆರಿಗೆ ಕಾನೂನುಗಳನ್ನು ಅನುಸರಿಸಲು ನೀವು ಹಾಗೂ ನಿಮ್ಮ MCN ಜವಾಬ್ದಾರರಾಗಿದ್ದೀರಿ.

ಸದಸ್ಯತ್ವಗಳಿಗಾಗಿ ರದ್ದತಿಗಳು, ಕೊನೆಗೊಳಿಸುವಿಕೆಗಳು ಮತ್ತು ಮರುಪಾವತಿಗಳು

ಸದಸ್ಯರು ಮರುಪಾವತಿಗೆ ವಿನಂತಿಸಿದರೆ, ಆ ಕ್ಲೇಮ್‌ನ ಸಿಂಧುತ್ವದ ಬಗ್ಗೆ YouTube ಸಂಪೂರ್ಣ ವಿವೇಚನೆಯನ್ನು ಹೊಂದಿರುತ್ತದೆ. ‌ನಾವು ಸದಸ್ಯರಿಗೆ ಮರುಪಾವತಿಯನ್ನು ನೀಡಿದಾಗ, ಮರುಪಾವತಿ ಮಾಡಿದ ಸದಸ್ಯರಿಗೆ ಮರುಪಾವತಿ ಮಾಡಲು ನಿಮ್ಮ ಪಾಲನ್ನು ನಿಮ್ಮ YouTube ಗಾಗಿ AdSense ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಪಾವತಿಸಿದ ಚಾನಲ್ ಸದಸ್ಯತ್ವಗಳಿಗಾಗಿ YouTube ನ ಮರುಪಾವತಿ ನೀತಿಯ ಕುರಿತು ತಿಳಿಯಿರಿ.
ಈ ಕೆಳಗಿನ ಯಾವುದೇ ಕಾರಣಗಳಿಂದಾಗಿ ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂ ಅನ್ನು ಕೊನೆಗೊಳಿಸಿದರೆ, ಎಲ್ಲಾ ಸಕ್ರಿಯ ಪಾವತಿಸಿದ ಸದಸ್ಯರು ತಮ್ಮ ಕೊನೆಯ ಪಾವತಿಗಾಗಿ ಮರುಪಾವತಿಯನ್ನು ಪಡೆಯುತ್ತಾರೆ:
  • ಚಾನಲ್ ಮೂಲಕ ಕೊನೆಗೊಳಿಸಲಾಗಿರುವುದು
  • YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕಿರುವುದು
  • ದುರ್ಬಳಕೆ ಅಥವಾ ವಂಚನೆಯ ಕಾರಣದಿಂದ
  • ನಮ್ಮ ನಿಯಮಗಳು ಅಥವಾ ನೀತಿಗಳ ಉಲ್ಲಂಘನೆ
ಸೂಚನೆ: ಮರುಪಾವತಿಸಲಾದ ಹಣವನ್ನು ಚಾನಲ್‌ನ ಆದಾಯದ ಪಾಲಿನಿಂದ ಕಡಿತಗೊಳಿಸಲಾಗುತ್ತದೆ.

ಮಾಪನ ಮತ್ತು ನಿರ್ವಹಣೆಗೆ ಸಂಬಂಧಿಸಿದ FAQ ಗಳು

ನಾನು ಚಾನಲ್ ಸದಸ್ಯರೊಬ್ಬರನ್ನು ತೆಗೆದುಹಾಕಬಹುದೇ?

ಸದಸ್ಯರಾಗಿ ಸೇರಿಕೊಂಡ ಯಾರನ್ನಾದರೂ ನಿಮಗೆ ತೆಗೆದುಹಾಕಲು ಸಾಧ್ಯವಾಗುವುದಿಲ್ಲ, ಆದರೆ ನೀವು ಅವರ ಕಾಮೆಂಟ್‌ಗಳನ್ನು ನಿರ್ಬಂಧಿಸಬಹುದು. ನಿರ್ದಿಷ್ಟ ವೀಕ್ಷಕರಿಂದ ಕಾಮೆಂಟ್‌ಗಳನ್ನು ನಿರ್ಬಂಧಿಸಲು, ನೀವು ಕಾಮೆಂಟ್ ಮತ್ತು ಲೈವ್ ಚಾಟ್ ಫಿಲ್ಟರ್‌ಗಳನ್ನು ಸೆಟಪ್ ಮಾಡಬೇಕಾಗುತ್ತದೆ.

ಚಾನಲ್ ಸದಸ್ಯರೊಬ್ಬರು ಕಾಮೆಂಟ್ ಮಾಡುವುದನ್ನು ನಾನು ನಿರ್ಬಂಧಿಸಬಹುದೇ?

ನಿರ್ದಿಷ್ಟ ವೀಕ್ಷಕರಿಂದ ಕಾಮೆಂಟ್‌ಗಳನ್ನು ನಿರ್ಬಂಧಿಸಲು, ನೀವು ಕಾಮೆಂಟ್ ಮತ್ತು ಲೈವ್ ಚಾಟ್ ಫಿಲ್ಟರ್‌ಗಳನ್ನು ಸೆಟಪ್ ಮಾಡಬೇಕಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1347460564647387526
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false