YouTube ಮತ್ತು YouTube TV ಯಲ್ಲಿ NFL ಸಂಡೇ ಟಿಕೆಟ್ ಕುರಿತು ತಿಳಿದುಕೊಳ್ಳಿ

NFL ಸಂಡೇ ಟಿಕೆಟ್ ಎಂಬುದು ಪ್ರೀಮಿಯಂ ಕ್ರೀಡಾ ಪ್ಯಾಕೇಜ್ ಆಗಿದ್ದು, ಅದು ನಿಮ್ಮ ಪ್ರದೇಶದಲ್ಲಿನ ಸ್ಥಳೀಯ ಬ್ರಾಡ್‌ಕಾಸ್ಟ್‌ಗಳಲ್ಲಿ ಪ್ರಸಾರವಾಗದ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) ನಿಯಮಿತ ಸೀಸನ್ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಗೇಮ್‌ಗಳನ್ನು ನಿಮಗಾಗಿ ಪ್ರಸ್ತುತಪಡಿಸುತ್ತದೆ. ಈ ಸೀಸನ್‌ನ ಆ್ಯಕ್ಷನ್ ಈ ಭಾನುವಾರ, ಸೆಪ್ಟೆಂಬರ್ 10 ರಂದು ಪ್ರಾರಂಭವಾಗಲಿದೆ.

YouTube TV ಮತ್ತು YouTube ನಲ್ಲಿ NFL ಸಂಡೇ ಟಿಕೆಟ್‌ನ ಕುರಿತು ತಿಳಿದುಕೊಳ್ಳಿ

NFL ಸಂಡೇ ಟಿಕೆಟ್ YouTube TV ಬೇಸ್ ಪ್ಲಾನ್ ಸಬ್‌ಸ್ಕ್ರಿಪ್ಶನ್‌ಗೆ ಆ್ಯಡ್-ಆನ್ ಆಗಿ ಲಭ್ಯವಿದೆ. ನೀವು NFL ಸಂಡೇ ಟಿಕೆಟ್ ಅನ್ನು ಒಂದು ಸ್ವತಂತ್ರ YouTube Primetime ಚಾನಲ್ ಆಗಿ ಸಹ ಪಡೆಯಬಹುದು.

ಈ ಲೇಖನದಲ್ಲಿ ಲಭ್ಯವಿರುವ ಗೇಮ್‌ಗಳು ಮತ್ತು ಫೀಚರ್‌ಗಳು, ದರ ಮತ್ತು ಇತ್ಯಾದಿಗಳು ಸೇರಿದಂತೆ NFL ಸಂಡೇ ಟಿಕೆಟ್ ಕುರಿತು ನೀವು ತಿಳಿದುಕೊಳ್ಳಬಹುದು.

NFL ಸಂಡೇ ಟಿಕೆಟ್ ಪ್ಯಾಕೇಜ್ ಆಯ್ಕೆಗಳು

NFL ಸಂಡೇ ಟಿಕೆಟ್, NFL ನಿಯಮಿತ ಸೀಸನ್‌ನ ಸಮಯದಲ್ಲಿ ನಿಮ್ಮ ಸ್ಥಳೀಯ ಪ್ರದೇಶದ ಬ್ರಾಡ್‌ಕಾಸ್ಟ್‌ಗಳಲ್ಲಿ ಲಭ್ಯವಿರದ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) NFL ಗೇಮ್‌ಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ನೀವು Dallas Cowboys ಅಭಿಮಾನಿಯಾಗಿದ್ದು, ಪ್ರಸ್ತುತ ಮಿಯಾಮಿಯಲ್ಲಿದ್ದರೆ, ನಿಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ NBC, CBS, ಅಥವಾ FOX ನಲ್ಲಿ ಪ್ರಸಾರವಾಗದ ಎಲ್ಲಾ Sunday Cowboys ಗೇಮ್‌ಗಳನ್ನು ನೀವು ವೀಕ್ಷಿಸಬಹುದು.

YouTube TV ಯಲ್ಲಿ NFL ಸಂಡೇ ಟಿಕೆಟ್ ಆ್ಯಡ್-ಆನ್‌ನ ಜೊತೆಗೆ NFL ಗೇಮ್‌ಗಳು ಲಭ್ಯವಿವೆ

YouTube TV ಎಂಬುದು 100+ ಬ್ರಾಡ್‌ಕಾಸ್ಟ್, ಕೇಬಲ್ ಮತ್ತು ಪ್ರಾದೇಶಿಕ ಕ್ರೀಡಾ ನೆಟ್‌ವರ್ಕ್‌ಗಳಲ್ಲಿನ ಲೈವ್ ಟಿವಿಯನ್ನು ಒಳಗೊಂಡಿರುವ ಸ್ಟ್ರೀಮಿಂಗ್ ಸೇವೆಯಾಗಿದೆ. YouTube TV ಬೇಸ್ ಪ್ಲಾನ್ ಪ್ರತಿ ತಿಂಗಳಿಗೆ $72.99 ದರದಲ್ಲಿ ಲಭ್ಯವಿದೆ. YouTube TV ಬೇಸ್ ಪ್ಲಾನ್‌ನ ಮೂಲಕ, ನೀವು ಯಾವೆಲ್ಲ NFL ಗೇಮ್‌ಗಳನ್ನು ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ:

  • ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವ ಬಹುತೇಕ ಪ್ರೀಸೀಸನ್ ಗೇಮ್‌ಗಳು
  • ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವ ನಿಯಮಿತ ಸೀಸನ್ ಗೇಮ್‌ಗಳು, ಇವುಗಳನ್ನು ಒಳಗೊಂಡಂತೆ:
    • NBC ಯಲ್ಲಿ ಸಂಡೇ ನೈಟ್ ಫುಟ್‌ಬಾಲ್
    • CBS, NBC, ಮತ್ತು FOX ನಲ್ಲಿ ಥ್ಯಾಂಕ್ಸ್‌ಗೀವಿಂಗ್ ಗೇಮ್‌ಗಳು
    • ESPN ನಲ್ಲಿ ಮಂಡೇ ನೈಟ್ ಫುಟ್‌ಬಾಲ್
    • NFL ನೆಟ್‌ವರ್ಕ್ ಮತ್ತು ABC ಗೇಮ್‌ಗಳು
  • ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವ ಪೋಸ್ಟ್‌ಸೀಸನ್ ಗೇಮ್‌ಗಳು

ನಿಮ್ಮ YouTube TV ಬೇಸ್ ಪ್ಲಾನ್‌ಗೆ ನೀವು NFL ಸಂಡೇ ಟಿಕೆಟ್ ಅನ್ನು ಸೇರಿಸಿದಾಗ, ನಿಯಮಿತ ಸೀಸನ್‌ನ ಇಡೀ ಅವಧಿಯಲ್ಲಿ ನೀವು ಎಲ್ಲಾ ಔಟ್ ಆಫ್ ಮಾರ್ಕೆಟ್ ಸಂಡೇ ಗೇಮ್‌ಗಳನ್ನು ವೀಕ್ಷಿಸಬಹುದು. YouTube TV ಬೇಸ್ ಪ್ಲಾನ್ ಅನ್ನು NFL ಸಂಡೇ ಟಿಕೆಟ್ ಆ್ಯಡ್-ಆನ್ ಜೊತೆಗೆ ಒಂದುಗೂಡಿಸಿದರೆ ನೀವು ಈ ಕೆಳಗಿನವುಗಳನ್ನು ವೀಕ್ಷಿಸಬಹುದು:

  • ಪ್ರೀಸೀಸನ್ NFL ಗೇಮ್‌ಗಳು:
    • NFL ನೆಟ್‌ವರ್ಕ್ ಮತ್ತು ESPN ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವ ಹಾಗೂ ನಿಮ್ಮ YouTube TV ಬೇಸ್ ಪ್ಲಾನ್‌ನಲ್ಲಿ ಒಳಗೊಳ್ಳಲಾಗಿರುವ ABC, CBS, FOX ಮತ್ತು NBC ಒಳಗೊಂಡ ನೆಟ್‌ವರ್ಕ್‌ಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರಸಾರವಾಗುವ ಪ್ರೀಸೀಸನ್ NFL ಗೇಮ್‌ಗಳನ್ನು ವೀಕ್ಷಿಸಿ. ನಿಮ್ಮ ಪ್ರದೇಶದಲ್ಲಿ ಯಾವೆಲ್ಲಾ ಚಾನಲ್‌ಗಳು ಲಭ್ಯವಿವೆ ಎಂದು ನೋಡಲು, YouTube TV ಸ್ವಾಗತ ಪುಟಕ್ಕೆ ಹೋಗಿ ಮತ್ತು ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಿ.
      • ಗಮನಿಸಿ: ನಿಮ್ಮ ಸ್ಥಳೀಯ ಪ್ರದೇಶದಲ್ಲಿನ ಪ್ರೀಸೀಸನ್ ಗೇಮ್ ಸ್ಥಳೀಯ ಚಾನಲ್ ಮತ್ತು NFL ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತಿದ್ದರೆ, ಅದು ಎಂಬಾರ್ಗೋಗೆ ಒಳಪಟ್ಟಿರುತ್ತದೆ ("ಬ್ಲ್ಯಾಕ್‌ಔಟ್ ನಿರ್ಬಂಧಗಳು") ಮತ್ತು ಆ ಸ್ಥಳೀಯ ಚಾನಲ್ ನಿಮ್ಮ ಪ್ರದೇಶದಲ್ಲಿನ YouTube TV ಬೇಸ್ ಪ್ಲಾನ್‌ನ ಭಾಗವಾಗಿ ಲಭ್ಯವಿಲ್ಲದಿದ್ದರೂ ಸಹ NFL ನೆಟ್‌ವರ್ಕ್‌ನಲ್ಲಿ ಅದನ್ನು ತೋರಿಸಲಾಗುವುದಿಲ್ಲ. ಬಹುತೇಕ ಪ್ರೀಸೀಸನ್ ಗೇಮ್‌ಗಳನ್ನು ನಂತರದ ದಿನಾಂಕಗಳಲ್ಲಿ ಮತ್ತು ಸಮಯಗಳಲ್ಲಿ NFL ನೆಟ್‌ವರ್ಕ್‌ನಲ್ಲಿ ಮರು-ಪ್ರಸಾರ ಮಾಡಲಾಗುತ್ತದೆ, ಮತ್ತು ಈ ಮರುಪ್ರಸಾರಗಳು ಅದೇ ರೀತಿಯ ನಿರ್ಬಂಧಗಳಿಗೆ ಒಳಪಡುವುದಿಲ್ಲ.
    • NFL ಸಂಡೇ ಟಿಕೆಟ್ ಪ್ರೀಸೀಸನ್ ಗೇಮ್‌ಗಳನ್ನು ಒಳಗೊಂಡಿರುವುದಿಲ್ಲ.
    • Amazon Prime ನಲ್ಲಿನ ಥರ್ಸ್‌ಡೇ ನೈಟ್ ಫುಟ್‌ಬಾಲ್ YouTube TV ಯಲ್ಲಿ ಲಭ್ಯವಿರುವುದಿಲ್ಲ.
  • ಸ್ಥಳೀಯ ಮತ್ತು ರಾಷ್ಟ್ರೀಯ ಚಾನಲ್‌ಗಳಲ್ಲಿನ ನಿಯಮಿತ ಸೀಸನ್ NFL ಗೇಮ್‌ಗಳು:
    • ನಿಮ್ಮ YouTube TV ಬೇಸ್ ಪ್ಲಾನ್‌ನಲ್ಲಿ ಒಳಗೊಳ್ಳಲಾಗಿರುವ CBS ಮತ್ತು FOX ಚಾನಲ್‌ಗಳಲ್ಲಿ ರಾಷ್ಟ್ರೀಯ (ಉದಾಹರಣೆಗೆ NBC ಯಲ್ಲಿ ಸಂಡೇ ನೈಟ್ ಫುಟ್‌ಬಾಲ್ ಮತ್ತು ESPN ನಲ್ಲಿ ಮಂಡೇ ನೈಟ್ ಫುಟ್‌ಬಾಲ್) ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಸಾರವಾಗುವ ನಿಯಮಿತ ಸೀಸನ್ NFL ಗೇಮ್‌ಗಳನ್ನು ವೀಕ್ಷಿಸಿ.
    • Amazon Prime ನಲ್ಲಿನ ಥರ್ಸ್‌ಡೇ ನೈಟ್ ಫುಟ್‌ಬಾಲ್ YouTube TV ಯಲ್ಲಿ ಲಭ್ಯವಿರುವುದಿಲ್ಲ.
  • ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) ಔಟ್ ಆಫ್ ಮಾರ್ಕೆಟ್ NFL ಗೇಮ್‌ಗಳು: NFL ಸಂಡೇ ಟಿಕೆಟ್ ಮೂಲಕ, ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಲಭ್ಯವಿರದ ಚಾನಲ್‌ಗಳಲ್ಲಿ CBS ಮತ್ತು FOX ನಲ್ಲಿ ಪ್ರಸಾರವಾಗುವ ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) ಗೇಮ್‌ಗಳನ್ನು ವೀಕ್ಷಿಸಿ. NFL ಸಂಡೇ ಟಿಕೆಟ್ ಸೆಪ್ಟೆಂಬರ್‌ನಲ್ಲಿ ನಿಯಮಿತ ಸೀಸನ್‌ನೊಂದಿಗೆ ಪ್ರಾರಂಭವಾಗುತ್ತದೆ.
  • ಪೋಸ್ಟ್‌ಸೀಸನ್ NFL ಗೇಮ್‌ಗಳು: 
    • ನಿಮ್ಮ YouTube ಬೇಸ್ ಪ್ಲಾನ್ ಮೂಲಕ CBS, FOX, ESPN, ಮತ್ತು NBC ಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವ ಪೋಸ್ಟ್‌ಸೀಸನ್ ಗೇಮ್‌ಗಳನ್ನು ವೀಕ್ಷಿಸಿ. 
    • NFL ಸಂಡೇ ಟಿಕೆಟ್ ಪೋಸ್ಟ್‌ಸೀಸನ್ ಗೇಮ್‌ಗಳನ್ನು ಒಳಗೊಂಡಿರುವುದಿಲ್ಲ.

NFL ಸಂಡೇ ಟಿಕೆಟ್ Primetime ಚಾನಲ್‌ನಲ್ಲಿ ಲಭ್ಯವಿರುವ NFL ಗೇಮ್‌ಗಳು

YouTube Primetime ಚಾನಲ್‌ಗಳು NFL ಸಂಡೇ ಟಿಕೆಟ್‌ನಂತಹ ವೈಯಕ್ತಿಕ ಸ್ಟ್ರೀಮಿಂಗ್ ಸೇವೆಗಳಾಗಿದ್ದು, ಅವು YouTube TV ಬೇಸ್ ಪ್ಲಾನ್ ಅನ್ನು ಖರೀದಿಸದೆಯೇ, ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಲೈವ್ ಕಂಟೆಂಟ್ ಇವೆಲ್ಲವನ್ನೂ YouTube ನಲ್ಲಿ ಬ್ರೌಸ್ ಮಾಡಲು ಮತ್ತು ವೀಕ್ಷಿಸಲು ನಿಮಗೆ ಅನುವು ಮಾಡಿಕೊಡುತ್ತವೆ.
YouTube ನಲ್ಲಿನ NFL ಸಂಡೇ ಟಿಕೆಟ್ Primetime ಚಾನಲ್‌ನ ಮೂಲಕ, ನೀವು ಇವುಗಳನ್ನೆಲ್ಲ ವೀಕ್ಷಿಸಬಹುದು:

  • ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) ಔಟ್ ಆಫ್ ಮಾರ್ಕೆಟ್ NFL ಗೇಮ್‌ಗಳು: ಸೆಪ್ಟೆಂಬರ್‌ನಿಂದ ಪ್ರಾರಂಭವಾಗುವ NFL ಸಂಡೇ ಟಿಕೆಟ್ ಮೂಲಕ ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಲಭ್ಯವಿರದ ಚಾನಲ್‌ಗಳಲ್ಲಿ CBS ಮತ್ತು FOX ನಲ್ಲಿ ಪ್ರಸಾರವಾಗುವ ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) ಗೇಮ್‌ಗಳನ್ನು ವೀಕ್ಷಿಸಿ.

NFL ಸಂಡೇ ಟಿಕೆಟ್ ಪ್ರೀಸೀಸನ್ ಮತ್ತು ಪೋಸ್ಟ್‌ಸೀಸನ್ ಗೇಮ್‌ಗಳನ್ನು ಒಳಗೊಂಡಿರುವುದಿಲ್ಲ.

NFL ಸಂಡೇ ಟಿಕೆಟ್ ದರ

YouTube TV ದರದಲ್ಲಿ NFL ಸಂಡೇ ಟಿಕೆಟ್

YouTube TV ಬೇಸ್ ಪ್ಲಾನ್ + NFL ಸಂಡೇ ಟಿಕೆಟ್ ಇವುಗಳನ್ನು ಒಳಗೊಂಡಿದೆ:
  • ಬಹುತೇಕ ಪ್ರೀ-ಸೀಸನ್ ಗೇಮ್‌ಗಳು
  • ಔಟ್ ಆಫ್ ಮಾರ್ಕೆಟ್ ಗೇಮ್‌ಗಳು, ಸ್ಥಳೀಯ ಮತ್ತು ರಾಷ್ಟ್ರೀಯ ಬ್ರಾಡ್‌ಕಾಸ್ಟ್‌ಗಳು ಸೇರಿದಂತೆ ನಿಯಮಿತ ಸೀಸನ್ ಗೇಮ್‌ಗಳು
  • ಪೋಸ್ಟ್‌ಸೀಸನ್ ಗೇಮ್‌ಗಳು

ನೀವು NFL ಸಂಡೇ ಟಿಕೆಟ್ ಅನ್ನು ವಾರ್ಷಿಕವಾಗಿ ಪಡೆಯಬಹುದು ಅಥವಾ ಅದನ್ನು NFL RedZone ಜೊತೆಗೆ ಬಂಡಲ್ ಮಾಡಬಹುದು. ನೀವು ಇಲ್ಲಿ ನಿಮ್ಮ ಪ್ಲಾನ್ ಅನ್ನು ಆಯ್ಕೆ ಮಾಡಬಹುದು ಮತ್ತು ಸೈನ್ ಅಪ್ ಮಾಡಬಹುದು.

YouTube TV ಯಲ್ಲಿನ NFL ಸಂಡೇ ಟಿಕೆಟ್‌ಗೆ YouTube TV ಬೇಸ್ ಪ್ಲಾನ್‌ನ ಅಗತ್ಯವಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. YouTube TV ಬೇಸ್ ಪ್ಲಾನ್ ಪ್ರತಿ ತಿಂಗಳಿಗೆ $72.99 ದರದಲ್ಲಿ ಲಭ್ಯವಿದೆ.

YouTube TV ಯಲ್ಲಿ NFL ಸಂಡೇ ಟಿಕೆಟ್ ಪಡೆಯುವುದು ಹೇಗೆಂದು ತಿಳಿದುಕೊಳ್ಳಿ.

YouTube Primetime ಚಾನಲ್‌ಗಳ ದರದಲ್ಲಿ NFL ಸಂಡೇ ಟಿಕೆಟ್

YouTube ನಲ್ಲಿನ NFL ಸಂಡೇ ಟಿಕೆಟ್, ರಾಷ್ಟ್ರೀಯ ಮಟ್ಟದಲ್ಲಿ ಅಥವಾ ನಿಮ್ಮ ಸ್ಥಳೀಯ ಪ್ರದೇಶದ ಬ್ರಾಡ್‌ಕಾಸ್ಟ್‌ಗಳಲ್ಲಿ ತೋರಿಸದ ಗೇಮ್‌ಗಳು ಸೇರಿದಂತೆ ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ (ಪೂರ್ವ ಸಮಯ) ಔಟ್ ಆಫ್ ಮಾರ್ಕೆಟ್ ಗೇಮ್‌ಗಳನ್ನು ಒಳಗೊಂಡಿರುತ್ತದೆ.

ನೀವು NFL ಸಂಡೇ ಟಿಕೆಟ್ ಅನ್ನು YouTube Primetime ಚಾನಲ್‌ಗಳಲ್ಲಿ ವಾರ್ಷಿಕವಾಗಿ ಪಡೆಯಬಹುದು ಅಥವಾ ಅದನ್ನು NFL RedZone ಜೊತೆಗೆ ಬಂಡಲ್ ಮಾಡಬಹುದು. ನೀವು ಇಲ್ಲಿ ನಿಮ್ಮ ಪ್ಲಾನ್ ಅನ್ನು ಆಯ್ಕೆ ಮಾಡಬಹುದು ಮತ್ತು ಸೈನ್ ಅಪ್ ಮಾಡಬಹುದು.

YouTube ನಲ್ಲಿ NFL ಸಂಡೇ ಟಿಕೆಟ್ ಪಡೆಯುವುದು ಹೇಗೆಂದು ತಿಳಿದುಕೊಳ್ಳಿ.

NFL ಸಂಡೇ ಟಿಕೆಟ್ ಬಿಲ್ಲಿಂಗ್ ಮತ್ತು ಖರೀದಿಯ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ

ನೀವು NFL ಸಂಡೇ ಟಿಕೆಟ್‌ಗಾಗಿ ವಿದ್ಯಾರ್ಥಿಗಳ ದರವನ್ನು ಒದಗಿಸುತ್ತೀರಾ?

ಹೌದು! NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವು ಅರ್ಹ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಅರ್ಹ ವಿದ್ಯಾರ್ಥಿಗಳು YouTube Primetime ಚಾನಲ್‌ಗಳಲ್ಲಿ NFL ಸಂಡೇ ಟಿಕೆಟ್ ಖರೀದಿಸಬಹುದು. YouTube TV ಯಲ್ಲಿ NFL ಸಂಡೇ ಟಿಕೆಟ್‌ಗಾಗಿ ಸೈನ್ ಅಪ್ ಮಾಡುವಾಗ NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವ ಲಭ್ಯವಿರುವುದಿಲ್ಲ. NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವದ ಕುರಿತು ತಿಳಿದುಕೊಳ್ಳಿ.

ನಾನು ಒಂದು ತಂಡದ ಪ್ಲಾನ್‌ಗಾಗಿ ಸೈನ್ ಅಪ್ ಮಾಡಬಹುದೇ ಅಥವಾ ವೈಯಕ್ತಿಕ ಗೇಮ್‌ಗಾಗಿ ಖರೀದಿಸಬಹುದೇ?

ಇಲ್ಲ. ನಾವು ಪ್ರಸ್ತುತ ಒಂದೇ ತಂಡದ ಪ್ಲಾನ್‌ಗಳನ್ನು ಅಥವಾ ಸಾಪ್ತಾಹಿಕ ಖರೀದಿಯ ಆಯ್ಕೆಗಳನ್ನು ಒದಗಿಸುತ್ತಿಲ್ಲ.

ನಾನು YouTube TV ಗಾಗಿ ನನ್ನ ಮೊಬೈಲ್ ಕ್ಯಾರಿಯರ್ ಅಥವಾ ಇಂಟರ್ನೆಟ್ ಸೇವೆ ಒದಗಿಸುವವರ ಮೂಲಕ ಹಣ ಪಾವತಿಸುತ್ತೇನೆ. ನಾನು NFL ಸಂಡೇ ಟಿಕೆಟ್ ಅನ್ನು ಸೇರಿಸಬಹುದೇ?

Frontier, Verizon ಮತ್ತು WOW! ಈಗ ಗ್ರಾಹಕರು ತಮ್ಮ ಪೂರೈಕೆದಾರರ ಮೂಲಕ NFL ಸಂಡೇ ಟಿಕೆಟ್ ಖರೀದಿಸಬಹುದು. ಈ ಪೂರೈಕೆದಾರರ ಗ್ರಾಹಕರು ರಿಯಾಯಿತಿಗಳು ಅಥವಾ ಕೂಪನ್‌ಗಳಂತಹ ಅನನ್ಯ ಉಳಿತಾಯದ ಆಫರ್‌ಗಳಿಗೂ ಅರ್ಹರಾಗಿರಬಹುದು.

ನಾನು NFL ಸಂಡೇ ಟಿಕೆಟ್ ಅನ್ನು ರದ್ದುಗೊಳಿಸಬಹುದೇ ಅಥವಾ ಮರುಪಾವತಿ ಪಡೆಯಬಹುದೇ?

ಇಲ್ಲ. NFL ಸಂಡೇ ಟಿಕೆಟ್‌ಗೆ ನಾವು ರದ್ದುಗೊಳಿಸುವಿಕೆಗಳು ಅಥವಾ ಮರುಪಾವತಿಗಳನ್ನು ಒದಗಿಸುವುದಿಲ್ಲ.

ನೀವು ಭವಿಷ್ಯದ ಸೀಸನ್‌ಗಳಿಗಾಗಿ ಸ್ವಯಂಚಾಲಿತ ನವೀಕರಣವನ್ನು ರದ್ದುಗೊಳಿಸಬಹುದು. ಇದನ್ನು ಮಾಡುವುದು ಹೇಗೆಂದು ತಿಳಿದುಕೊಳ್ಳಿ:

NFL ಸಂಡೇ ಟಿಕೆಟ್ ಜೊತೆಗೆ ಲಭ್ಯವಿರುವ ಫೀಚರ್‌ಗಳು

ನೀವು NFL ಸಂಡೇ ಟಿಕೆಟ್ ಅನ್ನು YouTube TV ಯಲ್ಲಿ ಖರೀದಿಸಿರಬಹುದು ಅಥವಾ Primetime ಚಾನಲ್‌ನಲ್ಲಿ ಖರೀದಿಸಿರಬಹುದು, ನೀವು ಈ ಫೀಚರ್‌ಗಳನ್ನು ಆನಂದಿಸಬಹುದು.

ನನಗೆ ಎಷ್ಟು ಸ್ಟ್ರೀಮ್‌ಗಳು ದೊರೆಯುತ್ತವೆ?
NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವದ ಸಬ್‌ಸ್ಕ್ರೈಬರ್‌ಗಳು ಒಂದು ಸೈನ್ ಇನ್ ಮಾಡಿದ ಸಾಧನಕ್ಕೆ ಮತ್ತು ಒಂದು ಏಕಕಾಲೀನ ಸ್ಟ್ರೀಮ್‌ಗೆ ಸೀಮಿತರಾಗಿರುತ್ತಾರೆ. ಇನ್ನಷ್ಟು ತಿಳಿಯಿರಿ.

ನಿಮ್ಮ ಮನೆಯಲ್ಲಿ NFL ಸಂಡೇ ಟಿಕೆಟ್ ವೀಕ್ಷಿಸುವಾಗ ನೀವು ಪಡೆಯುವ ಸ್ಟ್ರೀಮ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿರುವುದಿಲ್ಲ. ಉದಾಹರಣೆಗೆ, ನೀವು ನಿಮ್ಮ ಲಿವಿಂಗ್ ರೂಮ್ ಟಿವಿಯಲ್ಲಿ ಟ್ಯೂನ್ ಇನ್ ಮಾಡಬಹುದು, ಅದೇ ವೇಳೆ ಕುಟುಂಬದ ಒಬ್ಬ ಸದಸ್ಯರು ಬೇರೊಂದು ಕೊಠಡಿಯಲ್ಲಿ ತಮ್ಮ ಟ್ಯಾಬ್ಲೆಟ್‌ನಲ್ಲಿ ವೀಕ್ಷಿಸುತ್ತಾರೆ ಮತ್ತು ಇನ್ನೊಬ್ಬ ಸದಸ್ಯರು ಅದೇ ಸಮಯದಲ್ಲಿ ತಮ್ಮ ಫೋನ್‌ನಲ್ಲಿ ವೀಕ್ಷಿಸುತ್ತಾರೆ. ನೀವು ಲಾಗ್ ಇನ್ ಮಾಡಲು ಬಳಸಬಹುದಾದ ಸಾಧನಗಳ ಸಂಖ್ಯೆಗೆ ಯಾವುದೇ ಮಿತಿಯಿರುವುದಿಲ್ಲ.

ನಿಮ್ಮ ಮನೆಯ ಹೊರಗೆ, ನೀವು ಗರಿಷ್ಠ ಎರಡು ಪ್ರತ್ಯೇಕ ಸ್ಟ್ರೀಮ್‌ಗಳಲ್ಲಿ ವೀಕ್ಷಿಸಬಹುದು.

ನಾನು ಗೇಮ್‌ಗಳನ್ನು ನಂತರ ವೀಕ್ಷಿಸುವುದಕ್ಕಾಗಿ ರೆಕಾರ್ಡ್ ಮಾಡಬಹುದೇ?
ಹೌದು. ನೀವು NFL ಸಂಡೇ ಟಿಕೆಟ್‌ಗೆ ಸೈನ್ ಅಪ್ ಮಾಡಿದಾಗ, YouTube TV ಆ್ಯಪ್‌ನಲ್ಲಿನ DVR ಫೀಚರ್ ಮೂಲಕ ಗೇಮ್‌ಗಳನ್ನು ರೆಕಾರ್ಡ್ ಮಾಡಲು ಮತ್ತು ವೀಕ್ಷಿಸಲು ನೀವು ಆ್ಯಕ್ಸೆಸ್ ಪಡೆಯುತ್ತೀರಿ, ನೀವು NFL ಸಂಡೇ ಟಿಕೆಟ್ Primetime ಚಾನಲ್ ಅನ್ನು ಖರೀದಿಸಿದಾಗಲೂ ಸಹ ಇದು ಅನ್ವಯವಾಗುತ್ತದೆ. YouTube TV ಯಲ್ಲಿ ರೆಕಾರ್ಡ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ನಾನು ವಿರಾಮಗೊಳಿಸಬಹುದೇ, ಫಾಸ್ಟ್ ಫಾರ್ವರ್ಡ್ ಮತ್ತು ರಿವೈಂಡ್ ಮಾಡಬಹುದೇ?
ನೀವು YouTube ಅಥವಾ YouTube TV ಯಲ್ಲಿ NFL ಸಂಡೇ ಟಿಕೆಟ್ ಅನ್ನು ವೀಕ್ಷಿಸಲು ಪ್ರಾರಂಭಿಸಿದ ಸಮಯದಿಂದ ವಿರಾಮಗೊಳಿಸಬಹುದು ಮತ್ತು ರಿವೈಂಡ್ ಮಾಡಬಹುದು. ನೀವು ವೀಕ್ಷಿಸಲು ಪ್ರಾರಂಭಿಸಿದ ಸ್ಥಳದವರೆಗೆ ಮಾತ್ರ ನೀವು ರಿವೈಂಡ್ ಮಾಡಬಹುದು. ನೀವು ಗೇಮ್‌ಗಳ ನಡುವೆ ಬದಲಿಸಿಕೊಂಡರೆ, ನೀವು ರಿವೈಂಡ್ ಮಾಡಬಹುದಾದ ಸ್ಥಳವು ರೀಸೆಟ್ ಆಗುತ್ತದೆ. ನಿಮಗೆ ಮೊಬೈಲ್‌ನಲ್ಲಿ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ರಿವೈಂಡ್ ಮಾಡಲು ಸಾಧ್ಯವಾಗುವುದಿಲ್ಲ.
DVR ರೆಕಾರ್ಡ್ ಮಾಡಿದ ಗೇಮ್‌ಗಳಲ್ಲಿ (YouTube TV ಆ್ಯಪ್‌ನಲ್ಲಿ ಮಾತ್ರ ಲಭ್ಯವಿದೆ) ಮತ್ತು ಈ ಹಿಂದೆ ಪ್ರಸಾರವಾದ ಬೇಡಿಕೆ-ಮೇರೆಗಿನ ಗೇಮ್‌ಗಳಲ್ಲಿ ಲೈವ್ ಪ್ರೋಗ್ರಾಮಿಂಗ್ ವೀಕ್ಷಿಸುವುದಕ್ಕಾಗಿ ಮಾತ್ರ ಫಾಸ್ಟ್-ಫಾರ್ವರ್ಡ್ ಲಭ್ಯವಿದೆ.
ನಾನು ನನ್ನ ಕುಟುಂಬದ ಜೊತೆ NFL ಸಂಡೇ ಟಿಕೆಟ್ ಹಂಚಿಕೊಳ್ಳಬಹುದೇ?
NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವು ಫ್ಯಾಮಿಲಿ ಶೇರಿಂಗ್ ಒಳಗೊಂಡಿರುವುದಿಲ್ಲ. ಇನ್ನಷ್ಟು ತಿಳಿಯಿರಿ.
ಹೌದು. ನೀವು Google ಕುಟುಂಬ ಗುಂಪನ್ನು ರಚಿಸಿದಾಗ, ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5 ಇತರ ಸದಸ್ಯರ ಜೊತೆ YouTube TV ಅಥವಾ Primetime ಚಾನಲ್‌ಗಳಿಗೆ ಆ್ಯಕ್ಸೆಸ್ ಅನ್ನು ಹಂಚಿಕೊಳ್ಳಬಹುದು.
ಪ್ರಮುಖ ಸೂಚನೆ: Google Workspace ಖಾತೆಯನ್ನು ಬಳಸಿಕೊಂಡು Google ಕುಟುಂಬ ಗುಂಪನ್ನು ಪ್ರಾರಂಭಿಸಲು ಅಥವಾ ಅದಕ್ಕೆ ಸೇರಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. NFL ಸಂಡೇ ಟಿಕೆಟ್ ಅನ್ನು ನಿಮ್ಮ ಕುಟುಂಬ ಗುಂಪಿನ ಜೊತೆ ಹಂಚಿಕೊಳ್ಳಲು, ನಿಮ್ಮ ಸಾಮಾನ್ಯ Google ಖಾತೆಯನ್ನು ರಚಿಸಿ ಅಥವಾ ಸೈನ್ ಇನ್ ಮಾಡಿ.
ಫ್ಯಾಮಿಲಿ ಶೇರಿಂಗ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೀರಾ? ಇದರ ಕುರಿತು ಇನ್ನಷ್ಟು ತಿಳಿಯಿರಿ:
ನಾನು ಒಂದೇ ಬಾರಿಗೆ ಅನೇಕ ಗೇಮ್‌ಗಳನ್ನು ವೀಕ್ಷಿಸಬಹುದೇ?
ಹೌದು! ನಮ್ಮ ಮಲ್ಟಿವ್ಯೂ ಫೀಚರ್ ಒಂದೇ ಸ್ಕ್ರೀನ್‌ನಲ್ಲಿ ಏಕಕಾಲದಲ್ಲಿ ನಾಲ್ಕು ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸುವುದನ್ನು ಸುಲಭವಾಗಿಸುತ್ತದೆ. ಮಲ್ಟಿವ್ಯೂ ಆಯ್ದ ಸಾಧನಗಳಲ್ಲಿ ಮಾತ್ರ ಲಭ್ಯವಿದೆ.
 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8904979057975379743
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false