YouTube ನಲ್ಲಿ Shopping ಬಳಕೆಯನ್ನು ಪ್ರಾರಂಭಿಸಿ

YouTube Shopping ಅರ್ಹ ರಚನೆಕಾರರಿಗೆ YouTube ನಾದ್ಯಂತ ತಮ್ಮ ಸ್ವಂತ ಸ್ಟೋರ್‌ಗಳ ಅಥವಾ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಸುಲಭವಾಗಿ ಪ್ರಚಾರ ಮಾಡಲು ಅನುಮತಿಸುತ್ತದೆ. YouTube Shopping ಮೂಲಕ, ನೀವು ಇವುಗಳನ್ನು ಮಾಡಬಹುದು:

  • ನಿಮ್ಮ ಕಂಟೆಂಟ್‌ನಲ್ಲಿ ನಿಮ್ಮ ಸ್ವಂತ ಉತ್ಪನ್ನಗಳನ್ನು ಫೀಚರ್ ಮಾಡಲು ನಿಮ್ಮ ಸ್ಟೋರ್ ಅನ್ನು YouTube ಗೆ ಕನೆಕ್ಟ್ ಮಾಡುವುದು.
  • ನಿಮ್ಮ ಕಂಟೆಂಟ್‌ನಲ್ಲಿ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಟ್ಯಾಗ್ ಮಾಡುವುದು.
  • ಟ್ಯಾಗ್ ಮಾಡಲಾದ ಉತ್ಪನ್ನಗಳ ಪರ್ಫಾರ್ಮೆನ್ಸ್ ಅನ್ನು ವೀಕ್ಷಿಸಲು YouTube Analytics ನಲ್ಲಿ ನಿಮ್ಮ Shopping ಅನಾಲಿಟಿಕ್ಸ್ ಅನ್ನು ಪರಿಶೀಲಿಸುವುದು.

YouTube Shopping ಫೀಚರ್‌ಗಳಲ್ಲಿ ಇವುಗಳು ಸೇರಿವೆ:

  • ನಿಮ್ಮ ಚಾನಲ್‌ನ ಸ್ಟೋರ್
  • ವಿವರಣೆ ಮತ್ತು ಪ್ರಾಡಕ್ಟ್ ಶೆಲ್ಫ್‌ನಲ್ಲಿ ತೋರಿಸಲಾದ ನಿಮ್ಮ ಕನೆಕ್ಟೆಡ್ ಸ್ಟೋರ್‌ನಲ್ಲಿನ ಉತ್ಪನ್ನಗಳು 
  • ನಿಮ್ಮ ವೀಡಿಯೊಗಳು, Shorts ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿ ಟ್ಯಾಗ್ ಮಾಡಲಾದ ಉತ್ಪನ್ನಗಳು

ನಿಮ್ಮ ಸ್ವಂತ ಉತ್ಪನ್ನಗಳನ್ನು ಪ್ರಚಾರ ಮಾಡುವುದು

YouTube ನಲ್ಲಿ ವ್ಯಾಪಾರದ ವಸ್ತುವಿನಂತಹ ನಿಮ್ಮ ಸ್ವಂತ ಉತ್ಪನ್ನಗಳನ್ನು ಪ್ರಚಾರ ಮಾಡಲು, ನೀವು:

  1. ಅರ್ಹತೆಯ ಮಾನದಂಡಗಳನ್ನು ಪೂರೈಸಬೇಕು
  2. YouTube ಗೆ ನಿಮ್ಮ ಸ್ಟೋರ್ ಅನ್ನು ಕನೆಕ್ಟ್ ಮಾಡಬೇಕು
  3. ನಿಮ್ಮ ಸ್ಟೋರ್‌ನಲ್ಲಿನ ಉತ್ಪನ್ನಗಳನ್ನು ನಿಮ್ಮ ಕಂಟೆಂಟ್‌ನಲ್ಲಿ ಫೀಚರ್ ಮಾಡಲು ಅವುಗಳನ್ನು ಟ್ಯಾಗ್ ಮಾಡಬೇಕು

YouTube Shopping: ನಿಮ್ಮ ಸ್ಟೋರ್‌ನಿಂದ ಉತ್ಪನ್ನಗಳನ್ನು ಟ್ಯಾಗ್ ಮಾಡಿ ಮತ್ತು ಮಾರಾಟ ಮಾಡಿ

ಈ ಸ್ಥಳಗಳಲ್ಲಿರುವ ವೀಕ್ಷಕರು, YouTube ನ ಈ ಕೆಳಗೆ ತಿಳಿಸಿದ ಭಾಗಗಳಲ್ಲಿ ನಿಮ್ಮ ಉತ್ಪನ್ನಗಳನ್ನು ಬ್ರೌಸ್ ಮಾಡಬಹುದು ಮತ್ತು ಖರೀದಿಸಬಹುದು:

  • ನಿಮ್ಮ ಚಾನಲ್‌ನ ಸ್ಟೋರ್‌ನಲ್ಲಿ
  • ವೀಡಿಯೊ ವಿವರಣೆಯಲ್ಲಿರುವ ಉತ್ಪನ್ನಗಳಾಗಿ
  • ನಿಮ್ಮ ಕಂಟೆಂಟ್‌ನ ಕೆಳಗಿರುವ ಪ್ರಾಡಕ್ಟ್ ಶೆಲ್ಫ್‌ನಲ್ಲಿ
  • ನಿಮ್ಮ ಕಂಟೆಂಟ್‌ನಲ್ಲಿನ Shopping ಬಟನ್‌ನೊಂದಿಗೆ 

ಸೂಚನೆ: Google Merchant Center ನಲ್ಲಿ ಸ್ಟೋರ್ ಸೆಟ್ ಮಾಡುವ ಮಾರಾಟದ ದೇಶಗಳನ್ನು ಆಧರಿಸಿ ನಾವು ವೀಕ್ಷಕರಿಗೆ ಸಂಪೂರ್ಣ ಉತ್ಪನ್ನ ಮಾಹಿತಿಯನ್ನು ತೋರಿಸುತ್ತೇವೆ. ಒಂದು ವೇಳೆ ವೀಡಿಯೊ ನಿರ್ದಿಷ್ಟ ದೇಶದಲ್ಲಿ "ಶಿಪ್ಪಿಂಗ್ ಪ್ರದೇಶಗಳು ಸೀಮಿತವಾಗಿವೆ" ಎಂಬ ಹಕ್ಕುನಿರಾಕರಣೆಯನ್ನು ಹೊಂದಿದ್ದರೆ, ವ್ಯಾಪಾರಿಯು ಈ ದೇಶವನ್ನು Google Merchant Center ನಲ್ಲಿ ಟಾರ್ಗೆಟ್ ಮಾಡಿಲ್ಲ ಎಂಬುದು ಇದರರ್ಥವಾಗಿದೆ. ಇನ್ನಷ್ಟು ವಿವರಗಳಿಗಾಗಿ ನಿಮ್ಮ ರಿಟೇಲರ್ ಅಥವಾ ಆನ್‌ಲೈನ್ ಸ್ಟೋರ್ ನಿರ್ವಾಹಕರನ್ನು ನೀವು ಸಂಪರ್ಕಿಸಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ಶಿಪ್ಪಿಂಗ್ ಅನ್ನು ಬೆಂಬಲಿಸಲು ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ರಿಟೇಲರ್‌ಗಳು ಮಾತ್ರವೇ ಜವಾಬ್ದಾರರಾಗಿರುತ್ತಾರೆ. ಅವರ ಸ್ಥಳೀಯ ಶಿಪ್ಪಿಂಗ್ ಬೆಂಬಲದ ಕುರಿತು ಅಪ್-ಟು-ಡೇಟ್ ಮಾಹಿತಿಗಾಗಿ ನೀವು ಪ್ಲ್ಯಾಟ್‌ಫಾರ್ಮ್ ಅಥವಾ ರಿಟೇಲರ್ ವೆಬ್‌ಸೈಟ್‌ಗೆ ಹೋಗಿ ನೋಡಬಹುದು. ನೀವು ವ್ಯಾಪಾರಿಗಳು ಮಾರಾಟದ ದೇಶಗಳನ್ನು ಹೇಗೆ ಎಡಿಟ್ ಮಾಡಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.

ನಿಮ್ಮ ಸ್ವಂತ ಉತ್ಪನ್ನಗಳನ್ನು ಪ್ರಚಾರ ಮಾಡಲು ಚಾನಲ್‌ಗೆ ಇರಬೇಕಾದ ಅರ್ಹತೆ

YouTube ನಾದ್ಯಂತ ನಿಮ್ಮ ಸ್ವಂತ ಉತ್ಪನ್ನಗಳನ್ನು ಪ್ರಚಾರ ಮಾಡಲು, ನಿಮ್ಮ ಚಾನಲ್ ಈ ಕೆಳಗಿನ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು:

ನೀವು ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಿ ಎಂದು ನೀವು ದೃಢಪಡಿಸಿಕೊಂಡ ನಂತರ, ನಿಮ್ಮ ಚಾನಲ್‌ಗಾಗಿ Shopping ಫೀಚರ್‌ಗಳನ್ನು ಆನ್ ಮಾಡಲು ನಿಮ್ಮ ಸ್ಟೋರ್ ಅನ್ನು ಕನೆಕ್ಟ್ ಮಾಡಬಹುದು. ನೀವು YPP ಅಥವಾ ಸಬ್‌ಸ್ಕ್ರೈಬರ್‌ ಥ್ರೆಶೋಲ್ಡ್ ಅನ್ನು ತಲುಪಿರದಿದ್ದರೆ, ನಿಮ್ಮ ಚಾನಲ್ ಅನ್ನು ಹೆಚ್ಚು ಬೆಳೆಸುವ ಕುರಿತಾದ ಸಹಾಯಕ್ಕಾಗಿ ನೀವು ಈ ಸಂಪನ್ಮೂಲಗಳನ್ನು ಪರಿಶೀಲಿಸಬಹುದು.

ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಪ್ರಚಾರ ಮಾಡಿ

YouTube Shopping ಬಳಸಿ ನಿಮ್ಮ ಉತ್ಪನ್ನಗಳನ್ನು ಟ್ಯಾಗ್ ಮಾಡಿ ಮತ್ತು ಮಾರಾಟ ಮಾಡಿ! 🛍️

ನಿಮ್ಮ ಕಂಟೆಂಟ್‌ನಲ್ಲಿ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ನೀವು ಟ್ಯಾಗ್ ಮಾಡಬಹುದು ಮತ್ತು ಪ್ರಚಾರ ಮಾಡಬಹುದು. ನಿಮ್ಮ ಕಂಟೆಂಟ್‌ನಲ್ಲಿ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಟ್ಯಾಗ್ ಮಾಡಲು ನೀವು ಹೀಗೆ ಮಾಡಬೇಕು:

  1. ಅರ್ಹತಾ ಮಾನದಂಡಗಳನ್ನು ಪೂರೈಸಿ.
  2. ನಮ್ಮ ಟ್ಯಾಗಿಂಗ್ ಮಾರ್ಗಸೂಚಿಗಳನ್ನು ಅನುಸರಿಸಿ.
  3. ನಿಮ್ಮ ಕಂಟೆಂಟ್‌ನಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡಿ.

ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಪ್ರಚಾರ ಮಾಡಲು ಚಾನಲ್‌ಗೆ ಇರಬೇಕಾದ ಅರ್ಹತೆ

ನಿಮ್ಮ ಕಂಟೆಂಟ್‌ನಲ್ಲಿ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಪ್ರಚಾರ ಮಾಡಲು, ನಿಮ್ಮ ಚಾನಲ್ ಈ ಕೆಳಗಿನ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು:

  • ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿರಬೇಕು
  • ನೀವು ದಕ್ಷಿಣ ಕೊರಿಯಾ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರಬೇಕು.
  • ನಿಮ್ಮ ಚಾನಲ್ 10,000 ಕ್ಕಿಂತ ಹೆಚ್ಚಿನ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರಬೇಕು.
  • ನಿಮ್ಮ ಚಾನಲ್ ಸಂಗೀತ ಚಾನಲ್ ಆಗಿರಬಾರದು, ಅಧಿಕೃತ ಕಲಾವಿದರ ಚಾನಲ್ ಆಗಿರಬಾರದು ಅಥವಾ ಸಂಗೀತ ಪಾಲುದಾರರೊಂದಿಗೆ ಸಂಯೋಜಿತವಾಗಿರಬಾರದು. ಸಂಗೀತ ಪಾಲುದಾರರಲ್ಲಿ ಸಂಗೀತ ಲೇಬಲ್‌ಗಳು, ವಿತರಕರು, ಪ್ರಕಾಶಕರು ಅಥವಾ VEVO ಸೇರಿರಬಹುದು.
ನಿಮ್ಮ ಚಾನಲ್ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿರಬಾರದು ಮತ್ತು ನಿಮ್ಮ ಚಾನಲ್‌ನಲ್ಲಿ ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ಗಮನಾರ್ಹ ಸಂಖ್ಯೆಯ ವೀಡಿಯೊಗಳಿರಬಾರದು.

Shopping ಪರ್ಫಾರ್ಮೆನ್ಸ್ ಮತ್ತು ಆದಾಯ

ಕನೆಕ್ಟ್ ಆಗಿರುವ ನಿಮ್ಮ ಸ್ಟೋರ್‌ಗಳ ಉತ್ಪನ್ನಗಳು

ನಿಮ್ಮ ಟ್ಯಾಗ್ ಮಾಡಲಾದ ಉತ್ಪನ್ನಗಳ ಉನ್ನತ ಮಟ್ಟದ ಪರ್ಫಾರ್ಮೆನ್ಸ್ ಅನ್ನು ನೀವು YouTube Studio ನ Shopping ವಿಭಾಗದಲ್ಲಿ ಅಥವಾ YouTube Analytics ನಲ್ಲಿನ ವಿಸ್ತೃತ ವರದಿಗಳಲ್ಲಿ ವೀಕ್ಷಿಸಬಹುದು. ವಿವರವಾದ ಮತ್ತು ಅಪ್‌ಡೇಟ್ ಮಾಡಿದ ಆದಾಯ ಮಾಹಿತಿಗಾಗಿ, ನಿಮ್ಮ ವ್ಯಾಪಾರದ ವಸ್ತುವಿನ ಪ್ಲ್ಯಾಟ್‌ಫಾರ್ಮ್ ಅಥವಾ ರಿಟೇಲರ್‌ ವೆಬ್‌ಸೈಟ್‌ಗೆ ಹೋಗಿ. ನೆನಪಿಡಿ, ವ್ಯಾಪಾರದ ವಸ್ತುಗಳ ಮತ್ತು ಉತ್ಪನ್ನಗಳ ಮಾರಾಟದ ಎಲ್ಲಾ ಪಾವತಿಗಳನ್ನು ನಿಮ್ಮ ವ್ಯಾಪಾರದ ವಸ್ತುಗಳ ರಿಟೇಲರ್ ಅಥವಾ ಪ್ಲ್ಯಾಟ್‌ಫಾರ್ಮ್ ಮೂಲಕ ಮಾಡಲಾಗುತ್ತದೆ. YouTube ಮತ್ತು AdSense ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದಿಲ್ಲ.

ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳು

ನಿಮ್ಮ ಟ್ಯಾಗ್ ಮಾಡಲಾದ ಉತ್ಪನ್ನಗಳೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಅಳೆಯಲು ಮತ್ತು ಉತ್ಪನ್ನ ಪುಟಗಳಿಂದ ನಿಮಗೆ ಎಷ್ಟು ಟ್ರಾಫಿಕ್ ಬಂದಿದೆ ಎಂಬುದನ್ನು ಕಂಡುಹಿಡಿಯಲು ನೀವು YouTube Analytics ನಲ್ಲಿನ ವಿಸ್ತೃತ ವರದಿಗಳನ್ನು ಬಳಸಬಹುದು.

ನೀತಿಗಳು

ಕನೆಕ್ಟ್ ಆಗಿರುವ ನಿಮ್ಮ ಸ್ಟೋರ್‌ಗಳ ಉತ್ಪನ್ನಗಳು

ನಿಮ್ಮ ಅಧಿಕೃತ ವ್ಯಾಪಾರದ ವಸ್ತುಗಳ ರಿಟೇಲರ್ ಅಥವಾ ಪ್ಲ್ಯಾಟ್‌ಫಾರ್ಮ್ (Google ಅಲ್ಲ), ವ್ಯಾಪಾರದ ವಸ್ತುವಿನ ಮಾರಾಟಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಒಳಗೊಂಡ, ಆದರೆ ಇವುಗಳಿಗೆ ಸೀಮಿತವಾಗಿರದ ಎಲ್ಲಾ ಅಂಶಗಳಿಗೆ ಜವಾಬ್ದಾರರಾಗಿರುತ್ತಾರೆ:

  • ವ್ಯಾಪಾರದ ಸರಕು ಮಾರಾಟ
  • ಸರಕುಗಳ ಸಂಗ್ರಹಣೆ
  • ಆರ್ಡರ್ ಪೂರೈಕೆ
  • ಮರುಪಾವತಿಗಳು
  • ಗ್ರಾಹಕರ ಸೇವೆ
  • ಇನ್ವೆಂಟರಿ ನಿರ್ವಹಣೆ
  • ರಚನೆಕಾರರು ಅಥವಾ ಕಲಾವಿದರ ಪಾವತಿ

ರಿಟೇಲರ್‌ಗಳು ಅಥವಾ ಪ್ಲ್ಯಾಟ್‌ಫಾರ್ಮ್‌ಗಳು ಮತ್ತು Google ನಡುವೆ ಡೇಟಾ ಹಂಚಿಕೆ

ಉತ್ಪನ್ನ ಸುಧಾರಣೆಗಳಿಗಾಗಿ ಮತ್ತು ನಿಮಗೆ ಸಂಬಂಧಿತ ಅನಾಲಿಟಿಕ್ಸ್ ಅನ್ನು ನೀಡುವುದಕ್ಕಾಗಿ, ವ್ಯಾಪಾರದ ಸರಕು ಮಾರಾಟ ಮತ್ತು ಭೇಟಿಗಳ ಡೇಟಾವನ್ನು ರಿಟೇಲರ್‌ಗಳು ಮತ್ತು Google ನಡುವೆ ಹಂಚಿಕೊಳ್ಳಲಾಗುತ್ತದೆ. ಉದಾಹರಣೆಗೆ, ನಿಮ್ಮ ರಿಟೇಲರ್‌ಗಳಿಂದ ನಮಗೆ ಸಿಗುವ ವ್ಯಾಪಾರದ ಸರಕಿನ ಒಟ್ಟು ಮಾಸಿಕ ಮಾರಾಟದ ಡೇಟಾವನ್ನು ನಾವು ನಿಮ್ಮ YouTube Studio ದಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಚಾನಲ್‌ನಲ್ಲಿ ಮಾರಾಟವನ್ನು ಹೆಚ್ಚಿಸಲು ಹೊಸ ಫೀಚರ್‌ಗಳು ಸಹಾಯ ಮಾಡುತ್ತವೆಯೇ ಎಂಬುದನ್ನು ಮೌಲ್ಯಮಾಪನ ಮಾಡಲು ನಾವು ಈ ಡೇಟಾವನ್ನು ಬಳಸಬಹುದು. ರಿಟೇಲರ್‌ಗಳು ತಮ್ಮ ಅನಾಲಿಟಿಕ್ಸ್‌ಗಾಗಿ YouTube Shopping ಫೀಚರ್‌ಗಳಿಂದ ಬರುವ ಟ್ರಾಫಿಕ್‌ಗೆ ಸಂಬಂಧಿಸಿದ ಡೇಟಾವನ್ನು ಪಡೆಯುತ್ತಾರೆ.

ನಿಮ್ಮ ರಿಟೇಲರ್‌ಗಳು Shopping ಡೇಟಾ ನಿರ್ವಹಿಸುವುದನ್ನು ಮತ್ತು ಬಳಸುವುದನ್ನು ಅವರ ಗೌಪ್ಯತೆ ನೀತಿ ಸೇರಿದಂತೆ ಅವರ ಸ್ವಂತ ನಿಯಮಗಳು ಮತ್ತು ನಿಬಂಧನೆಗಳಿಂದ ನಿಯಂತ್ರಿಸಲಾಗುತ್ತದೆ. Google ಅಂತಹ Shopping ಡೇಟಾ ನಿರ್ವಹಿಸುವುದನ್ನು ಮತ್ತು ಬಳಸುವುದನ್ನು ನಮ್ಮ ಗೌಪ್ಯತಾ ನೀತಿಯಿಂದ ನಿಯಂತ್ರಿಸಲಾಗುತ್ತದೆ. ನೀವು ಈ ನೀತಿಗಳನ್ನು ಓದಿ ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳು

ನೀವು ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಫೀಚರ್ ಮಾಡಿದಾಗ, ರಿಟೇಲರ್‌ ವೆಬ್‌ಸೈಟ್‌ನಲ್ಲಿನ ಯಾವುದೇ ವಹಿವಾಟುಗಳು ಮತ್ತು ಚಟುವಟಿಕೆಗಳನ್ನು, ರಿಟೇಲರ್‌ಗಳ ಗೌಪ್ಯತೆ ನೀತಿಗಳು ಸೇರಿದಂತೆ ಅವರ ನಿಯಮಗಳು ಮತ್ತು ನಿಬಂಧನೆಗಳಿಂದ ನಿಯಂತ್ರಿಸಲಾಗುತ್ತದೆ. ರಿಟೇಲರ್‌ಗಳು ಬೆಲೆ ಮತ್ತು ಅನ್ವಯವಾಗುವ ಶುಲ್ಕಗಳು ಮತ್ತು ತೆರಿಗೆಗಳನ್ನು ಲೆಕ್ಕಾಚಾರ ಮಾಡುತ್ತಾರೆ. ರಿಟೇಲರ್ ಸಂಪೂರ್ಣ ಆರ್ಡರ್ ಅನ್ನು ನಿರ್ವಹಿಸುತ್ತಾರೆ, ಇದರಲ್ಲಿ ಈ ಕೆಳಗಿನವುಗಳು ಸೇರಿರುತ್ತವೆ:

  • ಆರ್ಡರ್ ಅನ್ನು ಪೂರೈಸುವುದು
  • ಶಿಪ್ಪಿಂಗ್
  • ಪಾವತಿ
  • ಬೆಂಬಲ (ರಿಟರ್ನ್‍ಗಳು ಮತ್ತು ಮರುಪಾವತಿಗಳು ಸೇರಿದಂತೆ)

ರಿಟರ್ನ್‍ಗಳು ಮತ್ತು ಮರುಪಾವತಿಗಳು ಸೇರಿದಂತೆ ಆರ್ಡರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಅಥವಾ ಪ್ರಶ್ನೆಗಳಿಗಾಗಿ, ವೀಕ್ಷಕರು ರಿಟೇಲರ್‌ಗಳನ್ನು ಸಂಪರ್ಕಿಸಬಹುದು.

ಚಾನಲ್‌ನ ಪ್ರತ್ಯೇಕ ಉತ್ಪನ್ನ ಪಟ್ಟಿಗಳು

ಅರ್ಹ ವ್ಯಾಪಾರಿಗಳು ತಮ್ಮ Google Merchant Center ಖಾತೆಗಳ ಒಳಗೆ ಅಥವಾ Cafe24 ಪ್ಲ್ಯಾಟ್‌ಫಾರ್ಮ್‌ನಲ್ಲಿ ಮೀಸಲಾದ ಪ್ರಕ್ರಿಯೆಯ ಚೌಕಟ್ಟಿನಲ್ಲಿ ನಿರ್ದಿಷ್ಟ YouTube ಚಾನಲ್‌ಗಳೊಂದಿಗೆ ಉತ್ಪನ್ನ ಪಟ್ಟಿಗಳನ್ನು ಪ್ರತ್ಯೇಕವಾಗಿ ಹಂಚಿಕೊಳ್ಳಬಹುದು. ನಿರ್ದಿಷ್ಟ ಉತ್ಪನ್ನ ಪಟ್ಟಿಯು ಯಾವ ಚಾನಲ್‌ಗಳ ಹ್ಯಾಂಡಲ್‌ಗೆ ಪ್ರತ್ಯೇಕವಾಗಿರಬೇಕೆಂದು ತಮ್ಮ ಪಟ್ಟಿಯ ಫೀಡ್‌ಗಳ ಭಾಗವಾಗಿ ಸೂಚಿಸುವ ಮೂಲಕ ವ್ಯಾಪಾರಿಗಳು ಇದನ್ನು ಮಾಡಬಹುದು. ಈ ಫೀಚರ್ ಅನ್ನು ಬಳಸುವ ಮೂಲಕ, ಆ ಉತ್ಪನ್ನಗಳು ಅಥವಾ ಉತ್ಪನ್ನ ಪ್ರಚಾರಗಳು ನಿರ್ದಿಷ್ಟ YouTube ಚಾನಲ್‌ಗೆ ಪ್ರತ್ಯೇಕವಾಗಿರುತ್ತವೆ ಮತ್ತು ಇತರ ಮಾರಾಟ ಚಾನಲ್‌ಗಳಲ್ಲಿ ಅಥವಾ ಇತರ YouTube ರಚನೆಕಾರರಿಗೆ ಲಭ್ಯವಿಲ್ಲ ಎಂದು ವ್ಯಾಪಾರಿಗಳು ಖಚಿತಪಡಿಸುತ್ತಾರೆ. ಈ ಪಟ್ಟಿಗಳನ್ನು ಪಟ್ಟಿಯ ಅವಧಿಯವರೆಗೆ ಆ ಚಾನಲ್‌ಗೆ ಪ್ರತ್ಯೇಕವಾಗಿವೆ ಎಂದು ಗುರುತಿಸಲಾಗುತ್ತದೆ ಮತ್ತು ಅವುಗಳು ರಿಯಾಯಿತಿ ಮತ್ತು/ಅಥವಾ ಸಮಯದ ಮಿತಿಯನ್ನು ಹೊಂದಿದ್ದರೆ, ಅದನ್ನು ವೀಕ್ಷಕರಿಗೆ ಹೈಲೈಟ್ ಮಾಡಲಾಗುತ್ತದೆ. ಪ್ರತ್ಯೇಕವಾದ ಪಟ್ಟಿಗಳು ವ್ಯಾಪಾರಿಯ ಗೌಪ್ಯತೆ ನೀತಿಗಳು ಸೇರಿದಂತೆ ಅವರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ಅಂತಿಮ ಬೆಲೆ ಮತ್ತು ಖರೀದಿಯ ಷರತ್ತುಗಳನ್ನು ವ್ಯಾಪಾರಿ ನಿರ್ಧರಿಸುತ್ತಾರೆ ಮತ್ತು ಅದಕ್ಕೆ ಜವಾಬ್ದಾರರಾಗಿರುತ್ತಾರೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7555832059604658346
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false