YouTube ನಲ್ಲಿ ಪಾವತಿ ಪಡೆಯಲು YouTube ಗಾಗಿ AdSense ಖಾತೆಯನ್ನು ಸೆಟ್‌ಅಪ್ ಮಾಡಿ

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ, ನಾವು ರಷ್ಯಾದಲ್ಲಿ ನೆಲೆಸಿರುವ ಬಳಕೆದಾರರಿಗೆ Google ಮತ್ತು YouTube ಜಾಹೀರಾತುಗಳನ್ನು ಸರ್ವ್ ಮಾಡುವುದನ್ನು ತಾತ್ಕಾಲಿಕವಾಗಿ ವಿರಾಮಗೊಳಿಸುತ್ತಿದ್ದೇವೆ. ಇನ್ನಷ್ಟು ತಿಳಿಯಿರಿ.

ನೀವು YouTube ನಲ್ಲಿ ಹಣ ಸಂಪಾದಿಸುತ್ತಿದ್ದರೆ, ಹಣ ಗಳಿಸಲು ಮತ್ತು ಪಾವತಿ ಪಡೆಯಲು, ಅನುಮೋದಿತ YouTube ಗಾಗಿ AdSense ಖಾತೆಯನ್ನು ನೀವು ಸಂಯೋಜಿಸಬೇಕು.

ಪ್ರಮುಖ ಸೂಚನೆಅನ್ವಯಿಸುವ ಹಾಗೆ, AdSense ನ ನಿಯಮಗಳು ಮತ್ತು ನಿಬಂಧನೆಗಳು ಅಥವಾ YouTube ಗಾಗಿ AdSense ನ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ, ಹಣ ಪಡೆಯುವವರ ಹೆಸರಿನಲ್ಲಿ ನೀವು ಒಂದು AdSense ಅಥವಾ YouTube ಗಾಗಿ AdSense ಖಾತೆಯನ್ನು ಮಾತ್ರ ಹೊಂದಿರಬಹುದು. ನಕಲಿ ಖಾತೆಗಳನ್ನು ಅನುಮೋದಿಸಲಾಗುವುದಿಲ್ಲ ಮತ್ತು ಸಂಬಂಧಿತ YouTube ಚಾನಲ್‌ನಲ್ಲಿ ಮಾನಿಟೈಸೇಶನ್ ಅನ್ನು ಆಫ್ ಮಾಡಲಾಗುತ್ತದೆ. ಹೊಸ YouTube ಗಾಗಿ AdSense ಖಾತೆಯನ್ನು ಪ್ರಾರಂಭಿಸುವಾಗ, YouTube Studio ಮೂಲಕ ಮಾತ್ರ ಖಾತೆಯನ್ನು ರಚಿಸಿ. ಬೇರೊಂದು ಸೈಟ್‌ನಲ್ಲಿ ರಚಿಸಿದರೆ (ಅಂದರೆ, AdSense ಹೋಮ್ ಪೇಜ್‍ನಲ್ಲಿ) ಪ್ರಯೋಜನವಿಲ್ಲ.

YouTube ಗಾಗಿ AdSense ಖಾತೆಯನ್ನು ರಚಿಸಿ ಮತ್ತು ಲಿಂಕ್ ಮಾಡಿ

ನಿಮ್ಮ ಚಾನಲ್‍ಗೆ ಲಿಂಕ್ ಮಾಡಿರುವ YouTube ಗಾಗಿ AdSense ಖಾತೆಯ ಮೂಲಕ ನೀವು YouTube ನಲ್ಲಿ ಹಣ ಪಡೆಯುವಿರಿ. ನೀವು ಈಗಾಗಲೇ YouTube ಪಾಲುದಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ, ನಿಮಗೆ ಅಗತ್ಯವಿದ್ದರೆ, ಲಿಂಕ್ ಮಾಡಲಾದ ನಿಮ್ಮ YouTube ಗಾಗಿ AdSense ಖಾತೆಯನ್ನು ನೀವು ಬದಲಾಯಿಸಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ನೀವು ಒಂದೇ YouTube ಗಾಗಿ AdSense ಖಾತೆಯನ್ನು ಬಳಸಿಕೊಂಡು ಒಂದಕ್ಕಿಂತ ಹೆಚ್ಚು YouTube ಚಾನಲ್‌ಗಳಲ್ಲಿ ಮಾನಿಟೈಸ್ ಮಾಡಬಹುದು.

ನೀವು ಲಿಂಕ್ ಮಾಡಿರುವ ನಿಮ್ಮ YouTube ಗಾಗಿ AdSense ಖಾತೆಯನ್ನು ಪ್ರತಿ 32 ದಿನಗಳಲ್ಲಿ ಒಮ್ಮೆ ಮಾತ್ರ ಬದಲಾಯಿಸಬಹುದು ಎಂಬುದನ್ನು ನೆನಪಿಡಿ.

 YouTube ರಚನೆಕಾರರಿಗಾಗಿ AdSense

 

ನೀವು ಹೊಸ YouTube ಗಾಗಿ AdSense ಖಾತೆಯನ್ನು ರಚಿಸಬಹುದು ಮತ್ತು ಅದನ್ನು ನಿಮ್ಮ ಚಾನಲ್‌ಗೆ ಲಿಂಕ್ ಮಾಡಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಗಳಿಕೆ ಟ್ಯಾಬ್ ಆಯ್ಕೆ ಮಾಡಿ.
  3. YouTube ಗಾಗಿ AdSense ಗೆ ಸೈನ್ ಅಪ್ ಮಾಡಿ ಕಾರ್ಡ್‌ನಲ್ಲಿ ಪ್ರಾರಂಭಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ನಿಮ್ಮನ್ನು ಕೇಳಿದರೆ, ಅಗತ್ಯವಿದ್ದಾಗ ನಿಮ್ಮ YouTube ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಿ ಹಾಗೂ ಮರು ದೃಢೀಕರಿಸಿ.
  5. YouTube ಗಾಗಿ AdSense ಗೆ ನೀವು ಯಾವ ಖಾತೆಯನ್ನು ಬಳಸಲು ಬಯಸುವಿರಿ ಎಂಬುದನ್ನು ಆರಿಸಿ.
    • ಗಮನಿಸಿ: ನೀವು ಬೇರೆ ಕಾರಣಗಳಿಗಾಗಿ YouTube ನಿಂದ ಹೊರಗೆ ಈಗಾಗಲೇ AdSense ಅನ್ನು ಬಳಸುತ್ತಿದ್ದರೆ, ಅಸ್ತಿತ್ವದಲ್ಲಿರುವ ನಿಮ್ಮ AdSense ಖಾತೆಯ ಜೊತೆಗೆ ಬಳಸಿದ Google ಖಾತೆಯ ಮೂಲಕ ಸೈನ್ ಇನ್ ಮಾಡಿ.
  6. ಇದೀಗ ನೀವು YouTube ಗಾಗಿ AdSense ನಲ್ಲಿ ಇದ್ದೀರಿ. ಇಲ್ಲಿಗೆ ಬಂದ ಬಳಿಕ, ಪುಟದ ಮೇಲ್ಭಾಗದಲ್ಲಿ ಇಮೇಲ್ ವಿಳಾಸವು ಸರಿಯಾಗಿದೆಯೇ ಎಂಬುದನ್ನು ದೃಢೀಕರಿಸಿ. ಇದು ತಪ್ಪು ಖಾತೆಯಾಗಿದ್ದರೆ, ಖಾತೆಗಳನ್ನು ಬದಲಿಸಲು ಬೇರೊಂದು ಖಾತೆಯನ್ನು ಬಳಸಿ ಕ್ಲಿಕ್ ಮಾಡಿ.
  7. ನಿಮ್ಮ ಖಾತೆಯ ಸೆಟ್‌ಅಪ್ ಪ್ರಕ್ರಿಯೆಯನ್ನು ಮುಂದುವರಿಸಿ. ನಿಮ್ಮ ಸಂಪರ್ಕ ಮಾಹಿತಿಯನ್ನು ಒದಗಿಸಿ ಮತ್ತು ನಿಮ್ಮ YouTube ಗಾಗಿ AdSense ಖಾತೆಯ ಅರ್ಜಿಯನ್ನು ಸಲ್ಲಿಸಿ.

ಈ ಮೇಲಿನ ಹಂತಗಳನ್ನು ಅನುಸರಿಸಿದ ಬಳಿಕ, ನಿಮ್ಮನ್ನು ಮರಳಿ YouTube Studio ಗೆ ಕರೆದೊಯ್ಯಲಾಗುವುದು, ಅಲ್ಲಿ ನಿಮ್ಮ YouT u be ಗಾಗಿ AdSense ಖಾತೆಯ ಅರ್ಜಿಯ ಸ್ವೀಕೃತಿಯನ್ನು ದೃಢೀಕರಿಸುವ ಸಂದೇಶವೊಂದು ನಿಮಗೆ ಕಾಣಿಸುತ್ತದೆ. ನಿಮ್ಮ ಖಾತೆಯನ್ನು ಅನುಮೋದಿಸಿದ ಬಳಿಕ ನಾವು ಇಮೇಲ್ ಮೂಲಕ ನಿಮಗೆ ಮಾಹಿತಿ ನೀಡುತ್ತದೆ, ಇದಕ್ಕೆ ಕೆಲವು ದಿನಗಳು ಬೇಕಾಗಬಹುದು. ಅನುಮೋದಿಸಿದ ಬಳಿಕ, YouTube Studio ದಲ್ಲಿ YouTube ಗಾಗಿ AdSense ಗೆ ಸೈನ್‌ಅಪ್ ಮಾಡಿ ಕಾರ್ಡ್‌ನಲ್ಲಿ, ನಿಮ್ಮ YouTube ಗಾಗಿ AdSense ಖಾತೆಯನ್ನು ಅನುಮೋದಿಸಲಾಗಿದೆ ಮತ್ತು ಅದು ಸಕ್ರಿಯವಾಗಿದೆ ಎಂಬ ದೃಢೀಕರಣ ಕಾಣಿಸುತ್ತದೆ.

ಬಹು-ಚಾನಲ್ ನೆಟ್‌ವರ್ಕ್‌ಗಳು (MCN): ನೀವು MCN ಜೊತೆಗೆ ಪಾಲುದಾರಿಕೆಯನ್ನು ಹೊಂದಿರುವ ಅಫಿಲಿಯೇಟ್ ಚಾನಲ್ ಆಗಿದ್ದರೆ, ನಿಮ್ಮ ಸ್ವಂತದ YouTube ಗಾಗಿ AdSense ಖಾತೆಯನ್ನು ನಿಮ್ಮ ಚಾನಲ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಅನ್ವಯವಾಗುವ ಹಾಗೆ, ಥರ್ಡ್ ಪಾರ್ಟಿಯ YouTube ಗಾಗಿ AdSense ಖಾತೆಯನ್ನು ಅವರ ಅನುಮತಿಯೊಂದಿಗೆ ಆ್ಯಕ್ಸೆಸ್ ಮಾಡುವುದೂ ಸಹ AdSense ಸೇವಾ ನಿಯಮಗಳು ಅಥವಾ YouTube ಗಾಗಿ AdSense ಸೇವಾ ನಿಯಮಗಳ  ಉಲ್ಲಂಘನೆಯಾಗಿದೆ.

ನನ್ನ ಬಳಿ AdSense ಅಥವಾ YouTube ಗಾಗಿ AdSense ಖಾತೆ ಈಗಾಗಲೇ ಇದೆಯೇ ಎಂಬುದು ನನಗೆ ತಿಳಿದಿಲ್ಲ

ನಿಮ್ಮ ಇನ್‌ಬಾಕ್ಸ್‌ಗಳಲ್ಲಿ "adsense-noreply@google.com" ನಿಂದ ಇಮೇಲ್‌ಗಳು ಬಂದಿವೆಯೇ ಎಂದು ನೋಡಿ.
ಅನ್ವಯಿಸುವ ಹಾಗೆ, AdSense ನ ನಿಯಮಗಳು ಮತ್ತು ನಿಬಂಧನೆಗಳು ಅಥವಾ YouTube ಗಾಗಿ AdSense ನ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ, ಹಣ ಪಡೆಯುವವರ ಹೆಸರಿನಲ್ಲಿ ನೀವು ಒಂದು AdSense ಅಥವಾ YouTube ಗಾಗಿ AdSense ಖಾತೆಯನ್ನು ಮಾತ್ರ ಹೊಂದಿರಬಹುದು. ನೀವು ನಕಲಿ ಖಾತೆಯನ್ನು ಹೊಂದಿದ್ದೀರಿ ಎಂಬುದು ಗಮನಕ್ಕೆ ಬಂದರೆ, ನಿಮ್ಮ YouTube ಗಾಗಿ AdSense ಖಾತೆಯನ್ನು ನಿರಾಕರಿಸಲಾಗುತ್ತದೆ ಮತ್ತು ಇತರ ಸಂಬಂಧಿತ ಖಾತೆಗಳನ್ನು ಮುಚ್ಚುವಂತೆ ನಿಮ್ಮನ್ನು ಕೇಳಲಾಗುತ್ತದೆ.
ನನ್ನ ಬಳಿ ಈಗಾಗಲೇ ಅನುಮೋದಿತ AdSense ಅಥವಾ YouTube ಗಾಗಿ AdSense ಖಾತೆಯಿದೆ
  1. ನಿಮ್ಮ YouTube ಖಾತೆಗೆ ಸೈನ್ ಇನ್ ಮಾಡಿ ಮತ್ತು https://studio.youtube.com/channel/UC/monetization ಗೆ ಹೋಗಿ
  2. “YouTube ಗಾಗಿ AdSense ಗೆ ಸೈನ್ ಅಪ್ ಮಾಡಿ” ಕಾರ್ಡ್‌ನಲ್ಲಿ ಪ್ರಾರಂಭಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ನಿಮ್ಮ YouTube ಖಾತೆಯ ಪಾಸ್‌ವರ್ಡ್ ಅನ್ನು ನೀವು ನಮೂದಿಸಬೇಕು ಮತ್ತು ಮರು ದೃಢೀಕರಿಸಬೇಕು. ನಿಮ್ಮ YouTube ಖಾತೆಯನ್ನು ಮರು ದೃಢೀಕರಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
  4. YouTube ಗಾಗಿ AdSense ಗೆ ಸೈನ್ ಇನ್ ಮಾಡಲು ನೀವು ಯಾವ Google ಖಾತೆಯನ್ನು ಬಳಸಲು ಬಯಸುವಿರಿ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಬಳಿ ಈಗಾಗಲೇ AdSense ಅಥವಾ YouTube ಗಾಗಿ AdSense ಖಾತೆಯಿದ್ದರೆ, ಅಸ್ತಿತ್ವದಲ್ಲಿರುವ ನಿಮ್ಮ ಖಾತೆಯನ್ನು ಆ್ಯಕ್ಸೆಸ್ ಮಾಡಲು ನೀವು ಬಳಸುವ Google ಖಾತೆಯ ಮೂಲಕ ನೀವು ಸೈನ್ ಇನ್ ಮಾಡಬೇಕು. ಈ ಖಾತೆಯು ನೀವು YouTube ಗೆ ಸೈನ್ ಇನ್ ಮಾಡಲು ಬಳಸುವ ಸೈನ್ ಇನ್ ರುಜುವಾತುಗಳಿಗಿಂತ ಭಿನ್ನವಾಗಿರಬಹುದು.
  5. ನಿಮ್ಮನ್ನು YouTube ಗಾಗಿ AdSense ಸೈನ್‌ ಅಪ್‌ ಪುಟಕ್ಕೆ ನಿರ್ದೇಶಿಸಲಾಗುತ್ತದೆ. ಪುಟದ ಮೇಲ್ಭಾಗದಲ್ಲಿ ಇಮೇಲ್ ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ನಿಮಗೆ ತೋರಿಸುತ್ತಿರುವ ಖಾತೆಯು ತಪ್ಪಾಗಿದ್ದರೆ, ಖಾತೆಗಳನ್ನು ಬದಲಾಯಿಸಲು "ಬೇರೆ ಖಾತೆಯನ್ನು ಬಳಸಿ" ಕ್ಲಿಕ್ ಮಾಡಿ.
  6. ಅಸೋಸಿಯೇಷನ್ ಸ್ವೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.
  7. ನಿಮ್ಮನ್ನು YouTube Studio ನಲ್ಲಿರುವ ಗಳಿಕೆ ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ.
  8. ನಿಮ್ಮ YouTube ಗಾಗಿ AdSense ಖಾತೆಯನ್ನು ನೀವು ಕನೆಕ್ಟ್ ಮಾಡಿದ ಬಳಿಕ, ನಾವು ಈ ಹಂತವನ್ನು “YouTube ಗಾಗಿ AdSense ಗೆ ಸೈನ್ ಅಪ್ ಮಾಡಿ” ಕಾರ್ಡ್‌ನಲ್ಲಿ ಹಸುರು ಬಣ್ಣದ “ಮುಗಿದಿದೆ” ಚಿಹ್ನೆಯೊಂದಿಗೆ ಗುರುತಿಸುತ್ತೇವೆ.

ಕಂಟೆಂಟ್ ಮ್ಯಾನೇಜರ್ ಖಾತೆಯನ್ನು ಬಳಸಿಕೊಂಡು, YouTube ಗಾಗಿ AdSense ಅನ್ನು ಸೆಟ್‌ಅಪ್ ಮಾಡಿ

ಕಂಟೆಂಟ್ ಮ್ಯಾನೇಜರ್ ಖಾತೆಯನ್ನು ನಿರ್ವಹಿಸಲು ನಿಮಗೆ ಹಕ್ಕುಗಳನ್ನು ನೀಡಲಾಗಿದ್ದರೆ, ಅದಕ್ಕೆ ನೀವು YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಬಹುದು.
  1. ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆ ಗೆ ಸೈನ್ ಇನ್ ಮಾಡಿ.
  2. ಸೆಟ್ಟಿಂಗ್‌ಗಳಿಗೆ ಹೋಗಿ.
  3. ಸಮಗ್ರ ನೋಟ ವಿಭಾಗದ ಅಡಿಯಲ್ಲಿ, ನಿಮಗೆ YouTube ಗಾಗಿ AdSense ಕಾಣಿಸುತ್ತದೆ (ಅದನ್ನು ನೋಡಲು ನೀವು ಸ್ಕ್ರಾಲ್ ಮಾಡಬೇಕಾಗಬಹುದು).
  4. ಎಡಿಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  5. YouTube ಗಾಗಿ AdSense ಗೆ ಮುಂದುವರಿಯಿರಿ ಕ್ಲಿಕ್ ಮಾಡಿ.
  6. ನಿಮ್ಮ YouTube ಖಾತೆಯ ಪಾಸ್‌ವರ್ಡ್ ಅನ್ನು ನೀವು ನಮೂದಿಸಬೇಕು ಮತ್ತು ಮರು ದೃಢೀಕರಿಸಬೇಕು. ನಿಮ್ಮ YouTube ಖಾತೆಯನ್ನು ಮರು ದೃಢೀಕರಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
  7. YouTube ಗಾಗಿ AdSense ಗೆ ಸೈನ್ ಇನ್ ಮಾಡಲು ನೀವು ಯಾವ Google ಖಾತೆಯನ್ನು ಬಳಸಲು ಬಯಸುವಿರಿ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಬಳಿ ಈಗಾಗಲೇ AdSense ಅಥವಾ YouTube ಗಾಗಿ AdSense ಖಾತೆಯಿದ್ದರೆ, ಅಸ್ತಿತ್ವದಲ್ಲಿರುವ ನಿಮ್ಮ ಖಾತೆಯನ್ನು ಆ್ಯಕ್ಸೆಸ್ ಮಾಡಲು ನೀವು ಬಳಸುವ Google ಖಾತೆಯ ಮೂಲಕ ನೀವು ಸೈನ್ ಇನ್ ಮಾಡಬೇಕು.
  8. ಕೇಳಿದಾಗ, ನಿಮ್ಮ YouTube ಗಾಗಿ AdSense ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಿ. ಈ ಮಾಹಿತಿಯು ನೀವು YouTube ಗೆ ಸೈನ್ ಇನ್ ಮಾಡಲು ಬಳಸುವ ರುಜುವಾತುಗಳಿಗಿಂತ ಭಿನ್ನವಾಗಿರಬಹುದು.
  9. ನೀವು YouTube ಗಾಗಿ AdSense ಖಾತೆಗೆ ಲಿಂಕ್ ಮಾಡುತ್ತಿರುವ YouTube ಚಾನಲ್ ಅನ್ನು ಖಚಿತಪಡಿಸಿ ಮತ್ತು ಆ ಚಾನಲ್‌ಗಾಗಿ ಪ್ರಾಥಮಿಕ ಭಾಷೆಯನ್ನು ಆಯ್ಕೆ ಮಾಡಿ. ನೀವು YouTube ಗಾಗಿ AdSense ಅಸೋಸಿಯೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಂದು YouTube ಚಾನಲ್ ಅನ್ನು ಆಯ್ಕೆ ಮಾಡಿದರೂ ಸಹ, ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಆಗಿರುವ ಎಲ್ಲಾ ಚಾನಲ್‌ಗಳಲ್ಲಿ YouTube ಆ್ಯಡ್‌ಗಳನ್ನು ಒದಗಿಸುತ್ತದೆ.
  10. ಅಸೋಸಿಯೇಷನ್ ಸ್ವೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಕೇಳಿದರೆ, ನಿಮ್ಮ ಬಿಲ್ಲಿಂಗ್ ಮಾಹಿತಿಯನ್ನು ಒದಗಿಸಿ.
ನೀವು ಈ ಪ್ರಕ್ರಿಯೆಯನ್ನು ಮುಗಿಸಿದ ಬಳಿಕ, ನಿಮ್ಮನ್ನು YouTube ಗೆ ಮರುನಿರ್ದೇಶಿಸಲಾಗುತ್ತದೆ. AdSense ನ ಅರ್ಜಿ ಪರಿಶೀಲನೆ ನಿರೀಕ್ಷಣೆ ಸಮಯದ ಕುರಿತು ಇನ್ನಷ್ಟು ತಿಳಿಯಿರಿ.

ಸಾಮಾನ್ಯ ಸಮಸ್ಯೆಗಳು

ನಿಮ್ಮ ಚಾನಲ್‌ಗೆ YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಲು ಪ್ರಯತ್ನಿಸುವಾಗ ಎದುರಾಗಬಹುದಾದ ಸಾಮಾನ್ಯ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಲು ಕೆಳಗಿನ ಮಾಹಿತಿಯನ್ನು ಬಳಸಿ.

ನಾನು ಹೊಸ YouTube ಗಾಗಿ AdSense ಖಾತೆಯನ್ನು ರಚಿಸಿದ್ದೇನೆ, ಆದರೆ ನನ್ನ ಬಳಿ ಅಸ್ತಿತ್ವದಲ್ಲಿರುವ AdSense ಅಥವಾ YouTube ಗಾಗಿ AdSense ಖಾತೆ ಈಗಾಗಲೇ ಇರುವುದರಿಂದ, ಆ ಹೊಸ ಖಾತೆಯನ್ನು ನಿರಾಕರಿಸಲಾಗಿದೆ

ಅನ್ವಯಿಸುವ ಹಾಗೆ, AdSense ನ ನಿಯಮಗಳು ಮತ್ತು ನಿಬಂಧನೆಗಳು ಅಥವಾ YouTube ಗಾಗಿ AdSense ನ ನಿಯಮಗಳು ಮತ್ತು ನಿಬಂಧನೆಗಳ ಅನುಸಾರ, ಹಣ ಪಡೆಯುವವರ ಹೆಸರಿನಲ್ಲಿ ನೀವು ಒಂದು AdSense ಅಥವಾ YouTube ಗಾಗಿ AdSense ಖಾತೆಯನ್ನು ಮಾತ್ರ ಹೊಂದಿರಬಹುದು. ನೀವು ನಕಲಿ ಖಾತೆಯನ್ನು ಹೊಂದಿರುವುದು ಕಂಡುಬಂದರೆ, ನೀವು ಹೊಸದಾಗಿ ರಚಿಸಿದ YouTube ಗಾಗಿ AdSense ಖಾತೆಯನ್ನು ನಿರಾಕರಿಸಲಾಗುತ್ತದೆ.

ನಿಮ್ಮ ಇಮೇಲ್ ಇನ್‌ಬಾಕ್ಸ್‌ಗಳಲ್ಲಿ, "ನೀವು ಈಗಾಗಲೇ AdSense ಖಾತೆ ಅಥವಾ YouTube ಗಾಗಿ AdSense ಖಾತೆಯನ್ನು ಹೊಂದಿರುವಿರಿ" ಎಂಬ ಸಬ್ಜೆಕ್ಟ್ ಲೈನ್ ಇರುವ ಇಮೇಲ್ ಬಂದಿದೆಯೇ ಎಂಬುದನ್ನು ನೋಡಿ. ಈ ಸಂದೇಶವು, ಅಸ್ತಿತ್ವದಲ್ಲಿರುವ ನಿಮ್ಮ AdSense ಅಥವಾ YouTube ಗಾಗಿ AdSense ಖಾತೆಯ ಕುರಿತು ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಮಾಹಿತಿಯನ್ನು ಬಳಸಿ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಎರಡು ಆಯ್ಕೆಗಳಿರುತ್ತವೆ:

ಅಸ್ತಿತ್ವದಲ್ಲಿರುವ (ಹಳೆಯ) ಖಾತೆಯನ್ನು ಬಳಸಿ

  1. YouTube Studio ಗೆ ಸೈನ್ ಇನ್ ಮಾಡಿ ಮತ್ತು ಅಸೋಸಿಯೇಷನ್ ಬದಲಾಯಿಸಿ ಎಂಬುದನ್ನು ಕ್ಲಿಕ್ ಮಾಡಿ.
  2. ಖಾತೆಯ ಆಯ್ಕೆ ಮೆನುವಿನಲ್ಲಿ, ಅಸ್ತಿತ್ವದಲ್ಲಿರುವ (ಹಳೆಯ) ನಿಮ್ಮ AdSense ಅಥವಾ YouTube ಗಾಗಿ AdSense ಖಾತೆಯನ್ನು ಬಳಸುವ Google ಖಾತೆಯನ್ನು ಆಯ್ಕೆ ಮಾಡಿ.
  3. ಅಸೋಸಿಯೇಷನ್ ಸ್ವೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮನ್ನು YouTube Studio ಗೆ ರೀಡೈರೆಕ್ಟ್ ಮಾಡಲಾಗುತ್ತದೆ, ಇಲ್ಲಿ ನಿಮ್ಮ ಚಾನಲ್‌ಗೆ ಲಿಂಕ್ ಆಗಿರುವ ಖಾತೆ ನಿಮಗೆ ಕಾಣಿಸುತ್ತದೆ.

ನೀವು ಈಗಷ್ಟೇ ರಚಿಸಿರುವ ಹೊಸ ಖಾತೆಯನ್ನು ಬಳಸಿ

ಮೊದಲು, ನೀವು ಅಸ್ತಿತ್ವದಲ್ಲಿರುವ (ಹಳೆಯ) ಖಾತೆಯನ್ನು ಮುಚ್ಚಬೇಕು

  1. ಅನ್ವಯಿಸುವ ಹಾಗೆ, ಅಸ್ತಿತ್ವದಲ್ಲಿರುವ ನಿಮ್ಮ AdSense ಅಥವಾ YouTube ಗಾಗಿ AdSense ಖಾತೆಗೆ ಸೈನ್ ಇನ್ ಮಾಡಿ.
  2. ನಿಮ್ಮ ಖಾತೆಯನ್ನು ಮುಚ್ಚಲು, ಇಲ್ಲಿರುವ ಹಂತಗಳನ್ನು ಅನುಸರಿಸಿ.

ಮುಚ್ಚಿದ ನಂತರ, ನೀವು ಹಳೆಯ ಖಾತೆಯನ್ನು ಮುಚ್ಚಿದ್ದೀರಿ ಎಂದು ಖಚಿತಪಡಿಸಲು ನಿಮ್ಮ ಹೊಸ YouTube ಗಾಗಿ AdSense ಖಾತೆಗೆ ಸೈನ್ ಇನ್ ಮಾಡಿ.

ಗಮನಿಸಿ: ನಿಮ್ಮ ಹೊಸ YouTube ಗಾಗಿ AdSense ಖಾತೆಯನ್ನು ಅನುಮೋದಿಸಲು ಮತ್ತು ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡಲು ಕೆಲವು ದಿನಗಳು ಬೇಕಾಗಬಹುದು.

ವಿಳಾಸ (ಪಿನ್) ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳು

ಚಾನಲ್ ಮಾನಿಟೈಸೇಶನ್ ಅನ್ನು ಕಾಯ್ದುಕೊಳ್ಳಲು ಮತ್ತು ಪಾವತಿಗಳನ್ನು ಸ್ವೀಕರಿಸಲು, YouTube ಗಾಗಿ AdSense ನಲ್ಲಿ ವಿಳಾಸ (ಪಿನ್) ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಗತ್ಯವಿದೆ.

ನೀವು ಹೊಸ YouTube ಗಾಗಿ AdSense ಖಾತೆಯನ್ನು ನಿಮ್ಮ ಚಾನಲ್‌ಗೆ ಲಿಂಕ್ ಮಾಡಿದ್ದರೆ, ನಿಮ್ಮ ಬ್ಯಾಲೆನ್ಸ್‌ನ ಮೊತ್ತವು $10 ಗೆ ತಲುಪಿದ ಬಳಿಕ, ನಿಮ್ಮ ಭೌತಿಕ ವಿಳಾಸಕ್ಕೆ ಒಂದು ಪಿನ್ ದೃಢೀಕರಣ ಕಾರ್ಡ್ ಅನ್ನು ಅಂಚೆಯ ಮೂಲಕ ಕಳುಹಿಸಲಾಗುತ್ತದೆ. ಈ ಪಿನ್ ದೃಢೀಕರಣ ಕಾರ್ಡ್‌ನಲ್ಲಿ ಒಂದು ಪಿನ್ ಕೋಡ್ ಇರಲಿದ್ದು, ನಿಮ್ಮ ವಿಳಾಸವನ್ನು ದೃಢೀಕರಿಸಲು ನಿಮ್ಮ ಖಾತೆಯಲ್ಲಿ ಅದನ್ನು ನಮೂದಿಸಬೇಕಾಗುತ್ತದೆ.

ಅಸ್ತಿತ್ವದಲ್ಲಿರುವ AdSense ಅಥವಾ YouTube ಗಾಗಿ AdSense ಖಾತೆಗೆ ನೀವು ಲಿಂಕ್ ಮಾಡಿದ್ದರೆ, ಅಂಚೆಯಲ್ಲಿ ಪಿನ್ ದೃಢೀಕರಣ ಕಾರ್ಡ್ ಅನ್ನು ಪಡೆಯಲು ನೀವು ಕನಿಷ್ಠ 3 ವಾರಗಳ ಕಾಲ ನಿರೀಕ್ಷಿಸಬೇಕಾಗಬಹುದು. 3 ವಾರಗಳ ನಂತರವೂ ನೀವು ಅದನ್ನು ಸ್ವೀಕರಿಸಿಲ್ಲ ಎಂದಾದರೆ, ನೀವು ಬದಲಿ ಪಿನ್ ದೃಢೀಕರಣ ಕಾರ್ಡ್ ಅನ್ನು ವಿನಂತಿಸಬಹುದು.

YouTube ಗಾಗಿ AdSense ಖಾತೆಯ ದಾಖಲೆಗಳಲ್ಲಿರುವ ವಿಳಾಸವು ನಿಮ್ಮ ಸ್ಥಳೀಯ ಅಂಚೆ ಕಚೇರಿಯು ಗುರುತಿಸಿರುವ ವಿಳಾಸಕ್ಕೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸರಿಯಾದ ವಿಳಾಸವನ್ನು ಹೊಂದಿರುವುದು, ನಿಮ್ಮ ಅಂಚೆಯನ್ನು ತಲುಪಿಸಲು ಸ್ಥಳೀಯ ಅಂಚೆ ಕಚೇರಿಗೆ ಸಹಾಯ ಮಾಡುತ್ತದೆ. ವಿಳಾಸಗಳು ಭಿನ್ನವಾಗಿದ್ದರೆ, ಅವುಗಳನ್ನು ಸರಿಪಡಿಸುವುದಕ್ಕಾಗಿ ನಿಮ್ಮ ಖಾತೆಯಲ್ಲಿರುವ ಪಾವತಿ ವಿಳಾಸವನ್ನು ಬದಲಾಯಿಸಬೇಕಾಗುತ್ತದೆ.

ವಿಳಾಸ (ಪಿನ್) ಪರಿಶೀಲನೆಗೆ ಸಂಬಂಧಿಸಿದಂತೆ ನಿಮಗೆ ಸಹಾಯ ಬೇಕಿದ್ದರೆ. ಈ ಸಹಾಯ ಸಂಪನ್ಮೂಲಗಳ ಮೇಲೆ ಕಣ್ಣಾಡಿಸಿ:

ನಾನು ನನ್ನ ವಿಳಾಸವನ್ನು ದೃಢೀಕರಿಸದಿದ್ದರೆ ಏನಾಗುತ್ತದೆ?

4 ತಿಂಗಳ ಒಳಗಾಗಿ ನಿಮ್ಮ ವಿಳಾಸವನ್ನು ದೃಢೀಕರಿಸದಿದ್ದರೆ, ನಿಮ್ಮ ಚಾನಲ್‌ಗೆ ಸಂಬಂಧಿಸಿದ ಮಾನಿಟೈಸೇಶನ್ ಆಯ್ಕೆಯನ್ನು ವಿರಾಮಗೊಳಿಸಲಾಗುತ್ತದೆ. ಈ ರೀತಿಯ ಫೀಚರ್‌ಗಳಿಗೆ ಆ್ಯಕ್ಸೆಸ್ ಮಾಡುವುದನ್ನು ವಿರಾಮಗೊಳಿಸುವುದು ಸಹ ಇದು ಒಳಗೊಂಡಿರುತ್ತದೆ:

  • ಚಾನಲ್ ಸದಸ್ಯತ್ವಗಳು
  • ಸೂಪರ್ ಚಾಟ್ ಮತ್ತು ಇನ್ನಷ್ಟು

ನೀವು ನಿಮ್ಮ ವಿಳಾಸವನ್ನು ದೃಢೀಕರಿಸಿದ ಬಳಿಕ ನಿಮ್ಮ ಚಾನಲ್‌ನಲ್ಲಿ ಮಾನಿಟೈಸೇಶನ್ ಪುನರಾರಂಭಗೊಳ್ಳುತ್ತದೆ.

ಇತರ ಸಮಸ್ಯೆಗಳು

YouTube Studio ನಲ್ಲಿ, ನನಗೆ “ಓಹೋ, ಏನೋ ತಪ್ಪಾಗಿದೆ” ಎಂಬ ಸಂದೇಶವು ಕಾಣಿಸುತ್ತಿದೆ

YouTube Studio ದಿಂದ ಗುರುತಿಸಲ್ಪಡದ ಇಮೇಲ್‌ಗಳ ಮೂಲಕ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುವಾಗ ಈ ದೋಷ ಸಂದೇಶವು ಗೋಚರಿಸಬಹುದು. ಈ ಸಮಸ್ಯೆಗಳನ್ನು ಬಗೆಹರಿಸಲು, ಕೆಳಗಿನ ಹಂತಗಳನ್ನು ಪ್ರಯತ್ನಿಸಿ:

  • YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡುವಾಗ, ನಿಮ್ಮ ಗುರುತನ್ನು ದೃಢೀಕರಿಸಬೇಕೆಂದು YouTube Studio ನಿಮ್ಮನ್ನು ಕೇಳುತ್ತದೆ. ನೀವು YouTube ಗೆ ಸೈನ್ ಇನ್ ಮಾಡಲು ಬಳಸುವ ಇಮೇಲ್ ವಿಳಾಸವನ್ನು ಬಳಸಿಕೊಂಡು ಈ ಕಾರ್ಯವನ್ನು ಪೂರ್ಣಗೊಳಿಸಲು ಮರೆಯಬೇಡಿ.
  • ಆನಂತರ, YouTube ಗಾಗಿ AdSense ಗೆ ಮುಂದುವರಿಯಲು ಬಳಸುವುದಕ್ಕಾಗಿ, Google ಖಾತೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಈ ಸಂದರ್ಭದಲ್ಲಿ, ನೀವು YouTube Studio ಗೆ ಸೈನ್ ಇನ್ ಮಾಡಲು ಬಳಸುವ ಇಮೇಲ್ ವಿಳಾಸಕ್ಕಿಂತ ಭಿನ್ನವಾದ ಇಮೇಲ್ ವಿಳಾಸವನ್ನು ನೀವು ಆಯ್ಕೆ ಮಾಡಬಹುದು.
  • ನಿಮ್ಮ ಚಾನಲ್ ಬ್ರ್ಯಾಂಡ್ ಖಾತೆಗೆ ಲಿಂಕ್ ಆಗಿದ್ದರೆ, ನಿಮ್ಮ ಚಾನಲ್ ಅನ್ನು ಮೂಲತಃ ರಚಿಸಿದ ಇಮೇಲ್ ವಿಳಾಸವನ್ನು ಬಳಸಿಕೊಂಡು ನೀವು ಸೈನ್ ಇನ್ ಮಾಡಬೇಕು. ಆ ಇಮೇಲ್ ವಿಳಾಸವನ್ನು ಬಳಸಿಕೊಂಡು ಸೈನ್ ಇನ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನಮ್ಮ ಖಾತೆ ರಿಕವರಿ ಹಂತಗಳನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಖಾತೆಯನ್ನು ರಿಕವರ್ ಮಾಡಬಹುದು.

ಸೈನ್ ಅಪ್ ಮಾಡಲು, ವೆಬ್‌ಸೈಟ್ URL ಅನ್ನು ನೀಡುವಂತೆ YouTube ಗಾಗಿ AdSense ನನ್ನನ್ನು ಕೇಳುತ್ತಿದೆ

ನಿಮ್ಮ YouTube ಚಾನಲ್‌ಗೆ ಹೊಸ AdSense ಖಾತೆಯನ್ನು ಲಿಂಕ್ ಮಾಡುವಾಗ, ಈ ಉದ್ದೇಶಕ್ಕಾಗಿ google.com/adsense ಅಥವಾ adsense.com ಎಂಬಲ್ಲಿಗೆ ಹೋಗಿ ರಚಿಸಬೇಡಿ. ಹಾಗೆ ಮಾಡಿದರೆ, ನಿಮ್ಮ ಖಾತೆಯನ್ನು ಅನುಮೋದಿಸಲಾಗುವುದಿಲ್ಲ ಮತ್ತು ನಿಮ್ಮ ಚಾನಲ್‌ನ ಮಾನಿಟೈಸೇಶನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅದರ ಬದಲಿಗೆ, YouTube Studio ದಿಂದಲೇ ನೇರವಾಗಿ YouTube ಗಾಗಿ AdSense ಖಾತೆಯನ್ನು ರಚಿಸಿ.

ಇತರ ಸಮಸ್ಯೆಗಳು

ಈ ಪುಟದಲ್ಲಿ ತಿಳಿಸದಿರುವ ಇತರ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದರೆ, ಈ ಕೆಳಗಿನ ಹಂತಗಳನ್ನು ಪ್ರಯತ್ನಿಸಿ:

  • ಎಲ್ಲಾ ಬ್ರೌಸರ್ ಟ್ಯಾಬ್‌ಗಳನ್ನು ಮುಚ್ಚಿ.
  • ನಿಮ್ಮ ಬ್ರೌಸರ್‌ನ ಕ್ಯಾಷ್ ಮತ್ತು ಕುಕೀಗಳನ್ನು ತೆರವುಗೊಳಿಸಿ.
  • ಖಾಸಗಿ ಅಥವಾ ಅಜ್ಞಾತ ವಿಂಡೋವನ್ನು ಬಳಸಿ (ಇತರ Google ಖಾತೆಗಳು ಸೈನ್ ಇನ್ ಮಾಡಿಲ್ಲ ಎಂದು ಖಚಿತಪಡಿಸಿಕೊಳ್ಳಲು).

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12347668629891516046
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false