Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಚಾನಲ್‌ಗಳನ್ನು ನಿರ್ವಹಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಒಂದೇ ಬಾರಿಗೆ ಅನೇಕ ಚಾನಲ್‌ಗಳು ಮತ್ತು ವೀಡಿಯೊಗಳನ್ನು ಸಮರ್ಥವಾಗಿ ನಿರ್ವಹಿಸಲು, ನೀವು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಚಾನಲ್‌ಗಳನ್ನು ರಚಿಸಬಹುದು ಅಥವಾ ಲಿಂಕ್ ಮಾಡಬಹುದು.

ಚಾನಲ್‌ಗಳನ್ನು ಸೇರಿಸಿ ಅಥವಾ ತೆಗೆದುಹಾಕಿ

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಚಾನಲ್‌ಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಕೆಳಗಿನ ಲೇಖನಗಳಲ್ಲಿರುವ ಸೂಚನೆಗಳನ್ನು ಅನುಸರಿಸಿ:

ವೀಡಿಯೊಗಳಿಗಾಗಿ Content ID ಸಕ್ರಿಯಗೊಳಿಸಿ

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಚಾನಲ್ ಅನ್ನು ಸೇರಿಸಿದ ಬಳಿಕ, ಆ ಚಾನಲ್‌ಗಾಗಿ ವೀಡಿಯೊಗಳನ್ನು ನೀವು ಕ್ಲೈಮ್ ಮಾಡಬಹುದು. ಲಿಂಕ್ ಮಾಡಲಾದ ಚಾನಲ್‌ಗಳಲ್ಲಿ ಪ್ರತ್ಯೇಕ ವೀಡಿಯೊಗಳಿಗಾಗಿ Content ID ಕ್ಲೈಮ್ ಅನ್ನು ಸಕ್ರಿಯಗೊಳಿಸಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಆಯ್ಕೆಮಾಡಿ.
  3. ನೀವು ಉಲ್ಲೇಖಗಳು ಎಂಬಂತೆ ಬಳಸಲು ಬಯಸುವ ವೀಡಿಯೊಗಳ ಪಕ್ಕದಲ್ಲಿರುವ ಬಾಕ್ಸ್‌ಗಳನ್ನು ಗುರುತು ಹಾಕಿ.
  4. ಎಡಿಟ್ ನಂತರ Content ID ಹೊಂದಾಣಿಕೆ ಆಯ್ಕೆಮಾಡಿ.
  5. ಸಕ್ರಿಯಗೊಳಿಸಿ ಆಯ್ಕೆಮಾಡಿ ಮತ್ತು ವೀಡಿಯೊಗಾಗಿ ಹೊಂದಿಕೆ ನೀತಿಯನ್ನು ಆಯ್ಕೆಮಾಡಿ.
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಕ್ಲಿಕ್ ಮಾಡಿ.

ವೀಡಿಯೊ ಸೆಟ್ಟಿಂಗ್‌ಗಳನ್ನು ಎಡಿಟ್ ಮಾಡಿ

ನೀವು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಪ್ರತ್ಯೇಕ ವೀಡಿಯೊಗಳ ಮೆಟಾಡೇಟಾವನ್ನು ಎಡಿಟ್ ಮಾಡಬಹುದು. ವೀಡಿಯೊಗಳಿಗಾಗಿ ಮಾನಿಟೈಸೇಶನ್ ಸ್ಥಿತಿಯನ್ನು ಆನ್ ಮಾಡಲು, ಮೆಟಾಡೇಟಾವನ್ನು ಎಡಿಟ್ ಮಾಡಲು ಮತ್ತು ಇತರ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಲು, ವೀಡಿಯೊಗಳು  ಪುಟವನ್ನು ಬಳಸಿ. ನೀವು ಏಕಕಾಲದಲ್ಲಿ ಬಹು ವೀಡಿಯೊಗಳಿಗಾಗಿ ಈ ಕ್ರಿಯೆಗಳನ್ನು ಬಲ್ಕ್ ಆಗಿ ಪೂರ್ಣಗೊಳಿಸಬಹುದು. ವೀಡಿಯೊ ಸೆಟ್ಟಿಂಗ್‌ಗಳನ್ನು ಎಡಿಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ. 

ಚಾನಲ್ ಅನುಮತಿಗಳನ್ನು ಎಡಿಟ್ ಮಾಡಿ

Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಪ್ರತ್ಯೇಕ ಚಾನಲ್ ಮಾಲೀಕರ ಅನುಮತಿಗಳನ್ನು ನೀವು ಎಡಿಟ್ ಮಾಡಬಹುದು. ಇವುಗಳಿಗಾಗಿ ಪ್ರತ್ಯೇಕ ಅನುಮತಿಗಳಿವೆ:

  • ಅಪ್‌ಲೋಡ್‌ಗಳಿಂದ ಮಾನಿಟೈಸ್ ಮಾಡಿ: ಪ್ರತ್ಯೇಕ ವೀಡಿಯೊಗಳಿಗಾಗಿ ಮಾನಿಟೈಸೇಶನ್ ಸ್ಥಿತಿಯನ್ನು ಆನ್ ಮಾಡಲು ಚಾನಲ್ ಮಾಲೀಕರಿಗೆ ಅನುಮತಿಸಿ
  • ಆದಾಯವನ್ನು ವೀಕ್ಷಿಸಿ: ಒಟ್ಟಾರೆ ಆ್ಯಡ್ ಆದಾಯವನ್ನು ನೋಡಲು ಚಾನಲ್ ಮಾಲೀಕರಿಗೆ ಅನುಮತಿಸಿ
  • ಹೊಂದಿಕೆ ನೀತಿಯನ್ನು ಸೆಟ್ ಮಾಡಿ: (ಕೆಲವು ಖಾತೆಗಳು) ಪ್ರತ್ಯೇಕ ವೀಡಿಯೊಗಳಿಗಾಗಿ Content ID ಹೊಂದಾಣಿಕೆಯನ್ನು ಆನ್ ಮಾಡಲು ಚಾನಲ್ ಮಾಲೀಕರಿಗೆ ಅನುಮತಿಸಿ

ಚಾನಲ್ ಅನುಮತಿಗಳನ್ನು ಎಡಿಟ್ ಮಾಡಲು: 

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಚಾನಲ್‌ಗಳು  ಆಯ್ಕೆಮಾಡಿ.
  3. “ಚಾನಲ್ ಅನುಮತಿಗಳು” ಕಾಲಮ್‌ಗಳ ಅಡಿಯಲ್ಲಿ, ಅನುಮತಿಗಳನ್ನು ಅಪ್‌ಡೇಟ್ ಮಾಡಲು ಎಡಿಟ್ ಮಾಡಿ ಕ್ಲಿಕ್ ಮಾಡಿ.

ವಿಶ್ಲೇಷಣೆಗಳನ್ನು ವೀಕ್ಷಿಸಿ

Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಪ್ರತ್ಯೇಕ ಚಾನಲ್‌ಗಳು ಅಥವಾ ವೀಡಿಯೊಗಳಿಗೆ ಸಂಬಂಧಿಸಿದ ವೀಕ್ಷಣೆ ಎಣಿಕೆಗಳು, ಇಷ್ಟಗಳು ಮತ್ತು ಕಾಮೆಂಟ್‌ಗಳಂತಹ ವಿಶ್ಲೇಷಣೆಗಳನ್ನು ನೀವು ಕಾಣಬಹುದು. ಎಡಭಾಗದ ಮೆನುವಿನಲ್ಲಿನಲ್ಲಿರುವ Analytics  ಪುಟವನ್ನು ಬಳಸಿ. Analytics ಕುರಿತು ಇನ್ನಷ್ಟು ತಿಳಿಯಿರಿ. 

ಚಾನಲ್ ಸ್ಥಿತಿಗಳನ್ನು ಮಾನಿಟರ್ ಮಾಡಿ

ನಿಮ್ಮ ಚಾನಲ್ ಪಟ್ಟಿಯನ್ನು ಎಕ್ಸ್‌ಪೋರ್ಟ್ ಮಾಡುವುದರಿಂದ, ಕೊನೆಗೊಳಿಸಿದ ಚಾನಲ್‌ಗಳನ್ನು ಹುಡುಕಲು, ಆಹ್ವಾನಗಳನ್ನು ಟ್ರ್ಯಾಕ್ ಮಾಡಲು ಮತ್ತು ಮಾನಿಟೈಸೇಶನ್ ಸ್ಥಿತಿಯನ್ನು ಪರಿಶೀಲಿಸಲು ಸಹಾಯಕವಾಗಿದೆ. ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಆಗಿರುವ ಚಾನಲ್‌ಗಳ ಕುರಿತಾದ ಮಾಹಿತಿಯನ್ನು ಎಕ್ಸ್‌ಪೋರ್ಟ್ ಮಾಡಲು:

  1. ಎಡಭಾಗದ ಮೆನುವಿನಲ್ಲಿ, ಚಾನಲ್‌ಗಳು  ಆಯ್ಕೆಮಾಡಿ.
  2. ಎಲ್ಲಾ ಚಾನಲ್‌ಗಳನ್ನು ಆಯ್ಕೆ ಮಾಡಲು ಪುಟದ ಮೇಲ್ಭಾಗದಲ್ಲಿರುವ ಬಾಕ್ಸ್ ಅನ್ನು ಗುರುತು ಹಾಕಿ.
  3. ಎಕ್ಸ್‌ಪೋರ್ಟ್ ನಂತರ ಅಲ್ಪವಿರಾಮದಿಂದ ಪ್ರತ್ಯೇಕಿಸಲಾದ ಮೌಲ್ಯಗಳು (.csv) ಅಥವಾ Google Sheets (ಹೊಸ ಟ್ಯಾಬ್) ಕ್ಲಿಕ್ ಮಾಡಿ. ಫೈಲ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
  4. ನಿಮ್ಮ ಎಕ್ಸ್‌ಪೋರ್ಟ್ ಸಿದ್ಧವಾದಾಗ:
    • .csv ಫೈಲ್‌ಗಾಗಿ: ಮೇಲ್ಭಾಗದ ಬ್ಯಾನರ್‌ನಲ್ಲಿ ಡೌನ್‌ಲೋಡ್ ಮಾಡಿ ಕ್ಲಿಕ್ ಮಾಡಿ.
    • Google Sheets ಫೈಲ್‌ಗಾಗಿ: ಮೇಲ್ಭಾಗದ ಬ್ಯಾನರ್‌ನಲ್ಲಿ SHEETS ಅನ್ನು ಹೊಸ ವಿಂಡೋದಲ್ಲಿ ತೆರೆಯಿರಿ ಕ್ಲಿಕ್ ಮಾಡಿ.

ಕ್ಲೈಮ್‌ಗಳು ಮತ್ತು ಸ್ಟ್ರೈಕ್‌ಗಳ ಕುರಿತು ಕ್ರಮ ಕೈಗೊಳ್ಳಿ

ಕೆಲವು ಕಂಟೆಂಟ್ ಮ್ಯಾನೇಜರ್ ಖಾತೆಗಳು ತಮ್ಮ ಲಿಂಕ್ ಮಾಡಿದ ಚಾನಲ್‌ಗಳಿಗೆ ಸಂಬಂಧಿಸಿದ Content ID ಕ್ಲೈಮ್‌ಗಳು ಮತ್ತು ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬಹುದು, ಉದಾಹರಣೆಗೆ ಕ್ಲೈಮ್‌ಗಳಿಗೆ ಪ್ರತಿಯಾಗಿ ತಕರಾರು ಎತ್ತುವುದು ಮತ್ತು ಮೇಲ್ಮನವಿ ಸಲ್ಲಿಸುವುದು. ಈ ಮಾಹಿತಿಯನ್ನು ನೋಡಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. ಫಿಲ್ಟರ್ ಬಾರ್  ನಂತರ ಕೃತಿಸ್ವಾಮ್ಯ ಅಥವಾ ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  4. ನಿರ್ಬಂಧಗಳು ಕಾಲಮ್‌ನಲ್ಲಿ ಕೃತಿಸ್ವಾಮ್ಯ ಎಂಬುದರ ಮೇಲೆ ಹೋವರ್ ಮಾಡಿ.
  5. ವಿವರಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿ, ತದನಂತರ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಹಂತಗಳನ್ನು ನೋಡಲು ಕ್ರಿಯೆಯನ್ನು ಆಯ್ಕೆಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4781218691156872110
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false