ನೀವು ಹೇಗೆ ಮಾನಿಟೈಸ್ ಮಾಡಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.

ಫ್ಯಾನ್ ಫಂಡಿಂಗ್ ಮತ್ತು ಶಾಪಿಂಗ್ ಫೀಚರ್‌ಗಳಿಗೆ ಆರಂಭಿಕ ಆ್ಯಕ್ಸೆಸ್ ಜೊತೆಗೆ ನಾವು YouTube ಪಾಲುದಾರ ಕಾರ್ಯಕ್ರಮವನ್ನು (YPP) ಇನ್ನಷ್ಟು ರಚನೆಕಾರರಿಗೆ ವಿಸ್ತರಿಸುತ್ತಿದ್ದೇವೆ. ವಿಸ್ತೃತ YouTube ಪಾಲುದಾರ ಕಾರ್ಯಕ್ರಮವು ಈ ದೇಶಗಳು/ಪ್ರದೇಶಗಳಲ್ಲಿನ ಅರ್ಹ ರಚನೆಕಾರರಿಗೆ ಲಭ್ಯವಿದೆ. AE, AU, BR, EG, ID, KE, KY, LT, LU, LV, MK, MP, MT, MY, NG, NL, NO, NZ, PF, PG, PH, PT, QA, RO, RS, SE, SG, SI, SK, SN, TC, TH, TR, UG, VI, VN ಮತ್ತು ZA ನಲ್ಲಿನ ಅರ್ಹ ರಚನೆಕಾರರಿಗೆ ಮುಂದಿನ ತಿಂಗಳಿನಲ್ಲಿ ವಿಸ್ತರಣೆಯು ಬಿಡುಗಡೆಯಾಗಲಿದೆ. YPP ಗೆ ಸಂಬಂಧಿಸಿದ ಬದಲಾವಣೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಲೇಖನವನ್ನು ಪರಿಶೀಲಿಸಿ.

ನೀವು ಮೇಲಿರುವ ದೇಶಗಳು/ಪ್ರದೇಶಗಳಲ್ಲಿನ ಒಂದರಲ್ಲಿ ವಾಸವಿರದಿದ್ದರೆ, ನಿಮಗಾಗಿ YouTube ಪಾಲುದಾರ ಕಾರ್ಯಕ್ರಮಕ್ಕೆ ಯಾವುದೇ ಬದಲಾವಣೆಗಳಿರುವುದಿಲ್ಲ. YPP ಅವಲೋಕನ, ಅರ್ಹತೆ ಮತ್ತು ನಿಮಗೆ ಸೂಕ್ತವಾದ ಅಪ್ಲಿಕೇಶನ್‌ಗೆ ಸಂಬಂಧಿಸಿದ ಸೂಚನೆಗಳಿಗಾಗಿ ನೀವು ಈ ಲೇಖನವನ್ನು ಓದಬಹುದು.

ವಿಸ್ತೃತ YouTube ಪಾಲುದಾರ ಕಾರ್ಯಕ್ರಮಕ್ಕಾಗಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ನೀವು ಇನ್ನೂ ಅರ್ಹರಲ್ಲದಿದ್ದರೆ, YouTube Studio ದ ಗಳಿಸಿ ಎಂಬ ಪ್ರದೇಶದಲ್ಲಿನ ಸೂಚನೆ ಪಡೆಯಿರಿ ಎಂಬುದನ್ನು ಆಯ್ಕೆಮಾಡಿ. ನಿಮಗೆ ವಿಸ್ತೃತ YPP ಪ್ರೋಗ್ರಾಂ ಅನ್ನು ಬಿಡುಗಡೆ ಮಾಡಿದ ನಂತರ ಮತ್ತು ನೀವು ಅರ್ಹತೆಯ ಥ್ರೆಶೋಲ್ಡ್‌ಗಳನ್ನು ತಲುಪಿದ ನಂತರ ನಾವು ನಿಮಗೆ ಇಮೇಲ್ ಕಳುಹಿಸುತ್ತೇವೆ. 

ನೀವು YouTube ಪಾಲುದಾರ ಕಾರ್ಯಕ್ರಮ (YPP), ದಲ್ಲಿದ್ದರೆ, ಥ್ರೆಶೋಲ್ಡ್ ಮತ್ತು ಇರಬೇಕಾದ ಅರ್ಹತೆಗಳನ್ನು ಪೂರೈಸಿದಲ್ಲಿ ಈ ಮಾನಿಟೈಸೇಷನ್ ಫೀಚರ್ ಗಳ ಮೂಲಕ ನೀವು ಹಣ ಗಳಿಸಬಹುದು.:

ಚಾನಲ್ ಥ್ರೆಶೋಲ್ಡ್ ಮಾನಿಟೈಸೇಷನ್ ಫೀಚರ್‌ಗಳು
  • 500 ಸಬ್‌ಸ್ಕ್ರೈಬರ್‌ಗಳು
  • ಕಳೆದ 90 ದಿನಗಳಲ್ಲಿ 3 ಸಾರ್ವಜನಿಕ ಅಪ್‌ಲೋಡ್‌ಗಳು
  • ಒಂದು:
    • ಕಳೆದ 365 ದಿನಗಳಲ್ಲಿ ದೀರ್ಘ ಫಾರ್ಮ್ ವೀಡಿಯೊಗಳಲ್ಲಿ 3,000 ಸಾರ್ವಜನಿಕ ವೀಕ್ಷಣೆ ಗಂಟೆಗಳು
    • ಕಳೆದ 90 ದಿನಗಳಲ್ಲಿ 3 ಮಿಲಿಯನ್ ಸಾರ್ವಜನಿಕ shorts ವೀಕ್ಷಣೆಗಳು
  • 1,000 ಸಬ್‌ಸ್ಕ್ರೈಬರ್‌ಗಳು
  • ಒಂದು:
    • ಕಳೆದ 365 ದಿನಗಳಲ್ಲಿ ದೀರ್ಘ ಫಾರ್ಮ್ ವೀಡಿಯೊಗಳಲ್ಲಿ 4,000 ಸಾರ್ವಜನಿಕ ವೀಕ್ಷಣೆ ಗಂಟೆಗಳು
    • ಕಳೆದ 90 ದಿನಗಳಲ್ಲಿ 10 ಮಿಲಿಯನ್ ಸಾರ್ವಜನಿಕ Shorts ವೀಕ್ಷಣೆಗಳು

ಪ್ರತಿಯೊಂದು ಮಾನಿಟೈಸೇಶನ್ ಫೀಚರ್ ವಿಭಿನ್ನ ಇರಬೇಕಾದ ಅರ್ಹತೆಗಳನ್ನುಹೊಂದಿದೆ. ನೀವು ಅರ್ಹರಾಗಿದ್ದರೆ ಈ ಪ್ರತಿಯೊಂದು ಫೀಚರ್ ಗಳನ್ನು ಹೇಗೆ ಆನ್ ಮಾಡುವುದು ಎಂಬುದನ್ನು ಈ ಲೇಖನವು ನಿಮಗೆ ತಿಳಿಸುತ್ತದೆ.

YouTube ನಲ್ಲಿ ಹಣ ಗಳಿಸುವ ಕುರಿತು ಪರಿಚಯ

ಹಣ ಗಳಿಸುವ ಮಾರ್ಗಗಳನ್ನು ಆ್ಯಕ್ಸೆಸ್ ಮಾಡಲು, ನೀವು ನಿಮ್ಮ YouTube ಚಾನಲ್‌ಗೆ ಸಂಬಂಧಿಸಿದ ಮಾನಿಟೈಸೇಶನ್ ಅನ್ನು ಆನ್ ಮಾಡುವ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಹಣ ಗಳಿಸುವ ಮಾರ್ಗಗಳನ್ನು ಆ್ಯಕ್ಸೆಸ್ ಮಾಡಿ

ಒಮ್ಮೆ YPP ಗೆ ಬಂದ ಮೇಲೆ, ಒಮ್ಮೆ, ಪಾಲುದಾರರು ಗಳಿಕೆಯ ಅವಕಾಶಗಳನ್ನು ಅನ್‌ಲಾಕ್ ಮಾಡಲು ಅರ್ಹರಾಗಿರುವ ಒಪ್ಪಂದದ ಮಾಡ್ಯೂಲ್‌ಗಳನ್ನು ಆಯ್ಕೆ ಮಾಡಬಹುದು ಮತ್ತು ಆರಿಸಬಹುದು. ಈ ವಿಧಾನವು ಕೂಡ ರಚನೆಕಾರರಿಗೆ ಅವರ ಚಾನಲ್‌ಗೆ ಯಾವ ಹಣಗಳಿಕೆಯ ಅವಕಾಶಗಳು ಸೂಕ್ತವೆಂದು ನಿರ್ಧರಿಸಲು ಹೆಚ್ಚಿನ ಪಾರದರ್ಶಕತೆ ಮತ್ತು ಗಮನವನ್ನು ನೀಡುತ್ತದೆ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆ ಮಾಡಿ.
  3. ಪ್ರತಿ ಐಚ್ಛಿಕ ಮಾಡ್ಯುಲ್ ಗಳಿಗೆ ನಿಯಮಗಳನ್ನು ಪರಿಶೀಲಿಸಲು ಮತ್ತು ಸ್ವೀಕರಿಸಲು ಆರಂಭಿಸಿ ಕ್ಲಿಕ್ ಮಾಡಿ.

ವೀಕ್ಷಣಾ ಪುಟದ ಜಾಹೀರಾತುಗಳು

ಜನವರಿ 2023 ರ ಮಧ್ಯದಿಂದ, YPP ಯಲ್ಲಿ ಅಸ್ತಿತ್ವದಲ್ಲಿರುವ YouTube ಪಾಲುದಾರರು ವೀಕ್ಷಣೆ ಪುಟದಿಂದ ಜಾಹೀರಾತು ಆದಾಯವನ್ನು ಗಳಿಸುವುದನ್ನು ಮುಂದುವರಿಸಲು ವೀಕ್ಷಣಾ ಪುಟ ಮಾನಿಟೈಸೇಶನ್ ಮಾಡ್ಯೂಲ್ ಅನ್ನು ಪರಿಶೀಲಿಸಬೇಕು ಮತ್ತು ಒಪ್ಪಿಕೊಳ್ಳಬೇಕು.

ವೀಕ್ಷಣಾ ಪುಟದಲ್ಲಿ ವೀಡಿಯೊದ ಮೊದಲು, ವೀಡಿಯೊ ಪ್ಲೇ ಆಗುವಾಗ, ವೀಡಿಯೊದ ನಂತರ ಮತ್ತು ವೀಡಿಯೊದ ಸುತ್ತಮುತ್ತ ಕಾಣಿಸಿಕೊಳ್ಳುವ ಜಾಹೀರಾತುಗಳಿಂದ ನೀವು ಹಣ ಗಳಿಸಬಹುದು. YouTube Premium ಸಬ್‌ಸ್ಕ್ರೈಬರ್ ನಿಮ್ಮ ಕಂಟೆಂಟ್ ಅನ್ನು ವೀಕ್ಷಣಾ ಪುಟದಲ್ಲಿ ವೀಕ್ಷಿಸಿದಾಗಲೂ ಸಹ ನೀವು ಆದಾಯ ಗಳಿಸಬಹುದು.

ವೀಕ್ಷಣೆ ಪುಟವು YouTube, YouTube Music ಮತ್ತು YouTube Kids ನಲ್ಲಿನ ಪುಟಗಳನ್ನು ಪ್ರತಿನಿಧಿಸುತ್ತದೆ ಮತ್ತು ನಿಮ್ಮ ದೀರ್ಘ-ಫಾರ್ಮ್ ಅಥವಾ ಲೈವ್ ಸ್ಟ್ರೀಮಿಂಗ್ ವೀಡಿಯೊಗಳ ವಿವರಣೆ ಮತ್ತು ಪ್ಲೇಬ್ಯಾಕ್‌ಗೆ ಮೀಸಲಾಗಿರುತ್ತದೆ. ವೀಕ್ಷಣಾ ಪುಟದಲ್ಲಿ ವೀಕ್ಷಿಸಲಾದ ದೀರ್ಘ-ಫಾರ್ಮ್ ನ ಅಥವಾ ಲೈವ್ ಸ್ಟ್ರೀಮಿಂಗ್ ವೀಡಿಯೊಗಳಲ್ಲಿ ಜಾಹೀರಾತು ಮತ್ತು YouTube Premium ಆದಾಯವನ್ನು ಗಳಿಸಲು ಅಥವಾ YouTube ವೀಡಿಯೊ ಪ್ಲೇಯರ್‌ನಲ್ಲಿ ಇತರ ಸೈಟ್‌ಗಳಲ್ಲಿ ಎಂಬೆಡ್ ಮಾಡಿದಾಗ, ನೀವು ವೀಕ್ಷಣೆ ಪುಟದ ಮಾನಿಟೈಸೇಷನ್ ಮಾಡ್ಯೂಲ್ ಅನ್ನು ಒಪ್ಪಿಕೊಳ್ಳಬೇಕು.

Shorts ಫೀಡ್ ಜಾಹೀರಾತುಗಳು

Shorts ಮಾನಿಟೈಸೇಶನ್ ಮಾಡ್ಯೂಲ್ ಅನ್ನು ಅಂಗೀಕರಿಸುವುದರಿಂದ ಶಾರ್ಟ್ಸ್ ಫೀಡ್‌ನಲ್ಲಿ ವೀಡಿಯೊಗಳ ನಡುವೆ ವೀಕ್ಷಿಸಲಾಗುವ ಜಾಹೀರಾತುಗಳಿಂದ ಆದಾಯವನ್ನು ಹಂಚಿಕೊಳ್ಳಲು ನಿಮ್ಮ ಚಾನಲ್‌ಗೆ ಅವಕಾಶ ನೀಡುತ್ತದೆ. ನೀವು ಈ ಮಾಡ್ಯೂಲ್ ಅನ್ನು ಅಂಗೀಕರಿಸುವ ದಿನಾಂಕದಿಂದ Shorts ಜಾಹೀರಾತು ಆದಾಯ ಹಂಚಿಕೆಯು ಪ್ರಾರಂಭವಾಗುತ್ತದೆ. ಜಾಹೀರಾತು ಆದಾಯ ಹಂಚಿಕೆ Shorts ಗೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಇನ್ನಷ್ಟು ವಿವರಗಳಿಗೆ,YouTube Shorts ಮಾನಿಟೈಸೇಷನ್ ಕಾರ್ಯನೀತಿಅನ್ನು ವೀಕ್ಷಿಸಿ.

ವಾಣಿಜ್ಯ ಉತ್ಪನ್ನ ಮಾಡ್ಯೂಲ್

ವಾಣಿಜ್ಯ ಉತ್ಪನ್ನ ಮಾಡ್ಯೂಲ್ (ಮತ್ತು ಹಿಂದೆ ಲಭ್ಯವಿದ್ದ ವಾಣಿಜ್ಯ ಉತ್ಪನ್ನ ಅನುಬಂಧ) ನಿಮ್ಮ ಫ್ಯಾನ್ ಗಳ ಜೊತೆ ಸಂಪರ್ಕ ಸಾಧಿಸುವಾಗ ಫ್ಯಾನ್ ಫಂಡಿಂಗ್ ಫೀಚರ್‌ಗಳಿಂದ ಆದಾಯ ಗಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಫ್ಯಾನ್ ಫಂಡಿಂಗ್ ಫೀಚರ್ ಗಳು ಚಾನಲ್ ಸದಸ್ಯತ್ವಗಳಿಂದ ಹಿಡಿದು ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್‌ಗಳು ಮತ್ತು ಸೂಪರ್ ಥ್ಯಾಂಕ್ಸ್‌ಗಳವರೆಗೆ ಇರುತ್ತದೆ. ಫ್ಯಾನ್ ಫಂಡಿಂಗ್ ಫೀಚರ್ ಗಳಿಂದ ಆದಾಯವನ್ನು ಗಳಿಸಲು, ನೀವು ವಾಣಿಜ್ಯ ಉತ್ಪನ್ನ ಮಾಡ್ಯೂಲ್ (CPM) ಅನ್ನು ಒಪ್ಪಿಕೊಳ್ಳಬೇಕು ಮತ್ತು ವೈಯಕ್ತಿಕ ಫೀಚರ್ ಗಳನ್ನು ಆನ್ ಮಾಡಬೇಕು. ವಾಣಿಜ್ಯ ಉತ್ಪನ್ನ ಅನುಬಂಧಕ್ಕೆ (CPA) ಸಹಿ ಮಾಡಿದ ರಚನೆಕಾರರು ಹೊಸ ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ ಸಹಿ ಮಾಡಬೇಕಾಗಿಲ್ಲ. ಅನ್ವಯವಾಗುವ ಫ್ಯಾನ್ ಫಂಡಿಂಗ್ ಫೀಚರ್‌ಗಳು ಮತ್ತು ನೀತಿಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ, ನಮ್ಮ YouTube ವಾಣಿಜ್ಯ ಉತ್ಪನ್ನಗಳು ಮಾನಿಟೈಸೇಷನ್ ನೀತಿಗಳನ್ನು ವೀಕ್ಷಿಸಿ.

ವೀಕ್ಷಣಾ ಪುಟ ಆ್ಯಡ್‌ಗಳನ್ನು ಆನ್ ಮಾಡಿ

ನಿಮ್ಮ ವಿಡಿಯೋಗಳು ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸಿದರೆ , ನೀವು ಆ್ಯಡ್‌ಗಳನ್ನು ಆನ್ ಮಾಡಬಹುದು. ನಿಮ್ಮ ವೀಡಿಯೊ ಅರ್ಹವಾಗಿದೆಯೇ ಎಂಬುದರ ಕುರಿತು ನಿಮಗೆ ಖಾತ್ರಿಯಿಲ್ಲದಿದ್ದರೆ, ಆ ಪುಟದಲ್ಲಿರುವ ಸ್ವಯಂ-ಪ್ರಮಾಣೀಕರಣ ಮಾರ್ಗದರ್ಶನ ಮತ್ತು ಉದಾಹರಣೆಗಳನ್ನು ಪರಿಶೀಲಿಸಿ. ಆ್ಯಡ್‌ಗಳನ್ನು ಆನ್ ಮಾಡುವ ಆಯ್ಕೆಯನ್ನು ಮಾಡಿದ ಮಾತ್ರಕ್ಕೆ ವೀಡಿಯೊದಲ್ಲಿ ಆ್ಯಡ್‌ಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ ಎಂದರ್ಥವಲ್ಲ. ಯಾವುದೇ ಜಾಹೀರಾತುಗಳು ಕಾಣಿಸಿಕೊಳ್ಳುವ ಮೊದಲು, ವೀಡಿಯೊವು ನಮ್ಮ ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂದು ಪರಿಶೀಲಿಸಲು ಸ್ವಯಂಚಾಲಿತ ಅಥವಾ ಮಾನವ ವಿಮರ್ಶೆಗಳನ್ನು ಒಳಗೊಂಡಂತೆ ಪ್ರಮಾಣಿತ ಪ್ರಕ್ರಿಯೆಗೊಳಪಡುತ್ತದೆ.

YouTube ನಲ್ಲಿ ವೀಡಿಯೊಗಳಿಗಾಗಿ ಜಾಹೀರಾತುಗಳನ್ನು ಆನ್ ಮಾಡುವ ಮೂಲಕ, ಆ ವೀಡಿಯೊಗಳ ದೃಶ್ಯ ಮತ್ತು ಆಡಿಯೊ ಅಂಶಗಳಿಗೆ ಅಗತ್ಯವಿರುವ ಎಲ್ಲಾ ಹಕ್ಕುಗಳನ್ನು ನೀವು ಹೊಂದಿರುವಿರಿ ಎಂದು ನೀವು ದೃಢೀಕರಿಸುತ್ತೀರಿ.

ವ್ಯಕ್ತಿಯ ವಿಡಿಯೋಗಳಿಗೆ ಆ್ಯಡ್‌ಗಳನ್ನು ಆನ್ ಮಾಡಿ

 ನೀವು ಈಗಾಗಲೇ ಅಪ್‌ಲೋಡ್ ಮಾಡಿರುವ ಒಂದು ವೀಡಿಯೊಗಾಗಿ ಆ್ಯಡ್‌ಗಳನ್ನು ಆನ್ ಮಾಡಲು:

  1. YouTube Studioಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ ಕಂಟೆಂಟ್  ಎಂಬುದನ್ನು ಆಯ್ಕೆ ಮಾಡಿ.
  3. ಸೂಕ್ತ ವೀಡಿಯೊದ ಪಕ್ಕದಲ್ಲಿ, ಮಾನಿಟೈಸೇಶನ್  ಎಂಬುದನ್ನು ಕ್ಲಿಕ್ ಮಾಡಿ.
  4. ಮಾನಿಟೈಸೇಶನ್ ಡ್ರಾಪ್‌ಡೌನ್‌ನಲ್ಲಿ ಆನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಹಲವಾರು ವೀಡಿಯೊಗಳಿಗಾಗಿ ಜಾಹೀರಾತುಗಳನ್ನು ಆನ್ ಮಾಡಿ

ನೀವು ಈಗಾಗಲೇ ಅಪ್‌ಲೋಡ್ ಮಾಡಿರುವ ಬಹು ವೀಡಿಯೊಗಳಿಗೆ ಆ್ಯಡ್‌ಗಳನ್ನು ಆನ್ ಮಾಡಲು:

  1. YouTube Studio ಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಮಾನಿಟೈಸ್ ಮಾಡಲು ಬಯಸುವ ಯಾವುದೇ ವೀಡಿಯೊಗೆ ಸಂಬಂಧಿಸಿದ ವೀಡಿಯೊ ಥಂಬ್‌ನೇಲ್‌ನ ಎಡಭಾಗದಲ್ಲಿರುವ ಬೂದು ಬಣ್ಣದ ಬಾಕ್ಸ್ ಅನ್ನು ಆಯ್ಕೆಮಾಡಿ.
  4. ನಿಮ್ಮ ವೀಡಿಯೊ ಪಟ್ಟಿಯ ಮೇಲಿನ ಕಪ್ಪು ಬಾರ್‌ನಲ್ಲಿರುವ ಎಡಿಟ್ ಮಾಡಿ ಡ್ರಾಪ್‌ಡೌನ್ ನಂತರ ಮಾನಿಟೈಸೇಶನ್ ಎಂಬುದನ್ನು ಕ್ಲಿಕ್ ಮಾಡಿ.
  5. ಮಾನಿಟೈಸೇಶನ್ ಡ್ರಾಪ್‌ಡೌನ್‌ನಲ್ಲಿ ಆನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
    • ಮಧ್ಯ-ರೋಲ್ ಆ್ಯಡ್‌ಗಳಿಗೆ ಸಂಬಂಧಿಸಿದ ಆ್ಯಡ್ ಸೆಟ್ಟಿಂಗ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಲು: ಎಡಿಟ್ ಮಾಡಿ ನಂತರ ಆ್ಯಡ್ ಸೆಟ್ಟಿಂಗ್‌ಗಳು ನಂತರ ಎಂಬುದನ್ನು ಕ್ಲಿಕ್ ಮಾಡಿ, “ವೀಡಿಯೊ ಪ್ಲೇ ಆಗುತ್ತಿರುವ ಸಮಯದಲ್ಲಿ (ಮಧ್ಯ-ರೋಲ್) ಆ್ಯಡ್‌ಗಳನ್ನು ಇರಿಸಿ” ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ಗೆ ಗುರುತು ಹಾಕಿ ಹಾಗೂ ಆ್ಯಡ್ ವಿರಾಮಗಳಿಲ್ಲದ ವೀಡಿಯೊಗಳಿಗಾಗಿ ಅಥವಾ ಎಲ್ಲಾ ವೀಡಿಯೊಗಳಿಗಾಗಿ ಸ್ವಯಂಚಾಲಿತ ಮಧ್ಯ-ರೋಲ್ ಆ್ಯಡ್‌ಗಳನ್ನು ಇರಿಸಲು ನೀವು ಬಯಸುತ್ತೀರಾ ಎಂಬುದನ್ನು ನಿರ್ಧರಿಸಿ.
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ನಂತರ "ಈ ಕ್ರಿಯೆಯ ಪರಿಣಾಮಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ" ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ಗೆ ಗುರುತು ಹಾಕಿ ನಂತರ ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

Shorts ಫೀಡ್ಸ್ ಆ್ಯಡ್‌ಗಳನ್ನು ಆನ್ ಮಾಡಿ

ಜಾಹೀರಾತುಗಳ ಮೂಲಕ ಮಾನಿಟೈಸ್ ಮಾಡುವ ಎಲ್ಲಾ ಕಂಟೆಂಟ್‌ಗಳು ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. Shorts ನಲ್ಲಿ, ನಮ್ಮ ಜಾಹೀರಾತುದಾರ-ಸ್ನೇಹಿ ಮಾರ್ಗಸೂಚಿಗಳನ್ನು ಅನುಸರಿಸುವ ಕಂಟೆಂಟ್ ವೀಕ್ಷಣೆಗಳು ಮಾತ್ರ ಆದಾಯ ಹಂಚಿಕೆಗೆ ಅರ್ಹವಾಗಿರುತ್ತವೆ. Shorts ಫೀಡ್ ನಲ್ಲಿ ವಿಡಿಯೋಗಳ ನಡುವಿನಲ್ಲಿ ವೀಕ್ಷಿಸಿದ ಜಾಹೀರಾತುಗಳ ಆದಾಯವನ್ನು ಹಂಚಿಕೊಳ್ಳಲು, YouTube Studio ನಗಳಿಸಿ ಸೆಕ್ಷನ್ ನಲ್ಲಿ Shorts ಮಾನಿಟೈಸೇಷನ್ ಮಾಡ್ಯುಲ್ ಅನ್ನು ಪರಿಶೀಲಿಸಿ ಮತ್ತು ಅನುಮೋದಿಸಿ.

ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಿ

ಚಾನೆಲ್ ಸದಸ್ಯತ್ವಗಳು ವೀಕ್ಷಕರಿಗೆ ಮಾಸಿಕ ಪಾವತಿಗಳ ಮೂಲಕ ನಿಮ್ಮ ಚಾನಲ್‌ಗೆ ಸೇರಲು ಮತ್ತು ನೀವು ನೀಡುವ ಬ್ಯಾಡ್ಜ್‌ಗಳು, ಎಮೋಜಿಗಳು ಮತ್ತು ಇತರ ಸರಕುಗಳಂತಹ ಸದಸ್ಯರಿಗೆ-ಮಾತ್ರ ಸೌಲಭ್ಯಗಳಿಗೆ ಆ್ಯಕ್ಸೆಸ್ ಪಡೆಯಲು ಅನುಮತಿಸುತ್ತದೆ. ಅರ್ಹತೆ  ಮತ್ತು ಚಾನಲ್ ನ ಸದಸ್ಯತ್ವವನ್ನು ಆನ್ ಮಾಡುವುದು ಹೇಗೆಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಶಾಪಿಂಗ್ ಅನ್ನು ಆನ್ ಮಾಡಿ

ಶಾಪಿಂಗ್ ರಚನೆಕಾರರು ತಮ್ಮ Store ಅನ್ನು YouTube ಗೆ ಸಂಪರ್ಕಿಸಲು ಮತ್ತು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಹಣವನ್ನು ಗಳಿಸಲು ಅನುಮತಿಸುತ್ತದೆ. ನೀವು ಅರ್ಹರಾಗಿದ್ದರೆ, ನಿಮ್ಮ ಕಂಟೆಂಟ್ ನಲ್ಲಿ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಪ್ರಚಾರ ಮಾಡಬಹುದು ಮತ್ತು ಹಣವನ್ನು ಗಳಿಸಬಹುದು. ಅರ್ಹತೆ ಮತ್ತು ಶಾಪಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಸೂಪರ್ ಚಾಟ್ ಮತ್ತು ಸ್ಟಿಕ್ಕರ್‌ಗಳನ್ನು ಆನ್ ಮಾಡಿ

ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್‌ಗಳು ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳ ಸಮಯದಲ್ಲಿ ರಚನೆಕಾರರೊಂದಿಗೆ ಅಭಿಮಾನಿಗಳನ್ನು ಸಂಪರ್ಕಿಸುವ ಮಾರ್ಗಗಳಾಗಿವೆ. ಲೈವ್ ಚಾಟ್‌ನಲ್ಲಿ ತಮ್ಮ ಸಂದೇಶವನ್ನು ಹೈಲೈಟ್ ಮಾಡಲು ಅಭಿಮಾನಿಗಳು ಸೂಪರ್ ಚಾಟ್‌ಗಳನ್ನು ಖರೀದಿಸಬಹುದು ಅಥವಾ ಲೈವ್ ಚಾಟ್‌ನಲ್ಲಿ ಕಾಣಿಸಿಕೊಳ್ಳುವ ಆ್ಯನಿಮೇಟೆಡ್ಡ್ ಚಿತ್ರವನ್ನು ಪಡೆಯಲು ಸೂಪರ್ ಸ್ಟಿಕ್ಕರ್‌ಗಳನ್ನು ಖರೀದಿಸಬಹುದು. ಅರ್ಹತೆ ಕುರಿತು ಮತ್ತು ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ ಗಳನ್ನು ಆನ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಸೂಪರ್ ಥ್ಯಾಂಕ್ಸ್ ಆನ್ ಮಾಡಿ

ತಮ್ಮ ವೀಡಿಯೊಗಳಿಗಾಗಿ ಹೆಚ್ಚುವರಿ ಕೃತಜ್ಞತೆಯನ್ನು ತೋರಿಸಲು ಬಯಸುವ ವೀಕ್ಷಕರಿಂದ ಆದಾಯವನ್ನು ಗಳಿಸಲು ರಚನೆಕಾರರಿಗೆ ಸೂಪರ್ ಥ್ಯಾಂಕ್ಸ್ ಅನುಮತಿಸುತ್ತದೆ. ಅಭಿಮಾನಿಗಳು ಒಂದು-ಬಾರಿ ಅನಿಮೇಶನ್ ಅನ್ನು ಖರೀದಿಸಬಹುದು ಮತ್ತು ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ವಿಭಿನ್ನ, ಬಣ್ಣದ ಮತ್ತು ಕಸ್ಟಮೈಸ್ ಮಾಡಬಹುದಾದ ಕಾಮೆಂಟ್ ಅನ್ನು ಪೋಸ್ಟ್ ಮಾಡಬಹುದು. ಅರ್ಹತೆ ಮತ್ತು ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡುವುದು ಹೇಗೆಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

YouTube Premium ಆದಾಯ ಅನ್ನು ಆನ್ ಮಾಡಿ

YouTube Premium ಗೆ ಸಬ್ ಸ್ಕ್ರೈಬ್ ಮಾಡಿರುವ ವೀಕ್ಷಕರು ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸಿದರೆ, YouTube Premium ಗೆ ಅವರು ಪಾವತಿಸುವ ಶುಲ್ಕದ ಒಂದು ಭಾಗವನ್ನು ನೀವು ಪಡೆಯುತ್ತೀರಿ. ನೀವು ಪೋಸ್ಟ್ ಮಾಡುವ ಎಲ್ಲಾ ಕಂಟೆಂಟ್ ಗಳು (ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ.) YouTube Premium ಆದಾಯಕ್ಕೆ ಅರ್ಹವಾಗಿದೆ. YouTube Premium ಆದಾಯ ಗಳಿಸಲು:

  • ದೀರ್ಘ ಫಾರ್ಮ್ ವಿಡಿಯೋಗಳು: ವೀಕ್ಷಣಾ ಪುಟ ಮಾನಿಟೈಸೇಶನ್ ಮಾಡ್ಯೂಲ್ ಅನ್ನು ಸ್ವೀಕರಿಸಿ ಮತ್ತು ವೀಕ್ಷಣಾ ಪುಟ ಜಾಹೀರಾತುಗಳನ್ನು ಆನ್ ಮಾಡಿ
  • Shorts: Shorts ಫೀಡ್ ಮಾನಿಟೈಸೇಷನ್ ಮಾಡ್ಯುಲ್ ಅನ್ನು ಅಂಗೀಕರಿಸಿ:

YouTube Premiumಬಗ್ಗೆ ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2111750772983063622
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false