YouTube ನ ಸಮುದಾಯ ಮಾರ್ಗಸೂಚಿಗಳು

ನೀವು YouTube ಬಳಸುವಾಗ, ಜಗತ್ತಿನೆಲ್ಲೆಡೆಯ ಜನರ ಸಮುದಾಯವನ್ನು ಸೇರಿಕೊಳ್ಳುವಿರಿ. ಈ ಕೆಳಗಿನ ಮಾರ್ಗಸೂಚಿಗಳು, YouTube ಅನ್ನು ಎಲ್ಲರಿಗೂ ಮೋಜುಭರಿತ ಮತ್ತು ಆನಂದಮಯವಾಗಿರಿಸಲು ಸಹಾಯ ಮಾಡುತ್ತವೆ.

ಈ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ.

ಕೆಲವೊಮ್ಮೆ, ಅನ್ಯಥಾ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್, ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ (EDSA) ಸಂದರ್ಭವನ್ನು ಹೊಂದಿದ್ದರೆ, ಅದು YouTube ನಲ್ಲಿ ಉಳಿದುಕೊಳ್ಳಬಹುದು. ಈ ಸಂದರ್ಭಗಳಲ್ಲಿ, ಕಂಟೆಂಟ್‌ಗೆ EDSA ವಿನಾಯಿತಿ ದೊರೆಯುತ್ತದೆ.

ಈ ನೀತಿಗಳು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಪ್ರಕಾರದ ಕಂಟೆಂಟ್‌ಗೆ ಅನ್ವಯಿಸುತ್ತವೆ, ಉದಾಹರಣೆಗೆ, ಪಟ್ಟಿ ಮಾಡದಿರುವ ಮತ್ತು ಖಾಸಗಿ ಕಂಟೆಂಟ್, ಕಾಮೆಂಟ್‌ಗಳು, ಲಿಂಕ್‌ಗಳು, ಸಮುದಾಯ ಪೋಸ್ಟ್‌ಗಳು ಹಾಗೂ ಥಂಬ್‌ನೇಲ್‌ಗಳು ಸೇರಿದಂತೆ ಎಲ್ಲಾ ಪ್ರಕಾರದ ಕಂಟೆಂಟ್‌ಗೆ ಅನ್ವಯಿಸುತ್ತವೆ. ಇದು ಸಂಪೂರ್ಣ ಪಟ್ಟಿಯಲ್ಲ.

ಸಾಮಾನ್ಯ ಜ್ಞಾನದೊಂದಿಗೆ ರಚಿಸುವುದು: YouTube ಸಮುದಾಯ ಮಾರ್ಗಸೂಚಿಗಳು

ಸ್ಪ್ಯಾಮ್ ಮತ್ತು ಮೋಸಗೊಳಿಸುವ ಅಭ್ಯಾಸಗಳು

YouTube ಸಮುದಾಯವು ವಿಶ್ವಾಸದ ತಳಪಾಯವನ್ನು ಹೊಂದಿದೆ. ಇತರ ಬಳಕೆದಾರರಿಗೆ ಸ್ಕ್ಯಾಮ್ ಮಾಡುವ, ಅವರನ್ನು ದಾರಿ ತಪ್ಪಿಸುವ, ಸ್ಪ್ಯಾಮ್ ಮಾಡುವ ಅಥವಾ ವಂಚಿಸುವ ಉದ್ದೇಶವಿರುವ ಕಂಟೆಂಟ್‌ಗೆ YouTube ನಲ್ಲಿ ಅನುಮತಿಯಿಲ್ಲ.

ಸೂಕ್ಷ್ಮ ಕಂಟೆಂಟ್ 

ವೀಕ್ಷಕರು, ರಚನೆಕಾರರು ಮತ್ತು ವಿಶೇಷವಾಗಿ ಅಪ್ರಾಪ್ತರನ್ನು ರಕ್ಷಿಸುವ ಆಶಯವನ್ನು ನಾವು ಹೊಂದಿದ್ದೇವೆ. ಆದ್ದರಿಂದ, ಮಕ್ಕಳನ್ನು ಸುರಕ್ಷಿತವಾಗಿರಿಸುವುದು, ಲೈಂಗಿಕತೆ ಮತ್ತು ನಗ್ನತೆ ಹಾಗೂ ಸ್ವಯಂ-ಹಾನಿಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊಂದಿದ್ದೇವೆ. YouTube ನಲ್ಲಿ ಏನನ್ನು ಅನುಮತಿಸಲಾಗುತ್ತದೆ ಮತ್ತು ಈ ನೀತಿಗಳನ್ನು ಅನುಸರಿಸದ ಕಂಟೆಂಟ್ ಅನ್ನು ನೀವು ನೋಡಿದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಹಿಂಸಾತ್ಮಕ ಅಥವಾ ಅಪಾಯಕಾರಿ ಕಂಟೆಂಟ್

ದ್ವೇಷಪೂರಿತ ಮಾತು, ಆಕ್ರಮಣಕಾರಿ ವರ್ತನೆ, ಗ್ರಾಫಿಕ್ ಹಿಂಸೆ, ದುರುದ್ದೇಶಪ್ರೇರಿತ ದಾಳಿಗಳು ಮತ್ತು ಹಾನಿಕಾರಕ ಅಥವಾ ಅಪಾಯಕಾರಿ ವರ್ತನೆಯನ್ನು ಪ್ರಚಾರ ಮಾಡುವ ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ.

ನಿಯಂತ್ರಿತ ವಸ್ತುಗಳು

ಕೆಲವೊಂದು ಸರಕುಗಳನ್ನು YouTube ನಲ್ಲಿ ಮಾರಾಟ ಮಾಡುವಂತಿಲ್ಲ. ಯಾವುದಕ್ಕೆ ಅನುಮತಿಯಿದೆ—ಮತ್ತು ಯಾವುದಕ್ಕೆ ಅನುಮತಿಯಿಲ್ಲ ಎಂಬುದನ್ನು ತಿಳಿದುಕೊಳ್ಳಿ.

ತಪ್ಪು ಮಾಹಿತಿ

ಅತಿಯಾದ ಹಾನಿಗೆ ಕಾರಣವಾಗುವ ಗಂಭೀರ ಅಪಾಯವನ್ನು ಹೊಂದಿರುವಂತಹ ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಕೆಲವು ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಇದು ನೈಜ-ಪ್ರಪಂಚದಲ್ಲಿ ಹಾನಿಯನ್ನುಂಟುಮಾಡಬಲ್ಲ, ಹಾನಿಕಾರಕ ಪರಿಹಾರಗಳು ಅಥವಾ ಚಿಕಿತ್ಸೆಗಳನ್ನು ಉತ್ತೇಜಿಸುವ ಕಂಟೆಂಟ್, ತಾಂತ್ರಿಕವಾಗಿ ಮಾರ್ಪಾಡು ಮಾಡಲಾದ ಕೆಲವು ಪ್ರಕಾರಗಳ ಕಂಟೆಂಟ್ ಅಥವಾ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಕಂಟೆಂಟ್‌ನಂತಹ ಕೆಲವು ಪ್ರಕಾರಗಳ ತಪ್ಪು ಮಾಹಿತಿಯನ್ನು ಒಳಗೊಂಡಿದೆ.

 

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಮತ್ತು ಕಲಾತ್ಮಕ (EDSA) ಕಂಟೆಂಟ್

YouTube ಅನ್ನು ಸುರಕ್ಷಿತ ಸಮುದಾಯವಾಗಿಸುವುದೇ ನಮ್ಮ ಸಮುದಾಯ ಮಾರ್ಗಸೂಚಿಗಳ ಗುರಿಯಾಗಿದೆ. ಕೆಲವೊಮ್ಮೆ, ಅನ್ಯಥಾ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್, ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ (EDSA) ಸಂದರ್ಭವನ್ನು ಹೊಂದಿದ್ದರೆ, ಅದು YouTube ನಲ್ಲಿ ಉಳಿದುಕೊಳ್ಳಬಹುದು. ಈ ಸಂದರ್ಭಗಳಲ್ಲಿ, ಕಂಟೆಂಟ್‌ಗೆ EDSA ವಿನಾಯಿತಿ ದೊರೆಯುತ್ತದೆ. 

YouTube ನೀತಿಗಳು ಹಾಗೂ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ರಚನೆಕಾರರ ಸಲಹೆಗಳನ್ನು ಪಡೆಯಿರಿ.

ಈ ನಿಯಮಗಳನ್ನು ಗಂಭೀರವಾಗಿ ಪರಿಗಣಿಸಿ. YouTube ರಚನೆಕಾರರ, ಪ್ಲ್ಯಾಟ್‌ಫಾರ್ಮ್‌ನಲ್ಲಿನ ಮತ್ತು/ಅಥವಾ ಪ್ಲ್ಯಾಟ್‌ಫಾರ್ಮ್‌ನ ಹೊರಗಿನ ನಡವಳಿಕೆಯು ನಮ್ಮ ಬಳಕೆದಾರರಿಗೆ, ಸಮುದಾಯಕ್ಕೆ, ಉದ್ಯೋಗಿಗಳಿಗೆ ಅಥವಾ ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತಿದ್ದರೆ, ಅವರ ಕ್ರಮಗಳ ತೀವ್ರತೆ ಮತ್ತು ಹಾನಿಕಾರಕ ನಡವಳಿಕೆಯಲ್ಲಿ ಯಾವುದಾದರೂ ಮಾದರಿ ಅಸ್ತಿತ್ವದಲ್ಲಿದೆಯೇ ಎನ್ನುವುದು ಸೇರಿದಂತೆ, ಆದರೆ ಇವುಗಳಿಗೆ ಸೀಮಿತವಾಗಿರದೆ, ಅನೇಕ ಅಂಶಗಳ ಆಧಾರದ ಮೇಲೆ ನಾವು ಪ್ರತಿಕ್ರಿಯಿಸಬಹುದು. ನಮ್ಮ ಪ್ರತಿಕ್ರಿಯೆಯು, ರಚನೆಕಾರರ ಸವಲತ್ತುಗಳನ್ನು ಅಮಾನತುಗೊಳಿಸುವುದರಿಂದ ಆರಂಭಿಸಿ, ಖಾತೆ ಕೊನೆಗೊಳಿಸುವವರೆಗೆ ವ್ಯಾಪಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4670480225452502258
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false