YouTube ಪಾಲುದಾರರ ಗಳಿಕೆಗಳ ಅವಲೋಕನ

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ, ನಾವು ರಷ್ಯಾದಲ್ಲಿ ನೆಲೆಸಿರುವ ಬಳಕೆದಾರರಿಗೆ Google ಮತ್ತು YouTube ಜಾಹೀರಾತುಗಳನ್ನು ಸರ್ವ್ ಮಾಡುವುದನ್ನು ತಾತ್ಕಾಲಿಕವಾಗಿ ವಿರಾಮಗೊಳಿಸುತ್ತಿದ್ದೇವೆ. ಇನ್ನಷ್ಟು ತಿಳಿಯಿರಿ.

ಈ ಪುಟದಲ್ಲಿನ ಮಾಹಿತಿಯು YouTube ಮೂಲಕ ಮಾನಿಟೈಸ್ ಮಾಡುವ, ಉದಾಹರಣೆಗೆ YouTube ಪಾಲುದಾರ ಕಾರ್ಯಕ್ರಮದಲ್ಲಿರುವಂತಹ, ರಚನೆಕಾರರಿಗೆ ಸಂಬಂಧಿಸಿದೆ.

YouTube ಪಾಲುದಾರ ಕಾರ್ಯಕ್ರಮವು ರಚನೆಕಾರರು ತಮ್ಮ ಕಂಟೆಂಟ್ ಅನ್ನು YouTube ನಲ್ಲಿ ಮಾನಿಟೈಸ್ ಮಾಡಲು ಅನುಮತಿಸುತ್ತದೆ. ರಚನೆಕಾರರು ತಮ್ಮ ವೀಡಿಯೊಗಳಲ್ಲಿನ ಜಾಹೀರಾತುಗಳಿಂದ ಅಥವಾ ಇತರ ಮಾನಿಟೈಸೇಶನ್ ಫೀಚರ್‌ಗಳನ್ನು ಬಳಸುವ ಮೂಲಕ ಆದಾಯವನ್ನು ಹಂಚಿಕೊಳ್ಳಬಹುದು. ನಿಮ್ಮ ಗಳಿಕೆಗಳು ಆದಾಯವಾಗಿ ಹೇಗೆ ಬದಲಾಗುತ್ತವೆ, ನೀವು ಪಾವತಿಯನ್ನು ಹೇಗೆ ಪಡೆಯಬಹುದು ಮತ್ತು ನೀವು ಪಾವತಿಯನ್ನು ಯಾವಾಗ ಪಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಪುಟವನ್ನು ಬಳಸಿ.

ನಾನು ಆದಾಯವನ್ನು ಹೇಗೆ ಗಳಿಸಬಹುದು?

ಜಾಹೀರಾತು ಆದಾಯಗಳು

ನೀವು ಮಾನಿಟೈಸೇಶನ್‌ಗಾಗಿ ನಿಮ್ಮ ಚಾನಲ್ ಅನ್ನು ಸಕ್ರಿಯಗೊಳಿಸಿದಾಗ, ನಿಮ್ಮ ವೀಡಿಯೊಗಳಿಗಾಗಿ ನೀವು Google ಮತ್ತು ಅದರ ಪಾಲುದಾರರ ಜಾಹೀರಾತುಗಳನ್ನು ಆನ್ ಮಾಡಬಹುದು ಮತ್ತು ಅವುಗಳಿಂದ ಬರುವ ಆದಾಯವನ್ನು ಹಂಚಿಕೊಳ್ಳಬಹುದು.
 
YouTube ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ನಿಮಗೆ ಎಷ್ಟು ಪಾವತಿಸಲಾಗುತ್ತದೆ ಅಥವಾ ಪಾವತಿಸಲಾಗುತ್ತದೆಯೇ ಎಂಬುದರ ಕುರಿತು ಯಾವುದೇ ಭರವಸೆಗಳಿಲ್ಲ. ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸುವುದರಿಂದ ಬರುವ ಜಾಹೀರಾತು ಆದಾಯದ ಹಂಚಿಕೆಯನ್ನು ಆಧರಿಸಿ ಗಳಿಕೆಗಳು ಉತ್ಪಾದನೆಯಾಗುತ್ತವೆ. ನೀವು ಮಾನಿಟೈಸ್ ಮಾಡುವ ವೀಡಿಯೊಗಳಲ್ಲಿ ಆ್ಯಡ್‌ಗಳು ಹೇಗೆ ಗೋಚರಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಇತರ ಮಾನಿಟೈಸೇಶನ್ ಫೀಚರ್‌ಗಳು

ಚಾನಲ್ ಸದಸ್ಯತ್ವಗಳು, Shopping, ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್‌ಗಳು, ಸೂಪರ್ ಥ್ಯಾಂಕ್ಸ್ ಮತ್ತು YouTube Premium ಸಬ್‌ಸ್ಕ್ರಿಪ್ಶನ್‌ಗಳಂತಹ ಇತರ ಮಾನಿಟೈಸೇಶನ್ ಫೀಚರ್‌ಗಳಿಂದಲೂ ನೀವು ಆದಾಯವನ್ನು ಗಳಿಸಬಹುದು. YouTube ನಲ್ಲಿ ಹಣ ಗಳಿಸುವ ಎಲ್ಲಾ ವಿಧಾನಗಳ ಕುರಿತು ಇನ್ನಷ್ಟು ತಿಳಿಯಿರಿ.
ನನ್ನ ಆದಾಯದ ಹಂಚಿಕೆ ಎಷ್ಟಾಗಿರುತ್ತದೆ?

ಆದಾಯ ಹಂಚಿಕೆ ಎಂಬುದು YouTube ಜೊತೆಗಿನ ನಿಮ್ಮ ನಿರ್ದಿಷ್ಟ ಪಾಲುದಾರಿಕೆ ಒಪ್ಪಂದಗಳಲ್ಲಿ ವಿವರಿಸಿರುವ ಒಟ್ಟು ಆದಾಯದಲ್ಲಿನ ನಿಮ್ಮ ಶೇಕಡಾವಾರನ್ನು ಸೂಚಿಸುತ್ತದೆ. ನಿಮ್ಮ ಆದಾಯ ಹಂಚಿಕೆಯ ಕುರಿತು ನಿರ್ದಿಷ್ಟ ವಿವರಗಳಿಗಾಗಿ ನಿಮ್ಮ ಒಪ್ಪಂದಗಳನ್ನು ನೀವು ಪರಿಶೀಲಿಸಬಹುದು:

  1. YouTube Studio ಗೆ ಸೈನ್-ಇನ್ ಮಾಡಿ
  2. ಎಡಭಾಗದ ಮೆನುವಿನಿಂದ, ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ
  3. ಒಪ್ಪಂದಗಳು ಎಂಬುದನ್ನು ಆಯ್ಕೆಮಾಡಿ
  4. ನಿಮ್ಮ ಆದಾಯ ಹಂಚಿಕೆಯ ಕುರಿತು ವಿವರಗಳನ್ನು ಹುಡುಕಲು, ಪ್ರತಿ ಒಪ್ಪಂದದ ಮುಂದಿನ ಒಪ್ಪಂದವನ್ನು ವೀಕ್ಷಿಸಿ ಎಂಬುದನ್ನು ಕ್ಲಿಕ್ ಮಾಡಿ

ನಿಮ್ಮ ಒಪ್ಪಂದಗಳನ್ನು ಎಲ್ಲಿ ಕಾಣಬಹುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: ಮಾರಾಟ ತೆರಿಗೆ, ವ್ಯಾಟ್, GST, ಇತ್ಯಾದಿಗಳಂತಹ ವಹಿವಾಟಿನ ತೆರಿಗೆಗಳು Google ಗೆ ಆದಾಯವಲ್ಲ ಮತ್ತು ಇವುಗಳನ್ನು ಪಾಲುದಾರ ಆದಾಯ ಹಂಚಿಕೆಯ ಲೆಕ್ಕಾಚಾರದಲ್ಲಿ ಸೇರಿಸಲಾಗುವುದಿಲ್ಲ.

ಆದಾಯ ಹಂಚಿಕೆಯ ದರಗಳು

ಪಾಲುದಾರರು ಐಚ್ಛಿಕವಾಗಿ ಆಯ್ಕೆಮಾಡಲು YouTube Studio ದಲ್ಲಿ ನಿರ್ದಿಷ್ಟ ಮಾಡ್ಯೂಲ್‌ಗಳು ಲಭ್ಯವಿವೆ. ಪ್ರತಿ ಮಾಡ್ಯೂಲ್‌ನ ನಿಯಮಗಳನ್ನು ಪರಿಶೀಲಿಸುವಾಗ, ಪಾಲುದಾರರು ಆದಾಯ ಹಂಚಿಕೆಯ ದರಗಳ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳಬಹುದು.

ವಾಣಿಜ್ಯ ಉತ್ಪನ್ನ ಮಾಡ್ಯೂಲ್

ವಾಣಿಜ್ಯ ಉತ್ಪನ್ನ ಮಾಡ್ಯೂಲ್ ಅನ್ನು ಪರಿಶೀಲಿಸುವ ಮತ್ತು ಸ್ವೀಕರಿಸುವ ಮೂಲಕ ಪಾಲುದಾರರು ಫ್ಯಾನ್ ಫಂಡಿಂಗ್ ಫೀಚರ್‌ಗಳನ್ನು ಆನ್ ಮಾಡಿದರೆ, ಚಾನಲ್ ಸದಸ್ಯತ್ವಗಳು, ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್‌ಗಳು ಮತ್ತು ಸೂಪರ್ ಥ್ಯಾಂಕ್ಸ್‌ಗಳಿಂದ 70% ನಿವ್ವಳ ಆದಾಯವನ್ನು YouTube ಅವರಿಗೆ ಪಾವತಿಸುತ್ತದೆ.

ವೀಕ್ಷಣಾ ಪುಟದ ಮಾನಿಟೈಸೇಶನ್ ಮಾಡ್ಯೂಲ್

ವೀಕ್ಷಣಾ ಪುಟದ ಮಾನಿಟೈಸೇಶನ್ ಮಾಡ್ಯೂಲ್ ಅನ್ನು ಪರಿಶೀಲಿಸುವ ಮತ್ತು ಅದಕ್ಕೆ ಸಮ್ಮತಿಸುವ ಮೂಲಕ ಪಾಲುದಾರರು ವೀಕ್ಷಣಾ ಪುಟದ ಆ್ಯಡ್‌ಗಳನ್ನು ಆನ್ ಮಾಡಿದರೆ, ಅವರ ಕಂಟೆಂಟ್ ವೀಕ್ಷಣಾ ಪುಟದಲ್ಲಿ ಅವರ ಸಾರ್ವಜನಿಕ ವೀಡಿಯೊಗಳಲ್ಲಿ ಡಿಸ್‌ಪ್ಲೇ ಮಾಡಲಾಗುವ ಅಥವಾ ಸ್ಟ್ರೀಮ್ ಮಾಡಲಾಗುವ ಆ್ಯಡ್‌ಗಳಿಂದ ಸಿಗುವ ನಿವ್ವಳ ಆದಾಯಗಳ 55% ರಷ್ಟನ್ನು YouTube ಅವರಿಗೆ ಪಾವತಿಸುತ್ತದೆ. ಇತರ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಲ್ಲಿನ YouTube ವೀಡಿಯೊ ಪ್ಲೇಯರ್‌ನಲ್ಲಿ ಅವರ ಸಾರ್ವಜನಿಕ ವೀಡಿಯೊಗಳು ಸ್ಟ್ರೀಮ್ ಆದಾಗ ಸಹ ಈ ಆದಾಯ ಹಂಚಿಕೆಯ ದರವು ಅನ್ವಯವಾಗುತ್ತದೆ. 

Shorts ಮಾನಿಟೈಸೇಶನ್ ಮಾಡ್ಯೂಲ್

Shorts ಮಾನಿಟೈಸೇಶನ್ ಮಾಡ್ಯೂಲ್ ಅನ್ನು ಪರಿಶೀಲಿಸುವ ಮತ್ತು ಅದಕ್ಕೆ ಸಮ್ಮತಿಸುವ ಮೂಲಕ ಪಾಲುದಾರರು Shorts ಫೀಡ್ ಆ್ಯಡ್‌ಗಳನ್ನು ಆನ್ ಮಾಡಿದರೆ, ವೀಕ್ಷಣೆಗಳಲ್ಲಿನ ಅವರ ಪಾಲನ್ನು ಆಧರಿಸಿ ಅವರಿಗೆ ನಿಗದಿಪಡಿಸಿದ ಆದಾಯದ 45% ರಷ್ಟನ್ನು ಕ್ರಿಯೇಟರ್ ಪೂಲ್ ನಿಯೋಜನೆಯಿಂದ YouTube ಅವರಿಗೆ ಪಾವತಿಸುತ್ತದೆ. 

ನನ್ನ ಗಳಿಕೆಗಳನ್ನು ನಾನು ಎಲ್ಲಿ ನೋಡಬಹುದು?

YouTube Analytics

YouTube Analytics ಅನ್ನು ಬಳಸಿಕೊಂಡು ನಿಮ್ಮ ಅಂದಾಜಿಸಿದ YouTube ಆದಾಯವನ್ನು ನೀವು ಪರಿಶೀಲಿಸಬಹುದು.

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ Analytics ಅನ್ನು ಆಯ್ಕೆಮಾಡಿ.
  3. ಮೇಲಿನ ಮೆನುವಿನಿಂದ, ಆದಾಯ ಎಂಬುದನ್ನು ಆಯ್ಕೆಮಾಡಿ.

ಈ ವೀಕ್ಷಣೆಯಲ್ಲಿ, ನಿಮ್ಮ ಗಳಿಕೆಗಳಿಗೆ ಸಂಬಂಧಿಸಿದ ವಿವಿಧ ಆದಾಯದ ವರದಿಗಳನ್ನು ನೀವು ನೋಡಬಹುದು. ನಿಮ್ಮ ಆದಾಯವನ್ನು ಪರಿಶೀಲಿಸಲು YouTube Analytics ಅನ್ನು ಬಳಸುವ ಕುರಿತು ಇನ್ನಷ್ಟು ತಿಳಿಯಿರಿ.

ಮಾಸಿಕ ಅಂದಾಜಿಸಿದ ಆದಾಯ

YouTube Analytics ನಲ್ಲಿ ಕಂಡುಬರುವ ಮಾಸಿಕ ಅಂದಾಜಿಸಿದ ಆದಾಯವು ಏರುಪೇರಾಗಬಹುದು ಎಂಬುದನ್ನು ನೆನಪಿನಲ್ಲಿಡಿ:

ಮಾಸಿಕ ಅಂದಾಜಿಸಿದ ಆದಾಯವು ಅಮಾನ್ಯ ಟ್ರಾಫಿಕ್, Content ID ಕ್ಲೇಮ್‌ಗಳು ಮತ್ತು ವಿವಾದಗಳು ಅಥವಾ ಕೆಲವು ಆ್ಯಡ್‌ ಅಭಿಯಾನದ ಪ್ರಕಾರಗಳಿಂದಾಗಿ (ಉದಾ. ಪ್ರತಿ ದಿನದ ವೆಚ್ಚದ ಅಭಿಯಾನಗಳು) ಅಡ್ಜಸ್ಟ್‌ಮೆಂಟ್‌ಗಳಿಗೆ ಒಳಪಟ್ಟಿರುತ್ತದೆ. ನಿಮ್ಮ ಮಾಸಿಕ ಅಂದಾಜಿಸಿದ ಆದಾಯವು ಏರುಪೇರಾಗುತ್ತಿರುವಂತೆ ಕಂಡುಬಂದರೆ, ಅದು ಆ ಅಡ್ಜಸ್ಟ್‌ಮೆಂಟ್‌ಗಳ ಕಾರಣದಿಂದಾಗಿರಬಹುದು. ಆದಾಯ ಉತ್ಪಾದನೆಯ ನಂತರ ಅವುಗಳು ಎರಡು ಬಾರಿ ಸಂಭವಿಸುತ್ತವೆ: 1 ವಾರದ ನಂತರ ಸಂಭವಿಸುತ್ತವೆ (ಇನ್ನಷ್ಟು ಸಂಪೂರ್ಣ ಅಂದಾಜನ್ನು ನೀಡುತ್ತವೆ) ಮತ್ತು ಮುಂದಿನ ತಿಂಗಳ ಮಧ್ಯದಲ್ಲಿ ಸಂಭವಿಸಿ ನಿಮ್ಮ ಅಂತಿಮಗೊಳಿಸಿದ ಗಳಿಕೆಗಳನ್ನು ಪ್ರತಿಬಿಂಬಿಸುತ್ತವೆ.

YouTube ಗಾಗಿ AdSense

ನಿಮ್ಮ ಅಂತಿಮಗೊಳಿಸಿದ ಗಳಿಕೆಗಳು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಮಾತ್ರ ಗೋಚರಿಸುತ್ತವೆ. ಪ್ರತಿ ತಿಂಗಳ 7ನೇ ಮತ್ತು 12ನೇ ತಾರೀಖಿನ ನಡುವೆ, ಹಿಂದಿನ ತಿಂಗಳಿಗಾಗಿ ಅಂತಿಮಗೊಳಿಸಿದ ಗಳಿಕೆಗಳನ್ನು ನಿಮ್ಮ YouTube ಗಾಗಿ AdSense ಖಾತೆಯ ಬ್ಯಾಲೆನ್ಸ್‌ಗೆ ಸೇರಿಸಲಾಗುತ್ತದೆ.

ನಿಮ್ಮ YouTube ಗಾಗಿ AdSense ಖಾತೆಯಲ್ಲಿ ನಿಮ್ಮ ಅಂತಿಮಗೊಳಿಸಿದ ಗಳಿಕೆಗಳನ್ನು ನೀವು ಕಾಣಬಹುದು.

  1. ನಿಮ್ಮ YouTube ಗಾಗಿ AdSense ಖಾತೆಗೆ ಸೈನ್ ಇನ್ ಮಾಡಿ.
  2. ಎಡಭಾಗದಲ್ಲಿ, ಸೆಟ್ಟಿಂಗ್‌ಗಳು ನಂತರ ಪಾವತಿಗಳು ಎಂಬುದನ್ನು ಆಯ್ಕೆಮಾಡಿ. ಆಯ್ಕೆಮಾಡಿದ ಸಮಯದ ಮಿತಿಯಲ್ಲಿನ ನಿಮ್ಮ ಒಟ್ಟು ಗಳಿಕೆಗಳನ್ನು ಮತ್ತು ನಿಮ್ಮ ಕೊನೆಯ ವಹಿವಾಟುಗಳನ್ನು ನೀವು ನೋಡುತ್ತೀರಿ.

ತೆರಿಗೆ ತಡೆಹಿಡಿಯುವಿಕೆಯು ನಿಮ್ಮ ಅಂತಿಮಗೊಳಿಸಿದ ಗಳಿಕೆಗಳ ಮೇಲೆ ಪರಿಣಾಮ ಬೀರಬಹುದು (ಯಾವುದಾದರೂ ಅನ್ವಯಿಸಿದರೆ) ಮತ್ತು ತಡೆಹಿಡಿಯಲಾದ ಮೊತ್ತವು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಮಾತ್ರ ಗೋಚರಿಸುತ್ತದೆ.

ನನ್ನ ಗಳಿಕೆಗಳ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆಯೇ?
ಗಮನಿಸಿ: ತೆರಿಗೆ ವಿಚಾರಗಳ ಕುರಿತು YouTube ಮತ್ತು Google ನಿಮಗೆ ಸಲಹೆ ನೀಡಲು ಸಾಧ್ಯವಿಲ್ಲ. ನಿಮ್ಮ ತೆರಿಗೆಯ ಸನ್ನಿವೇಶವನ್ನು ಇನ್ನೂ ಉತ್ತಮವಾಗಿ ಅರ್ಥಮಾಡಿಕೊಳ್ಳಲು ತೆರಿಗೆಯ ವೃತ್ತಿಪರರ ಜೊತೆ ಸಮಾಲೋಚಿಸಿ.

ಯು.ಎಸ್. ತೆರಿಗೆ ಅವಶ್ಯಕತೆಗಳು 

ಯು.ಎಸ್‌ನಲ್ಲಿ ವೀಕ್ಷಕರಿಂದ ನೀವು ಜನರೇಟ್ ಮಾಡುವ ಗಳಿಕೆಗಳ ಮೇಲಿನ ಯು.ಎಸ್. ತೆರಿಗೆಗಳನ್ನು Google ತಡೆಹಿಡಿಯುತ್ತದೆ. ನೀವು ಈಗಾಗಲೇ ಸಲ್ಲಿಸಿರದಿದ್ದರೆ, ನಿಮ್ಮ ಯು.ಎಸ್. ತೆರಿಗೆ ಮಾಹಿತಿಯನ್ನು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಸಲ್ಲಿಸಿ, ಇದರಿಂದ Google ನಿಮ್ಮ ಸರಿಯಾದ ತಡೆಹಿಡಿಯುವಿಕೆ ದರವನ್ನು ನಿರ್ಧರಿಸುತ್ತದೆ. ತೆರಿಗೆ ಮಾಹಿತಿಯನ್ನು ಒದಗಿಸದಿದ್ದರೆ, Google ಗರಿಷ್ಠ ದರದಲ್ಲಿ ತಡೆಹಿಡಿಯುವ ಅಗತ್ಯವಿರಬಹುದು.
 
ಪ್ರಪಂಚದಲ್ಲಿ ಅವರ ಸ್ಥಳವನ್ನು ಲೆಕ್ಕಿಸದೆಯೇ, ಎಲ್ಲಾ ಮಾನಿಟೈಸ್ ಮಾಡುವ ರಚನೆಕಾರರಿಗಾಗಿ ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸುವ ಅಗತ್ಯವಿದೆ. ಹೊಸ YouTube ಗಾಗಿ AdSense ಖಾತೆಗಳಿರುವ ಹೊಸ ಪಾಲುದಾರರು ತಮ್ಮ ಮೊದಲ ಪಾವತಿಗಳನ್ನು ಪಡೆಯುವ ಮೊದಲು ಸಹ ಇದು ಅಗತ್ಯವಾಗಿರುತ್ತದೆ. YouTube ಗಳಿಕೆಗಳಿಗಾಗಿ ಯು.ಎಸ್. ತೆರಿಗೆ ಅವಶ್ಯಕತೆಗಳು ಮತ್ತು Google ಗೆ ನಿಮ್ಮ ಯು.ಎಸ್. ತೆರಿಗೆ ಮಾಹಿತಿಯನ್ನು ಸಲ್ಲಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಇತರ ತೆರಿಗೆ ಬಾಧ್ಯಸ್ಥಿಕೆ

YouTube ನಲ್ಲಿ ನಿಮ್ಮ ಮಾನಿಟೈಸ್ ಮಾಡಿದ ವೀಡಿಯೊಗಳಿಂದ ಗಳಿಸಿದ ಯಾವುದೇ ಆದಾಯದ ಮೇಲೆ ನೀವು ವಾಸಿಸುವ ದೇಶ ಅಥವಾ ಪ್ರದೇಶಕ್ಕೆ ತೆರಿಗೆಗಳನ್ನು ಪಾವತಿಸಲು ನೀವು ಬಾಧ್ಯಸ್ಥಿಕೆಯನ್ನು ಹೊಂದಿರಬಹುದು ಎಂಬುದನ್ನು ನೆನಪಿನಲ್ಲಿಡಿ. ವಿವರವಾದ ಮಾರ್ಗದರ್ಶನಕ್ಕಾಗಿ ನಿಮ್ಮ ಸ್ಥಳೀಯ ತೆರಿಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ.

ನಾನು ಪಾವತಿಯನ್ನು ಹೇಗೆ ಪಡೆಯಬಹುದು?
YouTube ನಲ್ಲಿ ಪಾವತಿ ಪಡೆಯಲು, ನೀವು YouTube ಪಾಲುದಾರ ಕಾರ್ಯಕ್ರಮದ ಸದಸ್ಯರಾಗಬೇಕು. ನೀವು ಮೊದಲ ಬಾರಿಗೆ ಹಾಗೆ ಮಾಡುತ್ತಿದ್ದರೆ, ಹೊಸ YouTube ಗಾಗಿ AdSense ಖಾತೆಯನ್ನು ರಚಿಸಲು ನಿಮಗೆ ಮಾರ್ಗದರ್ಶನ ನೀಡಲಾಗುತ್ತದೆ.

YouTube ಗಾಗಿ AdSense

ನಿಮ್ಮ YouTube ಗಳಿಕೆಗಳ ಪಾವತಿಯ ಪ್ರಾಥಮಿಕ ವಿಧಾನವು YouTube ಗಾಗಿ AdSense ಮೂಲಕ ಸಂಭವಿಸುತ್ತದೆ. YouTube ಗಾಗಿ AdSense ಎಂಬುದು Google ನ ಕಾರ್ಯಕ್ರಮವಾಗಿದ್ದು, ಮಾನಿಟೈಸ್ ಮಾಡುವ YouTube ರಚನೆಕಾರರು ಇಲ್ಲಿ ಹಣ ಗಳಿಸಬಹುದು ಮತ್ತು ಪಾವತಿ ಪಡೆಯಬಹುದು. 

ಉಪಯುಕ್ತ ಸಂಪನ್ಮೂಲಗಳು

ಬಹು-ಚಾನಲ್ ನೆಟ್‌ವರ್ಕ್ (MCN)

ಬಹು-ಚಾನಲ್ ನೆಟ್‌ವರ್ಕ್‌ಗಳ (MCN) ಜೊತೆಗೆ ಪಾಲುದಾರಿಕೆ ಹೊಂದಿರುವ ಅಫಿಲಿಯೇಟ್ ಚಾನಲ್‌ಗಳಿಗೆ ಪಾವತಿಗಳನ್ನು YouTube ನಿಂದ ಮಾಡಲಾಗುವುದಿಲ್ಲ, ಬದಲಿಗೆ MCN ನೇರವಾಗಿ ಅದರ ಅಫಿಲಿಯೇಟ್‌ಗಳಿಗೆ ಪಾವತಿ ಮಾಡುತ್ತದೆ. YouTube, MCN ಗೆ ಪಾವತಿಯನ್ನು ನೀಡುತ್ತದೆ ಮತ್ತು ಅವರು ತಮ್ಮ ಅಫಿಲಿಯೇಟ್‌ಗಳಿಗೆ ಪಾವತಿ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಪಾವತಿ ಟೈಮ್‌ಲೈನ್ ಮಾನಿಟೈಸ್ ಮಾಡುವ ಇತರ ಎಲ್ಲಾ ಚಾನಲ್‌ಗಳಂತೆಯೇ ಇರುತ್ತದೆ (ಪಾವತಿ ಟೈಮ್‌ಲೈನ್‌ಗಳನ್ನು ನೋಡಿ). ತಮ್ಮ ಅಫಿಲಿಯೇಟ್‌ಗಳಿಗೆ ಪಾವತಿಗಳನ್ನು ನಿರ್ಧರಿಸುವಾಗ, ಪ್ರತಿ MCN ತಮ್ಮ ಸಂಬಂಧಿತ ಅಫಿಲಿಯೇಟ್‌ಗಳಿಗೆ, ಯಾವುದಾದರೂ ಅನ್ವಯಿಸಿದರೆ, ವಿತ್‌ಹೋಲ್ಡಿಂಗ್ ತೆರಿಗೆಯನ್ನು ಲೆಕ್ಕಾಚಾರ ಮಾಡಲು ಅನುಮತಿಸುವ ವರದಿಗೆ ಆ್ಯಕ್ಸೆಸ್ ಹೊಂದಿರುತ್ತಾರೆ.

Shopping ಪಾವತಿಗಳು

ನಿಮ್ಮ ಚಾನಲ್‌ನ ಸ್ಟೋರ್‌ನಲ್ಲಿನ ಮಾರಾಟಗಳಿಂದ ಪಾವತಿ ಪಡೆಯಲು, ನಿಮ್ಮ ಅಧಿಕೃತ ವ್ಯಾಪಾರದ ವಸ್ತುಗಳ ರಿಟೇಲರ್ ಅಥವಾ ಪ್ಲ್ಯಾಟ್‌ಫಾರ್ಮ್‌ನಿಂದ ನೀವು ನೇರವಾಗಿ ಪಾವತಿಗಳನ್ನು ಪಡೆಯುತ್ತೀರಿ. YouTube ನಲ್ಲಿ Shopping ಕುರಿತು ಇನ್ನಷ್ಟು ತಿಳಿಯಿರಿ. YouTube Shopping ಅಫಿಲಿಯೇಟ್ ಪ್ರೋಗ್ರಾಂ ಮೂಲಕ, ವೀಕ್ಷಕರು ನೇರ ಲಿಂಕ್ ಮೂಲಕ ತಮ್ಮ ಕಂಟೆಂಟ್‌ನಲ್ಲಿ ಫೀಚರ್ ಮಾಡಿರುವ ಥರ್ಡ್ ಪಾರ್ಟಿಯ ಉತ್ಪನ್ನಗಳನ್ನು ಖರೀದಿಸಿದಾಗ ಅರ್ಹ ರಚನೆಕಾರರು ಕಮಿಷನ್ ಗಳಿಸಬಹುದು. 
ನಾನು ಯಾವಾಗ ಪಾವತಿಯನ್ನು ಪಡೆಯಬಹುದು?

ಪಾವತಿಯ ಟೈಮ್‌ಲೈನ್‌ಗಳು

ಹಿಂದಿನ ತಿಂಗಳಿಗಾಗಿ ಅಂತಿಮಗೊಳಿಸಿದ YouTube ಗಳಿಕೆಗಳನ್ನು ಪ್ರಸ್ತುತ ತಿಂಗಳ 7ನೇ ಮತ್ತು 12ನೇ ತಾರೀಖಿನ ನಡುವೆ YouTube ಗಾಗಿ AdSense ನಲ್ಲಿನ ನಿಮ್ಮ YouTube ಪಾವತಿ ಖಾತೆಯ ಬ್ಯಾಲೆನ್ಸ್‌ಗೆ ಸೇರಿಸಲಾಗುತ್ತದೆ. ಉದಾಹರಣೆಗೆ, ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದರೆ ಮತ್ತು ಜೂನ್‌ನಲ್ಲಿ ನೀವು $100 ಗಳಿಸಿದ್ದರೆ, ಜುಲೈ 7 ರಿಂದ 12ನೇ ತಾರೀಖಿನ ನಡುವೆ ಈ ಬ್ಯಾಲೆನ್ಸ್ ಅನ್ನು ನೀವು ನೋಡುತ್ತೀರಿ.
ನಿಮ್ಮ ಒಟ್ಟು ಬ್ಯಾಲೆನ್ಸ್ ಪಾವತಿಯ ಮಿತಿಯನ್ನು ತಲುಪಿದ್ದರೆ ಮತ್ತು ನೀವು ಯಾವುದೇ ಪಾವತಿ ತಡೆಹಿಡಿಯುವಿಕೆಗಳನ್ನು ಹೊಂದಿಲ್ಲದಿದ್ದರೆ, ಪ್ರಸ್ತುತ ತಿಂಗಳ 21ನೇ ಮತ್ತು 26ನೇ ತಾರೀಖಿನೊಳಗೆ ಗಳಿಕೆಗಳನ್ನು ಪಾವತಿಸಲಾಗುತ್ತದೆ. ಈ ಸಮಯದಲ್ಲಿ ನೀವು ಅನ್ವಯವಾಗುವ ಯಾವುದೇ ತೆರಿಗೆ ಕಡಿತಗಳನ್ನು ಸಹ ನೋಡಬಹುದು. 
ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಕೆಳಗಿನ ಮಾನದಂಡಗಳನ್ನು ಪೂರೈಸಿದಾಗ ನಿಮಗೆ ಪಾವತಿಸಲಾಗುತ್ತದೆ:
YouTube ಗಾಗಿ AdSense ಪಾವತಿ ಟೈಮ್‌ಲೈನ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13305493224043610966
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false