YouTube Giving FAQ ಗಳು

YouTube Giving, ರಚನೆಕಾರರಿಗೆ ಕಾಳಜಿಯಿರುವ ಧರ್ಮಾರ್ಥ ಉದ್ದೇಶಗಳನ್ನು ಬೆಂಬಲಿಸಲು ಅವರಿಗೆ ಅವಕಾಶ ನೀಡುತ್ತದೆ. ಅರ್ಹ ಚಾನಲ್‌ಗಳು ತಮ್ಮ ವೀಡಿಯೊಗಳಲ್ಲಿ ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿ ದೇಣಿಗೆ ಬಟನ್ ಅನ್ನು ಸೇರಿಸುವ ಮೂಲಕ ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹ ಮಾಡಬಹುದು. ವೀಕ್ಷಕರು ವೀಡಿಯೊದ ವೀಕ್ಷಣೆ ಪುಟ ಅಥವಾ ಲೈವ್ ಚಾಟ್‌ನಲ್ಲಿ ನೇರವಾಗಿ ದೇಣಿಗೆ ನೀಡಬಹುದು.

ರಚನೆಕಾರರು ಮತ್ತು ನಿಧಿಸಂಗ್ರಹದ ಕುರಿತು FAQ ಗಳು

YouTube Giving ಗಾಗಿ ನಿಧಿಸಂಗ್ರಹ ಮಾಡಲು ಯಾರು ಅರ್ಹರಾಗಿದ್ದಾರೆ?

ದೇಣಿಗೆಯ ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಲು, ನಿಮ್ಮ ಚಾನಲ್ ಈ ಅವಶ್ಯಕತೆಗಳನ್ನು ಪೂರೈಸಬೇಕು:

ಗಮನಿಸಿ: ಮೇಲೆ ಕೊಡಲಾದ ಅರ್ಹತೆಯ ಮಾನದಂಡದ ಹೊರಗಿರುವ ಕೆಲವು ಚಾನಲ್‌ಗಳಲ್ಲಿ ನೀವು ನಿಧಿಸಂಗ್ರಹವನ್ನು ಕಾಣಬಹುದು. ಭವಿಷ್ಯದಲ್ಲಿ, YouTube Giving ಅನ್ನು ಇನ್ನೂ ವ್ಯಾಪಕವಾಗಿ ಲಭ್ಯಗೊಳಿಸಲು ನಾವು ಯೋಜಿಸುತ್ತಿದ್ದೇವೆ.

ಯಾವ ದೇಶಗಳು/ಪ್ರದೇಶಗಳು YouTube Giving ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಬಹುದು?

ನೀವು ಈ ಕೆಳಗಿನ ಯಾವುದೇ ದೇಶ/ಪ್ರದೇಶದಲ್ಲಿದ್ದರೆ, ನೀವು YouTube ಔದಾರ್ಯ ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಬಹುದು.

  • ಅರ್ಜೆಂಟೀನಾ
  • ಆಸ್ಟ್ರಿಯಾ
  • ಬೆಲ್ಜಿಯಂ
  • ಬೊಲಿವಿಯಾ
  • ಕೆನಡಾ
  • ಕೊಲಂಬಿಯಾ
  • ಕ್ರೋಯೇಶಿಯಾ
  • ಎಸ್ಟೋನಿಯಾ
  • ಫ್ರಾನ್ಸ್
  • ಜರ್ಮನಿ
  • ಘಾನಾ
  • ಹಾಂಗ್‌ಕಾಂಗ್
  • ಐಸ್‌ಲ್ಯಾಂಡ್
  • ಇಂಡೋನೇಷ್ಯಾ
  • ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಕುವೈತ್
  • ಲಾಟ್ವಿಯಾ
  • ಲಿಥುವೇನಿಯಾ
  • ಲಕ್ಸೆಂಬರ್ಗ್
  • ಮಲೇಶಿಯಾ
  • ಮೆಕ್ಸಿಕೊ
  • ಮಾಂಟೆನಿಗ್ರೊ
  • ನೆದರ್‌ಲ್ಯಾಂಡ್ಸ್
  • ನ್ಯೂಜಿಲ್ಯಾಂಡ್
  • ನಾರ್ವೇ
  • ಪೆರು
  • ಫಿಲಿಫೈನ್ಸ್
  • ಪೋಲ್ಯಾಂಡ್
  • ಪ್ಯುರ್ಟೋ ರಿಕೊ
  • ರೊಮೇನಿಯಾ
  • ಸ್ಲೋವಾಕಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ಥಾಯ್ಲೆಂಡ್
  • ಟರ್ಕಿ
  • ಯುನೈಟೆಡ್ ಕಿಂಗ್‌ಡಮ್
  • ಯುಎಸ್‌ಎ

ನಾನು YouTube Giving ಗೆ ಆ್ಯಕ್ಸೆಸ್ ಹೊಂದಿದ್ದೇನೆ ಎಂಬುದನ್ನು ಕಂಡುಕೊಂಡಿದ್ದೇನೆ. ನಾನು ಅದನ್ನು ಹೇಗೆ ಸೆಟ್ ಅಪ್ ಮಾಡಬಹುದು?

ನಾನು ನಿಧಿಸಂಗ್ರಹವನ್ನು ರಚಿಸಿದ ಬಳಿಕ ದೇಣಿಗೆ ಬಟನ್ ಕಾಣಿಸದಿದ್ದರೆ ನಾನೇನು ಮಾಡಬೇಕು?

ನಿಮ್ಮ ನಿಧಿಸಂಗ್ರಹದಲ್ಲಿ ದೇಣಿಗೆ ಬಟನ್ ಕಾಣಿಸಿಕೊಳ್ಳದಿರಲು ಕೆಲವು ಕಾರಣಗಳು ಹೀಗಿರಬಹುದು:
  • ನೀವು YouTube Giving ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ನಿಧಿಸಂಗ್ರಹವು ಪ್ರಾರಂಭ ದಿನಾಂಕವನ್ನು ಹೊಂದಿದ್ದರೆ, ನಿಧಿಸಂಗ್ರಹ ಪ್ರಾರಂಭ ದಿನಾಂಕದ ನಂತರ ನಿಮ್ಮ ವೀಕ್ಷಣೆ ಪುಟದಲ್ಲಿ ದೇಣಿಗೆ ಬಟನ್ ಕಾಣಿಸಿಕೊಳ್ಳುತ್ತದೆ.
  • ನೀವು ಲೈವ್ ಸ್ಟ್ರೀಮ್‌ನಲ್ಲಿ ನಿಧಿಸಂಗ್ರಹ ಮಾಡುತ್ತಿದ್ದರೆ ಮತ್ತು ಲೈವ್ ಚಾಟ್ ಅನ್ನು ಆನ್ ಮಾಡಿದ್ದರೆ, ಮೊಬೈಲ್‌ನಲ್ಲಿ ಚಾಟ್‌ನಲ್ಲಿ ದೇಣಿಗೆ ಬಟನ್ ಅನ್ನು ನೋಡುವಿರಿ. ಲೈವ್ ಚಾಟ್ ಅನ್ನು ನೋಡಲು ಮೊಬೈಲ್ ಸಾಧನಗಳು ಪೋರ್ಟ್ರೇಟ್ ಮೋಡ್‌ನಲ್ಲಿ ಇರಬೇಕು. ಲೈವ್ ಚಾಟ್ ದೇಣಿಗೆಗಳು ಕುರಿತು ಇನ್ನಷ್ಟು ತಿಳಿಯಿರಿ.
  • ನಿಮ್ಮ ವೀಡಿಯೊ ಅಥವಾ ಚಾನಲ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂಬುದಾಗಿ ನೀವು ಸೆಟ್ ಮಾಡಿದರೆ, ದೇಣಿಗೆ ಬಟನ್ ಅನ್ನು ತೆಗೆದುಹಾಕಲಾಗುತ್ತದೆ. 

ಸಮುದಾಯ ನಿಧಿಸಂಗ್ರಹಗಳು ಎಂದರೇನು?

ಒಂದೇ ಉದ್ದೇಶಕ್ಕಾಗಿ ನಿಧಿಗಳನ್ನು ಸಂಗ್ರಹಿಸಲು ನೀವು ಇತರ ರಚನೆಕಾರರೊಂದಿಗೆ ಸಹಯೋಗದಲ್ಲಿ ಕೆಲಸ ಮಾಡಲು ಸಮುದಾಯ ನಿಧಿಸಂಗ್ರಹಗಳು ನಿಮಗೆ ಅವಕಾಶ ನೀಡುತ್ತವೆ. ಸಮುದಾಯ ನಿಧಿಸಂಗ್ರಹವನ್ನು ರಚಿಸುವುದು ಅಥವಾ ಸೇರಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

Super Chat for Good ಎಲ್ಲಿ ಹೋಯಿತು?

Super Chat for Good ಅನ್ನು ಇದೀಗ ಲೈವ್ ಚಾಟ್ ದೇಣಿಗೆಗಳು ಎಂದು ಕರೆಯಲಾಗುತ್ತಿದೆ. ರಚನೆಕಾರರು ಈಗಲೂ ತಮ್ಮ ಲೈವ್ ಸ್ಟ್ರೀಮ್‌ಗಳಲ್ಲಿ ನಿಧಿಸಂಗ್ರಹಗಳನ್ನು ಹೋಸ್ಟ್ ಮಾಡಬಹುದು ಮತ್ತು ವೀಕ್ಷಕರು ಈಗಲೂ ಚಾಟ್ ವಿಂಡೋದಿಂದ ನೇರವಾಗಿ ದೇಣಿಗೆ ನೀಡಬಹುದು. ಗೊಂದಲವನ್ನು ತಪ್ಪಿಸುವುದಕ್ಕಾಗಿ, ದೇಣಿಗೆಗಳಿರುವ ಲೈವ್ ಸ್ಟ್ರೀಮ್‌ಗಳಲ್ಲಿ ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್ ಅನ್ನು ಆನ್ ಮಾಡಲಾಗುತ್ತದೆ. ಲೈವ್ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಕರ ಚಟುವಟಿಕೆ ವಿಜೆಟ್‌ನ ಮೂಲಕ ನೀವು ವೀಕ್ಷಕರ ದೇಣಿಗೆಗಳ ಮೇಲೆ ಗಮನವಿರಿಸಬಹುದು.
ಲೈವ್ ಚಾಟ್ ದೇಣಿಗೆಗಳನ್ನು ಆನ್ ಮಾಡಲು, ನಿಮ್ಮ ನಿಗದಿತ ಲೈವ್ ಸ್ಟ್ರೀಮ್ ಅನ್ನು ನಿಮ್ಮ ನಿಧಿಸಂಗ್ರಹದಲ್ಲಿ ಸೇರಿಸಿ. YouTube Giving ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಲೈವ್ ಚಾಟ್ ಅನ್ನು ಹೊಂದಿರುವ ಲೈವ್ ಸ್ಟ್ರೀಮ್‌ಗಳು ಚಾಟ್‌ನಲ್ಲಿ ದೇಣಿಗೆ ಐಕಾನ್ ಅನ್ನು ಹೊಂದಿರುತ್ತವೆ. ಲೈವ್ ಚಾಟ್ ಅನ್ನು ಹೊಂದಿರದ ಲೈವ್ ಸ್ಟ್ರೀಮ್‌ಗಳು, ಸ್ಟ್ರೀಮ್‌ನ ಪಕ್ಕದಲ್ಲಿ ಅಥವಾ ಕೆಳಗೆ ದೇಣಿಗೆ ಬಟನ್ ಅನ್ನು ಹೊಂದಿರುತ್ತವೆ.
ದೇಣಿಗೆಗಳಿರುವ ವೀಡಿಯೊಗಳಲ್ಲಿ ಸೂಪರ್ ಥ್ಯಾಂಕ್ಸ್ ಲಭ್ಯವಿರುವುದಿಲ್ಲ.

ನಿಧಿಸಂಗ್ರಹವನ್ನು ಹೊಂದಿರುವ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳಲ್ಲಿ ನಾನು ಈಗಲೂ ಮಾನಿಟೈಸ್ ಮಾಡಬಹುದೇ?

ನಿಮ್ಮ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿ ನೀವು ನಿಧಿಸಂಗ್ರಹವನ್ನು ಸೇರಿಸಿದಾಗ ಆ್ಯಡ್‌ಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಗೊಂದಲವನ್ನು ನಿವಾರಿಸುವುದಕ್ಕಾಗಿ, ಲೈವ್ ಚಾಟ್ ದೇಣಿಗೆಗಳನ್ನು ಹೊಂದಿರುವ ಲೈವ್ ಸ್ಟ್ರೀಮ್‌ಗಳಲ್ಲಿ ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್ ಲಭ್ಯವಿರುವುದಿಲ್ಲ. ರಚನೆಕಾರರು ದೇಣಿಗೆ ಬಟನ್‌ನ ಮೂಲಕ ಸದಸ್ಯರಿಗೆ-ಮಾತ್ರ ಮೀಸಲಾದ ಲೈವ್ ಚಾಟ್ ಅನ್ನು ಹೋಸ್ಟ್ ಮಾಡುವಂತಿಲ್ಲ. ದೇಣಿಗೆಗಳಿರುವ ವೀಡಿಯೊಗಳಲ್ಲಿ ಸೂಪರ್ ಥ್ಯಾಂಕ್ಸ್ ಲಭ್ಯವಿರುವುದಿಲ್ಲ.

ಲಾಭರಹಿತ ಸಂಸ್ಥೆಗಳು ದೇಣಿಗೆಗಳನ್ನು ಹೇಗೆ ಪಡೆಯುತ್ತವೆ?

Google ನ ವಿನಂತಿಯ ಮೇರೆಗೆ ದೇಣಿಗೆಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು Network for Good ನೊಂದಿಗೆ Google ಪಾಲುದಾರಿಕೆ ಹೊಂದಿದೆ. ನಿಮ್ಮ ದೇಣಿಗೆಯ 100% ಲಾಭರಹಿತ ಸಂಸ್ಥೆಯನ್ನು ತಲುಪುತ್ತದೆ ಮತ್ತು ಪ್ರಕ್ರಿಯೆ ಶುಲ್ಕವನ್ನು YouTube ಪಾವತಿಸುತ್ತದೆ. ಯು.ಎಸ್ IRS ನ ಅವಶ್ಯಕತೆಯ ಪ್ರಕಾರ, ದೇಣಿಗೆಗಳನ್ನು ಸಂಗ್ರಹಿಸಿದ ನಂತರ Network for Good, ದೇಣಿಗೆಗಳ ಮೇಲೆ ವಿಶೇಷ ಕಾನೂನು ನಿಯಂತ್ರಣವನ್ನು ಹೊಂದಿರುತ್ತದೆ. YouTube ರಚನೆಕಾರರ ಲಾಭರಹಿತ ಸಂಸ್ಥೆಗೆ ನಿಧಿಗಳನ್ನು ವಿತರಿಸಲು Network for Good ಗೆ ಸಾಧ್ಯವಾಗದಿದ್ದರೆ, Network for Good ಆ ನಿಧಿಗಳನ್ನು ಬೇರೊಂದು, ಅರ್ಹ ಯು.ಎಸ್ ಲಾಭರಹಿತ ಸಂಸ್ಥೆಗೆ ವಿತರಿಸುತ್ತದೆ. Network for Good ವಿತರಿಸುವಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ದೇಣಿಗೆಯನ್ನು ಪಡೆಯಲು ನಿಯೋಜಿತವಾದ ಲಾಭರಹಿತ ಸಂಸ್ಥೆಯು ಅನರ್ಹವಾದರೆ ಏನಾಗುತ್ತದೆ?

Google ನ ದಾನಿಗಳ ಮೂಲಕ ಪಡೆದ ನಿಧಿಯ ಪಾಲುದಾರರಾಗಿರುವ Network for Good, ಯಾವುದೇ ಕಾರಣಕ್ಕಾಗಿ, ಒಂದು ಪ್ರಾಜೆಕ್ಟ್‌ಗಾಗಿ ಉದ್ದೇಶಿತ ಲಾಭರಹಿತ ಸಂಸ್ಥೆಗೆ ನಿಧಿಗಳನ್ನು ವಿತರಿಸಲು ಸಾಧ್ಯವಾಗದಿದ್ದರೆ (ಲಾಭರಹಿತ ಸಂಸ್ಥೆಯು ಮಾನ್ಯವಾದ ಯುನೈಟೆಡ್ ಸ್ಟೇಟ್ಸ್ 501(c)(3) ಸಂಸ್ಥೆಯಾಗಿಲ್ಲ ಎಂಬುದನ್ನು ಒಳಗೊಂಡು), ಅರ್ಹವಾದ ಪರ್ಯಾಯ ಲಾಭರಹಿತ ಸಂಸ್ಥೆಯನ್ನು ಆಯ್ಕೆ ಮಾಡುವುದಕ್ಕಾಗಿ Google, Network for Good ನೊಂದಿಗೆ ಕೆಲಸ ಮಾಡುತ್ತದೆ.
ನನ್ನ ಲೈವ್ ಚಾಟ್‌ನಲ್ಲಿ ನಾನು ದೇಣಿಗೆಗಳನ್ನು ಹೇಗೆ ನೋಡಬಹುದು?
ಚಾಟ್ ವಿಂಡೋದಲ್ಲಿ ದೇಣಿಗೆಗಳು ಕಾಣಿಸಿಕೊಳ್ಳುವುದನ್ನು ನೀವು ನೋಡುವಿರಿ. ಲೈವ್ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಕರ ಚಟುವಟಿಕೆ ವಿಜೆಟ್ ಅನ್ನು ಬಳಸಿಕೊಂಡು ಸಹ ನೀವು ನೈಜ ಸಮಯದಲ್ಲಿ ಲೈವ್ ಚಾಟ್ ದೇಣಿಗೆಗಳ ಮೇಲೆ ಗಮನವಿರಿಸಬಹುದು.

ಒಟ್ಟು ಮೊತ್ತ ಮತ್ತು ಪ್ರಗತಿ ಪಟ್ಟಿ ಏನನ್ನು ಪ್ರತಿನಿಧಿಸುತ್ತವೆ?

ಒಟ್ಟು ಮೊತ್ತವು ಆ ನಿಧಿಸಂಗ್ರಹಕ್ಕಾಗಿ ಎಲ್ಲಾ ಚಾನಲ್‌ಗಳಿಂದ ಮತ್ತು ನಿಧಿಸಂಗ್ರಹದಲ್ಲಿ ಭಾಗವಹಿಸುತ್ತಿರುವ ವೀಡಿಯೊಗಳಿಂದ ಸಂಗ್ರಹಿಸಲಾದ ಒಟ್ಟು ನಿಧಿಯನ್ನು ಪ್ರತಿನಿಧಿಸುತ್ತದೆ. ದೇಣಿಗೆ ಬಟನ್‌ನ ಅಡಿಯಲ್ಲಿ ನೀವು ಒಟ್ಟು ಮೊತ್ತ ಅಥವಾ ಪ್ರಗತಿ ಪಟ್ಟಿಯನ್ನು ಕಾಣಬಹುದು.

ನನ್ನ ನಿಧಿಸಂಗ್ರಹದ ಕುರಿತಾದ ವಿಶ್ಲೇಷಣೆಯನ್ನು ನಾನು ಎಲ್ಲಿ ಕಾಣಬಹುದು?

ನಿಮ್ಮ ನಿಧಿಸಂಗ್ರಹದ ಕುರಿತು ವಿಶ್ಲೇಷಣೆಯನ್ನು ಹುಡುಕಲು:

  1. ಕಂಪ್ಯೂಟರ್‌ನಲ್ಲಿ YouTube ಗೆ ಸೈನ್ ಇನ್ ಮಾಡಿ.
  2. YouTube Studio ಗೆ ಹೋಗಿ.
  3. ಗಳಿಸಿ ಎಂಬಲ್ಲಿಗೆ ಹೋಗಿ.
  4. ದೇಣಿಗೆ ಆಯ್ಕೆ ಮಾಡಿ.
  5. “ಒಟ್ಟು ಸಂಗ್ರಹಿಸಿರುವುದು” ಎಂಬುದರ ಅಡಿಯಲ್ಲಿ, ನೀವು ಸೇರಿಕೊಂಡಿರುವ ಅಥವಾ ರಚಿಸಿರುವ ಅಭಿಯಾನಗಳ ಪಕ್ಕದಲ್ಲಿ ನಿಧಿಸಂಗ್ರಹದ ಕುರಿತಾದ ಪ್ರಾಥಮಿಕ ಡೇಟಾವನ್ನು ನೋಡುವಿರಿ.
  6. ನಿಮ್ಮ ನಿಧಿಸಂಗ್ರಹದ ಕುರಿತು ಹೆಚ್ಚಿನ ವಿವರಗಳನ್ನು ನೋಡಲು, ಸಂಗ್ರಹಿಸಿದ ಮೊತ್ತದ ಮೇಲೆ ನಿಮ್ಮ ಮೌಸ್‌ನೊಂದಿಗೆ ಹೋವರ್ ಮಾಡಿ.

ಲಾಭರಹಿತ ಸಂಸ್ಥೆಗಳ ಕುರಿತಾದ FAQ ಗಳು

YouTube Giving ಮೂಲಕ ನಿಧಿಸಂಗ್ರಹ ಮಾಡಲು ಯಾವ ಲಾಭರಹಿತ ಸಂಸ್ಥೆಗಳು ಅರ್ಹವಾಗಿವೆ?
ಲಾಭರಹಿತ ಸಂಸ್ಥೆಯು YouTube Giving ನಿಧಿಸಂಗ್ರಹದಿಂದ ಹಣ ಪಡೆಯಲು ಅರ್ಹವಾಗಬೇಕಾದರೆ:
  • ರಚನೆಕಾರರು ಅದನ್ನು ವಿನಂತಿಸಿರಬೇಕು.
  • ಅದು ಯು.ಎಸ್-ನೋಂದಾಯಿತ 501(c)(3) ಸಾರ್ವಜನಿಕ ದತ್ತಿ ಸಂಸ್ಥೆಯಾಗಿರಬೇಕು.
    • ಗಮನಿಸಿ: ಸದ್ಯಕ್ಕೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಲಾಭರಹಿತ ಸಂಸ್ಥೆಗಳು ಮಾತ್ರ ಅರ್ಹವಾಗಿದ್ದರೂ, ಅನೇಕ ಲಾಭರಹಿತ ಸಂಸ್ಥೆಗಳು ಯು.ಎಸ್ ಸಹಭಾಗಿತ್ವಗಳು ಅಥವಾ ಸಹೋದರ-ಸಂಸ್ಥೆಗಳನ್ನು ಹೊಂದಿವೆ. YouTube Giving ಸೆಟ್ ಅಪ್ ಪರಿಕರದಲ್ಲಿ, ಲಭ್ಯವಿರುವ ಲಾಭರಹಿತ ಸಂಸ್ಥೆಗಳ ಸಂಪೂರ್ಣ ಪಟ್ಟಿಯನ್ನು ನೀವು ನೋಡಬಹುದು.
  • GuideStar ಮೂಲಕ ಆನ್‌ಲೈನ್ ನಿಧಿಸಂಗ್ರಹವನ್ನು ಆಯ್ಕೆ ಮಾಡಿಕೊಂಡಿರಬೇಕು.
  • YouTube ನಲ್ಲಿ ಮತ್ತು ಅದರ ಹೊರಗೆ YouTube ನ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು. YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಸಹ ಈ ಅವಶ್ಯಕತೆಯು ಒಳಗೊಂಡಿದೆ.
ಗಮನಿಸಿ: ಪ್ರಸ್ತುತ, ಖಾಸಗಿ ಫೌಂಡೇಶನ್‌ಗಳಿಗೆ ಬೆಂಬಲವಿಲ್ಲ. 

ವಿನಂತಿ ಪರಿಕರದಲ್ಲಿ, ನಾನು ವಿನಂತಿಸಲು ಬಯಸುವ ಲಾಭರಹಿತ ಸಂಸ್ಥೆ ಕಾಣಿಸದಿದ್ದರೆ ಏನು ಮಾಡಬೇಕು?

ನೀವು ಹುಡುಕುತ್ತಿರುವ ಲಾಭರಹಿತ ಸಂಸ್ಥೆಯು ವಿನಂತಿ ಪರಿಕರದಲ್ಲಿ ಕಾಣಿಸದಿರಲು ಕಾರಣವಾಗಿರಬಹುದಾದ ಕೆಲವು ಸಂಗತಿಗಳನ್ನು ಕೆಳಗೆ ಕೊಡಲಾಗಿದೆ:
  • ಲಾಭರಹಿತ ಸಂಸ್ಥೆಯು Google for Nonprofits ನ ಭಾಗವಾಗಿಲ್ಲ. ಲಾಭರಹಿತ ಸಂಸ್ಥೆಯು Google for Nonprofits ಖಾತೆಯನ್ನು ವಿನಂತಿಸಿಕೊಳ್ಳಬಹುದು.
  • ಲಾಭರಹಿತ ಸಂಸ್ಥೆಯು Guidestar ನೋಂದಾಯಿತ ಯು.ಎಸ್-ಮೂಲಕ 501(c)(3) ಲಾಭರಹಿತ ಸಂಸ್ಥೆಯಾಗಿಲ್ಲ. guidestar.org ನಲ್ಲಿ ಲಾಭರಹಿತ ಸಂಸ್ಥೆಯನ್ನು ಹುಡುಕಿ, ಅವರು ಅಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಲಾಭರಹಿತ ಸಂಸ್ಥೆಯು ಆನ್‌ಲೈನ್ ನಿಧಿಸಂಗ್ರಹ ಆಯ್ಕೆಯಿಂದ ಹೊರಗುಳಿದಿದೆ. ದಾನಿಗಳು ತಮಗಾಗಿ ಆನ್‌ಲೈನ್‌ನಲ್ಲಿ ನಿಧಿಸಂಗ್ರಹ ಮಾಡಲು ಲಾಭರಹಿತ ಸಂಸ್ಥೆಗಳು ಸಮ್ಮತಿಸಬೇಕು. YouTube ನಲ್ಲಿ ಲಾಭರಹಿತ ಸಂಸ್ಥೆಯಾಗಿ ಹಣ ಸಂಗ್ರಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

ನಾನು ಬೆಂಬಲಿಸಲು ಬಯಸುವ ಲಾಭರಹಿತ ಸಂಸ್ಥೆಯೊಂದಕ್ಕಾಗಿ ನಾನು ವಿನಂತಿಯನ್ನು ಸಲ್ಲಿಸಿದ್ದೇನೆ. ಅದನ್ನು ಸೇರಿಸಲು ಎಷ್ಟು ಸಮಯ ಬೇಕಾಗುತ್ತದೆ?

ನಿಮ್ಮ ಅರ್ಹ ಲಾಭರಹಿತ ಸಂಸ್ಥೆಯನ್ನು, ನೀವು ಸಲ್ಲಿಸಿದ ಬಳಿಕ, ನಿಮ್ಮ ವಿನಂತಿಯ ಸ್ಥಿತಿಯನ್ನು ತಿಳಿಸುವುದಕ್ಕಾಗಿ ನಿಮಗೆ ಒಂದು ಇಮೇಲ್ ಅನ್ನು ಕಳುಹಿಸುತ್ತೇವೆ. ಕೆಲವು ವಿನಂತಿಗಳಿಗಾಗಿ 5 ವ್ಯವಹಾರದ ದಿನಗಳಷ್ಟು ಕಾಲಾವಕಾಶ ಬೇಕಾಗಬಹುದು. ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲು, ನೀವು ವಿನಂತಿಸುತ್ತಿರುವ ಲಾಭರಹಿತ ಸಂಸ್ಥೆಯು ಅರ್ಹತೆಯ ಮಾನದಂಡವನ್ನು ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಲಾಭರಹಿತ ಸಂಸ್ಥೆಗಳಿಗೆ ನಿಧಿಗಳನ್ನು ಹೇಗೆ ವಿತರಿಸಲಾಗುತ್ತದೆ?

ಲಾಭರಹಿತ ಸಂಸ್ಥೆಗಳಿಗೆ ನಿಧಿಗಳನ್ನು ವಿತರಿಸುವುದಕ್ಕಾಗಿ ನಾವು, ಯು.ಎಸ್ 501(c)(3) ಹಾಗೂ ದಾನಿಗಳ ಮೂಲಕ ಪಡೆದ ನಿಧಿಯಾಗಿರುವ Network for Good ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಸಾಮಾನ್ಯವಾಗಿ, Network for Good ಮಾಸಿಕವಾಗಿ ನಿಧಿಗಳನ್ನು ವಿತರಿಸುತ್ತದೆ. $10 ಗಿಂತ ಕಡಿಮೆ ಮೊತ್ತವನ್ನು ಸಂಗ್ರಹಿಸಿದ್ದರೆ, ನಿಧಿಗಳನ್ನು ವಾರ್ಷಿಕವಾಗಿ ವಿತರಿಸಲಾಗುವುದು. ನಿಧಿಗಳ ವಿತರಣೆ ಮತ್ತು Network for Good ಕುರಿತು ಇನ್ನಷ್ಟು ತಿಳಿಯಿರಿ.

Google for Nonprofits ಕುರಿತು ನಾನು ಇನ್ನಷ್ಟು ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬಹುದು?

Google for Nonprofits ಮತ್ತು ಪ್ರೋಗ್ರಾಂನ ಅರ್ಹತೆ ಮಾರ್ಗಸೂಚಿಗಳ ಕುರಿತು ಇನ್ನಷ್ಟು ತಿಳಿಯಿರಿ. 

YouTube ನಲ್ಲಿ ಲಾಭರಹಿತ ಸಂಸ್ಥೆಯಾಗಿ ಹಣ ಸಂಗ್ರಹಿಸುವ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು? 

ದಾನಿಗಳ ಕುರಿತು FAQ ಗಳು

ನಾನು, ವೀಡಿಯೊ ವೀಕ್ಷಣೆ ಪುಟದಲ್ಲಿ ದೇಣಿಗೆ ಬಟನ್ ಅನ್ನು ನೋಡಿದ್ದೇನೆ. ಅದು ಹೇಗೆ ಕೆಲಸ ಮಾಡುತ್ತದೆ?

ಲೈವ್ ಚಾಟ್ ದೇಣಿಗೆಗಳು ಎಂದರೇನು?

ಲೈವ್ ಚಾಟ್ ಅನ್ನು ಸಕ್ರಿಯಗೊಳಿಸಿರುವ ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್‌ನಲ್ಲಿ ರಚನೆಕಾರರು ನಿಧಿಸಂಗ್ರಹವನ್ನು ಸೇರಿಸಿದಾಗ, ಚಾಟ್‌ನಲ್ಲಿ ದೇಣಿಗೆ ಬಟನ್ ವೀಕ್ಷಕರಿಗೆ ಕಾಣಿಸಿಕೊಳ್ಳುತ್ತದೆ. ವೀಕ್ಷಕರು ಲೈವ್ ಚಾಟ್ ದೇಣಿಗೆಗಳು ಮೂಲಕ ದೇಣಿಗೆ ನೀಡಿದಾಗ, ಲೈವ್ ಚಾಟ್‌ನಲ್ಲಿ ತಮ್ಮ ದೇಣಿಗೆಗೆ ಸಂಬಂಧಿಸಿದಂತೆ ತಮ್ಮ ಹೆಸರನ್ನು ಸೇರಿಸಲು ಅವರು ಆಯ್ಕೆ ಮಾಡಬಹುದು. ಲೈವ್ ಚಾಟ್ ದೇಣಿಗೆಗಳು ಕುರಿತು ಇನ್ನಷ್ಟು ತಿಳಿಯಿರಿ.
YouTube Giving ನಿಧಿಸಂಗ್ರಹದಲ್ಲಿ ಯಾವ ದೇಶಗಳು/ಪ್ರದೇಶಗಳು ದೇಣಿಗೆ ನೀಡಬಹುದು?

ನೀವು ಈ ಕೆಳಗಿನ ದೇಶಗಳು/ಪ್ರದೇಶಗಳಲ್ಲಿದ್ದರೆ, ನೀವು ದೇಣಿಗೆಗಳನ್ನು ನೀಡಬಹುದು.

  • ಅರ್ಜೆಂಟಿನಾ
  • ಆಸ್ಟ್ರಿಯಾ
  • ಬೆಲ್ಜಿಯಂ
  • ಬೊಲಿವಿಯಾ
  • ಕೆನಡಾ
  • ಕೊಲಂಬಿಯಾ
  • ಕ್ರೋಯೇಶಿಯಾ
  • ಇಸ್ಟೋನಿಯಾ
  • ಫ್ರಾನ್ಸ್
  • ಜರ್ಮನಿ
  • ಘಾನಾ
  • ಹಾಂಗ್‌ಕಾಂಗ್
  • ಐಸ್‌ಲ್ಯಾಂಡ್
  • ಇಂಡೋನೇಷ್ಯಾ
  • ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಕೊರಿಯಾ
  • ಕುವೈತ್
  • ಲಾಟ್ವಿಯಾ
  • ಲಿಥುವೇನಿಯಾ
  • ಲಕ್ಸೆಂಬರ್ಗ್
  • ಮಲೇಶಿಯಾ
  • ಮೆಕ್ಸಿಕೊ
  • ಮಾಂಟೆನಿಗ್ರೊ
  • ನೆದರ್‌ಲ್ಯಾಂಡ್ಸ್
  • ನ್ಯೂಜಿಲ್ಯಾಂಡ್
  • ನಾರ್ವೇ
  • ಪೆರು
  • ಫಿಲಿಫೈನ್ಸ್
  • ಪೋಲ್ಯಾಂಡ್
  • ಪ್ಯುರ್ಟೋ ರಿಕೊ
  • ರೊಮೇನಿಯಾ
  • ಸ್ಲೋವಾಕಿಯಾ
  • ದಕ್ಷಿಣ ಕೊರಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ಥೈವಾನ್
  • ಥಾಯ್ಲೆಂಡ್
  • ಟರ್ಕಿ
  • ಯುನೈಟೆಡ್ ಕಿಂಗ್‌ಡಮ್
  • ಯುಎಸ್‌ಎ

ನನ್ನ ದೇಣಿಗೆಯಲ್ಲಿ ತೆರಿಗೆ ಕಡಿತ ಮಾಡಲಾಗುತ್ತದೆಯೇ?

ಸ್ಥಳವನ್ನು ಆಧರಿಸಿ ದಾನಿಯ ತೆರಿಗೆ ಮಾಹಿತಿಯನ್ನು ಇಲ್ಲಿ ನೋಡಿ.

ನನ್ನ ದೇಣಿಗೆಯಲ್ಲಿ ಎಷ್ಟು ಪಾಲು ದತ್ತಿ ಸಂಸ್ಥೆಗೆ ತಲುಪುತ್ತದೆ?

ನೀವು ದೇಣಿಗೆ ನೀಡುವ ಹಣದಲ್ಲಿ 100%, ಲಾಭರಹಿತ ಸಂಸ್ಥೆಗೆ ತಲುಪುತ್ತದೆ. YouTube, ಕ್ರೆಡಿಟ್ ಕಾರ್ಡ್ ವಹಿವಾಟಿನ ಶುಲ್ಕಗಳನ್ನು ಸಹ ಭರಿಸುತ್ತದೆ.

ನನ್ನ ದೇಣಿಗೆಗೆ ಸಂಬಂಧಿಸಿದಂತೆ ನಾನು ಮರುಪಾವತಿ ಪಡೆಯಲು ಸಾಧ್ಯವೇ?

ಲಾಭರಹಿತ ಸಂಸ್ಥೆಗಳಿಗೆ ನೀಡಲಾದ ಸ್ವ-ಇಚ್ಛೆಯ ದೇಣಿಗೆಗಳನ್ನು ಮರುಪಾವತಿಸಲಾಗುವುದಿಲ್ಲ. ಒಂದು ಪಾವತಿಯನ್ನು ಮಾಡುವಾಗ ನಿಮಗೆ ಸಮಸ್ಯೆ ಎದುರಾದರೆ, ನಮ್ಮ ಬೆಂಬಲ ತಂಡವನ್ನು ನೀವು ಸಂಪರ್ಕಿಸಬಹುದು.

ನಾನು ದೇಣಿಗೆ ನೀಡಿದಾಗ ನೀವು ಲಾಭರಹಿತ ಸಂಸ್ಥೆಗಳೊಂದಿಗೆ ಯಾವ ಮಾಹಿತಿಯನ್ನು ಹಂಚಿಕೊಳ್ಳುತ್ತೀರಿ?

ನೀವು ದೇಣಿಗೆ ನೀಡಿದಾಗ, ನಿಮ್ಮ ಸಂಪರ್ಕ ಮಾಹಿತಿಯನ್ನು ಲಾಭರಹಿತ ಸಂಸ್ಥೆ ಅಥವಾ ರಚನೆಕಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಲೈವ್ ಚಾಟ್‌ನಲ್ಲಿ ದೇಣಿಗೆ ನೀಡುವಾಗ ನೀವು “ಸಾರ್ವಜನಿಕ” ದೇಣಿಗೆಯನ್ನು ನೀಡಿದರೆ, ಲೈವ್ ಸ್ಟ್ರೀಮ್ ಅನ್ನು ಹೋಸ್ಟ್ ಮಾಡುವ ರಚನೆಕಾರರು ನಿಮ್ಮ ಖಾತೆಯ ಹೆಸರು ಮತ್ತು ದೇಣಿಗೆಯ ಮೊತ್ತವನ್ನು ನೋಡಬಲ್ಲರು. ನಿಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.
ಬಳಕೆದಾರರು, ಕಂಪನಿ ಮತ್ತು ಆಫ್‌ಸೈಟ್ ದೇಣಿಗೆಗಳು ಎಂದರೇನು?
  • ಬಳಕೆದಾರರ ದೇಣಿಗೆಗಳು: YouTube ಬಳಕೆದಾರರು ನೀಡಿದ ನಿಧಿಗಳು.
  • ಕಂಪನಿ ದೇಣಿಗೆಗಳು: ಲಾಭರಹಿತ ಸಂಸ್ಥೆಯು ದೃಢೀಕರಿಸಿದ ಹಾಗೆ, YouTube ಅಥವಾ ಇತರ ಕಂಪನಿಯು ನೀಡಿದ ನಿಧಿಗಳು.
  • ಆಫ್‌ಸೈಟ್ ದೇಣಿಗೆಗಳು: ಈ ಅಭಿಯಾನದ ಭಾಗವಾಗಿ ಸಂಘಟಕರು ಸಂಗ್ರಹಿಸಿದ ಮತ್ತು YouTube ಗೆ ಹೊರತಾದ ಸೈಟ್‌ನಲ್ಲಿ ಲಾಭರಹಿತ ಸಂಸ್ಥೆಯು ದೃಢೀಕರಿಸಿದ ನಿಧಿಗಳು.
ಕಂಪನಿ ಹೊಂದಾಣಿಕೆ ಹೇಗೆ ಕೆಲಸ ಮಾಡುತ್ತದೆ?
ಕಂಪನಿಯು ದೇಣಿಗೆಗಳಿಗೆ ಹೊಂದಿಕೆ ಮಾಡುವ ವಾಗ್ದಾನ ನೀಡಿದ್ದರೆ, YouTube ದೇಣಿಗೆ ಬಟನ್‌ನ ಮೂಲಕ ನಿಧಿಸಂಗ್ರಹಕ್ಕೆ ನೀಡಲಾದ ಪ್ರತಿ $1 ಗೆ ಅವರು $1 ದೇಣಿಗೆ ನೀಡುತ್ತಾರೆ. ಸಂಪೂರ್ಣ ಹೊಂದಿಕೆಯನ್ನು ಪೂರೈಸುವವರೆಗೆ ಅಥವಾ ಅಭಿಯಾನ ಪೂರ್ಣಗೊಳ್ಳುವವರೆಗೆ, ಇವುಗಳಲ್ಲಿ ಯಾವುದು ಮೊದಲು ಸಂಭವಿಸುತ್ತದೆಯೋ ಅಲ್ಲಿಯವರೆಗೆ ಈ ಹೊಂದಿಕೆ ಮುಂದುವರಿಯುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
900951218675163327
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false