ಟ್ಯಾಗ್ ಮಾಡಲಾದ ಉತ್ಪನ್ನಗಳಿಗೆ ಚಟುವಟಿಕೆಗಳನ್ನು ರಚಿಸಿ ಮತ್ತು ನಿರ್ವಹಿಸಿ

YouTube Shopping ನಿಮಗೆ ಮತ್ತು ನಿಮ್ಮ ವೀಕ್ಷಕರಿಗೆ ಸೂಕ್ತವಾದ ಶಾಪಿಂಗ್ ಅನುಭವವನ್ನು ರಚಿಸಲು ಅವಕಾಶ ನೀಡುತ್ತದೆ. ಉತ್ಪನ್ನದ ಟ್ಯಾಗಿಂಗ್ ಮೂಲಕ, ನಿಮ್ಮ YouTube ಚಾನಲ್‌ನಲ್ಲಿ ನಿಮ್ಮ ಉತ್ಪನ್ನಗಳನ್ನು ನೀವು ಪ್ರಚಾರ ಮಾಡಬಹುದು, ಅಥವಾ ನೀವು ಅಫಿಲಿಯೇಟ್ ಪ್ರೋಗ್ರಾಂನಲ್ಲಿ ಇದ್ದರೆ, ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳ ಕುರಿತು ಸಹ ಪ್ರಚಾರ ಮಾಡಬಹುದು. ಟ್ಯಾಗ್ ಮಾಡಲಾದ ಉತ್ಪನ್ನಗಳ ಕುರಿತು ಆಸಕ್ತಿಯನ್ನು ಹುಟ್ಟುಹಾಕಲು ಸಹಾಯ ಮಾಡಲು ಮತ್ತು ಉತ್ಪನ್ನಗಳ ಕುರಿತು ಇತ್ತೀಚಿನ ಮಾಹಿತಿ ಮತ್ತು ಡೀಲ್‌ಗಳನ್ನು ವೀಕ್ಷಕರಿಗೆ ಒದಗಿಸಲು, ನೀವು ಈ ಚಟುವಟಿಕೆಗಳನ್ನು ಬಳಸಬಹುದು:

ಪ್ರಚಾರಗಳು ಮತ್ತು ಬೆಲೆ ಕಡಿತ

ಪ್ರಚಾರಗಳು ಮತ್ತು ಬೆಲೆ ಕಡಿತ ಫೀಚರ್ ವೀಕ್ಷಕರಿಗೆ ಟ್ಯಾಗ್ ಮಾಡಲಾದ ಉತ್ಪನ್ನಗಳ ಡೀಲ್‌ಗಳನ್ನು ಹೈಲೈಟ್ ಮಾಡುತ್ತದೆ. ಉತ್ಪನ್ನ ಪಟ್ಟಿಗಳಲ್ಲಿ ಅಥವಾ ಸ್ಥಿರ ಉತ್ಪನ್ನ ಬ್ಯಾನರ್‌ಗಳಲ್ಲಿ ಪ್ರದರ್ಶಿಸಬಹುದಾದ ಮೂರು ವಿಧದ ಪ್ರಚಾರಗಳು ಮತ್ತು ಬೆಲೆ ಕಡಿತಗಳಿವೆ.

  1. ವ್ಯಾಪಾರಿ ಪ್ರಚಾರ: ಈ ಕೆಳಗಿನವುಗಳನ್ನು ಒಳಗೊಂಡಿರಬಹುದಾದ, ಆದರೆ ಇವುಗಳಿಗೆ ಸೀಮಿತವಾಗಿರದ ಡೀಲ್‌:
    1. ಉತ್ಪನ್ನದ ಮೇಲೆ ಸ್ವಯಂಚಾಲಿತವಾಗಿ ಅಥವಾ ರಿಯಾಯಿತಿ ಕೋಡ್‌ನೊಂದಿಗೆ ಅನ್ವಯಿಸಲಾಗುವ ಶೇಕಡಾವಾರು ರಿಯಾಯಿತಿ
    2. ಉತ್ಪನ್ನದ ಮೇಲೆ ಸ್ವಯಂಚಾಲಿತವಾಗಿ ಅಥವಾ ರಿಯಾಯಿತಿ ಕೋಡ್‌ನೊಂದಿಗೆ ಅನ್ವಯಿಸಲಾಗುವ ಶ್ರೇಣೀಕೃತ ಅಥವಾ ಸ್ಥಿರ ಮೊತ್ತದ ರಿಯಾಯಿತಿ
    3. "ಖರೀದಿಯೊಂದಿಗೆ ಉಡುಗೊರೆ" ಅಥವಾ "X ಅನ್ನು ಖರೀದಿಸಿ, Y ಪಡೆಯಿರಿ" ನಂತಹ ಪ್ರಮಾಣೀಕರಿಸದ ಡೀಲ್‌
  2. ಮಾರಾಟದ ಬೆಲೆಯ ಟಿಪ್ಪಣಿ: ಉತ್ಪನ್ನದ ಮೇಲೆ ರಿಯಾಯಿತಿ ಬೆಲೆ.
  3. ಬೆಲೆ ಕುಸಿತ: ಉತ್ಪನ್ನದ ಪ್ರಸ್ತುತ ಬೆಲೆಯು ಉಲ್ಲೇಖದ ಬೆಲೆಗಿಂತ ಕಡಿಮೆ ಇರುವಾಗ ತೋರಿಸುವ ಬ್ಯಾಡ್ಜ್. ಉಲ್ಲೇಖ ಬೆಲೆಯು ಕಳೆದ 30 ದಿನಗಳಲ್ಲಿ ಪಟ್ಟಿ ಮಾಡಲಾದ ಅತ್ಯಂತ ಕಡಿಮೆ ಬೆಲೆಯಾಗಿದೆ.

ರಚನೆಕಾರರು ತಮ್ಮ ಅಂಗಡಿಗಳಲ್ಲಿ ತಮ್ಮ ಉತ್ಪನ್ನದ ಬೆಲೆಯನ್ನು ನವೀಕರಿಸುವ ಮೂಲಕ "ಬೆಲೆ ಕುಸಿತ" ಬ್ಯಾಡ್ಜ್ ಅನ್ನು ಪ್ರಚೋದಿಸಬಹುದು. ರಚನೆಕಾರರು ವ್ಯಾಪಾರಿ ಪ್ರಚಾರಗಳು ಮತ್ತು ಮಾರಾಟ ಬೆಲೆಯ ಟಿಪ್ಪಣಿಗಳನ್ನು, ಈ ಕೆಳಗಿನವುಗಳನ್ನು ಬಳಸಿಕೊಂಡು ರಚಿಸಬಹುದು ಮತ್ತು ಅನ್ವಯಿಸಬಹುದು:

  1. Shopify, ಅಥವಾ
  2. Google Merchant Center (GMC) - ನೀವು ನೇರ ಆ್ಯಕ್ಸೆಸ್ ಅನ್ನು ಹೊಂದಿದ್ದರೆ ಮಾತ್ರ.

ರಿಟೇಲರ್ ಡೇಟಾವನ್ನು ಆಧರಿಸಿ ವೀಕ್ಷಕರಿಗೆ YouTube ಡೀಲ್‌ಗಳನ್ನು ತೋರಿಸುತ್ತದೆ. ಟ್ಯಾಗ್ ಮಾಡಲಾದ ಉತ್ಪನ್ನಕ್ಕೆ ಹಲವು ಡೀಲ್‌ಗಳು ಲಭ್ಯವಿದ್ದರೆ, ಲಭ್ಯವಿರುವ ಅತಿದೊಡ್ಡ ಡೀಲ್ ಅನ್ನು YouTube ತೋರಿಸುತ್ತದೆ. ಈ ದೇಶಗಳು/ಪ್ರದೇಶಗಳಲ್ಲಿ ಮೊಬೈಲ್ ಸಾಧನವನ್ನು ಬಳಸುವ ವೀಕ್ಷಕರಿಗೆ ಮಾತ್ರ ಟ್ಯಾಗ್ ಮಾಡಲಾದ ಉತ್ಪನ್ನಗಳು ಗೋಚರಿಸುತ್ತವೆ. ನಿಮ್ಮ ವೀಕ್ಷಕರು ಟ್ಯಾಗ್ ಮಾಡಲಾದ ಉತ್ಪನ್ನಗಳನ್ನು ನೋಡಲು ಸಾಧ್ಯವಾಗದಿದ್ದರೆ, ಅವರು ಮೊಬೈಲ್ ಅನ್ನು ಬಳಸುತ್ತಿದ್ದಾರೆ ಮತ್ತು ಅದು ಲಭ್ಯವಿರುವ ದೇಶ/ಪ್ರದೇಶದಲ್ಲಿ ಬಳಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉತ್ಪನ್ನಗಳು ವೀಕ್ಷಕರ ದೇಶ/ಪ್ರದೇಶಕ್ಕೆ ಸಾಗಿಸಲು ಲಭ್ಯವಿದ್ದರೆ ಮಾತ್ರ ಟ್ಯಾಗ್ ಮಾಡಲಾದ ಉತ್ಪನ್ನಗಳು ಕಾಣಿಸಿಕೊಳ್ಳುತ್ತವೆ.

ಅರ್ಹತೆ

ಪ್ರಚಾರಗಳು ಮತ್ತು ಬೆಲೆ ಕಡಿತ ಫೀಚರ್ ಅನ್ನು ಬಳಸಲು, ಡೀಲ್‌ನ ಪ್ರಕಾರವನ್ನು ಆಧರಿಸಿ ನಿಮ್ಮ ರಿಟೇಲರ್‌ ಇತರ ಅರ್ಹತಾ ಅವಶ್ಯಕತೆಗಳನ್ನು ಪೂರೈಸಬೇಕಾಗಬಹುದು. ಮಾರಾಟದ ಬೆಲೆಯ ಟಿಪ್ಪಣಿಗಳು ಮತ್ತು ಬೆಲೆ ಕಡಿತಗಳಿಗೆ ಸಂಬಂಧಿಸಿದಂತೆ ರಿಟೇಲರ್‌ಗಳಿಗೆ ಯಾವುದೇ ಇತರ ಅವಶ್ಯಕತೆಗಳಿಲ್ಲದಿದ್ದರೂ, ವ್ಯಾಪಾರಿ ಪ್ರಚಾರಗಳಿಗೆ ಸಂಬಂಧಿಸಿದಂತೆ ಅವರು ಪೂರೈಸಬೇಕಾದ ಹೆಚ್ಚುವರಿ ಮಾನದಂಡಗಳಿವೆ:

  • ವ್ಯಾಪಾರಿ ಪ್ರಚಾರಗಳು (Shopify ನಿಂದ):
    • ಸ್ವಯಂಚಾಲಿತವಾಗಿ ಅನ್ವಯಿಸುವ ಡೀಲ್‌ಗಳಿಗಾಗಿ (ಸ್ವಯಂಚಾಲಿತ ರಿಯಾಯಿತಿಗಳು): ನಿಮ್ಮ Shopify ಸ್ಟೋರ್ ಈ ಕೆಳಗಿನ ದೇಶಗಳಲ್ಲಿ/ಪ್ರದೇಶಗಳಲ್ಲಿ ಒಂದಾಗಿರಬೇಕು: AU, BR, CA, DE, ES, FR, IN, IT, JP, KR, NL, UK, ಮತ್ತು US
    • ರಿಯಾಯಿತಿ ಕೋಡ್‌ಗಳೊಂದಿಗೆ ಅನ್ವಯಿಸಲಾದ ಡೀಲ್‌ಗಳಿಗಾಗಿ: ನಿಮ್ಮ Shopify ಸ್ಟೋರ್ US ನಲ್ಲಿರಬೇಕು.
    • ಪ್ರಮಾಣೀಕರಿಸದ ಡೀಲ್‌ಗಳಿಗಾಗಿ: ಈ ರೀತಿಯ ಡೀಲ್‌ಗಳು ಇದೀಗ ಬೆಂಬಲಿತವಾಗಿಲ್ಲ.
  • ವ್ಯಾಪಾರಿ ಪ್ರಚಾರಗಳು (GMC ಯಿಂದ): ನಿಮ್ಮ ಬೆಂಬಲಿತ ರಿಟೇಲರ್‌ ಈ ಕೆಳಗಿನ ಯಾವುದಾದರೂ ಒಂದು ದೇಶ/ಪ್ರದೇಶದಲ್ಲಿ ಇರಬೇಕು: AU, BR, CA, DE, ES, FR, IN, IT, JP, NL, KR, UK, ಮತ್ತು US.

ಪ್ರಚಾರಗಳು ಮತ್ತು ಬೆಲೆ ಕಡಿತವನ್ನು ಸೆಟಪ್ ಮಾಡಿ ಮತ್ತು ನಿರ್ವಹಿಸಿ

ನೀವು ಏನನ್ನು ನೀಡಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ಡೀಲ್‌ಗಳನ್ನು ಸೆಟಪ್ ಮಾಡಲು ವಿಭಿನ್ನ ಮಾರ್ಗಗಳಿವೆ. ಡೀಲ್‌ನ ಪರಿಶೀಲನೆ ಮತ್ತು ಅನುಮೋದನೆ ಆದ ನಂತರ, ನೀವು ಉತ್ಪನ್ನವನ್ನು ಟ್ಯಾಗ್ ಮಾಡಬಹುದು.

ಸೂಚನೆ: ನೀವು ಉತ್ಪನ್ನಗಳನ್ನು ಟ್ಯಾಗ್ ಮಾಡುವಾಗ, ನೀವು ಉತ್ಪನ್ನಗಳನ್ನು ಆಯ್ಕೆಮಾಡುವ ಸಮಯದಲ್ಲಿ ಡೀಲ್‌ ಅನ್ನು ವೀಕ್ಷಿಸಲು ಸಾಧ್ಯವಿಲ್ಲ. ಆದರೆ, ಟ್ಯಾಗ್ ಮಾಡಿದ ನಂತರ ಡೀಲ್‌ ಅನ್ನು ವೀಕ್ಷಿಸಬಹುದಾಗಿದೆ.

 YouTube ಗೆ ಹಂಚಿಕೊಳ್ಳುವ ಕನಿಷ್ಠ 5 ದಿನಗಳ ಮೊದಲು ಯಾವುದೇ ಪ್ರಚಾರಗಳನ್ನು ಹೊಂದಿಸಲು ನಾವು ಶಿಫಾರಸು ಮಾಡುತ್ತೇವೆ.

ವ್ಯಾಪಾರಿ ಪ್ರಚಾರಗಳು

Shopify ಮೂಲಕ ವ್ಯಾಪಾರಿ ಪ್ರಚಾರವನ್ನು ರಚಿಸಿ ಅಥವಾ ಎಡಿಟ್ ಮಾಡಿ

ಸ್ವಯಂಚಾಲಿತ ರಿಯಾಯಿತಿ ಮೊತ್ತ ಅಥವಾ ರಿಯಾಯಿತಿ ಕೋಡ್‌ ಬಳಸಿಕೊಂಡು ನೀವು Shopify ಮೂಲಕ ವ್ಯಾಪಾರಿ ಪ್ರಚಾರಗಳನ್ನು ರಚಿಸಬಹುದು. ವೀಕ್ಷಕರು ಅರ್ಹ ವಸ್ತುಗಳನ್ನು ಖರೀದಿಸಿದಾಗ, ಚೆಕ್‌ಔಟ್‌ನಲ್ಲಿ ಸ್ವಯಂಚಾಲಿತ ರಿಯಾಯಿತಿಗಳ ಮೊತ್ತವನ್ನು ಸ್ವಯಂಚಾಲಿತವಾಗಿ ಅನ್ವಯಿಸಲಾಗುತ್ತದೆ. ನೀವು ರಿಯಾಯಿತಿ ಕೋಡ್ ಅನ್ನು ರಚಿಸಿದಾಗ ಮತ್ತು ಹಂಚಿಕೊಂಡಾಗ, ಅರ್ಹ ಐಟಂಗಳ ಮೇಲೆ ರಿಯಾಯಿತಿಯನ್ನು ಪಡೆಯಲು ವೀಕ್ಷಕರು ಚೆಕ್‌ಔಟ್‌ನಲ್ಲಿ ಕೋಡ್ ಅನ್ನು ನಮೂದಿಸಬೇಕು.
ಸೂಚನೆ: ಪ್ರಮಾಣೀಕರಿಸದ ಡೀಲ್‌ಗಳು ಮತ್ತು $0 ಶಿಪ್ಪಿಂಗ್ ಪ್ರಚಾರಗಳು ಇದೀಗ ಬೆಂಬಲಿತವಾಗಿಲ್ಲ. Shopify ಗಾಗಿ ಬೆಂಬಲಿತ ಪ್ರಚಾರದ ಪ್ರಕಾರಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

Shopify ನಲ್ಲಿ ವ್ಯಾಪಾರಿ ಪ್ರಚಾರವನ್ನು ರಚಿಸಲು:

  1. ರಿಯಾಯಿತಿಗಳು ನಂತರ ರಿಯಾಯಿತಿಯನ್ನು ರಚಿಸಿ ಎಂಬಲ್ಲಿಗೆ ಹೋಗಿ.
  2. "ರಿಯಾಯಿತಿ ಪ್ರಕಾರವನ್ನು ಆಯ್ಕೆಮಾಡಿ" ನಲ್ಲಿ, ಆಯ್ಕೆಮಾಡಿ: "ಉತ್ಪನ್ನಗಳಿಗೆ ರಿಯಾಯಿತಿ ಮೊತ್ತ" ಅಥವಾ "ಆರ್ಡರ್‌ಗಳಿಗೆ ರಿಯಾಯಿತಿ ಮೊತ್ತ."
  3. “ವಿಧಾನ,” ಅಡಿಯಲ್ಲಿ ನೀವು ನೀಡಲು ಬಯಸುವ ರಿಯಾಯಿತಿಯ ಪ್ರಕಾರವನ್ನು ಆಯ್ಕೆಮಾಡಿ:
    1. ಸ್ವಯಂಚಾಲಿತ ರಿಯಾಯಿತಿ: ವೀಕ್ಷಕರಿಗೆ ಚೆಕ್‌ಔಟ್‌ನಲ್ಲಿ ಸ್ವಯಂಚಾಲಿತವಾಗಿ ರಿಯಾಯಿತಿಗಳನ್ನು ಅನ್ವಯಿಸಲಾಗುತ್ತದೆ.
    2. ರಿಯಾಯಿತಿ ಕೋಡ್: ರಿಯಾಯಿತಿಯನ್ನು ಪಡೆಯಲು ವೀಕ್ಷಕರು ಚೆಕ್‌ಔಟ್‌ನಲ್ಲಿ ಕೋಡ್ ಅನ್ನು ನಮೂದಿಸಬೇಕು.
  4. ನಿಮ್ಮ ಪ್ರಚಾರಕ್ಕಾಗಿ ವಿವರಗಳನ್ನು ಸೇರಿಸಿ  ನಂತರ ರಿಯಾಯಿತಿಯನ್ನು ಸೇವ್ ಮಾಡಿ.
  5. Google ಚಾನಲ್ ಆ್ಯಪ್ ಮೂಲಕ ನಿಮ್ಮ ರಿಯಾಯಿತಿಯನ್ನು ಸಿಂಕ್ ಮಾಡಿ:
    1. ರಿಯಾಯಿತಿಗಳು ಅಡಿಯಲ್ಲಿ, ಸಂಬಂಧಿತ ರಿಯಾಯಿತಿಯನ್ನು ಕ್ಲಿಕ್ ಮಾಡಿ.
    2. ಮಾರಾಟ ಚಾನಲ್‌ಗಳು ವಿಭಾಗದಲ್ಲಿ, Google Channel ಆ್ಯಪ್ ಅನ್ನು ಆಯ್ಕೆಮಾಡಿ.
    3. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

 Google Merchant Center (GMC) ನಲ್ಲಿ ವ್ಯಾಪಾರಿ ಪ್ರಚಾರವನ್ನು ರಚಿಸಿ ಅಥವಾ ಎಡಿಟ್ ಮಾಡಿ

GMC ಯಲ್ಲಿ ವ್ಯಾಪಾರಿ ಪ್ರಚಾರವನ್ನು ರಚಿಸಲು:

  1. ಸಂಬಂಧಿತ ಉತ್ಪನ್ನಗಳಿಗೆ ಲಭ್ಯವಿರುವ ವಿಧಾನಗಳಲ್ಲಿ ಒಂದನ್ನು ಬಳಸಿಕೊಂಡು ನಿಮ್ಮ ಪ್ರಚಾರವನ್ನು ರಚಿಸಿ ಮತ್ತು ಸಲ್ಲಿಸಿ:
    1. ಮರ್ಚೆಂಟ್ ಸೆಂಟರ್ ಪ್ರಚಾರಗಳ ಬಿಲ್ಡರ್
    2. ಪ್ರಚಾರಗಳ ಫೀಡ್
    3. ಕಂಟೆಂಟ್ API

ವ್ಯಾಪಾರಿ ಪ್ರಚಾರಗಳನ್ನು Google Merchant Center ನ ಎಡಿಟೋರಿಯಲ್‌ ಅಗತ್ಯತೆಗಳು ಮತ್ತು ಪ್ರಚಾರಗಳ ನೀತಿಗಳಿಗೆ ಅನುಸಾರವಾಗಿ ಪರಿಶೀಲಿಸಲಾಗುತ್ತದೆ ಮತ್ತು ದೃಢೀಕರಿಸಲಾಗುತ್ತದೆ. ಅನುಮೋದಿತವಾದರೆ, ಅದನ್ನು Google ಮತ್ತು YouTube ಮೇಲ್ಮೈಗಳಾದ್ಯಂತ ಲೈವ್ ಎಂದು ಸೆಟ್‌ ಮಾಡಲಾಗುತ್ತದೆ.

ಮಾರಾಟದ ಬೆಲೆ ಕುರಿತ ಟಿಪ್ಪಣಿ

ನಿಮ್ಮ ಮಾರಾಟದ ಬೆಲೆಯನ್ನು ನೀವು ಸೆಟ್ ಮಾಡಿದಾಗ, ಅದು ಎಲ್ಲಾ ಇತರ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.

Shopify ಮೂಲಕ ಮಾರಾಟದ ಬೆಲೆಯನ್ನು ರಚಿಸಿ ಅಥವಾ ಎಡಿಟ್ ಮಾಡಿ

Shopify ಮೂಲಕ ಮಾರಾಟ ಬೆಲೆಯನ್ನು ರಚಿಸಲು:

  1. ಉತ್ಪನ್ನಗಳು  ನಂತರ ಎಂಬಲ್ಲಿಗೆ ಹೋಗಿ, ಸಂಬಂಧಿತ ಉತ್ಪನ್ನವನ್ನು ಕ್ಲಿಕ್ ಮಾಡಿ.
  2. ಬೆಲೆ ನಿಗದಿಯ ಅಡಿಯಲ್ಲಿ, ಕಂಪೇರ್‌ ಆ್ಯಟ್‌ ಪ್ರೈಸ್‌ ಅನ್ನು ನಿಮ್ಮ ಉತ್ಪನ್ನದ ಮೂಲ ಬೆಲೆಗೆ ಸೆಟ್‌ ಮಾಡಿ.
  3. ನಿಮ್ಮ ಉತ್ಪನ್ನದ ಬೆಲೆ ಅನ್ನು ಹೊಸ ಮಾರಾಟ ಬೆಲೆಗೆ ಸೆಟ್ ಮಾಡಿ.

GMC ಯಲ್ಲಿ ಮಾರಾಟದ ಬೆಲೆಯನ್ನು ರಚಿಸಿ ಅಥವಾ ಎಡಿಟ್ ಮಾಡಿ

GMC ಯಲ್ಲಿ ಮಾರಾಟ ಬೆಲೆ ಅನ್ನು ರಚಿಸಲು:

  1. ನಿಮ್ಮ ಐಟಂನ ಮೂಲ ಬೆಲೆಯನ್ನು ಬೆಲೆ [ಬೆಲೆ] ಆ್ಯಟ್ರಿಬ್ಯೂಟ್‌ನಲ್ಲಿ ಪಟ್ಟಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  2. ಐಚ್ಛಿಕ ಮಾರಾಟ ಬೆಲೆ [ಮಾರಾಟ ಬೆಲೆ] ಆ್ಯಟ್ರಿಬ್ಯೂಟ್ ಅನ್ನು ಬಳಸಿಕೊಂಡು ಮಾರಾಟದ ಬೆಲೆಯನ್ನು ಸಲ್ಲಿಸಿ.

ಬೆಲೆ ಕುಸಿತ

ತಕ್ಕಮಟ್ಟಿಗೆ ಸ್ಥಿರವಾಗಿರುವ ಉತ್ಪನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಾಗ "ಬೆಲೆ ಕುಸಿತ" ಬ್ಯಾಡ್ಜ್ ಕಾಣಿಸುತ್ತದೆ. ನಿಮ್ಮ ಉತ್ಪನ್ನದ ಬೆಲೆಯನ್ನು ನೀವು ಬದಲಾಯಿಸಬಹುದು, ಇದರಿಂದ Google "ಬೆಲೆ ಕುಸಿತ" ಬ್ಯಾಡ್ಜ್ ಅನ್ನು ತೋರಿಸುತ್ತದೆ. "ಬೆಲೆ ಕುಸಿತ" ಬ್ಯಾಡ್ಜ್ ಅನ್ನು ಪ್ರಚೋದಿಸಲು, ನಿಮ್ಮ ಅಂಗಡಿಯೊಂದಿಗೆ ನಿಮ್ಮ ಉತ್ಪನ್ನದ ಬೆಲೆಯನ್ನುಅಪ್‌ಡೇಟ್ ಮಾಡಿ. ಹೊಸ ಬೆಲೆಯು ನೀವು ಹಿಂದೆ ಪಟ್ಟಿ ಮಾಡಿದ ಸರಾಸರಿ ಬೆಲೆಗಿಂತ ಕಡಿಮೆಯಿರಬೇಕು. ಬೆಲೆ ಕುಸಿತದ ಟಿಪ್ಪಣಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಪ್ರಾಡಕ್ಟ್ ಡ್ರಾಪ್‌ಗಳು

ಪ್ರಾಡಕ್ಟ್ ಡ್ರಾಪ್‌ಗಳ ಫೀಚರ್‌ನ ಮೂಲಕ, ಲೈವ್ ಸ್ಟ್ರೀಮ್‌ನ ಸಮಯದಲ್ಲಿ ನೀವು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವಾಗ ನೀವು ಅದರ ಕುರಿತು ಉತ್ಸಾಹವನ್ನು ಹೆಚ್ಚಿಸಬಹುದು ಮತ್ತು ವೀಕ್ಷಕರು ಅಚ್ಚರಿಯಿಂದ ಎದುರು ನೋಡುವಂತೆ ಮಾಡಬಹುದು. ಒಂದು ಶಾಪಿಂಗ್ ಬ್ಯಾಗ್‌ ಇರುವ ಪ್ಲೇಸ್‌ಹೋಲ್ಡರ್ ಚಿತ್ರವನ್ನು ನಿಮ್ಮ ಲೈವ್ ಸ್ಟ್ರೀಮ್‌ನ ಉತ್ಪನ್ನ ಪಟ್ಟಿಯಲ್ಲಿ ಪ್ರದರ್ಶಿಸಲಾಗುತ್ತದೆ, ಇದರಿಂದ ನಿಮ್ಮ ಉತ್ಪನ್ನವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವೀಕ್ಷಕರಿಗೆ ತಿಳಿಯುತ್ತದೆ. ನಿಮ್ಮ ಲೈವ್ ಸ್ಟ್ರೀಮ್‌ನಲ್ಲಿ ಉತ್ಪನ್ನವನ್ನು ಬಹಿರಂಗಪಡಿಸಿದ ನಂತರ, ವೀಕ್ಷಕರು ಅದನ್ನು ತಕ್ಷಣವೇ ಖರೀದಿಸಬಹುದು.

ನಿಮ್ಮ ಅಗತ್ಯತೆಗಳು ಮತ್ತು ಅರ್ಹತೆಗೆ ಅನುಗುಣವಾಗಿ ಪ್ರಾಡಕ್ಟ್ ಡ್ರಾಪ್‌ಗಳನ್ನು ಪ್ರಕಟಣೆ ದಿನಾಂಕಗಳ ಜೊತೆ ಅಥವಾ ಇಲ್ಲದೆಯೇ ಸೆಟಪ್ ಮಾಡಬಹುದು.

  • ಪ್ರಕಟಣೆ ದಿನಾಂಕಗಳಿರುವ ಪ್ರಾಡಕ್ಟ್ ಡ್ರಾಪ್‌ಗಳು: ಲೀಕ್‌ಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಅವಶ್ಯಕತೆಗಳನ್ನು ಹೊಂದಿರುತ್ತವೆ ಹಾಗೂ ಅವುಗಳನ್ನು ಮುಂಚಿತವಾಗಿ ಸೆಟಪ್ ಮಾಡಬೇಕಾಗುತ್ತದೆ. ತಮ್ಮ Shopify ಸ್ಟೋರ್‌ಗೆ ಅಥವಾ ತಮ್ಮ ಕನೆಕ್ಟೆಡ್ ಸ್ಟೋರ್‌ನ Google Merchant Center (GMC) ಗೆ ನೇರ ಆ್ಯಕ್ಸೆಸ್ ಅನ್ನು ಹೊಂದಿರುವ ರಚನೆಕಾರರು ಪ್ರಕಟಣೆ ದಿನಾಂಕಗಳನ್ನು ಬಳಸಬಹುದು.
  • ಪ್ರಕಟಣೆ ದಿನಾಂಕಗಳಿಲ್ಲದ ಪ್ರಾಡಕ್ಟ್ ಡ್ರಾಪ್‌ಗಳನ್ನು:  ನಿಮ್ಮ ಲೈವ್ ಸ್ಟ್ರೀಮ್‌ಗೆ ಉತ್ಪನ್ನಗಳನ್ನು ಟ್ಯಾಗ್ ಮಾಡುವಾಗ ಸೆಟಪ್ ಮಾಡಬೇಕಾಗುತ್ತದೆ. ಈ ಡ್ರಾಪ್‌ಗಳು ನಿಮ್ಮ ಉತ್ಪನ್ನವು YouTube ನಲ್ಲಿ ಮುಂಚಿತವಾಗಿ ಕಾಣಿಸಿಕೊಳ್ಳುವುದನ್ನು ತಡೆಯುತ್ತವೆ, ಆದರೆ ವೀಕ್ಷಕರು ನಿಮ್ಮ ಉತ್ಪನ್ನವನ್ನು ಬೇರೆಡೆ ಹುಡುಕಬಹುದು. ಲೀಕ್‌ಗಳನ್ನು ತಡೆಗಟ್ಟುವುದಕ್ಕೆ ನೆರವಾಗಲು, ಡ್ರಾಪ್ ಮಾಡುವವರೆಗೆ ನಿಮ್ಮ ಉತ್ಪನ್ನದ ಪುಟವನ್ನು ನೀವು ಪಟ್ಟಿ ಮಾಡದೇ ಇರಬಹುದು. ಅಫಿಲಿಯೇಟ್ ಪ್ರೋಗ್ರಾಂನಲ್ಲಿರುವ ರಚನೆಕಾರರು ಅಥವಾ ಕನೆಕ್ಟೆಡ್ ಸ್ಟೋರ್‌ಗಳನ್ನು ಹೊಂದಿರುವ ರಚನೆಕಾರರು ಈ ಫೀಚರ್ ಅನ್ನು ಬಳಸಬಹುದು.

ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ನೀವು ಸೆಟಪ್ ಮಾಡಿದ ನಂತರ, ನಿಮ್ಮ ಲೈವ್ ಸ್ಟ್ರೀಮ್ ಅನ್ನು ನೀವು ನಿಗದಿಪಡಿಸಬಹುದು, ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ಸ್ಟ್ರೀಮ್‌ಗೆ ಸೇರಿಸಬಹುದು ಮತ್ತು ದೊಡ್ಡ ಪ್ರಮಾಣದಲ್ಲಿ ಬಹಿರಂಗಪಡಿಸಬಹುದು.

ಪ್ರಕಟಣೆ ದಿನಾಂಕಗಳಿಲ್ಲದೆ ಪ್ರಾಡಕ್ಟ್ ಡ್ರಾಪ್‌ಗಳನ್ನು ಸೆಟಪ್ ಮಾಡುವುದು

ಪ್ರಕಟಣೆ ದಿನಾಂಕಗಳಿಲ್ಲದೆ ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ಸೆಟಪ್ ಮಾಡಲು, ನೀವು ಈ ಮಾನದಂಡಗಳನ್ನು ಪೂರೈಸಬೇಕು:

ನೀವು ಉತ್ಪನ್ನವನ್ನು ನಿಮ್ಮ ಸ್ಟೋರ್‌ಗೆ ಸೇರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ಇದರಿಂದ ನಮ್ಮ ನೀತಿಗಳು ಮತ್ತು Google Merchant Center ನೀತಿಗಳ ಅನುಸರಣೆಗಾಗಿ ಅದನ್ನು ಪರಿಶೀಲಿಸಬಹುದು. ಸಾಮಾನ್ಯವಾಗಿ ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಕೆಲವು ವ್ಯವಹಾರದ ದಿನಗಳನ್ನು ತೆಗೆದುಕೊಳ್ಳುತ್ತದೆ. ಅನುಮೋದಿಸಿದ ನಂತರ, ನಿಮ್ಮ ಲೈವ್ ಸ್ಟ್ರೀಮ್‌ಗೆ ಸೇರಿಸಲು ನಿಮ್ಮ ಉತ್ಪನ್ನಗಳನ್ನು YouTube Studio ದಲ್ಲಿ ತೋರಿಸಲಾಗುತ್ತದೆ.

ಪ್ರಕಟಣೆ ದಿನಾಂಕಗಳ ಜೊತೆ ಪ್ರಾಡಕ್ಟ್ ಡ್ರಾಪ್‌ಗಳನ್ನು ಸೆಟಪ್ ಮಾಡುವುದು

ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ಪ್ರಕಟಣೆ ದಿನಾಂಕಗಳ ಜೊತೆ ಸೆಟಪ್ ಮಾಡಲು, ನೀವು ಇವುಗಳಿಗೆ ನೇರ ಆ್ಯಕ್ಸೆಸ್ ಅನ್ನು ಹೊಂದಿರಬೇಕಾಗುತ್ತದೆ:

  • ನಿಮ್ಮ ಕನೆಕ್ಟೆಡ್ ಸ್ಟೋರ್‌ನ Google Merchant Center (GMC), ಅಥವಾ
  • ನಿಮ್ಮ Shopify ಸ್ಟೋರ್‌ನ ನಿರ್ವಾಹಕರ ಪುಟ

ಉತ್ತಮ ಅಭ್ಯಾಸವಾಗಿ, ನಿಮ್ಮ ಲೈವ್ ಸ್ಟ್ರೀಮ್‌ಗೆ ಕನಿಷ್ಠ 1 ವಾರದ ಮೊದಲು ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ಸೆಟಪ್ ಮಾಡಿ. ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ನೀವು ಸೆಟಪ್ ಮಾಡಿದ ನಂತರ, ನಿಮ್ಮ ಲೈವ್ ಸ್ಟ್ರೀಮ್ ಅನ್ನು ನೀವು ನಿಗದಿಪಡಿಸಬಹುದು ಮತ್ತು ಬಹಿರಂಗಪಡಿಸಲು ಲೈವ್ ಸ್ಟ್ರೀಮ್‌ಗೆ ನಿಮ್ಮ ಉತ್ಪನ್ನವನ್ನು ಸೇರಿಸಬಹುದು.

Shopify ಮೂಲಕ ಪ್ರಕಟಣೆ ದಿನಾಂಕಗಳ ಜೊತೆ ಪ್ರಾಡಕ್ಟ್ ಡ್ರಾಪ್ ಅನ್ನು ಸೆಟಪ್ ಮಾಡಿ

ನಿಮ್ಮ Shopify ಸ್ಟೋರ್ ಅನ್ನು ನೀವು YouTube ಗೆ ಕನೆಕ್ಟ್ ಮಾಡಿದ್ದರೆ, Shopify ನಲ್ಲಿ ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ಸೆಟಪ್ ಮಾಡಿ:

  1. ಪ್ರಾಡಕ್ಟ್ ಡ್ರಾಪ್ ಆಫರ್ ಅನ್ನು Shopify ಗೆ ಅಪ್‌ಲೋಡ್ ಮಾಡಿ.
  2. Google Channel ಆ್ಯಪ್ ಮತ್ತು Shopify ಆನ್‌ಲೈನ್ ಸ್ಟೋರ್‌ಗೆ ಒಂದೇ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ:
    • ಆನ್‌ಲೈನ್ ಸ್ಟೋರ್: ಉತ್ಪನ್ನಗಳು ಎಂಬ ವಿಭಾಗದಲ್ಲಿ, ನಿಮ್ಮ ಆನ್‌ಲೈನ್ ಸ್ಟೋರ್ ಲಭ್ಯತೆಗಾಗಿ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ. ಇದು ನಿಮ್ಮ ಆಫರ್ Shopify ನಲ್ಲಿ ಗೋಚರಿಸುವ ಹಾಗೂ ಖರೀದಿಸಲು ಸಾಧ್ಯವಾಗುವ ದಿನಾಂಕ ಮತ್ತು ಸಮಯವಾಗಿರುತ್ತದೆ.

    • Google Channel ಆ್ಯಪ್: ಮಾರಾಟ ಚಾನಲ್ ಮತ್ತು ಆ್ಯಪ್‌ಗಳು ವಿಭಾಗದ ಅಡಿಯಲ್ಲಿ, Google ಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ. ಇದು ನಿಮ್ಮ ಆಫರ್ YouTube ವೀಕ್ಷಕರಿಗೆ ಗೋಚರಿಸುವ ಮತ್ತು ಅವರಿಗೆ ಖರೀದಿಸಲು ಸಾಧ್ಯವಾಗುವ ದಿನಾಂಕ ಮತ್ತು ಸಮಯವಾಗಿರುತ್ತದೆ.

    • Google Channel ಆ್ಯಪ್ ಮತ್ತು Shopify ಆನ್‌ಲೈನ್ ಸ್ಟೋರ್‌ನಲ್ಲಿ ಪ್ರಾಡಕ್ಟ್ ಡ್ರಾಪ್ ದಿನಾಂಕ ಮತ್ತು ಸಮಯ (UTC ಸಮಯ ವಲಯ ಸೇರಿದಂತೆ) ಒಂದೇ ಆಗಿವೆಯೇ ಎಂದು ಪರಿಶೀಲಿಸಿ.
  3. ನಿಮ್ಮ ಉತ್ಪನ್ನವು ನಮ್ಮ ನೀತಿಗಳು ಮತ್ತುGoogle Merchant Center ನೀತಿಗಳು ಅನ್ನು ಅನುಸರಿಸುತ್ತಿದೆಯೇ ಎಂಬದನ್ನು ತಿಳಿಯಲು ಅದನ್ನು ಪರಿಶೀಲಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಕೆಲವು ವ್ಯವಹಾರದ ದಿನಗಳನ್ನು ತೆಗೆದುಕೊಳ್ಳುತ್ತದೆ. ಅನುಮೋದಿಸಿದ ನಂತರ, ನಿಮ್ಮ ಉತ್ಪನ್ನವನ್ನು YouTube Studio ದಲ್ಲಿ ತೋರಿಸಲಾಗುತ್ತದೆ.

Google Merchant Center ಮೂಲಕ ಪ್ರಕಟಣೆ ದಿನಾಂಕಗಳ ಜೊತೆ ಪ್ರಾಡಕ್ಟ್ ಡ್ರಾಪ್ ಅನ್ನು ಸೆಟಪ್ ಮಾಡಿ

ನಿಮ್ಮ ಕನೆಕ್ಟೆಡ್ ಸ್ಟೋರ್‌ನ Google Merchant Center (GMC) ಗೆ ನೀವು ನೇರ ಆ್ಯಕ್ಸೆಸ್ ಅನ್ನು ಹೊಂದಿದ್ದರೆ, ಪ್ರಕಟಣೆ ದಿನಾಂಕಗಳ ಜೊತೆ ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ನೀವು ಸೆಟಪ್ ಮಾಡಬಹುದು:

  1. "disclosure_date" ಆ್ಯಟ್ರಿಬ್ಯೂಟ್‌ನ ಜೊತೆಗೆ ನಿಮ್ಮ ಪ್ರಾಡಕ್ಟ್ ಡ್ರಾಪ್‌ನ ಉತ್ಪನ್ನ ಡೇಟಾವನ್ನು ಸಲ್ಲಿಸಲು ಪ್ರಾಥಮಿಕ ಫೀಡ್‌ ಅಥವಾ ಪೂರಕ ಫೀಡ್‌ ಅನ್ನು ಬಳಸಿ.
  2. ಪ್ರಾಡಕ್ಟ್ ಡ್ರಾಪ್ ದಿನಾಂಕ ಮತ್ತು ಸಮಯವನ್ನು (UTC ಸಮಯ ವಲಯ ಸೇರಿದಂತೆ) ಸರಿಯಾಗಿ ಸೆಟ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ.
  3. ನಿಮ್ಮ ಉತ್ಪನ್ನವು ನಮ್ಮ ನೀತಿಗಳು ಮತ್ತುGoogle Merchant Center ನೀತಿಗಳು ಅನ್ನು ಅನುಸರಿಸುತ್ತಿದೆಯೇ ಎಂಬದನ್ನು ತಿಳಿಯಲು ಅದನ್ನು ಪರಿಶೀಲಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಕೆಲವು ವ್ಯವಹಾರದ ದಿನಗಳನ್ನು ತೆಗೆದುಕೊಳ್ಳುತ್ತದೆ. ಒಮ್ಮೆ ಅನುಮೋದಿಸಿದ ನಂತರ, ನಿಮ್ಮ ಉತ್ಪನ್ನಗಳನ್ನು YouTube Studio ದಲ್ಲಿ ತೋರಿಸಲಾಗುತ್ತದೆ.

ನಿಮ್ಮ ಲೈವ್ ಸ್ಟ್ರೀಮ್‌ಗೆ ಪ್ರಾಡಕ್ಟ್ ಡ್ರಾಪ್ ಅನ್ನು ಸೇರಿಸಿ

ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ನೀವು ಸೆಟಪ್ ಮಾಡಿದ ನಂತರ, ನಿಮ್ಮ ಲೈವ್ ಸ್ಟ್ರೀಮ್ ಅನ್ನು ನಿಗದಿಪಡಿಸಿ ಮತ್ತು ನಿಮ್ಮ ಲೈವ್ ಸ್ಟ್ರೀಮ್‌ಗೆ ಪ್ರಾಡಕ್ಟ್ ಡ್ರಾಪ್ ಅನ್ನು ಟ್ಯಾಗ್ ಮಾಡಿ:

  1. YouTube Studio ದಲ್ಲಿ, ನಿಮ್ಮ ಲೈವ್ ಸ್ಟ್ರೀಮ್ ಅನ್ನು ನಿಗದಿಪಡಿಸಿ.
  2. ಲೈವ್ ನಿಯಂತ್ರಣ ಕೊಠಡಿಯಲ್ಲಿ, ಲೈವ್ ಸ್ಟ್ರೀಮ್ ವೀಡಿಯೊಗೆ ಪ್ರಾಡಕ್ಟ್ ಡ್ರಾಪ್ ಮತ್ತು ಯಾವುದೇ ಇತರ ಸಂಬಂಧಿತ ಉತ್ಪನ್ನಗಳನ್ನು ಟ್ಯಾಗ್ ಮಾಡಿ. 
  • ನೀವು ಪ್ರಕಟಣೆ ದಿನಾಂಕಗಳನ್ನು ಬಳಸಿದ್ದರೆ: ನಿಮ್ಮ ಪ್ರಾಡಕ್ಟ್ ಡ್ರಾಪ್‌ನ ಪಕ್ಕದಲ್ಲಿ, ಅದು ಲಭ್ಯವಿರುವ ದಿನಾಂಕದ ಜೊತೆ "ಪ್ರಾಡಕ್ಟ್ ಡ್ರಾಪ್" ಎಂಬ ಬ್ಯಾಡ್ಜ್ ಇರುತ್ತದೆ. ಪ್ರಾಡಕ್ಟ್ ಡ್ರಾಪ್ ದಿನಾಂಕ ಮತ್ತು ಸಮಯವನ್ನು (UTC ಸಮಯ ವಲಯ ಸೇರಿದಂತೆ) ಸರಿಯಾಗಿ ಸೆಟ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. 
    • ಗಮನಿಸಿ: ಪ್ರಾಡಕ್ಟ್ ಡ್ರಾಪ್ ದಿನಾಂಕ ಮತ್ತು ಸಮಯವು ಲೈವ್ ನಿಯಂತ್ರಣ ಕೊಠಡಿ, GMC ಅಥವಾ Shopify ಮತ್ತು ನಿಮ್ಮ ಪ್ರಾಡಕ್ಟ್ ಡ್ರಾಪ್‌ನ ಲ್ಯಾಂಡಿಂಗ್ ಪುಟದಲ್ಲಿ ಒಂದೇ ಆಗಿರಬೇಕು. ಪ್ರಾಡಕ್ಟ್ ಡ್ರಾಪ್ ಸಮಯದಲ್ಲಿ ಲ್ಯಾಂಡಿಂಗ್ ಪುಟವು ಲಭ್ಯವಿರಬೇಕು (ಪಟ್ಟಿಯಲ್ಲಿರಬೇಕು ಮತ್ತು ಹುಡುಕಲು ಲಭ್ಯವಿರಬೇಕು). ಇಲ್ಲದಿದ್ದರೆ, ವೀಕ್ಷಕರು ದೋಷ ಸಂದೇಶವನ್ನು ಪಡೆಯುತ್ತಾರೆ.
  • ನೀವು ಪ್ರಕಟಣೆಯ ದಿನಾಂಕಗಳನ್ನು ಬಳಸದಿದ್ದರೆ: ಉತ್ಪನ್ನದ ಪಕ್ಕದಲ್ಲಿರುವ "ಪ್ರಾಡಕ್ಟ್ ಡ್ರಾಪ್ ಅನ್ನು ರಚಿಸಿ"  ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಉತ್ಪನ್ನವನ್ನು ಡ್ರಾಪ್ ಮಾಡಲು ನೀವು ಸಿದ್ಧವಾಗುವವರೆಗೆ ಅದನ್ನು ಮರೆಮಾಡಲಾಗುತ್ತದೆ.
  1. ನಿಮ್ಮ ಪ್ರಾಡಕ್ಟ್ ಡ್ರಾಪ್ ಬಿಡುಗಡೆಯಾದಾಗ ನಿಮ್ಮ ಪ್ರಾಡಕ್ಟ್ ಶೆಲ್ಫ್‌ನಲ್ಲಿ ಮೊದಲ ಐಟಂ ಆಗಿ ಕಾಣಬೇಕೆಂದು ನೀವು ಬಯಸಿದರೆ, ನಿಮ್ಮ ಉತ್ಪನ್ನಗಳನ್ನು ಮರುಹೊಂದಿಸಿ.
  2. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. 
ಟ್ಯಾಗಿಂಗ್ ಸಲಹೆಗಳು: ನಿಮ್ಮ ಉತ್ಪನ್ನವು ವೇರಿಯಂಟ್‌ಗಳನ್ನು ಹೊಂದಿದ್ದರೆ (ಉದಾಹರಣೆಗೆ, ಉತ್ಪನ್ನವು ವಿಭಿನ್ನ ಗಾತ್ರಗಳು ಅಥವಾ ಬಣ್ಣಗಳಲ್ಲಿ ಲಭ್ಯವಿದ್ದರೆ), ಪ್ರತಿಯೊಂದು ವೇರಿಯಂಟ್ ಅನ್ನು ಪ್ರತ್ಯೇಕವಾಗಿ ಟ್ಯಾಗ್ ಮಾಡಬಹುದು. 
  • ನಿಮ್ಮ ಉತ್ಪನ್ನವು ಹಲವು ವೇರಿಯಂಟ್‌ಗಳನ್ನು ಹೊಂದಿಲ್ಲದಿದ್ದರೆ, ನೀವು ಎಲ್ಲವನ್ನೂ ಟ್ಯಾಗ್ ಮಾಡಬಹುದು. 
  • ನಿಮ್ಮ ಉತ್ಪನ್ನವು ಹಲವಾರು ವೇರಿಯಂಟ್‌ಗಳನ್ನು ಹೊಂದಿದ್ದರೆ, ವಿಭಿನ್ನ ಬೆಲೆಗಳನ್ನು ಹೊಂದಿರುವ ವೇರಿಯಂಟ್‌ಗಳನ್ನು ನೀವು ಟ್ಯಾಗ್ ಮಾಡಬಹುದು. 
  • ವೇರಿಯೆಂಟ್‌ಗಳ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿರುವ ಹಾಗೆ, ಟ್ಯಾಗ್ ಮಾಡಲಾದ ಪ್ರತಿಯೊಂದು ಉತ್ಪನ್ನದ ಹೆಸರನ್ನು ಅಪ್‌ಡೇಟ್ ಮಾಡಿ. 

ತಮಗೆ ಇಷ್ಟವಾದ ವೇರಿಯಂಟ್ ಅನ್ನು ವೀಕ್ಷಕರು ಆಯ್ಕೆಮಾಡಿದಾಗ, ಈಗಾಗಲೇ ಆಯ್ಕೆಮಾಡಿದ ವೇರಿಯಂಟ್ ವಿವರಗಳನ್ನು ಹೊಂದಿರುವ ನಿಮ್ಮ ವೆಬ್‌ಸೈಟ್‌ಗೆ ಅವರನ್ನು ರೀಡೈರೆಕ್ಟ್ ಮಾಡಲಾಗುತ್ತದೆ. ಅವರು ಬಯಸಿದರೆ, ಅವರು ನಿಮ್ಮ ವೆಬ್‌ಸೈಟ್‌ನಲ್ಲಿ ಬೇರೆ ವೇರಿಯಂಟ್ ಅನ್ನು ಆಯ್ಕೆ ಮಾಡಬಹುದು.

ನಿಮ್ಮ ಉತ್ಪನ್ನವನ್ನು ಇನ್ನಷ್ಟು ವಿಶೇಷವಾಗಿ ತೋರಿಸಲು, ಅದು ಬಿಡುಗಡೆಯಾಗುವ ಮೊದಲು ನಿಮ್ಮ ಲೈವ್ ಸ್ಟ್ರೀಮ್‌ಗೆ ನಿಮ್ಮ ಉತ್ಪನ್ನವನ್ನು ಪಿನ್ ಮಾಡಬಹುದು. ಬಿಡುಗಡೆ ದಿನಾಂಕದ ಮೊದಲು, "ಶೀಘ್ರದಲ್ಲೇ ಡ್ರಾಪ್ ಮಾಡಲಾಗುತ್ತಿದೆ" ಎಂಬ ಬ್ಯಾನರ್ ಪಾಪ್ ಅಪ್ ಆಗುತ್ತದೆ. ನಿಮ್ಮ ಉತ್ಪನ್ನವನ್ನು ಬಿಡುಗಡೆ ಮಾಡುವ ಒಂದು ಗಂಟೆಯ ಮೊದಲು, ಬ್ಯಾನರ್‌ನ ಪಕ್ಕದಲ್ಲಿ ಕೌಂಟ್‌ಡೌನ್ ಟೈಮರ್ ಪಾಪ್ ಅಪ್ ಆಗುತ್ತದೆ. ನಿಮ್ಮ ಉತ್ಪನ್ನವನ್ನು ಬಿಡುಗಡೆ ಮಾಡಿದ ನಂತರ, ಕೌಂಟ್‌ಡೌನ್ ಟೈಮರ್ ಸ್ವಯಂಚಾಲಿತವಾಗಿ ಸಾಮಾನ್ಯ ಉತ್ಪನ್ನದ ಪಿನ್‌ಗೆ ಬದಲಾಗುತ್ತದೆ ಮತ್ತು ಉತ್ಪನ್ನವು Google ಮತ್ತು YouTube ನಾದ್ಯಂತ ಗೋಚರಿಸುತ್ತದೆ.

ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ನಿರ್ವಹಿಸಿ

ಪ್ರಾಡಕ್ಟ್ ಡ್ರಾಪ್ ಲೀಕ್‌ಗಳನ್ನು ತಡೆಗಟ್ಟಲು ಸಲಹೆಗಳು 

ಪ್ರಾಡಕ್ಟ್ ಡ್ರಾಪ್‌ಗೆ ಮುಂಚಿತವಾಗಿ ನಿಮ್ಮ ಉತ್ಪನ್ನದ ಲ್ಯಾಂಡಿಂಗ್ ಪುಟ ಮತ್ತು ಚಿತ್ರದ URL ಗಳನ್ನು ಎಲ್ಲಿಗೆ ಲಿಂಕ್ ಮಾಡಲಾಗಿದೆ ಎಂಬುದರ ಕುರಿತು ಗಮನವಿರಲಿ. ಹೆಚ್ಚುವರಿ ಭದ್ರತೆಗಾಗಿ, ತಮ್ಮ Shopify ಸ್ಟೋರ್‌ಗೆ ಅಥವಾ ತಮ್ಮ ಕನೆಕ್ಟೆಡ್ ಸ್ಟೋರ್‌ನ Google Merchant Center (GMC) ಗೆ ನೇರ ಆ್ಯಕ್ಸೆಸ್ ಅನ್ನು ಹೊಂದಿರುವ ರಚನೆಕಾರರು ಇವುಗಳನ್ನು ಮಾಡಬಹುದು:

  1. ನಿಮ್ಮ ಉತ್ಪನ್ನದ ಪುಟವನ್ನು ಪ್ರಕಟಿಸಲು ಲೈವ್ ಸ್ಟ್ರೀಮ್ ತನಕ ನಿರೀಕ್ಷಿಸಬಹುದು 
  2. ಕನಿಷ್ಠ 1 ವಾರ ಮುಂಚಿತವಾಗಿ ಪ್ರಕಟಣೆ ದಿನಾಂಕಗಳನ್ನು ಬಳಸಿಕೊಂಡು ನಿಮ್ಮ ಪ್ರಾಡಕ್ಟ್ ಡ್ರಾಪ್ ಅನ್ನು ಸಲ್ಲಿಸಬಹುದು

ನಿಮ್ಮ ಪ್ರಾಡಕ್ಟ್ ಡ್ರಾಪ್‌ನ ಸಮಯವನ್ನು ಬದಲಾಯಿಸಬಹುದು

ನಿಮ್ಮ ನಿಗದಿತ ಡ್ರಾಪ್‌ನ ಸಮಯವನ್ನು ನೀವು ಅದನ್ನು ನಿಗದಿಪಡಿಸಿದ ರೀತಿಯಲ್ಲಿಯೇ ಅಪ್‌ಡೇಟ್ ಮಾಡಬಹುದು. ಹೊಸ ನಿಗದಿತ ಸಮಯವು ಕಾರ್ಯರೂಪಕ್ಕೆ ಬರಲು ಸುಮಾರು 1 ಗಂಟೆ ಕಾಲಾವಕಾಶ ಬೇಕಾಗುತ್ತದೆ. ಅಪ್‌ಡೇಟ್ ಮಾಡಲಾದ ಸಮಯವನ್ನು ವೀಕ್ಷಿಸಲು, ನೀವು YouTube Studio ವನ್ನು ಪುನಃ ಲೋಡ್ ಮಾಡಬೇಕು. ನೀವು ಬಯಸುವ ಅಪ್‌ಡೇಟ್ ಮಾಡಿದ ಸಮಯದ ಜೊತೆ ಉತ್ಪನ್ನವನ್ನು ಪುನಃ ಟ್ಯಾಗ್ ಸಹ ಮಾಡಬೇಕು.

ನಿಮ್ಮ ಲೈವ್ ಸ್ಟ್ರೀಮ್ ತಡವಾಗುತ್ತಿದ್ದರೆ ಮತ್ತು ಪ್ರಾಡಕ್ಟ್‌ ಡ್ರಾಪ್‌ ಬೇಗನೆ ಕಾಣಿಸಿಕೊಳ್ಳಲು ನೀವು ಬಯಸದಿದ್ದರೆ, ಅದನ್ನು ಉತ್ಪನ್ನ ಪಟ್ಟಿಯಿಂದ ತೆಗೆದುಹಾಕಿ. ನಿಮ್ಮ ಲೈವ್ ಸ್ಟ್ರೀಮ್‌ನಲ್ಲಿ ಅದನ್ನು ಘೋಷಿಸಲು ನೀವು ಸಿದ್ಧರಾದಾಗ, ಬಹಿರಂಗಪಡಿಸಲು ಲೈವ್ ನಿಯಂತ್ರಣ ಕೊಠಡಿಯಲ್ಲಿ ನೀವು ಅದನ್ನು ಮತ್ತೊಮ್ಮೆ ಟ್ಯಾಗ್ ಮಾಡಬಹುದು.

ಗಮನಿಸಿ: ನಿಮ್ಮ ಲೈವ್ ಸ್ಟ್ರೀಮ್‌ನಿಂದ ಪ್ರಾಡಕ್ಟ್ ಡ್ರಾಪ್ ಅನ್ನು ನೀವು ತೆಗೆದುಹಾಕಿದರೆ, ಅದು ನಿಮ್ಮ ಲೈವ್ ಸ್ಟ್ರೀಮ್‌ನ ಪ್ರಾಡಕ್ಟ್ ಶೆಲ್ಫ್‌ನಲ್ಲಿ ಗೋಚರಿಸುವುದಿಲ್ಲ. ಆದರೆ, ಇದು ನಿಗದಿತ ಸಮಯದಲ್ಲಿ ಇತರ YouTube ಮೇಲ್ಮೈಗಳಲ್ಲಿ ಈಗಲೂ ಕಾಣಿಸಿಕೊಳ್ಳುತ್ತದೆ.

ನಿಮ್ಮ ಲೈವ್ ಸ್ಟ್ರೀಮ್ ಸಮಯದಲ್ಲಿ ನಿಮ್ಮ ಹೊಸ ಉತ್ಪನ್ನವನ್ನು ಡ್ರಾಪ್ ಮಾಡಿ

ಲೈವ್ ನಿಯಂತ್ರಣ ಕೊಠಡಿಯ ಶಾಪಿಂಗ್ ಟ್ಯಾಬ್‌ನಲ್ಲಿ, ಕೌಂಟ್‌ಡೌನ್ ಟೈಮರ್ ಇರಬೇಕೆ ಅಥವಾ ನಿಮ್ಮ ಉತ್ಪನ್ನವನ್ನು ತಕ್ಷಣವೇ ಡ್ರಾಪ್ ಮಾಡಬೇಕೆ ಎಂಬುದನ್ನು ನೀವು ನಿರ್ಧರಿಸಬಹುದು: 

  1. ನಿಮ್ಮ ಪ್ರಾಡಕ್ಟ್ ಡ್ರಾಪ್‌ನ ಪಕ್ಕದಲ್ಲಿ, ಟೈಮರ್ ಅನ್ನು ಆಯ್ಕೆಮಾಡಿ . ನಿಮ್ಮ ಪ್ರಾಡಕ್ಟ್ ಡ್ರಾಪ್‌ಗೆ ನೀವು ಪ್ರಕಟಣೆ ದಿನಾಂಕಗಳನ್ನು ಬಳಸಿದ್ದರೆ, ಪ್ರಕಟಣೆ ದಿನಾಂಕ ಮತ್ತು ಸಮಯ ಕಳೆದ ನಂತರ ನೀವು ಟೈಮರ್ ಅನ್ನು ಆಯ್ಕೆಮಾಡಬಹುದು.
  2. ನೀವು 1:00-ನಿಮಿಷದ ಕೌಂಟ್‌ಡೌನ್ ಸೆಟ್ ಮಾಡಲು ಅಥವಾ ತಕ್ಷಣವೇ ಡ್ರಾಪ್ ಮಾಡಲು ಬಯಸುತ್ತೀರಾ ಎಂಬುದನ್ನು ಆರಿಸಿ. 
  3. ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ. 
  4. ನೀವು ಕೌಂಟ್‌ಡೌನ್ ಅನ್ನು ಆಯ್ಕೆಮಾಡಿದ್ದರೆ, ನೀವು ಕೌಂಟ್‌ಡೌನ್ ಅನ್ನು ಪ್ರಾರಂಭಿಸಲು ಸಿದ್ಧವಾದಾಗ ಪ್ರಾರಂಭಿಸಿ   ಎಂಬುದನ್ನು ಕ್ಲಿಕ್ ಮಾಡಿ. ನೀವು ಪ್ರಾರಂಭಿಸಿ ಎಂಬುದನ್ನು ಕ್ಲಿಕ್ ಮಾಡಿದ ನಂತರ ಕೌಂಟ್‌ಡೌನ್ ಅನ್ನು ಬದಲಾಯಿಸಲು ಅಥವಾ ವಿರಾಮಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಆದ್ದರಿಂದ ನೀವು ಉತ್ಪನ್ನವನ್ನು ಡ್ರಾಪ್ ಮಾಡಲು ಸಿದ್ಧರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3245049568936348594
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false