ಸಮುದಾಯ ಪೋಸ್ಟ್‌ಗಳ ಕುರಿತು ತಿಳಿದುಕೊಳ್ಳಿ

YouTube Community Posts

ಸಮುದಾಯ ಪೋಸ್ಟ್‌ಗಳಿಗೆ ಆ್ಯಕ್ಸೆಸ್ ಹೊಂದಿರುವ ರಚನೆಕಾರರು ರಿಚ್ ಮೀಡಿಯಾವನ್ನು ಬಳಸಿಕೊಂಡು ವೀಕ್ಷಕರೊಂದಿಗೆ ಸಂವಹಿಸಬಹುದು. ಸಮುದಾಯ ಪೋಸ್ಟ್‌ಗಳಲ್ಲಿ ಸಮೀಕ್ಷೆಗಳು, ಕ್ವಿಜ್‌ಗಳು, GIF ಗಳು, ಪಠ್ಯ, ಚಿತ್ರಗಳು ಹಾಗೂ ವೀಡಿಯೊ ಒಳಗೊಂಡಿರಬಹುದು. ಸಮುದಾಯ ಪೋಸ್ಟ್‌ಗಳು, ವೀಡಿಯೊ ಅಪ್‌ಲೋಡ್‌ಗಳ ಹೊರಗೆ ನಿಮ್ಮ ಪ್ರೇಕ್ಷಕರೊಂದಿಗೆ ಬೆರೆಯಲು ನಿಮಗೆ ಅವಕಾಶ ನೀಡುತ್ತವೆ. ಅವು ಸಮುದಾಯ ಟ್ಯಾಬ್‌ನಲ್ಲಿ ಕಾಣಿಸುತ್ತವೆ ಮತ್ತು ಹೋಮ್ ಅಥವಾ ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಕಾಣಿಸಬಹುದು.

ನಾನು ಸಮುದಾಯ ಟ್ಯಾಬ್‌ಗೆ ಅರ್ಹನಾಗಿದ್ದೇನೆಯೇ?

ಸಮುದಾಯ ಟ್ಯಾಬ್ ಲಭ್ಯವಾಗಲು, ನಿಮ್ಮ ಚಾನಲ್‌ನಲ್ಲಿ ಸುಧಾರಿತ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಸಕ್ರಿಯಗೊಳಿಸಬೇಕು. ಆ್ಯಕ್ಸೆಸ್ ಪಡೆಯಲು ನೀವು ಮೂರು ಆಯ್ಕೆಗಳಿಂದ ಆರಿಸಬಹುದು: ಚಾನಲ್ ಇತಿಹಾಸ, ವೀಡಿಯೊ ದೃಢೀಕರಣ ಅಥವಾ ಮಾನ್ಯವಾದ ID. ಇನ್ನಷ್ಟು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಿ. ಸುಧಾರಿತ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಆನ್ ಮಾಡಿದ ಬಳಿಕ ಸಮುದಾಯ ಟ್ಯಾಬ್ ಲಭ್ಯವಾಗಲು 48 ಗಂಟೆಗಳಷ್ಟು ಸಮಯಾವಕಾಶ ಬೇಕಾಗಬಹುದು.

ನಿಮ್ಮ ಚಾನಲ್ ಜವಾಬ್ದಾರಿಯನ್ನು ಆಧರಿಸಿ ಸಮುದಾಯ ಪೋಸ್ಟ್ ಆ್ಯಕ್ಸೆಸ್ ಬದಲಾಗಬಹುದು. ಚಾನಲ್ ಅನುಮತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಚಾನಲ್‌ನ ಪ್ರೇಕ್ಷಕರನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಿದ್ದರೆ, ನಿಮ್ಮ ಸಮುದಾಯ ಟ್ಯಾಬ್ ನಿಮಗೆ ಮಾತ್ರ ಗೋಚರಿಸುತ್ತದೆಯೇ ಹೊರತು ನಿಮ್ಮ ವೀಕ್ಷಕರಿಗಲ್ಲ. ನೀವು ಹೊಸ ಪೋಸ್ಟ್‌ಗಳನ್ನು ರಚಿಸಲು ಸಹ ಸಾಧ್ಯವಿಲ್ಲ, ಆದರೆ ನೀವು ಹಿಂದಿನ ಪೋಸ್ಟ್‌ಗಳನ್ನು ವೀಕ್ಷಿಸಬಹುದು. ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಿ.

ನನ್ನ ಸಮುದಾಯ ಪೋಸ್ಟ್‌ಗಳನ್ನು ನಾನು ಎಲ್ಲಿ ನೋಡಬಹುದು?

ನಿಮ್ಮ ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿ ಮತ್ತು YouTube Studio ದ ಕಂಟೆಂಟ್ ವಿಭಾಗದ ಅಡಿಯಲ್ಲಿ ನಿಮ್ಮ ಸಮುದಾಯ ಪೋಸ್ಟ್‌ಗಳನ್ನು ನೋಡಬಹುದು. YouTube Studio ದಲ್ಲಿ ನಿಮ್ಮ ಪೋಸ್ಟ್‌ಗಳನ್ನು ಪಡೆಯಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ಪೋಸ್ಟ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.

ನೀವು ಸಮುದಾಯ ಪೋಸ್ಟ್‌ಗಳನ್ನು ಭವಿಷ್ಯದ ಪ್ರಕಟಣೆ ದಿನಾಂಕಕ್ಕೆ ನಿಗದಿಪಡಿಸಿದ್ದರೆ ಅವು YouTube Studio ದಲ್ಲಿ ಮತ್ತು ಸಮುದಾಯ ಟ್ಯಾಬ್‌ನ “ನಿಗದಿಪಡಿಸಿರುವುದು” ವಿಭಾಗದಲ್ಲಿ ಇರುತ್ತವೆ. ಸಮುದಾಯ ಟ್ಯಾಬ್‌ನ “ಆರ್ಕೈವ್ ಮಾಡಲಾಗಿದೆ” ವಿಭಾಗಕ್ಕೆ ನ್ಯಾವಿಗೇಟ್ ಮಾಡುವ ಮೂಲಕ, ಅವಧಿ ಮುಗಿದ ನಿಮ್ಮ ಪೋಸ್ಟ್‌ಗಳನ್ನು ಸಹ ನೀವು ನೋಡಬಹುದು. ಈ ವಿಭಾಗ ನಿಮಗೆ ಮಾತ್ರ ಗೋಚರಿಸುತ್ತದೆ.

ಗಮನಿಸಿ: ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಸಮುದಾಯ ಪೋಸ್ಟ್‌ಗಳನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ನಿಮ್ಮ ಪೋಸ್ಟ್ ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿದೆ ಎಂದು ಕಂಡುಬಂದರೆ, ಅದನ್ನು ತೆಗೆದುಹಾಕಬಹುದು ಮತ್ತು ಚಾನಲ್‌ಗೆ ಸ್ಟ್ರೈಕ್ ಅನ್ನು ಅನ್ವಯಿಸಬಹುದಾಗಿದೆ.

ನಾನು ಪೋಸ್ಟ್ ಮಾಡಿದಾಗ ನನ್ನ ವೀಕ್ಷಕರಿಗೆ ಸೂಚನೆ ನೀಡಲಾಗುತ್ತದೆಯೇ?

ತಾವು ಸಬ್‌ಸ್ಕ್ರೈಬ್ ಮಾಡಿರುವ ಚಾನಲ್‌ಗಳಿಗಾಗಿ ನೋಟಿಫಿಕೇಶನ್‌ಗಳನ್ನು ಪಡೆಯಲು ವೀಕ್ಷಕರು ಆಯ್ಕೆ ಮಾಡಿದ್ದರೆ, ಅವರು ಒಮ್ಮೊಮ್ಮೆ ಸಮುದಾಯ ಪೋಸ್ಟ್ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ.

ಬೆಲ್ ಸೆಟ್ಟಿಂಗ್‌ಗಳಲ್ಲಿ "ಯಾವುದೂ ಇಲ್ಲ" ಎಂಬುದನ್ನು ಆಯ್ಕೆ ಮಾಡುವ ಮೂಲಕ, ವೀಕ್ಷಕರು, ಪೋಸ್ಟ್‌ನ ನೋಟಿಫಿಕೇಶನ್‌ಗಳನ್ನು ಪಡೆಯುವುದರಿಂದ ಹೊರಗುಳಿಯಬಹುದು.

ನಿಮ್ಮ ಚಾನಲ್‌ನಿಂದ ಆಗಾಗ ವೀಡಿಯೊಗಳನ್ನು ವೀಕ್ಷಿಸುವ, ಆದರೆ ಸಬ್‌ಸ್ಕ್ರೈಬ್ ಮಾಡಿರದ ವೀಕ್ಷಕರಿಗೆ ನಾವು ಒಮ್ಮೊಮ್ಮೆ ಪೋಸ್ಟ್‌ನ ನೋಟಿಫಿಕೇಶನ್‌ಗಳನ್ನು ಕಳುಹಿಸಬಹುದು. ವೀಕ್ಷಕರ ನೋಟಿಫಿಕೇಶನ್ ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಸಮುದಾಯ ಪೋಸ್ಟ್‌ನಲ್ಲಿ ಕಾಮೆಂಟ್‌ಗಳನ್ನು ಏಕೆ ಆಫ್ ಮಾಡಲಾಗಿದೆ?

ಈ ಸೂಚನೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಚಾನಲ್‌ನ ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್‌ಗಳು “ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಿ” ಎಂದು ಸೆಟ್ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕಂಪ್ಯೂಟರ್‌ನಲ್ಲಿ YouTube Studio ದಲ್ಲಿ ವೈಯಕ್ತಿಕ ಪೋಸ್ಟ್‌ಗಾಗಿ ನೀವು ಕಾಮೆಂಟ್‌ಗಳನ್ನು ಸಹ ಆನ್ ಮಾಡಬಹುದು.

ಸುರಕ್ಷತಾ ಕಾರಣಗಳಿಗಾಗಿ ಕಾಮೆಂಟ್‌ಗಳನ್ನು YouTube ಆಫ್ ಮಾಡಿರಬಹುದು, ಉದಾಹರಣೆಗೆ: ಅಪ್ರಾಪ್ತ ವಯಸ್ಕರನ್ನು ರಕ್ಷಿಸಲು ಅಥವಾ ಇತರ ಸುರಕ್ಷತಾ ಸಮಸ್ಯೆಗಳ ಕಾರಣದಿಂದ. ಕಾಮೆಂಟ್‌ಗಳನ್ನು ಏಕೆ ಆಫ್ ಮಾಡಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ವೀಡಿಯೊಗಳನ್ನು ಹಂಚಿಕೊಳ್ಳುವ ಸಮುದಾಯ ಪೋಸ್ಟ್‌ಗಳು ಆ ವೀಡಿಯೊಗಳ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಪ್ರತಿಬಿಂಬಿಸುತ್ತವೆ. ನೀವು ಪೋಸ್ಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗ, ಮತ್ತು ವೀಡಿಯೊದ ಕಾಮೆಂಟ್‌ಗಳು ಆಫ್ ಆಗಿದ್ದಾಗ, ನಿಮ್ಮ ಪೋಸ್ಟ್‌ಗಾಗಿಯೂ ಕಾಮೆಂಟ್‌ಗಳನ್ನು ಆಫ್ ಮಾಡಲಾಗುತ್ತದೆ. ವೀಡಿಯೊಗಾಗಿ ಕಾಮೆಂಟ್‌ಗಳನ್ನು ಆಫ್ ಮಾಡಿರಬಹುದು, ಏಕೆಂದರೆ:

ನೀವು ಹಂಚಿಕೊಳ್ಳುತ್ತಿರುವ ವೀಡಿಯೊದ ಮಾಲೀಕರು ನೀವಾಗಿದ್ದರೆ, YouTube Studio ದಲ್ಲಿ ನಿರ್ದಿಷ್ಟ ವೀಡಿಯೊಗಾಗಿ ಕಾಮೆಂಟ್‌ಗಳನ್ನು ಆನ್ ಅಥವಾ ಆಫ್ ಮಾಡಲು ನೀವು ಆಯ್ಕೆ ಮಾಡಬಹುದು. ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5937702184079248192
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false