ಸಮುದಾಯ ಪೋಸ್ಟ್‌ಗಳ ಕುರಿತು ತಿಳಿದುಕೊಳ್ಳಿ

YouTube Community Posts

ಸಮೀಕ್ಷೆಗಳು, ಕ್ವಿಜ್‌ಗಳು, GIF ಗಳು, ಪಠ್ಯ, ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ನಿಮ್ಮ ವೀಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸಂವಹನ ನಡೆಸಲು ನೀವು ಪೋಸ್ಟ್‌ಗಳನ್ನು ರಚಿಸಬಹುದು. ನಿಮ್ಮ ಚಾನಲ್ ಪುಟದಲ್ಲಿರುವ ಸಮುದಾಯ ಟ್ಯಾಬ್‌ನಲ್ಲಿ ನಿಮ್ಮ ಪ್ರೇಕ್ಷಕರು ನಿಮ್ಮ ಪೋಸ್ಟ್‌ಗಳನ್ನು ಕಾಣಬಹುದು. ಪೋಸ್ಟ್‌ಗಳು ತಮ್ಮ ಹೋಮ್ ಪೇಜ್‌ನಲ್ಲಿ ಅಥವಾ ತಮ್ಮ ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಸಹ ಕಾಣಿಸಬಹುದು ಮತ್ತು ಅವರು ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿದ್ದರೆ, ನೀವು ಪೋಸ್ಟ್ ಮಾಡಿದಾಗ ಅವರು ನೋಟಿಫಿಕೇಶನ್ ಅನ್ನು ಪಡೆಯಬಹುದು.

ಹೀಗಿದ್ದರೆ ಪೋಸ್ಟ್‌ಗಳು ಲಭ್ಯವಿರುವುದಿಲ್ಲ:

ನಿಮ್ಮ ಚಾನಲ್‌ನ ಪ್ರೇಕ್ಷಕರನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಿದ್ದರೆ, ನಿಮ್ಮ ಸಮುದಾಯ ಟ್ಯಾಬ್ ನಿಮಗೆ ಮಾತ್ರ ಗೋಚರಿಸುತ್ತದೆಯೇ ಹೊರತು ನಿಮ್ಮ ವೀಕ್ಷಕರಿಗಲ್ಲ. ನೀವು ಹೊಸ ಪೋಸ್ಟ್‌ಗಳನ್ನು ರಚಿಸಲು ಸಹ ಸಾಧ್ಯವಿಲ್ಲ, ಆದರೆ ನೀವು ಹಿಂದಿನ ಪೋಸ್ಟ್‌ಗಳನ್ನು ವೀಕ್ಷಿಸಬಹುದು.

ಗಮನಿಸಿ: ನಿಮ್ಮ ಚಾನಲ್ ಜವಾಬ್ದಾರಿಯನ್ನು ಆಧರಿಸಿ ಸಮುದಾಯ ಪೋಸ್ಟ್ ಆ್ಯಕ್ಸೆಸ್ ಅನ್ನು ಬದಲಾಯಿಸಬಹುದು.

ನಿಮ್ಮ ಪೋಸ್ಟ್‌ಗಳನ್ನು ವೀಕ್ಷಿಸಿ

ನಿಮ್ಮ ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿ ಮತ್ತು YouTube Studio ದ ಕಂಟೆಂಟ್ ವಿಭಾಗದ ಅಡಿಯಲ್ಲಿ ನಿಮ್ಮ ಚಾನಲ್‌ನ ಸಮುದಾಯ ಪೋಸ್ಟ್‌ಗಳನ್ನು ನೀವು ನೋಡಬಹುದು. YouTube Studio ದಲ್ಲಿ ನಿಮ್ಮ ಪೋಸ್ಟ್‌ಗಳನ್ನು ಪಡೆಯಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ಪೋಸ್ಟ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.

ನೀವು ಪೋಸ್ಟ್‌ಗಳನ್ನು ಭವಿಷ್ಯದ ಪ್ರಕಟಣೆ ದಿನಾಂಕಕ್ಕೆ ನಿಗದಿಪಡಿಸಿದ್ದರೆ, ಅವುಗಳು YouTube Studio ದಲ್ಲಿ ಮತ್ತು ಸಮುದಾಯ ಟ್ಯಾಬ್‌ನ “ನಿಗದಿಪಡಿಸಿರುವುದು” ವಿಭಾಗದಲ್ಲಿ ಇರುತ್ತವೆ. ಸಮುದಾಯ ಟ್ಯಾಬ್‌ನ “ಆರ್ಕೈವ್ ಮಾಡಲಾಗಿದೆ” ವಿಭಾಗಕ್ಕೆ ನ್ಯಾವಿಗೇಟ್ ಮಾಡುವ ಮೂಲಕ, ಅವಧಿ ಮುಗಿದ ನಿಮ್ಮ ಪೋಸ್ಟ್‌ಗಳನ್ನು ಸಹ ನೀವು ನೋಡಬಹುದು. ಈ ವಿಭಾಗ ನಿಮಗೆ ಮಾತ್ರ ಗೋಚರಿಸುತ್ತದೆ.

ಗಮನಿಸಿ: ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪೋಸ್ಟ್‌ಗಳನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ನಿಮ್ಮ ಪೋಸ್ಟ್ ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿದೆ ಎಂದು ಕಂಡುಬಂದರೆ, ಅದನ್ನು ತೆಗೆದುಹಾಕಬಹುದು ಮತ್ತು ಚಾನಲ್‌ಗೆ ಸ್ಟ್ರೈಕ್ ಅನ್ನು ಅನ್ವಯಿಸಬಹುದಾಗಿದೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಚಾನಲ್‌ಗಳು, ಪೋಸ್ಟ್‌ಗಳು ಸೇರಿದಂತೆ ಕೆಲವು ಫೀಚರ್‌ಗಳಿಗೆ ತಮ್ಮ ಆ್ಯಕ್ಸೆಸ್ ಅನ್ನು ನಿರ್ಬಂಧಿಸಬಹುದು.

ಪೋಸ್ಟ್‌ಗಳಲ್ಲಿ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿ

ನಿಮ್ಮ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಆಫ್ ಮಾಡಿದ್ದರೆ, ನಿಮ್ಮ ಚಾನಲ್‌ನ ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್‌ಗಳನ್ನು "ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಿ" ಎಂದು ಸೆಟ್ ಮಾಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕಂಪ್ಯೂಟರ್‌ನಲ್ಲಿನ YouTube Studio ದಲ್ಲಿ ವೈಯಕ್ತಿಕ ಪೋಸ್ಟ್‌ಗಾಗಿ ನೀವು ಕಾಮೆಂಟ್‌ಗಳನ್ನು ಸಹ ಆನ್ ಮಾಡಬಹುದು.

ಸುರಕ್ಷತಾ ಕಾರಣಗಳಿಗಾಗಿ ಕಾಮೆಂಟ್‌ಗಳನ್ನು YouTube ಆಫ್ ಮಾಡಿರಬಹುದು, ಉದಾಹರಣೆಗೆ: ಅಪ್ರಾಪ್ತ ವಯಸ್ಕರನ್ನು ರಕ್ಷಿಸಲು ಅಥವಾ ಇತರ ಸುರಕ್ಷತಾ ಸಮಸ್ಯೆಗಳ ಕಾರಣದಿಂದ. ಕಾಮೆಂಟ್‌ಗಳನ್ನು ಏಕೆ ಆಫ್ ಮಾಡಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ವೀಡಿಯೊಗಳನ್ನು ಹಂಚಿಕೊಳ್ಳುವ ಪೋಸ್ಟ್‌ಗಳು ಆ ವೀಡಿಯೊಗಳ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಪ್ರತಿಬಿಂಬಿಸುತ್ತವೆ. ನೀವು ಪೋಸ್ಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗ ಮತ್ತು ವೀಡಿಯೊದ ಕಾಮೆಂಟ್‌ಗಳು ಆಫ್ ಆಗಿದ್ದಾಗ, ನಿಮ್ಮ ಪೋಸ್ಟ್‌ಗಾಗಿಯೂ ಕಾಮೆಂಟ್‌ಗಳನ್ನು ಆಫ್ ಮಾಡಲಾಗುತ್ತದೆ. ವೀಡಿಯೊಗಾಗಿ ಕಾಮೆಂಟ್‌ಗಳನ್ನು ಆಫ್ ಮಾಡಿರಬಹುದು, ಏಕೆಂದರೆ:

ನೀವು ಹಂಚಿಕೊಳ್ಳುತ್ತಿರುವ ವೀಡಿಯೊದ ಮಾಲೀಕರು ನೀವಾಗಿದ್ದರೆ, YouTube Studio ದಲ್ಲಿ ನಿರ್ದಿಷ್ಟ ವೀಡಿಯೊಗಾಗಿ ಕಾಮೆಂಟ್‌ಗಳನ್ನು ಆನ್ ಅಥವಾ ಆಫ್ ಮಾಡಲು ನೀವು ಆಯ್ಕೆ ಮಾಡಬಹುದು. ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9361328880793681058
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false