YouTube ನಲ್ಲಿ ಚಾನಲ್ ಸದಸ್ಯತ್ವಗಳನ್ನು ಪ್ರಾರಂಭಿಸಿ

YouTube ನಲ್ಲಿ ಮಕ್ಕಳ ಕಂಟೆಂಟ್‌ನಲ್ಲಿ ಡೇಟಾವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದಕ್ಕೆ ನಾವು ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಇದರಿಂದಾಗಿ, ಈ ಲೇಖನದಲ್ಲಿರುವ ಕೆಲವು ಸೂಚನೆಗಳು ಬದಲಾಗಿರಬಹುದು. ಇನ್ನಷ್ಟು ತಿಳಿಯಿರಿ.

ವೀಕ್ಷಕರು ಮಾಸಿಕ ಪಾವತಿಗಳ ಮೂಲಕ ನಿಮ್ಮ ಚಾನಲ್ ಅನ್ನು ಸೇರಿಕೊಳ್ಳಲು ಮತ್ತು ಅದಕ್ಕೆ ಪ್ರತಿಫಲವಾಗಿ ಬ್ಯಾಡ್ಜ್‌‌ಗಳು, ಎಮೋಜಿ ಮತ್ತು ಇತರ ಸರಕುಗಳ ಹಾಗೆ, ಸದಸ್ಯರಿಗೆ-ಮಾತ್ರ ಮೀಸಲಾದ ವಿಶೇಷ ಪರ್ಕ್‌ಗಳನ್ನು ಪಡೆಯಲು ಚಾನಲ್ ಸದಸ್ಯತ್ವಗಳು ಅವಕಾಶ ನೀಡುತ್ತವೆ.

ನಿಮ್ಮ ಚಾನಲ್‌ಗಾಗಿ ಸದಸ್ಯತ್ವಗಳನ್ನು ಪ್ರಾರಂಭಿಸಲು:

  1. ಚಾನಲ್ ಸದಸ್ಯತ್ವಗಳಿಗಾಗಿ ಇರಬೇಕಾದ ಅರ್ಹತೆಗಳು, ಸ್ಥಾನ ಲಭ್ಯತೆ, ಮತ್ತು ನೀತಿಗಳು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿ.
  2. ನಿಮ್ಮ ಚಾನಲ್‌ಗಾಗಿ ಅಥವಾ ನಿಮ್ಮ ನೆಟ್‌ವರ್ಕ್‌ಗಾಗಿ ಸದಸ್ಯತ್ವಗಳನ್ನು ಆನ್ ಮಾಡಿ.
  3. ನಿಮ್ಮ ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂಗಾಗಿ ಪರ್ಕ್‌ಗಳು ಮತ್ತು ಹಂತಗಳನ್ನು ರಚಿಸಿ.

ಚಾನಲ್ ಸದಸ್ಯತ್ವಗಳು

 

ಲಭ್ಯತೆ ಮತ್ತು ಅರ್ಹತೆ

ಅರ್ಹತೆ

ಚಾನಲ್ ಸದಸ್ಯತ್ವಗಳಿಗೆ ಅರ್ಹರಾಗಲು, ಫ್ಯಾನ್ ಫಂಡಿಂಗ್ ಫೀಚರ್‌ಗಳಿಗೆ ಸಂಬಂಧಿಸಿದ ಕನಿಷ್ಠ ಅವಶ್ಯಕತೆಗಳನ್ನು ನೀವು ಮೊದಲು ಪೂರೈಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ, ಸದಸ್ಯತ್ವಗಳಿಗೆ ಸಂಬಂಧಿಸಿದಂತೆ ಕೆಳಗೆ ನೀಡಲಾದ ಇತರ ಮಾನದಂಡಗಳನ್ನು ನೀವು ಪೂರೈಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ:

  • ಲಭ್ಯ ಸ್ಥಳಗಳ ಪೈಕಿ ಒಂದರಲ್ಲಿ ನೀವು ವಾಸಿಸುತ್ತಿರಬೇಕು.
  • ನಿಮ್ಮ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಿರಬಾರದು ಹಾಗೂ ನಿಮ್ಮ ಚಾನಲ್‌ನಲ್ಲಿ ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಿರುವ ಗಮನಾರ್ಹ ಸಂಖ್ಯೆಯ ವೀಡಿಯೊಗಳಿರಬಾರದು.
  • ನಿಮ್ಮ ಚಾನಲ್ ಗಮನಾರ್ಹ ಸಂಖ್ಯೆಯ ಅನರ್ಹ ವೀಡಿಯೊಗಳನ್ನು ಹೊಂದಿರಬಾರದು.
    • ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿರುವ ವೀಡಿಯೊಗಳು ಅಥವಾ ಸಂಗೀತದ ಕ್ಲೇಮ್‌ಗಳಿರುವ ವೀಡಿಯೊಗಳನ್ನು ಅನರ್ಹವೆಂದು ಪರಿಗಣಿಸಲಾಗುತ್ತದೆ.
  • ನೀವು (ಮತ್ತು ನಿಮ್ಮ MCN) ನಮ್ಮ ನಿಯಮಗಳು ಮತ್ತು ನೀತಿಗಳಿಗೆ (ಸಂಬಂಧಿತ ವಾಣಿಜ್ಯ ಉತ್ಪನ್ನ ಮಾಡ್ಯೂಲ್ ಸೇರಿದಂತೆ) ಸಮ್ಮತಿಸಿರಬೇಕು ಮತ್ತು ಅವುಗಳನ್ನು ಅನುಸರಿಸುತ್ತಿರಬೇಕು.
    • ಸೂಚನೆ: ಕೆಲವು ಸಂಗೀತ ಚಾನಲ್‌ಗಳು ಚಾನಲ್ ಸದಸ್ಯತ್ವಗಳಿಗೆ ಅರ್ಹತೆ ಹೊಂದಿಲ್ಲದಿರಬಹುದು. ಉದಾಹರಣೆಗೆ, SRAV ಒಪ್ಪಂದದ ಅಡಿಯಲ್ಲಿನ ಸಂಗೀತ ಚಾನಲ್‌ಗಳು ಪ್ರಸ್ತುತ ಅರ್ಹವಾಗಿಲ್ಲ.
ಲಭ್ಯತೆ

ಚಾನಲ್ ಸದಸ್ಯತ್ವಗಳು ಸದ್ಯಕ್ಕೆ ಕೆಳಗಿನ ಸ್ಥಳಗಳಲ್ಲಿನ ಅರ್ಹ ರಚನೆಕಾರರಿಗೆ ಲಭ್ಯವಿವೆ:

  • ಅಲ್ಜೀರಿಯಾ
  • ಅಮೇರಿಕನ್ ಸಮೋವಾ
  • ಅರ್ಜೆಂಟಿನಾ
  • ಅರುಬ
  • ಆಸ್ಟ್ರೇಲಿಯಾ
  • ಆಸ್ಟ್ರಿಯಾ
  • ಬಹರೈನ್
  • ಬೆಲಾರಸ್
  • ಬೆಲ್ಜಿಯಂ
  • ಬರ್ಮುಡಾ
  • ಬೊಲಿವಿಯಾ
  • ಬೋಸ್ನಿಯಾ ಮತ್ತು ಹರ್ಜೆಗೋವಿನಾ
  • ಬ್ರೆಜಿಲ್
  • ಬಲ್ಗೇರಿಯಾ
  • ಕೆನಡಾ
  • ಕೇಮ್ಯಾನ್ ದ್ವೀಪಗಳು
  • ಚಿಲಿ
  • ಕೊಲಂಬಿಯಾ
  • ಕೋಸ್ಟ ರಿಕಾ
  • ಕ್ರೋವೇಶಿಯಾ
  • ಸೈಪ್ರಸ್
  • ಚೆಕ್ ಗಣರಾಜ್ಯ
  • ಡೆನ್ಮಾರ್ಕ್
  • ಡೊಮಿನಿಕನ್ ರಿಪಬ್ಲಿಕ್
  • ಈಕ್ವಡೋರ್
  • ಈಜಿಪ್ಟ್
  • ಎಲ್ ಸಾಲ್ವಡೋರ್
  • ಎಸ್ಟೋನಿಯಾ
  • ಫಿನ್‌ಲ್ಯಾಂಡ್
  • ಫ್ರಾನ್ಸ್
  • ಫ್ರೆಂಚ್ ಗಯಾನಾ
  • ಫ್ರೆಂಚ್ ಪೊಲಿನೇಶಿಯಾ
  • ಜರ್ಮನಿ
  • ಗ್ರೀಸ್
  • ಗ್ವಾಡೆಲೋಪ್
  • ಗುವಾಮ್
  • ಗ್ವಾಟೆಮಾಲಾ
  • ಹೊಂಡೂರಸ್
  • ಹಾಂಗ್‌ಕಾಂಗ್
  • ಹಂಗೇರಿ
  • ಐಸ್‌ಲ್ಯಾಂಡ್
  • ಭಾರತ
  • ಇಂಡೋನೇಶಿಯಾ
  • ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಜಪಾನ್
  • ಜೋರ್ಡಾನ್
  • ಕೀನ್ಯಾ
  • ಕುವೈತ್
  • ಲಾಟ್ವಿಯಾ
  • ಲೆಬೆನಾನ್
  • ಲೈಕೆನ್‌ಸ್ಟೈನ್
  • ಲಿಥುವೇನಿಯಾ
  • ಲಕ್ಸೆಂಬರ್ಗ್
  • ಮಲೇಶಿಯಾ
  • ಮಾಲ್ಟಾ
  • ಮೆಕ್ಸಿಕೊ
  • ಮೊರಾಕ್ಕೋ
  • ನೆದರ್‌ಲ್ಯಾಂಡ್ಸ್
  • ನ್ಯೂಜಿಲ್ಯಾಂಡ್
  • ನಿಕರಾಗುವಾ
  • ನೈಜೀರಿಯಾ
  • ಉತ್ತರ ಮೆಸಿಡೋನಿಯಾ
  • ಉತ್ತರ ಮರಿಯಾನ ದ್ವೀಪಗಳು
  • ನಾರ್ವೇ
  • ಓಮನ್
  • ಪನಾಮಾ
  • ಪಪುವಾ ನ್ಯೂ ಗಿನೀ
  • ಪರಾಗ್ವೇ
  • ಪೆರು
  • ಫಿಲಿಫೈನ್ಸ್
  • ಪೋಲ್ಯಾಂಡ್
  • ಪೋರ್ಚುಗಲ್
  • ಪೋರ್ಟೊ ರಿಕೊ
  • ಕತಾರ್
  • ರೊಮೇನಿಯಾ
  • ರಷ್ಯಾ
  • ಸೌದಿ ಅರೇಬಿಯಾ
  • ಸೆನೆಗಲ್
  • ಸೆರ್ಬಿಯಾ
  • ಸಿಂಗಾಪೂರ್
  • ಸ್ಲೋವಾಕಿಯಾ
  • ಸ್ಲೋವೇನಿಯಾ
  • ದಕ್ಷಿಣ ಆಫ್ರಿಕಾ
  • ದಕ್ಷಿಣ ಕೊರಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ತೈವಾನ್
  • ಥಾಯ್ಲೆಂಡ್
  • ತುರ್ಕಿಯೆ
  • ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು
  • ಯು.ಎಸ್. ವರ್ಜಿನ್ ದ್ವೀಪಗಳು
  • ಉಗಾಂಡಾ
  • ಉಕ್ರೇನ್
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಯುನೈಟೆಡ್ ಕಿಂಗ್‌ಡಮ್
  • ಯುನೈಟೆಡ್ ಸ್ಟೇಟ್ಸ್
  • ಉರುಗ್ವೆ
  • ವಿಯೆಟ್ನಾಂ

ಚಾನಲ್ ಸದಸ್ಯತ್ವಗಳಿಗಾಗಿ ನೀತಿಗಳು ಮತ್ತು ಮಾರ್ಗಸೂಚಿಗಳು

ರಚನೆಕಾರರು ಮತ್ತು MCN ಗಳಿಗಾಗಿ ಚಾನಲ್ ಸದಸ್ಯತ್ವಗಳ ನೀತಿಗಳು
ಚಾನಲ್ ಸದಸ್ಯತ್ವಗಳು ಎಂಬುದು ಫ್ಯಾನ್ ಫಂಡಿಂಗ್ ಫೀಚರ್ ಆಗಿದೆ. ಆದ್ದರಿಂದ, ಭಾಗವಹಿಸುವ ರಚನೆಕಾರರು (ಮತ್ತು ಅವರ MCN ಗಳು) YouTube ಫ್ಯಾನ್ ಫಂಡಿಂಗ್ ಫೀಚರ್‌ಗಳಿಗೆ ಅನ್ವಯಿಸುವ ಎಲ್ಲಾ ನೀತಿಗಳಿಗೆ ಒಳಪಟ್ಟಿರುತ್ತಾರೆ.
ನಿಮ್ಮ ಚಾನಲ್, ಚಾನಲ್ ಸದಸ್ಯತ್ವಗಳಿಗಾಗಿ ಇರುವ ಕಂಟೆಂಟ್ ಮತ್ತು ಪರ್ಕ್ ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯವಾಗಿದೆ. ನಿಮ್ಮ ಸದಸ್ಯತ್ವಗಳಲ್ಲಿ ಒಳಗೊಂಡಿರುವ ಎಲ್ಲಾ ಪರ್ಕ್‌ಗಳು - ನಿಮ್ಮ ಸದಸ್ಯತ್ವದ ವಿಂಡೋದಲ್ಲಿ ಪಟ್ಟಿ ಮಾಡಿರಲಿ ಅಥವಾ ಇತರ ವಿಧಾನಗಳಲ್ಲಿ ಲಭ್ಯವಾಗಲಿ - ಈ ನೀತಿಗಳಿಗೆ ಒಳಪಟ್ಟಿವೆ. ನಾವು ಈ ನೀತಿಗಳನ್ನು ಕಾಲಕಾಲಕ್ಕೆ ಅಪ್‍ಡೇಟ್ ಮಾಡಬಹುದು.
ಚಾನಲ್ ಸದಸ್ಯತ್ವಗಳಿಗಾಗಿ ಕಂಟೆಂಟ್ ಮತ್ತು ಪರ್ಕ್ ಮಾರ್ಗಸೂಚಿಗಳು

ಎಲ್ಲಾ ಚಾನಲ್ ಸದಸ್ಯತ್ವಗಳ ಪರ್ಕ್‌ಗಳು — ಬ್ಯಾಡ್ಜ್‌ಗಳು, ಎಮೋಜಿ, ಪರ್ಕ್‌ಗಳು, ವೀಡಿಯೊಗಳು, ಲೈವ್ ಚಾಟ್‌ಗಳು ಮತ್ತು ಇತರ ಕಂಟೆಂಟ್ — ಸದಸ್ಯತ್ವದ ನೀತಿಗಳು ಹಾಗೂ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ.

ನಿಮ್ಮ ಸದಸ್ಯರಿಗೆ ವಿಶೇಷ ಭಾವನೆ ಮೂಡಿಸುವಂತಹ ಪರ್ಕ್‌ಗಳನ್ನು ನೀವು ಸೇರಿಸಬಹುದು. ಆದರೆ, ನಮ್ಮ ನೀತಿಗಳು ಹಾಗೂ ನಿಯಮಗಳ ಅಡಿಯಲ್ಲಿ, ಸದಸ್ಯರಿಗೆ-ಮಾತ್ರ ಮೀಸಲಾದ ಈ ಕೆಳಗಿನ ಪರ್ಕ್‌ಗಳಿಗೆ ಅನುಮತಿಯಿಲ್ಲ:

  • YouTube ನಲ್ಲಿ ಲಭ್ಯವಿರುವ ಕಂಟೆಂಟ್‌ನ (ಸಂಗೀತ ಸೇರಿದಂತೆ) ಡೌನ್‌ಲೋಡ್‌ಗಳು
  • ವ್ಯಕ್ತಿಗತ 1:1 ಮೀಟಿಂಗ್‌ಗಳು
  • ಸ್ವೀಕರಿಸಲು ನಿಮ್ಮ ಸದಸ್ಯರಲ್ಲಿ ಒಬ್ಬರು ಅಥವಾ ಕೆಲವರನ್ನು (ಆದರೆ ಎಲ್ಲರನ್ನೂ ಅಲ್ಲ) ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುವ ಯಾವುದೇ ಪ್ರಯೋಜನಗಳು. ಅವು ಈ ಕೆಳಗಿನವುಗಳನ್ನು ಒಳಗೊಂಡಿವೆ, ಆದರೆ ಇವುಗಳಿಗೆ ಸೀಮಿತವಾಗಿಲ್ಲ:
    • ಸ್ಪರ್ಧೆಗಳು
    • ಲಾಟರಿಗಳು
    • ಸ್ವೀಪ್‌ಸ್ಟೇಕ್‌ಗಳು
  • ಮಕ್ಕಳಿಗೆ ಮಾರಾಟ ಮಾಡಲಾಗುವ, ಅವರ ಕಡೆಗೆ ನಿರ್ದೇಶಿಸಲಾಗುವ ಅಥವಾ ಅವರನ್ನು ಟಾರ್ಗೆಟ್ ಮಾಡುವ ಪರ್ಕ್‌ಗಳು ಅಥವಾ ಮಕ್ಕಳಿಗೆ ಆಕರ್ಷಕವಾಗಿರಬಹುದಾದ ಅಥವಾ ಸೂಕ್ತವಲ್ಲದ ಪರ್ಕ್‌ಗಳು
  • ನಿಮ್ಮ ಚಾನಲ್ ಸದಸ್ಯತ್ವ ಪ್ರೋಗ್ರಾಂಗೆ ಸೇರಲು ತಮ್ಮ ಪೋಷಕರನ್ನು ಕೇಳಲು ಮಕ್ಕಳನ್ನು ಪ್ರೋತ್ಸಾಹಿಸುವ ಪರ್ಕ್‌ಗಳು 

ಚಾನಲ್ ಸದಸ್ಯತ್ವಗಳಿಗಾಗಿ ರದ್ದತಿಗಳು, ಕೊನೆಗೊಳಿಸುವಿಕೆಗಳು ಮತ್ತು ಮರುಪಾವತಿಗಳು

ಸದಸ್ಯರು ಮರುಪಾವತಿಗಾಗಿ ವಿನಂತಿಸಿದರೆ, ಆ ಕ್ಲೇಮ್‌ನ ಸಿಂಧುತ್ವದ ಬಗ್ಗೆ YouTube ಸಂಪೂರ್ಣ ವಿವೇಚನೆಯನ್ನು ಹೊಂದಿರುತ್ತದೆ. ‌ನಾವು ಸದಸ್ಯರಿಗೆ ಮರುಪಾವತಿಯನ್ನು ನೀಡಿದಾಗ, ಮರುಪಾವತಿ ಮಾಡಿದ ಸದಸ್ಯರಿಗೆ ಮರುಪಾವತಿ ಮಾಡಲು ನಿಮ್ಮ ಪಾಲನ್ನು ನಿಮ್ಮ YouTube ಗಾಗಿ AdSense ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಪಾವತಿಸಿದ ಚಾನಲ್ ಸದಸ್ಯತ್ವಗಳಿಗಾಗಿ YouTube ನ ಮರುಪಾವತಿ ನೀತಿಯ ಕುರಿತು ತಿಳಿಯಿರಿ.
ಈ ಕೆಳಗಿನ ಯಾವುದೇ ಕಾರಣಗಳಿಂದಾಗಿ ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂ ಅನ್ನು ಕೊನೆಗೊಳಿಸಿದರೆ, ಎಲ್ಲಾ ಸಕ್ರಿಯ ಪಾವತಿಸಿದ ಸದಸ್ಯರು ತಮ್ಮ ಕೊನೆಯ ಪಾವತಿಗಾಗಿ ಮರುಪಾವತಿಯನ್ನು ಪಡೆಯುತ್ತಾರೆ:
  • ಚಾನಲ್ ಮೂಲಕ ಕೊನೆಗೊಳಿಸಲಾಗಿರುವುದು
  • YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕಿರುವುದು
  • ದುರ್ಬಳಕೆ ಅಥವಾ ವಂಚನೆಯ ಕಾರಣದಿಂದ
  • ನಮ್ಮ ನಿಯಮಗಳು ಅಥವಾ ನೀತಿಗಳ ಉಲ್ಲಂಘನೆ

ಸೂಚನೆ: ಮರುಪಾವತಿಸಲಾದ ಹಣವನ್ನು ಚಾನಲ್‌ನ ಆದಾಯದ ಪಾಲಿನಿಂದ ಕಡಿತಗೊಳಿಸಲಾಗುತ್ತದೆ.

ವಿರಾಮಗೊಳಿಸಲಾದ ಮೋಡ್ ನಿಮ್ಮ ಚಾನಲ್‌ನ ಮೇಲೆ ಹೇಗೆ ಪ್ರಭಾವ ಬೀರುತ್ತದೆ

ಹೀಗಾದಲ್ಲಿ, ನಿಮ್ಮ ಚಾನಲ್‌ನ ಸದಸ್ಯತ್ವಗಳು "ವಿರಾಮಗೊಳಿಸಲಾದ ಮೋಡ್" ಗೆ ಪ್ರವೇಶಿಸುತ್ತವೆ:

ನಿಮ್ಮ ಚಾನಲ್ ವಿರಾಮಗೊಳಿಸಲಾದ ಮೋಡ್‌ನಲ್ಲಿರುವಾಗ ಏನಾಗುತ್ತದೆ

ನಿಮ್ಮ ಚಾನಲ್, ವಿರಾಮಗೊಳಿಸಲಾದ ಮೋಡ್‌ನಲ್ಲಿರುವಾಗ:

  • ನಿಮ್ಮ ಸದಸ್ಯರು ಬ್ಯಾಡ್‌ಗಳು, ಎಮೋಜಿ ಮತ್ತು ಸದಸ್ಯರಿಗೆ-ಮಾತ್ರ ಮೀಸಲಾದ ಸಮುದಾಯ ಪೋಸ್ಟ್‌ಗಳನ್ನು ಒಳಗೊಂಡು ನಿಮ್ಮ ಚಾನಲ್‌ನ ಪರ್ಕ್‌ಗಳಿಗೆ ಆ್ಯಕ್ಸೆಸ್ ಕಳೆದುಕೊಳ್ಳುತ್ತಾರೆ.
  • ನಿಮ್ಮ ಸದಸ್ಯರ ಮಾಸಿಕ ಪಾವತಿಗಳನ್ನು ವಿರಾಮಗೊಳಿಸಲಾಗುತ್ತದೆ. 
  • ನಿಮ್ಮ ಚಾನಲ್‌ನಿಂದ "ಸೇರಿಕೊಳ್ಳಿ" ಬಟನ್ ಕಣ್ಮರೆಯಾಗುತ್ತದೆ.

ವಿರಾಮಗೊಳಿಸಲಾದ ಮೋಡ್ ನಿಮ್ಮ ಸದಸ್ಯರನ್ನು ರದ್ದುಗೊಳಿಸುವುದಿಲ್ಲವಾದರೂ, ನಿಮ್ಮ ಚಾನಲ್ ವಿರಾಮಗೊಳಿಸಲಾದ ಮೋಡ್‌ನಲ್ಲಿರುವಾಗಲೂ ಸೇರಿದಂತೆ ಸದಸ್ಯರು ಯಾವಾಗ ಬೇಕಾದರೂ ತಮ್ಮ ಸದಸ್ಯತ್ವವನ್ನು ರದ್ದುಗೊಳಿಸಬಹುದು.

ವಿರಾಮಗೊಳಿಸಲಾದ ಮೋಡ್‍ನಿಂದ ನಿರ್ಗಮಿಸುವುದು ಹೇಗೆ

ವಿರಾಮಗೊಳಿಸಲಾದ ಮೋಡ್‌ನಿಂದ ನಿರ್ಗಮಿಸಲು, ನೀವು ವಿರಾಮಗೊಳಿಸಲಾದ ಮೋಡ್‌ಗೆ ಪ್ರವೇಶಿಸಲು ಕಾರಣವಾದ ಸಮಸ್ಯೆಯನ್ನು ಬಗೆಹರಿಸಬೇಕು. ಬಗೆಹರಿಸಿದ ನಂತರ, ನೀವು ಅಥವಾ ನಿಮ್ಮ MCN, ವಿರಾಮಗೊಳಿಸಲಾದ ಮೋಡ್‌ನಿಂದ ನಿರ್ಗಮಿಸಬಹುದು ಮತ್ತು ಚಾನಲ್ ಸದಸ್ಯತ್ವಗಳನ್ನು ಪುನರಾರಂಭಿಸಬಹುದು:

  1. ಕಂಪ್ಯೂಟರ್‌ನಲ್ಲಿ, studio.youtube.com/channel/UC/monetization/memberships ಗೆ ಹೋಗಿ
  2. ಚಾನಲ್ ಸದಸ್ಯತ್ವಗಳ ಬಾಕ್ಸ್‌ನಲ್ಲಿ, ಆನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. 
    1. ಸೂಚನೆ: ನೀವು (ಅಥವಾ ನಿಮ್ಮ ಹೊಸ MCN) ನಮ್ಮ ನಿಯಮಗಳು ಮತ್ತು ನೀತಿಗಳಿಗೆ (ವಾಣಿಜ್ಯ ಉತ್ಪನ್ನ ಮಾಡ್ಯೂಲ್ ಒಳಗೊಂಡಂತೆ) ಸಮ್ಮತಿಸಿದರೆ ಮತ್ತು ಅವುಗಳನ್ನು ಅನುಸರಿಸುತ್ತಿದ್ದರೆ ಮಾತ್ರ ನೀವು ಸದಸ್ಯತ್ವಗಳನ್ನು ಆನ್ ಮಾಡಬಹುದು.

ನೀವು ಸದಸ್ಯತ್ವಗಳನ್ನು ಪುನರಾರಂಭಿಸಿದ ಬಳಿಕ, ಚಾನಲ್ ಸದಸ್ಯರು ನಿಮ್ಮ ಸದಸ್ಯತ್ವದ ಪರ್ಕ್‌ಗಳಿಗೆ ಮತ್ತೊಮ್ಮೆ ಆ್ಯಕ್ಸೆಸ್ ಪಡೆಯುತ್ತಾರೆ. ಸದಸ್ಯರು ರದ್ದುಗೊಳಿಸದ ಹೊರತು, ಅವರ ಮುಂದಿನ ಬಿಲ್ಲಿಂಗ್ ಸೈಕಲ್‌ನ ಪ್ರಾರಂಭದಲ್ಲಿ ಅವರಿಗೆ ಮತ್ತೊಮ್ಮೆ ಶುಲ್ಕ ವಿಧಿಸಲಾಗುತ್ತದೆ.

ನೀವು ವಿರಾಮಗೊಳಿಸಲಾದ ಮೋಡ್‌ನಲ್ಲಿರುವಾಗ ನಿಮ್ಮ ಸದಸ್ಯರಿಗೆ ಏನಾಗುತ್ತದೆ

ವಿರಾಮಗೊಳಿಸಲಾದ ಮೋಡ್ ಅನ್ನು ಪ್ರವೇಶಿಸಿದರೆ, ನಿಮ್ಮ ಸದಸ್ಯರನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುವುದಿಲ್ಲ, ಆದರೆ ಸದಸ್ಯರು ಯಾವಾಗ ಬೇಕಾದರೂ ರದ್ದುಗೊಳಿಸಲು ಆಯ್ಕೆ ಮಾಡಬಹುದು. ಆದರೆ, ನಿರ್ದಿಷ್ಟ ಸಮಯಾವಧಿಯ ನಂತರ, ನಿಮ್ಮ ಸದಸ್ಯರನ್ನು ನಾವು ಸ್ವಯಂಚಾಲಿತವಾಗಿ ರದ್ದುಗೊಳಿಸುತ್ತೇವೆ. ಸಮಯದ ಅವಧಿಯು, ನಿಮ್ಮ ಸದಸ್ಯರು ಚಾನಲ್ ಅನ್ನು ಹೇಗೆ ಸೇರಿದ್ದಾರೆ ಎಂಬುದನ್ನು ಆಧರಿಸಿರುತ್ತದೆ:

  • YouTube.com ಮೂಲಕ ಸೇರಿಕೊಳ್ಳುವ ಸದಸ್ಯರು: 120 ದಿನಗಳು ಕಳೆದರೂ ನಿಮ್ಮ ಚಾನಲ್ ವಿರಾಮಗೊಳಿಸಲಾದ ಮೋಡ್‌ನಲ್ಲಿದ್ದರೆ, ಅವರ ಸದಸ್ಯತ್ವವನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ.
  • YouTube Android ಅಥವಾ iOS ಆ್ಯಪ್‌ಗಳ ಮೂಲಕ ಸೇರಿಕೊಳ್ಳುವ ಸದಸ್ಯರು: ನಿಮ್ಮ ಚಾನಲ್ ವಿರಾಮಗೊಳಿಸಲಾದ ಮೋಡ್‌ನಲ್ಲಿರುವಾಗ ಸದಸ್ಯರ ಬಿಲ್ಲಿಂಗ್ ಅವಧಿ ಮುಕ್ತಾಯವಾದರೆ, ಅವರ ಸದಸ್ಯತ್ವವನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ.

ನಿಮ್ಮ ಚಾನಲ್ ವಿರಾಮಗೊಳಿಸಲಾದ ಮೋಡ್‌ನಲ್ಲಿರುವಾಗ ಸದಸ್ಯರು ತಮ್ಮ ಸದಸ್ಯತ್ವವನ್ನು ಸ್ವಯಂ-ಇಚ್ಛೆಯಿಂದ ರದ್ದುಗೊಳಿಸಲು ಆಯ್ಕೆ ಮಾಡಬಹುದು. ಸದಸ್ಯತ್ವದ ಪ್ರೋಗ್ರಾಂ ಅನ್ನು ಪುನರಾರಂಭಿಸಿದಾಗ, ಸದಸ್ಯರು ನಿಮ್ಮ ಚಾನಲ್‌ಗೆ ಮತ್ತೊಮ್ಮೆ ಸೇರಿಕೊಳ್ಳಬಹುದು.

ನೀವು 120 ದಿನಗಳಿಗಿಂತ ಹೆಚ್ಚು ಕಾಲ ವಿರಾಮಗೊಳಿಸಲಾದ ಮೋಡ್‌ನಲ್ಲಿದ್ದರೆ ಏನಾಗುತ್ತದೆ

ನಿಮ್ಮ ಚಾನಲ್, 120 ದಿನಗಳ ಒಳಗೆ ವಿರಾಮಗೊಳಿಸಲಾದ ಮೋಡ್‌ನಿಂದ ನಿರ್ಗಮಿಸದಿದ್ದರೆ, ನಿಮ್ಮ ಚಾನಲ್ ಸದಸ್ಯತ್ವದ ಪ್ರೋಗ್ರಾಂ ಅನ್ನು ಕೊನೆಗೊಳಿಸಲಾಗುತ್ತದೆ ಮತ್ತು ನಿಮ್ಮ ಎಲ್ಲಾ ಸದಸ್ಯರನ್ನು ನೀವು ಕಳೆದುಕೊಳ್ಳುವಿರಿ. ನಿಮ್ಮ ಸದಸ್ಯರಿಗೆ, ನಿಮ್ಮ ಚಾನಲ್‌ನಲ್ಲಿನ ಸದಸ್ಯತ್ವಕ್ಕಾಗಿ ತಮ್ಮ ಕೊನೆಯ ತಿಂಗಳಿನ ಪಾವತಿಯನ್ನು ಸ್ವಯಂಚಾಲಿತವಾಗಿ ಮರುಪಾವತಿಸಲಾಗುತ್ತದೆ. ನಿಮ್ಮ ಸದಸ್ಯರಿಗೆ ಒದಗಿಸಲಾಗುವ ಮರುಪಾವತಿಗಳನ್ನು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಸದಸ್ಯತ್ವದ ಆದಾಯದಿಂದ ನಿಮ್ಮ ಪಾಲನ್ನು ನಾವು ಕಡಿತಗೊಳಿಸುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2605720267309060979
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false