YouTube ಪಾಲುದಾರ ಕಾರ್ಯಕ್ರಮದ ಅವಲೋಕನ ಮತ್ತು ಅರ್ಹತೆ

ಫ್ಯಾನ್ ಫಂಡಿಂಗ್ ಮತ್ತು ಶಾಪಿಂಗ್ ಫೀಚರ್‌ಗಳಿಗೆ ಆರಂಭಿಕ ಆ್ಯಕ್ಸೆಸ್ ಜೊತೆಗೆ ನಾವು YouTube ಪಾಲುದಾರ ಕಾರ್ಯಕ್ರಮವನ್ನು (YPP) ಇನ್ನಷ್ಟು ರಚನೆಕಾರರಿಗೆ ವಿಸ್ತರಿಸುತ್ತಿದ್ದೇವೆ. ವಿಸ್ತೃತ YouTube ಪಾಲುದಾರ ಕಾರ್ಯಕ್ರಮವು ಈ ದೇಶಗಳು/ಪ್ರದೇಶಗಳಲ್ಲಿನ ಅರ್ಹ ರಚನೆಕಾರರಿಗೆ ಲಭ್ಯವಿದೆ. ನೀವು ಈ ದೇಶಗಳು/ಪ್ರದೇಶಗಳಲ್ಲಿ ಒಂದರಲ್ಲಿ ವಾಸವಿದ್ದರೆ, YPP ಗೆ ಬರಲಿರುವ ಬದಲಾವಣೆಗಳ ಕುರಿತು ಇನ್ನಷ್ಟು ತಿಳಿಯಲು ಈ ಲೇಖನವನ್ನು ಓದಿರಿ. 

ನೀವು ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ಒಂದರಲ್ಲಿ ವಾಸವಿರದಿದ್ದರೆ, ನಿಮಗೆ ಸಂಬಂಧಿಸಿದಂತೆ YouTube ಪಾಲುದಾರ ಕಾರ್ಯಕ್ರಮಕ್ಕೆ ಯಾವುದೇ ಬದಲಾವಣೆಗಳಿರುವುದಿಲ್ಲ. 

ವಿಸ್ತೃತ YouTube ಪಾಲುದಾರ ಕಾರ್ಯಕ್ರಮಕ್ಕಾಗಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ನೀವು ಇನ್ನೂ ಅರ್ಹರಲ್ಲದಿದ್ದರೆ, YouTube Studio ದ ಗಳಿಸಿ ಎಂಬ ಪ್ರದೇಶದಲ್ಲಿನ ಸೂಚನೆ ಪಡೆಯಿರಿ ಎಂಬುದನ್ನು ಆಯ್ಕೆಮಾಡಿ. ನಿಮಗೆ ವಿಸ್ತೃತ YPP ಪ್ರೋಗ್ರಾಂ ಅನ್ನು ಬಿಡುಗಡೆ ಮಾಡಿದ ನಂತರ ಮತ್ತು ನೀವು ಅರ್ಹತೆಯ ಥ್ರೆಶೋಲ್ಡ್‌ಗಳನ್ನು ತಲುಪಿದ ನಂತರ ನಾವು ನಿಮಗೆ ಇಮೇಲ್ ಕಳುಹಿಸುತ್ತೇವೆ. 
 

YouTube ಪಾಲುದಾರ ಕಾರ್ಯಕ್ರಮವು (YPP) ರಚನೆಕಾರರಿಗೆ YouTube ಸಂಪನ್ಮೂಲಗಳು ಮತ್ತು ಮಾನಿಟೈಸೇಶನ್ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಅನ್ನು ನೀಡುತ್ತದೆ ಹಾಗೂ ನಮ್ಮ ರಚನೆಕಾರರ ಬೆಂಬಲ ತಂಡಗಳಿಗೆ ಆ್ಯಕ್ಸೆಸ್ ಅನ್ನು ನೀಡುತ್ತದೆ. ಇದು ನಿಮ್ಮ ಕಂಟೆಂಟ್‌ನಲ್ಲಿ ಒದಗಿಸಲಾಗುವ ಆ್ಯಡ್‌ಗಳ ಆದಾಯದ ಹಂಚಿಕೆಯನ್ನು ಸಹ ಅನುಮತಿಸುತ್ತದೆ. ಈ ಲೇಖನದಲ್ಲಿ ಫೀಚರ್‌ಗಳು, ಅರ್ಹತಾ ಮಾನದಂಡಗಳು ಮತ್ತು ಅಪ್ಲಿಕೇಶನ್ ವಿವರಗಳ ಕುರಿತು ಇನ್ನಷ್ಟು ತಿಳಿಯಿರಿ.

YouTube ನಲ್ಲಿ ಹಣ ಗಳಿಸುವ ಕುರಿತು ಪರಿಚಯ

YPP ಗೆ ಅರ್ಜಿ ಸಲ್ಲಿಸಲು ಬಯಸುವಿರಾ, ಆದರೆ ಮೊದಲು ಪ್ರೇಕ್ಷಕರನ್ನು ಪಡೆಯಲು ಸಹಾಯ ಬೇಕೇ? ನಿಮ್ಮ ಅಭಿಮಾನಿ ಬಳಗಳನ್ನು ಸ್ಥಾಪಿಸುವುದಕ್ಕಾಗಿ ನಮ್ಮ ಸಲಹೆಗಳನ್ನು ಮತ್ತು YouTube ಪಾಲುದಾರ ಕಾರ್ಯಕ್ರಮಕ್ಕಾಗಿ ನಮ್ಮ ಸಲಹೆಗಳನ್ನು ಪರಿಶೀಲಿಸಿ.

ಸೇರಿಕೊಳ್ಳಲು ನಿಮಗೆ ಏನು ಬೇಕು

  1. YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು.
    1. ಇವುಗಳು YouTube ನಲ್ಲಿ ಮಾನಿಟೈಸ್ ಮಾಡಲು ನಿಮಗೆ ಅನುಮತಿಸುವ ನೀತಿಗಳು ಮತ್ತು ಮಾರ್ಗಸೂಚಿಗಳ ಸಂಗ್ರಹವಾಗಿದೆ ಹಾಗೂ ನೀವು YouTube ಜೊತೆಗೆ ಪಾಲುದಾರಿಕೆ ಒಪ್ಪಂದವನ್ನು ಸ್ವೀಕರಿಸಿದಾಗ ಅವುಗಳನ್ನು ಅನುಸರಿಸುವ ಅಗತ್ಯವಿದೆ.
  2. YouTube ಪಾಲುದಾರ ಕಾರ್ಯಕ್ರಮವು ಲಭ್ಯವಿರುವ ದೇಶ/ಪ್ರದೇಶದಲ್ಲಿ ವಾಸಿಸುತ್ತಿರಬೇಕು.
  3. ನಿಮ್ಮ ಚಾನಲ್‌ನಲ್ಲಿ ಯಾವುದೇ ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿರಬಾರದು.
  4. ನಿಮ್ಮ Google ಖಾತೆಗಾಗಿ 2-ಹಂತದ ಪರಿಶೀಲನೆಯನ್ನು ಆನ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  5. YouTube ನಲ್ಲಿ ಸುಧಾರಿತ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿರಬೇಕು.
  6. ನಿಮ್ಮ ಚಾನಲ್‍ಗೆ ಸಕ್ರಿಯ YouTube ಗಾಗಿ AdSense ಖಾತೆಯೊಂದನ್ನು ಲಿಂಕ್ ಮಾಡಿ ಅಥವಾ ನಿಮ್ಮ ಬಳಿ ಈಗಾಗಲೇ ಖಾತೆ ಇಲ್ಲ ಎಂದಾದರೆ YouTube Studio ದಲ್ಲಿ ಒಂದನ್ನು ಸೆಟಪ್ ಮಾಡಲು ಸಿದ್ಧರಾಗಬೇಕು (YouTube Studio ದಲ್ಲಿ ಮಾತ್ರವೇ ಹೊಸ YouTube ಗಾಗಿ AdSense ಖಾತೆಯನ್ನು ರಚಿಸಿ – ಇನ್ನಷ್ಟು ತಿಳಿಯಿರಿ).

ನೀವು ಹೇಗೆ ಅರ್ಹರಾಗಬಹುದು

ಸೇರಿಕೊಳ್ಳಲು ನಿಮಗೆ ಏನು ಬೇಕು ಎಂಬುದನ್ನು ನೀವು ಅರ್ಥಮಾಡಿಕೊಂಡ ನಂತರ, ನಿಮ್ಮ ಚಾನಲ್ Shorts ಅಥವಾ ದೀರ್ಘವಾದ ವೀಡಿಯೊ ಜೊತೆಗೆ YPP ಗೆ ಅರ್ಹತೆ ಪಡೆಯಬಹುದು. ನೀವು ಅರ್ಹರಾಗಿರುವಾಗ ನಾವು ನಿಮಗೆ ತಿಳಿಸಬೇಕೆಂದು ನೀವು ಬಯಸಿದರೆ, YouTube Studio ದಲ್ಲಿ ಗಳಿಸುವ ಪ್ರದೇಶದಲ್ಲಿ ನಾನು ಅರ್ಹವಾಗಿರುವಾಗ ನನಗೆ ಸೂಚಿಸಿ ಎಂಬುದನ್ನು ಕ್ಲಿಕ್ ಮಾಡಿ. ಕೆಳಗಿನ ಅರ್ಹತಾ ಥ್ರೆಶೋಲ್ಡ್‌ಗಳಲ್ಲಿ ಒಂದನ್ನು ನೀವು ಪೂರೈಸಿದ ನಂತರ ನೀವು ಇಮೇಲ್ ಅನ್ನು ಪಡೆಯುತ್ತೀರಿ.

1. ಕಳೆದ 12 ತಿಂಗಳುಗಳಲ್ಲಿ 4,000 ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಅವಧಿಗಳಿಗೆ 1,000 ಸಬ್‌ಸ್ಕ್ರೈಬರ್‌ಗಳನ್ನು ಪಡೆಯಿರಿ, ಅಥವಾ
2. ಕಳೆದ 90 ದಿನಗಳಲ್ಲಿ 10 ಮಿಲಿಯನ್ ಮಾನ್ಯವಾದ ಸಾರ್ವಜನಿಕ Shorts ವೀಕ್ಷಣೆಗಳ ಜೊತೆಗೆ 1,000 ಸಬ್‌ಸ್ಕ್ರೈಬರ್‌ಗಳನ್ನು ಪಡೆಯಿರಿ.

Shorts ಫೀಡ್‌ನಲ್ಲಿನ Shorts ವೀಕ್ಷಣೆಗಳಿಂದ ಯಾವುದೇ ಸಾರ್ವಜನಿಕ ವೀಕ್ಷಣಾ ಅವಧಿಯನ್ನು 4,000 ಸಾರ್ವಜನಿಕ ವೀಕ್ಷಣಾ ಅವಧಿಗಳ ಥ್ರೆಶೋಲ್ಡ್‌ಗೆ ಪರಿಗಣಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಅರ್ಹತಾ ಥ್ರೆಶೋಲ್ಡ್‌ಗಳ ಕುರಿತು ಇನ್ನಷ್ಟು

ನಿಮ್ಮ ಚಾನಲ್ ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂಬುದರ ಕುರಿತು ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಈ ಥ್ರೆಶೋಲ್ಡ್‌ಗಳು ನಮಗೆ ಸಹಾಯ ಮಾಡುತ್ತವೆ. ನೀವು ಅರ್ಜಿ ಸಲ್ಲಿಸಿದ ನಂತರ, ನಿಮ್ಮ ಚಾನಲ್ ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂಬುದನ್ನು ನೋಡಲು ನಿಮ್ಮ ಚಾನಲ್ ಸ್ಟ್ಯಾಂಡರ್ಡ್ ಪರಿಶೀಲನೆ ಪ್ರಕ್ರಿಯೆಯ ಮೂಲಕ ಹೋಗುತ್ತದೆ. ಅದು ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಿದರೆ, ನಾವು ನಿಮ್ಮ ಚಾನಲ್ ಅನ್ನು YPP ಗೆ ಸ್ವೀಕರಿಸುತ್ತೇವೆ. ಕಾಲಾನಂತರದಲ್ಲಿ ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು, ನಾವು YPP ಯಲ್ಲಿ ಚಾನಲ್‌ಗಳನ್ನು ನಿರಂತರವಾಗಿ ಪರಿಶೀಲಿಸುತ್ತೇವೆ ಎಂಬುದನ್ನು ನೆನಪಿನಲ್ಲಿಡಿ.

ಎಲ್ಲಿ ಅರ್ಜಿ ಸಲ್ಲಿಸಬೇಕು

✨ ಹೊಸತು✨YouTube ಪಾಲುದಾರ ಕಾರ್ಯಕ್ರಮದ ಫೀಚರ್‌ಗಳಿಗೆ ಮುಂಗಡ ಆ್ಯಕ್ಸೆಸ್‍

ನಿಮಗೆ ಬೇಕಾದುದನ್ನು ನೀವು ಹೊಂದಿದ ನಂತರ ಮತ್ತು ನಿಮ್ಮ ಚಾನಲ್ ಅರ್ಜಿ ಸಲ್ಲಿಸಲು ಅರ್ಹವಾಗಿದ್ದರೆ, ಡೆಸ್ಕ್‌ಟಾಪ್ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಿಂದ YPP ಗೆ ಸೈನ್ ಅಪ್ ಮಾಡಿ:

  1. YouTube ಗೆ ಸೈನ್ ಇನ್ ಮಾಡಿ
  2. ಮೇಲಿನ ಬಲಭಾಗದಲ್ಲಿ, ನಿಮ್ಮ ಪ್ರೊಫೈಲ್ ಚಿತ್ರ ನಂತರ YouTube Studio ಕ್ಲಿಕ್ ಮಾಡಿ
  3. ಎಡಭಾಗದ ಮೆನುವಿನಲ್ಲಿ, ಗಳಿಸಿ ಅನ್ನು ಕ್ಲಿಕ್ ಮಾಡಿ
  4. ಪ್ರಾರಂಭಿಸಲು ಈಗಲೇ ಅರ್ಜಿ ಸಲ್ಲಿಸಿ ಅನ್ನು ಆಯ್ಕೆಮಾಡಿ
  5. ಪರಿಶೀಲಿಸಲು ಪ್ರಾರಂಭಿಸಿ ಅನ್ನು ಕ್ಲಿಕ್ ಮಾಡಿ ಹಾಗೂ ಮೂಲ ನಿಯಮಗಳಿಗೆ ಸಮ್ಮತಿಸಿ
  6. YouTube ಗಾಗಿ AdSense ಖಾತೆಯನ್ನು ಸೆಟಪ್ ಮಾಡಲು ಪ್ರಾರಂಭಿಸಿ ಅನ್ನು ಕ್ಲಿಕ್ ಮಾಡಿ ಅಥವಾ ಅಸ್ತಿತ್ವದಲ್ಲಿರುವ ಸಕ್ರಿಯ ಖಾತೆಯೊಂದನ್ನು ಲಿಂಕ್ ಮಾಡಿ

ಮುಗಿಸಿದ ನಂತರ, ಪರಿಶೀಲನೆಯ ಹಂತದಲ್ಲಿ ಪ್ರಗತಿಯಲ್ಲಿದೆ ಎಂದು ನೀವು ನೋಡುತ್ತೀರಿ, ಅಂದರೆ ನಿಮ್ಮ ಅರ್ಜಿಯನ್ನು ನಾವು ಹೊಂದಿದ್ದೇವೆ ಎಂದರ್ಥ!

ನಿಮ್ಮ ಅರ್ಜಿಯನ್ನು ನಾವು ಹೇಗೆ ಪರಿಶೀಲಿಸುತ್ತೇವೆ

ನೀವು YPP ನಿಯಮಗಳನ್ನು ಸಮ್ಮತಿಸಿದ ನಂತರ ಹಾಗೂ ಸಕ್ರಿಯ YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಿದರೆ, ನಿಮ್ಮ ಚಾನಲ್ ಅನ್ನು ಸ್ವಯಂಚಾಲಿತವಾಗಿ ಪರಿಶೀಲನೆಯ ಸರದಿಯಲ್ಲಿ ಇರಿಸಲಾಗುತ್ತದೆ. ನಿಮ್ಮ ಚಾನಲ್ ನಮ್ಮ ಎಲ್ಲಾ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು, ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಮತ್ತು ಮಾನವ ರಿವ್ಯೂವರ್‌ಗಳು ನಿಮ್ಮ ಚಾನಲ್ ಅನ್ನು ಒಟ್ಟಾರೆಯಾಗಿ ಪರಿಶೀಲಿಸುತ್ತಾರೆ. ನಿಮ್ಮ ಅರ್ಜಿಯ ಸ್ಥಿತಿಯನ್ನು ನೋಡಲು ಯಾವಾಗ ಬೇಕಾದರೂ YouTube Studio ದ ಗಳಿಕೆ ವಿಭಾಗದಲ್ಲಿ ಮತ್ತೊಮ್ಮೆ ಪರಿಶೀಲಿಸಿ.

ನಿಮ್ಮ ಚಾನಲ್ ಅನ್ನು ಪರಿಶೀಲಿಸಿದ ಬಳಿಕ (ಸಾಮಾನ್ಯವಾಗಿ 1 ತಿಂಗಳಿನಲ್ಲಿ) ನಮ್ಮ ನಿರ್ಧಾರದೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ. 

ಸಾಮಾನ್ಯಕ್ಕಿಂತ ಹೆಚ್ಚಿನ ಅರ್ಜಿಗಳ ವಾಲ್ಯೂಮ್‌ಗಳು, ಸಿಸ್ಟಂ ಸಮಸ್ಯೆಗಳು ಅಥವಾ ಸಂಪನ್ಮೂಲ ಮಿತಿಗಳ ಕಾರಣದಿಂದಾಗಿ ವಿಳಂಬಗಳು ಉಂಟಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಎಲ್ಲಾ YPP ಅರ್ಜಿಗಳು ನಮ್ಮಿಂದ ಸ್ವೀಕಾರಗೊಂಡ ಕ್ರಮದಲ್ಲಿ ಸೇವೆ ಸಲ್ಲಿಸುತ್ತವೆ. ವಿಶೇಷವಾಗಿ, ಹಲವಾರು ವಿಮರ್ಶಕರು YPP ಗಾಗಿ ನಿಮ್ಮ ಚಾನಲ್‌ನ ಸೂಕ್ತತೆಯನ್ನು ಒಪ್ಪದಿದ್ದಾಗ ಕೆಲವೊಮ್ಮೆ ಚಾನಲ್‌ಗಳಿಗೆ ಹಲವು ವಿಮರ್ಶೆಗಳ ಅಗತ್ಯವಿರುತ್ತದೆ. ಇದು ನಿರ್ಧಾರ ತೆಗೆದುಕೊಳ್ಳುವ ಸಮಯವನ್ನು ಹೆಚ್ಚಿಸಬಹುದು.

ನಿಮ್ಮ ಮೊದಲ ಅರ್ಜಿಯು ಯಶಸ್ವಿಯಾಗದಿದ್ದರೆ, ಚಿಂತಿಸಬೇಡಿ - ನೀವು 21 ದಿನಗಳಲ್ಲಿ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಅಥವಾ ಮೂಲ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದನ್ನು ಮುಂದುವರಿಸಬಹುದು ಮತ್ತು 30 ದಿನಗಳ ಅವಧಿಯ ನಂತರ ನೀವು ಮರು-ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ತಿರಸ್ಕರಿಸಲಾದ ಮೊದಲ ಅರ್ಜಿಯಾಗಿರದಿದ್ದರೆ ಅಥವಾ ನೀವು ಈ ಹಿಂದೆ ಮರು-ಅರ್ಜಿ ಸಲ್ಲಿಸಿದ್ದರೆ, ನೀವು 90-ದಿನಗಳ ಅವಧಿಯ ನಂತರ ಮತ್ತೊಮ್ಮೆ ಪ್ರಯತ್ನಿಸಬಹುದು. ನಿಮ್ಮ ಚಾನಲ್‌ನ ಗಮನಾರ್ಹ ಭಾಗವು ಪ್ರಸ್ತುತ ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲದಿರಬಹುದು ಎಂದು ನಮ್ಮ ವಿಮರ್ಶಕರು ಕಂಡುಕೊಂಡಿದ್ದಾರೆ, ಇದರಿಂದ ನಿಮ್ಮ ಚಾನಲ್‌ನ ಒಟ್ಟಾರೆ ಕಂಟೆಂಟ್‌ಗೆ ವಿರುದ್ಧವಾದವುಗಳನ್ನು ಪರಿಶೀಲಿಸಲು ಮರೆಯದಿರಿ ಹಾಗೂ ಮರು-ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಚಾನಲ್ ಅನ್ನು ಅಡ್ಜಸ್ಟ್ ಮಾಡಬಹುದು. ಮುಂದಿನ ಬಾರಿ ನಿಮ್ಮ ಅರ್ಜಿಯನ್ನು ಬಲಪಡಿಸಲು ನೀವು ತೆಗೆದುಕೊಳ್ಳಬಹುದಾದ ಹಂತಗಳ ಕುರಿತು ಇನ್ನಷ್ಟು ತಿಳಿಯಿರಿ.

ಹೇಗೆ ಗಳಿಸಬೇಕು ಮತ್ತು ಪಾವತಿ ಪಡೆಯಬೇಕು ಎಂಬುದನ್ನು ಆಯ್ಕೆಮಾಡಿ

ನೀವು YPP ಗೆ ಸೇರಿದ ನಂತರ, YouTube Studio ದಲ್ಲಿ ವೀಕ್ಷಣಾ ಪುಟದ ಆ್ಯಡ್‌ಗಳು, Shorts ಫೀಡ್ ಆ್ಯಡ್‌ಗಳು, ಸದಸ್ಯತ್ವಗಳು, Supers, ಶಾಪಿಂಗ್ ಮತ್ತು ಇನ್ನಷ್ಟರ ಮೂಲಕ ಪ್ರಾರಂಭಿಸಿ. ಮಾನಿಟೈಸೇಶನ್ ಫೀಚರ್‌ಗಳನ್ನು ಆನ್ ಮಾಡಲು, ನೀವು ಪ್ರಸ್ತುತತೆಯ ಮಾಡ್ಯೂಲ್ ನಿಯಮಗಳನ್ನು ಪರಿಶೀಲಿಸಬೇಕು ಮತ್ತು ಒಪ್ಪಿಕೊಳ್ಳಬೇಕು. ಮಾಡ್ಯೂಲ್‌ಗಳು ಮತ್ತು ಅವುಗಳ ಆಯ್ಕೆಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ನೀವು ಹೇಗೆ ಮಾನಿಟೈಸ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿದ ನಂತರ, ಆ್ಯಡ್‌ಗಳ ಆದ್ಯತೆಗಳನ್ನು ನಿರ್ವಹಿಸಲು, ನಿಮ್ಮ ಅಪ್‌ಲೋಡ್‌ಗಳಿಗೆ ಮಾನಿಟೈಸೇಶನ್ ಅನ್ನು ಆನ್ ಮಾಡಲು ಮತ್ತು ಇನ್ನಷ್ಟನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. YPP ಗೆ ಸೇರ್ಪಡೆಯಾದ ರಚನೆಕಾರರಿಂದ ನಾವು ಪಡೆಯುವ FAQ ಗಳ ಪಟ್ಟಿ ಇಲ್ಲಿದೆ.

ಪಾವತಿ ಪಡೆಯುವುದು

YouTube ಪಾಲುದಾರರಾಗಿ ನಿಮ್ಮ ಗಳಿಕೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ, YouTube ಗಾಗಿ AdSense ಕುರಿತು ಎಲ್ಲವನ್ನೂ ತಿಳಿಯಿರಿ (YPP ಯಲ್ಲಿ ರಚನೆಕಾರರಿಗೆ ಪಾವತಿಸಲು ಅನುಮತಿಸುವ Google ನ ಪ್ರೋಗ್ರಾಂ) ಮತ್ತು ಸಾಮಾನ್ಯ ಪಾವತಿ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ.

ಹಣವನ್ನು ಗಳಿಸುತ್ತಿರಲು ಸಕ್ರಿಯವಾಗಿರಿ

YouTube ಪಾಲುದಾರ ಕಾರ್ಯಕ್ರಮವು ಬೆಳೆಯುತ್ತಿರುವಂತೆ, ಚಾನಲ್‌ಗಳ ಆರೋಗ್ಯಕರ, ಸಕ್ರಿಯ ಪರಿಸರ ವ್ಯವಸ್ಥೆಯನ್ನು ನಿರ್ವಹಿಸುವುದು ಮುಖ್ಯವಾಗಿದೆ. ಸಮುದಾಯದ ಜೊತೆಗೆ ಸಕ್ರಿಯವಾಗಿರುವ ಮತ್ತು ತೊಡಗಿಸಿಕೊಂಡಿರುವ ರಚನೆಕಾರರಿಗೆ ನಮ್ಮ ಬೆಂಬಲವನ್ನು ಫೋಕಸ್ ಮಾಡಲು, ವೀಡಿಯೊವನ್ನು ಅಪ್‌ಲೋಡ್ ಮಾಡದ ಅಥವಾ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಸಮುದಾಯ ಟ್ಯಾಬ್‌ಗೆ ಪೋಸ್ಟ್ ಮಾಡದ ಚಾನಲ್‌ಗಳಲ್ಲಿ ಮಾನಿಟೈಸೇಶನ್ ಅನ್ನು ನಾವು ಆಫ್ ಮಾಡಬಹುದು.

ಅರ್ಜಿ ಸಲ್ಲಿಸುವ ಕುರಿತು FAQ ಗಳು ಮತ್ತು ಇನ್ನಷ್ಟು

ನಾನು ಕಾರ್ಯಕ್ರಮದ ಥ್ರೆಶೋಲ್ಡ್ ಅನ್ನು ಪೂರೈಸದಿದ್ದರೆ ಏನು ಮಾಡಬೇಕು?

ನೀವು ಇನ್ನೂ ಅವಶ್ಯಕತೆಗಳನ್ನು ಪೂರೈಸದಿದ್ದರೆ, ಮೂಲ ಕಂಟೆಂಟ್ ಅನ್ನು ರಚಿಸಲು ಮತ್ತು ನಿಮ್ಮ ಪ್ರೇಕ್ಷಕರನ್ನು ನಿರ್ಮಿಸಲು ಕೆಲಸ ಮಾಡುತ್ತಿರಿ. ನಿಮ್ಮ ಚಾನಲ್ ಅನ್ನು ಅಭಿವೃದ್ಧಿಪಡಿಸುವುದಕ್ಕೆ ನಿಮಗೆ ಸಹಾಯ ಮಾಡುವ ಕೆಲವು ಮಾಹಿತಿ ಮೂಲಗಳು ಇಲ್ಲಿವೆ:

  • YouTube ಸಹಾಯ ಫೋರಮ್‌ನಲ್ಲಿ ಇತರ YouTube ಬಳಕೆದಾರರಿಂದ ಪರಿಹಾರಗಳನ್ನು ತಿಳಿಯಿರಿ.
  • ನಮ್ಮ ರಚನೆಕಾರರಿಗೆ ಸಲಹೆಗಳು ಹಬ್‌ನಲ್ಲಿ ನಿಮ್ಮ ಚಾನಲ್ ಅನ್ನು ಬೆಳೆಸುವುದು ಹಾಗೂ ನಿರ್ಮಿಸುವುದು ಹೇಗೆ ಎಂಬುದರ ಕುರಿತು ತ್ವರಿತ ಮತ್ತು ಸುಲಭವಾದ ಸಲಹೆಗಳನ್ನು ಅನ್ವೇಷಿಸಿ.
  • ಪ್ರೋಗ್ರಾಂಗಳು, ಸಂಪನ್ಮೂಲಗಳು ಮತ್ತು ಈವೆಂಟ್‌ಗಳಿಗೆ ಕಲಿಯಲು, ಬೆಳೆಯಲು ಮತ್ತು ಸಂಪರ್ಕ ಹೊಂದಲು youtube.com/creators ಗೆ ಹೋಗಿ.
  • YouTube ಸಹಾಯ ತಂಡದಿಂದ ಟುಟೋರಿಯಲ್‌ಗಳು, ಟ್ರಬಲ್‌ಶೂಟಿಂಗ್ ಮತ್ತು ಸಲಹೆಯ ವೀಡಿಯೊಗಳನ್ನು ವೀಕ್ಷಿಸಲು ನಮ್ಮ YouTube ಸಹಾಯ ಚಾನಲ್ ಮತ್ತು YouTube Creators ಚಾನಲ್ ಅನ್ನು ಪರಿಶೀಲಿಸಿ.

ನಿಮ್ಮ ಚಾನಲ್‌ನಲ್ಲಿ ನೀವು ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿದ್ದರೆ, ನಿಮ್ಮ ಸ್ಟ್ರೈಕ್‌ಗಳ ಅವಧಿ ಮುಗಿದ ನಂತರ ನೀವು ಅರ್ಜಿ ಸಲ್ಲಿಸಬಹುದು. ನಿಮ್ಮ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ತೆಗೆದುಹಾಕಲು ನೀವು ಯಶಸ್ವಿಯಾಗಿ ಮೇಲ್ಮನವಿ ಸಲ್ಲಿಸಿದ ನಂತರವೂ ನೀವು ಅರ್ಜಿ ಸಲ್ಲಿಸಬಹುದು. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಸ್ವೀಕರಿಸಿದಾಗ ಪ್ರೋಗ್ರಾಂ ಪ್ರಸ್ತುತ ಸದಸ್ಯರನ್ನು ತೆಗೆದುಹಾಕಲಾಗುವುದಿಲ್ಲ.

"ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಅವಧಿಗಳು" ಮತ್ತು "ಮಾನ್ಯವಾದ ಸಾರ್ವಜನಿಕ Shorts ವೀಕ್ಷಣೆಗಳು" ಎಂದರೆ ಏನು?

ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಅವಧಿfಳು

ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಅವಧಿ ಎಂದು ಏನನ್ನು ಪರಿಗಣಿಸಲಾಗುತ್ತದೆ:

  • ನೀವು ಸಾರ್ವಜನಿಕ ಎಂದು ಸೆಟ್ ಮಾಡಿರುವ ದೀರ್ಘವಾದ ವೀಡಿಯೊಗಳಿಂದ ಗಳಿಸಿದ ವೀಕ್ಷಣಾ ಅವಧಿಗಳನ್ನು ವೀಕ್ಷಿಸಿ

ಕೆಳಗಿನ ಪ್ರಕಾರದ ವೀಡಿಯೊಗಳ ಮೂಲಕ ಗಳಿಸಿದ ವೀಕ್ಷಣಾ ಅವಧಿಗಳನ್ನು YPP ಥ್ರೆಶೋಲ್ಡ್‌ಗಳಿಗೆ ಪರಿಗಣಿಸಲಾಗುವುದಿಲ್ಲ:

  • ಖಾಸಗಿ ವೀಡಿಯೊಗಳು
  • ಪಟ್ಟಿ ಮಾಡದಿರುವ ವೀಡಿಯೊಗಳು
  • ಅಳಿಸಲಾದ ವೀಡಿಯೋಗಳು
  • ಜಾಹೀರಾತು ಅಭಿಯಾನಗಳು
  • YouTube Shorts
  • ಪಟ್ಟಿ ಮಾಡದಿರುವ, ಅಳಿಸಲಾದ ಅಥವಾ VOD (ಬೇಡಿಕೆ ಮೇರೆಗೆ ವೀಡಿಯೊ) ಗೆ ಪರಿವರ್ತಿಸಲಾದ ಲೈವ್‌ಸ್ಟ್ರೀಮ್‌ಗಳು

ಮಾನ್ಯವಾದ ಸಾರ್ವಜನಿಕ Shorts ವೀಕ್ಷಣೆಗಳು

ಮಾನ್ಯವಾದ ಸಾರ್ವಜನಿಕ Short ವೀಕ್ಷಣೆ ಎಂದು ಏನನ್ನು ಪರಿಗಣಿಸಲಾಗುತ್ತದೆ:

  • Shorts ಫೀಡ್‌ನಲ್ಲಿ ಗೋಚರಿಸುವ ಸಾರ್ವಜನಿಕವಾಗಿ ನೀವು ಸೆಟ್ ಮಾಡಿರುವ Shorts ನ ವೀಕ್ಷಣೆಗಳು
Shorts ಫೀಡ್‌ನಲ್ಲಿನ Shorts ವೀಕ್ಷಣೆಗಳಿಂದ ಯಾವುದೇ ಸಾರ್ವಜನಿಕ ವೀಕ್ಷಣಾ ಅವಧಿಗಳನ್ನು 4,000 ಸಾರ್ವಜನಿಕ ವೀಕ್ಷಣಾ ಅವಧಿಗಳ ಥ್ರೆಶೋಲ್ಡ್‌ಗಳಿಗೆ ಪರಿಗಣಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ನಾವು ಪಾವತಿಗಳನ್ನು ಹೇಗೆ ಲೆಕ್ಕಹಾಕುತ್ತೇವೆ ಎಂಬುದಕ್ಕೆ ಸಂಬಂಧಿಸಿದಂತೆ Shorts ವೀಕ್ಷಣೆಯ ಅರ್ಹತೆಯ ಕುರಿತು ಮಾಹಿತಿಗಾಗಿ, ನಮ್ಮ YouTube Shorts ಮಾನಿಟೈಸೇಶನ್ ನೀತಿಗಳನ್ನು ನೋಡಿ.

ನಾನು ಥ್ರೆಶೋಲ್ಡ್ ಅನ್ನು ತಲುಪಿದರೆ, ನಾನು ಸ್ವಯಂಚಾಲಿತವಾಗಿ YPP ಗೆ ಸೇರುತ್ತೇನೆಯೇ?

ಇಲ್ಲ. ಥ್ರೆಶೋಲ್ಡ್ ಅನ್ನು ಪೂರೈಸುವ ಪ್ರತಿಯೊಂದು ಚಾನಲ್ ಸ್ಟ್ಯಾಂಡರ್ಡ್ ವಿಮರ್ಶೆ ಪ್ರಕ್ರಿಯೆಯ ಮೂಲಕ ಹೋಗುತ್ತದೆ. ನಿಮ್ಮ ಚಾನಲ್ ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಪೂರೈಸುತ್ತದೆಯೇ ಎಂಬುದನ್ನು ಪರಿಶೀಲಿಸಲು ನಮ್ಮ ತಂಡವು ನಿಮ್ಮ ಚಾನಲ್ ಅನ್ನು ಒಟ್ಟಾರೆಯಾಗಿ ಪರಿಶೀಲಿಸುತ್ತದೆ. ಅರ್ಜಿ ಸಲ್ಲಿಸುವ ಸಲುವಾಗಿ ನಿಮ್ಮ ಚಾನಲ್ ಯಾವುದೇ ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿರಬಾರದು. ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಚಾನಲ್‌ಗಳು ಮಾನಿಟೈಸ್ ಮಾಡಬಹುದು.

ನಾನು ಅರ್ಜಿ ಸಲ್ಲಿಸಿದ ನಂತರ ನನ್ನ ಎಣಿಕೆಗಳು ಥ್ರೆಶೋಲ್ಡ್‌ಗಿಂತ ಕಡಿಮೆಯಾದರೆ ಏನಾಗುತ್ತದೆ?

ನಮ್ಮ ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಅವಧಿ ಮತ್ತು ಸಬ್‌ಸ್ಕ್ರೈಬರ್‌ ಥ್ರೆಶೋಲ್ಡ್ ಅನ್ನು ನೀವು ಪೂರೈಸಿದ ನಂತರ, ನಾವು ನಿಮ್ಮ ಚಾನಲ್ ಅನ್ನು ವಿಮರ್ಶೆಗೆ ಕಳುಹಿಸುತ್ತೇವೆ. ಆದ್ದರಿಂದ ಪರಿಶೀಲನೆಗಾಗಿ ಕಾಯುತ್ತಿರುವಾಗ ನಿಮ್ಮ ಸಬ್‌ಸ್ಕ್ರೈಬರ್‌ ಅಥವಾ ವೀಕ್ಷಣಾ ಅವಧಿಯ ಎಣಿಕೆಗಳು ಥ್ರೆಶೋಲ್ಡ್‌ಗಿಂತ ಕಡಿಮೆಯಾದರೆ, ತೊಂದರೆಯಿಲ್ಲ. ನೀವು ಥ್ರೆಶೋಲ್ಡ್ ಅನ್ನು ಪೂರೈಸಿದ್ದರೆ ಮತ್ತು YPP ಗೆ ಅರ್ಜಿ ಸಲ್ಲಿಸಿದ್ದರೆ, YPP ಸೂಕ್ತತೆಗಾಗಿ ನಾವು ನಿಮ್ಮ ಚಾನಲ್ ಅನ್ನು ಇನ್ನೂ ಪರಿಶೀಲಿಸುತ್ತೇವೆ. ಅವುಗಳನ್ನು ಪರಿಶೀಲಿಸುವ ಮೊದಲು ಚಾನಲ್ ಎಲ್ಲಾ YPP ಸೈನ್‌ಅಪ್ ಹಂತಗಳನ್ನು (ಪ್ರಸ್ತುತ ಒಪ್ಪಂದಕ್ಕೆ ಸಹಿ ಮಾಡುವುದು ಮತ್ತು YouTube ಗಾಗಿ AdSense ಖಾತೆ ಸಂಯೋಜಿಸುವುದನ್ನು ಒಳಗೊಂಡಿರುತ್ತದೆ) ಪೂರ್ಣಗೊಳಿಸುವ ಅಗತ್ಯವಿದೆ ಎಂಬುದನ್ನು ಗಮನಿಸಿ.

ಚಾನಲ್ ನಿಷ್ಕ್ರಿಯವಾಗಿದ್ದರೆ ಮತ್ತು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸಮುದಾಯದ ಪೋಸ್ಟ್‌ಗಳನ್ನು ಅಪ್‌ಲೋಡ್ ಅಥವಾ ಪೋಸ್ಟ್ ಮಾಡಿರದಿದ್ದರೆ, ಅದರ ಮಾನಿಟೈಸೇಶನ್ ಅನ್ನು ತೆಗೆದುಹಾಕುವ ಹಕ್ಕನ್ನು YouTube ಕಾಯ್ದಿರಿಸಿಕೊಂಡಿದೆ.

ಯಾವುದೇ YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಉಲ್ಲಂಘಿಸಿದಾಗ ಚಾನಲ್‌ಗಳು ಮಾನಿಟೈಸೇಶನ್ ಅನ್ನು ಕಳೆದುಕೊಳ್ಳುತ್ತವೆ. ಅವುಗಳ ವೀಕ್ಷಣಾ ಅವಧಿಗಳು ಮತ್ತು ಸಬ್‌ಸ್ಕ್ರೈಬರ್ ಸಂಖ್ಯೆಯನ್ನು ಲೆಕ್ಕಿಸದೆಯೇ ಈ ಮಾನಿಟೈಸೇಶನ್ ನಷ್ಟ ಸಂಭವಿಸುತ್ತದೆ.

ನಾನು ಇನ್ನು ಮುಂದೆ YPP ಯಲ್ಲಿ ಇರುವುದಿಲ್ಲ (ಅಥವಾ ನಾನು ಪ್ರೋಗ್ರಾಂನಲ್ಲಿ ಇರಲಿಲ್ಲ) ಮತ್ತು ನನ್ನ ವೀಡಿಯೊಗಳಲ್ಲಿ ನಾನು ಆ್ಯಡ್‌ಗಳನ್ನು ನೋಡುತ್ತಿದ್ದೇನೆ. ನಾನು ಆ ಆ್ಯಡ್‌ಗಳಿಂದ ಹಣವನ್ನು ಗಳಿಸುತ್ತಿದ್ದೇನೆಯೇ?

ಪ್ಲ್ಯಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಕಂಟೆಂಟ್‌ನಲ್ಲಿ YouTube ಆ್ಯಡ್‌ಗಳನ್ನು ನೀಡಬಹುದು. ನೀವು ಈ ಹಿಂದೆ YPP ಯ ಸದಸ್ಯರಾಗಿದ್ದರೆ (ಮತ್ತು ಪ್ರಸ್ತುತ ಪ್ರೋಗ್ರಾಂನಲ್ಲಿಲ್ಲ), ನಿಮ್ಮ ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ನೀಡುವುದನ್ನು ನೀವು ಈಗಲೂ ನೋಡಬಹುದು. ಈ ಸಂದರ್ಭದಲ್ಲಿ, ನೀವು ಆದಾಯದ ಪಾಲನ್ನು ಪಡೆಯುವುದಿಲ್ಲ.

ನೀವು ಭವಿಷ್ಯದಲ್ಲಿ YPP ಗೆ ಮರುಸೇರ್ಪಡೆಯಾದರೆ, ನೀವು ಮರುಸೇರ್ಪಡೆಯಾದ ನಂತರ ನಿಮ್ಮ ಕಂಟೆಂಟ್‌ನಲ್ಲಿ ಒದಗಿಸಲಾದ ಆ್ಯಡ್‌ಗಳಿಂದ ಆದಾಯದ ಪಾಲನ್ನು ನೀವು ಪಡೆಯಬಹುದು. ಅಂತಹ ಸಂದರ್ಭದಲ್ಲಿ, YPP ಗಾಗಿ ಮರು-ಅರ್ಜಿ ಸಲ್ಲಿಸುವಾಗ, ನಿಮ್ಮ ಚಾನಲ್ ಈ ಪುಟದಲ್ಲಿ ವಿವರಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6743000846700775148
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false