ನಿಮ್ಮ ಕಂಟೆಂಟ್ ಮ್ಯಾನೇಜರ್ ಅನ್ನು ಸೆಟಪ್ ಮಾಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ಓರ್ವ YouTube ಪಾಲುದಾರರಾಗಿ ನೀವು ಅನುಮೋದನೆ ಪಡೆದ ಬಳಿಕ, YouTube ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಯನ್ನು ರಚಿಸುತ್ತದೆ. ಖಾತೆಯ ನಿರ್ವಾಹಕರು ಕೆಳಗಿನ ಮಾಹಿತಿಯನ್ನು ಬಳಸಿಕೊಂಡು, ಕಂಟೆಂಟ್ ಮ್ಯಾನೇಜರ್ ಅನ್ನು ಸೆಟಪ್ ಮಾಡಬಹುದು ಮತ್ತು ಅದಕ್ಕೆ ಬಳಕೆದಾರರನ್ನು ಸೇರಿಸಲು ಪ್ರಾರಂಭಿಸಬಹುದು.
  • ಕಂಟೆಂಟ್ ಮ್ಯಾನೇಜರ್: ಇದು YouTube ನಲ್ಲಿ ಕಂಟೆಂಟ್‌ಗಳು ಮತ್ತು ಹಕ್ಕುಗಳನ್ನು ನಿರ್ವಹಿಸುವ ಪಾಲುದಾರರಿಗೆ ವಿನ್ಯಾಸಗೊಳಿಸಲಾಗಿರುವ ವೆಬ್-ಆಧಾರಿತ ಪರಿಕರವಾಗಿದೆ. ಒಂದು ಕಂಟೆಂಟ್ ಮ್ಯಾನೇಜರ್ ಖಾತೆಯು ಒಂದು ಅಥವಾ ಹೆಚ್ಚಿನ YouTube ಚಾನಲ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಹೊಂದಿರುತ್ತವೆ. Studio ಕಂಟೆಂಟ್ ಮ್ಯಾನೇಜರ್ ಎಂದೂ ಕರೆಯಲಾಗುತ್ತದೆ.
  • ನಿರ್ವಾಹಕರು: ಕಂಟೆಂಟ್ ಮ್ಯಾನೇಜರ್ ಅನ್ನು ನಿರ್ವಹಿಸುವ ಮತ್ತು ಅದನ್ನು ಆ್ಯಕ್ಸೆಸ್ ಮಾಡಲು ಇತರ ಬಳಕೆದಾರರನ್ನು ಆಹ್ವಾನಿಸುವ ವ್ಯಕ್ತಿ.
  • ಬಳಕೆದಾರರು: ಕಂಟೆಂಟ್ ಮ್ಯಾನೇಜರ್ ಬಳಸುವ ವ್ಯಕ್ತಿ.
ಕಂಟೆಂಟ್ ಮ್ಯಾನೇಜರ್ ಖಾತೆಯು ನಿಮ್ಮ YouTube ಖಾತೆಗಿಂತ ವಿಭಿನ್ನವಾದುದು. ನಿಮ್ಮ ಕಂಟೆಂಟ್ ಮ್ಯಾನೇಜರ್ ಅನ್ನು ಆ್ಯಕ್ಸೆಸ್ ಮಾಡಲು, ನೀವು ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೈನ್ ಇನ್ ಮಾಡಬೇಕೇ ಹೊರತು, ನಿಮ್ಮ ವೈಯಕ್ತಿಕ YouTube ಬಳಕೆದಾರ ಖಾತೆಗೆ ಅಲ್ಲ.

ನಿಮ್ಮ ಕಂಟೆಂಟ್ ಮ್ಯಾನೇಜರ್ ಅನ್ನು ಸೆಟಪ್ ಮಾಡುವುದು ಹೇಗೆ

1. ನಿಮ್ಮ ಚಾನಲ್‌ಗಳನ್ನು ಲಿಂಕ್ ಮಾಡಿ

ಚಾನಲ್‌ಗಳನ್ನು ರಚಿಸುವ ಮೂಲಕ ಅಥವಾ ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೇರುವಂತೆ ಇತರ ಚಾನಲ್‌ಗಳನ್ನು ಆಹ್ವಾನಿಸುವ ಮೂಲಕ, ಹಲವಾರು ಚಾನಲ್‌ಗಳಿಗೆ ಕಂಟೆಂಟ್ ಮ್ಯಾನೇಜರ್ ಲಿಂಕ್ ಆಗಬಹುದು.

ನೀವು ಒಂದು ಚಾನಲ್ ಅನ್ನು ಲಿಂಕ್ ಮಾಡಿದ ಬಳಿಕ, ಆ ಚಾನಲ್‌ಗೆ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಬಹುದು, ಅದರ ವೀಡಿಯೊಗಳ ಮಾನಿಟೈಸೇಶನ್ ಅನ್ನು ನಿಯಂತ್ರಿಸಬಹುದು ಮತ್ತು ಬ್ರ್ಯಾಂಡಿಂಗ್ ಅನ್ನು ಸಹ ಸೆಟ್ ಮಾಡಬಹುದು.

2. YouTube ಗಾಗಿ AdSense ಖಾತೆಯನ್ನು ಸಂಯೋಜಿಸಿ

ನಿಮ್ಮ ವೀಡಿಯೊಗಳಿಂದ ಹಣ ಗಳಿಸಲು ಮತ್ತು ಪಾವತಿಯನ್ನು ಪಡೆಯಲು, ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಯೊಂದಿಗೆ ನೀವು YouTube ಗಾಗಿ AdSense ಖಾತೆಯನ್ನು ಸಂಯೋಜಿಸಬೇಕು. ನೀವು ಹೊಸ YouTube ಗಾಗಿ AdSense ಖಾತೆಯನ್ನು ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವ ಖಾತೆಯನ್ನು ಸಂಯೋಜಿಸಬಹುದು.

3. ನೋಟಿಫಿಕೇಶನ್‌ಗಳನ್ನು ಸೆಟಪ್ ಮಾಡಿ
ಖಾತೆಯ ಚಟುವಟಿಕೆಗಳು ನಡೆದಾಗ ಯಾರು ಅಪ್‌ಡೇಟ್‌ಗಳನ್ನು ಪಡೆಯುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಲು, ನೀವು ಇಮೇಲ್ ನೋಟಿಫಿಕೇಶನ್‌ಗಳನ್ನು ಸೆಟಪ್ ಮಾಡಬೇಕು.
4. ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ (ಐಚ್ಛಿಕ)

ಸೆಟ್ಟಿಂಗ್‌ಗಳು ಪುಟದಲ್ಲಿ, ನೀವು ನಿಮ್ಮ ಕಂಟೆಂಟ್ ಮ್ಯಾನೇಜರ್‌ನ ಎಂಬೆಡಿಂಗ್ ಆಯ್ಕೆಗಳು ಮತ್ತು ಆ್ಯಟ್ರಿಬ್ಯೂಷನ್ ನಿಯಮಗಳನ್ನು ಆಯ್ಕೆ ಮಾಡಬಹುದು.

ಡೀಫಾಲ್ಟ್ ಕರೆನ್ಸಿಯನ್ನು ಬದಲಾಯಿಸಲು, ಸೆಟ್ಟಿಂಗ್‌ಗಳು ನಂತರ ಬಳಕೆದಾರರ ಆದ್ಯತೆಗಳು ಎಂಬಲ್ಲಿಗೆ ಹೋಗಿ ಮತ್ತು ನೀವು ಬಳಸಲು ಬಯಸುವ ಕರೆನ್ಸಿ ಯುನಿಟ್ ಅನ್ನು ಆಯ್ಕೆಮಾಡಿ. ಇದು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ನಿಗದಿಪಡಿಸಿರುವ ಹಣ ಸಂದಾಯ ಕರೆನ್ಸಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಮಗೆ ಇದೇ ಕರೆನ್ಸಿಯಲ್ಲಿ ಹಣ ಪಾವತಿಸುತ್ತಿದ್ದರೂ ಕೂಡಾ, ವಿಭಿನ್ನ ವಿನಿಮಯ ದರಗಳಿಂದಾಗಿ ಇಲ್ಲಿ ತೋರಿಸಿದ ಮೊತ್ತವು ಅಂತಿಮ ಪಾವತಿ ಮೊತ್ತಕ್ಕಿಂತ ಭಿನ್ನವಾಗಿರಬಹುದು.

ನೀವು ಸೆಟ್ಟಿಂಗ್‌ಗಳು ನಂತರ ಅಭಿಯಾನಗಳು ಎಂಬಲ್ಲಿ, ಡೀಫಾಲ್ಟ್ ಅಭಿಯಾನ ಕ್ರಿಯೆಯನ್ನು ಕೂಡ ಆಯ್ಕೆ ಮಾಡಬಹುದು. Content ID ಕ್ಲೇಮ್‌ಗಳಿಗಾಗಿ, ಅಭಿಮಾನಿಗಳ ಅಪ್‌ಲೋಡ್‌ಗಳಲ್ಲಿ ನಿಮ್ಮ ಅಧಿಕೃತ ವೀಡಿಯೊಗಳನ್ನು ಪ್ರದರ್ಶಿಸಲು ಅಥವಾ ಏನೂ ಮಾಡದಿರಲು ನೀವು ಆಯ್ಕೆ ಮಾಡಬಹುದು. ಕಸ್ಟಮ್ ಅಭಿಯಾನಗಳು ಈ ಸೆಟ್ಟಿಂಗ್ ಅನ್ನು ಓವರ್‌ರೈಡ್ ಮಾಡಬಹುದು.

5. ಬಳಕೆದಾರರನ್ನು ಆಹ್ವಾನಿಸಿ (ಐಚ್ಛಿಕ)

ನೀವು ಕಂಟೆಂಟ್ ಮ್ಯಾನೇಜರ್ ಖಾತೆಗೆ ಬೇರೆ ಬಳಕೆದಾರರನ್ನು ಆಹ್ವಾನಿಸಲು ಪ್ರಾರಂಭಿಸಬಹುದು, ಈ ಮೂಲಕ ಅದರಲ್ಲಿನ ಕಂಟೆಂಟ್ ಅನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತದೆ.

YouTube, ಕಂಟೆಂಟ್ ಮ್ಯಾನೇಜರ್ ಅನ್ನು ರಚಿಸಿದಾಗ, ಒಬ್ಬ ಅಥವಾ ಹೆಚ್ಚಿನ ಬಳಕೆದಾರರು ಖಾತೆಯ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಾರೆ. ಬಳಕೆದಾರರನ್ನು ಆಹ್ವಾನಿಸುವುದರ ಜೊತೆಗೆ, ವಿವಿಧ ರೀತಿಯ ಬಳಕೆದಾರರಿಗೆ ಯಾವ ಫೀಚರ್‌ಗಳು ಮತ್ತು ನಿರ್ಬಂಧಗಳನ್ನು ಅನ್ವಯಿಸಬೇಕು ಎಂದು ಸ್ಪಷ್ಟವಾಗಿ ತಿಳಿಸುವ ಬಳಕೆದಾರ ಪಾತ್ರಗಳನ್ನು ಕೂಡ ನಿರ್ವಾಹಕರು ರಚಿಸಬಹುದು.

 
ಸಲಹೆ: ನಿಮ್ಮ ಕಂಟೆಂಟ್ ಮ್ಯಾನೇಜರ್ ಸೆಟಪ್ ಮಾಡಿದ ಬಳಿಕ, ಅದರ ಫೀಚರ್‌ಗಳು ಮತ್ತು ಟೂಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ: Studio ಕಂಟೆಂಟ್ ಮ್ಯಾನೇಜರ್ ಕುರಿತು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11966138534283707666
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false