ಇತರ ಕಾನೂನು ಸಮಸ್ಯೆಗಳು

ಕಾನೂನು ದೂರುಗಳು ಮತ್ತು ನ್ಯಾಯಾಲಯದ ಆದೇಶಗಳು

ಸೈಟ್‌ನಲ್ಲಿನ ನಿರ್ದಿಷ್ಟ ಕಂಟೆಂಟ್ ನಿಮ್ಮ ಹಕ್ಕುಗಳು ಅಥವಾ ಅನ್ವಯಿಸುವ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ನಿಮಗನಿಸಿದರೆ, ನಮ್ಮ ಟ್ರೇಡ್‌ಮಾರ್ಕ್, ಮಾನಹಾನಿ, ನಕಲಿ, ಅಥವಾ ಇತರ ಕಾನೂನು ದೂರಿನ ಫ್ಲೋಗಳನ್ನು ಅನುಸರಿಸಿ, ನೀವು ಕಾನೂನಾತ್ಮಕ ದೂರನ್ನು ಸಲ್ಲಿಸಬಹುದು. ಅಪ್‌ಲೋಡ್ ಮಾಡಿದವರ ವಿರುದ್ಧ ನಿಮ್ಮ ಬಳಿ ನ್ಯಾಯಾಲಯದ ಆದೇಶವಿದ್ದರೆ, ನೀವು ಸೂಕ್ತ ಕಾನೂನಾತ್ಮಕ ದೂರನ್ನು ಸಲ್ಲಿಸಿದ ಬಳಿಕ ನಿಮಗೆ ದೊರೆಯುವ ಆಟೋಮೆಟಿಕ್ ರಿಪ್ಲೈಗೆ ಉತ್ತರವಾಗಿ ನ್ಯಾಯಾಲಯದ ಆದೇಶದ ಪ್ರತಿಯನ್ನು ನೀವು ಲಗತ್ತಿಸಬಹುದು. ಒಂದಿಷ್ಟು ಪ್ರಾದೇಶಿಕ ಮತ್ತು ಜಾಗತಿಕ ಮಾನದಂಡಗಳ ಆಧಾರದ ಮೇಲೆ ನ್ಯಾಯಾಲಯದ ಪ್ರತಿ ಆದೇಶವನ್ನು ಪರಿಶೀಲಿಸಲಾಗುವುದು ಮತ್ತು ಮೌಲ್ಯಮಾಪನ ಮಾಡಲಾಗುವುದು.

ನಮ್ಮ ಗಮನಕ್ಕೆ ತರಲು ನಿಮ್ಮ ಬಳಿ ಇತರ ಸಂಪನ್ಮೂಲಗಳಿವೆ ಎಂಬುದನ್ನು ನೆನಪಿಡಿ. ಉದಾಹರಣೆಗೆ, ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ ಎಂದು ನಿಮಗನಿಸಿದರೆ, ಅದನ್ನು ಫ್ಲ್ಯಾಗ್ ಮಾಡಿ. ಜೊತೆಗೆ, ಕಾನೂನಾತ್ಮಕ ದೂರನ್ನು ಸಲ್ಲಿಸುವ ಮೊದಲು, ನಮ್ಮ ಗೌಪ್ಯತೆ ಅಥವಾ ಕಿರುಕುಳ ನೀತಿಯ ಅಡಿಯಲ್ಲಿ ತೆಗೆದುಹಾಕುವಿಕೆಯ ಪ್ರಮಾಣಕಗಳನ್ನು ವೀಡಿಯೊ ಪೂರೈಸುತ್ತದೆಯೇ ಎನ್ನುವುದನ್ನು ಪರಿಗಣಿಸಿ.

ತಾಂತ್ರಿಕ ಮಾಪನಗಳ ಸರ್ಕಮ್‌ವೆನ್ಶನ್

ನಾವು ತಾಂತ್ರಿಕ ಮಾಪನಗಳ ಸರ್ಕಮ್‌ವೆನ್ಶನ್ ಎಂದು ಹೇಳುವಾಗ, ಸಾಫ್ಟ್‌ವೇರ್‌ನ ಪರವಾನಗಿ ಪ್ರೊಟೊಕಾಲ್ ಅನ್ನು ತಪ್ಪಿಸಲು ಬಳಕೆದಾರರಿಗೆ ಅನುಮತಿಸುವ ಪರಿಕರಗಳನ್ನು ಉಲ್ಲೇಖಿಸುತ್ತಿದ್ದೇವೆ. ಇದು ಕ್ರಮ ಸಂಖ್ಯೆಗಳು, ಕೀ-ಜೆನೆರೇಟರ್‌ಗಳು, ಪಾಸ್‌ವರ್ಡ್‌ಗಳು ಮತ್ತು ಸಾಫ್ಟ್‌ವೇರ್ ಅಥವಾ ಗೇಮ್‌ಗಳನ್ನು ಹ್ಯಾಕ್ ಮಾಡಲು ಇತರ ವಿಧಾನಗಳಾಗಿರಬಹುದು.

CTM ಹಾಗೂ ಕೃತಿಸ್ವಾಮ್ಯದ ನಡುವೆ ಏನು ವ್ಯತ್ಯಾಸವಿದೆ?

CTM ಎಂಬುದು, ಸಾಫ್ಟ್‌ವೇರ್ ಅನ್ನು ಆ್ಯಕ್ಸೆಸ್ ಮಾಡಲು ಬಳಕೆದಾರರಿಗೆ ವಿಧಾನವನ್ನು ಒದಗಿಸುವ ಪರಿಕರವಾಗಿದೆ. ಕೃತಿಸ್ವಾಮ್ಯವು, ಸಾಫ್ಟ್‌ವೇರ್‌ನ ಪ್ರದರ್ಶನ ಅಥವಾ ಅದನ್ನು ಪಡೆದುಕೊಳ್ಳುವ ವಿಧಾನಗಳ ಪ್ರದರ್ಶನಕ್ಕೆ ಸಂಬಂಧಪಟ್ಟಿದೆ. ಸಾಫ್ಟ್‌ವೇರ್‌ನ ಇಂಟರ್‌ಫೇಸ್ ವೀಡಿಯೊದಲ್ಲಿದ್ದರೆ, ಅಥವಾ ವೀಡಿಯೊದಲ್ಲಿ ಅಥವಾ ವೀಡಿಯೊದ ವಿವರಣೆಯಲ್ಲಿ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ಲಿಂಕ್ ಇದ್ದರೆ, ನೀವು ಕೃತಿಸ್ವಾಮ್ಯ ತೆಗೆದುಹಾಕುವಿಕೆ ಸೂಚನೆಯನ್ನು ಸಲ್ಲಿಸಲು ಬಯಸಬಹುದು.

ಉಲ್ಲಂಘಿಸಲಾದ ಸಾಮಗ್ರಿಯು ವೀಡಿಯೊದಲ್ಲಿ ಇಲ್ಲದಿದ್ದಾಗ (ಅಥವಾ ನೇರವಾಗಿ ಲಿಂಕ್ ಮಾಡದಿದ್ದಾಗ), ಆದರೆ ವೀಡಿಯೊ ಅದನ್ನು ಆ್ಯಕ್ಸೆಸ್ ಮಾಡಲು ಬಳಕೆದಾರರಿಗೆ ಒಂದು ವಿಧಾನವನ್ನು ಒದಗಿಸಿದರೆ CTM ಕ್ಲೈಮ್ ಸೂಕ್ತವಾಗಿರುತ್ತದೆ.

ನೀವು ಮಾನ್ಯ CTM ಕ್ಲೈಮ್ ಅನ್ನು ಹೊಂದಿದ್ದೀರಿ ಎಂದು ನೀವು ನಂಬಿದರೆ, ನಮ್ಮ ವೆಬ್‌ಫಾರ್ಮ್ ಅನ್ನು ಭರ್ತಿ ಮಾಡಿ.

ತಾಂತ್ರಿಕ ಮಾಪನಗಳ ಸರ್ಕಮ್‌ವೆನ್ಶನ್ ದೂರನ್ನು ಸಲ್ಲಿಸಿ

ಶೀರ್ಷಿಕೆಗಳು

ನಿಮ್ಮ ವೀಡಿಯೊ, ಕಮ್ಯುನಿಕೇಶನ್ಸ್ ಆ್ಯಂಡ್ ವೀಡಿಯೊ ಆಕ್ಸೆಸಿಬಿಲಿಟಿ ಆ್ಯಕ್ಟ್ ಅನ್ನು ಉಲ್ಲಂಘಿಸುತ್ತಿದ್ದರೆ, ಮೂಲತಃ ಟಿವಿಯಲ್ಲಿ ಶೀರ್ಷಿಕೆಗಳೊಂದಿಗೆ ತೋರಿಸಲಾದ ಕಂಟೆಂಟ್ ಅನ್ನು ನೀವು ಅಪ್‌ಲೋಡ್ ಮಾಡಿರಬಹುದು. ಕಮ್ಯುನಿಕೇಶನ್ಸ್ ಆ್ಯಂಡ್ ವೀಡಿಯೊ ಆಕ್ಸೆಸಿಬಿಲಿಟಿ ಆ್ಯಕ್ಟ್ (CVAA) ಪ್ರಕಾರ, ಟಿವಿಯಲ್ಲಿ ಶೀರ್ಷಿಕೆ ಒದಗಿಸಿದ, ಮೊದಲೇ ರೆಕಾರ್ಡ್ ಮಾಡಿದ ವೀಡಿಯೊಗೆ, ಇಂಟರ್ನೆಟ್‌ನಲ್ಲಿಯೂ ಶೀರ್ಷಿಕೆ ಒದಗಿಸಬೇಕು. ನೀವು CVAA ಅವಶ್ಯಕತೆಯಿಂದ ಹೊರತಾಗಿದ್ದೀರಿ ಎಂದು ನೀವು ನಂಬಿದ್ದರೆ, ನಿಮ್ಮ ಕಂಟೆಂಟ್‌ಗಾಗಿ ನೀವು  ಪ್ರಮಾಣಪತ್ರವನ್ನು ಆಯ್ಕೆ ಮಾಡಬಹುದು.

ನಿಮ್ಮ ವೀಡಿಯೊ ಶೀರ್ಷಿಕೆಗಳನ್ನು ಹೊಂದಿರುವ ಅವಶ್ಯಕತೆಯನ್ನು CVAA ವಿಧಿಸಿದೆ, ಆದರೆ ಅಪ್‌ಲೋಡ್ ಮಾಡಿದವರು ಶೀರ್ಷಿಕೆಗಳನ್ನು ಲಭ್ಯಗೊಳಿಸಿಲ್ಲ ಎಂದಾದರೆ, ವೆಬ್‌ಫಾರ್ಮ್ ಸಲ್ಲಿಸಿ.

ಭಯೋತ್ಪಾದಕ ಕಂಟೆಂಟ್ ಆನ್‌ಲೈನ್ ನಿಯಂತ್ರಣ (“TCO”)

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಮತ್ತು ಅದನ್ನು ಪರಿಶೀಲನೆಗೆ ಸಲ್ಲಿಸಲು ಬಯಸುತ್ತೀರಿ ಎಂದಾದರೆ, ಕಂಟೆಂಟ್‍ ಕುರಿತು ವರದಿ ಮಾಡಿ. YouTube ನ ನೀತಿಗಳ ಕುರಿತು ಇನ್ನಷ್ಟು ತಿಳಿಯಲು, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ನೀವು ಓದಬಹುದು. ಕಾನೂನು ಕಾರಣಗಳಿಗಾಗಿ ಕಂಟೆಂಟ್ ಅನ್ನು ತೆಗೆದುಹಾಕಬೇಕೆಂದು ನೀವು ಭಾವಿಸಿದರೂ ಸಹ, ನೀವು ಕಂಟೆಂಟ್‌ನ ಕುರಿತು ವರದಿ ಮಾಡಬಹುದು.

ನೀವು ನಿಯೋಜಿತ ಸರಕಾರಿ ಸಮರ್ಥ ಅಧಿಕಾರಿಯಾಗಿದ್ದರೆ, ಆರ್ಟಿಕಲ್ 3 TCO ನ ಅಡಿಯಲ್ಲಿ ತೆಗೆದುಹಾಕುವಿಕೆ ಆರ್ಡರ್‌ಗಳಿಗಾಗಿ ನಿಯೋಜಿತ ವ್ಯಕ್ತಿಯನ್ನು ಸಂಪರ್ಕಿಸುವುದು ಹೇಗೆ ಎಂದು ತಿಳಿಯಲು ನೀವು YouTube ಅನ್ನು ಸಂಪರ್ಕಿಸಬಹುದು. ಈ ಉದ್ದೇಶಕ್ಕಾಗಿ, Google ಇಂಗ್ಲಿಷ್‌ನಲ್ಲಿ ಸಂವಹನಗಳನ್ನು ಸ್ವೀಕರಿಸುತ್ತದೆ.

EU ಭಯೋತ್ಪಾದಕ ಕಂಟೆಂಟ್ ಆನ್‌ಲೈನ್ ನಿಯಂತ್ರಣದ (EU 2021/784) ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ EU ನಿಯಂತ್ರಣ ಪಠ್ಯವನ್ನು ಓದಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9268002455079504435
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false