YouTube ನಲ್ಲಿ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಕುರಿತು ಸಾಮಾನ್ಯ ಸಂಗತಿಗಳು

ಈ ಲೇಖನವು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಕುರಿತಾಗಿದೆ. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳಿಗಿಂತ ಭಿನ್ನವಾಗಿರುವ ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಕುರಿತು ಮಾಹಿತಿಯನ್ನು ಹುಡುಕಲು, ನಮ್ಮ ಕೃತಿಸ್ವಾಮ್ಯ ಸ್ಟ್ರೈಕ್ ಸಾಮಾನ್ಯ ಸಂಗತಿಗಳು ಎಂಬಲ್ಲಿಗೆ ಭೇಟಿ ನೀಡಿ.

ಸಮುದಾಯ ಮಾರ್ಗಸೂಚಿಗಳು ಎಂದರೆ YouTube ನಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತಾದ ಪ್ರಮುಖ ನಿಯಮಗಳಾಗಿವೆ. ಈ ನೀತಿಗಳು ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಪ್ರಕಾರದ ಕಂಟೆಂಟ್‌ಗೆ ಅನ್ವಯಿಸುತ್ತವೆ ಮತ್ತು ಇದರಲ್ಲಿ ಪಟ್ಟಿ ಮಾಡಿರದ ಹಾಗೂ ಖಾಸಗಿ ಕಂಟೆಂಟ್, ಕಾಮೆಂಟ್‌ಗಳು, ಲಿಂಕ್‌ಗಳು, ಸಮುದಾಯ ಪೋಸ್ಟ್‌ಗಳು ಹಾಗೂ ಥಂಬ್‌ನೇಲ್‌ಗಳು ಸೇರಿವೆ. ಇದು ಸಂಪೂರ್ಣ ಪಟ್ಟಿಯಲ್ಲ. ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಚಾನಲ್‌ಗೆ ಸ್ಟ್ರೈಕ್ ವಿಧಿಸಲಾಗುತ್ತದೆ. 

ಗಮನಿಸಿ: ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಷ್ಟೇ ಅಲ್ಲದೆ ಬೇರೆ ಕಾರಣಗಳಿಗಾಗಿಯೂ ನಾವು ಕಂಟೆಂಟ್ ಅನ್ನು ತೆಗೆದುಹಾಕಬಹುದು. ಉದಾಹರಣೆಗೆ, ಮೊದಲ ಪಾರ್ಟಿಯ ಗೌಪ್ಯತಾ ದೂರು ಅಥವಾ ನ್ಯಾಯಾಲಯದ ಆದೇಶದ ಮೇರೆಗೆ. ಈ ಸಂದರ್ಭಗಳಲ್ಲಿ, ನಿಮ್ಮ ಚಾನಲ್‌ಗೆ ಸ್ಟ್ರೈಕ್ ವಿಧಿಸುವುದಿಲ್ಲ.

ಸಾಮಾನ್ಯ ಜ್ಞಾನದೊಂದಿಗೆ ರಚಿಸುವುದು: YouTube ಸಮುದಾಯ ಮಾರ್ಗಸೂಚಿಗಳು

ನಿಮಗೆ ಸ್ಟ್ರೈಕ್ ವಿಧಿಸಿದರೆ ಏನಾಗುತ್ತದೆ

ನಿಮಗೆ ಸ್ಟ್ರೈಕ್ ವಿಧಿಸಿದರೆ, ಇಮೇಲ್ ಮೂಲಕ ನಿಮಗೆ ತಿಳಿಸಲಾಗುವುದು. ನಿಮ್ಮ ಚಾನಲ್ ಸೆಟ್ಟಿಂಗ್‌ಗಳಲ್ಲಿ, ನಿಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ನೋಟಿಫಿಕೇಶನ್‌ಗಳ ಮೂಲಕ ನೀವು ನೋಟಿಫಿಕೇಶನ್‌ಗಳನ್ನು ಪಡೆಯಲು ಸಹ ಆಯ್ಕೆ ಮಾಡಬಹುದು. ನಾವು ಈ ಕೆಳಕಂಡ ಸಂಗತಿಗಳನ್ನು ಸಹ ನಿಮಗೆ ತಿಳಿಸುತ್ತೇವೆ:

  • ಯಾವ ಕಂಟೆಂಟ್ ಅನ್ನು ತೆಗೆದುಹಾಕಲಾಗಿದೆ
  • ಅದು ಯಾವ ನೀತಿಗಳನ್ನು ಉಲ್ಲಂಘಿಸಿದೆ (ಉದಾಹರಣೆಗೆ, ಕಿರುಕುಳ ಅಥವಾ ಹಿಂಸಾಚಾರ)
  • ಅದು ನಿಮ್ಮ ಚಾನಲ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ
  • ನೀವು ಮುಂದೆ ಏನು ಮಾಡಬಹುದು

ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ಅದು ನಿಮ್ಮ ಚಾನಲ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು:

ಎಚ್ಚರಿಕೆ

ತಪ್ಪುಗಳು ಸಂಭವಿಸುವುದು ಸಹಜ ಎಂಬುದು ನಮಗೆ ಅರ್ಥವಾಗುತ್ತದೆ ಮತ್ತು ನೀವು ಉದ್ದೇಶಪೂರ್ವಕವಾಗಿ ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ — ಅದಕ್ಕಾಗಿಯೇ ಮೊದಲ ಉಲ್ಲಂಘನೆಯ ಕುರಿತು ಕೇವಲ ಎಚ್ಚರಿಕೆಯನ್ನಷ್ಟೇ ನೀಡಲಾಗುತ್ತದೆ. ಈ ಎಚ್ಚರಿಕೆಯ ಅವಧಿ 90 ದಿನಗಳಲ್ಲಿ ಮುಕ್ತಾಯಗೊಳ್ಳಲು, ಪಾಲಿಸಿ ತರಬೇತಿಯನ್ನು ನೀವು ಪಡೆದುಕೊಳ್ಳಬಹುದು. ಆದರೂ, ನಿಮ್ಮ ಕಂಟೆಂಟ್ ಆ 90 ದಿನಗಳ ವಿಂಡೋದಲ್ಲಿ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿಯು ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ.

ಕೆಲವೊಮ್ಮೆ ತೀವ್ರವಾದ ದುರ್ಬಳಕೆಯ ಒಂದು ಪ್ರಕರಣವು ಎಚ್ಚರಿಕೆಯಿಲ್ಲದೆ ಚಾನಲ್ ಕೊನೆಗೊಳಿಸುವಿಕೆಗೆ ಕಾರಣವಾಗುತ್ತದೆ. ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ಎಚ್ಚರಿಕೆಯ ಕುರಿತು ಮೇಲ್ಮನವಿಯನ್ನು ಸಲ್ಲಿಸಬಹುದು.

ಐಚ್ಛಿಕ ಪಾಲಿಸಿ ತರಬೇತಿಗಳು

ಪಾಲಿಸಿ ತರಬೇತಿಗಳು ಎಂಬುದು ನೀವು ಉಲ್ಲಂಘಿಸಿರುವ ನಿರ್ದಿಷ್ಟ ಸಮುದಾಯ ಮಾರ್ಗಸೂಚಿಗಳ ನೀತಿಯನ್ನು ಆಧರಿಸಿದ ಉತ್ಪನ್ನದ ಕುರಿತಾದ ಸಣ್ಣ ಶೈಕ್ಷಣಿಕ ಅನುಭವಗಳಾಗಿವೆ. 

ನೀವು ಸಮುದಾಯ ಮಾರ್ಗಸೂಚಿಗಳ ಎಚ್ಚರಿಕೆಯನ್ನು ಸ್ವೀಕರಿಸಿದರೆ, ನಿಮ್ಮ Studio ಖಾತೆಯಿಂದ ನಿಮ್ಮ ನಿಯಮಾವಳಿ ಉಲ್ಲಂಘನೆಗಳನ್ನು ನೀವು ಸಾಮಾನ್ಯವಾಗಿ ಪರಿಶೀಲಿಸುವ ಎಲ್ಲಿಂದ ಬೇಕಾದರೂ ನೀವು ಪಾಲಿಸಿ ತರಬೇತಿಯನ್ನು ಆ್ಯಕ್ಸೆಸ್ ಮಾಡಬಹುದು. ಇದು Studio ಡ್ಯಾಶ್‍ಬೋರ್ಡ್ ಮತ್ತು ಕಂಟೆಂಟ್ ಟ್ಯಾಬ್ ಅನ್ನು ಒಳಗೊಂಡಿರುತ್ತದೆ. ತರಬೇತಿಯನ್ನು ತೆರೆಯುವುದಕ್ಕೆ ಸಂಬಂಧಿಸಿದ ಲಿಂಕ್ ಅನ್ನು ಇಮೇಲ್ ಮತ್ತು ಬ್ಯಾನರ್ ನೋಟಿಫಿಕೇಶನ್‍ಗಳಲ್ಲಿಯೂ ನೀವು ನೋಡಬಹುದು. ಗಮನಿಸಿ: ಎಲ್ಲಾ ಸಮುದಾಯ ಮಾರ್ಗಸೂಚಿಗಳ ಎಚ್ಚರಿಕೆಗಳು ಪಾಲಿಸಿ ತರಬೇತಿಗಳಿಗೆ ಅರ್ಹವಾಗಿರುವುದಿಲ್ಲ. 

ನೀವು ಐಚ್ಛಿಕ ಪಾಲಿಸಿ ತರಬೇತಿಯನ್ನು ಪೂರ್ಣಗೊಳಿಸಿದರೆ, ನಿಮ್ಮ ಎಚ್ಚರಿಕೆಯ ಅವಧಿ 90 ದಿನಗಳ ನಂತರ ಮುಕ್ತಾಯಗೊಳ್ಳುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

ನಮ್ಮ ನೀತಿಗಳ ಪುನರಾವರ್ತಿತ ಉಲ್ಲಂಘನೆಗಳು– ಅಥವಾ ಒಂದು ಬಾರಿಯ ತೀವ್ರ ದುರುಪಯೋಗ ಕಂಡುಬಂದರೆ– ಅದು ನಿಮ್ಮ ಖಾತೆಯ ಕೊನೆಗೊಳಿಸುವಿಕೆಗೆ ಕಾರಣವಾಗಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು.

ಮೊದಲ ಸ್ಟ್ರೈಕ್‏

ನಿಮ್ಮ ಕಂಟೆಂಟ್ ನಮ್ಮ ನೀತಿಗಳನ್ನು ಅನುಸರಿಸುತ್ತಿಲ್ಲ ಎಂಬುದು ನಮಗೆ ಎರಡನೇ ಬಾರಿಗೆ ಕಂಡುಬಂದರೆ, ನಿಮಗೆ ಮೊದಲ ಸ್ಟ್ರೈಕ್ ವಿಧಿಸಲಾಗುತ್ತದೆ.

ಈ ಸ್ಟ್ರೈಕ್‌ನ ಅರ್ಥವೇನೆಂದರೆ, 1 ವಾರದ ಮಟ್ಟಿಗೆ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲು ನಿಮಗೆ ಅವಕಾಶವಿರುವುದಿಲ್ಲ:

  • ವೀಡಿಯೊಗಳು ಅಥವಾ ಲೈವ್‌ ಸ್ಟ್ರೀಮ್‌ಗಳನ್ನು ಅಪ್‌ಲೋಡ್ ಮಾಡುವುದು
  • ನಿಗದಿತ ಲೈವ್ ಸ್ಟ್ರೀಮ್ ಪ್ರಾರಂಭಿಸುವುದು
  • ವೀಡಿಯೊವನ್ನು ಸಾರ್ವಜನಿಕಗೊಳಿಸಲು ನಿಗದಿಪಡಿಸುವುದು
  • ಪ್ರೀಮಿಯರ್ ರಚಿಸುವುದು
  • ಮುಂಬರುವ ಪ್ರೀಮಿಯರ್ ಅಥವಾ ಲೈವ್ ಸ್ಟ್ರೀಮ್‌ಗೆ ಟ್ರೇಲರ್ ಅನ್ನು ಸೇರಿಸುವುದು
  • ಕಸ್ಟಮ್ ಥಂಬ್‌ನೇಲ್‌ಗಳು ಅಥವಾ ಸಮುದಾಯ ಪೋಸ್ಟ್‌ಗಳನ್ನು ರಚಿಸುವುದು
  • ಪ್ಲೇಪಟ್ಟಿಗಳನ್ನು ರಚಿಸುವುದು, ಎಡಿಟ್ ಮಾಡುವುದು ಅಥವಾ ಸಹಯೋಗಿಗಳನ್ನು ಸೇರಿಸುವುದು
  • “ಸೇವ್” ಬಟನ್ ಬಳಸಿಕೊಂಡು ಪ್ಲೇಪಟ್ಟಿಗಳನ್ನು ವೀಕ್ಷಣೆ ಪುಟಕ್ಕೆ ಸೇರಿಸುವುದು ಅಥವಾ ತೆಗೆದುಹಾಕುವುದು

ಪೆನಲ್ಟಿ ಅವಧಿಯು ಮುಗಿಯುವವರೆಗೆ, ನಿಮ್ಮ ನಿಗದಿತ ಸಾರ್ವಜನಿಕ ಕಂಟೆಂಟ್ ಅನ್ನು "ಖಾಸಗಿ" ಎಂದು ಸೆಟ್ ಮಾಡಲಾಗುತ್ತದೆ. ಫ್ರೀಜ್ ಅವಧಿಯು ಮುಗಿದ ಬಳಿಕ, ನೀವು ಅದನ್ನು ಮರುನಿಗದಿಪಡಿಸಬೇಕು.

ಗಮನಿಸಿ: ಅಕ್ನಾಲೆಡ್ಜ್ ಮಾಡಿದ ದಿನಾಂಕದಿಂದ ಪೆನಲ್ಟಿ ಜಾರಿಯಾಗುತ್ತದೆ.

1-ವಾರದ ಅವಧಿಯ ನಂತರ, ನಾವು ಸಂಪೂರ್ಣ ಸವಲತ್ತುಗಳನ್ನು ಸ್ವಯಂಚಾಲಿತವಾಗಿ ಮರುಸ್ಥಾಪಿಸುತ್ತೇವೆ, ಆದರೆ ನಿಮ್ಮ ಚಾನಲ್‌ಗೆ ವಿಧಿಸಿರುವ ಸ್ಟ್ರೈಕ್ 90 ದಿನಗಳವರೆಗೆ ಹಾಗೆಯೇ ಉಳಿದಿರುತ್ತದೆ.

ಒಂದು ಸ್ಟ್ರೈಕ್‌ನಿಂದ ಸುಧಾರಿತ ಫೀಚರ್‌ಗಳು ಗೆ ಇರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುವಿಕೆಗೆ ಕಾರಣವಾಗಬಹುದು. ಆ್ಯಕ್ಸೆಸ್ ಅನ್ನು ಮರುಪಡೆಯುವುದು ಹೇಗೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ತಿಳಿಯಿರಿ.

ಎರಡನೇ ಸ್ಟ್ರೈಕ್

ಒಂದು ವೇಳೆ ನಿಮ್ಮ ಮೊದಲ ಸ್ಟ್ರೈಕ್ ವಿಧಿಸಿದ ಅದೇ 90 ದಿನಗಳ ಅವಧಿಯಲ್ಲಿ ನೀವು ಎರಡನೇ ಸ್ಟ್ರೈಕ್ ಪಡೆದರೆ, 2 ವಾರಗಳ ಕಾಲ ಕಂಟೆಂಟ್ ಅನ್ನು ಪೋಸ್ಟ್ ಮಾಡಲು ನಿಮಗೆ ಅವಕಾಶವಿರುವುದಿಲ್ಲ. ಯಾವುದೇ ಹೆಚ್ಚಿನ ಸಮಸ್ಯೆಗಳು ಇಲ್ಲದಿದ್ದರೆ, ನಾವು 2 ವಾರಗಳ ನಂತರ ಸಂಪೂರ್ಣ ಸವಲತ್ತುಗಳನ್ನು ಸ್ವಯಂಚಾಲಿತವಾಗಿ ಮರುಸ್ಥಾಪಿಸುತ್ತೇವೆ. ಪ್ರತಿಯೊಂದು ಸ್ಟ್ರೈಕ್ ಅನ್ನು ವಿಧಿಸಿದ ಸಮಯದಿಂದ 90 ದಿನಗಳವರೆಗೆ ಅದರ ಅವಧಿ ಮುಗಿಯುವುದಿಲ್ಲ.

ಮೂರನೇ ಸ್ಟ್ರೈಕ್

ಅದೇ 90 ದಿನಗಳ ಅವಧಿಯಲ್ಲಿ 3 ಸ್ಟ್ರೈಕ್‌ಗಳನ್ನು ಪಡೆದರೆ, ಅದು ನಿಮ್ಮ ಚಾನಲ್ ಅನ್ನು YouTube ನಿಂದ ಶಾಶ್ವತವಾಗಿ ಕೊನೆಗೊಳಿಸುವುದಕ್ಕೆ ಕಾರಣವಾಗುತ್ತದೆ. ಪ್ರತಿಯೊಂದು ಸ್ಟ್ರೈಕ್ ಅನ್ನು ವಿಧಿಸಿದ ಸಮಯದಿಂದ 90 ದಿನಗಳವರೆಗೆ ಅದರ ಅವಧಿ ಮುಗಿಯುವುದಿಲ್ಲ.

ಗಮನಿಸಿ: ನಿಮ್ಮ ಕಂಟೆಂಟ್ ಅನ್ನು ಅಳಿಸುವುದರಿಂದ ಸ್ಟ್ರೈಕ್ ಅನ್ನು ತೆಗೆದುಹಾಕುವುದಿಲ್ಲ. ಅಳಿಸಿದ ಕಂಟೆಂಟ್‌ಗೆ ಸಂಬಂಧಿಸಿದಂತೆ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಸಹ ನಾವು ವಿಧಿಸಬಹುದು. ನಾವು ಅಳಿಸಿದ ಕಂಟೆಂಟ್ ಅನ್ನು ಯಾವಾಗ ಉಳಿಸಿಕೊಳ್ಳುತ್ತೇವೆ ಎಂಬುದರ ಕುರಿತು ನಮ್ಮ ಗೌಪ್ಯತಾ ನೀತಿಯಲ್ಲಿ ನೀವು ಇನ್ನಷ್ಟು ತಿಳಿದುಕೊಳ್ಳಬಹುದು.

ನಿಮ್ಮ ಅಧಿಕೃತ ಕಲಾವಿದರ ಚಾನಲ್‌ಗೆ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ವಿಧಿಸಿದರೆ, ಚಾನಲ್ ಅನ್ನು ಅಮಾನತುಗೊಳಿಸಲಾಗುತ್ತದೆ ಮತ್ತು ಅದು ಪ್ರಮಾಣಿತ ಚಾನಲ್ ಆಗಿ ಮಾರ್ಪಡುತ್ತದೆ. ಇನ್ನಷ್ಟು ತಿಳಿಯಿರಿ.

ನಿಮಗೆ ಸ್ಟ್ರೈಕ್ ವಿಧಿಸಿದರೆ, ಏನು ಮಾಡಬೇಕು

ನೀವು YouTube ಬಳಸುವುದನ್ನು ಮುಂದುವರಿಸಬೇಕೆಂಬುದು ನಮ್ಮ ಬಯಕೆ. ಹೀಗಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಮರೆಯಬೇಡಿ:

  1. ನಿಮ್ಮ ಕಂಟೆಂಟ್ ನಮ್ಮ ನೀತಿಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸಮುದಾಯ ಮಾರ್ಗಸೂಚಿಗಳ ಕುರಿತು ತಿಳಿಯಿರಿ.
  2. ನಿಮ್ಮ ಚಾನಲ್‌ಗೆ ಸ್ಟ್ರೈಕ್ ವಿಧಿಸಿದರೆ ಮತ್ತು ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನಮಗೆ ತಿಳಿಸಿ. ನೀವು ಇಲ್ಲಿ ನಿರ್ಧಾರದ ಕುರಿತು ಮೇಲ್ಮನವಿ ಸಲ್ಲಿಸಬಹುದು.

YouTube, ತನ್ನ ಸ್ವಂತ ವಿವೇಚನೆಯ ಮೇರೆಗೆ ಕಂಟೆಂಟ್ ಅನ್ನು ರಚಿಸುವ ರಚನೆಕಾರರ ಸಾಮರ್ಥ್ಯವನ್ನು ನಿರ್ಬಂಧಿಸುವ ಹಕ್ಕನ್ನು ಸಹ ಕಾಯ್ದಿರಿಸಿಕೊಂಡಿದೆ. ನಿಮ್ಮ ಚಾನಲ್ ಅನ್ನು ಆಫ್ ಮಾಡಬಹುದು ಅಥವಾ ಯಾವುದೇ YouTube ಫೀಚರ್‌ಗಳನ್ನು ಬಳಸದಂತೆ ಅದನ್ನು ನಿರ್ಬಂಧಿಸಬಹುದು.

ಹೀಗಾದರೆ, ಈ ನಿರ್ಬಂಧಗಳನ್ನು ಹೇರುವುದನ್ನು ತಪ್ಪಿಸಲು ನೀವು ಇನ್ನೊಂದು ಚಾನಲ್ ಅನ್ನು ಬಳಸುವುದು, ರಚಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವಂತಹ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ನಿಮ್ಮ YouTube ಖಾತೆಯಲ್ಲಿ ನಿರ್ಬಂಧಗಳು ಸಕ್ರಿಯವಾಗಿರುವ ತನಕ ಈ ನಿಷೇಧವು ಅನ್ವಯಿಸುತ್ತದೆ. ಈ ನಿರ್ಬಂಧದ ಉಲ್ಲಂಘನೆಯನ್ನು ನಮ್ಮ ಸೇವಾ ನಿಯಮಗಳ ಅಡಿಯಲ್ಲಿ ಸರ್ಕಮ್‌ವೆನ್ಶನ್ ಎಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಎಲ್ಲಾ YouTube ಚಾನಲ್‌ಗಳು, ನೀವು ರಚಿಸುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಯಾವುದೇ ಹೊಸ ಚಾನಲ್‌ಗಳು ಮತ್ತು ನೀವು ಪದೇ ಪದೇ ಅಥವಾ ಪ್ರಮುಖವಾಗಿ ಕಾಣಿಸಿಕೊಂಡಿರುವ ಚಾನಲ್‌ಗಳನ್ನು ಕೊನೆಗೊಳಿಸುವುದಕ್ಕೆ ಕಾರಣವಾಗಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11326266251164423933
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false