ಹಾನಿಕಾರಕ ಅಥವಾ ಅಪಾಯಕಾರಿ ಕಂಟೆಂಟ್ ಕುರಿತಾದ ನೀತಿ

18 ಮಾರ್ಚ್ 2024 ರಿಂದ, ಪ್ರೇಕ್ಷಕರ ಹಕ್ಕುನಿರಾಕರಣೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಕಠಿಣ ನಿಲುವನ್ನು ಒಳಗೊಳ್ಳಲು, ಮತ್ತು ಪ್ರದರ್ಶಿಸಲಾದ ಕ್ರಿಯೆಯ ಸಂಭಾವ್ಯ ಹಾನಿಯ ಅಪಾಯವನ್ನು ಇನ್ನೂ ಉತ್ತಮವಾಗಿ ವಿಶ್ಲೇಷಿಸಲು ಅಪ್‌ಡೇಟ್ ಮಾಡಲಾದ ಮಾರ್ಗಸೂಚಿಗಳನ್ನು ಒಳಗೊಳ್ಳಲು ಹಾನಿಕಾರಕ ಮತ್ತು ಅಪಾಯಕಾರಿ ಕಂಟೆಂಟ್ ಕುರಿತಾದ ನಮ್ಮ ನೀತಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ.
ಗಂಭೀರ ದೈಹಿಕ ಹಾನಿ ಅಥವಾ ಸಾವಿಗೆ ಕಾರಣವಾಗಬಹುದಾದ ಅಪಾಯಕಾರಿ ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಂಟೆಂಟ್ ಅನ್ನು YouTube ಅನುಮತಿಸುವುದಿಲ್ಲ.
 
ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದನ್ನು ವರದಿ ಮಾಡಿ

 

ಈ ಲೇಖನದ ನಿರ್ದಿಷ್ಟ ವಿಭಾಗಕ್ಕೆ ಸ್ಕಿಪ್ ಮಾಡಿ:

ಮುಖ್ಯ ಸೂಚನೆ: ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿರುವ ಬಾಹ್ಯ ಲಿಂಕ್‌ಗಳಿಗೂ ಅನ್ವಯಿಸುತ್ತವೆ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ಹಾನಿಕಾರಕ ಅಥವಾ ಅಪಾಯಕಾರಿ ಕಂಟೆಂಟ್ ಕುರಿತಾದ ನೀತಿ

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ಸೂಚನೆ: ಈ ಕೆಳಗಿನ ಪಟ್ಟಿಯು ಪೂರ್ಣವಾಗಿಲ್ಲ. ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.
YouTube ನಲ್ಲಿ ಈ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ:

ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು, ಸವಾಲುಗಳು ಮತ್ತು ಪ್ರಾಂಕ್‌ಗಳು

  • ಅತ್ಯಂತ ಅಪಾಯಕಾರಿ ಸವಾಲುಗಳು: ದೈಹಿಕ ಗಾಯದ ಸನ್ನಿಹಿತ ಅಪಾಯವನ್ನು ಒಡ್ಡುವ ಸವಾಲುಗಳು.
  • ಅಪಾಯಕಾರಿಯಾದ ಅಥವಾ ಬೆದರಿಕೆಯೊಡ್ಡುವ ಪ್ರಾಂಕ್‌ಗಳು: ಸಂತ್ರಸ್ತರಲ್ಲಿ ಸನ್ನಿಹಿತ ಗಂಭೀರ ಅಪಾಯ ಉಂಟಾಗುವ ಭಯವನ್ನು ಹುಟ್ಟುಹಾಕುವ, ಅಥವಾ ಅಪ್ರಾಪ್ತ ವಯಸ್ಕರಿಗೆ ಗಂಭೀರ ಭಾವನಾತ್ಮಕ ಯಾತನೆಯನ್ನು ಉಂಟುಮಾಡುವ ಪ್ರಾಂಕ್‌ಗಳು.
  • ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು: ಗಂಭೀರ ಹಾನಿ ಅಥವಾ ಸಾವಿನ ಅಪಾಯವನ್ನು ಹೊಂದಿರುವ, ವಯಸ್ಕರು ಮಾಡುವ ಕೃತ್ಯಗಳು.
  • ಅಪ್ರಾಪ್ತ ವಯಸ್ಕರು ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವುದು: ಅಪ್ರಾಪ್ತ ವಯಸ್ಕರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಅಪಾಯ ಒಡ್ಡುವ ಕಂಟೆಂಟ್. ಹೆಚ್ಚಿನ ಮಾಹಿತಿಗಾಗಿ, ನಮ್ಮ ಮಕ್ಕಳ ಸುರಕ್ಷತೆ ನೀತಿಯನ್ನು ನೋಡಿ.

ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಕಂಟೆಂಟ್

  • ಕೊಲ್ಲಲು ಅಥವಾ ಹಾನಿ ಉಂಟುಮಾಡಲು ಸೂಚನೆಗಳು: ಇತರರನ್ನು ಕೊಲ್ಲುವ ಅಥವಾ ಇತರರಿಗೆ ತೀವ್ರವಾಗಿ ಹಾನಿ ಮಾಡುವ ಉದ್ದೇಶವಿರುವ ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ವೀಕ್ಷಕರಿಗೆ ತೋರಿಸುವ ಅಥವಾ ಹೇಳುವಂತಹ ಸೂಚನೆಗಳು.
  • ಸ್ಫೋಟಕಗಳು: ಇತರರನ್ನು ಗಾಯಗೊಳಿಸಲು ಅಥವಾ ಕೊಲ್ಲಲು ಸ್ಫೋಟಕ ಸಾಧನಗಳು ಅಥವಾ ರಾಸಾಯನಿಕಗಳನ್ನು ತಯಾರಿಸಲು ಸೂಚನೆಗಳನ್ನು ನೀಡುವುದು.
  • ಬಂದೂಕುಗಳು: ಹೆಚ್ಚಿನ ಮಾಹಿತಿಗಾಗಿ, ನಮ್ಮ ಬಂದೂಕುಗಳ ನೀತಿಯನ್ನು ನೋಡಿ.

ಡಿಜಿಟಲ್ ಭದ್ರತಾ ಕಂಟೆಂಟ್

  • ಕಳವು ಮಾಡಲು ಸೂಚನೆಗಳು: ಭೌತಿಕ ವಸ್ತುಗಳನ್ನು ಕಳವು ಮಾಡುವ ಅಥವಾ ಏನನ್ನಾದರೂ ಉಚಿತವಾಗಿ ಪಡೆಯುವ ಸೂಚಿತ ಉದ್ದೇಶದೊಂದಿಗೆ ಪೋಸ್ಟ್ ಮಾಡಲಾಗಿರುವ, ಕಳವು ಮಾಡುವ ಕುರಿತಾದ ಸೂಚನೆಗಳಿರುವ ವೀಡಿಯೊಗಳು.
  • ಹ್ಯಾಕಿಂಗ್: ರುಜುವಾತುಗಳನ್ನು ಕದಿಯುವ, ವೈಯಕ್ತಿಕ ಡೇಟಾವನ್ನು ಅಪಾಯಕ್ಕೆ ಒಡ್ಡುವ ಅಥವಾ ಇತರರಿಗೆ ಗಂಭೀರ ಹಾನಿ ಉಂಟುಮಾಡುವ ಉದ್ದೇಶದೊಂದಿಗೆ ಕಂಪ್ಯೂಟರ್‌ಗಳು ಅಥವಾ ಮಾಹಿತಿ ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬುದನ್ನು ಪ್ರದರ್ಶಿಸುವುದು.
  • ಡಿಜಿಟಲ್ ಕಂಟೆಂಟ್‌ ಅಥವಾ ಸೇವೆಗಳಿಗೆ ಸಂಬಂಧಿಸಿದ ಪಾವತಿಯನ್ನು ಬೈಪಾಸ್ ಮಾಡುವುದು: ಸಾಮಾನ್ಯವಾಗಿ ಪಾವತಿಯ ಅಗತ್ಯವಿರುವ ಕಂಟೆಂಟ್, ಸಾಫ್ಟ್‌ವೇರ್ ಅಥವಾ ಸೇವೆಗಳಿಗೆ ಅನಧಿಕೃತ ಆ್ಯಕ್ಸೆಸ್ ಅನ್ನು ಹೇಗೆ ಪಡೆಯುವುದು ಎಂಬುದನ್ನು ವೀಕ್ಷಕರಿಗೆ ತೋರಿಸುವ ಕಂಟೆಂಟ್.
  • ಫಿಶಿಂಗ್‌: ವೀಕ್ಷಕರನ್ನು ವಂಚಿಸುವ ಮೂಲಕ ಸಾರ್ವಜನಿಕವಲ್ಲದ, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ಅಥವಾ ಅದಕ್ಕಾಗಿ ಸೂಚನೆಗಳನ್ನು ನೀಡುವ ಕಂಟೆಂಟ್.
    • ಕ್ರಿಪ್ಟೋಫಿಶಿಂಗ್: ಫಿಶಿಂಗ್ ಪ್ಲಾನ್‌‌ನ ಭಾಗವಾಗಿ ಕ್ರಿಪ್ಟೋಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿ-ಸಂಬಂಧಿತ ವಾಲೆಟ್ ವಿವರಗಳಿಗಾಗಿ ವಿನಂತಿಗಳು.

ಕಾನೂನುಬಾಹಿರ ಅಥವಾ ನಿಯಂತ್ರಿತ ವಸ್ತುಗಳು ಅಥವಾ ಸೇವೆಗಳು

ಹಾನಿಕಾರಕ ಅಥವಾ ಅಪಾಯಕಾರಿ ಕಂಟೆಂಟ್‌ನ ಉದಾಹರಣೆಗಳು

YouTube ನಲ್ಲಿ ಅನುಮತಿಸದ ಹಾನಿಕಾರಕ ಅಥವಾ ಅಪಾಯಕಾರಿ ಕಂಟೆಂಟ್‌ನ ಕೆಲವು ಉದಾಹರಣೆಗಳು ಇಲ್ಲಿವೆ. 

ಸೂಚನೆ: ಈ ಕೆಳಗಿನ ಪಟ್ಟಿಯು ಪೂರ್ಣವಾಗಿಲ್ಲ.

ಅತ್ಯಂತ ಅಪಾಯಕಾರಿ ಸವಾಲುಗಳು

  • ಉಸಿರುಗಟ್ಟಿಸುವುದು: ಉಸಿರಾಡುವುದನ್ನು ತಡೆಯುವ ಅಥವಾ ಉಸಿರುಗಟ್ಟುವಿಕೆಗೆ ಕಾರಣವಾಗುವ ಯಾವುದೇ ಚಟುವಟಿಕೆ. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:
    • ಉಸಿರುಗಟ್ಟಿಸುವ, ಮುಳುಗುವ ಅಥವಾ ನೇತಾಡುವ ಆಟಗಳು
    • ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಿನ್ನುವುದು
  • ಆಯುಧಗಳ ದುರುಪಯೋಗ: ಸಮರ್ಪಕ ಸುರಕ್ಷತಾ ಮುನ್ನೆಚರಿಕೆಗಳಿಲ್ಲದೆ ಅಥವಾ ದೈಹಿಕ ಹಾನಿಯನ್ನು ಉಂಟುಮಾಡಬಹುದಾದ ರೀತಿಯಲ್ಲಿ ಬಂದೂಕುಗಳು ಅಥವಾ ಚೂರಿಗಳಂತಹ ಆಯುಧಗಳನ್ನು ಬಳಸುವುದು. ಉದಾಹರಣೆಗಳಲ್ಲಿ, "ನೋ ಲ್ಯಾಕಿನ್'" ಚಾಲೆಂಜ್ ಒಳಗೊಂಡಿದೆ.
  • ಹಾನಿಕಾರಕ ವಸ್ತುಗಳನ್ನು ಸೇವಿಸುವುದು: ಅಸ್ವಸ್ಥತೆ ಅಥವಾ ವಿಷಪ್ರಾಶನವನ್ನು ಉಂಟುಮಾಡಬಹುದಾದಂತಹ, ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ಅಥವಾ ರಾಸಾಯನಿಕಗಳನ್ನು ತಿನ್ನುವುದು, ಸೇವನೆ ಮಾಡುವುದು ಅಥವಾ ಸೇರಿಸುವುದು. ಉದಾಹರಣೆಗಳಲ್ಲಿ, ಡಿಟರ್ಜೆಂಟ್ ತಿನ್ನುವ ಸವಾಲುಗಳು ಒಳಗೊಂಡಿವೆ.
  • ಸುಡುವುದು, ಫ್ರೀಜ್ ಮಾಡುವುದು ಮತ್ತು ವಿದ್ಯುತ್ ಆಘಾತ: ತೀವ್ರವಾದ ಸುಟ್ಟಗಾಯಗಳು, ಫ್ರೀಜ್ ಆಗುವುದು, ಫ್ರಾಸ್ಟ್‌ಬೈಟ್ ಅಥವಾ ವಿದ್ಯುತ್ ಆಘಾತ ಉಂಟಾಗಬಹುದಾದಂತಹ ಗಂಭೀರ ಅಪಾಯವನ್ನು ಹೊಂದಿರುವ ಚಟುವಟಿಕೆಗಳು. ಉದಾಹರಣೆಗಳಲ್ಲಿ ಬೆಂಕಿಯ ಸವಾಲು ಮತ್ತು ಬಿಸಿನೀರಿನ ಸವಾಲು ಸೇರಿವೆ.
  • ಅಂಗ ಊನಗೊಳಿಸುವಿಕೆ ಮತ್ತು ಮೊಂಡಾದ ಬಲಪ್ರಯೋಗದಿಂದ ಗಾಯಗೊಳಿಸುವುದು: ಉದಾಹರಣೆಗಳಲ್ಲಿ ಇವು ಸೇರಿವೆ:
    • ಸ್ವಯಂ-ಅಂಗ ಊನಗೊಳಿಸುವಿಕೆ
    • ಸಾಮಾನ್ಯ ಆರೋಗ್ಯ-ಅಭ್ಯಾಸಗಳಿಂದ ದೂರವಿರುವುದು
    • ಬೀಳುವುದು, ಶೂಲಕ್ಕೇರಿಸುವುದು, ಡಿಕ್ಕಿ, ಮೊಂಡಾದ ಬಲಪ್ರಯೋಗದಿಂದ ಉಂಟಾಗುವ ಗಾಯ, ಅಥವಾ ಬಡಿಯುವುದು

ಗಮನಿಸಿ: ಶೈಕ್ಷಣಿಕ ಅಥವಾ ಡಾಕ್ಯುಮೆಂಟರಿ ಸಂದರ್ಭವನ್ನು ಹೊಂದಿರುವ ಕಂಟೆಂಟ್‌ನ ಮೇಲೆ ನಾವು ವಯಸ್ಸಿನ-ನಿರ್ಬಂಧ ವಿಧಿಸಬಹುದು.

ಅಪಾಯಕಾರಿಯಾದ ಅಥವಾ ಬೆದರಿಕೆಯೊಡ್ಡುವ ಪ್ರಾಂಕ್‌ಗಳು

  • ಉದ್ದೇಶಪೂರ್ವಕ ದೈಹಿಕ ಹಾನಿ:ಮುಗ್ಧ ಪ್ರಾಂಕ್ ಸಂತ್ರಸ್ತರ ಮೇಲೆ ದೈಹಿಕ ಹಾನಿ ಉಂಟುಮಾಡುವುದು. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:
    • ಗುದ್ದುವ ಹಲ್ಲೆಗಳು
    • ಆಹಾರ ಅಥವಾ ಪಾನೀಯಗಳಿಗೆ ಮಲವಿರೇಚಕಗಳನ್ನು ಬೆರೆಸುವುದು
    • ವಿದ್ಯುತ್ ಆಘಾತ ನೀಡುವ ಪ್ರಾಂಕ್‌ಗಳು
  • ತಾವು ಸನ್ನಿಹಿತ ಅಪಾಯದಲ್ಲಿದ್ದೇವೆ ಎಂದು ವ್ಯಕ್ತಿಯೊಬ್ಬರಿಗೆ ಅನಿಸುವಂತೆ ಮಾಡುವುದು: ವ್ಯಕ್ತಿಯೊಬ್ಬರಿಗೆ ನಿಜವಾದ ದೈಹಿಕ ಹಾನಿಯಾಗದಿದ್ದರೂ ಸಹ, ತಾವು ನಿಜವಾಗಿ ಅಪಾಯದಲ್ಲಿದ್ದೇವೆ ಎಂದು ಅನಿಸುವಂತೆ ಮೋಸ ಮಾಡುವುದು. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:
    • ಆಯುಧಗಳೊಂದಿಗೆ ಬೆದರಿಕೆಗಳು
    • ಬಾಂಬ್ ಬೆದರಿಕೆಗಳು
    • ಸ್ವಾಟಿಂಗ್ ಅಥವಾ ನಕಲಿ 911 ಕರೆಗಳು
    • ಮನೆಗೆ ನಕಲಿ ಕನ್ನ ಹಾಕುವುದು ಅಥವಾ ನಕಲಿ ದರೋಡೆಗಳು
    • ನಕಲಿ ಅಪಹರಣ
  • ಅಪ್ರಾಪ್ತ ವಯಸ್ಕರಿಗೆ/ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಭಾವನಾತ್ಮಕ ಯಾತನೆ: ಮಕ್ಕಳಿಗೆ ಅಥವಾ ದುರ್ಬಲ ಮನಸ್ಸನ್ನು ಹೊಂದಿರುವ ಇತರರಿಗೆ, ದೈಹಿಕ ಸುರಕ್ಷತೆಗೆ ಬೆದರಿಕೆಯಿರುವ ಕುರಿತಾಗಿ ಭಾವನಾತ್ಮಕ ಯಾತನೆ ಅಥವಾ ಹೆದರಿಕೆಯನ್ನು ಉಂಟುಮಾಡುವ ಯಾವುದೇ ಪ್ರಾಂಕ್. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:
    • ನಕಲಿ ಸಾವು ಅಥವಾ ಆತ್ಮಹತ್ಯೆ
    • ನಕಲಿ ಹಿಂಸೆ
    • ಪೋಷಕರು ಅಥವಾ ಆರೈಕೆದಾರರು ಮಗುವನ್ನು ತ್ಯಜಿಸುತ್ತಾರೆ ಎಂಬ ಹಾಗೆ ನಟಿಸುವುದು
    • ಪೋಷಕರು ಅಥವಾ ಆರೈಕೆದಾರರು ಮಗುವನ್ನು ಮೌಖಿಕವಾಗಿ ದೂಷಿಸುವುದನ್ನು ಅಥವಾ ಹೀಯಾಳಿಸುವುದನ್ನು ತೋರಿಸುವುದು

ಗಮನಿಸಿ: ವಯಸ್ಕರನ್ನು ಒಳಗೊಂಡಿರುವ ಮತ್ತು ನಮ್ಮ ನೀತಿಗಳನ್ನು ಉಲ್ಲಂಘಿಸದಿರುವ ಕಂಟೆಂಟ್‌ನ ಮೇಲೆ ನಾವು ವಯಸ್ಸಿನ ನಿರ್ಬಂಧ ವಿಧಿಸಬಹುದು.

ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು

  • ಗಂಭೀರ ಹಾನಿ ಅಥವಾ ಸಾವಿನ ಅಪಾಯಕ್ಕೆ ಒಡ್ಡಿಕೊಳ್ಳುವುದು: ವಯಸ್ಕರು ಗಂಭೀರ ದೈಹಿಕ ಹಾನಿ ಅಥವಾ ಸಾವಿನ ಅಪಾಯಕ್ಕೆ ಒಡ್ಡಿಕೊಳ್ಳುವುದನ್ನು ತೋರಿಸುವ ವರ್ತನೆ, ನಿರ್ದಿಷ್ಟವಾಗಿ, ವೀಕ್ಷಿಸುತ್ತಿರುವ ವ್ಯಕ್ತಿಯು ಆ ಅಪಾಯಕಾರಿ ಕೃತ್ಯವನ್ನು ಅನುಕರಿಸುವ ಸಾಧ್ಯತೆಯಿದ್ದರೆ ಅಥವಾ ಕಂಟೆಂಟ್, ಆ ಅಪಾಯಕಾರಿ ಕೃತ್ಯವನ್ನು ಪ್ರೋತ್ಸಾಹಿಸಿದರೆ ಅಥವಾ ಹೊಗಳಿದರೆ. ಅಪಾಯಕಾರಿ ಕೃತ್ಯಗಳು, ಮೇಲೆ ಅತ್ಯಂತ ಅಪಾಯಕಾರಿ ಸವಾಲುಗಳು ಎಂಬುದರ ಅಡಿಯಲ್ಲಿ ಪಟ್ಟಿ ಮಾಡಿದ ವರ್ಗಗಳಲ್ಲಿರುವ ಯಾವುದೇ ಕೃತ್ಯವನ್ನು ಒಳಗೊಂಡಿರುತ್ತವೆ, ಆದರೆ ಅವುಗಳಿಗೆ ಸೀಮಿತವಾಗಿರುವುದಿಲ್ಲ, ಉದಾಹರಣೆಗೆ ಉಸಿರುಗಟ್ಟುವಿಕೆ ಅಥವಾ ವಿದ್ಯುತ್ ಆಘಾತದ ಅಪಾಯವನ್ನು ಒಡ್ಡುವ ಕೃತ್ಯಗಳು.
    • ಅಪ್ರಾಪ್ತ ವಯಸ್ಕರು ಅಪಾಯಕಾರಿ ಕೃತ್ಯಗಳನ್ನು ಮಾಡುವುದನ್ನು ತೋರಿಸುವ ಕಂಟೆಂಟ್ ಅನ್ನು ಸಹ ನಾವು ಅನುಮತಿಸುವುದಿಲ್ಲ. ಅಪ್ರಾಪ್ತ ವಯಸ್ಕರು ಇವುಗಳನ್ನು ಮಾಡುವುದನ್ನು ತೋರಿಸುವ ಕಂಟೆಂಟ್ ಇದರಲ್ಲಿ ಒಳಗೊಂಡಿದೆ:
      • ಮದ್ಯಪಾನ ಸೇವಿಸುವುದು
      • ವೇಪರೈಸರ್‌ಗಳು, ಇ-ಸಿಗರೇಟ್‌ಗಳು, ತಂಬಾಕು ಅಥವಾ ಗಾಂಜಾವನ್ನು ಬಳಸುವುದು
      • ಸುಡುಮದ್ದುಗಳ ದುರುಪಯೋಗ
      • ಮೇಲ್ವಿಚಾರಣೆಯಿಲ್ಲದೆ ಬಂದೂಕುಗಳನ್ನು ಬಳಸುವುದು
  • ಅತ್ಯಂತ ಅಪಾಯಕಾರಿ ಡ್ರೈವಿಂಗ್: ಡ್ರೈವರ್ ಅಥವಾ ಇತರರಿಗೆ ಗಂಭೀರವಾದ ಗಾಯ ಅಥವಾ ಸಾವಿನ ಸನ್ನಿಹಿತ ಅಪಾಯವನ್ನು ಉಂಟುಮಾಡುವ ರೀತಿಯಲ್ಲಿ ಮೋಟಾರು ವಾಹನವನ್ನು ಬಳಸುವುದು. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:
    • ಮೋಟಾರ್ ಸೈಕಲ್ ಸವಾರರೊಬ್ಬರು, ವಿರುದ್ಧ ದಿಕ್ಕಿನಿಂದ ಬರುತ್ತಿರುವ ಟ್ರಾಫಿಕ್‌ಗೆ ಎದುರಾಗಿ ಅಧಿಕ ವೇಗದಲ್ಲಿ ಉದ್ದೇಶಪೂರ್ವಕವಾಗಿ ಅಡ್ಡಾದಿಡ್ಡಿ ನುಗ್ಗುವುದನ್ನು ತೋರಿಸುವ ಸೆಲ್ ಫೋನ್ ಫೂಟೇಜ್. “ವಾವ್, ಇದು ಕ್ರೇಝಿಯಾಗಿದೆ!” ಎಂದು ಹೇಳುತ್ತಾ ವಾಯ್ಸ್‌ಓವರ್ ಪ್ರತಿಕ್ರಿಯಿಸುತ್ತದೆ.
    • ಪಾದಚಾರಿಗಳಿಗೆ ಮೀಸಲಾದ ಹಾದಿಯ ಮೇಲೆ ಕಾರನ್ನು ಅಧಿಕ ವೇಗದಲ್ಲಿ ಡ್ರೈವ್ ಮಾಡುವುದು.

ಹಾನಿ ಮಾಡುವ ಕುರಿತಾದ ಸೂಚನೆಗಳು

  • ಬಾಂಬ್ ತಯಾರಿಕೆ: ಇತರರಿಗೆ ಗಾಯ ಮಾಡುವ ಅಥವಾ ಕೊಲ್ಲುವ ಉದ್ದೇಶವಿರುವ ಬಾಂಬ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ವೀಕ್ಷಕರಿಗೆ ತೋರಿಸುವುದು. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:
    • ಪೈಪ್ ಬಾಂಬ್‌ಗಳು
    • ಪ್ಯಾಕೇಜ್ ಬಾಂಬ್‌ಗಳು
    • ಸ್ಫೋಟಕ ಅಂಗಿಗಳು
    • ಮೊಲೋಟೊವ್ ಕಾಕ್‌ಟೇಲ್‌ಗಳು
  • ಮಕ್ಕಳನ್ನು ಒಳಗೊಂಡಿರುವ ಹಿಂಸೆ: ಮಕ್ಕಳ ನಡುವೆ ನಡೆಯುವ ಯಾವುದೇ ನೈಜ ಹೊಡೆದಾಟಗಳು ಅಥವಾ ಹಿಂಸೆ. ಹೆಚ್ಚಿನ ಮಾಹಿತಿಗಾಗಿ, ನಮ್ಮ ಮಕ್ಕಳ ಸುರಕ್ಷತೆ ನೀತಿಯನ್ನು ನೋಡಿ.

ಗಮನಿಸಿ: ಡಾಕ್ಯುಮೆಂಟರಿ ಅಥವಾ ಶೈಕ್ಷಣಿಕ ಸಂದರ್ಭವನ್ನು ಹೊಂದಿರುವ ಕಂಟೆಂಟ್‌ಗೆ ನಾವು ವಯಸ್ಸಿನ-ನಿರ್ಬಂಧ ವಿಧಿಸಬಹುದು.

ವಯೋಮಾನ ನಿರ್ಬಂಧಿತ ಕಂಟೆಂಟ್

ಸೂಚನೆ: ಈ ಕೆಳಗಿನ ಪಟ್ಟಿಯು ಪೂರ್ಣವಾಗಿಲ್ಲ.
ಕೆಲವೊಮ್ಮೆ, ಕಂಟೆಂಟ್ ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ, ಆದರೆ ಅದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವಾಗಿರದಿರಬಹುದು.
ಅಪಾಯಕಾರಿ ಕೃತ್ಯವನ್ನು ತೋರಿಸುವ ಕಂಟೆಂಟ್ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಮಾನದಂಡವನ್ನು ಪೂರೈಸಿದರೆ ನಾವು ಅದನ್ನು ತೆಗೆದುಹಾಕುವ ಬದಲಿಗೆ ಅದರ ಮೇಲೆ ವಯಸ್ಸಿನ ನಿರ್ಬಂಧ ವಿಧಿಸಬಹುದು:
  • ಕೃತ್ಯದ ಅಪಾಯಗಳ ಕುರಿತು ಮಾಹಿತಿ ಒದಗಿಸುವಂತಹ, ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಸಂದರ್ಭವನ್ನು ಅದು ಹೊಂದಿರುವುದು. ಉದಾಹರಣೆಗೆ, ಆ ಅಪಾಯಕಾರಿ ಕೃತ್ಯವನ್ನು ಮಾಡುವುದರಿಂದ ಉಂಟಾಗಬಹುದಾದ ಗಾಯಗಳ ಪ್ರಕಾರಗಳನ್ನು ವಿವರಿಸುವಂತಹ ಅಥವಾ ಆ ಅಪಾಯಕಾರಿ ಕೃತ್ಯವನ್ನು ಮಾಡಿದ ಪರಿಣಾಮವಾಗಿ ನೀವು ಗಾಯಗೊಂಡಿರುವ ಅನುಭವವನ್ನು ವರ್ಣಿಸುವಂತಹ ಸಾಂದರ್ಭಿಕ ಮಾಹಿತಿಯನ್ನು ಅದು ಒಳಗೊಂಡಿರಬಹುದು. ಆ ಕೃತ್ಯವನ್ನು ಸುರಕ್ಷಿತವಾಗಿ ಮಾಡಲು ಮತ್ತು ಗಾಯವಾಗುವುದನ್ನು ತಡೆಗಟ್ಟಲು ಅಗತ್ಯವಿರುವ ಮುನ್ನೆಚ್ಚರಿಕೆಗಳ ಪ್ರಕಾರಗಳು ಅಥವಾ ತರಬೇತಿಯ ಕುರಿತಾದ ಸಾಂದರ್ಭಿಕ ಮಾಹಿತಿಯನ್ನು ಸಹ ಅದು ಒಳಗೊಂಡಿರಬಹುದು. “ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ” ಎಂದು ಹೇಳುವುದು ಸಾಕಷ್ಟು ಸಾಂದರ್ಭಿಕ ಮಾಹಿತಿಯಾಗುವುದಿಲ್ಲ.
  • ತೋರಿಸಿದ ಕೃತ್ಯವು ಗಂಭೀರ ಗಾಯದ ಅಪಾಯವನ್ನು ಒಡ್ಡುವುದಿಲ್ಲ.
  • ಕಂಟೆಂಟ್, ತೋರಿಸಿದ ಕೃತ್ಯವನ್ನು ಪ್ರಚಾರ ಮಾಡುವುದಿಲ್ಲ. ಪ್ರಚಾರ ಎಂಬುದು, ಕೃತ್ಯವನ್ನು ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸುವುದು ಅಥವಾ ಹೊಗಳುವುದು, ಅಥವಾ ಆ ಕೃತ್ಯವನ್ನು ಪೂರ್ಣಗೊಳಿಸುವುದು ಹೇಗೆ ಎಂಬ ಕುರಿತು ಸೂಚನೆಗಳನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ.

ವಯೋಮಾನ ನಿರ್ಬಂಧಿತ ಕಂಟೆಂಟ್‌ನ ಕುರಿತು ಮತ್ತು ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳನ್ನು ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ವಯಸ್ಸಿನ ನಿರ್ಬಂಧವಿರುವ ಕಂಟೆಂಟ್‌ನ ಉದಾಹರಣೆಗಳು

  • ಅತಿಯಾದ ನಕಲಿ ರಕ್ತ ಅಥವಾ ಭೀಕರವಾದ ನಕಲಿ ಗಾಯಗಳನ್ನು ತೋರಿಸುವ, ವಯಸ್ಕರನ್ನು ಒಳಗೊಂಡ ಪ್ರಾಂಕ್ ಕಂಟೆಂಟ್.
  • ಜನರು ಒಂದು ಅಪಾಯಕಾರಿ ಸವಾಲಿನಲ್ಲಿ ತೊಡಗಿಸಿಕೊಂಡಿರುವುದರ ಫೂಟೇಜ್ ಅನ್ನು ತೋರಿಸುವುದು ಮತ್ತು ಆ ಸವಾಲಿನಿಂದ ಗಂಭೀರವಾಗಿ ಗಾಯಗೊಂಡಿರುವ ಜನರ ಸಂಖ್ಯೆಯನ್ನು ಕಾಮೆಂಟರಿಯಲ್ಲಿ ವರ್ಣಿಸುವುದು.
  • ವಯಸ್ಕರು ಸುಡುಮದ್ದುಗಳನ್ನು ದುರುಪಯೋಗ ಮಾಡುವುದನ್ನು ತೋರಿಸುವ ಕಂಟೆಂಟ್.
  • ಭಾಗವಹಿಸಲು ಸಮ್ಮತಿಸಿರುವ ಇತರ ವ್ಯಕ್ತಿಗಳ ಮೇಲೆ ಅಥವಾ ತಮ್ಮ ಮೇಲೆಯೇ ವಯಸ್ಕರು ಟೇಸರ್ ಅನ್ನು ಪ್ರಯೋಗಿಸುವುದನ್ನು ತೋರಿಸುವ ಕಂಟೆಂಟ್.
  • ಅತ್ಯಧಿಕ ಅಪಾಯವನ್ನು ಹೊಂದಿರುವ ಹವ್ಯಾಸಿ ಸ್ಟಂಟ್‌ಗಳ ವೀಡಿಯೊಗಳಿಗೆ ವಯಸ್ಕ ಪಾರ್ಕೋರ್ ಕ್ರೀಡಾಪಟುವೊಬ್ಬರು ಪ್ರತಿಕ್ರಿಯಿಸುವುದು ಮತ್ತು ಹಾನಿಯ ಅಪಾಯದ ಕುರಿತು ಕಾಮೆಂಟ್ ಮಾಡುವುದನ್ನು ತೋರಿಸುವ ಕಂಟೆಂಟ್.

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್

ಕೆಲವೊಮ್ಮೆ, ಈ ನೀತಿಯನ್ನು ಅನ್ಯಥಾ ಉಲ್ಲಂಘಿಸುವ ಕಂಟೆಂಟ್ ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ (EDSA) ಸಂದರ್ಭವನ್ನು ಹೊಂದಿರುವಾಗ ಅದನ್ನು YouTube ನಲ್ಲಿ ಇರಿಸಲು ಅನುಮತಿಸಲಾಗುತ್ತದೆ. EDSA ಕಂಟೆಂಟ್ ಅನ್ನು YouTube ಹೇಗೆ ಮೌಲ್ಯಮಾಪನ ಮಾಡುತ್ತದೆ ಎಂಬುದರ ಕುರಿತು ತಿಳಿಯಿರಿ.

ಗಮನಿಸಿ: ಕೆಲವು ಸಂದರ್ಭಗಳಲ್ಲಿ, EDSA ಕಂಟೆಂಟ್‌ನ ಮೇಲೆ ವಯಸ್ಸಿನ ನಿರ್ಬಂಧ ವಿಧಿಸಲಾಗಬಹುದು. EDSA ಸಂದರ್ಭವನ್ನು ಸೇರಿಸಿದ್ದರೂ, ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳು ಅಥವಾ ನಿಯಂತ್ರಿತ ಫಾರ್ಮಾಸ್ಯುಟಿಕಲ್‌ಗಳನ್ನು ಮಾರಾಟ ಮಾಡುವ ಕಂಟೆಂಟ್‌ನಂತಹ ಕೆಲವು ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ.

EDSA ಕಂಟೆಂಟ್‌ನ ಉದಾಹರಣೆಗಳು

  • ಉಸಿರುಗಟ್ಟಿಸುವ ಆಟಗಳ ಅಪಾಯಗಳ ಕುರಿತಾದ ಸುದ್ದಿ ತುಣುಕು ಸೂಕ್ತವಾಗಿರಬಹುದು, ಆದರೆ ಅದೇ ಡಾಕ್ಯುಮೆಂಟರಿಯ ಕ್ಲಿಪ್‌ಗಳನ್ನು ಸಂದರ್ಭಕ್ಕೆ ಹೊರತಾಗಿ ಪೋಸ್ಟ್ ಮಾಡುವುದು ಸಮಂಜಸವಲ್ಲದಿರಬಹುದು.
  • ವೃತ್ತಿಪರ ಸ್ಟಂಟ್ ಮ್ಯಾನ್ ಒಬ್ಬರು ಅಪಾಯಕಾರಿ ಮೋಟಾರ್‌ಸೈಕಲ್ ಜಿಗಿತವನ್ನು ಪ್ರದರ್ಶಿಸುವ ವೀಡಿಯೊ, ಈ ಸ್ಟಂಟ್ ಮಾಡುವ ಮುನ್ನ ಸ್ಥಳದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆಗಳು, ಅಂದರೆ ಸ್ಥಳದಲ್ಲೇ ತುರ್ತು ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ಸಾಧನಗಳ ಬಳಕೆಯಂತಹ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವೀಕ್ಷಕರಿಗೆ ಇದು ತೋರಿಸುತ್ತದೆ.
  • ಡ್ರಗ್‌ಗಳ ಬಳಕೆಯನ್ನು ತೋರಿಸುವಾಗ, ವೀಕ್ಷಕರಿಗೆ ಡ್ರಗ್‌ಗಳನ್ನು ಬಳಸದಂತೆ ತಿಳಿಹೇಳುವ ಮತ್ತು ಅವುಗಳನ್ನು ತಯಾರಿಸುವುದು ಅಥವಾ ಖರೀದಿಸುವುದು ಹೇಗೆ ಎಂಬುದರ ಕುರಿತು ಮಾಹಿತಿಯನ್ನು ಒದಗಿಸದ, ನಿರ್ದಿಷ್ಟ ಸಮುದಾಯದಲ್ಲಿ ಡ್ರಗ್‌ಗಳ ಬಳಕೆಯ ಪರಿಣಾಮವನ್ನು ತೋರಿಸುವಂತಹ ಡಾಕ್ಯುಮೆಂಟರಿ.
  • ಸುರಕ್ಷಿತ ಡ್ರೈವಿಂಗ್ ಅಭ್ಯಾಸಗಳು ಅಥವಾ ವಾಹನ ಸುರಕ್ಷತೆ ಫೀಚರ್‌ಗಳ ಬಗ್ಗೆ ವೀಕ್ಷಕರಿಗೆ ತಿಳಿಸಲು ನಿಯಂತ್ರಿತ ಪರಿಸರದಲ್ಲಿ ಅಪಾಯಕಾರಿ ಡ್ರೈವಿಂಗ್ ಅಥವಾ ವಾಹನ ಅಪಘಾತಗಳನ್ನು ತೋರಿಸುವಂತಹ ವೀಡಿಯೊ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ನಮ್ಮ ಉಳಿದ ಸಮುದಾಯ ಮಾರ್ಗಸೂಚಿಗಳನ್ನು ಓದಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8629797475726791462
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false