ಕೃತಿಸ್ವಾಮ್ಯ ಎಂದರೇನು?

ಹಲವು ದೇಶಗಳಲ್ಲಿ, ಭೌತಿಕ ಮಾಧ್ಯಮದಲ್ಲಿ ಉಳಿಸಿರುವಂತಹ ಮೂಲ ಕೃತಿಯೊಂದನ್ನು ವ್ಯಕ್ತಿಯೊಬ್ಬರು ರಚಿಸಿದಾಗ, ಆ ಕೃತಿಗೆ ಸಂಬಂಧಿಸಿದಂತೆ ಅವರು ಸ್ವಯಂಚಾಲಿತವಾಗಿ ಕೃತಿಸ್ವಾಮ್ಯವನ್ನು ಹೊಂದುತ್ತಾರೆ. ಕೃತಿಸ್ವಾಮ್ಯದ ಮಾಲೀಕರಾಗಿ, ಕೃತಿಯನ್ನು ಬಳಸುವ ಪ್ರತ್ಯೇಕ ಹಕ್ಕನ್ನು ಅವರು ಹೊಂದಿರುತ್ತಾರೆ. ಬಹುತೇಕ ಸಂದರ್ಭದಲ್ಲಿ, ಬೇರೆ ಯಾರಾದರೂ ಕೃತಿಯನ್ನು ಬಳಸುವ ಅನುಮತಿಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಕೃತಿಸ್ವಾಮ್ಯದ ಮಾಲೀಕರು ಮಾತ್ರ ಹೇಳಬಹುದು. 

ಯಾವ ಪ್ರಕಾರಗಳ ಕೃತಿಯು ಕೃತಿಸ್ವಾಮ್ಯಕ್ಕೆ ಒಳಪಟ್ಟಿದೆ?
  • ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ಆನ್‌ಲೈನ್ ವೀಡಿಯೊಗಳಂತಹ ಆಡಿಯೊವಿಶುವಲ್ ಕೃತಿಗಳು
  • ಧ್ವನಿ ರೆಕಾರ್ಡಿಂಗ್‌ಗಳು ಮತ್ತು ಸಂಗೀತ ಸಂಯೋಜನೆಗಳು
  • ಉಪನ್ಯಾಸಗಳು, ಲೇಖನಗಳು, ಪುಸ್ತಕಗಳು ಮತ್ತು ಸಂಗೀತ ಸಂಯೋಜನೆಗಳಂತಹ ಲಿಖಿತ ಕೃತಿಗಳು
  • ಚಿತ್ರಕಲೆಗಳು, ಪೋಸ್ಟರ್‌ಗಳು ಮತ್ತು ಜಾಹೀರಾತುಗಳಂತಹ ವಿಷುವಲ್ ಕೃತಿಗಳು
  • ವೀಡಿಯೊ ಗೇಮ್‌ಗಳು ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್
  • ನಾಟಕಗಳು ಮತ್ತು ಸಂಗೀತಗಳಂತಹ ನಾಟಕ ಕೃತಿಗಳು

ವಿಚಾರಗಳು, ಸತ್ಯಾಂಶಗಳು ಮತ್ತು ಪ್ರಕ್ರಿಯೆಗಳು ಕೃತಿಸ್ವಾಮ್ಯಕ್ಕೆ ಒಳಪಡುವುದಿಲ್ಲ. ಕೃತಿಸ್ವಾಮ್ಯ ಕಾನೂನಿನ ಪ್ರಕಾರ, ಕೃತಿಸ್ವಾಮ್ಯ ಸಂರಕ್ಷಣೆಗೆ ಅರ್ಹತೆ ಪಡೆಯುವಂತಾಗಲು, ಒಂದು ಕೃತಿಯು ಸೃಜನಾತ್ಮಕವಾಗಿರಬೇಕು ಮತ್ತು ಅದು ವ್ಯಾಪಾರದ ಮಾಧ್ಯಮದಲ್ಲಿ ನಿಶ್ಚಿತವಾಗಿರಬೇಕು. ಹೆಸರುಗಳು ಮತ್ತು ಶೀರ್ಷಿಕೆಗಳು ಸ್ವತಃ ಕೃತಿಸ್ವಾಮ್ಯಕ್ಕೆ ಒಳಪಡುವುದಿಲ್ಲ.

ಉಲ್ಲಂಘನೆ ಮಾಡದೆಯೇ ನಾನು ಕೃತಿಸ್ವಾಮ್ಯ-ಸಂರಕ್ಷಿತ ಕೃತಿಯನ್ನು ಬಳಸಬಹುದೇ?

ನ್ಯಾಯಯುತ ಬಳಕೆ ಮತ್ತು ನ್ಯಾಯೋಚಿತ ವ್ಯವಹಾರ, ಅಥವಾ ಇನ್ಯಾರದ್ದೋ ಕಂಟೆಂಟ್ ಬಳಸಲು ಅನುಮತಿ ಪಡೆಯುವುದು ಇಂತಹ ಕೃತಿಸ್ವಾಮ್ಯ ವಿನಾಯಿತಿಗಳಂತಹ ಸಂದರ್ಭಗಳಲ್ಲಿ ಉಲ್ಲಂಘನೆ ಮಾಡದೆಯೇ ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್‌ನ ಬಳಕೆಯು ಸಾಧ್ಯವಿದೆ.

ನಿಮ್ಮ ವೀಡಿಯೊದಲ್ಲಿ ಇನ್ಯಾರದ್ದೋ ಸಂಗೀತವನ್ನು ಬಳಸಿಕೊಳ್ಳುವ ಕುರಿತು ಯೋಚಿಸುತ್ತಿದ್ದರೆ, ಸಂಗೀತವನ್ನು ಬಳಸಿಕೊಳ್ಳುವುದಕ್ಕಾಗಿ ಇರುವ ನಿಮ್ಮ ಆಯ್ಕೆಗಳ ಕುರಿತು ಇನ್ನಷ್ಟು ತಿಳಿಯಿರಿ:

Options for using music in your videos

 

ಜತೆಗೆ, ಕೆಲವು ಕಂಟೆಂಟ್ ರಚನೆಕಾರರು ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಎಂದು ಕರೆಯುವ ಕೆಲವು ಅವಶ್ಯಕತೆಗಳ ಮೂಲಕ ಅವರ ಕೃತಿಯು ಮರುಬಳಕೆಗೆ ಲಭ್ಯವಾಗುವಂತೆ ಮಾಡುವುದನ್ನು ಆಯ್ಕೆ ಮಾಡುತ್ತಾರೆ.

ಕೃತಿಸ್ವಾಮ್ಯದ ಮಾಲೀಕತ್ವವನ್ನು YouTube ನಿರ್ಧರಿಸಬಹುದೇ?

ಇಲ್ಲ. ಹಕ್ಕುಗಳ ಮಾಲೀಕತ್ವ ವಿವಾದಗಳ ಮಧ್ಯಸ್ಥಿಕೆ ನಡೆಸಲು YouTube ಗೆ ಸಾಧ್ಯವಿಲ್ಲ. ನಾವು ಸಂಪೂರ್ಣವಾದ ಮತ್ತು ಮಾನ್ಯವಾದ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸ್ವೀಕರಿಸಿದಾಗ, ಕಾನೂನಿಗೆ ಅನುಗುಣವಾಗಿ ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ. ನಾವು ಮಾನ್ಯವಾದ ಪ್ರತಿವಾದಿ ನೋಟಿಫಿಕೇಶನ್ ಅನ್ನು ಸ್ವೀಕರಿಸಿದಾಗ, ತೆಗೆದುಹಾಕುವಿಕೆಯನ್ನು ಯಾರು ವಿನಂತಿಸಿದ್ದಾರೋ ಆ ವ್ಯಕ್ತಿಗೆ ಅದನ್ನು ನಾವು ಫಾರ್ವರ್ಡ್ ಮಾಡುತ್ತೇವೆ. ಇದರ ನಂತರ, ನ್ಯಾಯಾಲಯದಲ್ಲಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಬಿಟ್ಟ ವಿಷಯವಾಗಿದೆ.

ಕೃತಿಸ್ವಾಮ್ಯವು ಟ್ರೇಡ್‌ಮಾರ್ಕ್‌ನಂತೆಯೇ ಇದೆಯೇ?

ಇಲ್ಲ. ಕೃತಿಸ್ವಾಮ್ಯವೆಂಬುದು ಬೌದ್ಧಿಕ ಸ್ವತ್ತಿನ ಒಂದು ಸ್ವರೂಪವಾಗಿದೆ. ಇತರರಿಂದ ಕೆಲ ಉದ್ದೇಶಗಳಿಗಾಗಿ ಬ್ರ್ಯಾಂಡ್ ಹೆಸರುಗಳು, ಧ್ಯೇಯಗಳು, ಲೋಗೊಗಳು ಮತ್ತು ಇತರ ಮೂಲ ಗುರುತಿಸುವಿಕೆಗಳನ್ನು ಬಳಸದಂತೆ ರಕ್ಷಿಸುವ ಟ್ರೇಡ್‌ಮಾರ್ಕ್‌ನಂತೆ ಇದಲ್ಲ. ಸಂಶೋಧನೆಗಳಿಗೆ ರಕ್ಷಣೆ ನೀಡುವ ಪೇಟೆಂಟ್ ಕಾನೂನಿಗಿಂತಲೂ ಸಹ ಕೃತಿಸ್ವಾಮ್ಯವು ಭಿನ್ನವಾಗಿದೆ.

ಟ್ರೇಡ್‌ಮಾರ್ಕ್ ಅಥವಾ ಇತರ ಕಾನೂನುಗಳನ್ನು ಉಲ್ಲಂಘಿಸುವ ವೀಡಿಯೊಗಳಿಗಾಗಿ YouTube ಪ್ರತ್ಯೇಕ ತೆಗೆದುಹಾಕುವಿಕೆ ಪ್ರಕ್ರಿಯೆಯನ್ನು ನೀಡುತ್ತದೆ.

ಕೃತಿಸ್ವಾಮ್ಯ ಮತ್ತು ಗೌಪ್ಯತೆಯ ನಡುವೆ ಇರುವ ವ್ಯತ್ಯಾಸವೇನು?

ವೀಡಿಯೊ, ಚಿತ್ರ ಅಥವಾ ಆಡಿಯೊ ರೆಕಾರ್ಡಿಂಗ್‌ನಲ್ಲಿ ನೀವು ಕಾಣಿಸಿಕೊಂಡಿದ್ದೀರಿ ಎಂದ ಮಾತ್ರಕ್ಕೆ ಅದರ ಕೃತಿಸ್ವಾಮ್ಯವನ್ನು ನೀವು ಹೊಂದಿರುವಿರಿ ಎಂದು ಅರ್ಥವಲ್ಲ. ಉದಾಹರಣೆಗೆ, ನಿಮ್ಮ ಸ್ನೇಹಿತರು ನಿಮ್ಮ ಮತ್ತು ಅವರ ನಡುವಿನ ಸಂವಾದವನ್ನು ಚಿತ್ರೀಕರಿಸಿದ್ದರೆ, ವೀಡಿಯೊ ರೆಕಾರ್ಡಿಂಗ್‌ನ ಕೃತಿಸ್ವಾಮ್ಯವನ್ನು ಅವರು ಹೊಂದಿರುತ್ತಾರೆ. ನೀವಿಬ್ಬರೂ ಆಡುತ್ತಿರುವ ಮಾತುಗಳನ್ನು ಮುಂಚಿತವಾಗಿ ಸರಿಪಡಿಸದಿದ್ದರೆ ಅವುಗಳು ವೀಡಿಯೊದಿಂದ ಪ್ರತ್ಯೇಕವಾಗಿ ಕೃತಿಸ್ವಾಮ್ಯಕ್ಕೆ ಒಳಪಡುವುದಿಲ್ಲ.

ನಿಮ್ಮ ಸ್ನೇಹಿತರು ಅಥವಾ ಬೇರೆ ಯಾರಾದರೂ ನಿಮ್ಮ ಅನುಮತಿಯಿಲ್ಲದೆ ನಿಮ್ಮ ವೀಡಿಯೊ, ಚಿತ್ರ ಅಥವಾ ರೆಕಾರ್ಡಿಂಗ್ ಅನ್ನು ಅಪ್‌ಲೋಡ್ ಮಾಡಿದ್ದರೆ ಮತ್ತು ಅದು ನಿಮ್ಮ ಗೌಪ್ಯತೆ ಅಥವಾ ಸುರಕ್ಷತೆಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ ನೀವು ಗೌಪ್ಯತಾ ದೂರು ಸಲ್ಲಿಸುವುದನ್ನು ಪರಿಶೀಲಿಸಬಹುದು.

ಸಾಮಾನ್ಯ ಕೃತಿಸ್ವಾಮ್ಯದ ಕುರಿತು ತಪ್ಪುಕಲ್ಪನೆಗಳು

ಕೃತಿಸ್ವಾಮ್ಯದ ಕುರಿತು ಇರುವ ಕೆಲವು ತಪ್ಪುಕಲ್ಪನೆಗಳು ಮತ್ತು YouTube ನಲ್ಲಿ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕೆಳಗೆ ನೀಡಲಾಗಿದೆ. ಈ ಕೆಳಗಿನವುಗಳಲ್ಲಿ ಯಾವುದನ್ನೇ ಮಾಡುವುದು ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳು ಅಥವಾ Content ID ಕ್ಲೈಮ್‌ಗಳಿಂದನಿಮ್ಮ ಕಂಟೆಂಟ್ ಅನ್ನು ರಕ್ಷಿಸುವುದಿಲ್ಲ ಎಂಬುದನ್ನು ನೆನಪಿಡಿ:

ತಪ್ಪುಕಲ್ಪನೆ 1: ಕೃತಿಸ್ವಾಮ್ಯದ ಮಾಲೀಕರಿಗೆ ಕ್ರೆಡಿಟ್ ನೀಡುವುದರಿಂದ ನೀವು ಅವರ ಕಂಟೆಂಟ್ ಅನ್ನು ಬಳಸಬಹುದು

ಕೃತಿಸ್ವಾಮ್ಯದ ಮಾಲೀಕರಿಗೆ ಕ್ರೆಡಿಟ್ ನೀಡುವುದು ಅವರ ಕೃತಿಸ್ವಾಮ್ಯಕ್ಕೊಳಪಟ್ಟಿರುವ ಕೃತಿಯನ್ನು ಬಳಸುವ ಹಕ್ಕುಗಳನ್ನು ಸ್ವಯಂಚಾಲಿತವಾಗಿ ನೀಡುವುದಿಲ್ಲ. ನಿಮ್ಮ ವೀಡಿಯೊವನ್ನು ನೀವು YouTube ಗೆ ಅಪ್‌ಲೋಡ್ ಮಾಡುವ ಮೊದಲು ಅದರಲ್ಲಿರುವ ಎಲ್ಲಾ ಕೃತಿಸ್ವಾಮ್ಯ-ಸಂರಕ್ಷಿತ ಎಲಿಮೆಂಟ್‌ಗಳಿಗೆ ನೀವು ಎಲ್ಲಾ ಅವಶ್ಯಕ ಹಕ್ಕುಗಳನ್ನು ಪಡೆದುಕೊಂಡಿದ್ದೀರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್‌ನ ನಿಮ್ಮ ಬಳಕೆಯು ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿ ಆಗಿ ಅರ್ಹತೆ ಪಡೆದಿದೆ ಎಂದು ನೀವು ಭಾವಿಸಿದ್ದರೆ, ಬೇರೆ ಯಾರದ್ದೋ ಕೃತಿಸ್ವಾಮ್ಯಕ್ಕೊಳಪಟ್ಟಿರುವ ಕೃತಿಗೆ ನೀವು ಮೂಲ ವಿಷಯಗಳನ್ನು ಸೇರಿಸಿದ್ದರೂ, ನಿಮ್ಮ ವೀಡಿಯೊ ಕೃತಿಸ್ವಾಮ್ಯ ವಿನಾಯಿತಿಗೆ ಅರ್ಹತೆ ಪಡೆಯದಿರಬಹುದು ಎಂಬುದನ್ನು ಗಮನಿಸಿ. ನಿಮ್ಮ ಕಂಟೆಂಟ್ ಅನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅಪ್‌ಲೋಡ್ ಮಾಡುವ ಮೊದಲು, ಅಗತ್ಯವಿದ್ದರೆ ಕಾನೂನು ಸಲಹೆಯನ್ನು ಪಡೆದುಕೊಳ್ಳಿ.

ತಪ್ಪುಕಲ್ಪನೆ 2: "ಲಾಭ-ರಹಿತ" ಎಂದು ಕ್ಲೈಮ್ ಮಾಡಿದರೆ ನೀವು ಯಾವುದೇ ಕಂಟೆಂಟ್ ಅನ್ನು ಬಳಸಬಹುದು

ಕೃತಿಸ್ವಾಮ್ಯ-ಸಂರಕ್ಷಿತ ಕೃತಿಯಿಂದ ಹಣ ಸಂಪಾದಿಸಲು ಪ್ರಯತ್ನಿಸದೇ ಇರುವುದು ಕೃತಿಸ್ವಾಮ್ಯ ಆರೋಪಗಳನ್ನು ತಡೆಯುವುದಿಲ್ಲ. ಉದಾಹರಣೆಗೆ ನಿಮ್ಮ ಅಪ್‌ಲೋಡ್ ಅನ್ನು "ಮನರಂಜನೆಯ ಉದ್ದೇಶಗಳಿಗೆ" ಅಥವಾ "ಲಾಭ-ರಹಿತ" ಎಂದು ಘೋಷಿಸುವುದು ಮಾತ್ರವೇ ಸಾಕಾಗುವುದಿಲ್ಲ.

ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿಗಳ ವಿಷಯಕ್ಕೆ ಬಂದಾಗ, ಅದು ಕೃತಿಸ್ವಾಮ್ಯ ವಿನಾಯಿತಿ ಆಗಿ ಅರ್ಹತೆ ಹೊಂದುವುದೇ ಎಂದು ಮೌಲ್ಯಮಾಪನ ಮಾಡುವಾಗ ನ್ಯಾಯಾಲಯಗಳು ನಿಮ್ಮ ಬಳಕೆಯ ಉದ್ದೇಶವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತವೆ. ಉದಾಹರಣೆಗೆ, ನ್ಯಾಯಯುತ ಬಳಕೆಯ ವಿಶ್ಲೇಷಣೆಯಲ್ಲಿ “ಲಾಭ-ರಹಿತ” ಬಳಕೆಗಳ ಕುರಿತು ಒಲವು ತೋರಲಾಗುತ್ತದೆ, ಆದರೆ ಅದು ತಾನಾಗಿ ಸ್ವಯಂಚಾಲಿತ ರಕ್ಷಣಾ ಕ್ರಮವಾಗಿರುವುದಿಲ್ಲ.

ತಪ್ಪುಕಲ್ಪನೆ 3: ಇತರ ರಚನೆಕಾರರು ಮಾಡಿದ್ದಾರೆ, ಹಾಗಾಗಿ ನೀವು ಸಹ ಮಾಡಬಹುದು

ಸೈಟ್‌ನಲ್ಲಿರುವ ವೀಡಿಯೊಗಳು ನೀವು ಅಪ್‌ಲೋಡ್ ಮಾಡಿರುವ ವೀಡಿಯೊಗಳನ್ನು ಹೋಲುತ್ತಿದ್ದರೆ, ನೀವು ಸಹ ಕಂಟೆಂಟ್ ಅನ್ನು ಪೋಸ್ಟ್ ಮಾಡಲು ಹಕ್ಕುಗಳನ್ನು ಹೊಂದಿದ್ದೀರಿ ಎಂದು ಅರ್ಥವಲ್ಲ.

ಕೆಲವೊಮ್ಮೆ, ಕೃತಿಸ್ವಾಮ್ಯದ ಮಾಲೀಕರು ಅವರ ಕೆಲವು ಕೃತಿಗಳು ಮಾತ್ರ ನಮ್ಮ ಸೈಟ್‌ನಲ್ಲಿ ಕಾಣಿಸಿಕೊಳ್ಳುವಂತೆ ದೃಢೀಕರಿಸಬಹುದು. ಇತರ ಸಂದರ್ಭಗಳಲ್ಲಿ, ಒಂದೇ ರೀತಿ ಕಾಣುವ ವೀಡಿಯೊಗಳ ಮೇಲೆ ಬೇರೆ ಬೇರೆ ಮಾಲೀಕರು ಹಕ್ಕುಗಳನ್ನು ಹೊಂದಿರಬಹುದು ಮತ್ತು ಒಬ್ಬರು ಅನುಮತಿ ಕೊಡಬಹುದು ಹಾಗೆಯೇ ಬೇರೊಬ್ಬರು ಕೊಡದೇ ಇರಬಹುದು.

ತಪ್ಪುಕಲ್ಪನೆ 4: ನೀವು iTunes, CD, ಅಥವಾ DVD ಯಲ್ಲಿ ಖರೀದಿಸಿರುವ ಕಂಟೆಂಟ್ ಅನ್ನು ನೀವು ಬಳಸಬಹುದು

ನೀವು ಕಂಟೆಂಟ್ ಅನ್ನು ಖರೀದಿಸಿದ್ದೀರಿ ಎಂದ ಮಾತ್ರಕ್ಕೆ ನಿಮಗೆ ಅದನ್ನು YouTube ಗೆ ಅಪ್‌ಲೋಡ್ ಮಾಡುವ ಹಕ್ಕು ಇದೆ ಎಂದರ್ಥವಲ್ಲ. ನೀವು ಕೃತಿಸ್ವಾಮ್ಯ ಮಾಲೀಕರ ಕ್ರೆಡಿಟ್ ಅನ್ನು ನೀಡಿದರೂ ಸಹ, ನೀವು ಖರೀದಿಸಿರುವ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊಗಳನ್ನು ಪೋಸ್ಟ್ ಮಾಡುವುದು ಸಹ ಕೃತಿಸ್ವಾಮ್ಯ ಉಲ್ಲಂಘನೆಯಾಗಬಹುದಾಗಿದೆ.

ತಪ್ಪುಕಲ್ಪನೆ 5: ನೀವಾಗಿಯೇ TV ಯಿಂದ, ಚಲನಚಿತ್ರ ಮಂದಿರದಿಂದ ಅಥವಾ ರೇಡಿಯೊದಿಂದ ನೀವು ರೆಕಾರ್ಡ್ ಮಾಡಿರುವ ಕಂಟೆಂಟ್ ಇದ್ದರೆ ತೊಂದರೆಯಿಲ್ಲ

ನೀವಾಗಿಯೇ ಏನನ್ನೋ ರೆಕಾರ್ಡ್ ಮಾಡಿದ್ದೀರಿ ಎಂದ ಮಾತ್ರಕ್ಕೆ ಅದನ್ನು YouTube ಗೆ ಅಪ್‌ಲೋಡ್ ಮಾಡಲು ನೀವು ಯಾವಾಗಲೂ ಹಕ್ಕುಗಳನ್ನು ಹೊಂದಿದ್ದೀರಿ ಎಂದರ್ಥವಲ್ಲ. ನೀವು ರೆಕಾರ್ಡ್ ಮಾಡಿರುವುದರಲ್ಲಿ ಹಿನ್ನೆಲೆಯಲ್ಲಿ ಕೃತಿಸ್ವಾಮ್ಯಕ್ಕೆ ಒಳಪಟ್ಟಿರುವ ಸಂಗೀತ ಪ್ಲೇ ಆಗುತ್ತಿರುವಂತಹ ಬೇರೆ ಯಾರದ್ದೋ ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ಒಳಗೊಂಡಿದ್ದರೆ, ಆಗಲೂ ಸಹ ನೀವು ಕೃತಿಸ್ವಾಮ್ಯದ ಮಾಲೀಕರಿಂದ ಅನುಮತಿಯನ್ನು ಪಡೆಯಬೇಕಾಗಬಹುದು.

ತಪ್ಪುಕಲ್ಪನೆ 6: “ಯಾವುದೇ ಕೃತಿಸ್ವಾಮ್ಯ ಉಲ್ಲಂಘನೆಯ ಉದ್ದೇಶವಿರಲಿಲ್ಲ” ಎಂದು ಹೇಳುವುದು

"ಎಲ್ಲಾ ಹಕ್ಕುಗಳು ಲೇಖಕರಿಗೆ ಸಲ್ಲುತ್ತವೆ" ಅಥವಾ "ಯಾವುದೇ ಉಲ್ಲಂಘನೆಯ ಉದ್ದೇಶವಿಲ್ಲ" ಅಥವಾ "ನಾನು ಮಾಲೀಕತ್ವವನ್ನು ಹೊಂದಿಲ್ಲ" ಎಂಬಂತಹ ನುಡಿಗಟ್ಟುಗಳು ಅಥವಾ ಹಕ್ಕುನಿರಾಕರಣೆಗಳು ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡಲು ಕೃತಿಸ್ವಾಮ್ಯದ ಮಾಲೀಕರ ಅನುಮತಿಯನ್ನು ಹೊಂದಿರುವಿರಿ ಎಂದು ಅರ್ಥವಲ್ಲ, ಅಲ್ಲದೆ, ಕಂಟೆಂಟ್‌ನ ಬಳಕೆಯು ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿ ಆಗಿ ಅರ್ಹತೆ ಹೊಂದುತ್ತದೆ ಎಂದು ಸ್ವಯಂಚಾಲಿತವಾಗಿ ಅರ್ಥೈಸುವುದಿಲ್ಲ.

ತಪ್ಪುಕಲ್ಪನೆ 7: ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್‌ನ ಕೆಲವು ಸೆಕಂಡ್‌ಗಳನ್ನು ಹೊಂದಿರುವುದು ತಪ್ಪೇನಲ್ಲ

ಕೃತಿಸ್ವಾಮ್ಯದ ಮಾಲೀಕರಿಂದ ಅನುಮತಿ ಪಡೆಯದೇ ಬಳಸಿಕೊಂಡ ಯಾವುದೇ ಪ್ರಮಾಣದ ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್, ಅದು ಕೆಲವೇ ಸೆಕಂಡ್‌ಗಳಾಗಿದ್ದರೂ, ನಿಮ್ಮ ವೀಡಿಯೊ ಕೃತಿಸ್ವಾಮ್ಯ ಕ್ಲೇಮ್ ಅನ್ನು ಪಡೆದುಕೊಳ್ಳಬಹುದು. ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್‌ನ ನಿಮ್ಮ ಬಳಕೆಯು ನ್ಯಾಯಯುತ ಬಳಕೆ ಅಥವಾ ನ್ಯಾಯೋಚಿತ ವ್ಯವಹಾರದಂತಹ ಕೃತಿಸ್ವಾಮ್ಯ ವಿನಾಯಿತಿ ಆಗಿ ಅರ್ಹತೆ ಪಡೆಯುತ್ತದೆ ಎಂದು ನೀವು ಭಾವಿಸಿದ್ದರೆ, ನ್ಯಾಯಾಲಯಗಳು ಮಾತ್ರ ಹಾಗೆ ನಿರ್ಣಯಿಸಬಹುದು ಎಂಬುದನ್ನು ನೆನಪಿಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12701566153589681321
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false