ಲೈವ್ ಸ್ಟ್ರೀಮಿಂಗ್‌ನೊಂದಿಗೆ ಪ್ರಾರಂಭಿಸಿ

ಲೈವ್ ಸ್ಟ್ರೀಮಿಂಗ್ ನಿಮಗೆ ವೀಡಿಯೊ ಫೀಡ್, ಚಾಟ್ ಹಾಗೂ ಹೆಚ್ಚಿನವುಗಳೊಂದಿಗೆ ನೈಜ ಸಮಯದಲ್ಲಿ ನಿಮ್ಮ ಪ್ರೇಕ್ಷಕರೊಂದಿಗೆ ಸಂವಹನ ಮಾಡಲು ಅವಕಾಶ ನೀಡುತ್ತದೆ.

Intro To Live Streaming on YouTube

1. ಲೈವ್ ಸ್ಟ್ರೀಮಿಂಗ್ ಸಕ್ರಿಯಗೊಳಿಸಿ

ಲೈವ್ ಸ್ಟ್ರೀಮ್ ಮಾಡಲು, ಕಳೆದ 90 ದಿನಗಳಲ್ಲಿ ನೀವು ಯಾವುದೇ ಲೈವ್ ಸ್ಟ್ರೀಮಿಂಗ್ ನಿರ್ಬಂಧಗಳನ್ನು ಹೊಂದಿರಬಾರದು ಮತ್ತು ನಿಮ್ಮ ಚಾನಲ್ ಅನ್ನು ಪರಿಶೀಲಿಸಬೇಕಾಗುತ್ತದೆ.

  1. YouTube ಗೆ ಹೋಗಿ.
  2. ಮೇಲಿನ ಬಲಭಾಗದಿಂದ, ರಚಿಸಿ  ನಂತರ ನೇರ ಪ್ರಸಾರಕ್ಕೆ ಹೋಗಿ ಅನ್ನು ಕ್ಲಿಕ್ ಮಾಡಿ.
  3. ನೀವು ಈಗಾಗಲೇ ಮಾಡಿರದಿದ್ದರೆ, ನಿಮ್ಮ ಚಾನಲ್ ಪರಿಶೀಲಿಸಲು ಹಂತಗಳನ್ನು ಫಾಲೋ ಮಾಡಿ.
  4. ನಿಮ್ಮ ಮೊದಲ ಲೈವ್ ಸ್ಟ್ರೀಮ್ ಪ್ರಾರಂಭಿಸುವುದಕ್ಕೆ 24 ಗಂಟೆಗಳ ಸಮಯ ತೆಗೆದುಕೊಳ್ಳಬಹುದು. ಸಕ್ರಿಯಗೊಳಿಸಿದಾಗ, ನೀವು ತಕ್ಷಣ ಲೈವ್ ಸ್ಟ್ರೀಮ್ ಮಾಡಬಹುದು.

2. ಸ್ಟ್ರೀಮ್ ಮಾಡಲು ಮಾರ್ಗವೊಂದನ್ನು ಆರಿಸಿ

ಮೂರು ಪ್ರಕಾರಗಳ ಸ್ಟ್ರೀಮ್‌ಗಳಿವೆ: ಮೊಬೈಲ್, ವೆಬ್‌ಕ್ಯಾಮ್ ಮತ್ತು ಎನ್‌ಕೋಡರ್. ನೀವು ಸ್ಟ್ರೀಮಿಂಗ್ ಮಾಡುತ್ತಿರುವುದಕ್ಕೆ ಅತ್ಯುತ್ತಮವಾಗಿರುವುದನ್ನು ಆರಿಸಿ.

ಮೊಬೈಲ್

ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ವ್ಲಾಗಿಂಗ್ ಮತ್ತು ತ್ವರಿತ ಅಪ್‌ಡೇಟ್‌ಗಳಿಗೆ ಉತ್ತಮವಾಗಿದೆ.

ಮೊಬೈಲ್ ಲೈವ್ ಸ್ಟ್ರೀಮ್ ಅನ್ನು ರಚಿಸಲು, ನೀವು ಅಗತ್ಯತೆಗಳನ್ನು ಪೂರೈಸಬೇಕು.

ಮೊಬೈಲ್ ಸ್ಟ್ರೀಮ್ ಮಾಡುವುದು ಹೇಗೆಂದು ತಿಳಿಯಿರಿ.

ವೆಬ್‌ಕ್ಯಾಮ್

ವೆಬ್‌ಕ್ಯಾಮ್ ಬಳಸಿಕೊಂಡು ನಿಮ್ಮ ಕಂಪ್ಯೂಟರ್‌ನಿಂದ ತ್ವರಿತವಾಗಿ ಲೈವ್ ಸ್ಟ್ರೀಮ್ ಮಾಡಿ.

ನಿಮಗೆ ವೆಬ್‌ಕ್ಯಾಮ್ ಹೊಂದಿರುವ ಕಂಪ್ಯೂಟರ್ ಬೇಕಾಗುತ್ತದೆ.

ವೆಬ್‌ಕ್ಯಾಮ್ ಮೂಲಕ ಹೇಗೆ ಸ್ಟ್ರೀಮ್ ಮಾಡುವುದು ಎಂಬುದನ್ನು ತಿಳಿಯಿರಿ.

ಎನ್‌ಕೋಡರ್

ಎನ್‌ಕೋಡರ್‌ಗಳು ನಿಮಗೆ ಗೇಮ್‌ಪ್ಲೇ, ಓವರ್‌ಲೇಗಳನ್ನು ಸ್ಟ್ರೀಮ್ ಮಾಡಲು ಮತ್ತು ಪ್ರೀಆ್ಯಂಪ್ಸ್, ಮೈಕ್‌‌ಗಳು ಮತ್ತು ಕ್ಯಾಮರಾಗಳಂತಹ ಹಾರ್ಡ್‌ವೇರ್ ಬಳಸಲು ಅವಕಾಶ ನೀಡುತ್ತವೆ. ಈ ಪ್ರಕಾರದ ಸ್ಟ್ರೀಮ್ ಅನ್ನು ಸಾಮಾನ್ಯವಾಗಿ ಗೇಮಿಂಗ್, ಕ್ರೀಡೆ ಈವೆಂಟ್‌ಗಳು, ಸಂಗೀತ ಕಚೇರಿಗಳು ಮತ್ತು ಕಾನ್ಫರೆನ್ಸ್‌ಗಳಿಗೆ ಬಳಸಲಾಗುತ್ತದೆ.

ಎನ್‌ಕೋಡರ್ ಬಳಸಿಕೊಂಡು ಹೇಗೆ ಸ್ಟ್ರೀಮ್ ಮಾಡುವುದು ಎಂಬುದನ್ನು ತಿಳಿಯಿರಿ.

ವರ್ಟಿಕಲ್ ಲೈವ್ ಸ್ಟ್ರೀಮ್‌ಗಳು

ನಿಮ್ಮ ಲೈವ್ ಸ್ಟ್ರೀಮ್ ವರ್ಟಿಕಲ್ ಆಗಿ ಇರುವಾಗ (ಅಗಲಕ್ಕಿಂತ ಹೆಚ್ಚು ಎತ್ತರ), ಮೊಬೈಲ್‌ನಲ್ಲಿ ವೀಕ್ಷಿಸುವವರು ಅದನ್ನು ವೀಕ್ಷಿಸುವಾಗ ಈಗ ಪೂರ್ಣ ಸ್ಕ್ರೀನ್ ವೀಕ್ಷಣೆಯ ಅನುಭವವನ್ನು ಪಡೆಯುತ್ತಾರೆ. ಈ ಅನುಭವವು ಸ್ಕ್ರಾಲ್ ಮಾಡಬಹುದಾದ ಲೈವ್ ಸ್ಟ್ರೀಮ್ ಫೀಡ್ ಅನ್ನು ಒಳಗೊಂಡಿರುತ್ತದೆ, ಅದರಲ್ಲಿ ವೀಕ್ಷಕರು ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್ಸ್ ಮತ್ತು ಚಾನಲ್ ಸದಸ್ಯತ್ವಗಳಂತಹ ಫ್ಯಾನ್ ಫಂಡಿಂಗ್ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ. YouTube Shorts ಬ್ರೌಸ್ ಮಾಡುವಾಗಲೂ ವೀಕ್ಷಕರು (ಅಸ್ತಿತ್ವದಲ್ಲಿರುವ ಚಾನಲ್ ಸಬ್‌ಸ್ಕ್ರೈಬರ್‌ಗಳಿಗೆ ಸೀಮಿತವಾಗಿಲ್ಲ) ಈ ಲೈವ್ ಸ್ಟ್ರೀಮ್‌ಗಳನ್ನು ಹುಡುಕಬಹುದು.

ಫೀಚರ್ ಹಾರಿಜಾಂಟಲ್ ಲೈವ್ ಸ್ಟ್ರೀಮ್‌ಗಳು

ವರ್ಟಿಕಲ್ ಲೈವ್ ಫೀಡ್

Shorts ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತವೆ ಇಲ್ಲ ಹೌದು
ಇನ್ನಷ್ಟು ಲೈವ್ ಸ್ಟ್ರೀಮ್‌ಗಳಿಗಾಗಿ ಸ್ಕ್ರಾಲ್ ಮಾಡಬಹುದು ಇಲ್ಲ ಹೌದು
ಚಾಟ್ ಮತ್ತು ಚಾನಲ್ ವಿವರಣೆಯಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳನ್ನು ತೋರಿಸುತ್ತವೆ ಹೌದು ಇಲ್ಲ
ಲೈವ್ ಆ್ಯಡ್ ಮಧ್ಯ‌ರೋಲ್‌ಗಳು ಹಾಗೂ ಪ್ರೀ-ರೋಲ್‌ಗಳು ಹೌದು ಇಲ್ಲ
4K ಬಿಟ್‌ರೇಟ್ ಸ್ಟ್ರೀಮಿಂಗ್ (ಪ್ರಸಾರ) ಹೌದು ಇಲ್ಲ (YouTube ಆ್ಯಪ್‌ನಲ್ಲಿ)
ಪ್ರೀಮಿಯರ್‌ಗಳು ಹೌದು ಇಲ್ಲ
ಲೈವ್ ರೀಡೈರೆಕ್ಟ್ ಹೌದು ಇಲ್ಲ
ಸದಸ್ಯತ್ವಗಳು ಹೌದು ಹೌದು
ಉಡುಗೊರೆ ನೀಡಲಾದ ಸದಸ್ಯತ್ವಗಳು ಹೌದು ಇಲ್ಲ

 

ನೀವು ಏಕೆ ಲೈವ್ ಸ್ಟ್ರೀಮ್ ಮಾಡಬೇಕು ಎಂಬ ಕುರಿತು ತಿಳಿಯಿರಿ.

ನೀವು ಏನನ್ನು ಸ್ಟ್ರೀಮ್ ಮಾಡಬಹುದು

ಲೈವ್ ಸ್ಟ್ರೀಮ್‌ಗಳಲ್ಲಿರುವ ಎಲ್ಲಾ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳು ಮತ್ತು ಸೇವಾ ನಿಯಮಗಳು ಎಂಬುದಕ್ಕೆ ಬದ್ಧವಾಗಿರಬೇಕು. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ನೀವು ಲೈವ್ ಸ್ಟ್ರೀಮ್ ಮಾಡುತ್ತೀರೆಂದು ನೀವು ಸಲಹೆ ನೀಡಿದರೆ, ನಿಮ್ಮ ಲೈವ್ ಸ್ಟ್ರೀಮ್ ಅನ್ನು ನಾವು ವಯಸ್ಸಿನ-ನಿರ್ಬಂಧಗೊಳಿಸಬಹುದು ಅಥವಾ ಅದನ್ನು ತೆಗೆದುಹಾಕಬಹುದು. YouTube, ತನ್ನ ಸ್ವಂತ ವಿವೇಚನೆಯ ಮೇರೆಗೆ ಲೈವ್ ಸ್ಟ್ರೀಮ್ ಮಾಡುವ ರಚನೆಕಾರರ ಸಾಮರ್ಥ್ಯವನ್ನು ನಿರ್ಬಂಧಿಸುವ ಹಕ್ಕನ್ನು ಸಹ ಕಾಯ್ದಿರಿಸಿಕೊಂಡಿದೆ.

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಲೈವ್ ಸ್ಟ್ರೀಮ್‌ನಲ್ಲಿ ನೀವು ಎಚ್ಚರಿಕೆಯನ್ನು ಸ್ವೀಕರಿಸಿದರೆ, ಈ ಎಚ್ಚರಿಕೆಯು 90 ದಿನಗಳ ನಂತರ ಕೊನೆಗೊಳ್ಳಲು, ನೀವು ಪಾಲಿಸಿ ತರಬೇತಿಯನ್ನು ಪೂರ್ಣಗೊಳಿಸಬಹುದು. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯು ಕೊನೆಗೊಳ್ಳುವುದಿಲ್ಲ ಹಾಗೂ ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು.

ನಿಮ್ಮ ಲೈವ್ ಸ್ಟ್ರೀಮ್ ನಿರ್ಬಂಧಿತವಾಗಿದ್ದರೆ, ನಿಮ್ಮ ಖಾತೆಯ ಮೇಲೆ ಸ್ಟ್ರೈಕ್ ವಿಧಿಸಲಾಗಬಹುದು. 14 ದಿನಗಳವರೆಗೆ ಲೈವ್ ಸ್ಟ್ರೀಮ್ ಮಾಡದಂತೆ ಸ್ಟ್ರೈಕ್ ನಿಮ್ಮನ್ನು ತಡೆಯುತ್ತದೆ. ಲೈವ್ ಸ್ಟ್ರೀಮ್ ಮಾಡದಂತೆ ನಿಮ್ಮ ಖಾತೆಯನ್ನು ನಿರ್ಬಂಧಿಸಿದ್ದರೆ, YouTube ನಲ್ಲಿ ಲೈವ್ ಸ್ಟ್ರೀಮ್ ಮಾಡಲು ನೀವು ಮತ್ತೊಂದು ಚಾನಲ್ ಬಳಸುವುದನ್ನು ನಿಷೇಧಿಸಲಾಗಿರುತ್ತದೆ. ನಿಮ್ಮ ಖಾತೆಯಲ್ಲಿ ನಿರ್ಬಂಧಗಳು ಸಕ್ರಿಯವಾಗಿರುವ ತನಕ ಈ ಕಾರ್ಯನೀತಿಯು ಅನ್ವಯಿಸುತ್ತದೆ. ಈ ನಿರ್ಬಂಧದ ಉಲ್ಲಂಘನೆಯನ್ನು ನಮ್ಮ ಸೇವಾ ನಿಯಮಗಳ ಅಡಿಯಲ್ಲಿ.ಸರ್ಕಮ್‌ವೆನ್ಶನ್ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ನಿಮ್ಮ ಖಾತೆಯ ಕೊನೆಗೊಳಿಸುವಿಕೆಗೆ ಕಾರಣವಾಗಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17241580117667390417
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false