ವಿಸ್ತೃತ YouTube ಪಾಲುದಾರ ಕಾರ್ಯಕ್ರಮದ ಅವಲೋಕನ

ಫ್ಯಾನ್ ಫಂಡಿಂಗ್ ಮತ್ತು ಶಾಪಿಂಗ್ ಫೀಚರ್‌ಗಳಿಗೆ ಆರಂಭಿಕ ಆ್ಯಕ್ಸೆಸ್ ಜೊತೆಗೆ ನಾವು YouTube ಪಾಲುದಾರ ಕಾರ್ಯಕ್ರಮವನ್ನು (YPP) ಇನ್ನಷ್ಟು ರಚನೆಕಾರರಿಗೆ ವಿಸ್ತರಿಸುತ್ತಿದ್ದೇವೆ. ವಿಸ್ತೃತ YouTube ಪಾಲುದಾರ ಕಾರ್ಯಕ್ರಮವು ಈ ದೇಶಗಳು/ಪ್ರದೇಶಗಳಲ್ಲಿನ ಅರ್ಹ ರಚನೆಕಾರರಿಗೆ ಲಭ್ಯವಿದೆ. ನೀವು ಈ ದೇಶಗಳು/ಪ್ರದೇಶಗಳಲ್ಲಿ ಒಂದರಲ್ಲಿ ವಾಸವಿದ್ದರೆ, YPP ಗೆ ಬರಲಿರುವ ಬದಲಾವಣೆಗಳ ಕುರಿತು ಇನ್ನಷ್ಟು ತಿಳಿಯಲು ನೀವು ಈ ಕೆಳಗಿನ ಲೇಖನವನ್ನು ಓದಬಹುದು.  

ನೀವು ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ಒಂದರಲ್ಲಿ ವಾಸವಿರದಿದ್ದರೆ, ನಿಮಗೆ ಸಂಬಂಧಿಸಿದಂತೆ YouTube ಪಾಲುದಾರ ಕಾರ್ಯಕ್ರಮಕ್ಕೆ ಯಾವುದೇ ಬದಲಾವಣೆಗಳಿರುವುದಿಲ್ಲ. YPP ಅವಲೋಕನ, ಅರ್ಹತೆ ಮತ್ತು ನಿಮಗೆ ಸೂಕ್ತವಾದ ಅಪ್ಲಿಕೇಶನ್‌ಗೆ ಸಂಬಂಧಿಸಿದ ಸೂಚನೆಗಳಿಗಾಗಿ ನೀವು ಈ ಲೇಖನವನ್ನು ಓದಬಹುದು.

ವಿಸ್ತೃತ YouTube ಪಾಲುದಾರ ಕಾರ್ಯಕ್ರಮಕ್ಕಾಗಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ನೀವು ಇನ್ನೂ ಅರ್ಹರಲ್ಲದಿದ್ದರೆ, YouTube Studio ದ ಗಳಿಸಿ ಎಂಬ ಪ್ರದೇಶದಲ್ಲಿನ ಸೂಚನೆ ಪಡೆಯಿರಿ ಎಂಬುದನ್ನು ಆಯ್ಕೆಮಾಡಿ. ನಿಮಗೆ ವಿಸ್ತೃತ YPP ಪ್ರೋಗ್ರಾಂ ಅನ್ನು ಬಿಡುಗಡೆ ಮಾಡಿದ ನಂತರ ಮತ್ತು ನೀವು ಅರ್ಹತೆಯ ಥ್ರೆಶೋಲ್ಡ್‌ಗಳನ್ನು ತಲುಪಿದ ನಂತರ ನಾವು ನಿಮಗೆ ಇಮೇಲ್ ಕಳುಹಿಸುತ್ತೇವೆ. 

YouTube ನಲ್ಲಿ ಹಣ ಗಳಿಸುವ ಕುರಿತು ಪರಿಚಯ

2022 ರಲ್ಲಿ, ನಾವು YouTube ಅನ್ನು ರಚನೆಕಾರರಿಗೆ ಲಾಭದಾಯಕ ಸ್ಥಳವನ್ನಾಗಿ ಮಾಡುವುದನ್ನು ಮುಂದುವರಿಸಲು YouTube ಪಾಲುದಾರ ಕಾರ್ಯಕ್ರಮವನ್ನು (YPP) ಇನ್ನಷ್ಟು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಘೋಷಿಸಿದ್ದೆವು. ಜೂನ್ 2023 ರ ಮಧ್ಯಭಾಗದಿಂದ, ನಾವು ಫ್ಯಾನ್ ಫಂಡಿಂಗ್ ಮತ್ತು ಆಯ್ದ Shopping ಫೀಚರ್‌ಗಳಿಗೆ ಮುಂಗಡ ಆ್ಯಕ್ಸೆಸ್‍ ನೀಡುವ ಮೂಲಕ ಹೆಚ್ಚಿನ ರಚನೆಕಾರರಿಗೆ YouTube ಪಾಲುದಾರ ಕಾರ್ಯಕ್ರಮವನ್ನು ವಿಸ್ತರಿಸುತ್ತಿದ್ದೇವೆ.

ಅರ್ಹ ದೇಶಗಳಲ್ಲಿನ ರಚನೆಕಾರರು ಕೆಳಗಿನ ಅರ್ಹತೆಯ ಥ್ರೆಶೋಲ್ಡ್‌ಗಳಲ್ಲಿ ಒಂದನ್ನು ತಲುಪಿದಾಗ ವಿಸ್ತೃತ YouTube ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು:

  • 500 ಸಬ್‌ಸ್ಕ್ರೈಬರ್‌‌ಗಳನ್ನು ಪಡೆದಿರಬೇಕು, ಕಳೆದ 90 ದಿನಗಳಲ್ಲಿ 3 ಮಾನ್ಯ ಸಾರ್ವಜನಿಕ ಅಪ್‌ಲೋಡ್‌ಗಳನ್ನು ಮಾಡಿರಬೇಕು ಮತ್ತು ಕಳೆದ 12 ತಿಂಗಳುಗಳಲ್ಲಿ 3,000 ಮಾನ್ಯ ಸಾರ್ವಜನಿಕ ವೀಕ್ಷಣಾ ಗಂಟೆಗಳನ್ನು ಪಡೆದಿರಬೇಕು, ಅಥವಾ
  • 500 ಸಬ್‌ಸ್ಕ್ರೈಬರ್‌‌ಗಳನ್ನು ಪಡೆದಿರಬೇಕು, ಕಳೆದ 90 ದಿನಗಳಲ್ಲಿ 3 ಮಾನ್ಯ ಸಾರ್ವಜನಿಕ ಅಪ್‌ಲೋಡ್‌ಗಳನ್ನು ಮಾಡಿರಬೇಕು ಮತ್ತು ಕಳೆದ 90 ದಿನಗಳಲ್ಲಿ 3 ಮಿಲಿಯನ್ ಮಾನ್ಯ ಸಾರ್ವಜನಿಕ Short ವೀಕ್ಷಣೆಗಳನ್ನು ಪಡೆದಿರಬೇಕು

ನೀವು ಅರ್ಹರಾಗಿರುವಾಗ ನಾವು ನಿಮಗೆ ತಿಳಿಸಬೇಕೆಂದು ನೀವು ಇಚ್ಛಿಸಿದಲ್ಲಿ, YouTube Studio ದಲ್ಲಿನ ಗಳಿಸಿ ಎಂಬ ಪ್ರದೇಶದಲ್ಲಿ ಸೂಚನೆ ಪಡೆಯಿರಿ ಎಂಬುದನ್ನು ಆಯ್ಕೆ ಮಾಡಿ. ನಿಮಗೆ ವಿಸ್ತೃತ YPP ಪ್ರೋಗ್ರಾಂ ಅನ್ನು ಬಿಡುಗಡೆ ಮಾಡಿದ ನಂತರ ಮತ್ತು ನೀವು ಮೇಲಿನ ಅರ್ಹತೆಯ ಥ್ರೆಶೋಲ್ಡ್‌ಗಳನ್ನು ತಲುಪಿದ ನಂತರ ನಾವು ನಿಮಗೆ ಇಮೇಲ್ ಕಳುಹಿಸುತ್ತೇವೆ.

YouTube ಪಾಲುದಾರ ಕಾರ್ಯಕ್ರಮದಲ್ಲಿರುವ ಮತ್ತು ಕೆಳಗಿನ ಅರ್ಹತೆಯ ಥ್ರೆಶೋಲ್ಡ್‌ಗಳನ್ನು ತಲುಪಿದ ರಚನೆಕಾರರು, ಜಾಹೀರಾತುಗಳು ಮತ್ತು YouTube Premium ನಿಂದ ಆದಾಯದ ಹಂಚಿಕೆಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು:

  • 1,000 ಸಬ್‌ಸ್ಕ್ರೈಬರ್‌ಗಳನ್ನು ಮತ್ತು ಕಳೆದ 12 ತಿಂಗಳುಗಳಲ್ಲಿ 4,000 ಮಾನ್ಯವಾದ ಸಾರ್ವಜನಿಕ ವೀಕ್ಷಣಾ ಗಂಟೆಗಳನ್ನು ಪಡೆದಿರಬೇಕು, ಅಥವಾ
  • 1,000 ಸಬ್‌ಸ್ಕ್ರೈಬರ್‌ಗಳನ್ನು ಮತ್ತು ಕಳೆದ 90 ದಿನಗಳಲ್ಲಿ 10 ಮಿಲಿಯನ್ ಮಾನ್ಯವಾದ ಸಾರ್ವಜನಿಕ Shorts ವೀಕ್ಷಣೆಗಳನ್ನು ಪಡೆದಿರಬೇಕು.

ಪ್ರಸ್ತುತ YPP ಯಲ್ಲಿರುವ ಪಾಲುದಾರರಿಗೆ, ನಿಮಗೆ ಸಂಬಂಧಿಸಿದಂತೆ ಪ್ರೋಗ್ರಾಂ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.

ನೀವು ವಿಸ್ತೃತ YouTube ಪಾಲುದಾರ ಕಾರ್ಯಕ್ರಮಕ್ಕೆ ಸೇರಲು ಏನು ಮಾಡಬೇಕು

  1. YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು.
  2. ಲಭ್ಯವಿರುವ ದೇಶಗಳು/ಪ್ರದೇಶಗಳ ಪೈಕಿ ಒಂದರಿಂದ ಕಾರ್ಯನಿರ್ವಹಿಸುವ ಚಾನಲ್ ಅನ್ನು ಹೊಂದಿರಬೇಕು.
  3. ನಿಮ್ಮ Google ಖಾತೆಗಾಗಿ 2-ಹಂತದ ದೃಢೀಕರಣವನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  4. ನೀವು ನಿಮ್ಮ ಚಾನಲ್‍ಗೆ ಲಿಂಕ್ ಮಾಡಲು, ಒಂದು ಸಕ್ರಿಯ YouTube ಗಾಗಿ AdSense ಖಾತೆ ಹೊಂದಿರಬೇಕು. ನಿಮ್ಮ ಬಳಿ ಈಗಾಗಲೇ ಖಾತೆಯೊಂದು ಇಲ್ಲದಿದ್ದರೆ, ಅರ್ಜಿ ಸಲ್ಲಿಸುವಾಗ YouTube Studio ದಲ್ಲಿ ಖಾತೆಯೊಂದನ್ನು ಸೆಟಪ್ ಮಾಡಲು ಸಿದ್ಧರಾಗಿರಿ. ನೀವು YouTube Studio ದಲ್ಲಿ ಮಾತ್ರ ಹೊಸ YouTube ಗಾಗಿ AdSense ಖಾತೆಯನ್ನು ರಚಿಸುವುದನ್ನು ಖಚಿತಪಡಿಸಿಕೊಳ್ಳಿ.

ವಿಸ್ತೃತ YouTube ಪಾಲುದಾರ ಕಾರ್ಯಕ್ರಮ ಎಲ್ಲಿ ಲಭ್ಯವಿದೆ

 ವಿಸೃತ YouTube ಪಾಲುದಾರ ಕಾರ್ಯಕ್ರಮವು ಈ ಮುಂದಿನ ದೇಶಗಳು/ಪ್ರದೇಶಗಳಲ್ಲಿನ ಅರ್ಹ ರಚನೆಕಾರರಿಗೆ ಲಭ್ಯವಿದೆ:

  • ಅಲ್ಜೀರಿಯಾ
  • ಅಮೇರಿಕನ್ ಸಮೋವಾ
  • ಅರ್ಜೆಂಟಿನಾ
  • ಅರುಬ
  • ಆಸ್ಟ್ರೇಲಿಯಾ
  • ಆಸ್ಟ್ರಿಯಾ
  • ಬಹರೈನ್ 
  • ಬೆಲಾರೂಸ್
  • ಬೆಲ್ಜಿಯಂ
  • ಬರ್ಮುಡಾ
  • ಬೊಲಿವಿಯಾ 
  • ಬೋಸ್ನಿಯಾ ಮತ್ತು ಹರ್ಜೆಗೋವಿನಾ
  • ಬ್ರೆಝಿಲ್‌
  • ಬಲ್ಗೇರಿಯಾ
  • ಕೆನಡಾ
  • ಕೇಮ್ಯಾನ್ ದ್ವೀಪಗಳು
  • ಚಿಲಿ
  • ಕೊಲಂಬಿಯಾ
  • ಕೋಸ್ಟ ರಿಕಾ
  • ಕ್ರೋಯೇಶಿಯಾ 
  • ಸೈಪ್ರಸ್
  • ಝೆಕ್ ಗಣರಾಜ್ಯ
  • ಡೆನ್ಮಾರ್ಕ್ 
  • ಡೊಮಿನಿಕನ್ ರಿಪಬ್ಲಿಕ್ 
  • ಈಕ್ವಡೋರ್
  • ಈಜಿಪ್ಟ್
  • ಎಲ್ ಸಾಲ್ವಡೋರ್
  • ಎಸ್ಟೋನಿಯಾ
  • ಫಿನ್‌ಲ್ಯಾಂಡ್
  • ಫ್ರಾನ್ಸ್
  • ಫ್ರೆಂಚ್ ಗಯಾನಾ
  • ಫ್ರೆಂಚ್ ಪೊಲಿನೇಶಿಯಾ
  • ಜರ್ಮನಿ
  • ಗ್ರೀಸ್
  • ಗ್ವಾಡೆಲೋಪ್
  • ಗುವಾಮ್
  • ಗ್ವಾಟೆಮಾಲಾ
  • ಹಾಂಗ್‌ಕಾಂಗ್
  • ಹೊಂಡೂರಸ್
  • ಹಂಗೇರಿ
  • ಐಸ್‌ಲ್ಯಾಂಡ್
  • ಭಾರತ
  • ಇಂಡೋನೇಶಿಯಾ
  • ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಜಪಾನ್
  • ಜೋರ್ಡಾನ್
  • ಕೀನ್ಯಾ
  • ಕುವೈತ್
  • ಲಾಟ್ವಿಯಾ
  • ಲೆಬೆನಾನ್
  • ಲೈಕೆನ್‌ಸ್ಟೈನ್
  • ಲಿಥುವೇನಿಯಾ
  • ಲುಕ್ಸೆಂಬರ್ಗ್
  • ಮೆಸಿಡೋನಿಯಾ
  • ಮಲೇಶಿಯಾ
  • ಮಾಲ್ಟಾ
  • ಮೊರಾಕ್ಕೋ
  • ಮೆಕ್ಸಿಕೊ
  • ನೆದರ್ಲೆಂಡ್ಸ್
  • ನ್ಯೂಜಿಲ್ಯಾಂಡ್
  • ನಿಕರಾಗುವಾ
  • ನೈಜೀರಿಯಾ 
  • ಉತ್ತರ ಮರಿಯಾನ ದ್ವೀಪಗಳು
  • ನಾರ್ವೇ
  • ಓಮನ್
  • ಪನಾಮಾ
  • ಪಪುವಾ ನ್ಯೂ ಗಿನೀ
  • ಪೆರು
  • ಫಿಲಿಫೈನ್ಸ್
  • ಪೋಲ್ಯಾಂಡ್ 
  • ಪೋರ್ಚುಗಲ್
  • ಪ್ಯುರ್ಟೋ ರಿಕೊ
  • ಪರಾಗ್ವೆ
  • ಕತಾರ್
  • ರೊಮೇನಿಯಾ
  • ಸೌದಿ ಅರೇಬಿಯಾ
  • ಸೆನೆಗಲ್ 
  • ಸೆರ್ಬಿಯಾ
  • ಸಿಂಗಾಪೂರ್
  • ಸ್ಲೋವಾಕಿಯಾ
  • ಸ್ಲೋವೇನಿಯಾ
  • ದಕ್ಷಿಣ ಆಫ್ರಿಕಾ
  • ದಕ್ಷಿಣ ಕೊರಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ತೈವಾನ್
  • ಥಾಯ್ಲೆಂಡ್ 
  • ತುರ್ಕಿಯೆ 
  • ಟರ್ಕ್ಸ್ ಮತ್ತು ಕೈಕೋಸ್ 
  • ಉಗಾಂಡಾ
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಯುನೈಟೆಡ್ ಕಿಂಗ್‌ಡಮ್
  • ಯುನೈಟೆಡ್ ಸ್ಟೇಟ್ಸ್
  • ಉರುಗ್ವೆ
  • ಯು.ಎಸ್. ವರ್ಜಿನ್ ದ್ವೀಪಗಳು
  • ವಿಯೆಟ್ನಾಂ

ವಿಸ್ತೃತ YouTube ಪಾಲುದಾರ ಕಾರ್ಯಕ್ರಮಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು

ಅಗತ್ಯವಾದ ಸಂಗತಿಗಳೆಲ್ಲ ನಿಮ್ಮ ಬಳಿ ಇದ್ದರೆ ಮತ್ತು ನಿಮ್ಮ ಚಾನಲ್ ಅರ್ಜಿ ಸಲ್ಲಿಸಲು ಅರ್ಹವಾಗಿದ್ದರೆ, ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಿಂದ YPP ಗೆ ಸೈನ್ ಅಪ್ ಮಾಡಿ:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಕ್ಲಿಕ್ ಮಾಡಿ.
  3. ಪರಿಶೀಲನೆಗಾಗಿ ಈಗಲೇ ಅಪ್ಲೈ ಮಾಡಿ ಕ್ಲಿಕ್ ಮಾಡಿ ಮತ್ತು ಮೂಲ ನಿಯಮಗಳಿಗೆ ಒಪ್ಪಿಗೆ ನೀಡಿ.
  4. YouTube ಖಾತೆಗಾಗಿ AdSense ಸೆಟಪ್ ಮಾಡಲು ಪ್ರಾರಂಭಿಸಿ ಕ್ಲಿಕ್ ಮಾಡಿ ಅಥವಾ ಅಸ್ತಿತ್ವದಲ್ಲಿರುವ ಸಕ್ರಿಯವಾಗಿರುವ ಒಂದನ್ನು ಲಿಂಕ್ ಮಾಡಿ.

ಅರ್ಜಿ ಸಲ್ಲಿಸಲಾದ ನಂತರ, ಪರಿಶೀಲನೆಗೆ ಒಳಪಡಿಸಿ ಎಂಬ ಹಂತದಲ್ಲಿ ಪ್ರಗತಿಯಲ್ಲಿದೆ ಎಂಬುದು ಕಾಣಿಸಿಕೊಳ್ಳುತ್ತದೆ, ಇದು ನಿಮ್ಮ ಅರ್ಜಿಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಸೂಚಿಸುತ್ತದೆ!

ನಾವು ಯಾವೆಲ್ಲಾ ಅಂಶಗಳನ್ನು ಪರಿಶೀಲಿಸುತ್ತೇವೆ

ನಿಮ್ಮ ಚಾನಲ್ ನಮ್ಮ ಎಲ್ಲಾ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು, ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಮತ್ತು ಮಾನವ ವಿಮರ್ಶಕರು ನಿಮ್ಮ ಚಾನಲ್ ಅನ್ನು ಒಟ್ಟಾರೆಯಾಗಿ ಪರಿಶೀಲಿಸುತ್ತಾರೆ. ನಿಮ್ಮ ಅರ್ಜಿಯ ಸ್ಥಿತಿಯನ್ನು ನೋಡಲು ಯಾವಾಗ ಬೇಕಾದರೂ YouTube Studio ದ ಗಳಿಸಿ ವಿಭಾಗಕ್ಕೆ ಮತ್ತೆ ಭೇಟಿ ನೀಡಿ.

ಎಲ್ಲಾ YPP ಅರ್ಜಿಗಳಿಗೆ, ನಾವು ಅವುಗಳನ್ನು ಸ್ವೀಕರಿಸಿದ ಕ್ರಮದಲ್ಲಿ ಅಗತ್ಯ ಸೇವೆ ಸಲ್ಲಿಸಲಾಗುತ್ತದೆ. ನಿಮ್ಮ ಚಾನಲ್ ಅನ್ನು ಪರಿಶೀಲಿಸಿದ ಬಳಿಕ (ಸಾಮಾನ್ಯವಾಗಿ 1 ತಿಂಗಳಲ್ಲಿ) ನಮ್ಮ ನಿರ್ಧಾರದೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ.
 
ಈ ಕಾರಣಗಳಿಂದಾಗಿ ತಡವಾಗಬಹುದು ಎಂಬುದನ್ನು ನೆನಪಿನಲ್ಲಿಡಿ:
  • ಅರ್ಜಿ ಸಂಖ್ಯೆಗಳು
  • ಸಿಸ್ಟಂ ಸಮಸ್ಯೆಗಳು
  • ಸಂಪನ್ಮೂಲ ಮಿತಿಗಳು
  • ಕೆಲವು ಪರಿಶೀಲನೆಗಳ ಅಗತ್ಯವಿರುವ ಚಾನಲ್‌ಗಳು, ವಿಶೇಷವಾಗಿ ಹಲವು ವಿಮರ್ಶಕರು YPP ಗಾಗಿ ಚಾನಲ್‌ನ ಸೂಕ್ತತೆಯನ್ನು ಒಪ್ಪದೇ ಇರುವಾಗ.

ನಿಮ್ಮ ಮೊದಲ ಅರ್ಜಿ ವಿಫಲವಾದರೆ, ಚಿಂತಿಸಬೇಡಿ - ಮೂಲ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದನ್ನು ಮುಂದುವರಿಸಿ ಮತ್ತು 30 ದಿನಗಳ ನಂತರ ನೀವು ಮತ್ತೆ ಪ್ರಯತ್ನಿಸಬಹುದು. ಇದು ನಿಮ್ಮ ತಿರಸ್ಕರಿಸಲಾದ ಮೊದಲ ಅರ್ಜಿಯಾಗಿರದಿದ್ದರೆ, ನೀವು 90 ದಿನಗಳ ನಂತರ ಮತ್ತೆ ಪ್ರಯತ್ನಿಸಬಹುದು. ನಿಮ್ಮ ಚಾನಲ್‌ನ ಗಮನಾರ್ಹ ಭಾಗವು ಪ್ರಸ್ತುತ ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂಬುದನ್ನು ನಮ್ಮ ವಿಮರ್ಶಕರು ಪತ್ತೆಮಾಡಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ನಿಮ್ಮ ಚಾನಲ್‌ನ ಒಟ್ಟಾರೆ ಕಂಟೆಂಟ್‍ಗೆ ಸಂಬಂಧಿಸಿದಂತೆ ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಲು ಮರೆಯದಿರಿ ಮತ್ತು ಮರು-ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಚಾನಲ್ ಅನ್ನು ಬದಲಾಯಿಸಿ. ಮುಂದಿನ ಪರಿಶೀಲನೆಗಾಗಿ ನಿಮ್ಮ ಚಾನಲ್ ಅನ್ನು ಬಲಪಡಿಸಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಇನ್ನಷ್ಟು ತಿಳಿಯಿರಿ.

ಹೇಗೆ ಗಳಿಸಬೇಕು ಮತ್ತು ಪಾವತಿ ಪಡೆಯಬೇಕು ಎಂಬುದನ್ನು ಆಯ್ಕೆಮಾಡಿ

ನೀವು YPP ಗೆ ಸೇರಿದ ನಂತರ, ಫ್ಯಾನ್ ಫಂಡಿಂಗ್ ಮತ್ತು Shopping ಫೀಚರ್‌ಗಳೊಂದಿಗೆ ನಿಮ್ಮ ಗಳಿಕೆಯ ಪಯಣವನ್ನು ನೀವು ಪ್ರಾರಂಭಿಸಬಹುದು. ಫ್ಯಾನ್ ಫಂಡಿಂಗ್ ಮತ್ತು Shopping ಫೀಚರ್‌ಗಳನ್ನು ಆನ್ ಮಾಡಲು, ವಾಣಿಜ್ಯ ಉತ್ಪನ್ನಗಳ ಮಾಡ್ಯೂಲ್ ಅನ್ನು ಪರಿಶೀಲಿಸಿ ಮತ್ತು ಅದಕ್ಕೆ ಸಮ್ಮತಿಸಿ. ಮಾಡ್ಯೂಲ್‌ನ ಕುರಿತು ಇನ್ನಷ್ಟು ಮಾಹಿತಿಯನ್ನು ಹಾಗೂ ಫ್ಯಾನ್ ಫಂಡಿಂಗ್ ಮತ್ತು Shopping ಫೀಚರ್‌ಗಳನ್ನು ಹೇಗೆ ಆನ್ ಮಾಡಬೇಕು ಎಂಬುದನ್ನು ತಿಳಿಯಿರಿ.

ಫ್ಯಾನ್ ಫಂಡಿಂಗ್ ಮತ್ತು Shopping ಫೀಚರ್‌ಗಳು

ನೀವು 500 ಸಬ್‌ಸ್ಕ್ರೈಬರ್‌ಗಳೊಂದಿಗೆ YPP ಗೆ ಸೇರಿದಾಗ, ಈ ಮಾನಿಟೈಸೇಶನ್ ಫೀಚರ್‌ಗಳಿಗಾಗಿ ಇರಬೇಕಾದ ಅರ್ಹತೆಗಳನ್ನು ಪೂರೈಸುತ್ತಿದ್ದಲ್ಲಿ, ಇವುಗಳನ್ನು ಬಳಸಿಕೊಂಡು ಹಣವನ್ನು ಗಳಿಸಬಹುದು:

  • ಚಾನಲ್ ಸದಸ್ಯತ್ವಗಳು: ವೀಕ್ಷಕರಿಗೆ ಮಾಸಿಕ ಪಾವತಿಗಳ ಮೂಲಕ ನಿಮ್ಮ ಚಾನಲ್‌ಗೆ ಸೇರಲು ಮತ್ತು ನೀವು ಒದಗಿಸುವ ಬ್ಯಾಡ್ಜ್‌ಗಳು, ಎಮೋಜಿಗಳು ಮತ್ತು ಇತರ ಪ್ರಯೋಜನಗಳಂತಹ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಪರ್ಕ್‌ಗಳಿಗೆ ಆ್ಯಕ್ಸೆಸ್ ಪಡೆಯಲು ಅನುಮತಿಸುತ್ತದೆ.
  • ಸೂಪರ್ ಚಾಟ್‌ ಮತ್ತು ಸೂಪರ್ ಸ್ಟಿಕ್ಕರ್ಸ್: ನಿಮ್ಮ ಫ್ಯಾನ್‍ಗಳು ಲೈವ್ ಚಾಟ್‌ನಲ್ಲಿ ತಮ್ಮ ಸಂದೇಶವನ್ನು ಹೈಲೈಟ್ ಮಾಡಲು ಸೂಪರ್ ಚಾಟ್‌ಗಳನ್ನು ಖರೀದಿಸಬಹುದು ಅಥವಾ ಲೈವ್ ಚಾಟ್‌ನಲ್ಲಿ ಗೋಚರಿಸುವ ಮೋಜಿನ ಆ್ಯನಿಮೇಟೆಡ್ ಚಿತ್ರವನ್ನು ಪಡೆಯಲು ಸೂಪರ್ ಸ್ಟಿಕ್ಕರ್ಸ್ ಅನ್ನು ಖರೀದಿಸಬಹುದು.
  • ಸೂಪರ್ ಥ್ಯಾಂಕ್ಸ್:  ನಿಮ್ಮ ವೀಡಿಯೊಗಳಿಗಾಗಿ ಹೆಚ್ಚುವರಿ ಕೃತಜ್ಞತೆಯನ್ನು ತೋರಿಸಲು ಬಯಸುವ ವೀಕ್ಷಕರಿಂದ ಆದಾಯವನ್ನು ಗಳಿಸಲು ನಿಮಗೆ ಸೂಪರ್ ಥ್ಯಾಂಕ್ಸ್ ಅನುಮತಿಸುತ್ತದೆ.
  • Shopping: ನಿಮ್ಮ ಅಧಿಕೃತ ವ್ಯಾಪಾರದ ವಸ್ತುಗಳ ಸ್ಟೋರ್ ಅನ್ನು YouTube ಗೆ ಸಂಪರ್ಕಿಸಲು ಮತ್ತು ನಿಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ನಿಮಗೆ ಅನುಮತಿಸುತ್ತದೆ.

ಪಾವತಿ ಪಡೆಯುವುದು

ಈ ಮುಂದಿನ ಸಂಗತಿಗಳಿಗಾಗಿ, ನಮ್ಮ ಸಹಾಯ ಕೇಂದ್ರದ "ಪಾವತಿ ಪಡೆಯಿರಿ" ವಿಭಾಗಕ್ಕೆ ಹೋಗಿ:

  • YouTube ಪಾಲುದಾರರಾಗಿ ನಿಮ್ಮ ಗಳಿಕೆಗಳ ಕುರಿತು ಸುಲಭವಾಗಿ ತಿಳಿದುಕೊಳ್ಳಲು
  • YouTube ಗಾಗಿ AdSense (YPP ಯಲ್ಲಿನ ರಚನೆಕಾರರು ಪಾವತಿ ಪಡೆಯಲು ಅನುಮತಿಸುವ Google ನ ಪ್ರೋಗ್ರಾಂ) ಕುರಿತು ಇನ್ನಷ್ಟು ಮಾಹಿತಿಗಾಗಿ
  • ಸಾಮಾನ್ಯ ಪಾವತಿ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿಗಾಗಿ

ಹಣವನ್ನು ಗಳಿಸುತ್ತಿರಲು ಸಕ್ರಿಯವಾಗಿರಿ

YouTube ಪಾಲುದಾರ ಕಾರ್ಯಕ್ರಮವು ಬೆಳೆಯುತ್ತಿರುವಂತೆ, ಚಾನಲ್‌ಗಳ ಸಕ್ರಿಯ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ವೀಡಿಯೊವನ್ನು ಪ್ರಕಟಿಸಿರದ ಅಥವಾ ಸಮುದಾಯ ಟ್ಯಾಬ್‌ನಲ್ಲಿ ಪೋಸ್ಟ್ ಮಾಡಿರದ ಚಾನಲ್‌ಗಳಿಗಾಗಿ ನಾವು ಮಾನಿಟೈಸೇಶನ್ ಅನ್ನು ಆಫ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4489703191428925824
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false