YouTube Shopping ಅಫಿಲಿಯೇಟ್ ಪ್ರೋಗ್ರಾಂ ಅವಲೋಕನ ಮತ್ತು ಅರ್ಹತೆ

YouTube Shopping ಅಫಿಲಿಯೇಟ್ ಪ್ರೋಗ್ರಾಂ 🛍️

YouTube Shopping ಅಫಿಲಿಯೇಟ್ ಪ್ರೋಗ್ರಾಂ, ನಿಮ್ಮ ಪ್ರೇಕ್ಷಕರಿಗೆ ಇಷ್ಟವಾದ ಉತ್ಪನ್ನಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾ YouTube ನಲ್ಲಿ ಹಣ ಗಳಿಸಲು ನಿಮಗೆ ಒಂದು ಮಾರ್ಗೋಪಾಯವನ್ನು ಒದಗಿಸಿಕೊಡುತ್ತದೆ. ಈ ಪ್ರೋಗ್ರಾಂನ ಮೂಲಕ ನೀವು ಇವುಗಳನ್ನು ಮಾಡಬಹುದು:

  • ನಿಮ್ಮ ಅಭಿಮಾನಿಗಳು ಶಾಪಿಂಗ್ ಮಾಡಲು ಸಹಾಯ ಮಾಡಬಹುದು: ನಿಮ್ಮ ಕಂಟೆಂಟ್‌ನಲ್ಲಿ ನೀವು ಉತ್ಪನ್ನಗಳನ್ನು ಟ್ಯಾಗ್ ಮಾಡಿದಾಗ ಬೆಲೆಯಂತಹ ಉಪಯುಕ್ತ ಮಾಹಿತಿಯನ್ನು ಅಭಿಮಾನಿಗಳು ತ್ವರಿತವಾಗಿ ಸ್ಕ್ಯಾನ್ ಮಾಡಬಹುದು ಮತ್ತು ಅವರು ಅದನ್ನು ರಿಟೇಲರ್‌ನ ಸೈಟ್‌ನಲ್ಲಿ ನೋಡುವಾಗ, ನಿಮ್ಮ ವೀಡಿಯೊವನ್ನು ವೀಕ್ಷಿಸುವುದನ್ನು ಮುಂದುವರಿಸಬಹುದು.
  • ನಿಮ್ಮ YouTube ವ್ಯಾಪಾರದಿಂದ ಇನ್ನಷ್ಟು ಪ್ರಯೋಜನ ಪಡೆಯಿರಿ: ಅಫಿಲಿಯೇಟ್ ಪ್ರೋಗ್ರಾಂ, ನಿಮ್ಮ ಉತ್ತಮ ಶಾಪಿಂಗ್ ಕಂಟೆಂಟ್ ಅನ್ನು YouTube ನಾದ್ಯಂತ ಇನ್ನಷ್ಟು ಬ್ರ್ಯಾಂಡ್‌ಗಳು ಮತ್ತು ವೀಕ್ಷಕರ ಸಮ್ಮುಖಕ್ಕೆ ತರಲು ಸಹಾಯ ಮಾಡುತ್ತದೆ -- ಮತ್ತು YouTube ನೊಂದಿಗೆ ನಿಮ್ಮ ಒಟ್ಟಾರೆ ಗಳಿಕೆಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಭಿಮಾನಿಗಳು ಖರೀದಿಸಿದಾಗ, ನೀವು ಸ್ಪರ್ಧಾತ್ಮಕ ಕಮಿಷನ್ ಅನ್ನು ಸಹ ಗಳಿಸುವಿರಿ.
  • ರಚನೆ ಮಾಡಲು ಹೆಚ್ಚು ಸಮಯ ವ್ಯಯಿಸಿ: ನೀವು YouTube Studio ದಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡಬಹುದು, ಒಳನೋಟಗಳನ್ನು ಪಡೆಯಬಹುದು ಮತ್ತು ಗಳಿಕೆಗಳನ್ನು ಪರಿಶೀಲಿಸಬಹುದಾದ್ದರಿಂದ, ಜನರಿಗೆ ಇಷ್ಟವಾಗುವ ಕಂಟೆಂಟ್ ಅನ್ನು ರಚಿಸಲು ನೀವು ಹೆಚ್ಚು ಸಮಯ ವ್ಯಯಿಸಬಹುದು ಮತ್ತು ಲಿಂಕ್‌ಗಳನ್ನು ನಿರ್ವಹಿಸಲು ಕಡಿಮೆ ಸಮಯ ವ್ಯಯಿಸಿದರೆ ಸಾಕು.
ಗಮನಿಸಿ: ಪ್ರಸ್ತುತ, ಈ ಪ್ರೋಗ್ರಾಂ ಅರ್ಹ ಯು.ಎಸ್ ರಚನೆಕಾರರಿಗೆ ಲಭ್ಯವಿದೆ. ನೀವು ಬೇಗನೆ ಸೇರಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಬಯಸುವಿರಾದರೆ ಅಥವಾ ನಿರ್ದಿಷ್ಟ ಬ್ರ್ಯಾಂಡ್‌ಗಳನ್ನು ಶಿಫಾರಸು ಮಾಡಲು ಬಯಸುವಿರಾದರೆ, ಈ ಫಾರ್ಮ್ ಅನ್ನು ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ಮಾತ್ರಕ್ಕೆ ಆಹ್ವಾನ ದೊರೆಯುತ್ತದೆ ಎಂಬ ಭರವಸೆಯಿಲ್ಲ.

YouTube Shopping ಅಫಿಲಿಯೇಟ್ ಪ್ರೋಗ್ರಾಂ

ಇರಬೇಕಾದ ಅರ್ಹತೆಗಳು

ಒಂದು ಪ್ರೋಗ್ರಾಂಗೆ ಆಹ್ವಾನ ಪಡೆಯಬೇಕಾದರೆ, ಇರಬೇಕಾದ ಕನಿಷ್ಠ ಅರ್ಹತೆಗಳನ್ನು ನೀವು ಪೂರೈಸಬೇಕು:

  • ನಿಮ್ಮ ಚಾನಲ್ YouTube ಪಾಲುದಾರ ಕಾರ್ಯಕ್ರಮ ದಲ್ಲಿರಬೇಕು
  • ನಿಮ್ಮ ಚಾನಲ್ 15,000 ಕ್ಕಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರಬೇಕು.
  • ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿರಬೇಕು
  • ನಿಮ್ಮ ಚಾನಲ್ ಸಂಗೀತ ಚಾನಲ್ ಆಗಿರಬಾರದು, ಅಧಿಕೃತ ಕಲಾವಿದರ ಚಾನಲ್ ಆಗಿರಬಾರದು ಅಥವಾ ಸಂಗೀತ ಪಾಲುದಾರರೊಂದಿಗೆ ಸಂಯೋಜಿತವಾಗಿರಬಾರದು. ಸಂಗೀತ ಪಾಲುದಾರರು ಎಂದರೆ ಸಂಗೀತ ಲೇಬಲ್‌ಗಳು, ವಿತರಕರು, ಪ್ರಕಾಶಕರು ಅಥವಾ VEVO ಒಳಗೊಂಡಿರಬಹುದು.
  • ನಿಮ್ಮ ಚಾನಲ್‌ನ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾಗಿಲ್ಲ ಮತ್ತು ನಿಮ್ಮ ಚಾನಲ್‌ನಲ್ಲಿ ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ, ಗಮನಾರ್ಹ ಸಂಖ್ಯೆಯ ವೀಡಿಯೊಗಳಿಲ್ಲ ಎಂಬದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಚಾನಲ್, ಯಾವುದೇ ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಹೊಂದಿರಬಾರದು

ಸೇರಿಕೊಳ್ಳುವುದು ಹೇಗೆ

ನೀವು ಪ್ರೋಗ್ರಾಂಗೆ ಸೇರಿಕೊಳ್ಳುವ ಅರ್ಹತೆ ಗಳಿಸಿದ ನಂತರ, YouTube Studio ದಲ್ಲಿ ಸೈನ್ ಅಪ್ ಮಾಡಬಹುದು.

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಗಳಿಸಿ ಎಂಬುದನ್ನು ಆಯ್ಕೆಮಾಡಿ.
  3. ಪ್ರೋಗ್ರಾಂಗಳ ಅಡಿಯಲ್ಲಿ, ಈಗಲೇ ಸೇರಿಕೊಳ್ಳಿ ಎಂಬುದನ್ನು ಆಯ್ಕೆಮಾಡಿ.
  4. YouTube Shopping ಅಫಿಲಿಯೇಟ್ ಪ್ರೋಗ್ರಾಂ ಸೇವಾ ನಿಯಮಗಳನ್ನು ಪರಿಶೀಲಿಸಿ ಹಾಗೂ ಅವುಗಳಿಗೆ ಸಮ್ಮತಿಸಿ.
  5. ನೀವು ಸೇರಿಕೊಂಡಿದ್ದೀರಿ! ನಿಮ್ಮ ಕಂಟೆಂಟ್‌ನಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡುವುದನ್ನು ನೀವು ಪ್ರಾರಂಭಿಸಬಹುದು. ಟ್ಯಾಗ್ ಮಾಡುವಿಕೆಯ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಿ.

ಅಫಿಲಿಯೇಟ್ ಮಾರಾಟಗಾರರು ಮತ್ತು ಆಫರ್‌ಗಳು

ನೀವು ಪ್ರೋಗ್ರಾಂನ ಭಾಗವಾದ ನಂತರ, ಭಾಗವಹಿಸುವ ಮಾರಾಟಗಾರರ ಬೆಳೆಯುತ್ತಿರುವ ಪಟ್ಟಿಯಿಂದ ನೀವು ಟ್ಯಾಗ್ ಮಾಡಬಹುದು ಮತ್ತು ಅವರ ಶೇಕಡಾವಾರು ಕಮಿಷನ್‌ಗಳನ್ನು ವೀಕ್ಷಿಸಬಹುದು. ಉತ್ಪನ್ನದ ಉಚಿತ ಸ್ಯಾಂಪಲ್‌ಗಳನ್ನು ವಿನಂತಿಸುವ ಮೂಲಕ, ಮಾರಾಟಕ್ಕಿರುವ ಉತ್ಪನ್ನಗಳನ್ನು ವೀಕ್ಷಿಸುವ ಮೂಲಕ ಮತ್ತು ಮಾರಾಟಗಾರರಿಂದ ಹೆಚ್ಚಿನ ಕಮಿಷನ್‌ಗಳನ್ನು ಪಡೆಯುವ ಮೂಲಕ ನೀವು ತೊಡಗಿಸಿಕೊಳ್ಳಬಹುದು. ನಿಮ್ಮ ಕಂಟೆಂಟ್‌ನಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ

  1. YouTube Studio ಗೆ ಸೈನ್ ಇನ್ ಮಾಡಿ. 
  2. ಎಡಭಾಗದ ಮೆನುವಿನಿಂದ, ಗಳಿಸಿನಂತರ ಶಾಪಿಂಗ್ ನಂತರ ಅಫಿಲಿಯೇಟ್ ಆಫರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. 

  3. "ಇವುಗಳಲ್ಲಿ ತೊಡಗಿಸಿಕೊಳ್ಳಿ" ಎಂಬುದರ ಅಡಿಯಲ್ಲಿ, ನೀವು ಕಮಿಷನ್, ಪ್ರೊಮೋಷನ್‍ಗಳು ಅಥವಾ ಸ್ಯಾಂಪಲ್‌ಗಳು ಎಂಬುದನ್ನು ಕ್ಲಿಕ್ ಮಾಡಬಹುದು. 

  • ಗಮನಿಸಿ: ಹೆಚ್ಚಿನ ವಿವರಗಳಿಗಾಗಿ ಮಾರಾಟಗಾರರೊಬ್ಬರನ್ನು ನೀವು ಕ್ಲಿಕ್ ಮಾಡಬಹುದು. ನೀವು ಮಾರಾಟಗಾರರನ್ನು ವರ್ಣಮಾಲೆಯ ಪ್ರಕಾರವಾಗಿ ಅಥವಾ ಹೆಚ್ಚು ಕಮಿಷನ್ ಪ್ರಕಾರವಾಗಿಯೂ ವಿಂಗಡಿಸಬಹುದು.

ಅಫಿಲಿಯೇಟ್ ಮಾರಾಟಗಾರರ ಪಟ್ಟಿಗಳು

ನೀವು ಪ್ರೋಗ್ರಾಂನ ಭಾಗವಾದಾಗ, ಈ ಕೆಳಗಿನವುಗಳು ಸೇರಿದಂತೆ, ದೊಡ್ಡದಾಗುತ್ತಾ ಹೋಗುತ್ತಿರುವ ನಮ್ಮ ಮಾರಾಟಗಾರರ-ಪಟ್ಟಿಯಿಂದ ನೀವು ಉತ್ಪನ್ನಗಳನ್ನು ಟ್ಯಾಗ್ ಮಾಡಲು ಪ್ರಾರಂಭಿಸಬಹುದು:

ಅಫಿಲಿಯೇಟ್ ಮಾರಾಟಗಾರರ ಪಟ್ಟಿ

ಗಮನಿಸಿ:
  • ಇದು ಮಾರಾಟಗಾರರ ಸಂಪೂರ್ಣ ಪಟ್ಟಿಯಲ್ಲ. ಅಫಿಲಿಯೇಟ್ ಮಾರಾಟಗಾರರ ಸಂಪೂರ್ಣ ಪಟ್ಟಿಯನ್ನು ನೀವು YouTube Studio ದಲ್ಲಿ ನೋಡಬಹುದು.
  • ನೀವು ಈ ಪ್ರೋಗ್ರಾಂಗೆ ಸೇರಿಕೊಳ್ಳಲು ಆಸಕ್ತಿಯಿರುವ ಬ್ರ್ಯಾಂಡ್ ಅಥವಾ ರಿಟೇಲರ್ ಆಗಿದ್ದರೆ, ಈ ಬ್ರ್ಯಾಂಡ್/ರಿಟೇಲರ್ ಆಸಕ್ತಿ ಕುರಿತ ಫಾರ್ಮ್ ಅನ್ನು ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ಮಾತ್ರಕ್ಕೆ ಆಹ್ವಾನ ದೊರೆಯುತ್ತದೆ ಎಂಬ ಭರವಸೆಯಿಲ್ಲ.

ನಿಮ್ಮ ಗಳಿಕೆಯನ್ನು ಅರ್ಥಮಾಡಿಕೊಳ್ಳಿ

ಭಾಗವಹಿಸುವ ಪ್ರತಿ ಬ್ರ್ಯಾಂಡ್ ಮತ್ತು ರಿಟೇಲರ್, ಪ್ರತಿ ಉತ್ಪನ್ನಕ್ಕಾಗಿ ತಮ್ಮ ಕಮಿಷನ್ ದರಗಳು ಹಾಗೂ ಆ್ಯಟ್ರಿಬ್ಯೂಶನ್ ವಿಂಡೋವನ್ನು ಸೆಟ್ ಮಾಡುತ್ತಾರೆ. ಪ್ರತಿ ಉತ್ಪನ್ನ ಆಫರ್‌ನ ಪ್ರಕಾರ ಶೇಕಡಾವಾರು ಕಮಿಷನ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರದರ್ಶಿಸಲಾದ ಶೇಕಡಾವಾರು ಮೌಲ್ಯವನ್ನು ಪಾವತಿಸಲಾಗುತ್ತದೆ. ವೀಕ್ಷಕರು, ಟ್ಯಾಗ್ ಮಾಡಲಾದ ನಿಮ್ಮ ಉತ್ಪನ್ನದ ಮೇಲೆ ಕ್ಲಿಕ್ ಮಾಡಿದಾಗ ಮತ್ತು ಖರೀದಿ ಮಾಡಿದಾಗ, ನೀವು ಕಮಿಷನ್‌ಗಳನ್ನು ಗಳಿಸುವಿರಿ. ನಿಮ್ಮ YouTube ಆದಾಯವನ್ನು ಪರಿಶೀಲಿಸಲು ನೀವು YouTube Analytics ಅನ್ನು ಬಳಸಬಹುದು.

ಸೂಚನೆ: ಗ್ರಾಹಕರು ಉತ್ಪನ್ನಗಳನ್ನು ಮರಳಿಸುವ ಸಾಧ್ಯತೆಯನ್ನು ಪರಿಗಣಿಸುತ್ತಾ, ಖರೀದಿಯ ನಂತರ 60 ರಿಂದ 120 ದಿನಗಳ ಒಳಗೆ, ಗಳಿಸಲಾದ ಕಮಿಷನ್‌ಗಳನ್ನು YouTube ಗಾಗಿ AdSense ಮೂಲಕ ಪಾವತಿಸಲಾಗುತ್ತದೆ. ಗ್ರಾಹಕರು ಉತ್ಪನ್ನವನ್ನು ಹಿಂತಿರುಗಿಸಿದರೆ, ಕಮಿಷನ್‌ಗಳನ್ನು ಹಿಂಪಡೆಯಲಾಗುತ್ತದೆ.

ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಹಾಗೂ ಅನುಮೋದನೆಗಳು

ನಿಮ್ಮ ವೀಡಿಯೊಗಳಲ್ಲಿ, ವೀಕ್ಷಕರಿಗೆ ಪ್ರಕಟಿಸುವ ಅಗತ್ಯವಿರುವ ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಅನುಮೋದನೆಗಳು, ಪ್ರಾಯೋಜಕತ್ವಗಳು ಅಥವಾ ಇತರ ಕಂಟೆಂಟ್ ಅನ್ನು ನೀವು ಸೇರಿಸಿದರೆ, YouTube ನ ಪಾವತಿಸಿದ ಉತ್ಪನ್ನ ಇರಿಸುವಿಕೆ ನೀತಿಗಳನ್ನು ನೀವು ಅನುಸರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ನೋಡಿ.

ಸೈನ್-ಅಪ್ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡುವುದು

ಸೈನ್ ಅಪ್ ಮಾಡುವಾಗ ನೀವು ಎದುರಿಸಬಹುದಾದ ದೋಷಗಳನ್ನು ಬಗೆಹರಿಸಲು ಸಾಮಾನ್ಯ ಮಾರ್ಗಗಳು ಹೀಗಿವೆ:

  • ನಿಮ್ಮ ಚಾನಲ್ ಅರ್ಹವಾಗಿಲ್ಲದೇ ಇರಬಹುದು. ನಿಮ್ಮ ಚಾನಲ್, ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ಖಚಿತಪಡಿಸಲು, ಮೇಲಿನ ಅರ್ಹತೆಯ ಮಾನದಂಡವನ್ನು ಪರಿಶೀಲಿಸಿ.
  • ಕಂಟೆಂಟ್ ಮಾಲೀಕರು ನಿಮ್ಮ ಚಾನಲ್ ಅನ್ನು ನಿರ್ವಹಿಸುತ್ತಿದ್ದರೆ, ನಿಮ್ಮ ಪರವಾಗಿ ಕಂಟೆಂಟ್ ಮಾಲೀಕರು ಒಪ್ಪಂದಕ್ಕೆ ಸಮ್ಮತಿಸಬೇಕು.
  • ನೀವು ತಪ್ಪು YouTube ಚಾನಲ್‌ಗೆ ಸೈನ್ ಇನ್ ಮಾಡಿರಬಹುದು. ನೀವು ಅರ್ಹರಾಗಿದ್ದೀರಿ ಎಂದು ನೀವು ಭಾವಿಸುವ ಚಾನಲ್‌ಗೆ ಬದಲಾಯಿಸಿ ಮತ್ತು ಪುನಃ ಪ್ರಯತ್ನಿಸಿ.

ಗಮನಿಸಿ: ನಿಮ್ಮ ಸಮಸ್ಯೆಯು ಮೇಲೆ ಕೊಟ್ಟಿರುವ ಯಾವುದೇ ಸನ್ನಿವೇಶಗಳಿಗೆ ಸಂಬಂಧಪಟ್ಟಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕ, ಹೆಚ್ಚಿನ ನೆರವಿಗಾಗಿ ರಚನೆಕಾರರ ಬೆಂಬಲವನ್ನು ಸಂಪರ್ಕಿಸಿ.

ಉತ್ತಮ ಅಭ್ಯಾಸಗಳು ಮತ್ತು ಮಾಹಿತಿಯ ಮೂಲಗಳು

ಮೊದಲ ದಿನದಿಂದಲೇ, ಅಫಿಲಿಯೇಟ್ ಪ್ರೋಗ್ರಾಂನಿಂದ ಅತಿ ಹೆಚ್ಚು ಪ್ರಯೋಜನ ಪಡೆಯಲು, ನಾವು ಇವುಗಳನ್ನು ಶಿಫಾರಸು ಮಾಡುತ್ತೇವೆ:

  • ಜನಪ್ರಿಯ ಬ್ರ್ಯಾಂಡ್‌ಗಳ ಪ್ರೋಮೋಗಳನ್ನು ಮತ್ತು ಮಾರಾಟಗಳನ್ನು ಪ್ರಸ್ತುತಪಡಿಸಿ ನೀವು ಪ್ರಸ್ತುತಪಡಿಸಲು ಬಯಸುವ ಉತ್ಪನ್ನವು, ಕಮಿಷನ್‌ಗಾಗಿ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಮತ್ತು ನಿಮಗೆ ಅತ್ಯಂತ ಸೂಕ್ತವಾದ ಮಾರಾಟಗಳು ಮತ್ತು ಪ್ರೋಮೋಗಳಿಗೆ ತಕ್ಕಂತೆ ನಿಮ್ಮ ಕಂಟೆಂಟ್ ಅನ್ನು ಯೋಜಿಸಿ. 
  • ಸೂಕ್ತ ಉತ್ಪನ್ನಗಳನ್ನು ಟ್ಯಾಗ್ ಮಾಡಿ ಮತ್ತು ಮಾರಾಟ ಹೆಚ್ಚಿಸಲು CTA ಬಳಸಿ: ನಿಮ್ಮ ವೀಡಿಯೊ ಅಥವಾ Short ನಲ್ಲಿ ಪ್ರಸ್ತುತಪಡಿಸಲಾದ ಉತ್ಪನ್ನಗಳೊಂದಿಗೆ ನಿಮ್ಮ ಕಂಟೆಂಟ್ ಅನ್ನು ಟ್ಯಾಗ್ ಮಾಡಿ ಮತ್ತು ನಿಮ್ಮ ಪ್ರೇಕ್ಷಕರು ಶಾಪಿಂಗ್ ಮಾಡಬಹುದು ಎಂಬುದನ್ನು ತಿಳಿಸುವುದಕ್ಕಾಗಿ ಕೊಳ್ಳಲು ಕರೆ ನೀಡುವಿಕೆಯನ್ನು ಬಳಸಿ.
    • ವೀಡಿಯೊಗಳಾದ್ಯಂತ ಉತ್ಪನ್ನಗಳನ್ನು ಟ್ಯಾಗ್ ಮಾಡಲು ಬೃಹತ್ ಪ್ರಮಾಣದಲ್ಲಿ ಟ್ಯಾಗ್ ಮಾಡುವಿಕೆ ಫೀಚರ್ ಅನ್ನು ಬಳಸಿ: YouTube Studio ದ ಗಳಿಸಿ ವಿಭಾಗದಲ್ಲಿ, Shopping ಟ್ಯಾಬ್ and then ಉತ್ಪನ್ನಗಳನ್ನು ಟ್ಯಾಗ್ ಮಾಡಿ ಎಂಬಲ್ಲಿಗೆ ಹೋಗಿ and then ವೀಡಿಯೊದ ವಿವರಣೆಯಲ್ಲಿರುವ, ವೀಡಿಯೊದಲ್ಲಿ ಟ್ಯಾಗ್ ಮಾಡಲು ಸಲಹೆ ಮಾಡಲಾದ ಉತ್ಪನ್ನಗಳನ್ನು ಪರಿಶೀಲಿಸಿ.
      • ನಿರ್ದಿಷ್ಟ ಉತ್ಪನ್ನಗಳನ್ನು ಟ್ಯಾಗ್ ಮಾಡಲು, ಉತ್ಪನ್ನದ ಚಿತ್ರವನ್ನು ಕ್ಲಿಕ್ ಮಾಡಿ and then ಸೂಕ್ತವಾದ ಉತ್ಪನ್ನಗಳ ಪಕ್ಕದಲ್ಲಿ ಟ್ಯಾಗ್ ಮಾಡಿ ಎಂಬುದನ್ನು ಅಥವಾ ಎಲ್ಲಾ ಉತ್ಪನ್ನಗಳಿಗಾಗಿ ಎಲ್ಲವನ್ನೂ ಟ್ಯಾಗ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
      • ಒಂದು ಅಥವಾ ಹೆಚ್ಚಿನ ವೀಡಿಯೊಗಳಿಗಾಗಿ ಉತ್ಪನ್ನಗಳನ್ನು ಟ್ಯಾಗ್ ಮಾಡಲು, ಸಂಬಂಧಿತ ವೀಡಿಯೊಗಳನ್ನು ಆಯ್ಕೆ ಮಾಡಿ ಅಥವಾ ಎಲ್ಲಾ ವೀಡಿಯೊಗಳನ್ನು ಆಯ್ಕೆ ಮಾಡಿ and then ಟ್ಯಾಗ್ ಮಾಡಿ.
  • ಬ್ರ್ಯಾಂಡ್‌ಗಳು ಮತ್ತು ರಚನೆಕಾರರಿಂದ ಸ್ಫೂರ್ತಿ ಪಡೆಯಿರಿ: ಕಂಟೆಂಟ್ ಕುರಿತು ಸ್ಫೂರ್ತಿಗಾಗಿ, YouTube ರಚನೆಕಾರರಿಂದ ಅಫಿಲಿಯೇಟ್ ಕಂಟೆಂಟ್ ಅನ್ನು ನೋಡಿ.

ರಚನೆಕಾರರ ಸ್ಟಾರ್ಟರ್ ಪ್ಯಾಕ್

ಸೆಟಪ್ ಸಲಹೆಗಳು, ಉತ್ತಮ ಅಭ್ಯಾಸಗಳು ಮತ್ತು ನಿಮ್ಮ ಕಂಟೆಂಟ್‌ನಲ್ಲಿ ಸೇರಿಸುವುದಕ್ಕಾಗಿ ಮೋಜಿನ ಸ್ಟಿಕ್ಕರ್‌ಗಳಂತಹ ಮಾಹಿತಿಯ ಮೂಲಗಳಿಂದ ಭರಿತವಾಗಿರುವ ಸ್ಟಾರ್ಟರ್ ಪ್ಯಾಕ್.

ಅಫಿಲಿಯೇಟ್ ರಚನೆಕಾರರ ಪ್ಲೇಪಟ್ಟಿ

YouTube ನಲ್ಲಿ ಇತರ ರಚನೆಕಾರರ ಅಫಿಲಿಯೇಟ್ ಕಂಟೆಂಟ್ ಅನ್ನು ಇಲ್ಲಿ ನೋಡುವ ಮೂಲಕ ಅವರಿಂದ ಸ್ಫೂರ್ತಿ ಪಡೆಯಿರಿ!

YouTube Shopping ಅಫಿಲಿಯೇಟ್ ಪರ್ಫಾರ್ಮೆನ್ಸ್ ಬೋನಸ್

ಗಮನಿಸಿ: YouTube Shopping ಅಫಿಲಿಯೇಟ್ ಪರ್ಫಾರ್ಮೆನ್ಸ್ ಬೋನಸ್ 2023 ರಲ್ಲಿ ಕೊನೆಗೊಂಡಿದೆ.

ನಿಮ್ಮ ಕಂಟೆಂಟ್‌ನಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡುವ ಮೂಲಕ ಗಳಿಕೆಗಳನ್ನು ಹೆಚ್ಚಿಸಿಕೊಳ್ಳಲು, YouTube Shopping ಅಫಿಲಿಯೇಟ್ ಪರ್ಫಾರ್ಮೆನ್ಸ್ ಬೋನಸ್, ಅರ್ಹ ರಚನೆಕಾರರಿಗೆ ವಿಶೇಷ ಅವಕಾಶ ಒದಗಿಸುತ್ತದೆ. 27 ಅಕ್ಟೋಬರ್–30 ನವೆಂಬರ್ ಮತ್ತು 1 ಡಿಸೆಂಬರ್–31 ಡಿಸೆಂಬರ್ 2023 ರ ನಡುವೆ ನಿಮ್ಮ ಟ್ಯಾಗ್ ಮಾಡಲಾದ ಉತ್ಪನ್ನಗಳ ಒಟ್ಟು ಮಾರಾಟದ ಆಧಾರದ ಮೇಲೆ ನೀವು ಬೋನಸ್ ಗಳಿಸಬಹುದು. ಈ ಬೋನಸ್, ಚಾಲ್ತಿಯಲ್ಲಿರುವ ಇತರ ಬ್ರ್ಯಾಂಡ್ ಮತ್ತು ರಿಟೇಲರ್ ಇನ್ಸೆಂಟಿವ್‌ಗಳಿಗೆ ಬದಲಿಯಲ್ಲ ಮತ್ತು ಪ್ರೇರೇಪಿಸಿದ ಮಾರಾಟಕ್ಕಾಗಿ ಗಳಿಸಿದ ಕಮಿಷನ್‌ಗೆ ಹೆಚ್ಚುವರಿಯಾಗಿರುತ್ತದೆ.

ಪ್ರತಿ ತಿಂಗಳು ಒಂದು ಬೋನಸ್ ಅನ್ನು ಗಳಿಸಲು, ಅರ್ಹ ರಚನೆಕಾರರು ಈ ಕೆಳಗಿನ ಮಾರಾಟ ಹಂತಗಳನ್ನು ಪೂರೈಸಬೇಕಾಗುತ್ತದೆ (ಮೊತ್ತಗಳು USD ಯಲ್ಲಿವೆ):

  • ಒಟ್ಟು ಉತ್ಪನ್ನ ಮಾರಾಟದಲ್ಲಿ $300 ಅನ್ನು ಪ್ರೇರೇಪಿಸಿದ್ದಕ್ಕಾಗಿ $30 ಬೋನಸ್
  • ಒಟ್ಟು ಉತ್ಪನ್ನ ಮಾರಾಟದಲ್ಲಿ $1,000 ಅನ್ನು ಪ್ರೇರೇಪಿಸಿದ್ದಕ್ಕಾಗಿ $120 ಬೋನಸ್
  • ಒಟ್ಟು ಉತ್ಪನ್ನ ಮಾರಾಟದಲ್ಲಿ $5,000 ಅನ್ನು ಪ್ರೇರೇಪಿಸಿದ್ದಕ್ಕಾಗಿ $750 ಬೋನಸ್
  • ಒಟ್ಟು ಉತ್ಪನ್ನ ಮಾರಾಟದಲ್ಲಿ $15,000+ ಪ್ರೇರೇಪಿಸಿದ್ದಕ್ಕಾಗಿ $3,000 ಬೋನಸ್

ಬೋನಸ್ ಅವಧಿ ಮುಕ್ತಾಯವಾದ ನಂತರದ 45 ದಿನಗಳ ಒಳಗಿನ ಯಾವುದೇ ಹಿಂದಿರುಗಿಸುವಿಕೆಗಳ ಮೌಲ್ಯವನ್ನು ಕಡಿತಗೊಳಿಸಿದ ನಂತರ, ನಿಮ್ಮ ಒಟ್ಟು ಮಾರಾಟವನ್ನು ಆಧರಿಸಿ ಗಳಿಸಿದ ಬೋನಸ್ ಪಾವತಿಯನ್ನು ಲೆಕ್ಕಹಾಕಲಾಗುತ್ತದೆ. ಪ್ರತಿ ತಿಂಗಳು ಪ್ರೋಗ್ರಾಂ ಮುಕ್ತಾಯವಾದ 120 ದಿನಗಳ ಒಳಗೆ, ನೀವು ಗಳಿಸಿದ ಬೋನಸ್ ಪಾವತಿಯು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಕಾಣಿಸಿಕೊಳ್ಳುತ್ತದೆ.

ಗಮನಿಸಿ: YouTube Shopping ಅಫಿಲಿಯೇಟ್ ಪರ್ಫಾರ್ಮೆನ್ಸ್ ಬೋನಸ್, YouTube ಅಫಿಲಿಯೇಟ್ ಪ್ರೋಗ್ರಾಂನ ಸೇವಾ ನಿಯಮಗಳ ನಿಯಂತ್ರಣಕ್ಕೆ ಒಳಪಟ್ಟಿದೆ. YouTube Shopping ಅಫಿಲಿಯೇಟ್ ಪರ್ಫಾರ್ಮೆನ್ಸ್ ಬೋನಸ್ ಅನ್ನು Google ಯಾವಾಗ ಬೇಕಾದರೂ ಸೂಚನೆ ನೀಡಿ ಕೊನೆಗೊಳಿಸಬಹುದು. Google ತೀರ್ಮಾನಿಸಿದ ಪ್ರಕಾರ, ವಹಿವಾಟುಗಳನ್ನು ಮೋಸ, ದುರ್ಬಳಕೆ, ವಂಚನೆ ಅಥವಾ ಇತರ ಅಮಾನ್ಯ ವಿಧಾನಗಳ ಮೂಲಕ ಜನರೇಟ್ ಮಾಡಲಾಗಿರುವುದೂ ಸೇರಿದಂತೆ ಇತರ ಕಾರಣಗಳಿಗಾಗಿ ಪಾವತಿಯನ್ನು ನಿರಾಕರಿಸುವ ಹಕ್ಕನ್ನು Google ಕಾಯ್ದಿರಿಸಿಕೊಂಡಿದೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15111196368064210077
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false