YouTube ವಾಣಿಜ್ಯ ಉತ್ಪನ್ನಗಳ ಮಾನಿಟೈಸೇಶನ್ ನೀತಿಗಳು

ಹೊಸ YPP ರಚನೆಕಾರರಿಗಾಗಿ ವಾಣಿಜ್ಯ ಉತ್ಪನ್ನದ ಅನುಬಂಧದ (CPA) ಬದಲಿಗೆ ವಾಣಿಜ್ಯ ಉತ್ಪನ್ನ ಮಾಡ್ಯೂಲ್ (CPM) ಬರಲಿದೆ. CPA ಗೆ ಸಹಿ ಮಾಡಿರುವ YPP ರಚನೆಕಾರರು ಹೊಸ CPM ಗೆ ಸಹಿ ಮಾಡಬೇಕಿಲ್ಲ.

ಫ್ಯಾನ್ ಫಂಡಿಂಗ್ ಫೀಚರ್‌ಗಳನ್ನು ಅನ್‌ಲಾಕ್ ಮಾಡಲು ಬಯಸುವ, ಮಾನಿಟೈಸ್ ಮಾಡುವ ರಚನೆಕಾರರಿಗೆ ವಾಣಿಜ್ಯ ಉತ್ಪನ್ನ ಮಾಡ್ಯೂಲ್ (CPM) ಲಭ್ಯವಿದೆ. ವೀಕ್ಷಕರೊಂದಿಗೆ ಕನೆಕ್ಟ್ ಮಾಡುತ್ತಾ ಮತ್ತು ಸಮುದಾಯವನ್ನು ನಿರ್ಮಿಸುತ್ತಾ, ಹೆಚ್ಚುವರಿ ಆದಾಯವನ್ನು ಗಳಿಸಲು ಫ್ಯಾನ್ ಫಂಡಿಂಗ್ ನಿಮಗೆ ಅವಕಾಶ ನೀಡುತ್ತದೆ. ಇದು ಸೂಪರ್ ಥ್ಯಾಂಕ್ಸ್ ಮೂಲಕ ಅಭಿಮಾನಿಗಳು ಸ್ವಯಂಪ್ರೇರಿತವಾಗಿ ಬೆಂಬಲ ತೋರಿಸುವುದಾಗಿರಬಹುದು, ಅಥವಾ ಚಾನಲ್ ಸದಸ್ಯತ್ವಗಳ ಮೂಲಕ ನಿಷ್ಠಾವಂತ ಅಭಿಮಾನಿಗಳಿಗಾಗಿ ಸದಸ್ಯರಿಗೆ-ಮಾತ್ರ ಮೀಸಲಾದ ಕಂಟೆಂಟ್ ಆಗಿರಬಹುದು.

ಫ್ಯಾನ್ ಫಂಡಿಂಗ್ ಈ ಮಾನಿಟೈಸೇಶನ್ ಫೀಚರ್‌ಗಳನ್ನು ಒಳಗೊಂಡಿರುತ್ತದೆ:

  • ಚಾನಲ್ ಸದಸ್ಯತ್ವಗಳು: ನೀವು ಸದಸ್ಯರಿಗೆ-ಮಾತ್ರ ಒದಗಿಸುವ ಪರ್ಕ್‌ಗಳಿಗೆ ಪ್ರತಿಯಾಗಿ ನಿಮ್ಮ ಸದಸ್ಯರು ಮಾಸಿಕವಾಗಿ ಮರುಕಳಿಸುವ ಪಾವತಿಗಳನ್ನು ಮಾಡುತ್ತಾರೆ.
  • ಸೂಪರ್‌ ಚಾಟ್‌ ಮತ್ತು ಸೂಪರ್ ಸ್ಟಿಕ್ಕರ್ಸ್: ಲೈವ್ ಚಾಟ್ ಸ್ಟ್ರೀಮ್‌ಗಳಲ್ಲಿ ತಮ್ಮ ಸಂದೇಶಗಳನ್ನು ಅಥವಾ ಆ್ಯನಿಮೇಟೆಡ್ ಚಿತ್ರಗಳನ್ನು ಹೈಲೈಟ್ ಮಾಡಲು ನಿಮ್ಮ ಅಭಿಮಾನಿಗಳು ಪಾವತಿಸುತ್ತಾರೆ.
  • ಸೂಪರ್ ಥ್ಯಾಂಕ್ಸ್: ಒಂದು ಮೋಜಿನ ಆ್ಯನಿಮೇಶನ್ ಅನ್ನು ವೀಕ್ಷಿಸಲು ಮತ್ತು ನಿಮ್ಮ Shorts ಹಾಗೂ ಲಾಂಗ್-ಫಾರ್ಮ್ ವೀಡಿಯೊದ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಸಂದೇಶವನ್ನು ಹೈಲೈಟ್ ಮಾಡಲು ನಿಮ್ಮ ಅಭಿಮಾನಿಗಳು ಪಾವತಿಸುತ್ತಾರೆ.

YouTube ಫ್ಯಾನ್ ಫಂಡಿಂಗ್ ಫೀಚರ್‌ಗಳಿಗೆ ಅನ್ವಯಿಸುವ ನೀತಿಗಳು

ನೀವು ಫ್ಯಾನ್ ಫಂಡಿಂಗ್ ಫೀಚರ್‌ಗಳೊಂದಿಗೆ YouTube ನಲ್ಲಿ ಮಾನಿಟೈಸ್ ಮಾಡುತ್ತಿದ್ದರೆ, ನಿಮ್ಮ ಚಾನಲ್ (ಮತ್ತು ನಿಮ್ಮ MCN) ಈ ಫೀಚರ್‌ಗಳಿಗೆ ಅನ್ವಯಿಸುವ ನಿಮ್ಮ ಒಪ್ಪಂದವನ್ನು ಅನುಸರಿಸಬೇಕು (ವಾಣಿಜ್ಯ ಉತ್ಪನ್ನ ಮಾಡ್ಯೂಲ್ ಅಥವಾ ವಾಣಿಜ್ಯ ಉತ್ಪನ್ನದ ಅನುಬಂಧ) ಮತ್ತು ಇವುಗಳನ್ನು ಒಳಗೊಂಡ YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು:

YouTube ನ ಸೇವಾ ನಿಯಮಗಳಿಗೆ ಅಗತ್ಯವಿರುವ, ಅನ್ವಯವಾಗುವ ಎಲ್ಲಾ ಕಾನೂನುಗಳನ್ನು ಅನುಸರಿಸುವುದನ್ನು ಸಹ ನೀವು ಮುಂದುವರಿಸಬೇಕು. ನೀವು ಫ್ಯಾನ್ ಫಂಡಿಂಗ್ ಫೀಚರ್‌ಗಳನ್ನು ಆನ್ ಮಾಡಬಹುದೇ, ಒದಗಿಸಬಹುದೇ, ಮತ್ತು ಅದರಿಂದ ಹಣ ಪಡೆಯಬಹುದೇ ಎಂಬುದನ್ನು ಸಹ ಇದು ಒಳಗೊಂಡಿರುತ್ತದೆ. ಫ್ಯಾನ್ ಫಂಡಿಂಗ್ ಫೀಚರ್‌ಗಳು ಕ್ರೌಡ್‌ ಫಂಡಿಂಗ್ ಅಥವಾ ದೇಣಿಗೆಯ ಟೂಲ್‌ಗಳಲ್ಲ. ನೀವು ಈ ಫೀಚರ್‌ಗಳಿಂದ ಪಡೆಯುವ ಹಣವನ್ನು, ನಿಮಗೆ ಮತ್ತು ನಿಮ್ಮ ಚಟುವಟಿಕೆಗಳಿಗೆ ಅನ್ವಯಿಸುವ ಕಾನೂನುಗಳನ್ನು ಆಧರಿಸಿ ವಿಭಿನ್ನವಾಗಿ ನಿರ್ವಹಿಸಬಹುದಾಗಿದೆ.

ಕೊನೆಗೊಳಿಸುವಿಕೆ

ಫ್ಯಾನ್ ಫಂಡಿಂಗ್ ಉತ್ಪನ್ನಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನು ಕೊನೆಗೊಳಿಸಿದರೆ ಮತ್ತು ನೀವು ಇಂತಹ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಲಭ್ಯಗೊಳಿಸಿದ ಯಾವುದೇ ನಿರ್ದಿಷ್ಟ ವಾಣಿಜ್ಯ ಕಂಟೆಂಟ್ ಅನ್ನು ತೆಗೆದುಹಾಕಲು ಬಯಸುವಿರಾದರೆ, ನೀವು ಅದನ್ನು ತೆಗೆದುಹಾಕಬೇಕು. ಕೊನೆಗೊಳಿಸಿದ ನಂತರ ಯಾವುದೇ ವಾಣಿಜ್ಯ ಕಂಟೆಂಟ್‍ ಅನ್ನು ತೆಗೆದುಹಾಕಲು ಅಥವಾ ಅನ್ಯಥಾ ಯಾವುದೇ ವಾಣಿಜ್ಯ ಕಂಟೆಂಟ್‌ಗೆ ಆ್ಯಕ್ಸೆಸ್ ಅನ್ನು ಸೀಮಿತಗೊಳಿಸಲು YouTube ಜವಾಬ್ದಾರರಾಗಿರುವುದಿಲ್ಲ.

ಇನ್ಸೆಂಟಿವ್‍ಗಳು

ನಾವು ಕಾಲಕಾಲಕ್ಕೆ ಇನ್ಸೆಂಟಿವ್ ಪ್ರೋಗ್ರಾಂಗಳನ್ನು ಒದಗಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

ಫ್ಯಾನ್ ಫಂಡಿಂಗ್ ಫೀಚರ್‌ಗಳಿಗಾಗಿ ಕನಿಷ್ಠ ಅವಶ್ಯಕತೆಗಳು

ಪ್ರತಿ ಫ್ಯಾನ್ ಫಂಡಿಂಗ್ ಫೀಚರ್ ಸಹ ತನ್ನದೇ ಆದ ಅವಶ್ಯಕತೆಗಳನ್ನು ಹೊಂದಿರುತ್ತದೆ, ಫ್ಯಾನ್ ಫಂಡಿಂಗ್ ಫೀಚರ್‌ಗಳಿಗೆ ಅರ್ಹವಾಗಲು ನೀವು ಈ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು:

ಫ್ಯಾನ್ ಫಂಡಿಂಗ್ ಫೀಚರ್‌ಗಳನ್ನು ಆನ್ ಮಾಡಿ

ಫ್ಯಾನ್ ಫಂಡಿಂಗ್ ಫೀಚರ್‌ಗಳನ್ನು ಆನ್ ಮಾಡಲು, ನೀವು:

  1. YouTube ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಅದರಲ್ಲಿ ಪಾಲ್ಗೊಳ್ಳಲು ಸ್ವೀಕೃತರಾಗಬೇಕು.
  2. ನೀವು (ಮತ್ತು ನಿಮ್ಮ MCN) ನಮ್ಮ ನಿಬಂಧನೆಗಳು ಮತ್ತು ನೀತಿಗಳಿಗೆ (ಸಂಬಂಧಿತ ವಾಣಿಜ್ಯ ಉತ್ಪನ್ನ ಮಾಡ್ಯೂಲ್, ಅಥವಾ ಈ ಹಿಂದೆ ಲಭ್ಯವಿದ್ದ ವಾಣಿಜ್ಯ ಉತ್ಪನ್ನದ ಅನುಬಂಧ ಸೇರಿದಂತೆ). ಸಮ್ಮತಿಸಬೇಕು ಮತ್ತು ಅವುಗಳನ್ನು ಅನುಸರಿಸಬೇಕು.
  3. ನೀವು ಅವಶ್ಯಕತೆಗಳನ್ನು ಪೂರೈಸುವುದನ್ನು ಖಚಿತಪಡಿಸಲು, ಪ್ರತಿ ಫ್ಯಾನ್ ಫಂಡಿಂಗ್ ಫೀಚರ್‌ಗಾಗಿ ಅರ್ಹತೆಯ ಮಾನದಂಡವನ್ನು ಪರಿಶೀಲಿಸಲು ಮರೆಯಬೇಡಿ:
    1. ಚಾನಲ್ ಸದಸ್ಯತ್ವಗಳಿಗಾಗಿ ಅರ್ಹತೆಯ ಮಾನದಂಡ
    2. ಸೂಪರ್‌ ಚಾಟ್‌ ಮತ್ತು ಸೂಪರ್ ಸ್ಟಿಕ್ಕರ್ಸ್‌ಗಾಗಿ ಅರ್ಹತೆಯ ಮಾನದಂಡ
    3. ಸೂಪರ್ ಥ್ಯಾಂಕ್ಸ್‌ಗಾಗಿ ಅರ್ಹತೆಯ ಮಾನದಂಡ
  4. YouTube Studio ದಲ್ಲಿ ಅಥವಾ YouTube Studio ಮೊಬೈಲ್ ಆ್ಯಪ್‍ನಲ್ಲಿ ಪ್ರತಿ ಫ್ಯಾನ್ ಫಂಡಿಂಗ್ ಫೀಚರ್ ಅನ್ನು ಆನ್ ಮಾಡಿ.

ಚಾನಲ್ ಸದಸ್ಯತ್ವಗಳು

ಚಾನಲ್ ಸದಸ್ಯತ್ವಗಳು ವೀಕ್ಷಕರಿಗೆ ಮಾಸಿಕ ಪಾವತಿಗಳ ಮೂಲಕ ನಿಮ್ಮ ಚಾನಲ್‌ಗೆ ಸೇರಲು ಮತ್ತು ನೀವು ನೀಡುವ ಬ್ಯಾಡ್ಜ್‌ಗಳು, ಎಮೋಜಿಗಳು ಮತ್ತು ಇತರ ಸರಕುಗಳ ಹಾಗೆ, ಸದಸ್ಯರಿಗೆ-ಮಾತ್ರ ಸೌಲಭ್ಯಗಳಿಗೆ ಆ್ಯಕ್ಸೆಸ್ ಪಡೆಯಲು ಅವಕಾಶ ನೀಡುತ್ತದೆ. ಚಾನಲ್ ಸದಸ್ಯತ್ವಗಳನ್ನು ಆನ್ ಮಾಡುವುದು ಮತ್ತು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್

ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್, ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳ ಸಮಯದಲ್ಲಿ ಅಭಿಮಾನಿಗಳು ರಚನೆಕಾರರನ್ನು ಸಂಪರ್ಕಿಸುವ ಮಾರ್ಗಗಳಾಗಿವೆ. ಲೈವ್ ಚಾಟ್‌ನಲ್ಲಿ ತಮ್ಮ ಸಂದೇಶವನ್ನು ಹೈಲೈಟ್ ಮಾಡಲು ಅಭಿಮಾನಿಗಳು ಸೂಪರ್ ಚಾಟ್‌ಗಳನ್ನು ಖರೀದಿಸಬಹುದು ಅಥವಾ ಲೈವ್ ಚಾಟ್‌ನಲ್ಲಿ ಕಾಣಿಸಿಕೊಳ್ಳುವ ಆ್ಯನಿಮೇಟೆಡ್ ಚಿತ್ರವನ್ನು ಪಡೆಯಲು ಸೂಪರ್ ಸ್ಟಿಕ್ಕರ್ಸ್ ಅನ್ನು ಖರೀದಿಸಬಹುದು. ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್ ಅನ್ನು ಆನ್ ಮಾಡುವುದು ಮತ್ತು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಸೂಪರ್ ಥ್ಯಾಂಕ್ಸ್

ತಮ್ಮ ವೀಡಿಯೊಗಳಿಗಾಗಿ ಹೆಚ್ಚುವರಿ ಕೃತಜ್ಞತೆಯನ್ನು ತೋರಿಸಲು ಬಯಸುವ ವೀಕ್ಷಕರಿಂದ ಆದಾಯವನ್ನು ಗಳಿಸಲು ರಚನೆಕಾರರಿಗೆ ಸೂಪರ್ ಥ್ಯಾಂಕ್ಸ್ ಅನುಮತಿಸುತ್ತದೆ. ಅಭಿಮಾನಿಗಳು ಒಂದು-ಬಾರಿಯ ಆ್ಯನಿಮೇಶನ್ ಅನ್ನು ಖರೀದಿಸಬಹುದು ಮತ್ತು ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ವಿಭಿನ್ನ, ಬಣ್ಣದ ಮತ್ತು ಕಸ್ಟಮೈಸ್ ಮಾಡಬಹುದಾದ ಕಾಮೆಂಟ್ ಅನ್ನು ಪೋಸ್ಟ್ ಮಾಡಬಹುದು. ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡುವುದು ಮತ್ತು ನಿರ್ವಹಿಸುವುದು ಹೇಗೆ ಎಂದು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13251173309165233107
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false