YouTube Studio ದಲ್ಲಿ ಪಾಡ್‌ಕಾಸ್ಟ್ ರಚಿಸಿ

YouTube Studio ಬಳಸಿಕೊಂಡು ಪಾಡ್‌ಕಾಸ್ಟ್ ಅನ್ನು ಹೇಗೆ ರಚಿಸುವುದು ಮತ್ತು YouTube Music ಗೆ ನಿಮ್ಮ ಪಾಡ್‌ಕಾಸ್ಟ್ ಅನ್ನು ಹೇಗೆ ಸೇರಿಸುವುದು ಎಂಬುದರ ಬಗ್ಗೆ ತಿಳಿಯಿರಿ.

YouTube Studio ದಲ್ಲಿ ಪಾಡ್‌ಕಾಸ್ಟ್ ರಚಿಸಿ

YouTube ನಲ್ಲಿ, ಪಾಡ್‌ಕಾಸ್ಟ್ ಶೋ ಎನ್ನುವುದು ಪ್ಲೇಪಟ್ಟಿಯಾಗಿದೆ ಮತ್ತು ಪಾಡ್‌ಕಾಸ್ಟ್ ಎಪಿಸೋಡ್‌ಗಳು ಆ ಪ್ಲೇಪಟ್ಟಿಯಲ್ಲಿರುವ ವೀಡಿಯೊಗಳಾಗಿವೆ. ನಿಮ್ಮ ಪಾಡ್‌ಕಾಸ್ಟ್ ಪೂರ್ಣ-ಉದ್ದದ ಎಪಿಸೋಡ್‌ಗಳನ್ನು ಮಾತ್ರ ಒಳಗೊಂಡಿರಬೇಕು, ಅವುಗಳನ್ನು ಕ್ರಮವಾಗಿ ನೋಡಲು ಅನುಕೂಲವಾಗುವಂತೆ ಆಯೋಜಿಸಲಾಗಿದೆ. ನಿಮ್ಮ ಪಾಡ್‌ಕಾಸ್ಟ್ ಹಲವು ಸೀಸನ್‌ಗಳನ್ನು ಹೊಂದಿದ್ದರೆ, ಅವುಗಳನ್ನು ಅದೇ ಪಾಡ್‌ಕಾಸ್ಟ್‌ನಲ್ಲಿ ಸೇರಿಸಿ.

ಪಾಡ್‌ಕಾಸ್ಟ್ ರಚನೆಕಾರರು ಈ ಕೆಳಗಿನ ಪರ್ಕ್‌ಗಳಿಗೆ ಅರ್ಹರಾಗಿದ್ದಾರೆ:

  • YouTube Music ನಲ್ಲಿ ಸೇರ್ಪಡೆ
  • ವೀಕ್ಷಣಾ ಮತ್ತು ಪ್ಲೇಪಟ್ಟಿ ಪುಟಗಳಲ್ಲಿ ಪಾಡ್‌ಕಾಸ್ಟ್ ಬ್ಯಾಡ್ಜ್‌ಗಳು
  • ಹೊಸ ಕೇಳುಗರನ್ನು ಆಕರ್ಷಿಸಲು youtube.com/podcasts ನಲ್ಲಿ ಸ್ಪಾಟ್‌ಲೈಟ್ ಮಾಡಿ
  • ಅಧಿಕೃತ ಹುಡುಕಾಟ ಕಾರ್ಡ್‌ಗಳು
  • ನಿಮ್ಮ ಎಪಿಸೋಡ್‌ಗಳನ್ನು ಹುಡುಕಲು ಕೇಳುಗರಿಗೆ ಸಹಾಯ ಮಾಡಲು ವೀಕ್ಷಣಾ ಪುಟದಿಂದ ಸುಲಭ ಅನ್ವೇಷಣೆ
  • ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವ ಹೊಸ ಕೇಳುಗರಿಗೆ ಶಿಫಾರಸುಗಳು
  • ನಿಮ್ಮ ಪ್ರೇಕ್ಷಕರು ನಿಮ್ಮ ಪಾಡ್‌ಕಾಸ್ಟ್ ಹುಡುಕುವಾಗ ಅವರಿಗೆ ಸಹಾಯ ಮಾಡಲು ಸುಧಾರಿತ ಹುಡುಕಾಟ ಫೀಚರ್‌ಗಳು
ಗಮನಿಸಿ:
  • ಕೆಲವು ಪ್ಲೇಪಟ್ಟಿಗಳನ್ನು ನೀವು ಪಾಡ್‌ಕಾಸ್ಟ್‌ಗಳಾಗಿ ಗೊತ್ತುಪಡಿಸಿದರೂ ಸಹ, ಅವುಗಳು ಪಾಡ್‌ಕಾಸ್ಟ್ ಫೀಚರ್‌ಗಳಿಗೆ ಅರ್ಹವಾಗಿರುವುದಿಲ್ಲ. ಅನರ್ಹವಾದ ಕಂಟೆಂಟ್ ರಚನೆಕಾರರ ಮಾಲೀಕತ್ವದಲ್ಲಿಲ್ಲದ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ ಆದರೆ ಅದಕ್ಕೆ ಸೀಮಿತವಾಗಿಲ್ಲ.
  • ನಿಮ್ಮ ಪಾಡ್‌ಕಾಸ್ಟ್ ಅನ್ನು ಬೆಂಬಲಿಸಲು ರಚಿಸಲಾದ Shorts, YouTube Music ನಲ್ಲಿ ಗೋಚರಿಸುವುದಿಲ್ಲ.
  • ಪಾಡ್‌ಕಾಸ್ಟ್‌ಗಳು ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ರಚನೆಕಾರರ ಪಾಡ್‌ಕಾಸ್ಟ್‌ಗಳನ್ನು YouTube Music ಆ್ಯಪ್‌ನಲ್ಲಿ ಸೇರಿಸಲಾಗುತ್ತದೆ. 

YouTube ನಲ್ಲಿ ಪಾಡ್‌ಕಾಸ್ಟ್ ಅನ್ನು ಹೇಗೆ ರಚಿಸುವುದು ಎಂದು ತಿಳಿಯಿರಿ

ನಿಮ್ಮ ಚಾನಲ್ ಅನ್ನು ಆಪ್ಟಿಮೈಸ್ ಮಾಡಲು ಹೆಚ್ಚಿನ ಸಲಹೆಗಳಿಗಾಗಿ ಪಾಡ್‌ಕಾಸ್ಟ್ ರಚನೆಕಾರರಿಗಾಗಿಯೇ ಇರುವ ನಮ್ಮ ಉತ್ತಮ ಅಭ್ಯಾಸಗಳನ್ನು ಪರಿಶೀಲಿಸಿ ಅಥವಾ ಕೆಳಗಿನ ಮಾಹಿತಿಯನ್ನು ಬಳಸಿಕೊಂಡು YouTube Studio ದಲ್ಲಿ ಪಾಡ್‌ಕಾಸ್ಟ್ ಅನ್ನು ಹೇಗೆ ರಚಿಸುವುದು ಎಂದು ತಿಳಿಯಿರಿ. ನೀವು YouTube ಗೆ ಹೊಸಬರಾಗಿದ್ದರೆ, ನಿಮ್ಮ ಪಾಡ್‌ಕಾಸ್ಟ್‌ನ ಸಂಚಿಕೆಗಳ ಪ್ರಕಾರ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ.

YouTube Studio ದಲ್ಲಿ ಹೊಸ ಪಾಡ್‌ಕಾಸ್ಟ್ ರಚಿಸಿ

ಹೊಸ ಪಾಡ್‌ಕಾಸ್ಟ್ ರಚಿಸಿ:

  1. YouTube Studioದಲ್ಲಿ, ರಚಿಸಿ ನಂತರ ಹೊಸ ಪಾಡ್‌ಕಾಸ್ಟ್ ಅನ್ನು ಕ್ಲಿಕ್ ಮಾಡಿ.
    • ಹೊಸ ಪಾಡ್‌ಕಾಸ್ಟ್ ರಚಿಸುವುದಕ್ಕಿಂತ ಮೊದಲು ನಿಮ್ಮ ಖಾತೆಯನ್ನು ಪರಿಶೀಲಿಸಲು ನಿಮಗೆ ತಿಳಿಸಬಹುದು.
  2. ಪಾಪ್-ಅಪ್ ನಿಂದ, ಹೊಸ ಪಾಡ್‌ಕಾಸ್ಟ್ ರಚಿಸಿ ಅನ್ನು ಆಯ್ಕೆಮಾಡಿ.
    • ನೀವು ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್ ಆಗಿ ಪರಿವರ್ತಿಸಲು ಬಯಸಿದರೆ ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್ ಎಂದು ಸೆಟ್ ಮಾಡಿ ಅನ್ನು ಆಯ್ಕೆಮಾಡಿ. ಮುಂದಿನ ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಗಳನ್ನು ಆಪ್ಟಿಮೈಸ್ ಮಾಡುವುದು ಹೇಗೆ ಎಂದು ತಿಳಿಯಿರಿ.
  3. ನಿಮ್ಮ ಪಾಡ್‌ಕಾಸ್ಟ್ ವಿವರಗಳನ್ನು ನಮೂದಿಸಿ, ಕೆಳಗಿನವುಗಳನ್ನು ಸೇರಿಸಿ:
  4. ಸೇವ್ ಮಾಡಲು ರಚಿಸಿ ಅನ್ನು ಕ್ಲಿಕ್ ಮಾಡಿ.

ಒಮ್ಮೆ ನೀವು ನಿಮ್ಮ ಪಾಡ್‌ಕಾಸ್ಟ್ ಅನ್ನು ರಚಿಸಿದ ನಂತರ, ನಿಮ್ಮ ಪಾಡ್‌ಕಾಸ್ಟ್‌ಗೆ ಹೊಸ ಅಥವಾ ಅಸ್ತಿತ್ವದಲ್ಲಿರುವ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಎಪಿಸೋಡ್‌ಗಳನ್ನು ಸೇರಿಸಿ. ಮುಂದಿನ ವಿಭಾಗದಲ್ಲಿ ನಿಮ್ಮ ಪಾಡ್‌ಕಾಸ್ಟ್‌ಗೆ ವೀಡಿಯೊಗಳನ್ನು ಸೇರಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ.

ನೆನಪಿನಲ್ಲಿಡಿ:

  • YouTube ನಲ್ಲಿ, ಪ್ರತಿ ಪಾಡ್‌ಕಾಸ್ಟ್ ಎಪಿಸೋಡ್ ಅನ್ನು ಅದರ ವೀಡಿಯೊ ಪ್ರತಿನಿಧಿಸುತ್ತದೆ. MP3 ಗಳನ್ನು YouTube ನಲ್ಲಿ ಪಾಡ್‌ಕಾಸ್ಟ್‌ಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಪಾಡ್‌ಕಾಸ್ಟ್ ರಚಿಸಲು, ನಿಮ್ಮ ಪಾಡ್‌ಕಾಸ್ಟ್‌ನ ಪ್ಲೇಪಟ್ಟಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಅಥವಾ ಸೇರಿಸಿ.
  • ನಿಮ್ಮ ಪಾಡ್‌ಕ್ಯಾಸ್ಟ್‌ನ ಸಂಚಿಕೆಯು ನಮ್ಮ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ನೀತಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಕಂಟೆಂಟ್ ಪಾಡ್‌ಕಾಸ್ಟ್ ಫೀಚರ್‌ಗಳಿಗೆ ಅರ್ಹವಾಗಿರುವುದಿಲ್ಲ. YouTube ನಲ್ಲಿ ನ್ಯಾಯಯುತ ಬಳಕೆ ಮತ್ತು ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಕುರಿತು ಇನ್ನಷ್ಟು ತಿಳಿಯಿರಿ.
  • ಆಡಿಯೊ-ಮಾತ್ರ ಪ್ಲೇಬ್ಯಾಕ್‌ಗಾಗಿ ಪಾಡ್‌ಕಾಸ್ಟ್ ವೀಡಿಯೊಗಳು ಲಭ್ಯವಿವೆ. ವೀಡಿಯೊಗಾಗಿ ಆಡಿಯೊ-ಮಾತ್ರ ಪ್ಲೇಬ್ಯಾಕ್ ಅನ್ನು ಆಫ್ ಮಾಡಲು, ನಿಮ್ಮ ವೀಡಿಯೊ ಸೆಟ್ಟಿಂಗ್‌ಗಳು ನಲ್ಲಿರುವ ಎಲ್ಲಾ ಪಾಡ್‌ಕಾಸ್ಟ್‌ಗಳಿಂದ ನೀವು ಅದನ್ನು ತೆಗೆದುಹಾಕಬೇಕು.
YouTube ಗಾಗಿ ನಿಮ್ಮ ಶೋ ಅನ್ನು ಆಪ್ಟಿಮೈಸ್ ಮಾಡುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ರಚನೆಕಾರರ ಸಲಹೆಗಳಲ್ಲಿ ನಮ್ಮ ಉತ್ತಮ ಅಭ್ಯಾಸಗಳು ಅನ್ನು ಪರಿಶೀಲಿಸಿ.

ಪಾಡ್‌ಕಾಸ್ಟ್‌ಗೆ ವೀಡಿಯೊಗಳನ್ನು ಸೇರಿಸಿ

ಪಾಡ್‌ಕಾಸ್ಟ್‌ಗೆ ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು:

  1. YouTube Studio ದಲ್ಲಿ, ಕಂಟೆಂಟ್ ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನಿಮ್ಮ ಪಾಡ್‌ಕಾಸ್ಟ್ ಅನ್ನು ಆಯ್ಕೆಮಾಡಿ.
  3. ವೀಡಿಯೊಗಳನ್ನು ಸೇರಿಸಿ ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಪಾಡ್‌ಕಾಸ್ಟ್‌ಗೆ ನೀವು ಸೇರಿಸಲು ಬಯಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಮತ್ತು ವೀಡಿಯೊ ವಿವರಗಳನ್ನು ನಮೂದಿಸಿ.
  5. ಬದಲಾವಣೆಗಳನ್ನು ಉಳಿಸಲು ರಚಿಸಿ ಅನ್ನು ಕ್ಲಿಕ್ ಮಾಡಿ.

ಪಾಡ್‌ಕಾಸ್ಟ್‌ಗೆ ಅಸ್ತಿತ್ವದಲ್ಲಿರುವ ವೀಡಿಯೊಗಳನ್ನು ಸೇರಿಸಲು:

  1. YouTube Studio ದಲ್ಲಿ, ಕಂಟೆಂಟ್ ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನಿಮ್ಮ ಪಾಡ್‌ಕಾಸ್ಟ್ ಅನ್ನು ಆಯ್ಕೆಮಾಡಿ.
  3. ವೀಡಿಯೊಗಳನ್ನು ಸೇರಿಸಿ ನಂತರ ನಿಮ್ಮ ಅಸ್ತಿತ್ವದಲ್ಲಿರುವ ವೀಡಿಯೊಗಳನ್ನು ಸೇರಿಸಿ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಪಾಡ್‌ಕಾಸ್ಟ್‌ನಲ್ಲಿ ನೀವು ಸೇರಿಸಲು ಬಯಸುವ ವೀಡಿಯೊಗಳನ್ನು ಆಯ್ಕೆಮಾಡಿ.
  5. ಪ್ಲೇಪಟ್ಟಿಗೆ ಸೇರಿಸಿ ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯಿಂದ ನಿಮ್ಮ ಪಾಡ್‌ಕಾಸ್ಟ್ ಅನ್ನು ಆಯ್ಕೆಮಾಡಿ.
  6. ನಿಮ್ಮ ಪಾಡ್‌ಕಾಸ್ಟ್‌ಗೆ ವೀಡಿಯೊಗಳನ್ನು ಸೇರಿಸಲು ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್‌ನಂತೆ ಸೆಟ್ ಮಾಡಿ

  1. YouTube Studio ದಲ್ಲಿ, ಕಂಟೆಂಟ್ ನಂತರ ಪ್ಲೇಪಟ್ಟಿಗಳುಎಂಬಲ್ಲಿಗೆ ಹೋಗಿ.
  2. ನೀವು ಪಾಡ್‌ಕಾಸ್ಟ್ ಎಂಬಂತೆ ಗೊತ್ತುಪಡಿಸಲು ಬಯಸುವ ಪ್ಲೇಪಟ್ಟಿಯ ಮೇಲೆ ಹೋವರ್ ಮಾಡಿ.
  3. ಮೆನು ನಂತರ ಪಾಡ್‌ಕಾಸ್ಟ್ ಆಗಿ ಸೆಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಪಾಡ್‌ಕಾಸ್ಟ್‌ನ ವಿವರಗಳನ್ನು ಪರಿಶೀಲಿಸಿ ಮತ್ತು ಸ್ಕ್ವೇರ್ ಪಾಡ್‌ಕಾಸ್ಟ್ ಥಂಬ್‌ನೇಲ್ ಅನ್ನು ಸೇರಿಸಿ. ಶೀರ್ಷಿಕೆ, ವಿವರಣೆ ಮತ್ತು YouTube ನಲ್ಲಿ ನಿಮ್ಮ ಪಾಡ್‌ಕಾಸ್ಟ್ ಅನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಪಾಡ್‌ಕಾಸ್ಟ್ ವಿವರಗಳು ಒಳಗೊಂಡಿರುತ್ತವೆ.
  5. ನಿಮ್ಮ ಬದಲಾವಣೆಗಳನ್ನು ದೃಢೀಕರಿಸಲು ಪೂರ್ಣಗೊಂಡಿದೆ ಅನ್ನು ಕ್ಲಿಕ್ ಮಾಡಿ.

ನೆನಪಿನಲ್ಲಿಡಿ:

  • ನಿಮ್ಮ ಪಾಡ್‌ಕ್ಯಾಸ್ಟ್‌ನ ಸಂಚಿಕೆಯು ನಮ್ಮ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ನೀತಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಕಂಟೆಂಟ್ ಪಾಡ್‌ಕಾಸ್ಟ್ ಫೀಚರ್‌ಗಳಿಗೆ ಅರ್ಹವಾಗಿರುವುದಿಲ್ಲ. YouTube ನಲ್ಲಿ ನ್ಯಾಯಯುತ ಬಳಕೆ ಮತ್ತು ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಕುರಿತು ಇನ್ನಷ್ಟು ತಿಳಿಯಿರಿ.
  • ಪೂರ್ಣ ಪಾಡ್‌ಕಾಸ್ಟ್ ಎಪಿಸೋಡ್‌ಗಳನ್ನು ಹೊಂದಿದ್ದರೆ ಮಾತ್ರ ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್ ಎಂಬುದಾಗಿ ಸೆಟ್ ಮಾಡಿ. ನೀವು ಸೀಸನ್‌ಗಳು ಅಥವಾ ಕ್ಲಿಪ್‌ಗಳಿಗಾಗಿ ಹೆಚ್ಚುವರಿ ಪ್ಲೇಪಟ್ಟಿಗಳನ್ನು ಹೊಂದಿದ್ದರೆ, ಈ ಪ್ಲೇಪಟ್ಟಿಗಳನ್ನು ಪಾಡ್‌ಕಾಸ್ಟ್ ಎಂಬುದಾಗಿ ಸೆಟ್ ಮಾಡಬೇಡಿ.
ನಿಮ್ಮ ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಗಳನ್ನು YouTube ನಲ್ಲಿ ಪಾಡ್‌ಕಾಸ್ಟಿಂಗ್‌ಗಾಗಿ ಆಪ್ಟಿಮೈಸ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇನ್ನಷ್ಟು ತಿಳಿದುಕೊಳ್ಳಲು, ರಚನೆಕಾರರ ಸಲಹೆಗಳಲ್ಲಿ ನಮ್ಮ ಉತ್ತಮ ಅಭ್ಯಾಸಗಳು ಅನ್ನು ಪರಿಶೀಲಿಸಿ.

ನಿಮ್ಮ ಪಾಡ್‌ಕಾಸ್ಟ್‌ಗೆ ಹೆಸರಿಸಿ

ಸೆಟಪ್ ಸಮಯದಲ್ಲಿ, ನಿಮ್ಮ ಪಾಡ್‌ಕಾಸ್ಟ್‌ಗೆ ವಿವರಣಾತ್ಮಕ ಶೀರ್ಷಿಕೆಯನ್ನು ನೀಡಿ. ನಿಮ್ಮ ಪಾಡ್‌ಕಾಸ್ಟ್ ಶೀರ್ಷಿಕೆಗೆ ಹೆಚ್ಚುವರಿ ಪದಗಳನ್ನು ಸೇರಿಸಬೇಡಿ ('ಪಾಡ್‌ಕಾಸ್ಟ್' ಸೇರಿದಂತೆ, ಅದು ನಿಮ್ಮ ಶೋ ಹೆಸರಿನ ಭಾಗವಾಗಿಲ್ಲದ ಹೊರತು).

“ಪೂರ್ಣ ಎಪಿಸೋಡ್‌ಗಳು,” “ಹೊಸ ಅಪ್‌ಲೋಡ್‌ಗಳು,” “ಪಾಡ್‌ಕಾಸ್ಟ್,” ಇತ್ಯಾದಿಗಳಂತಹ ಸಾಮಾನ್ಯ ಪಾಡ್‌ಕಾಸ್ಟ್ ಶೀರ್ಷಿಕೆಗಳನ್ನು ಬಳಸುವುದನ್ನು ತಪ್ಪಿಸಿ. ನಿಮ್ಮ ಪ್ಲೇಪಟ್ಟಿ ಶೀರ್ಷಿಕೆ ತುಂಬಾ ಅಸ್ಪಷ್ಟವಾಗಿದ್ದರೆ, YouTube Music ಆ್ಯಪ್‌ನಲ್ಲಿ ನಿಮ್ಮ ಪಾಡ್‌ಕಾಸ್ಟ್ ಶೀರ್ಷಿಕೆಯನ್ನು ನಿಮ್ಮ ಚಾನಲ್ ಹೆಸರಿನಿಂದ YouTube ಬದಲಾಯಿಸುತ್ತದೆ.

ಗಮನಿಸಿ:
  • ಕೆಲವು ಪ್ಲೇಪಟ್ಟಿಗಳನ್ನು ನೀವು ಪಾಡ್‌ಕಾಸ್ಟ್‌ಗಳಾಗಿ ಗೊತ್ತುಪಡಿಸಿದರೂ ಸಹ, ಅವುಗಳು ಪಾಡ್‌ಕಾಸ್ಟ್ ಫೀಚರ್‌ಗಳಿಗೆ ಅರ್ಹವಾಗಿರುವುದಿಲ್ಲ. ಅನರ್ಹವಾದ ಕಂಟೆಂಟ್ ರಚನೆಕಾರರ ಮಾಲೀಕತ್ವದಲ್ಲಿಲ್ಲದ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ ಆದರೆ ಅದಕ್ಕೆ ಸೀಮಿತವಾಗಿಲ್ಲ.
  • ನಿಮ್ಮ ಪಾಡ್‌ಕಾಸ್ಟ್ ಅನ್ನು ಬೆಂಬಲಿಸಲು ರಚಿಸಲಾದ Shorts, YouTube Music ನಲ್ಲಿ ಗೋಚರಿಸುವುದಿಲ್ಲ.
  • ಪಾಡ್‌ಕಾಸ್ಟ್‌ಗಳು ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ರಚನೆಕಾರರ ಪಾಡ್‌ಕಾಸ್ಟ್‌ಗಳನ್ನು YouTube Music ಆ್ಯಪ್‌ನಲ್ಲಿ ಸೇರಿಸಲಾಗುತ್ತದೆ. 

ಪ್ಲೇಪಟ್ಟಿಯಿಂದ ಪಾಡ್‌ಕಾಸ್ಟಿಂಗ್ ಫೀಚರ್‌ಗಳನ್ನು ತೆಗೆದುಹಾಕಿ

  1. YouTube Studio ದಲ್ಲಿ, ಕಂಟೆಂಟ್ ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನೀವು ಪಾಡ್‌ಕಾಸ್ಟ್‌ ಆಗಿ ಸೆಟ್ ಮಾಡದೇ ಇರಲು ಬಯಸುವ ಪ್ಲೇಪಟ್ಟಿಯ ಮೇಲೆ ಹೋವರ್ ಮಾಡಿ
  3. ನೀವು ಫೀಚರ್‌ಗಳನ್ನು ತೆಗೆದುಹಾಕಲು ಬಯಸುವ ಪಾಡ್‌ಕಾಸ್ಟ್‌ನ ಪಕ್ಕದಲ್ಲಿರುವ ಮೆನು ಅನ್ನು ಕ್ಲಿಕ್ ಮಾಡಿ.
  4. ಪ್ಲೇಪಟ್ಟಿ‌ಯಾಗಿ ಸೆಟ್ ಮಾಡಿ ಅನ್ನು ಆಯ್ಕೆಮಾಡಿ.
  5. ದೃಢೀಕರಿಸಲು ಹೌದು ಅನ್ನು ಕ್ಲಿಕ್ ಮಾಡಿ.

ನಿಮ್ಮ ಪಾಡ್‌ಕಾಸ್ಟ್‌ನಲ್ಲಿ ಎಪಿಸೋಡ್‌ಗಳನ್ನು ಮರು-ಆರ್ಡರ್ ಮಾಡಿ

ನಿಮ್ಮ ಎಪಿಸೋಡ್‌ಗಳನ್ನು ನೋಡುವ ಕ್ರಮವನ್ನು ಎಡಿಟ್ ಮಾಡಲು, ನಿಮ್ಮ ಪಾಡ್‌ಕಾಸ್ಟ್ ಪ್ಲೇಪಟ್ಟಿಯೊಳಗೆ ನೀವು ಅವುಗಳನ್ನು ಮರು-ಆರ್ಡರ್ ಮಾಡಬೇಕಾಗುತ್ತದೆ.

  1. YouTube Studio ದಲ್ಲಿ, ಕಂಟೆಂಟ್ ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನೀವು ಅಪ್‌ಡೇಟ್ ಮಾಡಲು ಬಯಸುವ ಪಾಡ್‌ಕಾಸ್ಟ್‌ನಲ್ಲಿ ಎಡಿಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ಪಾಡ್‌ಕಾಸ್ಟ್ ವಿವರಗಳ ಪುಟದಿಂದ, ಡೀಫಾಲ್ಟ್ ವೀಡಿಯೊ ಆರ್ಡರ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವೀಡಿಯೊಗಳನ್ನು ಹೇಗೆ ವಿಂಗಡಿಸಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.
  4. ಬದಲಾವಣೆಗಳನ್ನು ಖಚಿತಪಡಿಸಲು ಮೇಲಿನ ಬಲ ಮೂಲೆಯಲ್ಲಿ ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಶೋ ಎಪಿಸೋಡಿಕ್ ಆಗಿದ್ದರೆ, ನಿಮ್ಮ ವೀಡಿಯೊಗಳನ್ನು ಹೊಸದರಿಂದ ಹಳೆಯದಕ್ಕೆ ಎಂದು ಕ್ರಮಗೊಳಿಸಿ.
  • ನಿಮ್ಮ ಶೋ ಧಾರಾವಾಹಿಯಾಗಿದ್ದರೆ, ನಿಮ್ಮ ಪ್ಲೇಪಟ್ಟಿಯನ್ನು ಹಳೆಯದರಿಂದ ಹೊಸದಕ್ಕೆ ಎಂದು ಕ್ರಮಗೊಳಿಸಿ.

YouTube ನಲ್ಲಿ ನಿಮ್ಮ ಪಾಡ್‌ಕಾಸ್ಟ್‌ನ ಕಾರ್ಯಕ್ಷಮತೆಯನ್ನು ಅಳೆಯಿರಿ

ನಿಮ್ಮ ಪಾಡ್‌ಕಾಸ್ಟ್‌ನ ಸಾಮಾನ್ಯ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಲು:

  1. YouTube Studio ಅನ್ನು ತೆರೆಯಿರಿ.
  2. Analytics ಟ್ಯಾಬ್‌ನಿಂದ, ಅವಲೋಕನ ಅನ್ನು ಕ್ಲಿಕ್ ಮಾಡಿ.
  3. ಪುಟದ ಕೆಳಗಿನ ಬಲಭಾಗದಲ್ಲಿರುವ ನಿಮ್ಮ ಪಾಡ್‌ಕಾಸ್ಟ್ (ಗಳು) ಕಾರ್ಡ್‌ನಿಂದ ಸಂಬಂಧಿತ ಪಾಡ್‌ಕಾಸ್ಟ್ ಅನ್ನು ಆಯ್ಕೆಮಾಡಿ.

ಗಮನಿಸಿ: ನೀವು YouTube ನಲ್ಲಿ ಕೇವಲ ಒಂದು ಪಾಡ್‌ಕಾಸ್ಟ್ ಹೊಂದಿದ್ದರೆ, ಇದು ಏಕೈಕ ಆಯ್ಕೆಯಾಗಿದೆ.

ಈ ಸ್ನ್ಯಾಪ್‌ಶಾಟ್‌ನಲ್ಲಿ, ನಿಮ್ಮ ಪಾಡ್‌ಕಾಸ್ಟ್‌ಗೆ ಸಂಬಂಧಿಸಿದ ವೀಕ್ಷಣೆಗಳು ಮತ್ತು ವೀಕ್ಷಣೆ ಸಮಯ ಮತ್ತು ಡೇಟಾವನ್ನು ನೀವು ನೋಡಬಹುದು. ನೀವು ಹಲವು ಪಾಡ್‌ಕಾಸ್ಟ್ ಶೋಗಳನ್ನು ಹೊಂದಿದ್ದರೆ, ನಿಮ್ಮ ಪ್ಲೇಪಟ್ಟಿಗಳು ಕರೋಸಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ನಿಮ್ಮ ಪಾಡ್‌ಕಾಸ್ಟ್‌ನ ಕಾರ್ಯಕ್ಷಮತೆಯ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳಲು:

  1. YouTube Studio ಅನ್ನು ತೆರೆಯಿರಿ.
  2. Analytics ಟ್ಯಾಬ್‌ನಿಂದ, ಅವಲೋಕನ ಅನ್ನು ಕ್ಲಿಕ್ ಮಾಡಿ
  3. ಪಾಡ್‌ಕಾಸ್ಟ್ Analytics ಅನ್ನು ಆಯ್ಕೆಮಾಡಿ.

ಈ ವೀಕ್ಷಣೆಯಿಂದ, ನೀವು ಈ ಕೆಳಗಿನವುಗಳ ಬಗ್ಗೆ ತಿಳಿದುಕೊಳ್ಳುವಿರಿ:

  • ನಿಮ್ಮ ಪಾಡ್‌ಕಾಸ್ಟ್ ಕಾರ್ಯಕ್ಷಮತೆಯ ಅವಲೋಕನ
  • ಟ್ರಾಫಿಕ್ ಮೂಲಗಳು
  • ಪ್ರೇಕ್ಷಕರ ಜನಸಂಖ್ಯಾ ಮಾಹಿತಿ
  • ಪ್ರೇಕ್ಷಕರ ರಿಟೆನ್ಶನ್ ಮೆಟ್ರಿಕ್‌ಗಳು
  • ಆದಾಯ ಡೇಟಾ
  • ಹಾಗೂ ಇನ್ನಷ್ಟು

ನೀವು ಹಲವು ಪಾಡ್‌ಕಾಸ್ಟ್ ಶೋಗಳನ್ನು ಹೊಂದಿದ್ದರೆ, ನೀವು ವಿಶ್ಲೇಷಿಸಲು ಬಯಸುವ ಪಾಡ್‌ಕಾಸ್ಟ್‌ನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4362222706031878111
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false