YouTube Shorts ರಚಿಸಲು ಪ್ರಾರಂಭಿಸಿ

YouTube ಆ್ಯಪ್‍ನಲ್ಲಿ ಸರಳವಾಗಿ ಸ್ಮಾರ್ಟ್‌ಫೋನ್ ಮತ್ತು Shorts ಕ್ಯಾಮರಾವನ್ನು ಬಳಸುವ ಮೂಲಕ ಯಾರಾದರೂ YouTube Shorts ಅನ್ನು ಬಳಸಿಕೊಂಡು ಹೊಸ ಪ್ರೇಕ್ಷಕರನ್ನು ತಲುಪಬಹುದು. ನಮ್ಮ ಮಲ್ಟಿ-ಸೆಗ್ಮೆಂಟ್ ಕ್ಯಾಮರಾ ಮತ್ತು YouTube Shorts ರಚನೆಯ ಪರಿಕರಗಳೊಂದಿಗೆ, ನೀವು 60 ಸೆಕೆಂಡುಗಳವರೆಗೆ ಶಾರ್ಟ್-ಫಾರ್ಮ್ ವೀಡಿಯೊಗಳನ್ನು ಸುಲಭವಾಗಿ ರಚಿಸಬಹುದು.

YouTube Shorts

YouTube Shorts ಕುರಿತು ಇನ್ನಷ್ಟು ತಿಳಿಯಿರಿ

ನಾನು Shorts ಅನ್ನು ಹೇಗೆ ರಚಿಸಬಹುದು?

ಈ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗೆ ಸೇವ್ ಮಾಡಲಾದ ವರ್ಟಿಕಲ್ ವೀಡಿಯೊಗಳನ್ನು ನೀವು Shorts ಆಗಿ ಅಪ್‌ಲೋಡ್ ಮಾಡಬಹುದು.

ನೀವು ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದರೆ, ನೀವು YouTube ಆ್ಯಪ್‌ನಿಂದ Short ಅನ್ನು ರೆಕಾರ್ಡ್ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ:

  1. YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ರಚಿಸಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು Short ಅನ್ನು ರಚಿಸಿ ಎಂಬುದನ್ನು ಆಯ್ಕೆಮಾಡಿ.
    • ಅಥವಾ Shorts ವೀಕ್ಷಣಾ ಪುಟದಲ್ಲಿರುವ ರೀಮಿಕ್ಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ Short ಅನ್ನು 15 ಸೆಕೆಂಡ್‌ಗಳಿಗಿಂತ ಹೆಚ್ಚಿನ ಅವಧಿಗೆ ರಚಿಸಲು, 60 ಸೆಕೆಂಡ್‌ಗಳವರೆಗೆ (60) ರೆಕಾರ್ಡ್ ಮಾಡಲು ಮೇಲಿನ ಬಲ ಮೂಲೆಯಲ್ಲಿನ 15 ಸೆ ಅನ್ನು ಟ್ಯಾಪ್ ಮಾಡಿ.
  4. ಕ್ಲಿಪ್ ಅನ್ನು ರೆಕಾರ್ಡ್ ಮಾಡಲು, ಕ್ಯಾಪ್ಚರ್  ಅನ್ನು ಹೋಲ್ಡ್ ಮಾಡಿ ಅಥವಾ ರೆಕಾರ್ಡಿಂಗ್ ಅನ್ನು ಪ್ರಾರಂಭಿಸಲು ಟ್ಯಾಪ್ ಮಾಡಿ, ನಂತರ ನಿಲ್ಲಿಸಲು ಅದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.
  5. ನೀವು ರೆಕಾರ್ಡ್ ಮಾಡಿದ ಹಿಂದಿನ ವೀಡಿಯೊ ಕ್ಲಿಪ್ ಅನ್ನು ತೆಗೆದುಹಾಕಲು, ರದ್ದುಗೊಳಿಸಿ  ಎಂಬುದನ್ನು ಟ್ಯಾಪ್ ಮಾಡಿ ಅಥವಾ ಅದನ್ನು ಮರಳಿ ಸೇರಿಸಲು ಪುನಃ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  6. ಮುಚ್ಚಿ  ಎಂಬುದನ್ನು ಟ್ಯಾಪ್ ಮಾಡಿ, ನಂತರ ಮರಳಿ ಪ್ರಾರಂಭಿಸಿ ಅಥವಾ ಡ್ರಾಫ್ಟ್ ಆಗಿ ಸೇವ್ ಮಾಡಿ ಎಂಬುದನ್ನು ಆರಿಸಿ ಮತ್ತು ಕ್ಯಾಮರಾದಿಂದ ನಿರ್ಗಮಿಸಿ.
  7. ನಿಮ್ಮ ವೀಡಿಯೊವನ್ನು ಪ್ರಿವ್ಯೂ ಮಾಡಲು ಹಾಗೂ ವರ್ಧಿಸಲು ಮುಗಿದಿದೆ  ಎಂಬುದನ್ನು ಟ್ಯಾಪ್ ಮಾಡಿ.
  8. ರೆಕಾರ್ಡ್ ಸ್ಕ್ರೀನ್‌ಗೆ ಹಿಂತಿರುಗಲು 'ಹಿಂದೆ'  ಎಂಬುದನ್ನು ಟ್ಯಾಪ್ ಮಾಡಿ. ನೀವು ಎಡಿಟ್‌ಗಳನ್ನು ಮಾಡಿದ ನಂತರ ಪುನಃ ಪ್ರಾರಂಭಿಸಲು ಅಥವಾ ಡ್ರಾಫ್ಟ್ ಆಗಿ ಉಳಿಸಲು ಮತ್ತು ಎಡಿಟರ್‌ನಿಂದ ನಿರ್ಗಮಿಸಲು 'ಹಿಂದಕ್ಕೆ' ಎಂಬುದನ್ನು ಸಹ ನೀವು ಟ್ಯಾಪ್ ಮಾಡಬಹುದು. ಈ ಹಂತದಲ್ಲಿ ಡ್ರಾಫ್ಟ್ ಅನ್ನು ಸೇವ್ ಮಾಡುವುದರಿಂದ ನೀವು ಮಾಡಿದ ಯಾವುದೇ ಎಡಿಟ್‌ಗಳನ್ನು ಉಳಿಸುತ್ತದೆ.
  9. ನಿಮ್ಮ ವೀಡಿಯೊಗೆ ವಿವರಗಳನ್ನು ಸೇರಿಸಲು, ಮುಂದೆ ಎಂಬುದನ್ನು ಟ್ಯಾಪ್ ಮಾಡಿ. ಈ ಸ್ಕ್ರೀನ್‌ನಿಂದ, ಶೀರ್ಷಿಕೆಯನ್ನು ಸೇರಿಸಿ (ಗರಿಷ್ಠ 100 ಅಕ್ಷರಗಳು) ಮತ್ತು ವೀಡಿಯೊ ಗೌಪ್ಯತೆಯಂತಹ ಸೆಟ್ಟಿಂಗ್‌ಗಳನ್ನು ಆರಿಸಿ.
    ಗಮನಿಸಿ: 13–17 ವರ್ಷ ವಯಸ್ಸಿನ ರಚನೆಕಾರರಿಗೆ ಡೀಫಾಲ್ಟ್ ವೀಡಿಯೊ ಗೌಪ್ಯತೆ ಸೆಟ್ಟಿಂಗ್ ಖಾಸಗಿ ಆಗಿರುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ನಿಮ್ಮ ಡೀಫಾಲ್ಟ್ ವೀಡಿಯೊ ಗೌಪ್ಯತೆ ಸೆಟ್ಟಿಂಗ್ ಅನ್ನು ಸಾರ್ವಜನಿಕ ಎಂಬುದಾಗಿ ಸೆಟ್ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಈ ಸೆಟ್ಟಿಂಗ್‌ಗಳುನ್ನು ಸಾರ್ವಜನಿಕ, ಖಾಸಗಿ, ಅಥವಾ ಪಟ್ಟಿ ಮಾಡದಿರುವುದುಎಂದು ಬದಲಾಯಿಸಿಕೊಳ್ಳಬಹುದು.
  10. ಪ್ರೇಕ್ಷಕರನ್ನು ಆಯ್ಕೆಮಾಡಿ ನಂತರ ನಿಮ್ಮ ಪ್ರೇಕ್ಷಕರನ್ನು ಆರಿಸಲು, “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ" ಅಥವಾ "ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ" ಎಂದು ಟ್ಯಾಪ್ ಮಾಡಿ. ಮಕ್ಕಳಿಗಾಗಿ ರಚಿಸಲಾಗಿದೆ ಕುರಿತು ಇನ್ನಷ್ಟು ತಿಳಿಯಿರಿ.
  11. ನಿಮ್ಮ Short ಅನ್ನು ಪ್ರಕಟಿಸಲು, SHORT ಅನ್ನು ಅಪ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಸೂಚನೆ: ನೀವು ಗರಿಷ್ಠ 1080p ರೆಸಲ್ಯೂಶನ್ ಇರುವ Short ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು.
Shorts ಜೊತೆಗೆ ಕ್ರಿಯೇಟಿವ್ ಆಗಿ!
 
YouTube ಆ್ಯಪ್‌ನಲ್ಲಿ ವಿವಿಧ ಕ್ರಿಯೇಟಿವ್ ಫೀಚರ್‌ಗಳ ಜೊತೆ ನಿಮ್ಮ Shorts ಅನ್ನು ವರ್ಧಿಸಿ – ಹೇಗೆ ಎಂದು ತಿಳಿಯಿರಿ.
ವೀಕ್ಷಕರು ನನ್ನ Shorts ಅನ್ನು ಹೇಗೆ ಹುಡುಕುತ್ತಾರೆ?

ವೀಕ್ಷಕರಿಗೆ ಕಂಟೆಂಟ್ ಅನ್ನು ಡೆಲಿವರ್ ಮಾಡಲು ನಾವು ಯಾವಾಗಲೂ ಹೊಸ ವಿಧಾನಗಳನ್ನು ಪರೀಕ್ಷಿಸುತ್ತಿರುತ್ತೇವೆ. ಇದು ವಿಶೇಷವಾಗಿ Shorts ವಿಷಯದಲ್ಲಿ ಸತ್ಯವಾಗಿದೆ.

Shorts ಪ್ಲೇಯರ್ ಅನ್ನು ತೆರೆಯಲು YouTube ಆ್ಯಪ್‌ನ ಕೆಳಭಾಗದಲ್ಲಿರುವ Shorts ಅನ್ನು ಟ್ಯಾಪ್ ಮಾಡುವ ಮೂಲಕ ವೀಕ್ಷಕರು ನಿಮ್ಮ Shorts ಅನ್ನು ಹುಡುಕಬಹುದು. ಪ್ಲೇಯರ್‌ನಿಂದ, ಅವರು Shorts ಫೀಡ್‌ನಲ್ಲಿ ಎಂದಿಗೂ ಮುಗಿಯದ ವೀಡಿಯೊಗಳ ಸ್ಟ್ರೀಮ್ ಅನ್ನು ವೀಕ್ಷಿಸಲು ಸ್ಕ್ರಾಲ್ ಮಾಡಬಹುದು. ಅವರು ಇಲ್ಲಿಯೂ ಸಹ Shorts ಅನ್ನು ಕಾಣಬಹುದು:

  • ಬಹುತೇಕ ಸ್ಮಾರ್ಟ್ ಟಿವಿಗಳು, ಗೇಮ್ ಕನ್ಸೋಲ್‌ಗಳು ಮತ್ತು ಇತರ ಸ್ಟ್ರೀಮಿಂಗ್ ಸಾಧನಗಳು ಸೇರಿದಂತೆ YouTube ನಾದ್ಯಂತ ಹುಡುಕಾಟ ಫಲಿತಾಂಶಗಳಲ್ಲಿ.
  • YouTube ಹೋಮ್ ಪೇಜ್‌ನಲ್ಲಿ.
  • ನಿಮ್ಮ ಚಾನಲ್ ಹೋಮ್ ಪೇಜ್ನಲ್ಲಿ ಫೀಚರ್ ಮಾಡಿರುವುದು.
  • ಅವರ ಸಬ್‌ಸ್ಕ್ರಿಪ್ಶನ್‌ಗಳನ್ನು ಪರಿಶೀಲಿಸುತ್ತಿರುವುದು.
  • ಅವರ ನೋಟಿಫಿಕೇಶನ್‌ಗಳಲ್ಲಿ.

ಅವುಗಳನ್ನು ಅವರು ಎಲ್ಲಿ ಹುಡುಕಿದರೂ, ಸಬ್‌ಸ್ಕ್ರೈಬರ್‌ಗಳು ನಿಮ್ಮ Shorts ಅನ್ನು ವೀಕ್ಷಿಸುವುದರಿಂದ ಕ್ರಿಯೇಟರ್ ಪ್ರಶಸ್ತಿಗಳ ಪ್ರೋಗ್ರಾಂ ಮೈಲಿಗಲ್ಲುಗಳ ಕಡೆಗೆ ಎಣಿಕೆ ಮಾಡುತ್ತಾರೆ.

YouTube ನಾದ್ಯಂತ ನಿಮ್ಮ Shorts ಅನ್ನು ಶಿಫಾರಸು ಮಾಡುವುದಕ್ಕೆ ನಮ್ಮ ಸಿಸ್ಟಂಗೆ ಸಹಾಯ ಮಾಡಲು, ನಿಮ್ಮ Short ವೀಡಿಯೊದ ಶೀರ್ಷಿಕೆ ಅಥವಾ ವಿವರಣೆಯಲ್ಲಿ #Shorts ಅನ್ನು ಸೇರಿಸಿ.

YouTube ನಲ್ಲಿ ಹ್ಯಾಶ್‌ಟ್ಯಾಗ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ನಿಮ್ಮ ವೀಡಿಯೊಗೆ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿ ಎಂಬಲ್ಲಿಗೆ ಹೋಗಿ.

ನನ್ನ Shorts ನಿಂದ ನಾನು ಹಣವನ್ನು ಗಳಿಸಬಹುದೇ?

ಹೌದು! ನೀವು ಈಗ Shorts ಮೂಲಕ YouTube ಪಾಲುದಾರ ಕಾರ್ಯಕ್ರಮಕ್ಕೆ (YPP) ಅರ್ಹರಾಗಬಹುದು. ಕಳೆದ 90 ದಿನಗಳಲ್ಲಿ 10 ಮಿಲಿಯನ್ ಮಾನ್ಯವಾದ ಸಾರ್ವಜನಿಕ Shorts ವೀಕ್ಷಣೆಗಳ ಜೊತೆಗೆ 1,000 ಸಬ್‌ಸ್ಕ್ರೈಬರ್‌ಗಳನ್ನು ಪಡೆಯುವ ಮೂಲಕ ನೀವು YPP ಗೆ ಅರ್ಹರಾಗಬಹುದು. YouTube Shorts ಮೂಲಕ ಹಣ ಗಳಿಸುವ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಏಕೆ Shorts ಅನ್ನು ರಚಿಸಬೇಕು ಎಂಬುದರ ಕುರಿತು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4730557748807472630
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false