YouTube Kids ನ ಕುರಿತು ಪೋಷಕರಿಗೆ ಮುಖ್ಯ ಮಾಹಿತಿ

ಮಕ್ಕಳು ಮತ್ತು ಕುಟುಂಬಗಳಿಗೆ ಮೋಜಿನ, ಕುಟುಂಬ ಸ್ನೇಹಿ ಸ್ಥಳವಾಗಿ YouTube Kids ಅನ್ನು ನಿರ್ಮಿಸಲಾಗಿದೆ. YouTube Kids ಆ್ಯಪ್ ಜನಪ್ರಿಯ ಮಕ್ಕಳ ವೀಡಿಯೊಗಳು ಮತ್ತು ವೈವಿಧ್ಯಮಯ ಹೊಸ ಕಂಟೆಂಟ್ ಅನ್ನು ಹೊಂದಿದೆ, ಮಕ್ಕಳಿಗಾಗಿ ಬಳಸಲು ಸುಲಭವಾಗುವ ರೀತಿಯಲ್ಲಿ ಇದನ್ನು ಒದಗಿಸಲಾಗಿದೆ. 

ನಿಮ್ಮ ಕುಟುಂಬಕ್ಕೆ ಯಾವ YouTube ಅನುಭವ ಅತ್ಯುತ್ತಮವಾಗಿದೆ ಎಂಬುದನ್ನು ನೀವು ನಿರ್ಧರಿಸಬಹುದು. YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಮಗು ಪ್ರಾರಂಭಿಸುವ ಮೊದಲು, ಕೆಲವೊಂದು ಅಗತ್ಯ ವಿವರಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂಬುದು ನಮಗೆ ಖಚಿತವಾಗಬೇಕು:

YouTube Kids ಪ್ರೊಫೈಲ್‌ಗಳು

ಸೈನ್ ಇನ್ ಮಾಡಿರುವ ಪೋಷಕರು ತಮ್ಮ ಮನೆಯಲ್ಲಿರುವ ಪ್ರತಿ ಮಗುವಿಗಾಗಿ ಪ್ರತ್ಯೇಕ ಪ್ರೊಫೈಲ್ ಅನ್ನು ರಚಿಸಲು YouTube Kids ಅನುಮತಿಸುತ್ತದೆ. ಪ್ರತಿಯೊಂದು ಪ್ರೊಫೈಲ್‌ನಲ್ಲಿ ಪ್ರತ್ಯೇಕ ವೀಕ್ಷಣೆಯ ಆದ್ಯತೆಗಳು ಮತ್ತು ಶಿಫಾರಸುಗಳಿರುತ್ತವೆ, ಇದು ಅನೇಕ ಮಕ್ಕಳಿಗೆ YouTube Kids ಆ್ಯಪ್‌ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಸುತ್ತದೆ.

ಪ್ರೊಫೈಲ್‌ಗಳು ಈ ಸಾಧನಗಳಲ್ಲಿ ಲಭ್ಯವಿರುತ್ತವೆ:

  • ಪೋಷಕರು ಸೈನ್ ಇನ್ ಮಾಡಿರುವ ಮತ್ತು
  • YouTube Kids ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿರುವ ಸಾಧನಗಳು.

ನೀವು ಗರಿಷ್ಠ ಎಂಟು ಪ್ರೊಫೈಲ್‌ಗಳನ್ನು ಹೊಂದಬಹುದು. ಪ್ರೊಫೈಲ್ ಅನ್ನು ರಚಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಗಮನಿಸಿ: ನೀವು ಸೈನ್ ಇನ್ ಮಾಡದೆ ಸಹ YouTube Kids ಅನ್ನು ಬಳಸಬಹುದು.
YouTube Kids ನಲ್ಲಿ ಲಭ್ಯವಿರುವ ವೀಡಿಯೊಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

YouTube Kids ನಲ್ಲಿ ಎಲ್ಲಾ ವೀಡಿಯೊಗಳನ್ನು ಎಕ್ಸ್‌ಪ್ಲೋರ್ ಮಾಡಲು ನಿಮ್ಮ ಮಗುವಿಗೆ ಅನುಮತಿಸುವುದು ಒಂದು ಆಯ್ಕೆಯಾಗಿದೆ. ಪೋಷಕರು ವಯಸ್ಸನ್ನು ಆಧರಿಸಿದ 3 ಕಂಟೆಂಟ್ ಸೆಟ್ಟಿಂಗ್‌ಗಳ ನಡುವೆ ಆಯ್ಕೆಮಾಡಬಹುದು: 

  • ಪ್ರಿ-ಸ್ಕೂಲ್ (4 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು)
  • ಎಳೆಯರಿಗೆ (5—8 ವರ್ಷ ವಯಸ್ಸಿನ ಮಕ್ಕಳು)
  • ಬೆಳೆದ ಮಕ್ಕಳಿಗೆ (9—12 ವರ್ಷ ವಯಸ್ಸಿನ ಮಕ್ಕಳು)

ನಮ್ಮ ಸ್ವಯಂಚಾಲಿತ ಸಿಸ್ಟಂಗಳು YouTube ನಲ್ಲಿನ ಹೆಚ್ಚಿನ ಸಂಖ್ಯೆಯ ವೀಡಿಯೊಗಳಿಂದ ಕಂಟೆಂಟ್ ಅನ್ನು ಆಯ್ಕೆಮಾಡುತ್ತವೆ. ಮಕ್ಕಳಿಗೆ ಸೂಕ್ತವಾಗಿರದ ಕಂಟೆಂಟ್ ಅನ್ನು ಹೊರಗಿರಿಸಲು ನಾವು ಶ್ರಮವಹಿಸಿ ಕೆಲಸ ಮಾಡುತ್ತೇವೆ. ಆದರೆ ನಾವು ಎಲ್ಲಾ ವೀಡಿಯೊಗಳನ್ನು ಹಸ್ತಚಾಲಿತವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಮತ್ತು ಯಾವುದೇ ಸ್ವಯಂಚಾಲಿತ ಸಿಸ್ಟಂ ಪರಿಪೂರ್ಣವಾಗಿರುವುದಿಲ್ಲ. ಅನುಚಿತ ವಿಷಯವೇನಾದರೂ ನಿಮಗೆ ಕಂಡುಬಂದರೆ, ನೀವು ಅದನ್ನು ನಿರ್ಬಂಧಿಸಬಹುದು ಅಥವಾ ತ್ವರಿತ ಪರಿಶೀಲನೆಗಾಗಿ ಅದನ್ನು ವರದಿ ಮಾಡಬಹುದು.

ನಿಮ್ಮ ಮಗುವಿಗೆ ಆ್ಯಕ್ಸೆಸ್ ಇರುವ ಕಂಟೆಂಟ್ ಅನ್ನು ನೀವೇ ಆರಿಸುವುದು ನಿಮಗೆ ಇರುವ ಇನ್ನೊಂದು ಆಯ್ಕೆಯಾಗಿದೆ (ಕಂಟೆಂಟ್ ಅನ್ನು ನೀವೇ ಅನುಮೋದಿಸಿ). ನೀವು ಈ ಆಯ್ಕೆಯನ್ನು ಆರಿಸಿದರೆ, ನಿಮ್ಮ ಮಗುವಿಗೆ ಹುಡುಕಾಟ ನಡೆಸಲು ಸಾಧ್ಯವಾಗುವುದಿಲ್ಲ. ಈ ಆಯ್ಕೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಪೋಷಕರ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳಿಗೆ YouTube Kids ಗೈಡ್ ಅನ್ನು ನೋಡಿ.

ನಿಮ್ಮ ಮಗುವಿಗೆ ಉತ್ತಮವೆಂದು ನಿಮಗೆ ಅನಿಸುವ ಆಯ್ಕೆಯನ್ನು ಆರಿಸಿಕೊಳ್ಳಿ. ನೀವು ಈ ಸೆಟ್ಟಿಂಗ್‌ಗಳನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು. ನಿಮ್ಮ ಮಗುವಿನ ಅನುಭವವನ್ನು ಮತ್ತಷ್ಟು ನಿಯಂತ್ರಿಸಲು ಬಳಸಬಹುದಾದ ವಿವಿಧ ಟೂಲ್‌ಗಳು ಮತ್ತು ಸೆಟ್ಟಿಂಗ್‌ಗಳನ್ನು ಸಹ ನಾವು ಒದಗಿಸುತ್ತೇವೆ. ಅವುಗಳ ಕುರಿತು ಈ ಕೆಳಗೆ ವಿವರಿಸಲಾಗಿದೆ. ಪೋಷಕರ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
 

YouTube Kids ನಲ್ಲಿ ವೀಡಿಯೊಗಳನ್ನು ಮಗು ಹೇಗೆ ಅನ್ವೇಷಿಸುತ್ತದೆ?

YouTube Kids ನಲ್ಲಿನ ವೀಡಿಯೊಗಳನ್ನು ಹಲವಾರು ರೀತಿಯಲ್ಲಿ ಅನ್ವೇಷಿಸಬಹುದಾಗಿದೆ:

ಹುಡುಕಾಟ

ನೀವು ಹುಡುಕಾಟವನ್ನು ಆನ್ ಮಾಡಿದಾಗ, YouTube Kids ನಲ್ಲಿ ಲಭ್ಯವಿರುವ ಲಕ್ಷಾಂತರ ವೀಡಿಯೊಗಳನ್ನು ಹುಡುಕಲು ಮತ್ತು ವೀಕ್ಷಿಸಲು ನಿಮ್ಮ ಮಗುವಿಗೆ ನೀವು ಅನುಮತಿಸುತ್ತೀರಿ. ಸಂಬಂಧಿತ ಮತ್ತು ಸೂಕ್ತ ಫಲಿತಾಂಶಗಳನ್ನು ನೀಡಲು ವಿನ್ಯಾಸಗೊಳಿಸಲಾದ ವಿಶೇಷ ಅಲ್ಗಾರಿದಮ್‌ನಿಂದ ಈ ವೀಡಿಯೊಗಳನ್ನು ಆಯ್ಕೆಮಾಡಲಾಗುತ್ತದೆ.
ಆದರೆ ಹುಡುಕಾಟದ ಮೂಲಕ ಲಭ್ಯವಿರುವ ವೀಡಿಯೊಗಳು ಮಾನವ ರಿವ್ಯೂಗೆ ಒಳಪಟ್ಟಿರುವುದಿಲ್ಲ. YouTube ಬೃಹತ್ ವಿಸ್ತಾರದ, ಆಳದ ಮತ್ತು ಪ್ರಮಾಣದ ಕಂಟೆಂಟ್‌ ಅನ್ನು ನಿರ್ವಹಿಸುತ್ತದೆ. ಹೀಗಾಗಿ, ತಪ್ಪಾಗದಂತೆ ನೋಡಿಕೊಳ್ಳಲು ನಾವು ಶ್ರಮಿಸುತ್ತಿರುವಾಗ, ನಿಮ್ಮ ಮಗುವು ನೋಡಬಾರದೆಂದು ನೀವು ಬಯಸುವ ಕಂಟೆಂಟ್ ಅವರಿಗೆ ಸಿಗಬಹುದಾದ ಸಾಧ್ಯತೆಗಳು ಇರುತ್ತವೆ.
ನಿಮ್ಮ ಮಗುವಿನ ಅನುಭವವನ್ನು ಹೆಚ್ಚು ಸೀಮಿತಗೊಳಿಸಿದ ಕಂಟೆಂಟ್‌ಗೆ ಮಿತಿಯಾಗಿಸಲು ನೀವು ಬಯಸಿದರೆ, ಪೋಷಕರ ಸೆಟ್ಟಿಂಗ್‌ಗಳನ್ನು ಬಳಸಿಕೊಂಡು ನೀವು ಹುಡುಕಾಟ ಫೀಚರ್ ಅನ್ನು ಆಫ್ ಮಾಡಬಹುದು. ಹುಡುಕಾಟವನ್ನು ಆಫ್ ಮಾಡುವುದರಿಂದ, ನಿಮ್ಮ ಮಗು YouTube Kids ಪರಿಶೀಲಿಸಿರುವ ಚಾನಲ್‌ಗಳಿಗೆ ಮಾತ್ರ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ. ನಿಮ್ಮ ಆ್ಯಪ್‌ನಲ್ಲಿನ ಹುಡುಕಾಟದ ಸ್ಥಿತಿಯನ್ನು ಲೆಕ್ಕಿಸದೆ, ನಿಮ್ಮ ಮಗುವು ನೋಡಬಾರದೆಂದು ನೀವು ಬಯಸುವ ಕಂಟೆಂಟ್ ಅವರಿಗೆ ಸಿಗಬಹುದಾದ ಸಾಧ್ಯತೆ ಯಾವಾಗಲೂ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಗಮನಿಸಿ: ನೀವು ಹುಡುಕಾಟ ಫೀಚರ್ ಅನ್ನು ಆಫ್ ಮಾಡಿದಾಗ, ನಿಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ತೆರವುಗೊಳಿಸಲಾಗುತ್ತದೆ, ಜೊತೆಗೆ ಶಿಫಾರಸು ಮಾಡಿರುವ ಮತ್ತು ಇದನ್ನು ಮತ್ತೊಮ್ಮೆ ವೀಕ್ಷಿಸಿ ಎಂಬ ವೀಡಿಯೊಗಳನ್ನು ಸಹ ತೆರವುಗೊಳಿಸಲಾಗುತ್ತದೆ.
ಹುಡುಕಾಟವನ್ನು ಆಫ್ ಮಾಡುವುದರ ಜೊತೆಗೆ, ನಿಮ್ಮ ಮಗುವಿಗೆ ಸೂಕ್ತವಾಗಿರುವ ಅನುಭವವನ್ನು ಆಯ್ಕೆಮಾಡುವುದಕ್ಕಾಗಿ ನಿಮಗೆ ಸಹಾಯ ಮಾಡಲು YouTube Kids ಪೋಷಕರ ಇನ್ನಷ್ಟು ನಿಯಂತ್ರಣಗಳನ್ನು ನೀಡುತ್ತದೆ. ಪೋಷಕರ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಹೋಮ್ ಸ್ಕ್ರೀನ್‌ನಲ್ಲಿರುವ ವೀಡಿಯೊಗಳು

ಹೋಮ್ ಸ್ಕ್ರೀನ್‌ನಲ್ಲಿನ ವೀಡಿಯೊಗಳನ್ನು “ಶೋಗಳು” ಮತ್ತು “ಸಂಗೀತ” ಎಂಬಂತೆ ವರ್ಗಗಳಾಗಿ ವಿಂಗಡಿಸಲಾಗಿರುತ್ತದೆ. ನಿಯತಕಾಲಿಕವಾಗಿ, ರೀಡಿಂಗ್ ಮಂತ್ ಆಚರಿಸಲು YouTube Kids “ಓದುವಿಕೆ” ಎಂಬಂತಹ ತಾತ್ಕಾಲಿಕ ವರ್ಗಗಳನ್ನು ಪರಿಚಯಿಸಬಹುದು. ವಿಶೇಷವಾಗಿ ತರಬೇತಿ ಪಡೆದ ಅಲ್ಗಾರಿದಮ್ ಮತ್ತು ಒಂದಿಷ್ಟು ಮಾನವ ರಿವ್ಯೂ ಬಳಸಿಕೊಂಡು ಆ್ಯಪ್ ಈ ವೀಡಿಯೊಗಳನ್ನು ಆಯ್ಕೆ ಮಾಡುತ್ತದೆ. ನಿಮ್ಮ ಮಗು ಏನನ್ನು ವೀಕ್ಷಿಸಿದೆ ಅಥವಾ ಹುಡುಕಿದೆ ಎಂಬುದರ ಆಧಾರದ ಮೇಲೆ ಈ ವೀಡಿಯೊಗಳನ್ನು ಶ್ರೇಣೀಕರಿಸಲಾಗಬಹುದು. ಈ ವೀಡಿಯೊಗಳು YouTube Kids ನಲ್ಲಿ ಲಭ್ಯವಿರುವ ಲಕ್ಷಾಂತರ ವೀಡಿಯೊಗಳ ಒಂದು ಉಪವಿಭಾಗವನ್ನು ಮಾತ್ರ ಪ್ರತಿನಿಧಿಸುತ್ತವೆ.
ನೀವು “ಅನುಮೋದಿತ ಕಂಟೆಂಟ್ ಮಾತ್ರ” ಸೆಟ್ಟಿಂಗ್ ಅನ್ನು ಆಯ್ಕೆಮಾಡಿದರೆ, ನಿಮ್ಮ ಮಗುವಿನ ಹೋಮ್‌ ಸ್ಕ್ರೀನ್‌ನಲ್ಲಿ ಒಂದು ವರ್ಗ ಇರುತ್ತದೆ. ಈ ವರ್ಗದ ಹೆಸರು “ನಿಮಗಾಗಿ ಅನುಮೋದಿಸಿರುವುದು”, ಈ ವರ್ಗವು ನೀವು ಆಯ್ಕೆಮಾಡಿದ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ.

ಶಿಫಾರಸು ಮಾಡಿರುವ ವೀಡಿಯೊಗಳು

ಶಿಫಾರಸು ಮಾಡಿರುವ ವೀಡಿಯೊಗಳನ್ನು ನಮ್ಮ ಅಲ್ಗಾರಿದಮ್ ಆಯ್ಕೆ ಮಾಡಿರುತ್ತದೆ ಮತ್ತು ಅವುಗಳು ಎಲ್ಲಾ ಸಮಯದಲ್ಲೂ ಮಾನವ ರಿವ್ಯೂಗೆ ಒಳಪಟ್ಟಿರದೇ ಇರಬಹುದು. ಹುಡುಕಾಟವು ಆನ್ ಅಥವಾ ಆಫ್ ಆಗಿರುವಾಗ ಶಿಫಾರಸು ಮಾಡಿರುವ ವೀಡಿಯೊಗಳನ್ನು ತೋರಿಸಲಾಗುತ್ತದೆ ಮತ್ತು YouTube Kids ನಲ್ಲಿ ಅನೇಕ ವೀಡಿಯೊಗಳನ್ನು ವೀಕ್ಷಿಸಿದ ನಂತರ ಹೋಮ್ ಸ್ಕ್ರೀನ್‌ನಲ್ಲಿ ಹೆಚ್ಚಿನ ವರ್ಗವನ್ನಾಗಿ ಪ್ರಸ್ತುತಪಡಿಸಲಾಗುತ್ತದೆ. ಶಿಫಾರಸು ಮಾಡಿರುವ ವೀಡಿಯೊಗಳು ಹೋಮ್ ಸ್ಕ್ರೀನ್‌ನಲ್ಲಿನ ನಾಲ್ಕು ವಿಭಾಗಗಳ ವೀಡಿಯೊಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ನಿಮ್ಮ ಮಗು ಹೋಮ್ ಸ್ಕ್ರೀನ್‌ನಲ್ಲಿನ ವೀಡಿಯೊಗಳನ್ನು ವೀಕ್ಷಿಸಿದ ನಂತರ ಅಥವಾ ಅವರು ವೀಡಿಯೊವನ್ನು ಹುಡುಕಿದ ನಂತರ ವೀಕ್ಷಿಸಲು ಸಲಹೆಗಳಾಗಿ ಕಾಣಿಸಿಕೊಳ್ಳಬಹುದು. ಶಿಫಾರಸು ಮಾಡಿರುವ ವೀಡಿಯೊಗಳು ಆ್ಯಪ್‌ನಲ್ಲಿ ಯಾವೆಲ್ಲಾ ವೀಡಿಯೊಗಳನ್ನು ವೀಕ್ಷಿಸಲಾಗಿದೆ ಅಥವಾ ಹುಡುಕಲಾಗಿದೆ ಎಂಬುದನ್ನು ಆಧರಿಸಿರುತ್ತವೆ ಮತ್ತು ಯಾವಾಗಲೂ YouTube Kids ನಲ್ಲಿ ಲಭ್ಯವಿರುವ ವೀಡಿಯೊಗಳ ಸಂಪೂರ್ಣ ಗುಂಪಿನಿಂದ ಪಡೆದಿರುವ ವೀಡಿಯೊಗಳಾಗಿರುತ್ತವೆ.
ಪೋಷಕರ ಸೆಟ್ಟಿಂಗ್‌ಗಳಲ್ಲಿ ಆ್ಯಪ್‌ನ ಇತಿಹಾಸವನ್ನು ತೆರವುಗೊಳಿಸುವ ಮೂಲಕ ಶಿಫಾರಸು ಮಾಡಿರುವ ವೀಡಿಯೊಗಳನ್ನು ನೀವು ರೀಸೆಟ್ ಮಾಡಬಹುದು. ನೀವು ಹುಡುಕಾಟವನ್ನು ಆಫ್ ಮಾಡಿದಾಗ, ಶಿಫಾರಸು ಮಾಡಿರುವ ವೀಡಿಯೊಗಳನ್ನು, ಹಾಗೆಯೇ ನಿಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ಸಹ ತೆರವುಗೊಳಿಸಲಾಗುತ್ತದೆ ಎಂಬುದನ್ನು ಗಮನಿಸಿ.
ಇತಿಹಾಸವನ್ನು ವಿರಾಮಗೊಳಿಸಿ ಫೀಚರ್ ಆನ್ ಆಗಿದ್ದಾಗ, ನೀವು ವೀಕ್ಷಿಸುವ ಹೊಸ ವೀಡಿಯೊಗಳನ್ನು ಅಥವಾ ನೀವು ಹುಡುಕುವ ಪದಗಳನ್ನು ನಿಮ್ಮ ಶಿಫಾರಸು ಮಾಡಿರುವ ವೀಡಿಯೊಗಳನ್ನು ಪ್ರಭಾವಿಸಲು ಬಳಸುವುದನ್ನು ಆ್ಯಪ್ ನಿಲ್ಲಿಸುತ್ತದೆ. ಪೋಷಕರ ಸೆಟ್ಟಿಂಗ್‌ಗಳಲ್ಲಿ, ಇತಿಹಾಸವನ್ನು ವಿರಾಮಗೊಳಿಸಿ ಫೀಚರ್ ಅನ್ನು ನೀವು ಆನ್ ಅಥವಾ ಆಫ್ ಮಾಡಬಹುದು.
ನಿಮ್ಮ ಮಗುವಿಗಾಗಿ ನೀವು ಪ್ರೊಫೈಲ್ ಅನ್ನು ರಚಿಸಬಹುದು, ಆದ್ದರಿಂದ ಅನೇಕ ಮಕ್ಕಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಶಿಫಾರಸುಗಳನ್ನು ಹೊಂದಬಹುದು.
ನಿಮ್ಮ ಮಗುವಿನ ಪ್ರೊಫೈಲ್ ಅನ್ನು 'ಅನುಮೋದಿತ ಕಂಟೆಂಟ್ ಮಾತ್ರ' ಎಂಬ ಸೆಟ್ಟಿಂಗ್‌ಗೆ ಸೆಟ್ ಮಾಡಿದ್ದರೆ, ನಿಮ್ಮ ಮಗುವಿಗಾಗಿ ನೀವು ಅನುಮೋದಿಸಿದ ಕಂಟೆಂಟ್‌ನಿಂದ ಮಾತ್ರ ಶಿಫಾರಸು ಮಾಡಿರುವ ವೀಡಿಯೊಗಳನ್ನು ಆಯ್ಕೆಮಾಡಲಾಗುತ್ತದೆ. ಶಿಫಾರಸು ಮಾಡಿರುವ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದನ್ನು ಮತ್ತೊಮ್ಮೆ ವೀಕ್ಷಿಸಿ

ಇದನ್ನು ಮತ್ತೊಮ್ಮೆ ವೀಕ್ಷಿಸಿ ಫೀಚರ್, ಆ್ಯಪ್‌ನಲ್ಲಿ ಈ ಹಿಂದೆ ವೀಕ್ಷಿಸಿದ ವೀಡಿಯೊಗಳಿಂದ ಆಯ್ಕೆಮಾಡಲು ನಿಮ್ಮ ಮಗುವಿಗೆ ಅನುಮತಿಸುತ್ತದೆ.
ಪೋಷಕರ ಸೆಟ್ಟಿಂಗ್‌ಗಳಲ್ಲಿ ಆ್ಯಪ್‌ನ ಇತಿಹಾಸವನ್ನು ತೆರವುಗೊಳಿಸುವ ಮೂಲಕ ಇದನ್ನು ಮತ್ತೊಮ್ಮೆ ವೀಕ್ಷಿಸಿ ವೀಡಿಯೊಗಳನ್ನು ನೀವು ರೀಸೆಟ್ ಮಾಡಬಹುದು. ನೀವು ಹುಡುಕಾಟವನ್ನು ಆಫ್ ಮಾಡಿದಾಗ, ನಿಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸದ ಜೊತೆಗೆ, ಇದನ್ನು ಮತ್ತೊಮ್ಮೆ ವೀಕ್ಷಿಸಿ ವೀಡಿಯೊಗಳನ್ನು ಸಹ ತೆರವುಗೊಳಿಸಲಾಗುತ್ತದೆ ಎಂಬುದನ್ನು ಗಮನಿಸಿ.
ಇತಿಹಾಸವನ್ನು ವಿರಾಮಗೊಳಿಸಿ ಫೀಚರ್ ಆನ್ ಆಗಿದ್ದಾಗ, ನೀವು ವೀಕ್ಷಿಸುವ ಹೊಸ ವೀಡಿಯೊಗಳನ್ನು ಅಥವಾ ನೀವು ಹುಡುಕುವ ಪದಗಳನ್ನು ನಿಮ್ಮ ಇದನ್ನು ಮತ್ತೊಮ್ಮೆ ವೀಕ್ಷಿಸಿ ವೀಡಿಯೊಗಳನ್ನು ಪ್ರಭಾವಿಸಲು ಬಳಸುವುದನ್ನು ಆ್ಯಪ್ ನಿಲ್ಲಿಸುತ್ತದೆ. ಪೋಷಕರ ಸೆಟ್ಟಿಂಗ್‌ಗಳಲ್ಲಿ, ಇತಿಹಾಸವನ್ನು ವಿರಾಮಗೊಳಿಸಿ ಫೀಚರ್ ಅನ್ನು ನೀವು ಆನ್ ಅಥವಾ ಆಫ್ ಮಾಡಬಹುದು.
ನಿಮ್ಮ ಮಗುವಿಗಾಗಿ ನೀವು ಪ್ರೊಫೈಲ್ ಅನ್ನು ರಚಿಸಬಹುದು, ಆದ್ದರಿಂದ ಅನೇಕ ಮಕ್ಕಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಶಿಫಾರಸುಗಳನ್ನು ಹೊಂದಬಹುದು.

YouTube Kids ನಲ್ಲಿ ಯಾವ ಪೋಷಕರ ನಿಯಂತ್ರಣಗಳು ಲಭ್ಯವಿವೆ?

ನಿಮ್ಮ ಮಗುವಿಗೆ ಸೂಕ್ತವಾದ YouTube Kids ಅನುಭವವನ್ನು ರಚಿಸಲು ನಿಮಗೆ ಸಹಾಯ ಮಾಡುವ ಫೀಚರ್‌ಗಳನ್ನು ನಾವು ಸೇರಿಸಿದ್ದೇವೆ. ಉದಾಹರಣೆಗೆ, ಮಗು ಎಷ್ಟು ಸಮಯವನ್ನು ಆ್ಯಪ್‌ನಲ್ಲಿ ವ್ಯಯಿಸಬೇಕು ಎಂಬುದನ್ನು ಮಿತಿಗೊಳಿಸಲು ನೀವು ಟೈಮರ್ ಅನ್ನು ಸೆಟ್ ಮಾಡಬಹುದು. ಇತರ ನಿಯಂತ್ರಣಗಳಲ್ಲಿ ಇವುಗಳು ಸೇರಿವೆ:

ಪೋಷಕರ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

YouTube Kids ನಲ್ಲಿ ಯಾವ ರೀತಿಯ ಜಾಹೀರಾತುಗಳು ಅಥವಾ ಪ್ರಚಾರಗಳು ಗೋಚರಿಸುತ್ತವೆ?

ನಾವು ಆ್ಯಪ್ ಅನ್ನು ಶುಲ್ಕವಿಲ್ಲದೇ ಒದಗಿಸಲು ಸಾಧ್ಯವಾಗಿಸುವುದಕ್ಕಾಗಿ, ಆ್ಯಪ್‌ನಲ್ಲಿ ಸೀಮಿತ ಪಾವತಿಸಿದ ಆ್ಯಡ್‌ಗಳನ್ನು (“ಪಾವತಿಸಿದ ಆ್ಯಡ್‌ಗಳು”) ಅನುಮತಿಸುತ್ತೇವೆ. ನಿಮ್ಮ ಮಗು ಆ್ಯಪ್‌ನಲ್ಲಿ ವೀಡಿಯೊವನ್ನು ಪ್ಲೇ ಮಾಡಿದಾಗ, “ಆ್ಯಡ್‌” ಎಂದು ಗುರುತಿಸಿರುವ ಮತ್ತು ಆ್ಯಡ್ ಇಂಟ್ರೊದಿಂದ ಆರಂಭವಾಗುವ ಪಾವತಿಸಿದ ಆ್ಯಡ್‌ ಅವರಿಗೆ ಕಾಣಿಸಬಹುದು. ಈ ಪಾವತಿಸಿದ ಆ್ಯಡ್‌ಗಳು ನಮ್ಮ ಜಾಹೀರಾತು ನೀತಿಗಳನ್ನು ಅನುಸರಿಸಬೇಕು. ಈ ನೀತಿಗಳು ಕೆಲವು ವರ್ಗಗಳನ್ನು ಹೊರಗಿಡುತ್ತವೆ. ಉದಾಹರಣೆಗೆ, ಆಹಾರ ಮತ್ತು ಪಾನೀಯಗಳಂತಹ ಕೆಲವು ವರ್ಗಗಳನ್ನು ಹೊರಗಿಡುತ್ತವೆ. YouTube Kids ನಲ್ಲಿ ಜಾಹೀರಾತುಗಳು ಮತ್ತು ನಮ್ಮ ಜಾಹೀರಾತು ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ಬಳಕೆದಾರರು YouTube ಗೆ ಅಪ್‌ಲೋಡ್ ಮಾಡಿದ ವೀಡಿಯೊಗಳು ಪಾವತಿಸಿದ ಆ್ಯಡ್‌ಗಳಲ್ಲ, ಆದ್ದರಿಂದ ಇವುಗಳನ್ನು ಆ್ಯಡ್‌ ಎಂಬುದಾಗಿ ಗುರುತಿಸಲಾಗಿರುವುದಿಲ್ಲ ಮತ್ತು ಇವು ನಮ್ಮ ಜಾಹೀರಾತು ನೀತಿಗಳಿಗೆ ಒಳಪಟ್ಟಿರುವುದಿಲ್ಲ. ಆ್ಯಪ್‌ನಲ್ಲಿ ಆ್ಯಡ್‌ಗಳನ್ನು ಖರೀದಿಸಿರಬಹುದಾದ ಕಂಪನಿಗಳ ಕುರಿತಾದ ಅಥವಾ ಆ ಕಂಪನಿಗಳು ಹಂಚಿಕೊಳ್ಳುವ ಕಂಟೆಂಟ್ ಅನ್ನು ಸಹ ಇದು ಒಳಗೊಂಡಿರಬಹುದು. ಉದಾಹರಣೆಗೆ, ರೈಲುಗಳ ಕುರಿತು ನಡೆಸಿದ ಹುಡುಕಾಟದಲ್ಲಿ ಬಳಕೆದಾರರು ಅಥವಾ ಆಟಿಕೆಯ ರೈಲುಗಳ ಕಂಪನಿಯು ಅಪ್‌ಲೋಡ್ ಮಾಡಿದ ರೈಲಿನ ಕಾರ್ಟೂನ್‌ಗಳು, ನಿಜವಾದ ರೈಲುಗಳನ್ನು ಒಳಗೊಂಡ ಹಾಡುಗಳು ಮತ್ತು ವೀಡಿಯೊಗಳ ಫಲಿತಾಂಶಗಳು ಸೇರಿರಬಹುದು. ಈ ಯಾವುದನ್ನೂ ನಾವು ಪಾವತಿಸಿದ ಆ್ಯಡ್‌ಗಳೆಂದು ಪರಿಗಣಿಸುವುದಿಲ್ಲ, ಏಕೆಂದರೆ ಇವು YouTube Kids ಜಾಹೀರಾತು ಕಾರ್ಯಕ್ರಮದ ಭಾಗವಾಗಿರುವುದಿಲ್ಲ. ಇದೇ ರೀತಿ, ಪಾವತಿಸಿದ ಆ್ಯಡ್‌ಗಳನ್ನು ಪ್ರದರ್ಶಿಸಲು ನಾವು ಚಾಕೊಲೇಟ್ ತಯಾರಕರನ್ನು ಅನುಮತಿಸುವುದಿಲ್ಲವಾದರೂ, ಚಾಕೊಲೇಟ್ ಕುರಿತು ನಡೆಸಿದ ಹುಡುಕಾಟವು ಚಾಕೊಲೇಟ್ ಫಜ್ ಮಾಡುವ ಬಗ್ಗೆ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊವನ್ನು ತೋರಿಸಬಹುದು. YouTube Kids ನಲ್ಲಿನ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

ಪಾವತಿಸಿದ ಆ್ಯಡ್‌‌ಗಳಿಲ್ಲದೆ ನಿಮ್ಮ ಮಗುವಿನೊಂದಿಗೆ ನೀವು ವೀಡಿಯೊಗಳನ್ನು ವೀಕ್ಷಿಸಲು ಬಯಸುವಿರಾದರೆ, YouTube Premium ಜೊತೆಗೆ YouTube Kids ಆ್ಯಪ್‌ ಬಳಸಿ ನೋಡಿ. ಇನ್ನಷ್ಟು ತಿಳಿಯಿರಿ.

YouTube Kids ನಲ್ಲಿ ಮಾಹಿತಿ ಮತ್ತು ವೈಯಕ್ತಿಕ ಡೇಟಾದ ಸಂಗ್ರಹಣೆ ಹಾಗೂ ಬಳಕೆ

ನಮ್ಮ ಡೇಟಾ ನಿರ್ವಹಣಾ ಅಭ್ಯಾಸಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ, ನೀವು YouTube Kids ಗೌಪ್ಯತೆ ಸೂಚನೆಯನ್ನು ವೀಕ್ಷಿಸಬಹುದು. ನೀವು ಈ ಸೂಚನೆಯನ್ನು kids.youtube.com/t/privacynotice ನಲ್ಲಿ ಅಥವಾ ಆ್ಯಪ್‌ನ ಸೆಟ್ಟಿಂಗ್‌ಗಳಲ್ಲಿನ ಗೌಪ್ಯತೆ ವಿಭಾಗದ ಅಡಿಯಲ್ಲಿ ನೋಡಬಹುದು.
ನಮ್ಮ ಆ್ಯಪ್‌ನ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಆ್ಯಪ್ ಅನ್ನು ಬಳಸಲಿರುವ ಮಗುವಿನ ಪೋಷಕರು ಅಥವಾ ಕಾನೂನಾತ್ಮಕ ಪೋಷಕರು, ಮಗು ಆ್ಯಪ್‌ನ ಬಳಕೆಯನ್ನು ಆರಂಭಿಸುವ ಮೊದಲು ಈ ಸೂಚನೆಯನ್ನು ಓದುವುದು ಮುಖ್ಯ. ನೀವು YouTube Kids ಅನ್ನು ಬಳಸಲಿರುವ ಮಗುವಿನ ಪೋಷಕರು ಅಥವಾ ಕಾನೂನಾತ್ಮಕ ಪೋಷಕರಾಗಿರದಿದ್ದರೆ, ಅಥವಾ ನೀವು ಪೋಷಕರು ಅಥವಾ ಕಾನೂನಾತ್ಮಕ ಪೋಷಕರಾಗಿದ್ದು ನಮ್ಮ ಗೌಪ್ಯತೆಯ ರೂಢಿಗಳನ್ನು ನೀವು ಒಪ್ಪುವುದಿಲ್ಲ ಎಂದಾದರೆ, ಆ್ಯಪ್ ಅನ್ನು ಬಳಸಲು ಮಗುವಿಗೆ ಅನುಮತಿಸಬೇಡಿ.
ಈ ಆ್ಯಪ್ ಅನ್ನು Google LLC ನಿರ್ವಹಿಸುತ್ತದೆ, ಅದರ ವಿಳಾಸ 1600 Amphitheatre Pkwy, Mountain View, CA 94043, United States.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14174593455045399682
true
ಸಹಾಯ ಕೇಂದ್ರವನ್ನು ಹುಡುಕಿ
true
true
true
false
false