ಇತರ ಕಾನೂನಾತ್ಮಕ ದೂರುಗಳು

ಸಂಬಂಧಿಸಿದ ಪಾರ್ಟಿ ಅಥವಾ ಅವರ ಅಧಿಕೃತ ಕಾನೂನು ಪ್ರತಿನಿಧಿಯು ನಮ್ಮನ್ನು ಸಂಪರ್ಕಿಸಿದಾಗ ಮಾತ್ರ YouTube ಕಾನೂನಾತ್ಮಕ ದೂರುಗಳನ್ನು ಪರಿಗಣಿಸುತ್ತದೆ.

ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಯಾರಾದರೂ ಪೋಸ್ಟ್ ಮಾಡಿದರೆ ಅಥವಾ ನೀವು ಖಾಸಗಿ ಅಥವಾ ಸೂಕ್ಷ್ಮ ಸನ್ನಿವೇಶಗಳಲ್ಲಿರುವಾಗ ಸೇರಿದಂತೆ, ನಿಮಗೆ ಅರಿವಿಲ್ಲದಂತೆ ನಿಮ್ಮ ವೀಡಿಯೊವನ್ನು ಯಾರಾದರೂ ಅಪ್‌ಲೋಡ್ ಮಾಡಿದರೆ,ಕಂಟೆಂಟ್ ಅನ್ನು ತೆಗೆದುಹಾಕಲು, ಅಪ್‌ಲೋಡ್ ಮಾಡಿದವರ ಬಳಿ ಹೇಳಿ. ಅಪ್‌ಲೋಡ್ ಮಾಡಿದವರು ಒಪ್ಪದಿದ್ದರೆ ಅಥವಾ ಅವರನ್ನು ಸಂಪರ್ಕಿಸಲು ನಿಮಗೆ ಹಿತವೆನಿಸದಿದ್ದರೆ, YouTube ನ ಗೌಪ್ಯತೆ ಮಾರ್ಗಸೂಚಿಗಳು ಪುಟದಲ್ಲಿ ಪ್ರಕ್ರಿಯೆಯ ಮೂಲಕ ದೂರನ್ನು ಸಲ್ಲಿಸಿ. ವೈಯಕ್ತಿಕ ಮಾಹಿತಿಯು ನಿಮ್ಮ ಚಿತ್ರ, ಹೆಸರು, ರಾಷ್ಟ್ರೀಯ ಗುರುತಿನ ಸಂಖ್ಯೆ, ಬ್ಯಾಂಕ್ ಖಾತೆಯ ಸಂಖ್ಯೆ, ಸಂಪರ್ಕದ ಮಾಹಿತಿ ಅಥವಾ ಅನನ್ಯವಾಗಿ ಗುರುತಿಸಬಹುದಾದ ಇತರ ಮಾಹಿತಿಯನ್ನು ಒಳಗೊಂಡಿರಬಹುದು. ಗೌಪ್ಯತೆ ಉಲ್ಲಂಘನೆಯ ಕಾರಣದಿಂದ ಕಂಟೆಂಟ್ ತೆಗದುಹಾಕುವಿಕೆಗೆ ಇರುವ ಮಾನದಂಡದ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ದೂರು ಗೌಪ್ಯತೆಯ ಕುರಿತು ಅಲ್ಲದಿದ್ದರೆ, ಮೆನುವಿನಿಂದ ನಿಮ್ಮ ವಿವಾದದ ದೇಶ/ಪ್ರದೇಶವನ್ನು ಆಯ್ಕೆ ಮಾಡಿ ಮತ್ತು ನಿರ್ದೇಶನಗಳನ್ನು ಅನುಸರಿಸಿ.

ಫಾರ್ಮ್ ಭರ್ತಿ ಮಾಡಿ.

ಮೇಲಿನ ಮೆನುವಿನಲ್ಲಿ ನಿಮ್ಮ ದೇಶ/ಪ್ರದೇಶ ಕಂಡುಬರದಿದ್ದರೆ

YouTube.com, ಯು.ಎಸ್ ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿದೆ. ಹಾಗಾಗಿ, ನೀವು ಹಕ್ಕುಗಳನ್ನು ಕ್ಲೈಮ್ ಮಾಡಿರುವ ದೇಶ/ಪ್ರದೇಶದಲ್ಲಿನ ಕಾನೂನಾತ್ಮಕ ದೂರುಗಳನ್ನು ನಾವು ಸ್ವೀಕರಿಸುವುದಿಲ್ಲ. ಕಂಟೆಂಟ್ ಅನ್ನು ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ನೀವು ನೇರವಾಗಿ ಯಾವುದೇ ಕ್ಲೈಮ್‌ಗಳನ್ನು ಮುಂದುವರಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಅಪ್‌ಲೋಡ್ ಮಾಡಿದವರನ್ನು ಸಂಪರ್ಕಿಸಲು ನೀವು ಪ್ರಯತ್ನಿಸಬಹುದು. ಒಂದು ವೇಳೆ ನಿಮ್ಮ ಮೊಕದ್ದಮೆಯ ಪರಿಣಾಮವಾಗಿ, ಕಂಟೆಂಟ್ ಅನ್ನು ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ತೀರ್ಪು ಬಂದರೆ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ನಮ್ಮ ಸೇವೆಯಿಂದ ಕಂಟೆಂಟ್ ಅನ್ನು ತೆಗೆದುಹಾಕುವ ಅಗತ್ಯವಿದ್ದರೆ, ನಾವು ಅದಕ್ಕೆ ತಕ್ಕ ಹಾಗೆ ಪ್ರತಿಸ್ಪಂದಿಸುತ್ತೇವೆ.

YouTube ನೀತಿಗಳು, ಸುರಕ್ಷತೆ ಮತ್ತು ವರದಿಮಾಡುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ನೀತಿಯ ಉಲ್ಲಂಘನೆಗಳು

YouTube ನೀತಿಯ ಉಲ್ಲಂಘನೆಗಳ ಕುರಿತು ನಿಮಗೆ ಆತಂಕಗಳಿದ್ದರೆ, ನೀವು ಉಲ್ಲಂಘನೆಯ ಕುರಿತು ವರದಿ ಮಾಡಬಹುದು. YouTube ನಲ್ಲಿ ಅನುಚಿತ ವೀಡಿಯೊಗಳು, ಚಾನಲ್‌ಗಳು ಮತ್ತು ಇತರ ಕಂಟೆಂಟ್‌ನ ಕುರಿತು ವರದಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಕಿರುಕುಳ

ಸಮುದಾಯದ ಸದಸ್ಯರ ಜೊತೆಗಿನ ಒಂದು ಸಂವಹನವು ಕಿರುಕುಳದ ಮಟ್ಟಕ್ಕೆ ತಲುಪಿದೆ ಎಂದು ನಿಮಗೆ ಆತಂಕವಿದ್ದರೆ, ಆ ಸಂವಹನದ ಕುರಿತು ನೀವು ವರದಿ ಮಾಡಬಹುದು. YouTube ನಲ್ಲಿ ಅನುಚಿತ ವೀಡಿಯೊಗಳು, ಚಾನಲ್‌ಗಳು ಮತ್ತು ಇತರ ಕಂಟೆಂಟ್‌ನ ಕುರಿತು ವರದಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಕೃತಿಸ್ವಾಮ್ಯ

ಕೃತಿಸ್ವಾಮ್ಯದ ಕುರಿತು ನಿಮಗೆ ಆತಂಕವಿದ್ದರೆ, ನಮ್ಮ ಕೃತಿಸ್ವಾಮ್ಯ ಕೇಂದ್ರಕ್ಕೆ ಹೋಗಿ.

ಗೌಪ್ಯತಾ ದೂರುಗಳು

ಒಂದು ವೇಳೆ ವೀಡಿಯೊದಲ್ಲಿ ನಿಮ್ಮ ಸಮ್ಮತಿಯಿಲ್ಲದೆಯೇ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯು ಇದ್ದರೆ, YouTube ನ ಗೌಪ್ಯತೆ ಮಾರ್ಗಸೂಚಿಗಳ ಪುಟದಲ್ಲಿನ ಪ್ರಕ್ರಿಯೆಯ ಮೂಲಕ ನೀವು ದೂರನ್ನು ಸಲ್ಲಿಸಬಹುದು. ವೈಯಕ್ತಿಕ ಮಾಹಿತಿಯು ನಿಮ್ಮ ಚಿತ್ರ, ಹೆಸರು, ರಾಷ್ಟ್ರೀಯ ಗುರುತಿನ ಸಂಖ್ಯೆ, ಬ್ಯಾಂಕ್ ಖಾತೆಯ ಸಂಖ್ಯೆ, ಸಂಪರ್ಕ ಮಾಹಿತಿ ಅಥವಾ ಅನನ್ಯವಾಗಿ ಗುರುತಿಸಬಹುದಾದ ಇತರ ಮಾಹಿತಿ ಒಳಗೊಂಡಿರಬಹುದು.

ಗೌಪ್ಯತೆ ಉಲ್ಲಂಘನೆಯ ಕಾರಣದಿಂದ ಕಂಟೆಂಟ್ ತೆಗದುಹಾಕುವಿಕೆಗೆ ಇರುವ ಮಾನದಂಡದ ಕುರಿತು ಇನ್ನಷ್ಟು ತಿಳಿಯಿರಿ.

ನ್ಯಾಯಾಲಯದ ಆದೇಶಗಳು

www.youtube.com ನಲ್ಲಿ ಪೋಸ್ಟ್ ಮಾಡಲಾದ ಕಂಟೆಂಟ್‌ಗೆ ಸಂಬಂಧಿಸಿದಂತೆ ಯು.ಎಸ್ ನ್ಯಾಯಾಲಯದ ಆದೇಶವಿದ್ದರೆ, ನೀವು ನ್ಯಾಯಾಲಯದ ಆದೇಶವನ್ನು ಅಂಚೆಯ ಮೂಲಕ ಈ ವಿಳಾಸಕ್ಕೆ ಕಳುಹಿಸಬಹುದು:

YouTube, Inc., Attn Legal Support

901 Cherry Ave., Second Floor

San Bruno, CA 94066

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16159492261441437079
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false