ಕೊರೋನಾ ವೈರಸ್ ಕಾಯಿಲೆ 2019 (COVID-19) ಅಪ್‌ಡೇಟ್‌ಗಳು

00:50 UTC 23 ಏಪ್ರಿಲ್ 2021 ರಂತೆ ಪ್ರಸ್ತುತ

ಕೊರೋನಾ ವೈರಸ್‌ನ (COVID-19) ಪರಿಣಾಮವು ಪ್ರತಿ ದಿನ ಹೆಚ್ಚಾಗುತ್ತಲೇ ಇದೆ.  YouTube ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ನಿಯಮಿತ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಮರಳಿ ಪರಿಶೀಲಿಸಿ.

ಇತ್ತೀಚಿನ ಅಪ್‌ಡೇಟ್‌ಗಳು

  • [17:30 UTC 17 ನವೆಂಬರ್ 2020] COVID-19 ಮಾಹಿತಿ ಪ್ಯಾನೆಲ್‌ಗಳಿಗೆ ಅಪ್‌ಡೇಟ್: COVID-19 ಸಂಬಂಧಿತ ತಪ್ಪು ಮಾಹಿತಿಯನ್ನು ಎದುರಿಸಲು ನಮ್ಮ ಪ್ರಯತ್ನಗಳ ಮುಂದುವರಿದ ಭಾಗವಾಗಿ, COVID-19 ಲಸಿಕೆ ಮಾಹಿತಿಗೆ ಲಿಂಕ್‌ಗಳನ್ನು ಸೇರಿಸಲು ನಾವು ನಮ್ಮ COVID-19 ಮಾಹಿತಿ ಪ್ಯಾನೆಲ್‌ಗಳನ್ನು ಅಪ್‌ಡೇಟ್ ಮಾಡುತ್ತಿದ್ದೇವೆ. ನವೀಕರಿಸಿದ ಪ್ಯಾನೆಲ್‌ಗಳು ಹುಡುಕಾಟ ಫಲಿತಾಂಶಗಳಲ್ಲಿ ಮತ್ತು COVID-19 ಅಥವಾ COVID-19 ಲಸಿಕೆ ಮಾಹಿತಿಗೆ ಸಂಬಂಧಿಸಿದ ವೀಕ್ಷಣಾ ಪುಟಗಳಲ್ಲಿ ಕಾಣಿಸಬಹುದು. ಅಪ್‌ಡೇಟ್ ಆದ ಪ್ಯಾನೆಲ್‌ಗಳು ಥರ್ಡ್ ಪಾರ್ಟಿಯ ಅಧಿಕೃತ COVID-19 ಲಸಿಕೆ ಮಾಹಿತಿಯನ್ನು ಹುಡುಕಲು ಬಳಕೆದಾರರಿಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆಯೆ ಹೊರತು, ಯಾವುದೇ ವೀಡಿಯೊದ ನಿಖರತೆಯ ಕುರಿತಾದ ತೀರ್ಮಾನ ಎಂಬುದಾಗಿ ಪರಿಗಣಿಸುವಂತಿಲ್ಲ.
  • [20:20 UTC 11 ಆಗಸ್ಟ್ 2020] ಪ್ರೀಮಿಯರ್‌ಗಳು: COVID-19 ಸಮಯದಲ್ಲಿ YouTube ಪ್ರೀಮಿಯರ್‌ಗಳ ಉಲ್ಬಣದಿಂದಾಗಿ, ಕೆಲವು ಚಾನಲ್‌ಗಳು 15 ನಿಮಿಷಗಳ ಮಧ್ಯಂತರದಲ್ಲಿ ಪ್ರೀಮಿಯರ್‌ಗಳನ್ನು ಪೋಸ್ಟ್ ಮಾಡಲು ತಾತ್ಕಾಲಿಕವಾಗಿ ಸೀಮಿತವಾಗಿವೆ (1:30 ಅಥವಾ 2:00 ರ ಬದಲಿಗೆ 1:15 ಅಥವಾ 1:45 ರಂತೆ).
  • [17:00 UTC 10 ಆಗಸ್ಟ್ 2020] ಹೆಚ್ಚಿನ ದೇಶಗಳಲ್ಲಿ ಖಿನ್ನತೆ ಮತ್ತು ಆತಂಕದ ಕುರಿತು ಮಾಹಿತಿಯನ್ನು ನೀಡುವ ಪ್ಯಾನೆಲ್‌ಗಳು ಲಭ್ಯವಿದೆ
    ನಾವು ಇನ್ನೂ 27 ದೇಶಗಳಲ್ಲಿ ಖಿನ್ನತೆ ಮತ್ತು ಆತಂಕದ ಕುರಿತು ನೆರವು ನೀಡುವ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳನ್ನು ಪ್ರಾರಂಭಿಸಿದ್ದೇವೆ. COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಧಿಕೃತ ಮಾನಸಿಕ ಆರೋಗ್ಯ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸುವ ಸಲುವಾಗಿ ಈ ಪ್ಯಾನೆಲ್‌ಗಳನ್ನು 13 ಜುಲೈ 2020 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.
  • [16:30 UTC 13 ಜುಲೈ 2020] ಖಿನ್ನತೆ ಮತ್ತು ಆತಂಕಕ್ಕೆ ಸಂಬಂಧಿಸಿದ ಹೊಸ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳು: COVID-19 ಸಾಂಕ್ರಾಮಿಕ ರೋಗವು ಕೇವಲ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಅದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಧಿಕೃತ ಮಾಹಿತಿಯನ್ನು ಹೆಚ್ಚು ಸುಲಭವಾಗಿ ಪ್ರವೇಶಿಸುವುದಕ್ಕಾಗಿ ಜನರಿಗೆ ಸಹಾಯ ಮಾಡಲು, ನಾವು YouTube ಹುಡುಕಾಟದಲ್ಲಿ ಖಿನ್ನತೆ ಮತ್ತು ಆತಂಕದ ಕುರಿತಾದ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳು ಮತ್ತು ಸ್ವಯಂ ಮೌಲ್ಯಮಾಪನಗಳನ್ನು ಪರಿಚಯಿಸುತ್ತಿದ್ದೇವೆ. ಪ್ಯಾನೆಲ್‌ಗಳು ಮತ್ತು ಸ್ವಯಂ-ಮೌಲ್ಯಮಾಪನಗಳು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಭ್ಯವಿವೆ ಮತ್ತು ಶೀಘ್ರದಲ್ಲೇ ಇನ್ನಷ್ಟು ದೇಶಗಳು/ಪ್ರದೇಶಗಳಲ್ಲಿ ಪ್ಯಾನೆಲ್‌ಗಳನ್ನು ಲಭ್ಯವಾಗುವಂತೆ ಮಾಡಲು ಭರವಸೆಯನ್ನು ಹೊಂದಿದ್ದೇವೆ.
  • [23:15 UTC 11 ಜೂನ್ 2020] COVID-19 ಆರೋಗ್ಯ ಪ್ಯಾನೆಲ್ ಸ್ವಯಂ ಮೌಲ್ಯಮಾಪನದ ಕುರಿತು ಅಪ್‌ಡೇಟ್: COVID-19 ಆರೋಗ್ಯ ಪ್ಯಾನೆಲ್‌ನ ಸ್ವಯಂ ಮೌಲ್ಯಮಾಪನವು ಇದೀಗ Google ನ ಸ್ವಯಂ ಮೌಲ್ಯಮಾಪನ ಸ್ಕ್ರೀನರ್‌ಗೆ ಲಿಂಕ್ ಮಾಡುತ್ತಿದ್ದು, ಇದು CDC ಮಾರ್ಗಸೂಚಿಗಳನ್ನು ಆಧರಿಸಿದೆ. ಬಳಕೆದಾರರಿಗೆ ಯಾವ ರೀತಿಯ ಬೆಂಬಲ ಅಥವಾ ವೈದ್ಯಕೀಯ ಆರೈಕೆ ಸೂಕ್ತವಾಗಬಹುದು ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸ್ವಯಂ ಮೌಲ್ಯಮಾಪನ ಸ್ಕ್ರೀನರ್ ನೀಡುತ್ತದೆ.
  • [17:38 UTC 20 ಮೇ 2020] COVID-19 ತಪ್ಪು ಮಾಹಿತಿಗೆ ಸಂಬಂಧಿಸಿದ ನೀತಿ: COVID-19 ತಪ್ಪು ಮಾಹಿತಿ ಕುರಿತಾದ ಪುಟವನ್ನು ಸೇರಿಸಲು YouTube ತನ್ನ ಸಮುದಾಯ ಮಾರ್ಗಸೂಚಿಗಳನ್ನು ಅಪ್‌ಡೇಟ್ ಮಾಡಿದ್ದು, ಅದನ್ನು ಇಲ್ಲಿ ಕಾಣಬಹುದು.
  • [23:34 UTC 30 ಏಪ್ರಿಲ್ 2020] COVID-19 ಆರೋಗ್ಯ ಪ್ಯಾನೆಲ್ ಸ್ವಯಂ ಮೌಲ್ಯಮಾಪನ: ಸೂಕ್ತವಾದ ವೈದ್ಯಕೀಯ ಆರೈಕೆಯನ್ನು ಪಡೆಯುವ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಗೆ ಸಹಾಯ ಮಾಡುವ ಸಲುವಾಗಿ, COVID-19 ಹುಡುಕಾಟದಲ್ಲಿನ ನಮ್ಮ ಆರೋಗ್ಯ ಪ್ಯಾನೆಲ್‌ನಲ್ಲಿ ನಾವು COVID-19 ಸ್ವಯಂ ಮೌಲ್ಯಮಾಪನಕ್ಕೆ ಲಿಂಕ್ ಸೇರಿಸಿದ್ದೇವೆ. ನಾವು ಇದನ್ನು ಯುಎಸ್‌ನಲ್ಲಿ ಲಾಂಚ್ ಮಾಡುತ್ತಿದ್ದು, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ ಮತ್ತು ಶೀಘ್ರದಲ್ಲೇ ಇನ್ನಷ್ಟು ದೇಶಗಳಲ್ಲಿ ಹೊರತರುತ್ತಿದ್ದೇವೆ.
  • [18:00 UTC 13 ಏಪ್ರಿಲ್ 2020] ನಾವು #StayHome #WithMe ಅಭಿಯಾನದಲ್ಲಿ ಭಾಗವಹಿಸುವ ರಚನೆಕಾರರ ಕಂಟೆಂಟ್‌ಗೆ ಸಂಬಂಧಿಸಿದಂತೆ ಎಕ್ಸ್‌ಪ್ಲೋರ್ ಟ್ಯಾಬ್‌ನಲ್ಲಿ ಗಮ್ಯಸ್ಥಾನ ಬಟನ್ ಅನ್ನು ಪರಿಚಯಿಸುತ್ತಿದ್ದೇವೆ. ಈ ಸಮಯದಲ್ಲಿ ಜನರು ಕಲಿಯಲು, ಸಂಪರ್ಕ ಹೊಂದಲು ಮತ್ತು ಮನರಂಜನೆಗೆ ಸಹಾಯ ಮಾಡಲು ವೀಡಿಯೊವನ್ನು ಬಳಸಿರುವ ನಮ್ಮ ಕೆಲವು ರಚನೆಕಾರರನ್ನು ಈ ಪುಟವು ಹೈಲೈಟ್ ಮಾಡುತ್ತದೆ.
  • [16:00 UTC ಏಪ್ರಿಲ್ 1 2020] COVID-19 ಆರೋಗ್ಯ ಪ್ಯಾನೆಲ್‌ಗಳು: ಇಂದಿನಿಂದ, ನಾವು COVID-19 ಗಾಗಿ ಹೆಚ್ಚುವರಿ ಆರೋಗ್ಯ ಪ್ಯಾನೆಲ್‌ಗಳನ್ನು ಪ್ರಾರಂಭಿಸುತ್ತಿದ್ದು, ಅದು COVID-19 ಸಂಬಂಧಿತ ಹುಡುಕಾಟಗಳಿಗಾಗಿ ಹುಡುಕಾಟ ಫಲಿತಾಂಶಗಳಲ್ಲಿ ತೋರಿಸುತ್ತದೆ. ಈ ಪ್ಯಾನೆಲ್‌ಗಳು WHO ಮತ್ತು NHS ನ ಪಠ್ಯ-ಆಧಾರಿತ ಆರೋಗ್ಯ ಮಾಹಿತಿಯನ್ನು ಮತ್ತು ರೋಗಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಂತಹ ಕಂಟೆಂಟ್ ಅನ್ನು ಒಳಗೊಂಡಿವೆ. ಈ ಸಮಯದಲ್ಲಿ, ನಾವು ಸ್ಥಳೀಯ ಆರೋಗ್ಯ ಮೂಲಗಳಿಗೆ ಆದ್ಯತೆ ನೀಡುವುದನ್ನು ಮುಂದುವರಿಸಲು ಬಯಸುತ್ತೇವೆ, ಆದ್ದರಿಂದ ನೀವು ಸ್ಥಳೀಯ ಆರೋಗ್ಯ ಪ್ರಾಧಿಕಾರ ಮತ್ತು COVID-19 ಆರೋಗ್ಯ ಪ್ಯಾನೆಲ್‌ಗೆ ಲಿಂಕ್ ಹೊಂದಿರುವ ಮಾಹಿತಿ ಫಲಕ ಎರಡನ್ನೂ ನೋಡಬಹುದು.
  • [18:14 UTC 2 ಏಪ್ರಿಲ್ 2020] COVID-19-ಸಂಬಂಧಿತ ಕಂಟೆಂಟ್ ಮೂಲಕ ಮಾನಿಟೈಸ್ ಮಾಡುವುದು: COVID-19 ಕುರಿತು ಉಲ್ಲೇಖಿಸುವ ಅಥವಾ ಅಂತಹ ಮಾಹಿತಿಯನ್ನು ಒಳಗೊಂಡಿರುವ ಕಂಟೆಂಟ್ ಮೂಲಕ ಮಾನಿಟೈಸ್ ಮಾಡುವ ಪ್ರಯೋಜನವನ್ನು ನಾವು ಎಲ್ಲಾ ರಚನೆಕಾರರು ಮತ್ತು ಸುದ್ದಿ ಸಂಸ್ಥೆಗಳಿಗೆ ವಿಸ್ತರಿಸಿದ್ದೇವೆ. ಎಂದಿನಂತೆ, ಜಾಹೀರಾತುದಾರ-ಸ್ನೇಹಿ ಮತ್ತು ಸಮುದಾಯ ಮಾರ್ಗಸೂಚಿಗಳು ಎರಡನ್ನೂ ಕಂಟೆಂಟ್ ಅನುಸರಿಸಬೇಕು. 
  • [17:00 UTC 16 ಮಾರ್ಚ್ 2020] ನಮ್ಮ ವಿಸ್ತರಿತ ಉದ್ಯೋಗಿಗಳು ಮತ್ತು ಸಮುದಾಯವನ್ನು ರಕ್ಷಿಸುವುದು: ನಿರ್ದಿಷ್ಟ ಸೈಟ್‌ಗಳಲ್ಲಿ ಕಚೇರಿ ಸಿಬ್ಬಂದಿಯನ್ನು ಕಡಿಮೆ ಮಾಡುವುದು ಸೇರಿದಂತೆ, ನಮ್ಮ ಉದ್ಯೋಗಿಗಳು, ವಿಸ್ತರಿತ ಉದ್ಯೋಗಿಗಳು ಮತ್ತು ಅವರು ವಾಸಿಸುವ ಸಮುದಾಯಗಳ ಯೋಗಕ್ಷೇಮದ ಕುರಿತು ಆದ್ಯತೆ ನೀಡಲು ನಾವು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿಮರ್ಶಕರು ಸಾಮಾನ್ಯವಾಗಿ ನಡೆಸುವ ಕೆಲವು ಕಾರ್ಯಗಳನ್ನು ಪೂರೈಸುವುದಕ್ಕೆ ಸಹಾಯ ಮಾಡಲು ನಾವು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದೇವೆ, ಇದು ನಮ್ಮ ನೀತಿಗಳನ್ನು ಉಲ್ಲಂಘಿಸದಂತಹ ಕಂಟೆಂಟ್‌ಗಳನ್ನು ಆಕಸ್ಮಿಕವಾಗಿ ತೆಗೆದುಹಾಕಲು ಕಾರಣವಾಗಬಹುದು. ಇದು YouTube ಪಾಲುದಾರ ಕಾರ್ಯಕ್ರಮಕ್ಕಾಗಿ ಅರ್ಜಿಗಳು ಅಥವಾ ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳಂತಹ ಹೆಚ್ಚುವರಿ ರೀತಿಯ YouTube ಬಳಕೆದಾರ ಮತ್ತು ರಚನೆಕಾರರ ಬೆಂಬಲ ಮತ್ತು ವಿಮರ್ಶೆಗಳ ಮೇಲೆ ಪರಿಣಾಮ ಬೀರಬಹುದು.

Coronavirus and YouTube: Answering Creator Questions

ಅಪ್‌ಡೇಟ್‌ಗಳ ಕುರಿತು ಹೆಚ್ಚಿನ ಮಾಹಿತಿ:

ಮಾನಿಟೈಸೇಶನ್ 

[18:14 2 ಏಪ್ರಿಲ್ 2020] COVID-19-ಸಂಬಂಧಿತ ಕಂಟೆಂಟ್ ಮೂಲಕ ಮಾನಿಟೈಸ್ ಮಾಡುವುದು: COVID-19 ಕುರಿತು ಉಲ್ಲೇಖಿಸುವ ಅಥವಾ ಅಂತಹ ಮಾಹಿತಿಯನ್ನು ಒಳಗೊಂಡಿರುವ ಕಂಟೆಂಟ್ ಮೂಲಕ ಮಾನಿಟೈಸ್ ಮಾಡುವ ಪ್ರಯೋಜನವನ್ನು ನಾವು ಎಲ್ಲಾ ರಚನೆಕಾರರು ಮತ್ತು ಸುದ್ದಿ ಸಂಸ್ಥೆಗಳಿಗೆ ವಿಸ್ತರಿಸಿದ್ದೇವೆ. ಎಂದಿನಂತೆ, ಜಾಹೀರಾತುದಾರ-ಸ್ನೇಹಿ ಮತ್ತು ಸಮುದಾಯ ಮಾರ್ಗಸೂಚಿಗಳು ಎರಡನ್ನೂ ಕಂಟೆಂಟ್ ಅನುಸರಿಸಬೇಕು. 

COVID-19-ಸಂಬಂಧಿತ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವ ಕುರಿತಾದ ಮಾರ್ಗಸೂಚಿಗಳು ಇಲ್ಲಿವೆ ನೋಡಿ:

  • ನಿಮ್ಮ ಕಾರ್ಯದ ವಾಸ್ತವಾಂಶವನ್ನು ಪರಿಶೀಲಿಸಿ. ನಿಮ್ಮ ಕಂಟೆಂಟ್‌ನಲ್ಲಿ ಮಾಹಿತಿಯನ್ನು ನೀಡಲು, ವಿಶ್ವ ಆರೋಗ್ಯ ಸಂಸ್ಥೆ (WHO), ರೋಗ ನಿಯಂತ್ರಣ ಕೇಂದ್ರಗಳು (CDC) ಮತ್ತು ರಾಷ್ಟ್ರೀಯ ಆರೋಗ್ಯ ಸೇವೆ ರೀತಿಯ ಅರ್ಹ ಸಂಸ್ಥೆಗಳಿಂದ ಪ್ರತಿಷ್ಠಿತ ಮೂಲಗಳನ್ನು ಬಳಸಿ. 
  • ಇದು ಪ್ರಚಲಿತ ಜಾಗತಿಕ ಬಿಕ್ಕಟ್ಟು ಎಂಬ ವಾಸ್ತವಾಂಶದ ಕುರಿತು ಸೂಕ್ಷ್ಮವಾಗಿ ಅರಿತುಕೊಳ್ಳಿ. ನೀವು COVID-19 ಸಂಬಂಧಿತ-ಕಂಟೆಂಟ್ ಅನ್ನು ಹಂಚಿಕೊಳ್ಳಲು ಆಯ್ಕೆ ಮಾಡಿದರೆ, ಉತ್ತಮ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡಲು ಅಥವಾ ಪ್ರಚಾರ ಮಾಡಲು ಈ ಪರಿಸ್ಥಿತಿಯನ್ನು ಬಳಸಿಕೊಳ್ಳಬೇಡಿ.
  • ಜಾಹೀರಾತುದಾರ-ಸ್ನೇಹಿ ಮತ್ತು ಸಮುದಾಯ ಮಾರ್ಗಸೂಚಿಗಳು ಎರಡನ್ನೂ ಅನುಸರಿಸಿ. ಎಲ್ಲಾ ಮಾನಿಟೈಸ್ ಆಗುವ ಕಂಟೆಂಟ್‌ಗಳು ನಮ್ಮ ಜಾಹೀರಾತು ಸ್ನೇಹಿ ಮಾರ್ಗಸೂಚಿಗಳು ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ. ನಿಮ್ಮ ಕಂಟೆಂಟ್ ಈ ನೀತಿಗಳನ್ನು ಉಲ್ಲಂಘಿಸಿದರೆ, ಅದನ್ನು ತೆಗೆದುಹಾಕಲಾಗುತ್ತದೆ ಅಥವಾ ಅದು ಜಾಹೀರಾತುಗಳಿಂದ ಯಾವುದೇ ಹಣವನ್ನು ಗಳಿಸುವುದಿಲ್ಲ ಅಥವಾ ಹಣಗಳಿಕೆ ಪ್ರಮಾಣವನ್ನು ಸೀಮಿತಗೊಳಿಸಲಾಗುತ್ತದೆ. ಮಾನಿಟೈಸೇಶನ್‌ಗಾಗಿ ಅರ್ಹವಾಗಿರದ COVID-19 ಸಂಬಂಧಿತ ಕಂಟೆಂಟ್‌ನ ನಿರ್ದಿಷ್ಟ ಉದಾಹರಣೆಗಳಿಗಾಗಿ, ಈ ಸಹಾಯ ಕೇಂದ್ರದ ಲೇಖನವನ್ನು ಪರಿಶೀಲಿಸಿ. 
ನಿಮ್ಮ ಕಂಟೆಂಟ್ ಈ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ನಿಮ್ಮ COVID-19-ಸಂಬಂಧಿತ ಕಂಟೆಂಟ್‌ನಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ನಾವು ಮಿತಿಗೊಳಿಸಬಹುದು ಅಥವಾ ಅಪರೂಪದ ಸಂದರ್ಭಗಳಲ್ಲಿ, ನಿಮ್ಮ ಚಾನಲ್‌ನಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು. ಗಮನಿಸಿ: ಈ ಸಿಸ್ಟಮ್‌ಗಳು ಇನ್ನೂ ಕಲಿಯುತ್ತಿವೆ ಮತ್ತು ಕೊರೋನಾ ವೈರಸ್ ಕಂಟೆಂಟ್ ಮೂಲಕ ವ್ಯಾಪಕ ಮಾನಿಟೈಸೇಶನ್‌ಗೆ ಅನುಮತಿಸಲು ಟ್ಯೂನ್ ಮಾಡಲಾಗುತ್ತಿದೆ, ಹೀಗಾಗಿ ಹೊಸ ಅಪ್‌ಲೋಡ್‌ಗಳಲ್ಲಿ ಹಳದಿ ಐಕಾನ್‌ಗಳನ್ನು ನೀವು ಈಗಲೂ ಕಾಣಬಹುದು. ನಿಮ್ಮ ಕಂಟೆಂಟ್ ನಮ್ಮ ಪರಿಷ್ಕೃತ ನೀತಿಗಳಿಗೆ ಅನುಗುಣವಾಗಿದೆ ಎಂದು ನೀವು ಭಾವಿಸಿದರೆ, ದಯವಿಟ್ಟು ಮೇಲ್ಮನವಿಯನ್ನು ಸಲ್ಲಿಸಿ, ಇದರಿಂದ ನಮ್ಮ ತಂಡಗಳು ನಿಮ್ಮ ಮನವಿಯನ್ನು ಪರಿಶೀಲಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ನಿಮಗೆ ಅಪ್‌ಡೇಟ್ ನೀಡಬಹುದು.

[16:27 UTC 25 ಮಾರ್ಚ್ 2020] ವಿಳಂಬಗಳನ್ನು ನಿರೀಕ್ಷಿಸಿ - ವ್ಯಾಪಾರ ಸರಕಿನ ಶೆಲ್ಫ್ ಐಟಂ ವಿಮರ್ಶೆಗಳು: 

  • ನೀವು YouTube ನಲ್ಲಿ ವ್ಯಾಪಾರ ಮಾಡಲು ಹೊಸಬರಾಗಿದ್ದರೆ, ನಮ್ಮ ಪರಿಶೀಲನಾ ಸಾಮರ್ಥ್ಯವು ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ವ್ಯಾಪಾರದ ಸರಕಿನ ಶೆಲ್ಫ್ ಮತ್ತು ಸಂಬಂಧಿತ ಫೀಚರ್‌ಗಳನ್ನು ಸಕ್ರಿಯಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಿ.

  • ನೀವು ಈಗಾಗಲೇ ವ್ಯಾಪಾರ ಸರಕಿನ ಶೆಲ್ಫ್ ಜೊತೆಗೆ ಲೈವ್ ಆಗಿದ್ದರೆ ಮತ್ತು ಹೊಸ ವ್ಯಾಪಾರದ ವಸ್ತುಗಳನ್ನು ಸೇರಿಸಲು ಅಥವಾ ಅಸ್ತಿತ್ವದಲ್ಲಿರುವ ವಸ್ತುಗಳ ಹೆಸರು ಅಥವಾ ವಿವರಣೆಯನ್ನು ಮಾರ್ಪಡಿಸಲು ಬಯಸಿದರೆ, ಆ ಐಟಂಗಳನ್ನು ಪರಿಶೀಲಿಸಲು ಮತ್ತು ನಿಮ್ಮ ಚಾನಲ್‌ನಲ್ಲಿ ಪ್ರದರ್ಶಿಸಲು ಅನುಮೋದನೆಯನ್ನು ಪಡೆಯಬೇಕಾದರೆ ನೀವು ಸಾಮಾನ್ಯಕ್ಕಿಂತ ಹೆಚ್ಚು ಸಮಯ ಕಾಯಬೇಕಾಗಬಹುದು.

[16:53 UTC 20 ಮಾರ್ಚ್ 2020] ವಿಳಂಬಗಳನ್ನು ನಿರೀಕ್ಷಿಸಿ - YPP ಅರ್ಜಿ ಪರಿಶೀಲನೆಗಳು:  ನಾವು ಈಗಾಗಲೇ ಹಂಚಿಕೊಂಡಿರುವಂತೆ, COVID-19 ರ ಹರಡುವಿಕೆಯನ್ನು ಕಡಿಮೆ ಮಾಡಲು, ಕೆಲವು ಸೈಟ್‌ಗಳಲ್ಲಿ ಕಚೇರಿ ಸಿಬ್ಬಂದಿಯನ್ನು ಕಡಿಮೆ ಮಾಡುವುದು ಸೇರಿದಂತೆ ನಮ್ಮ ವಿಸ್ತರಿತ ಉದ್ಯೋಗಿಗಳ ಆರೋಗ್ಯದ ಕುರಿತು ಆದ್ಯತೆಯನ್ನು ನೀಡಲು ಅಗತ್ಯವಿರುವ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಇದರ ಪರಿಣಾಮವಾಗಿ, YPP ಗೆ ಸಲ್ಲಿಸುವ ನಿಮ್ಮ ಅರ್ಜಿಯ ಕುರಿತು ಮಾಹಿತಿಯನ್ನು ಪಡೆಯಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನಿಮ್ಮ ಅರ್ಜಿಯ ಸ್ಥಿತಿಯನ್ನು ನೀವು ಇಲ್ಲಿ ಪರಿಶೀಲಿಸುವುದನ್ನು ಮುಂದುವರಿಸಬಹುದು. 

ಪ್ರಪಂಚದಾದ್ಯಂತ ಲ್ಯಾಪ್‌ಟಾಪ್‌ಗಳನ್ನು ಶಿಪ್ಪಿಂಗ್ ಮಾಡುವುದು ಮತ್ತು ಅವರು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ನಮ್ಮ ವಿಸ್ತರಿತ ಉದ್ಯೋಗಿಗಳು ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ಲಭ್ಯವಿರುವಂತೆ ಮಾಡಲು ನಾವು ನಮ್ಮ ಪಾಲುದಾರ ಕಂಪನಿಗಳ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ವಿಸ್ತರಿತ ಉದ್ಯೋಗಿಗಳ ಆರೋಗ್ಯವನ್ನು ಬೆಂಬಲಿಸಲು ನಾವು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಹೆಚ್ಚಿನ ವೀಡಿಯೊಗಳನ್ನು ಪರಿಶೀಲಿಸಲು ಮತ್ತು ಸಾಧ್ಯವಾದಷ್ಟು ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಪ್ರಯತ್ನಿಸುತ್ತೇವೆ. ಇಂತಹ ಕಠಿಣ ಸಂದರ್ಭದಲ್ಲಿ ಪ್ರತಿಯೊಬ್ಬರ ತಾಳ್ಮೆಯನ್ನು ನಾವು ಶ್ಲಾಘಿಸುತ್ತೇವೆ ಮತ್ತು ಇದು ಮುಂದುವರೆದಂತೆ ಅಪ್‌ಡೇಟ್‌ಗಳು ಬರುತ್ತಲೇ ಇರುತ್ತವೆ.  
 

[19:00 UTC 18 ಮಾರ್ಚ್ 2020] ಚಾನಲ್ ಸದಸ್ಯತ್ವಗಳ ಪರ್ಕ್ ವಿಮರ್ಶೆಗಳು: ನಮ್ಮ ವಿಸ್ತರಿತ ಉದ್ಯೋಗಿಗಳ ಯೋಗಕ್ಷೇಮದ ಕುರಿತು ಆದ್ಯತೆಯನ್ನು ನೀಡಲು ನಾವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ರಚನೆಕಾರರ ಚಾನಲ್ ಸದಸ್ಯತ್ವಗಳಿಗೆ ಸಂಬಂಧಿಸಿದಂತೆ ಅವರ ಪರ್ಕ್‌ಗಳನ್ನು ವಿಮರ್ಶೆ ಮಾಡುವುದು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದರ ಅರ್ಥ:  
  • ನಮ್ಮ ವಿಮರ್ಶೆ ಸಾಮರ್ಥ್ಯವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ನೀವು ಸದಸ್ಯತ್ವಗಳನ್ನು ಪ್ರಾರಂಭಿಸಲು ಸಾಧ್ಯವಾಗದಿರಬಹುದು.
  • ನೀವು ಈಗಾಗಲೇ ಪ್ರಾರಂಭಿಸಿದ್ದರೆ ಮತ್ತು ನಿಮ್ಮ ಪರ್ಕ್‌ಗಳನ್ನು ಬದಲಾಯಿಸಲು ಬಯಸಿದರೆ, ಆ ಬದಲಾವಣೆಗಳನ್ನು ಅನುಮೋದಿಸಲು ನೀವು ಸಾಮಾನ್ಯಕ್ಕಿಂತ ಹೆಚ್ಚು ಸಮಯದವರೆಗೆ ಕಾಯಬೇಕಾಗಬಹುದು.
ಚಾನಲ್ ಸದಸ್ಯತ್ವದ ಪರ್ಕ್‌ಗಳನ್ನು ಬದಲಾಯಿಸಬೇಕಾದ ಚಾನಲ್‌ಗಳಿಗಾಗಿ, ನೀವು ವೀಡಿಯೊ ಮತ್ತು/ಅಥವಾ ಸಮುದಾಯ ಪೋಸ್ಟ್ ಮೂಲಕ ನಿಮ್ಮ ಪ್ರೇಕ್ಷಕರಿಗೆ ಬದಲಾವಣೆಗಳ ಕುರಿತು ಸಂವಹನ ಮಾಡಬಹುದು. ನೀವು ಪರಿಚಯದ ವೀಡಿಯೊ ರಚಿಸಬಹುದು ಅಥವಾ ಅಪ್‌ಡೇಟ್ ಮಾಡಬಹುದು. ನೀವು ನೀಡುವ ಎಲ್ಲಾ ಚಾನಲ್ ಸದಸ್ಯತ್ವದ ಪರ್ಕ್‌ಗಳು — ನಿಮ್ಮ ಆಫರ್ ಪರದೆಯಲ್ಲಿ ಪಟ್ಟಿ ಮಾಡಲಾದ ಪರ್ಕ್‌ಗಳಲ್ಲಿ ಅವುಗಳನ್ನು ಸೇರಿಸಿಕೊಂಡಿರಲಿ ಅಥವಾ ಇಲ್ಲದಿರಲಿ — ಸದಸ್ಯತ್ವ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ.
[14:40 UTC 16 ಮಾರ್ಚ್ 2020] COVID-19-ಸಂಬಂಧಿತ ಕಂಟೆಂಟ್ ಮೂಲಕ ಮಾನಿಟೈಸ್ ಮಾಡುವುದು: COVID-19 ಕುರಿತು ಉಲ್ಲೇಖಿಸುವ ಅಥವಾ ಅದರ ಮಾಹಿತಿಯನ್ನು ಒಳಗೊಂಡಿರುವ ಕಂಟೆಂಟ್ ಮೂಲಕ ಮಾನಿಟೈಸ್ ಮಾಡುವ ಪ್ರಯೋಜನವನ್ನು ಇನ್ನಷ್ಟು ರಚನೆಕಾರರು ಮತ್ತು ಸುದ್ದಿ ಸಂಸ್ಥೆಗಳಿಗೆ ವಿಸ್ತರಿಸುತ್ತಿದ್ದೇವೆ. ನೀವು ರಚನೆಕಾರರಾಗಿದ್ದರೆ, ಈ ಬದಲಾವಣೆಯು ನಿಮ್ಮ ಚಾನಲ್‌ನಲ್ಲಿ ಜಾರಿಗೆ ಬಂದಾಗ ನೀವು YouTube Studio ದಲ್ಲಿ ನೋಟಿಫಿಕೇಶನ್ ಅನ್ನು ಸ್ವೀಕರಿಸುತ್ತೀರಿ.
COVID-19-ಸಂಬಂಧಿತ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವ ಕುರಿತಾದ ಮಾರ್ಗಸೂಚಿಗಳು ಇಲ್ಲಿವೆ ನೋಡಿ:
  • ನಿಮ್ಮ ಕಾರ್ಯದ ವಾಸ್ತವಾಂಶವನ್ನು ಪರಿಶೀಲಿಸಿ. ನಿಮ್ಮ ಕಂಟೆಂಟ್‌ನಲ್ಲಿ ಮಾಹಿತಿಯನ್ನು ನೀಡಲು, ವಿಶ್ವ ಆರೋಗ್ಯ ಸಂಸ್ಥೆ (WHO), ರೋಗ ನಿಯಂತ್ರಣ ಕೇಂದ್ರಗಳು (CDC) ಮತ್ತು ರಾಷ್ಟ್ರೀಯ ಆರೋಗ್ಯ ಸೇವೆ ರೀತಿಯ ಅರ್ಹ ಸಂಸ್ಥೆಗಳಿಂದ ಪ್ರತಿಷ್ಠಿತ ಮೂಲಗಳನ್ನು ಬಳಸಿ. 
  • ಇದು ಪ್ರಚಲಿತ ಜಾಗತಿಕ ಬಿಕ್ಕಟ್ಟು ಎಂಬ ವಾಸ್ತವಾಂಶದ ಕುರಿತು ಸೂಕ್ಷ್ಮವಾಗಿ ಅರಿತುಕೊಳ್ಳಿ. ನೀವು COVID-19 ಸಂಬಂಧಿತ-ಕಂಟೆಂಟ್ ಅನ್ನು ಹಂಚಿಕೊಳ್ಳಲು ಆಯ್ಕೆ ಮಾಡಿದರೆ, ಉತ್ತಮ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡಲು ಅಥವಾ ಪ್ರಚಾರ ಮಾಡಲು ಈ ಪರಿಸ್ಥಿತಿಯನ್ನು ಬಳಸಿಕೊಳ್ಳಬೇಡಿ.
  • ಜಾಹೀರಾತುದಾರ-ಸ್ನೇಹಿ ಮತ್ತು ಸಮುದಾಯ ಮಾರ್ಗಸೂಚಿಗಳು ಎರಡನ್ನೂ ಅನುಸರಿಸಿ. ಎಲ್ಲಾ ಮಾನಿಟೈಸ್ ಆಗುವ ಕಂಟೆಂಟ್‌ಗಳು ನಮ್ಮ ಜಾಹೀರಾತು ಸ್ನೇಹಿ ಮಾರ್ಗಸೂಚಿಗಳು ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ. ನಿಮ್ಮ ಕಂಟೆಂಟ್ ಈ ನೀತಿಗಳನ್ನು ಉಲ್ಲಂಘಿಸಿದರೆ, ಅದನ್ನು ತೆಗೆದುಹಾಕಲಾಗುತ್ತದೆ ಅಥವಾ ಅದು ಜಾಹೀರಾತುಗಳಿಂದ ಯಾವುದೇ ಹಣವನ್ನು ಗಳಿಸುವುದಿಲ್ಲ ಅಥವಾ ಹಣಗಳಿಕೆ ಪ್ರಮಾಣವನ್ನು ಸೀಮಿತಗೊಳಿಸಲಾಗುತ್ತದೆ. ಉದಾಹರಣೆಗೆ, ಹಾನಿಕಾರಕ ಪದಾರ್ಥಗಳು ಅಥವಾ ಚಿಕಿತ್ಸೆಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಕ್ಲೈಮ್ ಮಾಡುವ ಕಂಟೆಂಟ್ ಅನ್ನು ಅಥವಾ ನಮ್ಮ ಹಿಂಸಾತ್ಮಕ ಅಥವಾ ಗ್ರಾಫಿಕ್ ವಿಷಯ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತೆಗೆದುಹಾಕಲಾಗುತ್ತದೆ.

ಈ ವಿಷಯದ ಕುರಿತು ನಿಮ್ಮ ವೀಕ್ಷಕರಿಗೆ ಉತ್ತಮ-ಗುಣಮಟ್ಟದ ಕಂಟೆಂಟ್ ಅನ್ನು ಒದಗಿಸಲು ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ ಮತ್ತು ಮೇಲಿನ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ನೀವು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

ನಿಮ್ಮ ಕಂಟೆಂಟ್ ಈ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ನಿಮ್ಮ COVID-19-ಸಂಬಂಧಿತ ಕಂಟೆಂಟ್‌ನಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ನಾವು ಮಿತಿಗೊಳಿಸಬಹುದು ಅಥವಾ ಅಪರೂಪದ ಸಂದರ್ಭಗಳಲ್ಲಿ, ನಿಮ್ಮ ಚಾನಲ್‌ನಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು.
 

[16:00 UTC 11 ಮಾರ್ಚ್ 2020] ಕೊರೋನಾ ವೈರಸ್ ಸಂಬಂಧಿತ ಕಂಟೆಂಟ್‌ಗಾಗಿ ಮಾನಿಟೈಸೇಶನ್ ಸ್ಥಿತಿಯ ಕುರಿತಾದ ಅಪ್‌ಡೇಟ್‌ಗಳು: ಪ್ರಸ್ತುತವಾಗಿ, ಕೊರೋನಾ ವೈರಸ್ ಪರಿಸ್ಥಿತಿಯನ್ನು “ಸೂಕ್ಷ್ಮ ಘಟನೆ” ಎಂಬುದಾಗಿ ಪರಿಗಣಿಸಲಾಗಿದೆ. ನಮ್ಮ ಸೂಕ್ಷ್ಮ ಘಟನೆಗಳಿಗೆ ಸಂಬಂಧಿಸಿದ ನೀತಿಯನ್ನು ನೈಸರ್ಗಿಕ ವಿಕೋಪದಂತಹ ಗಮನಾರ್ಹ ಪ್ರಮಾಣದ ಅಲ್ಪಾವಧಿಯ ಘಟನೆಗಳಿಗೆ ಅನ್ವಯಿಸಲು ವಿನ್ಯಾಸಗೊಳಿಸಲಾಗಿದೆ. ಈ ಪ್ರಚಲಿತ ಪ್ರಾಕೃತಿಕ ಸನ್ನಿವೇಶದಿಂದಾಗಿ, ಸೀಮಿತ ಸಂಖ್ಯೆಯ ಚಾನಲ್‌ಗಳಲ್ಲಿ ಕೊರೋನಾ ವೈರಸ್ ಕುರಿತು ಚರ್ಚಿಸುವ ಕಂಟೆಂಟ್‌ಗಳಲ್ಲಿ ನಾವು ಆ್ಯಡ್‌ಗಳನ್ನು ಸಕ್ರಿಯಗೊಳಿಸಲು ಪ್ರಾರಂಭಿಸುತ್ತೇವೆ. ಇದು ನಿಖರವಾಗಿ ಸ್ವಯಂ-ಪ್ರಮಾಣೀಕರಿಸುವ ರಚನೆಕಾರರನ್ನು ಮತ್ತು ಹೆಚ್ಚಿನ ಚಾನಲ್‌ಗಳನ್ನು ಅನುಸರಿಸಲು ಸುದ್ದಿ ಪಾಲುದಾರರ ಶ್ರೇಣಿಯನ್ನು ಒಳಗೊಂಡಿರುತ್ತದೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ರಚನೆಕಾರರು ಮತ್ತು ಸುದ್ದಿ ಸಂಸ್ಥೆಗಳಿಗೆ ಮಾನಿಟೈಸೇಶನ್ ಪ್ರಯೋಜನವನ್ನು ವಿಸ್ತರಿಸಲು ನಾವು ನಮ್ಮ ನೀತಿಗಳು ಮತ್ತು ಜಾರಿಗೊಳಿಸುವಿಕೆ ಪ್ರಕ್ರಿಯೆಗಳನ್ನು ಸಿದ್ಧಪಡಿಸುತ್ತಿದ್ದೇವೆ.

 

ಗೌಪ್ಯತೆ ಮತ್ತು ಕೃತಿಸ್ವಾಮ್ಯ
[17:38 UC 20 ಮೇ 2020] COVID-19 ತಪ್ಪು ಮಾಹಿತಿಗೆ ಸಂಬಂಧಿಸಿದ ನೀತಿ: COVID-19 ತಪ್ಪು ಮಾಹಿತಿ ಕುರಿತಾದ ಪುಟವನ್ನು ಸೇರಿಸಲು YouTube ತನ್ನ ಸಮುದಾಯ ಮಾರ್ಗಸೂಚಿಗಳನ್ನು ಅಪ್‌ಡೇಟ್ ಮಾಡಿದ್ದು, ಅದನ್ನು ಇಲ್ಲಿ ಕಾಣಬಹುದು

[17:00 UTC 16 ಮಾರ್ಚ್ 2020] ನಮ್ಮ ಪಾಲುದಾರರು ಮತ್ತು ನಮ್ಮ ವಿಸ್ತರಿತ ಉದ್ಯೋಗಿಗಳನ್ನು ರಕ್ಷಿಸುವುದು: ನಾವು YouTube ನಲ್ಲಿ ತಂಡಗಳು ಅಂತೆಯೇ ಪಾಲುದಾರ ಕಂಪನಿಗಳಿದ್ದು, ಅವುಗಳು YouTube ಸಮುದಾಯವನ್ನು ಬೆಂಬಲಿಸಲು ಮತ್ತು ರಕ್ಷಿಸಲು ನಮಗೆ ಸಹಾಯ ಮಾಡುತ್ತವೆ–ಅದು ಬಳಕೆದಾರ ಮತ್ತು ರಚನೆಕಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಜನರಿಂದ ಹಿಡಿದು, ಸಂಭವನೀಯ ನೀತಿ ಉಲ್ಲಂಘನೆಗಳ ಕುರಿತಾಗಿ ವೀಡಿಯೊಗಳನ್ನು ಮೌಲ್ಯಮಾಪನ ಮಾಡುವ ವಿಮರ್ಶಕರವರೆಗೆ ಯಾವುದೇ ರೀತಿಯ ಬೆಂಬಲವಾಗಿರಬಹುದು. ಕೆಲವು ಸೈಟ್‌ಗಳಲ್ಲಿ ಸಿಬ್ಬಂದಿಯನ್ನು ಕಡಿಮೆ ಮಾಡುವುದು ಸೇರಿದಂತೆ, ನಮ್ಮ ಉದ್ಯೋಗಿಗಳು, ವಿಸ್ತರಿತ ಉದ್ಯೋಗಿಗಳು ಮತ್ತು ಅವರು ವಾಸಿಸುವ ಸಮುದಾಯಗಳ ಯೋಗಕ್ಷೇಮದ ಕುರಿತು ಆದ್ಯತೆ ನೀಡಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.

ಈ ಬದಲಾವಣೆಯ ಮೂಲಕ, ಸಾಮಾನ್ಯವಾಗಿ ವಿಮರ್ಶಕರು ಮಾಡುವ ಕೆಲವು ಕೆಲಸಗಳನ್ನು ನಿರ್ವಹಿಸಲು ನಾವು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದೇವೆ. ಅಂದರೆ, ಸ್ವಯಂಚಾಲಿತ ಸಿಸ್ಟಂಗಳು ಮಾನವ ವಿಮರ್ಶೆಯನ್ನು ನಡೆಸದೆಯೇ ಕೆಲವು ಕಂಟೆಂಟ್‌ಗಳನ್ನು ತೆಗೆದುಹಾಕುವುದಕ್ಕೆ ಪ್ರಾರಂಭಿಸುತ್ತವೆ. ನಮ್ಮ ಈ ಉಪಕ್ರಮದಿಂದಾಗಿ, ಬಳಕೆದಾರರು ಮತ್ತು ರಚನೆಕಾರರು ನೀತಿಗಳನ್ನು ಉಲ್ಲಂಘಿಸದಿರುವ ಕೆಲವು ವೀಡಿಯೊಗಳು ಸೇರಿದಂತೆ, ಬಹಳಷ್ಟು ವೀಡಿಯೊಗಳನ್ನು ತೆಗೆದುಹಾಕುವುದನ್ನು ನೋಡಬಹುದು. ಈ ಕಂಟೆಂಟ್ ಉಲ್ಲಂಘನೆಯಾಗಿದೆ ಎಂದು ನಮಗೆ ಹೆಚ್ಚಿನ ವಿಶ್ವಾಸವಿರುವ ಸಂದರ್ಭಗಳನ್ನು ಹೊರತುಪಡಿಸಿ ನಾವು ಈ ಕಂಟೆಂಟ್ ಮೇಲೆ ಯಾವುದೇ ಸ್ಟ್ರೈಕ್‌ಗಳನ್ನು ವಿಧಿಸುವುದಿಲ್ಲ.

ನಿಮ್ಮ ಕಂಟೆಂಟ್ ಅನ್ನು ತೆಗೆದುಹಾಕಿರುವುದು ತಪ್ಪು ನಿರ್ಧಾರವೆಂದು ಭಾವಿಸಿದರೆ, ನೀವು ಎಂದಿನಂತೆ ಮೇಲ್ಮನವಿಯನ್ನು ಸಲ್ಲಿಸಬಹುದು, ಆದರೆ ನಮ್ಮ ಕಾರ್ಯಪಡೆಯ ಮುನ್ನೆಚ್ಚರಿಕೆಗಳು ವಿಳಂಬವಾದ ಮೇಲ್ಮನವಿ ವಿಮರ್ಶೆಗಳಿಗೆ ಕಾರಣವಾಗಬಹುದು ಎಂಬುದನ್ನು ಗಮನಿಸಿ. 

ಕೊರೋನಾ ವೈರಸ್ ಪರಿಸ್ಥಿತಿಯು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ ಮತ್ತು ನಮ್ಮ ತಂಡಗಳು ಮತ್ತು ಅವರು ವಾಸಿಸುವ ಸಮುದಾಯಗಳನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ಮುಂದುವರಿಸುತ್ತೇವೆ. ಇದು YouTube ಪಾಲುದಾರ ಕಾರ್ಯಕ್ರಮಕ್ಕಾಗಿ ಅರ್ಜಿಗಳು ಅಥವಾ ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳಂತಹ ಹೆಚ್ಚುವರಿ ರೀತಿಯ YouTube ಬಳಕೆದಾರ ಮತ್ತು ರಚನೆಕಾರರ ಬೆಂಬಲ ಮತ್ತು ವಿಮರ್ಶೆಗಳ ಮೇಲೆ ಪರಿಣಾಮ ಬೀರಬಹುದು. ನಮ್ಮ ಉದ್ಯೋಗಿಗಳನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ನಿಮ್ಮ ತಾಳ್ಮೆಗೆ ಧನ್ಯವಾದಗಳು. 

ರಚನೆಕಾರರ ಬೆಂಬಲ

[18:00 UTC 19 ಮಾರ್ಚ್ 2020] ನಾನು YouTube ರಚನೆಕಾರ, ನಾನು ಹೇಗೆ ಸಹಾಯ ಮಾಡಬಹುದು? COVID-19 ಉಲ್ಬಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ನೀವು ಹೇಗೆ ಸಹಾಯ ಮಾಡಬಹುದು ಎಂದು ಅನೇಕ ರಚನೆಕಾರರು ನಮ್ಮನ್ನು ಕೇಳಿದ್ದಾರೆ ಮತ್ತು ಇದೀಗ ನಿಮಗೆ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮತ್ತು ನಿಮ್ಮ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಸಹಾಯ ಮಾಡಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ, ಅದು ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಸೋಂಕಿನ ಪ್ರಮಾಣವನ್ನು ನಿಧಾನಗೊಳಿಸುವುದಾಗಿದೆ. 

ಓರ್ವ YouTube ರಚನೆಕಾರರಾಗಿ, ನೀವು ಏನು ಮಾಡಬಹುದು ಎಂಬುದನ್ನು ಇಲ್ಲಿ ನೋಡಿ → ಸೋಂಕು ಹರಡದಂತೆ ತಡೆಯಲು ಸುದ್ದಿಯನ್ನು ಹಂಚಿಕೊಳ್ಳಿ - #StayHome. 

ಜನರನ್ನು #StayHome ಎಂದು ಒತ್ತಾಯಿಸುವ ಕಂಟೆಂಟ್ ಅನ್ನು ಹಂಚಿಕೊಳ್ಳಲು ನೀವು YouTube ಬಳಸಲು ಆಯ್ಕೆ ಮಾಡಿದರೆ, ಉಪಯುಕ್ತವಾದ, ಮೋಜಿನ ಮತ್ತು ಮಾಹಿತಿಯುಕ್ತ ವೀಡಿಯೊಗಳನ್ನು ಪರಿಗಣಿಸಿ ಮತ್ತು #StayHome ಮತ್ತು ___ #WithMe ಎಂದು ಟ್ಯಾಗ್ ಮಾಡಿ (ಉದಾ, #StayHome ಮತ್ತು #WithMe ಅಡುಗೆ ಮಾಡಿಅಥವಾ #StayHome ಮತ್ತು #WithMe ಕಲಿಯಿರಿ). ಸ್ಪೂರ್ತಿ ಪಡೆಯಲು, ನಮ್ಮ ಚಾನಲ್ ಅನ್ನು ಪರಿಶೀಲಿಸಿ

#StayHome ಮತ್ತು ___ #WithMe ಅಭಿಯಾನದಲ್ಲಿ ಭಾಗವಹಿಸುವ ರಚನೆಕಾರರ ಕಂಟೆಂಟ್‌ಗಾಗಿ ನಾವು ಎಕ್ಸ್‌ಪ್ಲೋರ್ ಟ್ಯಾಬ್‌ನಲ್ಲಿ ಗಮ್ಯಸ್ಥಾನದ ಪುಟವನ್ನು ಕೂಡ ಸೇರಿಸುತ್ತಿದ್ದೇವೆ. ಈ ಸಮಯದಲ್ಲಿ ಜನರು ಕಲಿಯಲು, ಸಂಪರ್ಕ ಹೊಂದಲು ಮತ್ತು ಮನರಂಜನೆಗೆ ಸಹಾಯ ಮಾಡಲು ವೀಡಿಯೊವನ್ನು ಬಳಸಿರುವ ನಮ್ಮ ಕೆಲವು ರಚನೆಕಾರರನ್ನು ಈ ಪುಟವು ಹೈಲೈಟ್ ಮಾಡುತ್ತದೆ.


ಈವೆಂಟ್‌ಗಳು ಮತ್ತು ಸ್ಪೇಸ್‌ಗಳು
[22:35 UTC 18 ಫೆಬ್ರವರಿ 2021] YouTube ಸ್ಪೇಸ್‌ಗಳಲ್ಲಿ ಅಪ್‌ಡೇಟ್: ಕಳೆದ ವರ್ಷದ ಆರಂಭದಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಭೌತಿಕ YouTube ಸ್ಪೇಸ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದಾಗಿನಿಂದ, ನಾವು ನಮ್ಮ ಪಾಲುದಾರ ಪ್ರೋಗ್ರಾಮಿಂಗ್ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಮತ್ತು ವರ್ಚುವಲ್ ಈವೆಂಟ್‌ಗಳ ಮೂಲಕ ಇನ್ನಷ್ಟು ರಚನೆಕಾರರು ಮತ್ತು ಕಲಾವಿದರನ್ನು ತಲುಪಲು ಯೋಜನೆಯನ್ನು ರೂಪಿಸಿದ್ದೇವೆ. ಭವಿಷ್ಯದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ನಮ್ಮ ಸಮುದಾಯದ ಅಗತ್ಯತೆಗಳನ್ನು ಉತ್ತಮವಾಗಿ ಪೂರೈಸಲು, ನಾವು YouTube ಸ್ಪೇಸ್‌ಗಳನ್ನು ಪುನರ್ ರೂಪಿಸುತ್ತಿದ್ದೇವೆ. ನಮ್ಮ ಬ್ಲಾಗ್‌ನಲ್ಲಿ ಇತ್ತೀಚಿನ ಸುದ್ದಿಯನ್ನು ಓದಿ.
ಪಾವತಿಸಿದ ಉತ್ಪನ್ನ ಬೆಂಬಲ

[23:48 UTC 17 ಮಾರ್ಚ್ 2020] ಬೆಂಬಲದ ಕುರಿತು ಸಾಮಾನ್ಯಕ್ಕಿಂತ ದೀರ್ಘವಾದ ಪ್ರತಿಕ್ರಿಯೆ ಸಮಯ: COVID-19 ಗೆ ಸಂಬಂಧಿಸಿದ ಇತ್ತೀಚಿನ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಕಾರಣದಿಂದಾಗಿ, ನಾವು ಸೀಮಿತ ತಂಡದ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಬೆಂಬಲ ತಜ್ಞರ ಜೊತೆಗೆ ಸಂಪರ್ಕ ಹೊಂದಲು ನಿಮಗೆ ಲಭ್ಯವಿರುವ ಆಯ್ಕೆಗಳನ್ನು ನೋಡಿ ಅಥವಾ ಸಹಾಯ ಕೇಂದ್ರವನ್ನು ಸಂಪರ್ಕಿಸಿ.

ವೀಕ್ಷಕರ ಅಪ್‌ಡೇಟ್‌ಗಳು

[17:00 UTC 10 ಅಗಸ್ಟ್ 2020] ಹೆಚ್ಚಿನ ದೇಶಗಳಲ್ಲಿ ಖಿನ್ನತೆ ಮತ್ತು ಆತಂಕದ ಕುರಿತು ಮಾಹಿತಿಯನ್ನು ನೀಡುವ ಪ್ಯಾನೆಲ್‌ಗಳು ಲಭ್ಯವಿದೆನಾವು ಇನ್ನೂ 27 ದೇಶಗಳಲ್ಲಿ ಖಿನ್ನತೆ ಮತ್ತು ಆತಂಕದ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳನ್ನು ಪ್ರಾರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ನಂತಹ ಅಧಿಕೃತ ಮೂಲಗಳ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ. ನಾವು ಪಾಲುದಾರಿಕೆಯನ್ನು ಹೊಂದಿರುವ ಈ ದೇಶಗಳು ಮತ್ತು ಅಧಿಕೃತ ಮೂಲಗಳಿಗಾಗಿ, ನಮ್ಮ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳು ಲೇಖನವನ್ನು ನೋಡಿ. COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಧಿಕೃತ ಮಾನಸಿಕ ಆರೋಗ್ಯ ಮಾಹಿತಿಯನ್ನು ಬಳಕೆದಾರರಿಗೆ ಸುಲಭವಾಗಿ ಪ್ರವೇಶಿಸಲು ಈ ಮಾಹಿತಿ ಪ್ಯಾನೆಲ್‌ಗಳನ್ನು 13 ಜುಲೈ 2020 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲು ಬಾರಿಗೆ ಪರಿಚಯಿಸಲಾಯಿತು. ಖಿನ್ನತೆ ಮತ್ತು ಆತಂಕಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಮತ್ತು ಚಿಕಿತ್ಸೆಯ ಆಯ್ಕೆಗಳಂತಹ ಮಾಹಿತಿಯು ಪ್ಯಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮಾಹಿತಿಯು ಬೆಂಬಲ ಅಥವಾ ವೈದ್ಯಕೀಯ ಆರೈಕೆಯನ್ನು ಪಡೆಯಬೇಕೆ ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಶೀಘ್ರದಲ್ಲೇ ಇನ್ನಷ್ಟು ದೇಶಗಳು/ಪ್ರದೇಶಗಳಲ್ಲಿ ಪ್ಯಾನೆಲ್‌ಗಳನ್ನು ಲಭ್ಯವಾಗುವಂತೆ ಮಾಡುವುದನ್ನು ಮುಂದುವರಿಸಲು ನಾವು ಆಶಿಸುತ್ತೇವೆ.

[16:30 UTC 13 ಜುಲೈ 2020] ಖಿನ್ನತೆ ಮತ್ತು ಆತಂಕಕ್ಕೆ ಸಂಬಂಧಿಸಿದ ಹೊಸ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳು: COVID-19 ಸಾಂಕ್ರಾಮಿಕ ರೋಗವು ಕೇವಲ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಅದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಧಿಕೃತ ಮಾಹಿತಿಯನ್ನು ಹೆಚ್ಚು ಸುಲಭವಾಗಿ ಪ್ರವೇಶಿಸಲು ಜನರಿಗೆ ಸಹಾಯ ಮಾಡಲು, ನಾವು YouTube ಹುಡುಕಾಟದಲ್ಲಿ ಖಿನ್ನತೆ ಮತ್ತು ಆತಂಕದ ಕುರಿತಾದ ಆರೋಗ್ಯ ಮಾಹಿತಿ ಪ್ಯಾನೆಲ್‌ಗಳನ್ನು ಪರಿಚಯಿಸುತ್ತಿದ್ದೇವೆ. ಪ್ಯಾನೆಲ್‌ಗಳನ್ನು ಪ್ರಾರಂಭಿಸಲು ನಾವು Mayo Clinic ಜೊತೆಗೆ ಪಾಲುದಾರರಾಗಿದ್ದು, ಇದು ಖಿನ್ನತೆ ಮತ್ತು ಆತಂಕದ ಕುರಿತಾದ ಲಕ್ಷಣಗಳು ಮತ್ತು ಚಿಕಿತ್ಸೆ ಆಯ್ಕೆಗಳ ಮಾಹಿತಿಯನ್ನು ತೋರಿಸುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಖಿನ್ನತೆ ಮತ್ತು ಆತಂಕದ ಕುರಿತಾದ ಆರೋಗ್ಯ ಪ್ಯಾನೆಲ್‌ಗಳು ಪ್ರಾಯೋಗಿಕವಾಗಿ ಮೌಲ್ಯೀಕರಿಸಲಾದ Google ಸ್ವಯಂ-ಮೌಲ್ಯಮಾಪನಗಳಿಗೆ ಲಿಂಕ್ ಮಾಡುತ್ತವೆ. ಸ್ವಯಂ-ಮೌಲ್ಯಮಾಪನಗಳು ಬಳಕೆದಾರರಿಗೆ ಯಾವ ರೀತಿಯ ಬೆಂಬಲ ಅಥವಾ ವೈದ್ಯಕೀಯ ಆರೈಕೆಯು ಸೂಕ್ತವಾಗಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಪ್ಯಾನೆಲ್‌ಗಳು ಮತ್ತು ಸ್ವಯಂ-ಮೌಲ್ಯಮಾಪನಗಳು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಭ್ಯವಿವೆ ಮತ್ತು ಶೀಘ್ರದಲ್ಲೇ ಇನ್ನಷ್ಟು ದೇಶಗಳು/ಪ್ರದೇಶಗಳಲ್ಲಿ ಪ್ಯಾನೆಲ್‌ಗಳನ್ನು ಲಭ್ಯವಾಗುವಂತೆ ಮಾಡಲು ಭರವಸೆಯನ್ನು ಹೊಂದಿದ್ದೇವೆ.

[23:15 UTC 11 ಜೂನ್ 2020] COVID-19 ಆರೋಗ್ಯ ಪ್ಯಾನೆಲ್ ಸ್ವಯಂ ಮೌಲ್ಯಮಾಪನದ ಕುರಿತು ಅಪ್‌ಡೇಟ್: ನಾವು YouTube ಹುಡುಕಾಟದಲ್ಲಿ ನಮ್ಮ COVID-19 ಆರೋಗ್ಯ ಪ್ಯಾನೆಲ್ ಎಂಬಲ್ಲಿ COVID-19 ಸ್ವಯಂ ಮೌಲ್ಯಮಾಪನವನ್ನು ನಾವು ಪ್ರಾರಂಭಿಸಿದ್ದೇವೆ. COVID-19 ಸ್ವಯಂ-ಮೌಲ್ಯಮಾಪನವು ಈಗ Google ನ ಸ್ವಯಂ-ಮೌಲ್ಯಮಾಪನ ಸ್ಕ್ರೀನರ್‌ಗೆ ಲಿಂಕ್ ಮಾಡುತ್ತದೆ, ಇದು CDC ಮಾರ್ಗಸೂಚಿಗಳನ್ನು ಆಧರಿಸಿದೆ. ಬಳಕೆದಾರರಿಗೆ ಯಾವ ರೀತಿಯ ಬೆಂಬಲ ಅಥವಾ ವೈದ್ಯಕೀಯ ಆರೈಕೆ ಸೂಕ್ತವಾಗಬಹುದು ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸ್ವಯಂ ಮೌಲ್ಯಮಾಪನ ಸ್ಕ್ರೀನರ್ ನೀಡುತ್ತದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಗಳಲ್ಲಿ ಹೊರತರುತ್ತಿದ್ದೇವೆ.

[23:34 UTC 30 ಏಪ್ರಿಲ್ 2020] COVID-19 ಆರೋಗ್ಯ ಪ್ಯಾನೆಲ್ ಸ್ವಯಂ ಮೌಲ್ಯಮಾಪನ: ಸೂಕ್ತವಾದ ವೈದ್ಯಕೀಯ ಆರೈಕೆಯನ್ನು ಪಡೆಯುವ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಗೆ ಸಹಾಯ ಮಾಡುವ ಸಲುವಾಗಿ, COVID-19 ಹುಡುಕಾಟದಲ್ಲಿನ ನಮ್ಮ ಆರೋಗ್ಯ ಪ್ಯಾನೆಲ್‌ನಲ್ಲಿ ನಾವು COVID-19 ಸ್ವಯಂ ಮೌಲ್ಯಮಾಪನಕ್ಕೆ ಲಿಂಕ್ ಸೇರಿಸಿದ್ದೇವೆ. ನಾವು ಇದನ್ನು ಯುಎಸ್‌ನಲ್ಲಿ ಲಾಂಚ್ ಮಾಡುತ್ತಿದ್ದು, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದೇವೆ ಮತ್ತು ಶೀಘ್ರದಲ್ಲೇ ಇನ್ನಷ್ಟು ದೇಶಗಳಲ್ಲಿ ಹೊರತರುತ್ತಿದ್ದೇವೆ. COVID-19 ಆರೋಗ್ಯ ಪ್ಯಾನೆಲ್, CDC ವೆಬ್‌ಸೈಟ್‌ನಲ್ಲಿ CDC ಯ ಸ್ವಯಂ-ಮೌಲ್ಯಮಾಪನ ಸ್ಕ್ರೀನರ್‌ಗೆ ಲಿಂಕ್ ಮಾಡುತ್ತದೆ, ಅಲ್ಲಿ ಬಳಕೆದಾರರು ಯಾವ ರೀತಿಯ ವೈದ್ಯಕೀಯ ಆರೈಕೆಯು ಸೂಕ್ತವಾಗಿರಬಹುದು ಎಂಬುದರ ಕುರಿತು ಶಿಫಾರಸುಗಳನ್ನು ತಿಳಿಸಲು ಪ್ರಶ್ನೆಗಳಿಗೆ ಉತ್ತರಿಸಬಹುದು.

[16:00 UTC ಏಪ್ರಿಲ್ 1 2020] COVID-19 ಆರೋಗ್ಯ ಪ್ಯಾನೆಲ್‌ಗಳು: ಇಂದಿನಿಂದ, ನಾವು COVID-19 ಗಾಗಿ ಹೆಚ್ಚುವರಿ ಆರೋಗ್ಯ ಪ್ಯಾನೆಲ್‌ಗಳನ್ನು ಪ್ರಾರಂಭಿಸುತ್ತಿದ್ದು, ಅದು COVID-19 ಸಂಬಂಧಿತ ಹುಡುಕಾಟಗಳಿಗಾಗಿ ಹುಡುಕಾಟ ಫಲಿತಾಂಶಗಳಲ್ಲಿ ತೋರಿಸುತ್ತದೆ. ಈ ಪ್ಯಾನೆಲ್‌ಗಳು WHO ಮತ್ತು NHS ನ ಪಠ್ಯ-ಆಧಾರಿತ ಆರೋಗ್ಯ ಮಾಹಿತಿಯನ್ನು ಮತ್ತು ರೋಗಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಂತಹ ಕಂಟೆಂಟ್ ಅನ್ನು ಒಳಗೊಂಡಿವೆ. ಈ ಸಮಯದಲ್ಲಿ, ನಾವು ಸ್ಥಳೀಯ ಆರೋಗ್ಯ ಮೂಲಗಳಿಗೆ ಆದ್ಯತೆ ನೀಡುವುದನ್ನು ಮುಂದುವರಿಸಲು ಬಯಸುತ್ತೇವೆ, ಆದ್ದರಿಂದ ನೀವು ಸ್ಥಳೀಯ ಆರೋಗ್ಯ ಪ್ರಾಧಿಕಾರ ಮತ್ತು COVID-19 ಆರೋಗ್ಯ ಪ್ಯಾನೆಲ್‌ಗೆ ಲಿಂಕ್ ಹೊಂದಿರುವ ಮಾಹಿತಿ ಫಲಕ ಎರಡನ್ನೂ ನೋಡಬಹುದು.

[13:30 UTC 24 ಮಾರ್ಚ್ 2020] ಸರಿಹೊಂದಿಸಿದ ಬ್ಯಾಂಡ್‌ವಿಡ್ತ್ ಬಳಕೆಯ ಕುರಿತು ಅಪ್‌ಡೇಟ್: ಕಳೆದ ವಾರ, ನಾವು  ಯುರೋಪಿಯನ್ ಯೂನಿಯನ್ (EU), ಯುನೈಟೆಡ್ ಕಿಂಗ್‌ಡಮ್ (UK), ಮತ್ತು ಸ್ವಿಟ್ಜರ್ಲೆಂಡ್ (CH) ನಲ್ಲಿ ಎಲ್ಲಾ YouTube ವೀಡಿಯೊಗಳನ್ನು ತಾತ್ಕಾಲಿಕವಾಗಿ ಸ್ಟ್ಯಾಂಡರ್ಡ್ ಡೆಫಿನಿಷನ್‌ಗೆ ಡೀಫಾಲ್ಟ್ ಮಾಡಿದ್ದೇವೆ. ಈ ಬಿಕ್ಕಟ್ಟಿನ ಜಾಗತಿಕ ಸ್ವರೂಪವನ್ನು ಗಮನಿಸಿ, ನಾವು ಇಂದಿನಿಂದ ಆ ಬದಲಾವಣೆಯನ್ನು ಜಾಗತಿಕವಾಗಿ ವಿಸ್ತರಿಸುತ್ತಿದ್ದೇವೆ. ಈ ಅಪ್‌ಡೇಟ್ ನಿಧಾನವಾಗಿ ಹೊರಬರುತ್ತಿದೆ. ಕಂಪ್ಯೂಟರ್, ಟಿವಿ ಅಥವಾ ಮೊಬೈಲ್ ಸಾಧನದಲ್ಲಿ ನೀವು ವೀಕ್ಷಿಸುತ್ತಿರುವ ಯಾವುದೇ ವೀಡಿಯೊದ ವೀಡಿಯೊ ಗುಣಮಟ್ಟವನ್ನು ನೀವು ಮ್ಯಾನ್ಯುಯಲ್ ಆಗಿ ಸರಿಹೊಂದಿಸಬಹುದು. ಸಿಸ್ಟಂನಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಅಂತೆಯೇ ಉತ್ತಮ ಬಳಕೆದಾರ ಅನುಭವವನ್ನು ನೀಡುವ ನಿಟ್ಟಿನಲ್ಲಿ, ನಾವು ಸದಸ್ಯ ರಾಜ್ಯ ಸರ್ಕಾರಗಳು ಮತ್ತು ನೆಟ್‌ವರ್ಕ್ ಆಪರೇಟರ್‌ಗಳ ಜೊತೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

[21:16 UTC 20 ಮಾರ್ಚ್ 2020] ಸರಿಹೊಂದಿಸಿದ ಬ್ಯಾಂಡ್‌ವಿಡ್ತ್ ಬಳಕೆ: COVID-19 ಪರಿಸ್ಥಿತಿಯು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರಿಂದ, ಅಧಿಕೃತ ಸುದ್ದಿಗಳು, ಕಲಿಕೆಯ ಕಂಟೆಂಟ್ ಅನ್ನು ಹುಡುಕಲು ಮತ್ತು ಸಂಪರ್ಕಗಳನ್ನು ಸಾಧಿಸಲು ಹೆಚ್ಚಿನ ಜನರು YouTube ಗೆ ಬರುತ್ತಾರೆ. ಕಡಿಮೆ ನೆಟ್‌ವರ್ಕ್ ಸಾಮರ್ಥ್ಯವನ್ನು ಬಳಸಲು ನಮ್ಮ ಸಿಸ್ಟಂ ಅನ್ನು ಸ್ವಯಂಚಾಲಿತವಾಗಿ ಹೊಂದಿಸುವ ನಿಟ್ಟಿನಲ್ಲಿ ನಾವು ಕೆಲವು ಮಾನದಂಡಗಳನ್ನು ಜಾರಿಗೆ ತಂದಿದ್ದೇವೆ. ನಾವು  ಯುರೋಪಿಯನ್ ಯೂನಿಯನ್ (EU), ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಸ್ವಿಟ್ಜರ್ಲೆಂಡ್ (CH) ನಲ್ಲಿನ ಎಲ್ಲಾ ಟ್ರಾಫಿಕ್ ಅನ್ನು ಸ್ಟ್ಯಾಂಡರ್ಡ್ ಡೆಫಿನಿಷನ್‌ಗೆ ತಾತ್ಕಾಲಿಕವಾಗಿ ಡೀಫಾಲ್ಟ್ ಮಾಡುತ್ತಿದ್ದೇವೆ. ಕಂಪ್ಯೂಟರ್, ಟಿವಿ ಅಥವಾ ಮೊಬೈಲ್ ಸಾಧನದಲ್ಲಿ ನೀವು ವೀಕ್ಷಿಸುತ್ತಿರುವ ಯಾವುದೇ ವೀಡಿಯೊದ ವೀಡಿಯೊ ಗುಣಮಟ್ಟವನ್ನು ನೀವು ಮ್ಯಾನ್ಯುಯಲ್ ಆಗಿ ಸರಿಹೊಂದಿಸಬಹುದು. ಸಿಸ್ಟಂನಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಅಂತೆಯೇ ಉತ್ತಮ ಬಳಕೆದಾರ ಅನುಭವವನ್ನು ನೀಡುವ ನಿಟ್ಟಿನಲ್ಲಿ, ನಾವು ಸದಸ್ಯ ರಾಜ್ಯ ಸರ್ಕಾರಗಳು ಮತ್ತು ನೆಟ್‌ವರ್ಕ್ ಆಪರೇಟರ್‌ಗಳ ಜೊತೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

[21:35 UTC 19 ಮಾರ್ಚ್ 2020] COVID-19 ಸುದ್ದಿ ಶೆಲ್ಫ್: COVID-19 ಸುದ್ದಿ ಶೆಲ್ಫ್ ಇದೀಗ YouTube ಹೋಮ್ ಪೇಜ್‌ನಲ್ಲಿ ಕಾಣಿಸಬಹುದು. ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಧಿಕೃತ ಸುದ್ದಿ ಪ್ರಕಾಶಕರು ಮತ್ತು ಸ್ಥಳೀಯ ಆರೋಗ್ಯ ಪ್ರಾಧಿಕಾರಗಳಿಂದ ಪಡೆದ COVID-19 ಕುರಿತು ಸುದ್ದಿ ವೀಡಿಯೊಗಳನ್ನು ಶೆಲ್ಫ್ ಒಳಗೊಂಡಿದೆ. COVID-19 ಗೆ ಪ್ರಸ್ತುತತೆ, ಅದು ಎಷ್ಟು ಅಪ್ ಟು ಡೇಟ್ ಆಗಿದೆ ಮತ್ತು ಪ್ರದೇಶವನ್ನು ಒಳಗೊಂಡಂತೆ ನೂರಾರು ಸಿಗ್ನಲ್‌ಗಳನ್ನು ಬಳಸಿಕೊಂಡು ಈ ಶೆಲ್ಫ್‌ನಲ್ಲಿರುವ ಕಂಟೆಂಟ್ ಅನ್ನು ಅಲ್ಗಾರಿದಮ್ ಮೂಲಕ ಭರ್ತಿ ಮಾಡಲಾಗಿದೆ. ಒಂದು ವೇಳೆ ಬ್ರೇಕಿಂಗ್ ನ್ಯೂಸಿ ಅಥವಾ ಟಾಪ್ ನ್ಯೂಸ್ ಶೆಲ್ಫ್‌ಗಳು ಈಗಾಗಲೇ ಕಾಣಿಸುತ್ತಿದ್ದರೆ, ನಿಮಗೆ COVID-19 ಸುದ್ದಿ ಶೆಲ್ಫ್ ಕಾಣಿಸದಿರಬಹುದು. ನೀವು ಹೋಮ್ ಪೇಜ್‌ನಲ್ಲಿ ಯಾವಾಗ ಬೇಕಾದರೂ COVID-19 ಸುದ್ದಿ ಶೆಲ್ಫ್ ಅನ್ನು ವಜಾಗೊಳಿಸಬಹುದು.

[16:00 UTC ಮಾರ್ಚ್ 11 2020] ಮಾಹಿತಿ ಫಲಕಗಳು: ನಾವು ಫೆಬ್ರವರಿ ಪ್ರಾರಂಭದಿಂದ, ವಿಶ್ವ ಆರೋಗ್ಯ ಸಂಸ್ಥೆಗೆ ಅಥವಾ ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಬಿಂಬಿಸುವ ಸ್ಥಳೀಯ ಸಂಪನ್ಮೂಲಗಳಿಗೆ ನಿರ್ದೇಶಿಸುವ ಮಾಹಿತಿ ಫಲಕಗಳನ್ನು ಪ್ರಾರಂಭಿಸಿದ್ದೇವೆ. ಪ್ಯಾನೆಲ್ ಅನ್ನು YouTube ಹೋಮ್ ಪೇಜ್‌ನಲ್ಲಿ, ಕೊರೋನಾ ವೈರಸ್‌ಗೆ ಸಂಬಂಧಿಸಿದ ಪ್ರಶ್ನೆಗಳ ಹುಡುಕಾಟದಲ್ಲಿ, ಹಾಗೆಯೇ ಕೊರೋನಾ ವೈರಸ್‌ಗೆ ಸಂಬಂಧಿಸಿದ ವೀಡಿಯೊಗಳ ವೀಕ್ಷಣಾ ಪುಟದಲ್ಲಿ ಕಾಣಬಹುದಾಗಿದೆ. ಶಿಕ್ಷಣ ಮತ್ತು ಮಾಹಿತಿಗಾಗಿ ಬಳಸಲು ಪ್ರಭಾವಿತ ಪ್ರದೇಶಗಳಲ್ಲಿ ಸರ್ಕಾರಗಳು ಮತ್ತು NGO ಗಳಿಗೆ ನಾವು ಆ್ಯಡ್ ಇನ್ವೆಂಟರಿಯನ್ನು ಕೊಡುಗೆ ನೀಡುತ್ತೇವೆ.

ಸಮುದಾಯ ಮತ್ತು ಕಾಮೆಂಟ್‌ಗಳು

[20:20 UTC 20 ಮಾರ್ಚ್ 2020] ಸಮುದಾಯ ಪೋಸ್ಟ್‌ಗಳು: ನಮ್ಮ ಉದ್ಯೋಗಿಗಳ ಮೇಲೆ ಕೊರೋನಾ ವೈರಸ್ (COVID-19) ನ ಪ್ರಭಾವದಿಂದಾಗಿ, ಕೆಲವು ಚಾನಲ್‌ಗಳಲ್ಲಿ ಸಮುದಾಯ ಪೋಸ್ಟ್‌ಗಳು ತಾತ್ಕಾಲಿಕವಾಗಿ ಲಭ್ಯವಿಲ್ಲ. ಇದು ನಿಮ್ಮ ಖಾತೆಯಲ್ಲಿ ಯಾವುದೇ ಹೊಸ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ಅಥವಾ ಪೆನಾಲ್ಟಿಗಳನ್ನು ವಿಧಿಸಲು ಕಾರಣವಾಗುವುದಿಲ್ಲ.

ಬಳಕೆದಾರರು ಅಥವಾ ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಫ್ಲ್ಯಾಗ್ ಮಾಡಿರುವ ಕೆಲವು ಸಮುದಾಯ ಪೋಸ್ಟ್‌ಗಳನ್ನು ನಮ್ಮ ವಿಮರ್ಶಕರು ಸೂಕ್ಷ್ಮವಾಗಿ ಗಮನಿಸುವ ಸಂದರ್ಭದಲ್ಲಿ, ಅವುಗಳು ಹೋಮ್ ಪೇಜ್‌ನಲ್ಲಿ ಅಥವಾ ಶಿಫಾರಸುಗಳಲ್ಲಿ ಲಭ್ಯವಿಲ್ಲದಿರಬಹುದು. ಇದರ ಪರಿಣಾಮವಾಗಿ, ಈ ಪೋಸ್ಟ್‌ಗಳು ಸಾಮಾನ್ಯಕ್ಕಿಂತ ಕಡಿಮೆ ತೊಡಗಿಸಿಕೊಳ್ಳುವಿಕೆ ದರವನ್ನು ಪಡೆಯಬಹುದು.

ಪದೇಪದೇ ಕೇಳಲಾದ ಪ್ರಶ್ನೆಗಳು

ನನಗೆ ಕೊರೋನಾ ವೈರಸ್ (COVID-19) ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಎಲ್ಲಿಗೆ ಭೇಟಿ ನೀಡಬೇಕು? 

ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌ನಲ್ಲಿ ಕೊರೋನಾ ವೈರಸ್ ಹರಡುವಿಕೆಗೆ ಸಂಬಂಧಿಸಿದ ಮಾಹಿತಿ ಮತ್ತು ಮಾರ್ಗದರ್ಶನಗಳು ಲಭ್ಯವಿವೆ. ನಾವು ಸ್ಥಳೀಯವಾಗಿ ಸಂಬಂಧಿಸಿದ ಹೆಚ್ಚುವರಿ ಮಾಹಿತಿ ಮೂಲಗಳನ್ನು ಸಹ ಕೆಳಗೆ ಒದಗಿಸಿದ್ದೇವೆ:

ದೇಶ/ಪ್ರದೇಶ ಮೂಲ
ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಸರ್ಕಾರದ ಆರೋಗ್ಯ ಇಲಾಖೆ
ಬೆಲ್ಜಿಯಂ ಫೆಡರಲ್ ಸಾರ್ವಜನಿಕ ಸೇವೆ (FPS) ಆರೋಗ್ಯ, ಆಹಾರ ಸರಪಳಿ ಸುರಕ್ಷತೆ ಮತ್ತು ಪರಿಸರ
ಬ್ರೆಜಿಲ್ Ministério da Saúde
ಕೆನಡಾ ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ
ಫ್ರಾನ್ಸ್ Gouvernement.fr
ಜರ್ಮನಿ ಆರೋಗ್ಯ ಶಿಕ್ಷಣಕ್ಕಾಗಿ ಫೆಡರಲ್ ಕೇಂದ್ರ
ಹಾಂಗ್‌ಕಾಂಗ್ ಆರೋಗ್ಯ ರಕ್ಷಣೆ ಕೇಂದ್ರ
ಇಸ್ರೇಲ್ ಆರೋಗ್ಯ ಸಚಿವಾಲಯ
ಭಾರತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ
ಇಂಡೋನೇಷ್ಯಾ ಇಂಡೋನೇಷ್ಯಾ ಆರೋಗ್ಯ ಸಚಿವಾಲಯ
ಇಟಲಿ ಆರೋಗ್ಯ ಸಚಿವಾಲಯ
ಐರ್ಲೆಂಡ್ ಆರೋಗ್ಯ ಇಲಾಖೆ
ಜಪಾನ್ ಜಪಾನ್ ಕ್ಯಾಬಿನೆಟ್ ಸೆಕ್ರೆಟರಿಯೇಟ್
ಮಲೇಶಿಯಾ ಮಲೇಶಿಯಾ ಆರೋಗ್ಯ ಸಚಿವಾಲಯ
ನೆದರ್‌ಲ್ಯಾಂಡ್ಸ್ ಆರೋಗ್ಯ, ಕಲ್ಯಾಣ ಮತ್ತು ಕ್ರೀಡಾ ಸಚಿವಾಲಯ
ನಾರ್ವೇ ಆರೋಗ್ಯ ಇಲಾಖೆ, ನಾರ್ವೇ
ಸಿಂಗಾಪೂರ್ ಆರೋಗ್ಯ ಸಚಿವಾಲಯ
ದಕ್ಷಿಣ ಕೊರಿಯಾ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ, ದಕ್ಷಿಣ ಕೊರಿಯಾ
ಸ್ಪೇನ್ ಆರೋಗ್ಯ ಸಚಿವಾಲಯ
ಸ್ವೀಡನ್ ಸ್ವೀಡನ್ ಸಾರ್ವಜನಿಕ ಆರೋಗ್ಯ ಸಂಸ್ಥೆ
ಸ್ವಿಟ್ಜರ್‌ಲ್ಯಾಂಡ್ ಸಾರ್ವಜನಿಕ ಆರೋಗ್ಯದ ಫೆಡರಲ್ ಕಚೇರಿ FOPH
ಥೈವಾನ್ ಥೈವಾನ್ CDC
ಥಾಯ್ಲೆಂಡ್ ಥಾಯ್ಲೆಂಡ್ ಸಾರ್ವಜನಿಕ ಆರೋಗ್ಯ ಸಚಿವಾಲಯ
ವಿಯೆಟ್ನಾಂ ವಿಯೆಟ್ನಾಮಿಸ್ ಆರೋಗ್ಯ ಸಚಿವಾಲಯ
ಯುಕೆ ರಾಷ್ಟ್ರೀಯ ಆರೋಗ್ಯ ಸೇವೆ
ಯುಎಸ್ ಕಾಯಿಲೆ ನಿಯಂತ್ರಣ ಕೇಂದ್ರ
ಕೊರೋನಾ ವೈರಸ್ (COVID-19) ಗೆ ಸಂಬಂಧಿಸಿದಂತೆ ನಾವು ಮಾಡುವ ಹೆಚ್ಚುವರಿ ಬದಲಾವಣೆಗಳ ಕುರಿತು YouTube ನನಗೆ ತಿಳಿಸುವುದನ್ನು ಹೇಗೆ ಮುಂದುವರಿಸುತ್ತದೆ? 
ಕೊರೋನಾ ವೈರಸ್ ಪರಿಸ್ಥಿತಿಯು ದಿನೇ ಹೆಚ್ಚಾಗುತ್ತಲೇ ಇದ್ದು, ನಮ್ಮ ಪ್ರಕ್ರಿಯೆಗಳು ಮತ್ತು ಬೆಂಬಲ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಯಾವುದೇ ಬದಲಾವಣೆಗಳನ್ನು ಒಳಗೊಂಡಂತೆ ನಿಮಗೆ ಅಪ್‌ಡೇಟ್‌ಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. 

ಈ ಬದಲಾವಣೆಗಳಿಂದಾಗಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಮಾಹಿತಿಯನ್ನು ಪಡೆಯಲು, ಈ ಲೇಖನವನ್ನು ಪರಿಶೀಲಿಸುವುದನ್ನು ಮುಂದುವರಿಸಿ. ನಾವು ಅದನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುತ್ತೇವೆ.
ಕೊರೋನಾ ವೈರಸ್ (COVID-19) ಕುರಿತು ತಪ್ಪು ಮಾಹಿತಿಯ ವಿರುದ್ಧ YouTube ಹೇಗೆ ಹೋರಾಡುತ್ತಿದೆ?
ಹುಡುಕಾಟ ಮತ್ತು ಶಿಫಾರಸುಗಳಲ್ಲಿ ಅಧಿಕೃತ ಮಾಹಿತಿ ಮೂಲಗಳನ್ನು ಸಂಗ್ರಹಿಸುವುದು ಮತ್ತು ಮಾಹಿತಿ ಫಲಕಗಳನ್ನು ತೋರಿಸುವುದು, ಸಂಬಂಧಿತ ವೀಡಿಯೊಗಳಲ್ಲಿ WHO ನಂತಹ ಸ್ಥಳೀಯವಾಗಿ ಸಂಬಂಧಿತ ಮಾಹಿತಿ ಮೂಲಗಳಿಗೆ ಲಿಂಕ್ ಮಾಡುವುದು ಸೇರಿದಂತೆ, ಈ ಗಂಭೀರ ಸಮಯದಲ್ಲಿ ಸಮಯೋಚಿತ ಮತ್ತು ಸಹಾಯಕವಾದ ಮಾಹಿತಿಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಫ್ಲ್ಯಾಗ್ ಮಾಡಿದಾಗ, ನಮ್ಮ ನೀತಿಗಳನ್ನು ಉಲ್ಲಂಘಿಸುವ ವೀಡಿಯೊಗಳನ್ನು ತ್ವರಿತವಾಗಿ ತೆಗೆದುಹಾಕುವುದನ್ನು ನಾವು ಮುಂದುವರಿಸುತ್ತೇವೆ, ಇದರಲ್ಲಿ ಜನರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯದಂತೆ ನಿರುತ್ಸಾಹಗೊಳಿಸುವುದು ಅಥವಾ ಹಾನಿಕಾರಕ ಪದಾರ್ಥಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ಹೇಳಿಕೊಳ್ಳುವ ವೀಡಿಯೊಗಳು ಒಳಗೊಂಡಿರುತ್ತವೆ. ಸುದ್ದಿಗಳು ಬ್ರೇಕಿಂಗ್ ಆಗಿರುವುದರಿಂದ ವಿಶ್ವಾಸಾರ್ಹ ಕಂಟೆಂಟ್ ಅನ್ನು ಕಂಡುಕೊಳ್ಳುವುದು ಕ್ಲಿಷ್ಟಕರ ಕೆಲಸವಾಗಿದೆ ಮತ್ತು ನಮ್ಮ ಬಳಕೆದಾರರಿಗೆ YouTube ನಿಖರವಾದ ಮಾಹಿತಿಯನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳುವುದನ್ನು ನಾವು ಮುಂದುವರಿಸುತ್ತೇವೆ.
ನಾನು ಓರ್ವ YouTube ರಚನೆಕಾರ, ನಾನು ಹೇಗೆ ಸಹಾಯ ಮಾಡಬಹುದು?

COVID-19 ಉಲ್ಬಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ನೀವು ಹೇಗೆ ಸಹಾಯ ಮಾಡಬಹುದು ಎಂದು ಅನೇಕ ರಚನೆಕಾರರು ನಮ್ಮನ್ನು ಕೇಳಿದ್ದಾರೆ ಮತ್ತು ಇದೀಗ ನಿಮಗೆ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮತ್ತು ನಿಮ್ಮ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಸಹಾಯ ಮಾಡಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ, ಅದು ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಸೋಂಕಿನ ಪ್ರಮಾಣವನ್ನು ನಿಧಾನಗೊಳಿಸುವುದಾಗಿದೆ. ಇದು ನೀವು ಕೇಳಿಸಿಕೊಳ್ಳುವ "ಸಾಮಾಜಿಕ ಅಂತರ" ಮತ್ತು “ಸೋಂಕಿನ ಪ್ರಮಾಣ ಹೆಚ್ಚಾಗದಂತೆ ತಡೆಗಟ್ಟಿ” ಎಂಬ ಘೋಷಣೆಗಳಾಗಿವೆ (ಇಲ್ಲಿ ಇನ್ನಷ್ಟು ಓದಿ).

ನಮ್ಮ ಸಮುದಾಯಗಳಾದ್ಯಂತ ಬೆಂಬಲ ವ್ಯವಸ್ಥೆಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕರಾಗಿರುವ ಅಲ್ಲದೇ ತಮ್ಮ ಮನೆಯಿಂದ ಕೆಲಸಕ್ಕೆ ಹೋಗಿ ಬರಲು ಪ್ರಯಾಣಿಸಲೇಬೇಕಾದಂತಹ ಆರೋಗ್ಯ ಮತ್ತು ಸರ್ಕಾರಿ ನೌಕರರು (ಅವರಲ್ಲಿ ಕೆಲವರು ಸ್ವತಃ ರಚನೆಕಾರರು) ನಮ್ಮ ಕಣ್ಣಮುಂದೆಯೇ ಇದ್ದಾರೆ ಮತ್ತು ಇಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಕೆಲಸವನ್ನು ನಿಭಾಯಿಸುತ್ತಿರುವ ಅಂತಹ ಎಲ್ಲಾ ವ್ಯಕ್ತಿಗಳಿಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ.

ಉಳಿದ ನಾವುಗಳು, ನಮ್ಮ ನಡುವಿನ ಅತ್ಯಂತ ದುರ್ಬಲ ಜನರನ್ನು ರಕ್ಷಿಸಲು ಸಹಾಯ ಮಾಡುವ ವೈಯಕ್ತಿಕ ಕ್ರಿಯೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಧಿಕೃತ ಆರೋಗ್ಯ ಮತ್ತು ಸುರಕ್ಷತಾ ಸಂಸ್ಥೆಗಳು ಸಾಧ್ಯವಾದಾಗಲೆಲ್ಲಾ ಮನೆಯಲ್ಲೇ ಇರಲು ಜನರನ್ನು ಒತ್ತಾಯಿಸುತ್ತಿವೆ, ಆದ್ದರಿಂದ ನಾವು ವೈರಸ್‌ನಿಂದ ಹೆಚ್ಚಿನ ಅಪಾಯದಲ್ಲಿರುವವರಿಗೆ ಸುರಕ್ಷಿತ ವಾತಾವರಣವನ್ನು ರಚಿಸಲು ಸಾಧ್ಯವಾಗುತ್ತದೆ.

ಹೀಗಾಗಿ ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿಯೇ ಇರಿ.

ನೀವು ಎಲ್ಲಿ ಸಹಾಯ ಮಾಡಬಹುದು ಎಂಬುದರ ಕುರಿತು ಇಲ್ಲಿ ನೋಡಿ → ಸೋಂಕು ಹರಡದಂತೆ ತಡೆಯಲು ಈ ಪದವನ್ನು ಹರಡಿ - #StayHome

ಮನೆಯಲ್ಲಿರುವ ಇರುವ ಕುರಿತು ಸುದ್ದಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ನೀವು YouTube ಬಳಸುವುದಕ್ಕೆ ಆಯ್ಕೆ ಮಾಡಿದರೆ, ನಿಮ್ಮ ಕಂಟೆಂಟ್ ಅನ್ನು ಪೋಸ್ಟ್ ಮಾಡುವ ಕುರಿತಾದ ಕೆಲವು ತ್ವರಿತ ಸಲಹೆಗಳು ಇಲ್ಲಿವೆ:

  • #StayHome ಮತ್ತು ___ #WithMe ಪರಿಕಲ್ಪನೆಗಳು. ಉಪಯುಕ್ತ, ಮೋಜಿನ, ಮಾಹಿತಿಯುಕ್ತ ಕಂಟೆಂಟ್ ಅನ್ನು ಪರಿಗಣಿಸಿ ಮತ್ತು #StayHome ಮತ್ತು ____ #WithMe ಟ್ಯಾಗ್ ಮಾಡಿ, ಹೀಗೆ ಮಾಡುವ ಮೂಲಕ ನೀವು ಇತರರ ಜೊತೆಗೆ ಸೇರಬಹುದು. ಉದಾ. #StayHome ಮತ್ತು #WithMe ಅಡುಗೆ ಮಾಡಿ ಅಥವಾ #StayHome ಮತ್ತು #WithMe ಕಲಿಯಿರಿ. ನಿಮ್ಮಂತಹ ರಚನೆಕಾರರಿಂದ ಸ್ಪೂರ್ತಿ ಪಡೆಯಲು, ನಮ್ಮ ಚಾನಲ್ ಪರಿಶೀಲಿಸಿ
  • ನಿಮ್ಮ ಕಾರ್ಯದ ವಾಸ್ತವಾಂಶವನ್ನು ಪರಿಶೀಲಿಸಿ. ನಿಮ್ಮ ಕಂಟೆಂಟ್‌ನಲ್ಲಿ ಮಾಹಿತಿಯನ್ನು ನೀಡಲು, ವಿಶ್ವ ಆರೋಗ್ಯ ಸಂಸ್ಥೆ (WHO), ರೋಗ ನಿಯಂತ್ರಣ ಕೇಂದ್ರಗಳು (CDC) ಮತ್ತು ರಾಷ್ಟ್ರೀಯ ಆರೋಗ್ಯ ಸೇವೆ ರೀತಿಯ ಅರ್ಹ ಸಂಸ್ಥೆಗಳಿಂದ ಪ್ರತಿಷ್ಠಿತ ಮೂಲಗಳನ್ನು ಬಳಸಿ. 
  • ಇದು ಪ್ರಚಲಿತ ಜಾಗತಿಕ ಬಿಕ್ಕಟ್ಟು ಎಂಬ ವಾಸ್ತವಾಂಶದ ಕುರಿತು ಸೂಕ್ಷ್ಮವಾಗಿ ಅರಿತುಕೊಳ್ಳಿ. ನೀವು COVID-19 ಸಂಬಂಧಿತ-ಕಂಟೆಂಟ್ ಅನ್ನು ಹಂಚಿಕೊಳ್ಳಲು ಆಯ್ಕೆ ಮಾಡಿದರೆ, ಉತ್ತಮ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡಲು ಅಥವಾ ಪ್ರಚಾರ ಮಾಡಲು ಈ ಪರಿಸ್ಥಿತಿಯನ್ನು ಬಳಸಿಕೊಳ್ಳಬೇಡಿ.
  • ಮಾನಿಟೈಸೇಶನ್‌ಗಾಗಿ, ನಾವು ಈಗಲೂ ನಮ್ಮ ಪರಿಷ್ಕೃತ ಕಾರ್ಯನೀತಿಗಳನ್ನು ಹೊರತರುತ್ತಿದ್ದೇವೆ – ಈ ಕಂಟೆಂಟ್‌ನಿಂದ ಮಾನಿಟೈಸ್ ಮಾಡಬೇಕಾದರೆ, ನಿಮ್ಮ ಶೀರ್ಷಿಕೆ ಅಥವಾ ವಿವರಣೆಯಲ್ಲಿ “COVID-19” ಅಥವಾ “ಕೊರೋನಾ ವೈರಸ್” ಎಂಬ ಪದಗಳನ್ನು ಸ್ಪಷ್ಟವಾಗಿ ಸೇರಿಸುವುದನ್ನು ತಪ್ಪಿಸಿ; "ನಿಮ್ಮ ಹಿರಿಯರನ್ನು ಸುರಕ್ಷಿತವಾಗಿರಿಸಿ - ಮನೆಯಲ್ಲೇ ಇರಿ!" ಅಥವಾ "ಮನೆಯಲ್ಲಿ ಆ್ಯಕ್ಟೀವ್ ಆಗಿ ಇರುವುದು ಹೇಗೆ" ಎಂಬ ಶೀರ್ಷಿಕೆಗಳನ್ನು ಪರಿಗಣಿಸಿ 
  • ಜಾಹೀರಾತುದಾರ-ಸ್ನೇಹಿ ಮತ್ತು ಸಮುದಾಯ ಮಾರ್ಗಸೂಚಿಗಳು ಎರಡನ್ನೂ ಅನುಸರಿಸಿ. ಎಲ್ಲಾ ಮಾನಿಟೈಸ್ ಆಗುವ ಕಂಟೆಂಟ್‌ಗಳು ನಮ್ಮ ಜಾಹೀರಾತು ಸ್ನೇಹಿ ಮಾರ್ಗಸೂಚಿಗಳು ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ. ನಿಮ್ಮ ಕಂಟೆಂಟ್ ಈ ನೀತಿಗಳನ್ನು ಉಲ್ಲಂಘಿಸಿದರೆ, ಅದನ್ನು ತೆಗೆದುಹಾಕಲಾಗುತ್ತದೆ ಅಥವಾ ಅದು ಜಾಹೀರಾತುಗಳಿಂದ ಯಾವುದೇ ಹಣವನ್ನು ಗಳಿಸುವುದಿಲ್ಲ ಅಥವಾ ಹಣಗಳಿಕೆ ಪ್ರಮಾಣವನ್ನು ಸೀಮಿತಗೊಳಿಸಲಾಗುತ್ತದೆ. ಉದಾಹರಣೆಗೆ, ಹಾನಿಕಾರಕ ಪದಾರ್ಥಗಳು ಅಥವಾ ಚಿಕಿತ್ಸೆಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಕ್ಲೈಮ್ ಮಾಡುವ ಕಂಟೆಂಟ್ ಅನ್ನು ಅಥವಾ ನಮ್ಮ ಹಿಂಸಾತ್ಮಕ ಅಥವಾ ಗ್ರಾಫಿಕ್ ವಿಷಯ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತೆಗೆದುಹಾಕಲಾಗುತ್ತದೆ.
ಕೊರೋನಾ ವೈರಸ್ (COVID-19) ಕುರಿತಾದ ತಪ್ಪು ಮಾಹಿತಿಯನ್ನು ನಾನು ವರದಿ ಮಾಡುವುದು ಹೇಗೆ? 
ನಮ್ಮ ಸಮುದಾಯ ಮಾರ್ಗಸೂಚಿಗಳು ಹಾನಿಕಾರಕ ಪದಾರ್ಥಗಳು ಅಥವಾ ಚಿಕಿತ್ಸೆಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು ಎಂದು ಕ್ಲೈಮ್ ಮಾಡುವ ಕಂಟೆಂಟ್‌ಗಳನ್ನು ನಿಷೇಧಿಸುವ ನೀತಿಗಳನ್ನು ಒಳಗೊಂಡಿವೆ. 

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಅನೇಕ ವೀಡಿಯೊಗಳು, ಕಾಮೆಂಟ್‌ಗಳು ಅಥವಾ ಒಬ್ಬ ರಚನೆಕಾರರ ಸಂಪೂರ್ಣ ಚಾನಲ್ ನಿಮಗೆ ಕಂಡುಬಂದರೆ, ನಮ್ಮ ರಿಪೋರ್ಟಿಂಗ್ ಟೂಲ್‌ಗೆ ಭೇಟಿ ನೀಡಿ.
ನನ್ನ ಕಂಟೆಂಟ್‌ನಿಂದ ಏಕೆ ಮಾನಿಟೈಸ್ ಮಾಡಲಾಗುತ್ತಿಲ್ಲ? ಅದು ಕೊರೋನಾ ವೈರಸ್ (COVID-19) ಕುರಿತಾಗಿಲ್ಲ.
ನೀವು YouTube ನಲ್ಲಿ ಮಾನಿಟೈಸ್ ಮಾಡುತ್ತಿದ್ದರೆ, ನಿಮ್ಮ ಚಾನಲ್ YouTube ನ ಸಮುದಾಯ ಮಾರ್ಗಸೂಚಿಗಳು, ಸೇವಾ ನಿಯಮಗಳು, ಕೃತಿಸ್ವಾಮ್ಯ ಮತ್ತು Google AdSense ಪ್ರೋಗ್ರಾಂ ನೀತಿಗಳನ್ನು ಒಳಗೊಂಡಂತೆ YouTube ಮಾನಿಟೈಸೇಶನ್ ನೀತಿಗಳನ್ನು ಅನುಸರಿಸುವುದು ತುಂಬಾ ಮುಖ್ಯವಾಗಿದೆ. ನಾವು ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಏಕೆ ಜಾರಿಗೆ ತರುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ. ನೀವು ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಮಾನಿಟೈಸ್ ಮಾಡಲು ಬಯಸಿದರೆ, ಅವುಗಳು ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸಬೇಕು.

ನಮ್ಮ ನೀತಿಗಳು ನಿಮ್ಮ ಕಂಟೆಂಟ್‌ನ ಎಲ್ಲಾ ಭಾಗಗಳಿಗೆ (ವೀಡಿಯೊ ಅಥವಾ ಲೈವ್ ಸ್ಟ್ರೀಮ್, ಥಂಬ್‌ನೇಲ್, ಶೀರ್ಷಿಕೆ, ವಿವರಣೆ ಮತ್ತು ಟ್ಯಾಗ್‌ಗಳು) ಅನ್ವಯಿಸುತ್ತವೆ. 

ನಮ್ಮ ಸಿಸ್ಟಂಗಳಿಗೆ ಎಲ್ಲಾ ಸಮಯದಲ್ಲೂ ಸರಿಯಾದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗದೇ ಇರಬಹುದು, ಆದರೆ ನಮ್ಮ ಸ್ವಯಂಚಾಲಿತ ಸಿಸ್ಟಂಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಂಬಂಧಿಸಿದಂತೆ ನೀವು ಮಾನವ ವಿಮರ್ಶೆ ವಿನಂತಿಯನ್ನು ಸಲ್ಲಿಸಬಹುದು.

ನಾನು ಆನ್‌ಲೈನ್‌ನಲ್ಲಿ COVID-19 ಸ್ಕ್ಯಾಮ್‌ಗಳನ್ನು ತಪ್ಪಿಸುವುದು ಹೇಗೆ.

ನೀವು ಆನ್‌ಲೈನ್‌ನಲ್ಲಿರುವಾಗಲೆಲ್ಲಾ ನಿಮ್ಮನ್ನು ಸುರಕ್ಷಿತವಾಗಿರಿಸಲು ಬಯಸುತ್ತೇವೆ. ಅದಕ್ಕಾಗಿಯೇ ನಮ್ಮ ಎಲ್ಲಾ ಕಾರ್ಯಗಳನ್ನು ಪ್ರಬಲ ಬಿಲ್ಟ್-ಇನ್ ಭದ್ರತೆ ತಂತ್ರಜ್ಞಾನಗಳ ಮೂಲಕ ರಕ್ಷಿಸಲಾಗಿದ್ದು, ಬೆದರಿಕೆಗಳು ನಿಮ್ಮನ್ನು ತಲುಪುವ ಮೊದಲೇ ಅವುಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಸಹಾಯ ಮಾಡುತ್ತದೆ. ಸಾಮಾನ್ಯ ಪ್ರಕಾರದ ಸ್ಕ್ಯಾಮ್‌ಗಳು ಮತ್ತು ಅವುಗಳನ್ನು ಹೇಗೆ ತಪ್ಪಿಸುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ Google ಸುರಕ್ಷತೆ ಕೇಂದ್ರವನ್ನು ಪರಿಶೀಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
915648926844808838
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false