ಕಾಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ಅವುಗಳಿಗೆ ಪ್ರತ್ಯುತ್ತರಿಸಿ

 ನಿಮ್ಮ ಚಾನಲ್‌ನಲ್ಲಿ ಆರೋಗ್ಯಪೂರ್ಣವಾದ ಸಮುದಾಯವನ್ನು ಕಾಯ್ದುಕೊಳ್ಳುವುದಕ್ಕಾಗಿ, ಕಾಮೆಂಟ್‌ಗಳನ್ನು ಮಾಡರೇಟ್ ಮಾಡುವುದು ಮತ್ತು ಅವುಗಳ ಜೊತೆಗೆ ಸಂವಹಿಸುವುದು ಉತ್ತಮ ಮಾರ್ಗವಾಗಿದೆ.

ನಿಮ್ಮ ವೀಡಿಯೊಗಳು ಹಾಗೂ ಚಾನಲ್ ಕುರಿತ ಕಾಮೆಂಟ್‌ಗಳನ್ನು ಪರಿಶೀಲಿಸಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಾಮೆಂಟ್‌ಗಳು ಎಂಬುದನ್ನು ಆಯ್ಕೆಮಾಡಿ.
  3. ನೀವು ಪರಿಶೀಲಿಸಲು ಬಯಸುವ ಟ್ಯಾಬ್ ಅನ್ನು ಆಯ್ಕೆಮಾಡಿ:
    • ಪ್ರಕಟಿಸಿರುವುದು: ಪ್ರತಿಯೊಬ್ಬರೂ ನೋಡಬಹುದಾದ ಕಾಮೆಂಟ್‌ಗಳು.
    • ಪರಿಶೀಲನೆಗಾಗಿ ತಡೆಹಿಡಿದಿರುವುದು: ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ ಪರಿಶೀಲನೆಗಾಗಿ ತಡೆಹಿಡಿಯಲಾದ ಕಾಮೆಂಟ್‌ಗಳು ಮತ್ತು ಸಂಭಾವ್ಯವಾಗಿ ಸ್ಪ್ಯಾಮ್ ಆಗಿರುವ ಕಾರಣಕ್ಕಾಗಿ YouTube ಸ್ವಯಂಚಾಲಿತವಾಗಿ ತಡೆಹಿಡಿದಿರುವ ಕಾಮೆಂಟ್‍ಗಳು.

ನೀವು ನೋಡುವ ಕಾಮೆಂಟ್‌ಗಳನ್ನು ಫಿಲ್ಟರ್ ಮಾಡಲು, ಪ್ರತಿಯೊಂದು ಟ್ಯಾಬ್‌ನ ಮೇಲೆ ಇರುವ ಫಿಲ್ಟರ್ ಬಾರ್ ಅನ್ನು ನೀವು ಬಳಸಬಹುದು. ನೀವು ಹುಡುಕಾಟ, ಪ್ರಶ್ನೆಗಳು, ಪ್ರತಿಕ್ರಿಯೆ ಸ್ಥಿತಿ ಹಾಗೂ ಮುಂತಾದವುಗಳ ಮೂಲಕ ಫಿಲ್ಟರ್ ಮಾಡಬಹುದು.

ಅರ್ಹ ರಚನೆಕಾರರು ಅವರ ಕಂಪ್ಯೂಟರ್‌ನಲ್ಲಿರುವ Studio ದಲ್ಲಿ "ಕಾಮೆಂಟ್‌ಗಳು ಮತ್ತು ಪ್ರಸ್ತಾಪಗಳನ್ನು" ನೋಡುತ್ತಾರೆ. ಪ್ರಸ್ತಾಪಗಳಿಗೆ ಅರ್ಹತೆಯ ಕುರಿತು ಇನ್ನಷ್ಟು ತಿಳಿಯಿರಿ.

ಪ್ರಕಟಿಸಿದ ಕಾಮೆಂಟ್‍ಗಳಿಗೆ ಪ್ರತಿಕ್ರಿಯಿಸಿ

“ಪ್ರಕಟಿಸಿರುವುದು” ಎಂಬ ಟ್ಯಾಬ್‌ನಿಂದ ನೀವು ಇವುಗಳನ್ನು ಮಾಡಬಹುದು:

  • ಪ್ರತ್ಯುತ್ತರಿಸಿ: ಕಾಮೆಂಟ್‌ಗೆ ನೇರವಾಗಿ ಪ್ರತಿಕ್ರಿಯಿಸಲು ಪ್ರತ್ಯುತ್ತರಿಸಿ ಎಂಬುದನ್ನು ಆಯ್ಕೆ ಮಾಡಿ.
  • ಹೃದಯ: ಮೆಚ್ಚುಗೆ ವ್ಯಕ್ತಪಡಿಸಲು, ಕಾಮೆಂಟ್‌ನ ಕೆಳಗೆ ಇರುವ ಹೃದಯ ಚಿಹ್ನೆಯನ್ನು  ಆಯ್ಕೆ ಮಾಡಿ.
  • ಲೈಕ್: ಒಂದು ಕಾಮೆಂಟ್‌ಗೆ ಲೈಕ್ ಕೊಡಲು ಥಂಬ್ಸ್ ಅಪ್  ಅನ್ನು ಆಯ್ಕೆ ಮಾಡಿ.
  • ಡಿಸ್‌ಲೈಕ್: ಒಂದು ಕಾಮೆಂಟ್‌ಗೆ ಡಿಸ್‌ಲೈಕ್ ಕೊಡಲು, ಥಂಬ್ಸ್ ಡೌನ್  ಅನ್ನು ಆಯ್ಕೆ ಮಾಡಿ.
  • ಪಿನ್ ಮಾಡಿ: ನಿಮ್ಮ ವೀಡಿಯೊದ ವೀಕ್ಷಣಾ ಪುಟದ ಮೇಲೆ ಕಾಮೆಂಟ್ ಅನ್ನು ಹೈಲೈಟ್ ಮಾಡಲು, ಇನ್ನಷ್ಟು  ನಂತರ ಪಿನ್ ಮಾಡಿ ಎಂಬುದನ್ನು ಆಯ್ಕೆ ಮಾಡಿ. ಪ್ರತ್ಯೇಕ ವೀಡಿಯೊಗಾಗಿ ಕಾಮೆಂಟ್‌ಗಳನ್ನು ವೀಕ್ಷಿಸುವಾಗ ಮಾತ್ರ ಈ ಆಯ್ಕೆ ಕಾಣಿಸಿಕೊಳ್ಳುತ್ತದೆ.

ಸಲಹೆ: ಯಾರು ಕಾಮೆಂಟ್ ಮಾಡುತ್ತಿದ್ದಾರೆ ಎಂಬ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುವ ಹಾಗೆ, YouTube Studio ದಲ್ಲಿ ಕಾಮೆಂಟರ್ ಅವರ ಹೆಸರುಗಳ ಪಕ್ಕದಲ್ಲಿ ಬ್ಯಾಡ್ಜ್‌ಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಟಾಪ್ ಕಾಮೆಂಟರ್‌ಗಳು , ಚಾನಲ್ ಸದಸ್ಯರು ಮತ್ತು ಸಾರ್ವಜನಿಕವಾಗಿ ಸಬ್‌ಸ್ಕ್ರೈಬ್ ಮಾಡಿದ ಕಾಮೆಂಟರ್‌ಗಳಿಗಾಗಿ ಬ್ಯಾಡ್ಜ್‌ಗಳು ಇವೆ.

ಪರಿಶೀಲನೆಗಾಗಿ ತಡೆಹಿಡಿದಿರುವ ಕಾಮೆಂಟ್‌ಗಳ ಕುರಿತು ಕ್ರಮ ತೆಗೆದುಕೊಳ್ಳಿ

“ಪರಿಶೀಲನೆಗಾಗಿ ತಡೆಹಿಡಿದಿರುವುದು” ಟ್ಯಾಬ್‌ನಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು. ಇನ್ನಷ್ಟು ಎಂಬುದನ್ನು ಕ್ಲಿಕ್ ಮಾಡುವ ಮೂಲಕ “ಪ್ರಕಟಿಸಿರುವುದು” ಟ್ಯಾಬ್‌ನಲ್ಲಿಯೂ ನೀವು ಈ ಆಯ್ಕೆಗಳನ್ನು ಕಾಣಬಹುದು.

  • ಅನುಮೋದಿಸಿ: ಒಂದು ಕಾಮೆಂಟ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅನುಮತಿ ನೀಡುವುದಕ್ಕಾಗಿ ಅನುಮೋದಿಸಿ  ಅನ್ನು ಆಯ್ಕೆ ಮಾಡಿ.
  • ತೆಗೆದುಹಾಕಿ: ಕಾಮೆಂಟ್ ಅನ್ನು ತೆಗೆದುಹಾಕಲು, ತೆಗೆದುಹಾಕಿ  ಎಂಬುದನ್ನು ಆಯ್ಕೆ ಮಾಡಿ.
  • ಸ್ಪ್ಯಾಮ್ ಅಥವಾ ದುರುಪಯೋಗವನ್ನು ವರದಿ ಮಾಡಿ: ಒಂದು ಕಾಮೆಂಟ್‌ನಲ್ಲಿ ಸ್ಪ್ಯಾಮ್ ಅಥವಾ ದುರುಪಯೋಗವನ್ನು ವರದಿ ಮಾಡಲು, ವರದಿ ಮಾಡಿ ಎಂಬುದನ್ನು ಆಯ್ಕೆ ಮಾಡಿ. ಸ್ಪ್ಯಾಮ್ ಕಾಮೆಂಟ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಬಳಕೆದಾರರನ್ನು ಮರೆಮಾಡಿ: ಚಾನಲ್‌ನಿಂದ ಬಳಕೆದಾರರನ್ನು ಮರೆಮಾಡಲು, ಮರೆಮಾಡಿ Maps hide icon, visibility off ಎಂಬುದನ್ನು ಆಯ್ಕೆಮಾಡಿ.​ ನಿರ್ದಿಷ್ಟ ಜನರಿಂದ ಕಾಮೆಂಟ್‌ಗಳನ್ನು ಮರೆಮಾಡುವ ಕುರಿತು ಇನ್ನಷ್ಟು ತಿಳಿಯಿರಿ.
  • ಯಾವಾಗಲೂ ಅನುಮೋದಿಸಿ: ಈ ಆಯ್ಕೆಯು “ಪ್ರಕಟಿಸಿರುವುದು” ಟ್ಯಾಬ್‌ನಲ್ಲಿ ಮಾತ್ರ ಲಭ್ಯವಿದೆ. ನಿರ್ದಿಷ್ಟ ವೀಕ್ಷಕರಿಂದ ಭವಿಷ್ಯದ ಎಲ್ಲಾ ಕಾಮೆಂಟ್‌ಗಳನ್ನು ಸ್ವಯಂಚಾಲಿತವಾಗಿ ಅನುಮೋದಿಸಲು ಮತ್ತು ಸಾರ್ವಜನಿಕವಾಗಿ ಗೋಚರಿಸುವಂತೆ ಮಾಡಲು, ಇನ್ನಷ್ಟು  ನಂತರ ಈ ಬಳಕೆದಾರರ ಕಾಮೆಂಟ್‌ಗಳನ್ನು ಯಾವಾಗಲೂ ಅನುಮೋದಿಸಿ ಎಂಬುದನ್ನು ಆಯ್ಕೆ ಮಾಡಿ.

ಕಾಮೆಂಟ್ ಮಾಡರೇಟರ್ ಅನ್ನು ಸೇರಿಸಿ

ನಿಮ್ಮ ವೀಡಿಯೊಗಳು ಮತ್ತು ಚಾನಲ್‌ನಲ್ಲಿ ಕಾಮೆಂಟ್‌ಗಳನ್ನು ನಿರ್ವಹಿಸಲು ಸಹಾಯ ಮಾಡುವುದಕ್ಕಾಗಿ ನೀವು ಮಾಡರೇಟರ್‌ಗಳನ್ನು ಆಹ್ವಾನಿಸಬಹುದು. YouTube ಚಾನಲ್ ಅನ್ನು ಹೊಂದಿರುವ ಯಾರೂ ಸಹ ಮಾಡರೇಟರ್ ಆಗಬಹುದು. YouTube Studio ನಲ್ಲಿ ಮಾಡರೇಟರ್ ಅನ್ನು ಸೇರಿಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  3. ಸಮುದಾಯ ಎಂಬುದನ್ನು ಆಯ್ಕೆಮಾಡಿ.
  4. “ಸ್ಟ್ಯಾಂಡರ್ಡ್ ಮಾಡರೇಟರ್‌ಗಳು” ಬಾಕ್ಸ್‌ನಲ್ಲಿ ಮಾಡರೇಟರ್‌ನ ಚಾನಲ್ URL ಅನ್ನು ನಮೂದಿಸಿ.
  5. ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ನೀವು ಅವರ ವೀಡಿಯೊ ಕಾಮೆಂಟ್‌ನಿಂದ ನಿರ್ದಿಷ್ಟ ಮಾಡರೇಟರ್ ಅನ್ನು ಸಹ ಸೇರಿಸಬಹುದು:

  1. YouTube ಆ್ಯಪ್‌ನಲ್ಲಿ, ನಿಮ್ಮ ವೀಡಿಯೊಗಳ ಅಡಿಯಲ್ಲಿ ನೀವು ಮಾಡರೇಟರ್ ಅನ್ನು ಮಾಡಲು ಬಯಸುವ ವ್ಯಕ್ತಿಯ ಕಾಮೆಂಟ್ ಅನ್ನು ಹುಡುಕಿ. 
  2. ಅವರ ಕಾಮೆಂಟ್ ಪಕ್ಕದಲ್ಲಿರುವ ಇನ್ನಷ್ಟು  ಎಂಬುದನ್ನು ಟ್ಯಾಪ್ ಮಾಡಿ. 
  3. ಮಾಡರೇಟರ್ ಆಗಿ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ. 
  4. ಮ್ಯಾನೇಜಿಂಗ್ ಮಾಡರೇಟರ್ ಅಥವಾ ಸ್ಟ್ಯಾಂಡರ್ಡ್ ಮಾಡರೇಟರ್ ಎಂಬುದನ್ನು ಟ್ಯಾಪ್ ಮಾಡಿ.

ನೀವು ಮಾಡರೇಟರ್ ಅನ್ನು ಸೇರಿಸಿದ್ದೀರಿ ಎಂಬ ನೋಟಿಫಿಕೇಶನ್ ಅನ್ನು ಅವರು ಪಡೆಯುವುದಿಲ್ಲ. ಮಾಡರೇಟರ್ ಇದೀಗ ಕಾಮೆಂಟ್‌ಗಳನ್ನು ತೆಗೆದುಹಾಕಬಹುದು ಎಂದು ಅವರಿಗೆ ತಿಳಿಸಿ.

ಕಾಮೆಂಟ್ ವಿಷಯಗಳು

YouTube ವೀಡಿಯೊಗಳಲ್ಲಿರುವ ಕಾಮೆಂಟ್‌ಗಳನ್ನು ವ್ಯವಸ್ಥಿತಗೊಳಿಸಲು ಮತ್ತು ಸಾರಾಂಶಗೊಳಿಸಲು ಕಾಮೆಂಟ್ ವಿಷಯಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಬಳಸುತ್ತವೆ. ಈ ಮಾಹಿತಿಯೊಂದಿಗೆ, ನಿಮ್ಮ ಸಮುದಾಯಕ್ಕೆ ಆಸಕ್ತಿಯಿರುವುದನ್ನು ನೀವು ಕಲಿಯಬಹುದು, ಹೆಚ್ಚು ಸುಲಭವಾಗಿ ಚರ್ಚೆಗಳಿಗೆ ಸೇರಬಹುದು ಮತ್ತು ಹೊಸ ವೀಡಿಯೊಗಳಿಗಾಗಿ ಪ್ರೇರಣೆ ಪಡೆಯಬಹುದು. 

ಕಾಮೆಂಟ್ ವಿಷಯಗಳನ್ನು ಪರಿಶೀಲಿಸಲು, YouTube ಮೊಬೈಲ್ ಆ್ಯಪ್‌ನಲ್ಲಿರುವ ವೀಡಿಯೊದ ಕಾಮೆಂಟ್‌ಗಳು ಎಂಬ ವಿಭಾಗಕ್ಕೆ ಹೋಗಿ. ಲಭ್ಯವಿದ್ದರೆ, ವಿಷಯಗಳು  ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ಈ ಫೀಚರ್ ಎಲ್ಲಾ ವೀಡಿಯೊಗಳಲ್ಲಿ ಕಾಣಿಸುವುದಿಲ್ಲ. ಪ್ರಸ್ತುತ, ಕಾಮೆಂಟ್ ವಿಷಯಗಳು ವೀಡಿಯೊಗಳು ಮತ್ತು ಇಂಗ್ಲಿಷ್‌ನಲ್ಲಿರುವ ಕಾಮೆಂಟ್‌ಗಳಿಗಾಗಿ YouTube ಮೊಬೈಲ್ ಆ್ಯಪ್‌ನಲ್ಲಿರುವ ದೊಡ್ಡ ಕಾಮೆಂಟ್ ವಿಭಾಗಗಳಲ್ಲಿ ಮಾತ್ರ ಲಭ್ಯವಿವೆ. 

ವಿಷಯಗಳನ್ನು AI ಸಾರಾಂಶಗೊಳಿಸುತ್ತದೆ ಹೊರತು ಮಾನವರಲ್ಲ, ಹಾಗಾಗಿ ಗುಣಮಟ್ಟ ಮತ್ತು ನಿಖರತೆ ಬದಲಾಗಬಹುದು.

FAQ

ಕಾಮೆಂಟ್ ಮಾಡರೇಟರ್ ಏನು ಮಾಡಬಹುದು?

ಕಾಮೆಂಟ್ ಮಾಡರೇಟರ್ ತೆಗೆದುಕೊಳ್ಳಬಹುದಾದ ಕ್ರಮಗಳು, ಅವರು ಸ್ಟ್ಯಾಂಡರ್ಡ್ ಮಾಡರೇಟರ್ ಅಥವಾ ಮ್ಯಾನೇಜಿಂಗ್ ಮಾಡರೇಟರ್ ಎಂಬುದನ್ನು ಅವಲಂಬಿಸಿರುತ್ತದೆ. ಸ್ಟ್ಯಾಂಡರ್ಡ್ ಮಾಡರೇಟರ್‌ಗಳಿಗಿಂತ ಮ್ಯಾನೇಜಿಂಗ್ ಮಾಡರೇಟರ್‌ಗಳು ಹೆಚ್ಚಿನ ಆಯ್ಕೆಗಳ ಲಭ್ಯತೆಯನ್ನು ಹೊಂದಿರುತ್ತವೆ. ಎರಡೂ ರೀತಿಯ ಮಾಡರೇಟರ್‌ಗಳು ನಿಮ್ಮ ವಿಮರ್ಶೆಗಾಗಿ ಕಾಮೆಂಟ್‌ಗಳನ್ನು ಹೋಲ್ಡ್ ಮಾಡಬಹುದು.
ಮಾಡರೇಟರ್‌ಗಳು, YouTube Studio ದಲ್ಲಿ ನಿಮ್ಮ ಚಾನಲ್‌ಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ. ನಿಮ್ಮ “ಪರಿಶೀಲನೆಗಾಗಿ ತಡೆಹಿಡಿದಿರುವುದು” ಸರದಿಯಲ್ಲಿ ಕಾಮೆಂಟ್ ಅನ್ನು ಪರಿಶೀಲನೆಗಾಗಿ ತಡೆಹಿಡಿಯಲಾಗುತ್ತದೆ. ನೀವು ಅನುಮೋದಿಸದ ಹೊರತು ಇತರ ವೀಕ್ಷಕರು ಕಾಮೆಂಟ್ ಅನ್ನು ನೋಡಲಾಗುವುದಿಲ್ಲ.

ಕಾಮೆಂಟ್ ಮಾಡರೇಟರ್‌ಗಳು ಏನು ಮಾಡಬಹುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಲೈವ್ ಚಾಟ್‌ನಲ್ಲಿ ಕಾಮೆಂಟ್ ಮಾಡರೇಶನ್ ವಿಭಿನ್ನವಾಗಿ ಕೆಲಸ ಮಾಡುತ್ತದೆ. ಲೈವ್ ಚಾಟ್‌ಗಳಿಗಾಗಿ ಮಾಡರೇಟರ್‌ಗಳನ್ನು ನಿಯೋಜಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ನಾನು ಕಾಮೆಂಟ್ ಮಾಡರೇಟರ್ ಅನ್ನು ಹೇಗೆ ತೆಗೆದುಹಾಕಬಹುದು?

ಕಾಮೆಂಟ್ ಮಾಡರೇಟರ್ ಅನ್ನು ಸೇರಿಸಲು ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಮಾಡರೇಟರ್‌ಗಳನ್ನು ನೀವು ನಿರ್ವಹಿಸಬಹುದು, ನಂತರ ತೆಗೆದುಹಾಕುವ ಆಯ್ಕೆಯನ್ನು ಆರಿಸಬಹುದು.

ವೀಕ್ಷಕರ ಕಾಮೆಂಟ್‌ಗೆ ನಾನು ಹೃದಯ, ಲೈಕ್, ಡಿಸ್‌ಲೈಕ್ ನೀಡಿದಾಗ, ಪಿನ್ ಮಾಡಿದಾಗ ಅಥವಾ ಪ್ರತ್ಯುತ್ತರಿಸಿದಾಗ ಅವರಿಗೆ ತಿಳಿಸಲಾಗುತ್ತದೆಯೇ?

ನೀವು ಒಂದು ಕಾಮೆಂಟ್‌ಗೆ ಹೃದಯ ಸೇರಿಸಿದಾಗ, ಪಿನ್ ಮಾಡಿದಾಗ ಅಥವಾ ಪ್ರತ್ಯುತ್ತರಿಸಿದಾಗ, ಕಾಮೆಂಟರ್ ಅವರ ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ಆಧರಿಸಿ, ನೀವು ಪ್ರತಿಕ್ರಿಯಿಸಿದ್ದೀರಿ ಎಂಬ ನೋಟಿಫಿಕೇಶನ್ ಅನ್ನು ಅವರು ಪಡೆಯಬಹುದು.
ಲೈಕ್‌ಗಳು ಮತ್ತು ಡಿಸ್‌ಲೈಕ್‌ಗಳು ಅನಾಮಧೇಯವಾಗಿರುತ್ತವೆ. ನೀವು ಕಾಮೆಂಟ್‍ಗೆ ಲೈಕ್ ಕೊಟ್ಟರೆ, “ಯಾರೋ ನಿಮ್ಮ ಕಾಮೆಂಟ್‌ಗೆ ಲೈಕ್ ಕೊಟ್ಟಿದ್ದಾರೆ" ಎಂಬ ನೋಟಿಫಿಕೇಶನ್ ಅನ್ನು ಕಾಮೆಂಟರ್ ಪಡೆಯಬಹುದು. ವೀಕ್ಷಕರ ಕಾಮೆಂಟ್‌ಗೆ ನೀವು ಡಿಸ್‌ಲೈಕ್ ನೀಡಿದಾಗ, ವೀಕ್ಷಕರು ನೋಟಿಫಿಕೇಶನ್ ಅನ್ನು ಪಡೆಯುವುದಿಲ್ಲ.

ನಾನು ಕಾಮೆಂಟ್ ಅನ್ನು ಹೇಗೆ ಅನ್‌ಪಿನ್ ಮಾಡಬಹುದು?

ನೀವು ವೀಕ್ಷಣಾ ಪುಟದ ಮೇಲೆ ಕಾಮೆಂಟ್ ಅನ್ನು ಪಿನ್ ಮಾಡಿದ್ದೀರಿ, ಆದರೆ ಇನ್ನು ಮುಂದೆ ಅದನ್ನು ಅಲ್ಲಿರಿಸಲು ಬಯಸುವುದಿಲ್ಲ ಎಂದಾದರೆ, ನೀವು ಅದನ್ನು ಅನ್‌ಪಿನ್ ಮಾಡಬಹುದು. ಕಾಮೆಂಟ್‌ನ ಪಕ್ಕದಲ್ಲಿ, ಇನ್ನಷ್ಟು  ನಂತರ ಅನ್‌ಪಿನ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
ನೀವು ಬೇರೊಂದು ಕಾಮೆಂಟ್ ಅನ್ನು ಸಹ ಪಿನ್ ಮಾಡಬಹುದು, ಇದರಿಂದ ಹಿಂದಿನ ಕಾಮೆಂಟ್ ಅನ್‌ಪಿನ್ ಆಗುತ್ತದೆ.

ನಾನು ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಿದಾಗ ಏನಾಗುತ್ತದೆ?

ಕಾಮೆಂಟ್ ಅನ್ನು ನಿಮ್ಮ ಚಾನಲ್‌ನಿಂದ ಶಾಶ್ವತವಾಗಿ ಮರೆಮಾಡಲಾಗುತ್ತದೆ. ಕಾಮೆಂಟ್ ಸ್ಪ್ಯಾಮ್ ಆಗಿದೆಯೇ ಎಂದು ನೋಡಲು ಸಹ ಕಾಮೆಂಟ್ ಮತ್ತು ಕಾಮೆಂಟರ್ ಅವರ ವರ್ತನೆಯನ್ನು YouTube ಪರಿಶೀಲಿಸಬಹುದು.

ಕಾಮೆಂಟ್ ವಿಷಯಗಳನ್ನು ಹೇಗೆ ಸಾರಾಂಶಗೊಳಿಸಲಾಗುತ್ತದೆ ಮತ್ತು ನಾನು ಅವುಗಳನ್ನು ಮಾಡರೇಟ್ ಮಾಡಬಹುದೇ?

YouTube ವೀಡಿಯೊಗಳಲ್ಲಿರುವ ದೊಡ್ಡ ಕಾಮೆಂಟ್ ವಿಭಾಗಗಳಲ್ಲಿ ಮಾನವ ರಿವ್ಯೂ ಇಲ್ಲದೆಯೇ, ಕಾಮೆಂಟ್‌ಗಳನ್ನು ವ್ಯವಸ್ಥಿತಗೊಳಿಸಲು ಮತ್ತು ಸಾರಾಂಶಗೊಳಿಸಲು ಕಾಮೆಂಟ್ ವಿಷಯಗಳು Google-ಮಾಲೀಕತ್ವದ AI ಮಾದರಿಗಳನ್ನು ಬಳಸುತ್ತವೆ. ಥೀಮ್‌ವೊಂದನ್ನು ಪ್ರತಿನಿಧಿಸಲು ಸಾಕಷ್ಟು ಕಾಮೆಂಟ್‌ಗಳು ಇದ್ದಾಗ ಮಾತ್ರ ವಿಷಯಗಳನ್ನು ರಚಿಸಲಾಗುತ್ತದೆ. 

ಕಾಮೆಂಟ್ ವಿಷಯಗಳಿಂದ ಹೊರಗುಳಿಯಲು ಯಾವುದೇ ಆಯ್ಕೆಗಳಿಲ್ಲ. ನಿರ್ದಿಷ್ಟ ವಿಷಯದ ಅಡಿಯಲ್ಲಿ ಕಂಡುಬರುವ ಕಾಮೆಂಟ್‌ಗಳನ್ನು ನೀವು ತೆಗೆದುಹಾಕಿದರೆ, ವಿಷಯವನ್ನು ತೆಗೆದುಹಾಕಲಾಗುತ್ತದೆ. 

ಪರಿಶೀಲನೆಗಾಗಿ ತಡೆಹಿಡಿದಿರುವ, ನಿರ್ಬಂಧಿಸಿರುವ ಪದಗಳನ್ನು ಹೊಂದಿರುವ ಅಥವಾ ಮರೆಮಾಡಲಾದ ಬಳಕೆದಾರರಿಂದ ಬಂದಿರುವ ಕಾಮೆಂಟ್‌ಗಳಿಂದ ವಿಷಯಗಳನ್ನು ರಚಿಸಲಾಗುವುದಿಲ್ಲ. 

ಕಾಮೆಂಟ್ ವಿಷಯಗಳನ್ನು ಕುರಿತು ಫೀಡ್‌ಬ್ಯಾಕ್ ನೀಡಲು: 

  1. YouTube ಆ್ಯಪ್‌ನಲ್ಲಿನ ವೀಡಿಯೊದ ಕಾಮೆಂಟ್‌ಗಳ ವಿಭಾಗವನ್ನು ತೆರೆಯಿರಿ.
  2. ವಿಷಯಗಳು  ಎಂಬುದನ್ನು ಟ್ಯಾಪ್ ಮಾಡಿ.
  3. ಇನ್ನಷ್ಟು  ಎಂಬುದನ್ನು ಟ್ಯಾಪ್ ಮಾಡಿ.
  4. ಫೀಡ್‌ಬ್ಯಾಕ್ ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13171539496366232360
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false