YouTube ಔದಾರ್ಯ ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಿ

YouTube ಔದಾರ್ಯ, ರಚನೆಕಾರರಿಗೆ ಕಾಳಜಿಯಿರುವ ಧರ್ಮಾರ್ಥ ಉದ್ದೇಶಗಳನ್ನು ಬೆಂಬಲಿಸಲು ಅವರಿಗೆ ಅವಕಾಶ ನೀಡುತ್ತದೆ. ಅರ್ಹ ಚಾನಲ್‌ಗಳು ತಮ್ಮ ವೀಡಿಯೊಗಳಲ್ಲಿ ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿ ದೇಣಿಗೆ ಬಟನ್ ಅನ್ನು ಸೇರಿಸುವ ಮೂಲಕ ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹ ಮಾಡಬಹುದು. ವೀಕ್ಷಕರು ವೀಡಿಯೊದ ವೀಕ್ಷಣೆ ಪುಟ ಅಥವಾ ಲೈವ್ ಚಾಟ್‌ನಲ್ಲಿ ನೇರವಾಗಿ ದೇಣಿಗೆ ನೀಡಬಹುದು.

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿರುವ ವೀಡಿಯೊಗಳಲ್ಲಿ YouTube ಔದಾರ್ಯ ಲಭ್ಯವಿಲ್ಲ. ನಿಮ್ಮ ನಿಧಿಸಂಗ್ರಹಕ್ಕೆ ವೀಡಿಯೊಗಳನ್ನು ಸೇರಿಸುವಾಗ, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ವೀಡಿಯೊಗಳು ನಿಮಗೆ ಕಾಣಿಸುವುದಿಲ್ಲ. ಅರ್ಹತೆ ಮತ್ತು ಲಭ್ಯತೆಯ ಕುರಿತು ಇನ್ನಷ್ಟು ವಿವರಗಳಿಗಾಗಿ, YouTube ಔದಾರ್ಯ FAQ ಗಳು ಎಂಬಲ್ಲಿಗೆ ಹೋಗಿ.

ಲೈವ್ ಚಾಟ್‌ನಲ್ಲಿ ನಿಧಿಸಂಗ್ರಹ ಮಾಡುವುದಕ್ಕಾಗಿ, Super Chat for Good ಅನ್ನು ಲೈವ್ ಚಾಟ್ ಕೊಡುಗೆಗಳು ಎಂಬುದಾಗಿ ಬದಲಿಸಲಾಗಿದೆ. ಲೈವ್ ಚಾಟ್‌ನೊಂದಿಗೆ ನಿಮ್ಮ ನಿಗದಿತ ಲೈವ್ ಸ್ಟ್ರೀಮ್‌ನಲ್ಲಿ ನಿಮ್ಮ ನಿಧಿಸಂಗ್ರಹವನ್ನು ಸೇರಿಸಲು ಕೆಳಗೆ ನೀಡಿರುವ ಸೂಚನೆಗಳನ್ನು ವೀಕ್ಷಿಸಿ.

ಇರಬೇಕಾದ ಅರ್ಹತೆಗಳು

YouTube ಔದಾರ್ಯದೊಂದಿಗೆ ನಿಧಿಸಂಗ್ರಹ ಮಾಡಲು ಅರ್ಹರಾಗುವುದಕ್ಕಾಗಿ, ನಿಮ್ಮ ಚಾನಲ್ ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು:
ಗಮನಿಸಿ: ಮೇಲೆ ಕೊಡಲಾದ ಅರ್ಹತೆಯ ಮಾನದಂಡದ ಹೊರಗಿರುವ ಕೆಲವು ಚಾನಲ್‌ಗಳಲ್ಲಿ ನೀವು ನಿಧಿಸಂಗ್ರಹವನ್ನು ಕಾಣಬಹುದು. ಭವಿಷ್ಯದಲ್ಲಿ, YouTube Giving ಅನ್ನು ಇನ್ನೂ ವ್ಯಾಪಕವಾಗಿ ಲಭ್ಯಗೊಳಿಸಲು ನಾವು ಯೋಜಿಸುತ್ತಿದ್ದೇವೆ.

ಲಭ್ಯ ಸ್ಥಾನಗಳು

ನೀವು ಈ ಕೆಳಗಿನ ಯಾವುದೇ ದೇಶ/ಪ್ರದೇಶದಲ್ಲಿದ್ದರೆ, ನೀವು YouTube ಔದಾರ್ಯ ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಬಹುದು.

  • ಅರ್ಜೆಂಟೀನಾ
  • ಆಸ್ಟ್ರಿಯಾ
  • ಬೆಲ್ಜಿಯಂ
  • ಬೊಲಿವಿಯಾ
  • ಕೆನಡಾ
  • ಕೊಲಂಬಿಯಾ
  • ಕ್ರೋಯೇಶಿಯಾ
  • ಎಸ್ಟೋನಿಯಾ
  • ಫ್ರಾನ್ಸ್
  • ಜರ್ಮನಿ
  • ಘಾನಾ
  • ಹಾಂಗ್‌ಕಾಂಗ್
  • ಐಸ್‌ಲ್ಯಾಂಡ್
  • ಇಂಡೋನೇಷ್ಯಾ
  • ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಕುವೈತ್
  • ಲಾಟ್ವಿಯಾ
  • ಲಿಥುವೇನಿಯಾ
  • ಲಕ್ಸೆಂಬರ್ಗ್
  • ಮಲೇಶಿಯಾ
  • ಮೆಕ್ಸಿಕೊ
  • ಮಾಂಟೆನಿಗ್ರೊ
  • ನೆದರ್‌ಲ್ಯಾಂಡ್ಸ್
  • ನ್ಯೂಜಿಲ್ಯಾಂಡ್
  • ನಾರ್ವೇ
  • ಪೆರು
  • ಫಿಲಿಫೈನ್ಸ್
  • ಪೋಲ್ಯಾಂಡ್
  • ಪ್ಯುರ್ಟೋ ರಿಕೊ
  • ರೊಮೇನಿಯಾ
  • ಸ್ಲೋವಾಕಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ಥಾಯ್ಲೆಂಡ್
  • ಟರ್ಕಿ
  • ಯುನೈಟೆಡ್ ಕಿಂಗ್‌ಡಮ್
  • ಯುಎಸ್‌ಎ

YouTube ಔದಾರ್ಯ ನಿಧಿಸಂಗ್ರಹವನ್ನು ರಚಿಸಿ

ನೀವು YouTube ಔದಾರ್ಯ ನಿಧಿಸಂಗ್ರಹವನ್ನು ರಚಿಸಬಹುದು ಮತ್ತು ಅದನ್ನು ನಿಮ್ಮ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳಲ್ಲಿ ಸೇರಿಸಬಹುದು. ಸೇರಿಸಲಾದ ವೀಡಿಯೊದಲ್ಲಿ ಅಥವಾ ಲೈವ್ ಚಾಟ್‌ನಲ್ಲಿ ದೇಣಿಗೆ ಬಟನ್‌ನ ಮೂಲಕ ಅಭಿಮಾನಿಗಳು ಕೊಡುಗೆ ನೀಡಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಗಳಿಸಿ ನಂತರ ದೇಣಿಗೆ ಎಂಬುದನ್ನು ಆಯ್ಕೆ ಮಾಡಿ.
  3. ಪ್ರಾರಂಭಿಸಿ ನಂತರ ನಿಧಿಸಂಗ್ರಹವನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ನೀವು ಬೆಂಬಲಿಸಲು ಬಯಸುವ, ಲಭ್ಯ 501(c)(3) ಯು.ಎಸ್ ಲಾಭರಹಿತ ಸಂಸ್ಥೆಯನ್ನು ಆಯ್ಕೆ ಮಾಡಿ. ನೀವು ಬೆಂಬಲಿಸಲು ಬಯಸುವ 501(c)(3) ಲಾಭರಹಿತ ಸಂಸ್ಥೆಯನ್ನು ಪಟ್ಟಿ ಮಾಡಿಲ್ಲ ಎಂದಾದರೆ ಲಾಭರಹಿತ ಸಂಸ್ಥೆಯನ್ನು ವಿನಂತಿಸಿ ಎಂಬುದನ್ನು ಆಯ್ಕೆ ಮಾಡಿ. ಲಭ್ಯವಿರುವ ಲಾಭರಹಿತ ಸಂಸ್ಥೆಗಳ ಕುರಿತು ಇನ್ನಷ್ಟು ತಿಳಿಯಿರಿ.
  5. ನಿಧಿಸಂಗ್ರಹಕ್ಕೆ ಶೀರ್ಷಿಕೆ, ವಿವರಣೆ ಮತ್ತು ಸಹಯೋಗಿಗಳಂತಹ ವಿವರಗಳನ್ನು ಸೇರಿಸಲು, ಸೂಚನೆಗಳನ್ನು ಅನುಸರಿಸಿ. ಒಂದು ನಿಧಿಸಂಗ್ರಹ ಗುರಿ ಮತ್ತು ಅವಧಿಯನ್ನು ಸಹ ಸೆಟ್ ಮಾಡಬೇಕೆಂದು ನಾವು ಸಲಹೆ ನೀಡುತ್ತೇವೆ. ನೀವು ಅದನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.
  6. ದೇಣಿಗೆ ಬಟನ್ ಅನ್ನು ಪ್ರಸ್ತುತಪಡಿಸುವ ವೀಡಿಯೊಗಳು ಅಥವಾ ನಿಗದಿತ ಲೈವ್ ಸ್ಟ್ರೀಮ್‌ಗಳನ್ನು ಸೇರಿಸಿ.
  7. ಪ್ರಕಟಿಸಿ ಎಂಬುದನ್ನು ಆಯ್ಕೆ ಮಾಡಿ.

ಸುಧಾರಿತ ಸೆಟ್ಟಿಂಗ್‌ಗಳು ಎಂಬುದರ ಅಡಿಯಲ್ಲಿ ಲೈವ್ ನಿಯಂತ್ರಣ ಕೊಠಡಿಯಲ್ಲಿ ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸೆಟ್ ಅಪ್ ಮಾಡುವಾಗಲೂ ನಿಮ್ಮ ನಿಧಿಸಂಗ್ರಹವನ್ನು ನೀವು ಸೆಟ್ ಅಪ್ ಮಾಡಬಹುದು. ಇನ್ನಷ್ಟು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಿ.

ಗಮನಿಸಿ: ನಿಧಿಸಂಗ್ರಹದ ಆರಂಭ ದಿನಾಂಕದ ನಂತರ, ನಿಮ್ಮ ವೀಡಿಯೊ ವೀಕ್ಷಣೆ ಪುಟದಲ್ಲಿ ಅಥವಾ ಲೈವ್ ಚಾಟ್‌ನಲ್ಲಿ ದೇಣಿಗೆ ಬಟನ್ ಕಾಣಿಸಿಕೊಳ್ಳುತ್ತದೆ. ನೀವು ಒಂದು ನಿಧಿಸಂಗ್ರಹವನ್ನು ರಚಿಸಿದ್ದೀರಿ ಮತ್ತು ನಿಮ್ಮ ವೀಡಿಯೊದ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದರೆ, ದೇಣಿಗೆ ಬಟನ್ ನಿಮ್ಮ ವೀಡಿಯೊದಲ್ಲಿ ಅಥವಾ ಲೈವ್ ಚಾಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ನಿಮ್ಮ ಪ್ರಭಾವವನ್ನು ನೀವು ಹೆಚ್ಚಿಸಲು ಬಯಸುವಿರಾದರೆ, ಸಮುದಾಯ ನಿಧಿಸಂಗ್ರಹವನ್ನು ರಚಿಸಿ. “ಸಹಯೋಗಿಗಳು” ವಿಭಾಗವನ್ನು ಅಪ್‌ಡೇಟ್ ಮಾಡುವುದರಿಂದ, YouTube ಔದಾರ್ಯಕ್ಕೆ ಆ್ಯಕ್ಸೆಸ್ ಹೊಂದಿರುವ ಯಾವುದೇ ಚಾನಲ್, ನಿಮ್ಮ ನಿಧಿಸಂಗ್ರಹಕ್ಕೆ ಸೇರಿಕೊಳ್ಳಲು ಅವಕಾಶ ಸಿಗುತ್ತದೆ.

ನಿಮ್ಮ ನಿಧಿಸಂಗ್ರಹ ಆರಂಭವಾದ ಬಳಿಕ, ನಿಮ್ಮ ವೀಕ್ಷಣೆ ಪುಟ ಅಥವಾ ಲೈವ್ ಚಾಟ್‌ನಲ್ಲಿ ದೇಣಿಗೆ ಬಟನ್ ಕಾಣಿಸಿಕೊಳ್ಳುತ್ತದೆ.

ಅಸ್ತಿತ್ವದಲ್ಲಿರುವ ನಿಧಿಸಂಗ್ರಹವನ್ನು ಸೇರಿಕೊಳ್ಳಿ

ಬೇರೊಬ್ಬ ರಚನೆಕಾರರ ಸಮುದಾಯ ನಿಧಿಸಂಗ್ರಹವನ್ನು ಸಹ ನೀವು ಸೇರಿಕೊಳ್ಳಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಗಳಿಸಿ ನಂತರ ದೇಣಿಗೆ ಎಂಬುದನ್ನು ಆಯ್ಕೆ ಮಾಡಿ.
  3. ಪ್ರಾರಂಭಿಸಿ ನಂತರ ನಿಧಿಸಂಗ್ರಹಕ್ಕೆ ಸೇರಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
  4. ಲಭ್ಯವಿರುವ ಸಮುದಾಯ ನಿಧಿಸಂಗ್ರಹಗಳಿಂದ ಆಯ್ಕೆ ಮಾಡಿ.
  5. ದೇಣಿಗೆ ಬಟನ್ ಅನ್ನು ಪ್ರಸ್ತುತಪಡಿಸುವ ವೀಡಿಯೊಗಳು ಅಥವಾ ನಿಗದಿತ ಲೈವ್ ಸ್ಟ್ರೀಮ್‌ಗಳನ್ನು ಸೇರಿಸಿ.
  6. ಪ್ರಕಟಿಸಿ ಎಂಬುದನ್ನು ಆಯ್ಕೆ ಮಾಡಿ.
ಗಮನಿಸಿ: ನಿಧಿಸಂಗ್ರಹ ಆರಂಭ ದಿನಾಂಕದ ನಂತರ ನಿಮ್ಮ ವೀಕ್ಷಣೆ ಪುಟ ಅಥವಾ ಲೈವ್ ಚಾಟ್‌ನಲ್ಲಿ ದೇಣಿಗೆ ಬಟನ್ ಕಾಣಿಸಿಕೊಳ್ಳುತ್ತದೆ.

ನಿಮ್ಮ YouTube ಔದಾರ್ಯ ನಿಧಿಸಂಗ್ರಹವನ್ನು ನಿರ್ವಹಿಸಿ

ದೇಣಿಗೆ ಟ್ಯಾಬ್‌ನಲ್ಲಿ, ನಿಧಿಸಂಗ್ರಹದ ಮೂಲಕ ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ ಎಂಬುದನ್ನು ನೀವು ನೋಡಬಹುದು. ನೀವು ಯಾವಾಗ ಬೇಕಾದರೂ ಅಭಿಯಾನವನ್ನು ಎಡಿಟ್ ಮಾಡಬಹುದು, ಗುರಿಯ ಮೊತ್ತವನ್ನು ಬದಲಾಯಿಸಬಹುದು, ಅಥವಾ ನಿಧಿಸಂಗ್ರಹವನ್ನು ತೆಗೆದುಹಾಕಬಹುದು.

ನಿಮ್ಮ ನಿಧಿಸಂಗ್ರಹದ ವಿವರಗಳನ್ನು ಬದಲಾಯಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಗಳಿಸಿ ನಂತರ ದೇಣಿಗೆ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಬದಲಾಯಿಸಲು ಬಯಸುವ ನಿಧಿಸಂಗ್ರಹದ ಪಕ್ಕದಲ್ಲಿ, ಇನ್ನಷ್ಟು '' ನಂತರ ಎಡಿಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.

ನಿಮ್ಮ ನಿಧಿಸಂಗ್ರಹವನ್ನು ಅಳಿಸಲು ಮತ್ತು ನಿಮ್ಮ ವೀಡಿಯೊಗಳಿಂದ ದೇಣಿಗೆ ಬಟನ್ ಅನ್ನು ತೆಗೆದುಹಾಕಲು, ಮೇಲಿನ ಹಂತಗಳನ್ನು ಅನುಸರಿಸಿ ಮತ್ತು ಅಳಿಸಿ ಎಂಬುದನ್ನು ಆಯ್ಕೆ ಮಾಡಿ.

YouTube ಔದಾರ್ಯ ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡುವುದು ಹೇಗೆ ಎಂದು ನೋಡಿ

How to Set Up a Fundraiser | YouTube Giving

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6382926035770466339
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false