ಒಬ್ಬ ಕಲಾವಿದರಾಗಿ YouTube ನಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಿ

YouTube Analytics for Artists, ನಿಮ್ಮ ಸಂಗೀತ ಕಂಟೆಂಟ್‌ಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಶ್ಲೇಷಣೆಗಳನ್ನು ವೀಕ್ಷಿಸಲು ನಿಮಗೆ ಮತ್ತು ನಿಮ್ಮ ತಂಡಕ್ಕೆ ಅವಕಾಶ ನೀಡುತ್ತದೆ. YouTube ನಾದ್ಯಂತ ನಿಮ್ಮ ಸಂಗೀತವನ್ನು ಪ್ರಸ್ತುತಪಡಿಸಿರುವಲ್ಲಿ ನಿಮ್ಮ ಪರ್ಫಾರ್ಮೆನ್ಸ್ ಅನ್ನು ಅರ್ಥಮಾಡಿಕೊಳ್ಳಿ.

ಕನಿಷ್ಠ ಎರಡು ಅಧಿಕೃತ ಕಲಾವಿದರ ಚಾನಲ್‌ಗಳನ್ನು ನಿರ್ವಹಿಸಲು ನೀವು ಆ್ಯಕ್ಸೆಸ್ ಅನ್ನು ಹೊಂದಿದ್ದರೆ, ನಿಮ್ಮ ಕಲಾವಿದರ ನಡುವೆ ನ್ಯಾವಿಗೇಟ್ ಮಾಡಲು ಮತ್ತು ಒಳನೋಟಗಳನ್ನು ವೀಕ್ಷಿಸಲು ನೀವು ಕಲಾವಿದರ ರೋಸ್ಟರ್ ಟೂಲ್ ಅನ್ನು ಬಳಸಬಹುದು. ನಿಮ್ಮ ರೋಸ್ಟರ್ ಅನ್ನು ನಿರ್ವಹಿಸುವುದು ಮತ್ತು ಪ್ರಾರಂಭಿಸುವುದು ಹೇಗೆ ಎಂದು ತಿಳಿಯಿರಿ.

Analytics for Artists ಅನ್ನು ಯಾವುದು ವಿಭಿನ್ನವಾಗಿಸುತ್ತದೆ?

Analytics for artists ನೊಂದಿಗೆ, YouTube ನಲ್ಲಿ ನಿಮ್ಮ ಸಂಗೀತ ಹಾಗೂ ವೀಡಿಯೊಗಳ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ನಿಮ್ಮ ವಿಶ್ಲೇಷಣೆಗಳ ಮೂಲಕ, ನೀವು ಇದನ್ನು ನೋಡಬಹುದು:

  • ಲಾಂಗ್-ಫಾರ್ಮ್ ವೀಡಿಯೊಗಳು ಹಾಗೂ Shorts ನಾದ್ಯಂತ ಹಾಡಿನ ವಿಶ್ಲೇಷಣೆಗಳು
  • ನಿಮ್ಮ ಮಾಲೀಕತ್ವದ ಚಾನಲ್‌ಗಳು ಮತ್ತು ನಿಮ್ಮ ಸಂಗೀತವನ್ನು ಪ್ರಸ್ತುತಪಡಿಸುವ ಇತರ ಚಾನಲ್‌ಗಳಿಂದ ಅಂಕಿಅಂಶಗಳು
  • ನೈಜ ಸಮಯದ ಒಳನೋಟಗಳು (YouTube Studio ಆ್ಯಪ್‌ನಲ್ಲಿ ಮಾತ್ರ)

ಇಂತಹ ವೀಡಿಯೊಗಳಾದ್ಯಂತ ನಿಮ್ಮ ಹಾಡಿನ ಕಾರ್ಯಕ್ಷಮತೆಯ ಕುರಿತು ಹಾಡಿನ ವಿಶ್ಲೇಷಣೆಗಳು ಸಮಗ್ರವಾದ ನೋಟವನ್ನು ಒದಗಿಸುತ್ತವೆ:

  • ನಿಮ್ಮ ಹಾಡನ್ನು ಪೂರ್ಣವಾಗಿ ಅಥವಾ ಹೆಚ್ಚಿನ ಭಾಗವನ್ನು ಹೊಂದಿರುವುದು
  • ನಿಮ್ಮ ರೆಕಾರ್ಡಿಂಗ್ ಅನ್ನು ಪ್ರಾಥಮಿಕ ಘಟಕವಾಗಿ ಪ್ರಸ್ತುತಪಡಿಸುವುದು
  • ಬಳಕೆದಾರರು ಒದಗಿಸಿದ ಮೆಟಾಡೇಟಾದಲ್ಲಿ ನಿಮ್ಮ ಹೆಸರು, ಆಲ್ಬಮ್ ಅಥವಾ ಹಾಡಿನ ಶೀರ್ಷಿಕೆಯನ್ನು ಉಲ್ಲೇಖಿಸುವುದು

Analytics for Artists ಅನ್ನು ಪ್ರಾರಂಭಿಸಿ

Analytics for Artists ಅನ್ನು ಆ್ಯಕ್ಸೆಸ್ ಮಾಡಲು, ಅಧಿಕೃತ ಕಲಾವಿದರ ಚಾನಲ್‌ನ ಒಡೆತನ ಹೊಂದಿರಬೇಕು ಅಥವಾ ನಿರ್ವಹಣೆ ಮಾಡುತ್ತಿರಬೇಕು. ಅಧಿಕೃತ ಕಲಾವಿದರ ಚಾನಲ್ ಅನ್ನು ರಚಿಸುವುದು ಅಥವಾ ನಿಮ್ಮ ವಿಶ್ಲೇಷಣೆಗಳನ್ನು ವೀಕ್ಷಿಸಲು ಇತರರಿಗೆ ಅನುಮತಿ ನೀಡುವುದಕ್ಕಾಗಿ ನಿಮ್ಮ ಚಾನಲ್ ಅನುಮತಿಗಳನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

YouTube Analytics for Artists ಗೆ ಹೋಗಲು:

  1. ಬ್ರೌಸರ್‌ನಿಂದ YouTube Studio ಗೆ ಅಥವಾ Android ಅಥವಾ Apple ಸಾಧನಗಳಲ್ಲಿ YouTube Studio ಮೊಬೈಲ್ ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ Analytics ಅನ್ನು ಆಯ್ಕೆ ಮಾಡಿ.

ಕಲಾವಿದರ ವಿಶ್ಲೇಷಕಗಳ ಫೀಚರ್‌ಗಳು

ನಿಮ್ಮ ಕಾರ್ಯಕ್ಷಮತೆಯ ಸಮಗ್ರ ನೋಟ

ಸಮಗ್ರ ನೋಟ ಟ್ಯಾಬ್, YouTube ನಲ್ಲಿ ನಿಮ್ಮ ಕಾರ್ಯಕ್ಷಮತೆಯ ಸಾರಾಂಶವನ್ನು ತೋರಿಸುತ್ತದೆ. ಈ ಟ್ಯಾಬ್‌ನಲ್ಲಿ ನೀವು ಇವುಗಳ ವರದಿಗಳನ್ನು ನೋಡಬಹುದು:

  • ನಿಮ್ಮ ಸಮಗ್ರ ಕಾರ್ಯಕ್ಷಮತೆ: ನಿಮ್ಮ ಹಾಡುಗಳು ಹಾಗೂ ವೀಡಿಯೊಗಳ ಒಟ್ಟು ವೀಕ್ಷಣೆ ಸಮಯ, ವೀಕ್ಷಣೆಗಳು ಮತ್ತು ಅನನ್ಯ ವೀಕ್ಷಕರು.
  • ನೈಜ ಸಮಯದ ಚಟುವಟಿಕೆ: ಹೊಸ ಬಿಡುಗಡೆಗಳ ಕಾರ್ಯಕ್ಷಮತೆಯನ್ನು ಮಾಪನ ಮಾಡಿ. ಕಳೆದ 60 ನಿಮಿಷಗಳು ಅಥವಾ 48 ಗಂಟೆಗಳಲ್ಲಿನ ನಿಮ್ಮ ಅಂದಾಜು ಹಾಡು ಹಾಗೂ ವೀಡಿಯೊ ವೀಕ್ಷಣೆಗಳನ್ನು ಅರ್ಥಮಾಡಿಕೊಳ್ಳಲು, ಸಮಯಾವಧಿಯನ್ನು ಆಯ್ಕೆ ಮಾಡಿ.
  • ಸೇರ್ಪಡೆಯಾದ ಸಬ್‌ಸ್ಕ್ರೈಬರ್‌ಗಳು: ಸಮಯದ ಪ್ರಕಾರ ನಿಮ್ಮ ಒಟ್ಟು ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ವೀಕ್ಷಿಸಿ.

ಕಂಟೆಂಟ್

ಕಂಟೆಂಟ್ ಟ್ಯಾಬ್, ನಿಮ್ಮ ವಿಶ್ಲೇಷಣೆಯನ್ನು ಫಾರ್ಮ್ಯಾಟ್‌ನ ಪ್ರಕಾರ ವಿಭಾಗೀಕರಿಸುತ್ತದೆ - ವೀಡಿಯೊಗಳು, ಹಾಡುಗಳು, Shorts, ಲೈವ್, ಪೋಸ್ಟ್‌ಗಳು ಮತ್ತು ಪಾಡ್‌ಕಾಸ್ಟ್‌ಗಳು. ಈ ಟ್ಯಾಬ್, ರೀಚ್ ಹಾಗೂ ತೊಡಗಿಸಿಕೊಳ್ಳುವಿಕೆ ಟ್ಯಾಬ್‌ಗಳಲ್ಲಿ ಈ ಹಿಂದೆ ಕಾಣಿಸುತ್ತಿದ್ದ, ಇಂತಹ ಮಾಹಿತಿಯನ್ನು ಒಳಗೊಂಡಿದೆ:

ಮೊಬೈಲ್‌ನಲ್ಲಿ ಮಾತ್ರ:

ಕಂಟೆಂಟ್ ಟ್ಯಾಬ್, ಹಾಡಿನ ವಿಶ್ಲೇಷಣೆಗಳನ್ನು ಸಹ ಒಳಗೊಂಡಿದೆ. ಹಾಡಿನ ವಿಶ್ಲೇಷಣೆಯು ಅಧಿಕೃತ ಸಂಗೀತ ವೀಡಿಯೊಗಳು, ಆರ್ಟ್ ಟ್ರ್ಯಾಕ್‌ಗಳು, ಲಿರಿಕ್ ವೀಡಿಯೊಗಳು ಮತ್ತು ಇತರ ಬಳಕೆದಾರರು-ರಚಿಸಿದ ವೀಡಿಯೊಗಳಿಂದ ಡೇಟಾವನ್ನು ಸಂಯೋಜಿಸುತ್ತದೆ. ಈ ರೀತಿಯ ಸಂದರ್ಭಗಳಲ್ಲಿ, ಹಾಡಿನ ವಿಶ್ಲೇಷಣೆಗಳಲ್ಲಿ ವೀಡಿಯೊಗಳನ್ನು ಸೇರಿಸಲಾಗುತ್ತದೆ:

  • ನಿಮ್ಮ ಸೌಂಡ್ ರೆಕಾರ್ಡಿಂಗ್‌ನ ಪೂರ್ಣ ಅಥವಾ ಬಹುತೇಕ ಭಾಗವು ವೀಡಿಯೊದಲ್ಲಿದೆ
  • ಹಾಡು, UGC (ಬಳಕೆದಾರರು ರಚಿಸಿದ ಕಂಟೆಂಟ್) ವೀಡಿಯೊದ ಹೆಚ್ಚಿನ ಭಾಗವನ್ನು ವ್ಯಾಪಿಸುತ್ತದೆ
  • ವೀಡಿಯೊದ ವಿವರಗಳಲ್ಲಿ ನಿಮ್ಮ ಹೆಸರು, ಆಲ್ಬಮ್ ಅಥವಾ ಹಾಡಿನ ಶೀರ್ಷಿಕೆಯನ್ನು ಉಲ್ಲೇಖಿಸಲಾಗಿದೆ
  • ಹಾಡನ್ನು ನೀವು ಪ್ರಸ್ತುತಪಡಿಸಿರುವುದು Short ನ ಪ್ರಮುಖ ಘಟಕವಾಗಿದೆ

ನಿಮ್ಮ ಹಾಡಿನ ವಿಶ್ಲೇಷಣೆಗಳನ್ನು ನೋಡಲು,

  1. ನಿಮ್ಮ ಮೊಬೈಲ್ ಸಾಧನದಿಂದ YouTube Studio ಆ್ಯಪ್ ಅನ್ನು ತೆರೆಯಿರಿ.
  2. ಕಂಟೆಂಟ್ > ಹಾಡುಗಳು ಎಂಬಲ್ಲಿಗೆ ಹೋಗಿ.
  3. ಪರಿಶೀಲಿಸುವುದಕ್ಕಾಗಿ, ಪಟ್ಟಿಯಿಂದ ಹಾಡನ್ನು ಆಯ್ಕೆ ಮಾಡಿ.

ಪ್ರೇಕ್ಷಕರು

ನಿಮ್ಮ ಸಂಗೀತವನ್ನು ಯಾರು ವೀಕ್ಷಿಸುತ್ತಿದ್ದಾರೆ ಮತ್ತು ಆಲಿಸುತ್ತಿದ್ದಾರೆ ಎಂಬುದನ್ನು ಪ್ರೇಕ್ಷಕರು ಟ್ಯಾಬ್ ತೋರಿಸುತ್ತದೆ. ನಿಮ್ಮ ಸಬ್‌ಸ್ಕ್ರೈಬರ್‌ಗಳನ್ನು ವೀಕ್ಷಿಸಿ ಅಥವಾ ಮರಳಿ ಬಂದ, ಹೊಸ ಮತ್ತು ಅನನ್ಯ ವೀಕ್ಷಕರ ಕುರಿತು ಮಾಹಿತಿಯನ್ನು ಹುಡುಕಿ. ನೀವು ಇವುಗಳಿಗಾಗಿಯೂ ವರದಿಗಳನ್ನು ನೋಡಬಹುದು:

  • ನಿಮ್ಮ ಪ್ರೇಕ್ಷಕರು ವಾಸಿಸುವ ಟಾಪ್ ದೇಶಗಳು ಅಥವಾ ಪ್ರದೇಶಗಳು
  • ಟಾಪ್ ಉಪಶೀರ್ಷಿಕೆ/CC ಭಾಷೆಗಳು
  • ಪ್ರೇಕ್ಷಕರ ವಯಸ್ಸು ಮತ್ತು ಲಿಂಗ
  • ನಿಮ್ಮ ಪ್ರೇಕ್ಷಕರು YouTube ನಲ್ಲಿ ಯಾವಾಗ ಇರುತ್ತಾರೆ
ಗಮನಿಸಿ: ಪ್ರೇಕ್ಷಕರ ಟ್ಯಾಬ್, ನಿಮ್ಮ ಟ್ರಾಫಿಕ್‌ನ ಸಂಪೂರ್ಣ ವೀಕ್ಷಣೆಯನ್ನು ಪ್ರತಿನಿಧಿಸದಿರಬಹುದು. ಈ ಟ್ಯಾಬ್‌ನಲ್ಲಿ ಪ್ರದರ್ಶಿಸಿದ ಡೇಟಾ, ನಿಮ್ಮ ವೀಕ್ಷಕರ ಉಪ-ಗುಂಪನ್ನು ಪ್ರತಿನಿಧಿಸಬಹುದು.

ಆದಾಯ

ಆದಾಯ ಟ್ಯಾಬ್, YouTube ನಲ್ಲಿ ನಿಮ್ಮ ಗಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಟ್ಯಾಬ್, YouTube ಪಾಲುದಾರ ಕಾರ್ಯಕ್ರಮದಲ್ಲಿರುವ ರಚನೆಕಾರರಿಗೆ ಲಭ್ಯವಿದೆ ಮತ್ತು ನೀವು ಅಪ್‌ಲೋಡ್ ಮಾಡಿರುವ ವೀಡಿಯೊಗಳಿಗಾಗಿ ಆದಾಯವನ್ನು ತೋರಿಸುತ್ತದೆ.

ಆದಾಯದ ಸಮಗ್ರ ನೋಟವು ನಿಮ್ಮ ಅಂದಾಜು ಆದಾಯ, ನಿಮ್ಮ ಮಾಲೀಕತ್ವದ, ಮಾನಿಟೈಸ್ ಮಾಡುತ್ತಿರುವ ವೀಡಿಯೊಗಳ ಸಂಖ್ಯೆ ಮತ್ತು ಪ್ರತಿ ಸಾವಿರ ಪ್ಲೇಗಳಿಗಾಗಿ ಅಂದಾಜು ಸರಾಸರಿ ಒಟ್ಟು ಆದಾಯವನ್ನು ತೋರಿಸುತ್ತದೆ. ಇವುಗಳಿಗಾಗಿಯೂ ವರದಿಗಳಿವೆ:

  • ಮಾಸಿಕ ಅಂದಾಜು ಆದಾಯ: ಕಳೆದ 6 ತಿಂಗಳಲ್ಲಿ ನಿಮ್ಮ ಚಾನಲ್ ಎಷ್ಟು ಆದಾಯ ಗಳಿಸಿದೆ. ಚಾಲ್ತಿಯಲ್ಲಿರುವ ಆದಾಯ ವರದಿಗಳು ಅಂದಾಜು ಮಾತ್ರ ಆಗಿವೆ ಮತ್ತು ಬದಲಾವಣೆಗೆ ಒಳಪಟ್ಟಿವೆ.
  • ಟಾಪ್-ಗಳಿಕೆ ಮಾಡುತ್ತಿರುವ ವೀಡಿಯೊಗಳು: ನಿಗದಿತ ಸಮಯಾವಧಿಯಲ್ಲಿ ಅತ್ಯಧಿಕ ಅಂದಾಜು ಆದಾಯವನ್ನು ಹೊಂದಿರುವ ವೀಡಿಯೊಗಳು.
  • ಆದಾಯ ಮೂಲಗಳು: ನೀವು YouTube ನಲ್ಲಿ ಹೇಗೆ ಹಣ ಗಳಿಸುತ್ತಿದ್ದೀರಿ ಎಂಬುದರ ಬ್ರೇಕ್‌ಡೌನ್.
  • ಆ್ಯಡ್ ಪ್ರಕಾರಗಳು: ನಿಮ್ಮ ಆ್ಯಡ್‌ಗಳ ಫಾರ್ಮ್ಯಾಟ್ ಹಾಗೂ ನೀವು ನಿರ್ದಿಷ್ಟಪಡಿಸಿದ ಖರೀದಿಯ ಪ್ಲ್ಯಾಟ್‌ಫಾರ್ಮ್. ಈ ಬ್ರೇಕ್‌ಡೌನ್, ಕೇವಲ YouTube ಆ್ಯಡ್ ಆದಾಯ ಹಾಗೂ ಇಂಪ್ರೆಷನ್-ಆಧಾರಿತ ಮೆಟ್ರಿಕ್‌ಗಳಿಗೆ ಲಭ್ಯವಿದೆ.
  • ವಹಿವಾಟು ಆದಾಯ: ವ್ಯಾಪಾರದ ವಸ್ತು ಮತ್ತು ಸೂಪರ್ ಚಾಟ್‌ನಂತಹ ವಹಿವಾಟುಗಳಿಂದ ಅಂದಾಜು ಒಟ್ಟು ಆದಾಯ. ಈ ವೀಕ್ಷಣೆಯಿಂದ ಪಾಲುದಾರರು-ವಿಧಿಸಿದ ಮರುಪಾವತಿಗಳನ್ನು ಕಡಿತಗೊಳಿಸಲಾಗುತ್ತದೆ.

ನಿಮ್ಮ ಡೇಟಾವನ್ನು ಫಿಲ್ಟರ್ ಮಾಡಿ

ನಿಮ್ಮ ಡೇಟಾವನ್ನು ವಿಭಾಗೀಕರಿಸಲು ಮತ್ತು ನಿಮ್ಮ ಪ್ರೆಕ್ಷಕರನ್ನು ಅರ್ಥಮಾಡಿಕೊಳ್ಳಲು ಫಿಲ್ಟರ್‌ಗಳನ್ನು ಬಳಸಿ. ಈ ಕೆಳಗಿನ ಫಿಲ್ಟರ್ ವೀಕ್ಷಣೆಗಳು, ವಿವಿಧ ಚಾನಲ್‌ಗಳು, ವೀಡಿಯೊ ಪ್ರಕಾರಗಳು ಅಥವಾ YouTube ಉತ್ಪನ್ನಗಳಾದ್ಯಂತ ನಿಮ್ಮ ಕಾರ್ಯಕ್ಷಮತೆಯನ್ನು ತುಲನೆ ಮಾಡಲು ಸಹಾಯ ಮಾಡುತ್ತವೆ.

ಫಿಲ್ಟರ್‌ಗಳನ್ನು ಬಳಸಲು, YouTube Studio ದಲ್ಲಿ ನಿಮ್ಮ Analytics ಟ್ಯಾಬ್‌ನ ಮೇಲ್ಭಾಗದಿಂದ ಒಂದು ವೀಕ್ಷಣೆಯನ್ನು ಆಯ್ಕೆ ಮಾಡಿ.

ಒಟ್ಟು ರೀಚ್

ನಿಮ್ಮ ಒಟ್ಟು ರೀಚ್, ಇವುಗಳನ್ನು ಒಳಗೊಂಡು, YouTube ನಲ್ಲಿ ನಿಮ್ಮ ಕಾರ್ಯಕ್ಷಮತೆಯ ವ್ಯಾಪಕ ಸಮಗ್ರ ನೋಟವನ್ನು ಒದಗಿಸುತ್ತದೆ:

  • ನೀವು ಅಥವಾ ನಿಮ್ಮ ಲೇಬಲ್ ಅಪ್‌ಲೋಡ್ ಮಾಡಿರುವ ವೀಡಿಯೊಗಳು
  • ಇತರ ಚಾನಲ್‌ಗಳಿಗೆ ಅಪ್‌ಲೋಡ್ ಮಾಡಲಾದ ನಿಮ್ಮ ಸಂಗೀತವನ್ನು ಪ್ರಸ್ತುತಪಡಿಸುವ ಸಹಯೋಗಗಳು
  • ಅಭಿಮಾನಿಗಳು ಅಪ್‌ಲೋಡ್ ಮಾಡಿದ, ನಿಮ್ಮ ಸಂಗೀತವನ್ನು ಹೊಂದಿರುವ ವೀಡಿಯೊಗಳು.
ಗಮನಿಸಿ: ಅನ್ಯಥಾ ನಿರ್ದಿಷ್ಟಪಡಿಸದ ಹೊರತು, ನಿಮ್ಮ ವಿಶ್ಲೇಷಣೆಯು ನಿಮ್ಮ ಒಟ್ಟು ರೀಚ್‍ಗೆ ಡೀಫಾಲ್ಟ್ ಆಗುತ್ತದೆ.

ಅಧಿಕೃತ ಕಲಾವಿದರ ಚಾನಲ್

ಈ ಫಿಲ್ಟರ್, ನಿಮ್ಮ ಅಧಿಕೃತ ಕಲಾವಿದರ ಚಾನಲ್, VEVO ಅಥವಾ ಲೇಬಲ್‌ಗೆ ಅಪ್‌ಲೋಡ್ ಮಾಡಲಾದ ಸಂಗೀತ ಮತ್ತು ಸಂಗೀತವಲ್ಲದ ವೀಡಿಯೊಗಳಿಗಾಗಿ ಅಂಕಿಅಂಶಗಳನ್ನು ತೋರಿಸುತ್ತದೆ. YouTube ಆರ್ಟ್ ಟ್ರ್ಯಾಕ್ ಮೆಟ್ರಿಕ್‌ಗಳು ಸಹ ಒಳಗೊಂಡಿವೆ.

ಇತರ ಚಾನಲ್‌ಗಳು

YouTube ನಾದ್ಯಂತ ಇತರ ಚಾನಲ್‌ಗಳಲ್ಲಿ ನಿಮ್ಮ ಸಂಗೀತದ ಕಾರ್ಯಕ್ಷಮತೆ ಹೇಗಿತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಫಿಲ್ಟರ್ ಅನ್ನು ಬಳಸಿ. ಈ ಫಿಲ್ಟರ್, ಇವುಗಳನ್ನು ಒಳಗೊಂಡಿದೆ:

  • ಇತರ ಕಲಾವಿದರೊಂದಿಗೆ ಸಹಯೋಗಗಳು
  • ನಿಮ್ಮ ಎಲ್ಲಾ ಅಥವಾ ಬಹುತೇಕ ಎಲ್ಲಾ ಸೌಂಡ್ ರೆಕಾರ್ಡಿಂಗ್ ಅನ್ನು ಒಳಗೊಂಡಿರುವ, ಬೇರೆ ಯಾರೋ ಅಪ್‌ಲೋಡ್ ಮಾಡಿದ ವೀಡಿಯೊಗಳು
  • ನಿಮ್ಮ ಹಾಡು ಪ್ರಮುಖ ಘಟಕವಾಗಿರುವ, ಮತ್ತು ನಿಮ್ಮ ಹೆಸರು, ಆಲ್ಬಮ್ ಅಥವಾ ಹಾಡಿನ ಶೀರ್ಷಿಕೆಯನ್ನು ವೀಡಿಯೊದ ವಿವರಗಳಲ್ಲಿ ಉಲ್ಲೇಖಿಸಿರುವ ವೀಡಿಯೊಗಳು

ಸಾಂಗ್ ರೋಲ್‌ಅಪ್

ಸಾಂಗ್ ರೋಲ್‌ಅಪ್, YouTube ನಲ್ಲಿ ಹಾಡಿನ ಒಟ್ಟು ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಈ ಫಿಲ್ಟರ್, ಇವುಗಳನ್ನು ಒಳಗೊಂಡಿದೆ:

  • ಅಧಿಕೃತ ಸಂಗೀತ ವೀಡಿಯೊಗಳು
  • ಆರ್ಟ್ ಟ್ರ್ಯಾಕ್‌ಗಳು
  • ಲಿರಿಕ್ ವೀಡಿಯೊಗಳು
  • ಲೈವ್ ಪ್ರದರ್ಶನಗಳು
  • ನಿಮ್ಮ ಎಲ್ಲಾ ಅಥವಾ ಬಹುತೇಕ ಎಲ್ಲಾ ಸೌಂಡ್ ರೆಕಾರ್ಡಿಂಗ್ ಅನ್ನು ಒಳಗೊಂಡಿರುವ, ಬೇರೆ ಯಾರೋ ಅಪ್‌ಲೋಡ್ ಮಾಡಿದ ವೀಡಿಯೊಗಳು
  • ನಿಮ್ಮ ಹಾಡು ಪ್ರಮುಖ ಘಟಕವಾಗಿರುವ, ಮತ್ತು ನಿಮ್ಮ ಹೆಸರು, ಆಲ್ಬಮ್ ಅಥವಾ ಹಾಡಿನ ಶೀರ್ಷಿಕೆಯನ್ನು ವೀಡಿಯೊದ ವಿವರಗಳಲ್ಲಿ ಉಲ್ಲೇಖಿಸಿರುವ ವೀಡಿಯೊಗಳು
ಗಮನಿಸಿ: ಇತರ ಆವೃತ್ತಿಗಳು ಮತ್ತು ರೀಮಿಕ್ಸ್‌ಗಳನ್ನು ಸಾಂಗ್ ರೋಲ್‌ಅಪ್ ವೀಕ್ಷಣೆಯಲ್ಲಿ ಪ್ರತ್ಯೇಕ ಹಾಡುಗಳಾಗಿ ನಿರ್ವಹಿಸಲಾಗುತ್ತದೆ.

ನಿಮ್ಮ ಸಾಂಗ್ ರೋಲ್‌ಅಪ್ ಅನ್ನು ವೀಕ್ಷಿಸಲು, Analytics for Artists ನ ಒಳಗೆ ಸುಧಾರಿತ ಎಂಬುದನ್ನು ಕ್ಲಿಕ್ ಮಾಡಿ.

YouTube Music

ನಿಮ್ಮ YouTube Music ಕಾರ್ಯಕ್ಷಮತೆಯನ್ನು YouTube ನಿಂದ ಪ್ರತ್ಯೇಕಿಸಲು, YouTube Music ಫಿಲ್ಟರ್ ಅನ್ನು ಬಳಸಿ. ಈ ಸೇವಾಧಾರಿತ ಫಿಲ್ಟರ್, YouTube Music ಆ್ಯಪ್‌ನಿಂದ ಬರುವ ನಿಮ್ಮ ವೀಕ್ಷಣೆ ಸಮಯ ಹಾಗೂ ವೀಕ್ಷಣೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ.
ಗಮನಿಸಿ: YouTube Music ಡೇಟಾವನ್ನು ಫಿಲ್ಟರ್ ಮಾಡುವ ಸೌಲಭ್ಯವು ಮಾರ್ಚ್ 2021 ರಿಂದ ಇಲ್ಲಿಯವರೆಗೆ ಮಾತ್ರ ಲಭ್ಯವಿದೆ. ಈ ಹಿಂದಿನ ಡೇಟಾ, YouTube ಮೆಟ್ರಿಕ್‌ಗಳನ್ನು ಸಹ ಒಳಗೊಂಡಿದೆ.
ನಿಮ್ಮ ಆರ್ಟಿಸ್ಟ್ ರೀಕ್ಯಾಪ್ ಮೂಲಕ ಹೈಲೈಟ್‌ಗಳನ್ನು ಹುಡುಕಿ ಮತ್ತು ವರ್ಷಾದ್ಯಂತದ ಮೈಲಿಗಲ್ಲುಗಳ ಸಂಭ್ರಮವನ್ನು ಆಚರಿಸಿ. YouTube ನಲ್ಲಿ ಅಭಿಮಾನಿಗಳು ನಿಮ್ಮ ಸಂಗೀತದೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬ ಕುರಿತು ತಿಳಿದುಕೊಳ್ಳಿ. ನಂತರ, ಕಸ್ಟಮ್ ಡೇಟಾ ಕಾರ್ಡ್‌ಗಳನ್ನು ಬಳಸಿಕೊಂಡು ನಿಮ್ಮ ಸಾಧನೆಗಳನ್ನು ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ.
ನಿಮ್ಮ ವರ್ಷಾಂತ್ಯದ ರೀಕ್ಯಾಪ್ ಅನ್ನು ವೀಕ್ಷಿಸುವುದು ಮತ್ತು ಹಂಚಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15536828869121416107
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false