ಹಸ್ತಚಾಲಿತ ಕ್ಲೈಮ್ ಎಂದರೇನು?

ವೀಡಿಯೊ ಕೃತಿಸ್ವಾಮ್ಯ ವಿವರಗಳು ಪುಟಕ್ಕೆ ನಾವು ಪ್ರಸ್ತುತ 2 ಬದಲಾವಣೆಗಳನ್ನು ಪರಿಚಯಿಸುತ್ತಿದ್ದೇವೆ:

  1. ಪುಟದ ವಿನ್ಯಾಸ: ನಾವು ಪುಟದ ಲೇಔಟ್ ಅನ್ನು ಅಪ್‌ಡೇಟ್ ಮಾಡಿದ್ದೇವೆ. ನೀವು ದಾವೆದಾರರ ಹೆಸರು ಮತ್ತು ಕ್ಲೈಮ್ ಪಾಲಿಸಿ ವಿವರಗಳಿಗಾಗಿ ನೋಡುತ್ತಿದ್ದರೆ, "ವೀಡಿಯೊ ಮೇಲಿನ ಪರಿಣಾಮ" ಸಾಲಿನ ಮೇಲೆ ಹೋವರ್ ಮಾಡಿ.
  2. ಕೃತಿಸ್ವಾಮ್ಯ ಟ್ಯಾಬ್: ವೀಡಿಯೊದ ವಿವರಗಳು ಪುಟದಲ್ಲಿ, ನಾವು ಹೊಸ ಕೃತಿಸ್ವಾಮ್ಯ ಟ್ಯಾಬ್ ಅನ್ನು ಸೇರಿಸಿದ್ದು ನೀವು ಯಾವುದೇ ವೀಡಿಯೊದ ವಿವರಗಳ ಪುಟದಿಂದ ಸುಲಭವಾಗಿ ಕೃತಿಸ್ವಾಮ್ಯವನ್ನು ಆ್ಯಕ್ಸೆಸ್ ಮಾಡಬಹುದು.

ಕ್ಲೈಮ್‌ಗಳಿಗೆ ಪ್ರತಿಕ್ರಿಯಿಸಲು ಲಭ್ಯವಿರುವ ಮಾಹಿತಿ ಮತ್ತು ಆಯ್ಕೆಗಳು ಬದಲಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.

YouTube ನಲ್ಲಿ ತಮ್ಮ ಅನುಮತಿಯಿಲ್ಲದೆ ಬಳಸಲಾಗುತ್ತಿರುವ ತಮ್ಮ ಕಂಟೆಂಟ್ ಅನ್ನು ಹುಡುಕಲು ಕೃತಿಸ್ವಾಮ್ಯ ಮಾಲೀಕರು ಹಸ್ತಚಾಲಿತವಾಗಿ ಕ್ಲೈಮ್ ಮಾಡುವ ಟೂಲ್ ಅನ್ನು ಬಳಸಿದಾಗ ವೀಡಿಯೊ, ಹಸ್ತಚಾಲಿತ ಕ್ಲೈಮ್ ಅನ್ನು ಪಡೆಯುತ್ತದೆ.

ಹಸ್ತಚಾಲಿತ ಕ್ಲೈಮ್‌ಗಳ ಕುರಿತು ನೀವೇನು ತಿಳಿದಿರಬೇಕು

  • ಹಸ್ತಚಾಲಿತ ಕ್ಲೈಮ್‍ಗಳು ಸ್ವಯಂಚಾಲಿತ Content ID ಕ್ಲೈಮ್‌ಗಳಿಗಿಂತ ಭಿನ್ನವಾಗಿರುತ್ತವೆ. ಅಪ್‌ಲೋಡ್ ಮಾಡಲಾದ ವೀಡಿಯೊ, YouTube ನ Content ID ಸಿಸ್ಟಂನಲ್ಲಿರುವ ಬೇರೊಂದು ವೀಡಿಯೊಗೆ (ಅಥವಾ ವೀಡಿಯೊದ ಸೆಗ್ಮೆಂಟ್‌ಗೆ) ಹೊಂದಾಣಿಕೆಯಾದರೆ, Content ID ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ.
  • ಹಸ್ತಚಾಲಿತವಾಗಿ ಕ್ಲೈಮ್ ಮಾಡುವ ಟೂಲ್‌ನ ಅವಶ್ಯಕತೆಯನ್ನು ಪ್ರದರ್ಶಿಸುವ ಮತ್ತು Content ID ಕುರಿತು ಸುಧಾರಿತ ಜ್ಞಾನವನ್ನು ಹೊಂದಿರುವ ಕೃತಿಸ್ವಾಮ್ಯ ಮಾಲೀಕರು, ಆ ಟೂಲ್ ಅನ್ನು ಬಳಸುತ್ತಾರೆ. ಈ ಟೂಲ್, Content ID ಮೂಲಕ ಹೊಂದಾಣಿಕೆಯಾಗದ ವೀಡಿಯೊಗಳನ್ನು ಹಸ್ತಚಾಲಿತವಾಗಿ ಕ್ಲೈಮ್ ಮಾಡಲು ಕೃತಿಸ್ವಾಮ್ಯದ ಮಾಲೀಕರಿಗೆ ಒಂದು ವಿಧಾನವನ್ನು ಒದಗಿಸಿಕೊಡುತ್ತವೆ.
  • ಹಸ್ತಚಾಲಿತ ಕ್ಲೈಮ್‌ಗಳು ನಿಖರವಾದ ಸಮಯಸ್ಟ್ಯಾಂಪ್‌ಗಳನ್ನು ಹೊಂದಿರಬೇಕು , ಇದರಿಂದ, ಯಾವ ಕಂಟೆಂಟ್ ಅನ್ನು ಕ್ಲೈಮ್ ಮಾಡಲಾಗುತ್ತದೆ ಎನ್ನುವುದನ್ನು ರಚನೆಕಾರರು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಸ್ತಚಾಲಿತವಾಗಿ ಕ್ಲೈಮ್ ಮಾಡುವ ಟೂಲ್ ಅನ್ನು ಕೃತಿಸ್ವಾಮ್ಯ ಮಾಲೀಕರು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುವಂತಿಲ್ಲ.
ಪುನರಾವರ್ತಿತವಾಗಿ ತಪ್ಪು ಸಮಯಸ್ಟ್ಯಾಂಪ್‌ಗಳನ್ನು ಆಯ್ಕೆ ಮಾಡುವ ಕೃತಿಸ್ವಾಮ್ಯ ಮಾಲೀಕರ ಹಸ್ತಚಾಲಿತವಾಗಿ ಕ್ಲೈಮ್ ಮಾಡುವ ಟೂಲ್‌ನ ಆ್ಯಕ್ಸೆಸ್ ಅನ್ನು ಹಿಂಪಡೆಯಬಹುದು ಅಥವಾ ಅನ್ವಯಿಸಿದರೆ, YouTube ನೊಂದಿಗೆ ಅವರ ಪಾಲುದಾರಿಕೆಯನ್ನು ಕೊನೆಗೊಳಿಸಬಹುದು. ನಿಮ್ಮ ವೀಡಿಯೊದಲ್ಲಿ ಕ್ಲೈಮ್ ಮಾಡಲಾದ ಸಮಯಸ್ಟ್ಯಾಂಪ್‌ಗಳು ನಿಖರವಾಗಿಲ್ಲ ಎಂದು ನೀವು ಭಾವಿಸಿದರೆ, ನಮ್ಮ ರಚನೆಕಾರರ ಬೆಂಬಲ ತಂಡವನ್ನು ನೀವು ಸಂಪರ್ಕಿಸಬಹುದು.

ನನ್ನ ವೀಡಿಯೊ, ಹಸ್ತಚಾಲಿತ ಕ್ಲೈಮ್ ಅನ್ನು ಹೊಂದಿದ್ದರೆ ನಾನೇನು ಮಾಡಬೇಕು?

Tools to Resolve Manual Content ID Claims - Copyright on YouTube

ನಿಮ್ಮ ವೀಡಿಯೊ ಹಸ್ತಚಾಲಿತ ಕ್ಲೈಮ್ ಅನ್ನು ಹೊಂದಿದ್ದರೆ, ಸಂದರ್ಭವನ್ನು ಆಧರಿಸಿ, ನಿಮಗೊಂದಿಷ್ಟು ಆಯ್ಕೆಗಳಿವೆ:

ಅದನ್ನು ಹಾಗೆಯೇ ಬಿಟ್ಟುಬಿಡಿ
ಒಂದು ಹಕ್ಕು ಸ್ಥಾಪನೆಯು ಮಾನ್ಯವಾಗಿದೆ ಎಂದು ನೀವು ಭಾವಿಸಿದರೆ, ನೀವು ಏನೂ ಮಾಡದೆ ಸುಮ್ಮನಿರಬಹುದು ಮತ್ತು ನಿಮ್ಮ ವೀಡಿಯೊದ ಮೇಲಿನ ಹಕ್ಕು ಸ್ಥಾಪನೆಯನ್ನು ಹಾಗೆಯೇ ಬಿಡಬಹುದು. ನಂತರ ಕೂಡ ನೀವು ಮನಸ್ಸು ಬದಲಾಯಿಸಬಹುದು.
ಹಕ್ಕು ಸ್ಥಾಪನೆ ಮಾಡಿದ ಕಂಟೆಂಟ್ ಅನ್ನು ತೆಗೆದುಹಾಕಿ

ಹಕ್ಕು ಸ್ಥಾಪನೆಯು ಮಾನ್ಯವಾಗಿದೆ ಎಂದು ನೀವು ಭಾವಿಸಿದರೆ, ಹೊಸ ವೀಡಿಯೊವನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲದೆ, ಹಕ್ಕು ಸ್ಥಾಪನೆ ಮಾಡಲಾದ ಕಂಟೆಂಟ್ ಅನ್ನು ನೀವು ತೆಗೆದುಹಾಕಬಹುದು. ಇದನ್ನು ಯಶಸ್ವಿಯಾಗಿ ಮಾಡಿದರೆ, ಈ ಯಾವುದೇ ಆಯ್ಕೆಗಳು ಹಕ್ಕು ಸ್ಥಾಪನೆಯನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತವೆ:

  • ಸೆಗ್ಮೆಂಟ್ ಅನ್ನು ಟ್ರಿಮ್ ಮಾಡಿ: ಹಕ್ಕು ಸ್ಥಾಪನೆ ಮಾಡಲಾದ ಸೆಗ್ಮೆಂಟ್ ಅನ್ನು ನಿಮ್ಮ ವೀಡಿಯೊದಿಂದ ನೀವು ಎಡಿಟ್ ಮಾಡಿ ತೆಗೆಯಬಹುದು.
  • ಹಾಡನ್ನು ಬದಲಾಯಿಸಿ: ನಿಮ್ಮ ವೀಡಿಯೊದಲ್ಲಿ ಹಾಡಿನ ಮೇಲೆ ಹಕ್ಕು ಸ್ಥಾಪನೆ ಮಾಡಲಾಗಿದೆ ಎಂದಾದರೆ, YouTube ಆಡಿಯೋ ಲೈಬ್ರರಿಯಿಂದ ಇತರ ಆಡಿಯೋವನ್ನು ಬಳಸಿ ನಿಮ್ಮ ಆಡಿಯೋ ಟ್ರ್ಯಾಕ್ ಅನ್ನು ಬದಲಾಯಿಸಲು ನಿಮಗೆ ಸಾಧ್ಯವಾಗಬಹುದು.
  • ಹಾಡನ್ನು ಮ್ಯೂಟ್ ಮಾಡಿ: ನಿಮ್ಮ ವೀಡಿಯೊದಲ್ಲಿನ ಆಡಿಯೋದ ಮೇಲೆ ಹಕ್ಕು ಸ್ಥಾಪನೆ ಮಾಡಲಾಗಿದ್ದರೆ, ಹಕ್ಕು ಸ್ಥಾಪನೆ ಮಾಡಿದ ಆಡಿಯೋವನ್ನು ಮ್ಯೂಟ್ ಮಾಡಲು ನಿಮಗೆ ಸಾಧ್ಯವಾಗಬಹುದು. ಕೇವಲ ಹಾಡನ್ನು ಮ್ಯೂಟ್ ಮಾಡಬೇಕೇ ಅಥವಾ ವೀಡಿಯೊದ ಸಂಪೂರ್ಣ ಆಡಿಯೋವನ್ನು ಮ್ಯೂಟ್ ಮಾಡಬೇಕೇ ಎಂಬುದನ್ನು ನೀವು ಆಯ್ಕೆ ಮಾಡಬಹುದು.
ಆದಾಯ ಹಂಚಿಕೊಳ್ಳಿ
ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿ ಇದ್ದರೆ ಮತ್ತು ನಿಮ್ಮ ವೀಡಿಯೊದಲ್ಲಿನ ಸಂಗೀತದ ಮೇಲೆ ಹಕ್ಕು ಸ್ಥಾಪನೆ ಮಾಡಲಾಗಿದ್ದರೆ, ಸಂಗೀತ ಪ್ರಕಾಶಕರೊಂದಿಗೆ ಆದಾಯವನ್ನು ಹಂಚಿಕೊಳ್ಳಲು ನಿಮಗೆ ಸಾಧ್ಯವಾಗಬಹುದು.
ಹಕ್ಕು ಸ್ಥಾಪನೆಯ ಕುರಿತು ವಿವಾದ ಸಲ್ಲಿಸಿ

ಹಕ್ಕು ಸ್ಥಾಪನೆಯು ಅಮಾನ್ಯವಾಗಿದೆ ಎಂದು ನೀವು ಭಾವಿಸಿದರೆ, ಹಕ್ಕು ಸ್ಥಾಪನೆ ಮಾಡಲಾದ ಕಂಟೆಂಟ್ ಅನ್ನು ಬಳಸಲು ಬೇಕಾದ ಎಲ್ಲಾ ಅಗತ್ಯ ಹಕ್ಕುಗಳನ್ನು ನೀವು ಹೊಂದಿದ್ದೀರಿ ಎಂದು ನಿಮಗೆ ವಿಶ್ವಾಸವಿದ್ದರೆ, ನೀವು ಹಕ್ಕು ಸ್ಥಾಪನೆಯ ಕುರಿತು ವಿವಾದ ಸಲ್ಲಿಸಬಹುದು.

ನೀವು ಹಕ್ಕು ಸ್ಥಾಪನೆಯ ಕುರಿತು ವಿವಾದವನ್ನು ಸಲ್ಲಿಸಲು ಯೋಜಿಸುತ್ತಿದ್ದರೆ ಮತ್ತು ನಿಮ್ಮ ವೀಡಿಯೊವನ್ನು ಮಾನಿಟೈಸ್ ಮಾಡುತ್ತಿದ್ದರೆ, ವಿವಾದಗಳ ಸಮಯದಲ್ಲಿ ಮಾನಿಟೈಸೇಶನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೃತಿಸ್ವಾಮ್ಯ ವಿವಾದಗಳ ವಿಚಾರದಲ್ಲಿ YouTube ಮಧ್ಯಸ್ಥಿಕೆ ವಹಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.

ಮಾನ್ಯವಾದ ಕಾರಣ ಇಲ್ಲದೆ ನೀವು ಹಕ್ಕು ಸ್ಥಾಪನೆಯ ಕುರಿತು ವಿವಾದ ಸಲ್ಲಿಸಿದರೆ, ಹಕ್ಕುಸ್ವಾಮ್ಯದ ಮಾಲೀಕರು ನಿಮ್ಮ ವೀಡಿಯೊವನ್ನು ತೆಗೆದುಹಾಕಲು ವಿನಂತಿಸಿಕೊಳ್ಳಬಹುದು. ನಿಮ್ಮ ವೀಡಿಯೊಗಾಗಿ ನಾವು ಮಾನ್ಯವಾದ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಪಡೆದರೆ, ನಿಮ್ಮ ಖಾತೆಯು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13037930896833844213
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false