ನಿಮ್ಮ YouTube ಆದಾಯವನ್ನು ಪರಿಶೀಲಿಸಿ

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ, ನಾವು ರಷ್ಯಾದಲ್ಲಿ ನೆಲೆಸಿರುವ ಬಳಕೆದಾರರಿಗೆ Google ಮತ್ತು YouTube ಜಾಹೀರಾತುಗಳನ್ನು ಸರ್ವ್ ಮಾಡುವುದನ್ನು ತಾತ್ಕಾಲಿಕವಾಗಿ ವಿರಾಮಗೊಳಿಸುತ್ತಿದ್ದೇವೆ. ಇನ್ನಷ್ಟು ತಿಳಿಯಿರಿ.

YouTube Studio ಮೊಬೈಲ್ ಆ್ಯಪ್‌ನ ಗಳಿಸಿ ಟ್ಯಾಬ್‌ಗೆ ಪಾವತಿ ವಿವರಗಳನ್ನು ತರುವ ಹೊಸ ಬೀಟಾವನ್ನು ನಾವು ಪರಿಚಯಿಸುತ್ತಿದ್ದೇವೆ. ಈ ಬೀಟಾ, ಅರ್ಹ ರಚನೆಕಾರರಿಗೆ, ತಮ್ಮ ಸಂಪಾದನೆಗಳು ಪಾವತಿಗಳಾಗಿ ಹೇಗೆ ಬದಲಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇನ್ನೂ ಸುಲಭದ ವಿಧಾನವನ್ನು ಒದಗಿಸುತ್ತದೆ. ಈ ಬೀಟಾದ ಮೂಲಕ ನೀವು ಇವುಗಳನ್ನು ವೀಕ್ಷಿಸಬಹುದು:
  • ನಿಮ್ಮ ಮುಂದಿನ ಪಾವತಿಯತ್ತ ನಿಮ್ಮ ಪ್ರಗತಿ
  • ಕಳೆದ 12 ತಿಂಗಳುಗಳಲ್ಲಿ ನಿಮ್ಮ ಪಾವತಿಯ ದಿನಾಂಕ, ಪಾವತಿಸಿದ ಮೊತ್ತ ಮತ್ತು ಪಾವತಿಯ ಬ್ರೇಕ್‌ಡೌನ್ ಸೇರಿದಂತೆ ನಿಮ್ಮ ಪಾವತಿ ಇತಿಹಾಸ
ನಮ್ಮ ಫೋರಮ್ ಪೋಸ್ಟ್‌ನಲ್ಲಿ ಇನ್ನಷ್ಟು ತಿಳಿಯಿರಿ.

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ಯಾವ ಕಂಟೆಂಟ್ ಅತಿ ಹೆಚ್ಚು ಹಣವನ್ನು ಗಳಿಸುತ್ತಿದೆ ಮತ್ತು ಯಾವ ಆದಾಯ ಮೂಲಗಳು ಅತಿ ಹೆಚ್ಚು ಲಾಭದಾಯಕವಾಗಿವೆ ಎಂಬುದನ್ನು YouTube Analytics ನಲ್ಲಿನ ಆದಾಯ ಟ್ಯಾಬ್ ತೋರಿಸುತ್ತದೆ. YouTube ನಲ್ಲಿ ಹಣ ಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಸಲಹೆ: ನಮ್ಮ ಮಾನಿಟೈಸೇಶನ್ ಮೂಲಗಳು ವಿಕಸನ ಹೊಂದಿದಂತೆಲ್ಲಾ, ನೀವು YouTube Analytics ನಲ್ಲಿನ ಆದಾಯ ಟ್ಯಾಬ್‌ನಲ್ಲಿ ಹೆಚ್ಚು ವಿವರವಾದ ಆದಾಯ ಬ್ರೇಕ್‌ಡೌನ್‌ಗಳು ಸೇರಿದಂತೆ ಬದಲಾವಣೆಗಳನ್ನು ಕಾಣಬಹುದು. ಈ ಬ್ರೇಕ್‌ಡೌನ್‌ಗಳು, ಮಲ್ಟಿಫಾರ್ಮ್ಯಾಟ್ ರಚನೆಕಾರರಿಗೆ ತಮ್ಮ ಆದಾಯ ಹರಿವುಗಳನ್ನು ಆಳವಾಗಿ ವಿಶ್ಲೇಷಿಸಲು ಮತ್ತು ತಮ್ಮ ವ್ಯಾಪಾರವನ್ನು ಅಭಿವೃದ್ಧಿಸುವುದಕ್ಕೆ ಆಪ್ಟಿಮೈಸ್ ಮಾಡಲು ಅವಕಾಶ ನೀಡುತ್ತವೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಗಮನಿಸಿ: ಆದಾಯವು YouTube Analytics ನಲ್ಲಿ ಕಾಣಿಸಿಕೊಳ್ಳಲು 2 ದಿನಗಳಷ್ಟು ಕಾಲಾವಕಾಶ ಬೇಕಾಗುತ್ತದೆ.

ನಿಮ್ಮ ಆದಾಯ ವರದಿಗಳನ್ನು ವೀಕ್ಷಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, Analytics ಆಯ್ಕೆ ಮಾಡಿ.
  3. ಮೇಲಿನ ಮೆನುವಿನಿಂದ ಆದಾಯ ಎಂಬುದನ್ನು ಆಯ್ಕೆ ಮಾಡಿ.

ನೀವು ಎಷ್ಟು ಆದಾಯ ಗಳಿಸುತ್ತಿದ್ದೀರಿ

ಕಳೆದ 6 ತಿಂಗಳಿನಲ್ಲಿ ನಿಮ್ಮ ಚಾನಲ್ ಎಷ್ಟು ಆದಾಯ ಗಳಿಸಿದೆ ಎನ್ನುವುದನ್ನು, ಈ ವರದಿಯು ತಿಂಗಳ ಪ್ರಕಾರ ವಿಭಜಿಸಿ ತೋರಿಸುತ್ತಿದೆ.

ನೀವು ಎಷ್ಟು ಆದಾಯ ಗಳಿಸುತ್ತಿದ್ದೀರಿ ಎನ್ನುವುದು ಈ ಕೆಳಗಿನವುಗಳಿಂದಾಗಿ ಅಡ್ಜಸ್ಟ್‌ಮೆಂಟ್‌ಗಳಿಗೆ ಒಳಪಟ್ಟಿದೆ:

ನಿಮ್ಮ ಅಂದಾಜು ಆದಾಯದಲ್ಲಿ ಏರಿಳಿತಗಳು ಕಂಡುಬಂದರೆ, ಅದು ಈ ಅಡ್ಜಸ್ಟ್‌ಮೆಂಟ್‌ಗಳ ಕಾರಣದಿಂದ ಉಂಟಾಗಿರಬಹುದು. YouTube Analytics ನಲ್ಲಿ ಆದಾಯವು ಕಾಣಿಸಿಕೊಂಡ ನಂತರ ಎರಡು ಬಾರಿ ಈ ಅಡ್ಜಸ್ಟ್‌ಮೆಂಟ್‌ಗಳು ಸಂಭವಿಸುತ್ತವೆ:

  • ಮೊದಲನೆಯ ಅಡ್ಜಸ್ಟ್‌ಮೆಂಟ್ 1 ವಾರದ ನಂತರ ಸಂಭವಿಸುತ್ತದೆ ಮತ್ತು ಹೆಚ್ಚು ಪೂರ್ಣವಾದ ಅಂದಾಜನ್ನು ಒದಗಿಸುತ್ತದೆ.
  • ಎರಡನೇ ಅಡ್ಜಸ್ಟ್‌ಮೆಂಟ್ ಮುಂದಿನ ತಿಂಗಳ ನಡುವಿನಲ್ಲಿ ಸಂಭವಿಸುತ್ತದೆ ಮತ್ತು ಒಟ್ಟಾರೆ ನಿಮ್ಮ ಗಳಿಕೆಗಳನ್ನು ಪ್ರತಿನಿಧಿಸುತ್ತದೆ.

ನೀವು ಹಣವನ್ನು ಹೇಗೆ ಗಳಿಸುತ್ತೀರಿ

ಈ ವರದಿಯು, ಪ್ರತಿ ಆದಾಯ ಮೂಲದಿಂದ ಎಷ್ಟು ಅಂದಾಜು ಆದಾಯ ಬಂದಿದೆ ಎಂಬುದರ ಬ್ರೇಕ್‌ಡೌನ್ ಅನ್ನು ಒದಗಿಸುತ್ತದೆ. ಆದಾಯ ಮೂಲಗಳ ಉದಾಹರಣೆಗಳಲ್ಲಿ ವೀಕ್ಷಣಾ ಪುಟದ ಆ್ಯಡ್‌ಗಳು, Shorts ಫೀಡ್ ಆ್ಯಡ್‌ಗಳು, ಸದಸ್ಯತ್ವಗಳು, Supers, ಕನೆಕ್ಟೆಡ್ ಸ್ಟೋರ್‌ಗಳು ಮತ್ತು ಶಾಪಿಂಗ್ ಅಫಿಲಿಯೇಟ್‌ಗಳು ಸೇರಿವೆ. ವಿವರವಾದ ಆದಾಯ ಬ್ರೇಕ್‌ಡೌನ್‌ಗಾಗಿ ನೀವು ಒಂದು ಮೂಲವನ್ನು ಆಯ್ಕೆ ಮಾಡಬಹುದು.

ಕಂಟೆಂಟ್ ಪರ್ಫಾರ್ಮೆನ್ಸ್

ನಿಮ್ಮ ವೀಡಿಯೊಗಳು, Shorts ಹಾಗೂ ಲೈವ್ ಸ್ಟ್ರೀಮ್‌ಗಳು ಎಷ್ಟು ಆದಾಯ ಗಳಿಸಿವೆ ಎಂಬುದನ್ನು ಈ ವರದಿಯು ತೋರಿಸುತ್ತದೆ. ಈ ವರದಿಯು, ಪ್ರತಿ ಸಾವಿರ ವೀಕ್ಷಣೆಗಳಿಗೆ ಆದಾಯವನ್ನು (RPM) ಸಹ ಒಳಗೊಂಡಿರುತ್ತದೆ.

ಈ ವರದಿಯು, ಯಾವ ಕಂಟೆಂಟ್ ಅತ್ಯಧಿಕ ಅಂದಾಜು ಆದಾಯವನ್ನು ಗಳಿಸಿದೆ ಎಂಬುದನ್ನು ಸಹ ತೋರಿಸುತ್ತದೆ, ಇದನ್ನು ಫಾರ್ಮ್ಯಾಟ್ ಪ್ರಕಾರಗಳ (ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು) ಅನುಗುಣವಾಗಿ ವಿಂಗಡಿಸಲಾಗಿರುತ್ತದೆ.

ನಿಮ್ಮ ಅಂತಿಮಗೊಳಿಸಿದ ಗಳಿಕೆಗಳನ್ನು ವೀಕ್ಷಿಸಿ

ಅಂತಿಮಗೊಳಿಸಿದ ನಿಮ್ಮ ಗಳಿಕೆಗಳ ಕುರಿತು

  • ನಿಮ್ಮ ಅಂತಿಮಗೊಳಿಸಿದ ಗಳಿಕೆಗಳು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಮಾತ್ರ ಗೋಚರಿಸುತ್ತವೆ.
  • YouTube ಗಾಗಿ AdSense ನಲ್ಲಿನ ಅಂತಿಮಗೊಳಿಸಿದ ಗಳಿಕೆಗಳು YouTube Analytics ನಲ್ಲಿನ ನಿಮ್ಮ ಅಂದಾಜಿಸಲಾದ ಗಳಿಕೆಗಳಿಗಿಂತ ವಿಭಿನ್ನವಾಗಿರಬಹುದು. ಉದಾಹರಣೆಗೆ, ಒಂದು ವೇಳೆ ಯಾವುದಾದರೂ ಅನ್ವಯಿಸುವುದಾದರೆ, ಅಂತಿಮಗೊಳಿಸಿದ ನಿಮ್ಮ ಗಳಿಕೆಗಳ ಮೇಲೆ ತೆರಿಗೆ ತಡೆಹಿಡಿಯುವಿಕೆ ಪ್ರಭಾವ ಬೀರಬಹುದು. ತಡೆಹಿಡಿಯಲಾದ ಯಾವುದೇ ತೆರಿಗೆಗಳು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಗೋಚರಿಸುತ್ತವೆ.
  • ಪ್ರತಿ ತಿಂಗಳ 7ನೇ ಮತ್ತು 12ನೇ ತಾರೀಖಿನ ನಡುವೆ, ಹಿಂದಿನ ತಿಂಗಳಿಗಾಗಿ ಅಂತಿಮಗೊಳಿಸಲಾದ ಗಳಿಕೆಗಳನ್ನು ನಿಮ್ಮ ಖಾತೆಯ ಬ್ಯಾಲೆನ್ಸ್‌ಗೆ ಸೇರಿಸಲಾಗುತ್ತದೆ.

YouTube ಗಾಗಿ AdSense ನಲ್ಲಿ ನಿಮ್ಮ ಅಂತಿಮಗೊಳಿಸಿದ ಗಳಿಕೆಗಳನ್ನು ವೀಕ್ಷಿಸಲು:

  1. ನಿಮ್ಮ YouTube ಗಾಗಿ AdSense ಖಾತೆಗೆ ಸೈನ್ ಇನ್ ಮಾಡಿ.
  2. ಎಡಬದಿಯಲ್ಲಿ YouTube ಗಾಗಿ AdSense ಅನ್ನು ಆಯ್ಕೆ ಮಾಡಿ.
  3. ನಿಮ್ಮ YouTube ಗಳಿಕೆಗಳಿಗಾಗಿ ನಿಮ್ಮ ಪ್ರಸ್ತುತ ಬ್ಯಾಲೆನ್ಸ್ ಮತ್ತು ನಿಮ್ಮ ಕೊನೆಯ ಪಾವತಿ ಮೊತ್ತವನ್ನು ತೋರಿಸಲಾಗುತ್ತದೆ ನೀವು YouTube-ನಿರ್ದಿಷ್ಟ ಮಾಹಿತಿಯ ಮೂಲಗಳನ್ನು ಸಹ ಆ್ಯಕ್ಸೆಸ್ ಮಾಡಬಹುದು.

ತಿಳಿಯಬೇಕಾದ ಮೆಟ್ರಿಕ್‌ಗಳು

ವೀಕ್ಷಣಾ ಪುಟದ ಆ್ಯಡ್ ಆದಾಯ ಆಯ್ದ ದಿನಾಂಕ ವ್ಯಾಪ್ತಿ ಮತ್ತು ಪ್ರದೇಶಕ್ಕಾಗಿ YouTube ಗಾಗಿ AdSense, DoubleClick ಆ್ಯಡ್‌ಗಳು ಮತ್ತು YouTube Premium ನಿಂದ ಅಂದಾಜು ಆದಾಯ. ಪಾಲುದಾರರ ಮಾರಾಟ ಪ್ರೋಗ್ರಾಂ ಆ್ಯಡ್‌ಗಳಿಂದ ಯಾವುದೇ ಆದಾಯವು ಈ ಸಂಖ್ಯೆಯಲ್ಲಿ ಒಳಗೊಂಡಿರುವುದಿಲ್ಲ.
Shorts ಫೀಡ್ ಆ್ಯಡ್ ಆದಾಯ ಆಯ್ಕೆ ಮಾಡಿದ ದಿನಾಂಕ ವ್ಯಾಪ್ತಿಗಾಗಿ Shorts ಫೀಡ್ ಆ್ಯಡ್‌ಗಳು ಹಾಗೂ YouTube Premium ನಿಂದ ಅಂದಾಜು ಆದಾಯ.
ಸದಸ್ಯತ್ವಗಳಿಂದ ಗಳಿಸಿದ ಆದಾಯ ಆಯ್ಕೆ ಮಾಡಿದ ದಿನಾಂಕ ವ್ಯಾಪ್ತಿಗಾಗಿ ಸದಸ್ಯತ್ವಗಳು ಮತ್ತು ಉಡುಗೊರೆ ಸದಸ್ಯತ್ವಗಳಿಂದ ಅಂದಾಜು ಆದಾಯ.
Supers ಆದಾಯ ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್ಸ್ ಹಾಗೂ ಸೂಪರ್ ಥ್ಯಾಂಕ್ಸ್‌ನಂತಹ Supers ನಿಂದ ಅಂದಾಜು ಆದಾಯ.
ಶಾಪಿಂಗ್ ಅಫಿಲಿಯೇಟ್ ಆದಾಯ ನಿಮ್ಮ ಕಂಟೆಂಟ್‌ನಲ್ಲಿ ಪ್ರಸ್ತುತಪಡಿಸಲಾದ ಇತರ ಬ್ರ್ಯಾಂಡ್‌ಗಳ ಉತ್ಪನ್ನಗಳಿಂದ ಬಂದ ಅಂದಾಜು ಆದಾಯ.
ಒಟ್ಟು ಮಾರಾಟಗಳು ಅಫಿಲಿಯೇಟ್ ರಿಟೇಲರ್‌ಗಳಿಂದ ಗಳಿಸಿದ ಅಂದಾಜು ಮಾರಾಟಗಳು.
ಆರ್ಡರ್‌ಗಳು ಅಫಿಲಿಯೇಟ್ ರಿಟೇಲರ್‌ಗಳಿಂದ ಮಾಡಲಾದ ಆರ್ಡರ್‌ಗಳ ಅಂದಾಜು ಸಂಖ್ಯೆ.
ಉತ್ಪನ್ನದ ಕ್ಲಿಕ್‌ಗಳು ಟ್ಯಾಗ್ ಮಾಡಲಾದ ಉತ್ಪನ್ನಗಳಲ್ಲಿ ವೀಕ್ಷಕರು ಮಾಡಿದ ಉತ್ಪನ್ನ ಕ್ಲಿಕ್‌ಗಳ ಒಟ್ಟು ಸಂಖ್ಯೆ.
ಟಾಪ್ ಉತ್ಪನ್ನಗಳು ಉತ್ಪನ್ನ ಕ್ಲಿಕ್‌ಗಳ ಸಂಖ್ಯೆಯ ಪ್ರಕಾರ ನಿಮ್ಮ ಉತ್ಪನ್ನಗಳನ್ನು ಶ್ರೇಣೀಕರಿಸಲಾಗಿದೆ.
ಹೆಚ್ಚು ಗಳಿಸುವ ಕಂಟೆಂಟ್ ಗಳಿಸಿದ ಅಂದಾಜು ಆದಾಯದ ಪ್ರಕಾರ ನಿಮ್ಮ ಉತ್ಪನ್ನಗಳನ್ನು ಶ್ರೇಣೀಕರಿಸಲಾಗಿದೆ.
ಉತ್ಪನ್ನ ಟ್ಯಾಗಿಂಗ್ ಮೂಲಕ ಗಳಿಸಿದ ಆದಾಯ ಆಯ್ಕೆ ಮಾಡಿದ ದಿನಾಂಕ ವ್ಯಾಪ್ತಿಗಾಗಿ YouTube Shopping ಫಂಡ್‌ನಿಂದ ಅಂದಾಜು ಆದಾಯ.
YouTube Player for Education ನಿಮ್ಮ ಕಂಟೆಂಟ್ ಅನ್ನು ಶೈಕ್ಷಣಿಕ ತಂತ್ರಜ್ಞಾನ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸುವುದರಿಂದ ಬಂದ ಅಂದಾಜು ಆದಾಯ.
ಅಂದಾಜು ಆದಾಯ (ಗಳಿಕೆ) ಆಯ್ಕೆಮಾಡಿದ ದಿನಾಂಕ ವ್ಯಾಪ್ತಿ ಮತ್ತು ಪ್ರದೇಶಕ್ಕೆ ಸಂಬಂಧಿಸಿದಂತೆ YouTube ಆದಾಯ ಮೂಲಗಳಿಂದ ನಿಮ್ಮ ಒಟ್ಟು ಅಂದಾಜು ಆದಾಯ (ನಿವ್ವಳ ಆದಾಯ).
ಅಂದಾಜು ಆದಾಯ (ಅಫಿಲಿಯೇಟ್) ಹಿಂದಿನ ಮಾರಾಟಗಳಿಂದ ಗಳಿಸಿದ ಕಮಿಷನ್‌ಗಳನ್ನು ಇನ್ನೂ ಪಾವತಿಗಾಗಿ ಅನುಮೋದಿಸಲಾಗಿಲ್ಲ. ಬಾಕಿ ಇರುವ ಕಮಿಷನ್‌ಗಳ ರಿಟರ್ನ್ಸ್ ಅನ್ನು ಕಡಿತಗೊಳಿಸುವ ಮೂಲಕ ಈ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ರಿಟರ್ನ್ ವಿಂಡೋ ಸಾಮಾನ್ಯವಾಗಿ 30 ರಿಂದ 90 ದಿನಗಳವರೆಗೆ ಇರುತ್ತದೆ.
ಅನುಮೋದಿತ ಕಮಿಷನ್‌ಗಳು ಹಿಂದಿನ ಮಾರಾಟಗಳಿಂದ ಗಳಿಸಿದ ಮತ್ತು ಪಾವತಿಗೆ ಅನುಮೋದಿಸಲಾದ ಕಮಿಷನ್‌ಗಳು.

ವಹಿವಾಟುಗಳು

ಆಯ್ಕೆ ಮಾಡಿದ ದಿನಾಂಕ ವ್ಯಾಪ್ತಿ ಮತ್ತು ಪ್ರದೇಶಕ್ಕಾಗಿ Supers ನಿಂದ ವಹಿವಾಟುಗಳ ಸಂಖ್ಯೆ.

ಮಾನಿಟೈಸ್ ಮಾಡುವ ಅಂದಾಜು ಪ್ಲೇಬ್ಯಾಕ್‌ಗಳು

ಮಾನಿಟೈಸ್ ಮಾಡುವ ಪ್ಲೇಬ್ಯಾಕ್ ಎಂದರೆ ಒಬ್ಬ ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸುವುದು ಮತ್ತು ಅವರಿಗೆ ಕನಿಷ್ಠ ಒಂದು ಆ್ಯಡ್ ಇಂಪ್ರೆಶನ್ ಅನ್ನು ತೋರಿಸುವುದು. ವೀಕ್ಷಕರು ಪ್ರೀ-ರೋಲ್‌ ಆ್ಯಡ್‌ನ ಸಂದರ್ಭದಲ್ಲಿ ನಿಮ್ಮ ವೀಡಿಯೊವನ್ನು ವೀಕ್ಷಿಸದೆಯೇ ತೊರೆದದ್ದನ್ನು ಸಹ ಇದು ತೋರಿಸಬಹುದು.

ವೀಕ್ಷಣೆಗಳು

ನಿಮ್ಮ ಚಾನಲ್‌ಗಳು ಅಥವಾ ವೀಡಿಯೊಗಳಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತ ವೀಕ್ಷಣೆಗಳ ಸಂಖ್ಯೆ.

ಸರಾಸರಿ ವೀಕ್ಷಣೆಯ ಅವಧಿ

ಆಯ್ಕೆ ಮಾಡಿದ ವೀಡಿಯೊ ಮತ್ತು ದಿನಾಂಕದ ವ್ಯಾಪ್ತಿಯಲ್ಲಿ, ಪ್ರತಿ ವೀಕ್ಷಣೆಯ ಸಂದರ್ಭ ವೀಕ್ಷಿಸಲಾದ ಸರಾಸರಿ ಅಂದಾಜು ನಿಮಿಷಗಳನ್ನು ತೋರಿಸುತ್ತದೆ.

ವೀಕ್ಷಣೆ ಸಮಯ (ಗಂಟೆಗಳು)

ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಲು ವ್ಯಯಿಸಿದ ಸಮಯ.

ಜಾಹೀರಾತುದಾರರು ಎಷ್ಟು ಪಾವತಿಸುತ್ತಾರೆ ಒಂದು ಅಥವಾ ಹೆಚ್ಚು ಆ್ಯಡ್‌ಗಳನ್ನು ತೋರಿಸಿದ ಸಂದರ್ಭದಲ್ಲಿ, ಮಾನಿಟೈಸ್ ಮಾಡಿದ ಪ್ರತಿ 1,000 ಪ್ಲೇಬ್ಯಾಕ್‌ಗಳಿಗಾಗಿ ನಿಮ್ಮ ಆದಾಯ.
ಆ್ಯಡ್ ಪ್ರಕಾರದ ಮೂಲಕ ಮಾಡಿರುವ ಗಳಿಕೆಗಳು ಸ್ಕಿಪ್ ಮಾಡಬಹುದಾದ ವೀಡಿಯೊ ಆ್ಯಡ್‌ಗಳು, ಡಿಸ್‌ಪ್ಲೇ ಆ್ಯಡ್‍ಗಳು, ಬಂಪರ್ ಆ್ಯಡ್‌ಗಳು ಮತ್ತು ಸ್ಕಿಪ್ ಮಾಡಲಾಗದ ಆ್ಯಡ್‌ಗಳ ಹಾಗೆ ಆ್ಯಡ್‌ನ ಪ್ರಕಾರದ ಅನುಸಾರ ವಿಭಜಿಸಲಾದ ಆದಾಯ.
ಸದಸ್ಯತ್ವದ ಹಂತಗಳು ಲೈಟ್ನಿಂಗ್ ಟೈರ್, ಸೂಪರ್ ಫ್ಯಾನ್ ಮತ್ತು VIP ಎಂಬ ಹಾಗೆ ಸದಸ್ಯತ್ವದ ಹಂತದ ಪ್ರಕಾರ ವಿಭಜಿಸಲಾದ ಆದಾಯ.
ಒಟ್ಟು ಸದಸ್ಯರು ಒಟ್ಟು ಸದಸ್ಯರು ಮತ್ತು ಸಕ್ರಿಯ ಸದಸ್ಯರಿಗಾಗಿ ನಿಮ್ಮ ಆದಾಯ. ಒಟ್ಟು ಸದಸ್ಯರ ಸಂಖ್ಯೆಯಿಂದ ರದ್ದುಗೊಳಿಸಿದ ಸದಸ್ಯರ ಸಂಖ್ಯೆಯನ್ನು ಕಳೆಯುವ ಮೂಲಕ ಸಕ್ರಿಯ ಸದಸ್ಯರನ್ನು ಲೆಕ್ಕ ಹಾಕಲಾಗುತ್ತದೆ. ಕೆಳಗಿನವುಗಳು ಸೇರಿದಂತೆ ಒಟ್ಟು ಸದಸ್ಯರ ಬ್ರೇಕ್‌ಡೌನ್ ಅನ್ನು ಕಂಡುಕೊಳ್ಳಿ:
  • ಮರುಕಳಿಸುವ ಸದಸ್ಯತ್ವಗಳನ್ನು ಹೊಂದಿರುವ ಸದಸ್ಯರು
  • ಉಡುಗೊರೆ ಸದಸ್ಯತ್ವಗಳನ್ನು ಹೊಂದಿರುವ ಸದಸ್ಯರು (ಸಮಯ-ಸೀಮಿತ)
ಸದಸ್ಯರು ಎಲ್ಲಿಂದ ಸೇರುತ್ತಾರೆ ಯಾವ ಕಂಟೆಂಟ್ ಹೆಚ್ಚಿನ ಸಂಖ್ಯೆಯ ಸದಸ್ಯತ್ವಗಳನ್ನು ತರುತ್ತದೆ ಎಂಬುದನ್ನು ಪರಿಶೀಲಿಸಿ, ಜೊತೆಗೆ ಚಾನಲ್ ಸದಸ್ಯರಿಗೆ “ಸದಸ್ಯರಿಗೆ ಮಾತ್ರ” ಬ್ಯಾಡ್ಜ್‌ಗಳನ್ನು ನೀಡಿ.
ಸದಸ್ಯತ್ವ ರದ್ದತಿಗೆ ಕಾರಣ ಸಾಕಷ್ಟು ವೀಕ್ಷಕರು ತಮ್ಮ ಸದಸ್ಯತ್ವಗಳನ್ನು ರದ್ದುಗೊಳಿಸುತ್ತಿದ್ದರೆ, ಸಮೀಕ್ಷೆಯ ಮೂಲಕ ಅವರ ಪ್ರತಿಕ್ರಿಯೆಯನ್ನು ಪಡೆಯಿರಿ.
Supers ಹೇಗೆ ಹಣವನ್ನು ಗಳಿಸುತ್ತವೆ ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್ಸ್ ಹಾಗೂ ಸೂಪರ್ ಥ್ಯಾಂಕ್ಸ್ ಪ್ರಕಾರ ವಿಭಜಿಸಲಾದ ಆದಾಯ.
ಟಾಪ್ ಉತ್ಪನ್ನಗಳು ನೀವು ಪ್ರಚಾರ ಮಾಡಿದ ಯಾವ ಉತ್ಪನ್ನಗಳು ಅತಿ ಹೆಚ್ಚು ಕ್ಲಿಕ್‌ಗಳನ್ನು ಪಡೆದುಕೊಂಡಿವೆ.
ಕನೆಕ್ಟ್ ಮಾಡಿದ ಸ್ಟೋರ್ ಇಂಪ್ರೆಷನ್‌ಗಳು ಕನೆಕ್ಟ್ ಮಾಡಿದ ನಿಮ್ಮ ಸ್ಟೋರ್‌ನಲ್ಲಿ ಎಷ್ಟು ಇಂಪ್ರೆಷನ್‌ಗಳು ಉಂಟಾದವು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11926520137576592171
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false