ಕಾನೂನುಬಾಹಿರ ಅಥವಾ ನಿಯಂತ್ರಿತ ವಸ್ತುಗಳು ಅಥವಾ ಸೇವಾ ನೀತಿಗಳು


 
ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ನಿರ್ದಿಷ್ಟ ನಿಯಂತ್ರಿತ ವಸ್ತುಗಳು ಮತ್ತು ಸೇವೆಗಳನ್ನು ಮಾರುವ ಉದ್ದೇಶವನ್ನು ಹೊಂದಿರುವ ಕಂಟೆಂಟ್ ಅನ್ನು YouTube ನಲ್ಲಿ ಸೇರಿಸಲು ಅನುಮತಿಯಿಲ್ಲ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ನೀವು ಹೆಚ್ಚುವರಿ ಮಾಹಿತಿ ಮೂಲಗಳನ್ನು ಸಹ ಕಂಡುಕೊಳ್ಳಬಹುದು.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಒಂದು ವೇಳೆ ಕಂಟೆಂಟ್, ಈ ಕೆಳಗೆ ಪಟ್ಟಿ ಮಾಡಲಾದ ಯಾವುದೇ ನಿಯಂತ್ರಿತ ಸರಕುಗಳು ಮತ್ತು ಸೇವೆಗಳನ್ನು ನೇರವಾಗಿ ಮಾರಾಟ ಮಾಡುವ, ಲಿಂಕ್ ಮಾಡುವ ಅಥವಾ ಆ್ಯಕ್ಸೆಸ್ ಅನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದರೆ, ಆ ಕಂಟೆಂಟ್ ಅನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ. ಈ ಐಟಂಗಳನ್ನು ಮಾರಾಟ ಮಾಡುವುದು ಅಥವಾ ಮಾರಾಟಗಾರರನ್ನು ನೇರವಾಗಿ ಸಂಪರ್ಕಿಸಲು ಲಿಂಕ್‌ಗಳು, ಇಮೇಲ್, ಫೋನ್ ಸಂಖ್ಯೆ ಅಥವಾ ಇತರ ವಿಧಾನಗಳ ಕುರಿತು ಪೋಸ್ಟ್ ಮಾಡುವ ಮೂಲಕ ಈ ಸೇವೆಗಳ ಬಳಕೆಯನ್ನು ಸುಗಮಗೊಳಿಸುವುದಕ್ಕೆ ಅನುಮತಿಯಿಲ್ಲ.

  • ಆಲ್ಕೋಹಾಲ್
  • ಬ್ಯಾಂಕ್ ಖಾತೆಯ ಪಾಸ್‌ವರ್ಡ್‌ಗಳು, ಕಳವು ಮಾಡಲಾದ ಕ್ರೆಡಿಟ್ ಕಾರ್ಡ್‌ಗಳು ಅಥವಾ ಇತರ ಆರ್ಥಿಕ ಮಾಹಿತಿ
  • ನಕಲಿ ಡಾಕ್ಯುಮೆಂಟ್‌ಗಳು ಅಥವಾ ಕರೆನ್ಸಿ
  • ನಿಯಂತ್ರಿತ ನಾರ್ಕೋಟಿಕ್ಸ್ ಮತ್ತು ಇತರ ಮಾದಕ ದ್ರವ್ಯಗಳು
  • ಸ್ಫೋಟಕಗಳು
  • ದೇಹದ ಅವಯವಗಳು
  • ಅಳಿವಿನ ಅಂಚಿನಲ್ಲಿರುವ ಪ್ರಭೇದಗಳು ಅಥವಾ ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಅಂಗಾಂಗಗಳು
  • ಬಂದೂಕುಗಳು ಮತ್ತು ನಿರ್ದಿಷ್ಟ ಬಂದೂಕು ಆ್ಯಕ್ಸೆಸರಿಗಳು
  • ವೇಪಿಂಗ್ ಉತ್ಪನ್ನಗಳು ಸೇರಿದಂತೆ ನಿಕೋಟಿನ್
  • Google ಅಥವಾ YouTubeಇನ್ನೂ ಪರಿಶೀಲಿಸಿರದ ಆನ್‌ಲೈನ್ ಗ್ಯಾಂಬ್ಲಿಂಗ್ ಸೈಟ್‌ಗಳು
  • ಪ್ರಿಸ್ಕ್ರಿಪ್ಷನ್ ಇಲ್ಲದ ಔಷಧಿಗಳು
  • ಲೈಂಗಿಕ ಕ್ರಿಯೆ ಅಥವಾ ಎಸ್ಕಾರ್ಟ್ ಸೇವೆಗಳು
  • ಪರವಾನಗಿರಹಿತ ವೈದ್ಯಕೀಯ ಸೇವೆಗಳು
  • ಮಾನವ ಕಳ್ಳಸಾಗಾಣಿಕೆ

ಗಮನಿಸಿ: ಹಾರ್ಡ್ ಡ್ರಗ್‌ಗಳನ್ನು ಅಥವಾ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಗಳನ್ನು ಖರೀದಿಸಬಹುದಾದ, ಲಿಂಕ್‌ಗಳು ಅಥವಾ ಸಂಪರ್ಕ ಮಾಹಿತಿಯನ್ನು ಅಂದರೆ, ಫೋನ್ ಸಂಖ್ಯೆಗಳು, ಇಮೇಲ್‌ಗಳು ಅಥವಾ ಇತರ ಸಂಪರ್ಕ ವಿಧಾನಗಳಂತಹವನ್ನು ನೀವು ಒದಗಿಸಿದರೆ ನಿಮ್ಮ ಚಾನಲ್ ಅನ್ನು ಕೊನೆಗೊಳಿಸಬಹುದು. ಈ ಕೆಳಗಿನ ಉದಾಹರಣೆಗಳನ್ನು ನೋಡಿ.

ಹೆಚ್ಚುವರಿಯಾಗಿ, ಈ ಕೆಳಕಂಡ ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ:

  • ಹಾರ್ಡ್ ಡ್ರಗ್ ಬಳಕೆ ಅಥವಾ ತಯಾರಿಕೆ: ಹಾರ್ಡ್ ಡ್ರಗ್ ಬಳಕೆ ಅಥವಾ ತಯಾರಿಕೆ, ಹಾರ್ಡ್ ಅಥವಾ ಸಾಫ್ಟ್ ಡ್ರಗ್‌ಗಳ ಮಾರಾಟ ಅಥವಾ ಮಾರಾಟದ ಹಾದಿಯನ್ನು ಸುಗಮಗೊಳಿಸುವುದು, ಪ್ರಿಸ್ಕ್ರಿಪ್ಷನ್ ಇಲ್ಲದೆ ನಿಯಂತ್ರಿತ ಔಷಧಗಳ ಮಾರಾಟವನ್ನು ಸುಗಮಗೊಳಿಸುವುದು ಅಥವಾ ಶೈಕ್ಷಣಿಕ-ಅಲ್ಲದ ಕಂಟೆಂಟ್‌ನಲ್ಲಿ ಸ್ಟಿರಾಯ್ಡ್‌ಗಳನ್ನು ಹೇಗೆ ಬಳಸುವುದು ಎಂಬುದನ್ನು ತೋರಿಸುವುದು.
  • ಸೂಚನೆ-ಸಹಿತ ಮೋಸ: ಶೈಕ್ಷಣಿಕ ವಂಚನೆಗೆ ಸೂಚನೆಗಳನ್ನು ಒದಗಿಸುವ ಕಂಟೆಂಟ್.

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಇದು ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿರುವ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ಸ್ವರೂಪಗಳನ್ನು ಒಳಗೊಂಡಿರಬಹುದು. 

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ.

  • ಅನುಮೋದಿತವಲ್ಲದ ಆನ್‌ಲೈನ್ ಗ್ಯಾಂಬ್ಲಿಂಗ್ ಅಥವಾ ಕ್ರೀಡಾ ಬೆಟ್ಟಿಂಗ್ ಸೈಟ್‌ಗೆ ಲಿಂಕ್ ಮಾಡುವುದು.
  • ನಕಲಿ ಪಾಸ್‌ಪೋರ್ಟ್‌ಗಳನ್ನು ಮಾರಾಟ ಮಾಡುವುದು ಅಥವಾ ನಕಲಿ ಅಧಿಕೃತ ದಾಖಲೆಗಳನ್ನು ಒದಗಿಸುವುದಕ್ಕೆ ಸೂಚನೆಗಳು.
  • ಎಸ್ಕಾರ್ಟ್, ವೇಶ್ಯಾವಾಟಿಕೆ ಅಥವಾ ಪ್ರಚೋದನಕಾರಿ ಮಸಾಜ್ ಸೇವೆಗಳ ಕುರಿತು ಜಾಹೀರಾತು ನೀಡುವುದು.
  • ಡಾರ್ಕ್ ವೆಬ್‌ನಲ್ಲಿ ಮಾದಕ ದ್ರವ್ಯಗಳನ್ನು ಖರೀದಿಸುವುದು ಹೇಗೆ ಎಂಬುದರ ಸೂಚನೆ ನೀಡುವ ಕಂಟೆಂಟ್.
  • ನಕಲಿ ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಉತ್ಪಾದಿಸುವ ಸಾಫ್ಟ್‌ವೇರ್ ಅನ್ನು ಬಳಸಿ, ಬಳಕೆದಾರರೊಬ್ಬರು ಖರೀದಿ ಮಾಡುವುದರ ವೀಡಿಯೊ.
  • ಪ್ರಿಸ್ಕ್ರಿಪ್ಷನ್‌ಗಳ ಅಗತ್ಯವಿಲ್ಲದ ಆನ್‌ಲೈನ್ ಫಾರ್ಮಸಿಯ ಲಿಂಕ್ ಅನ್ನು ಸೇರಿಸುವುದು.
  • ಮಾದಕ ದ್ರವ್ಯಗಳು, ನಿಕೋಟಿನ್ ಅಥವಾ ನಿಷೇಧಿತ ಡ್ರಗ್ಸ್ ಅನ್ನು ಹೊಂದಿರುವ ಉತ್ಪನ್ನವನ್ನು ಪ್ರಚಾರ ಮಾಡುವ ಕಂಟೆಂಟ್.
  • ಹಾರ್ಡ್ ಡ್ರಗ್ ಬಳಕೆಯನ್ನು ತೋರಿಸುವುದು: ಹೆರಾಯಿನ್, ಹಫಿಂಗ್/ಸ್ನಿಫಿಂಗ್ ಗ್ಲೂ ಅಥವಾ ಆ್ಯಸಿಡ್ ಟ್ಯಾಬ್‌ಗಳಂತಹ ಇಂಟ್ರಾವೆನಸ್ ಡ್ರಗ್‌ಗಳ ಇಂಜೆಕ್ಷನ್ ಅನ್ನು ತೋರಿಸುವ ಶೈಕ್ಷಣಿಕವಲ್ಲದ ಕಂಟೆಂಟ್.
  • ಪ್ರಬಲ ಮಾದಕ ದ್ರವ್ಯಗಳನ್ನು ತಯಾರಿಸುವುದು: ಮಾದಕ ದ್ರವ್ಯಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ವಿವರಿಸುವ ಶೈಕ್ಷಣಿಕವಲ್ಲದ ಕಂಟೆಂಟ್.
  • ಅಪ್ರಾಪ್ತರು ಮದ್ಯ ಅಥವಾ ಮಾದಕ ದ್ರವ್ಯಗಳನ್ನು ಬಳಸುವುದು: ಅಪ್ರಾಪ್ತರು ಮದ್ಯಪಾನ ಮಾಡುವುದು, ವೇಪರೈಝರ್‌ಗಳು, ಇ-ಸಿಗರೇಟ್‌ಗಳು, ತಂಬಾಕು ಅಥವಾ ಗಾಂಜಾವನ್ನು ಬಳಸುವುದು ಅಥವಾ ಬಂಧೂಕುಗಳ ದುರುಪಯೋಗ ಮಾಡುವುದನ್ನು ತೋರಿಸುವುದು.
  • ಸ್ಟಿರಾಯ್ಡ್ ಬಳಕೆ: ಮನರಂಜನೆಯ ಉದ್ದೇಶಕ್ಕಾಗಿ, ಅಂದರೆ ಬಾಡಿ ಬಿಲ್ಡಿಂಗ್‌ಗಾಗಿ ಸ್ಟಿರಾಯ್ಡ್‌ಗಳನ್ನು ಬಳಸುವುದು ಹೇಗೆ ಎಂಬುದನ್ನು ತೋರಿಸುವ ಶೈಕ್ಷಣಿಕವಲ್ಲದ ಕಂಟೆಂಟ್.
  • ಸಾಫ್ಟ್ ಡ್ರಗ್‌ಗಳನ್ನು ಮಾರಾಟ ಮಾಡುವುದು: ಗಾಂಜಾ ಅಥವಾ ಸಾಲ್ವಿಯಾ ಮಾರಾಟವನ್ನು ಸುಗಮಗೊಳಿಸುವ ಸೈಟ್‌ಗಳಿಗೆ ಲಿಂಕ್‌ಗಳನ್ನು ಒದಗಿಸುವುದು.
  • ಹಾರ್ಡ್ ಡ್ರಗ್‌ಗಳ ಮಾರಾಟ: ಮಾರಾಟ ಮಾಡುವ ಉದ್ದೇಶದೊಂದಿಗೆ ಹಾರ್ಡ್ ಡ್ರಗ್‌ಗಳನ್ನು ತೋರಿಸುವುದು. ಕೆಲವು ವಿಧದ ಹಾರ್ಡ್ ಡ್ರಗ್‌ಗಳಲ್ಲಿ ಇವು ಸಹ ಸೇರಿವೆ (ಇದು ಸಂಪೂರ್ಣ ಪಟ್ಟಿ ಅಲ್ಲ, ಮತ್ತು ಈ ಪದಾರ್ಥಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಸಹ ಕರೆಯಲಾಗುತ್ತದೆ):
    • ಆಂಫೆಟಮೈನ್
    • ಕೊಕೇನ್
    • ಡೆಕ್ಸ್‌ಟ್ರೊಮೆಥಾರ್ಫನ್ (DXM)
    • ಫ್ಲುನಿಟ್ರಾಝೆಪಮ್
    • ಫೆಂಟಾನಿಲ್
    • GHB
    • ಹೆರಾಯಿನ್
    • ಕೆಟಾಮಿನ್
    • K2
    • LSD
    • MDMA/ಎಕ್ಸ್‌ಟಸಿ
    • ಮೆಸ್ಕಾಲೈನ್
    • ಮೆಥಾಂಫೆಟಾಮೈನ್
    • ಐಸೊಟೊನೈಟಾಝೀನ್ (ISO)
    • ಓಪಿಯಂ
    • PCP
    • ಸಿಲೊಸಿಬಿನ್ ಮತ್ತು ಸಿಲೊಸೈಬ್ (ಮ್ಯಾಜಿಕ್ ಮಶ್ರೂಮ್‌ಗಳು)

ಗಮನಿಸಿ: ಹಾರ್ಡ್ ಡ್ರಗ್‌ಗಳನ್ನು ಅಥವಾ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಗಳನ್ನು ಖರೀದಿಸಬಹುದಾದ, ಲಿಂಕ್‌ಗಳು ಅಥವಾ ಸಂಪರ್ಕ ಮಾಹಿತಿಯನ್ನು ಅಂದರೆ, ಫೋನ್ ಸಂಖ್ಯೆಗಳು, ಇಮೇಲ್‌ಗಳು ಅಥವಾ ಇತರ ಸಂಪರ್ಕ ವಿಧಾನಗಳಂತಹವನ್ನು ನೀವು ಒದಗಿಸಿದರೆ ನಿಮ್ಮ ಚಾನಲ್ ಅನ್ನು ಕೊನೆಗೊಳಿಸಬಹುದು.

ನೆನಪಿಡಿ, ಇವು ಕೇವಲ ಉದಾಹರಣೆಗಳು ಮಾತ್ರ. ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ವಯೋಮಾನ ನಿರ್ಬಂಧಿತ ಕಂಟೆಂಟ್

ಕೆಲವೊಮ್ಮೆ, ಕಂಟೆಂಟ್ ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ, ಆದರೆ ಅದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವೆನಿಸದಿರಬಹುದು. 

ವಯಸ್ಸಿನ ನಿರ್ಬಂಧವಿರುವ ಕಂಟೆಂಟ್‌ನ ಉದಾಹರಣೆಗಳು

  • ಕ್ಯಾನಬಿಸ್ ಡಿಸ್ಪೆನ್ಸರಿಯ ಕುರಿತು ಪ್ರಚಾರ ಮಾಡುವ ಕಂಟೆಂಟ್.
  • ನಿಕೋಟಿನ್ ಇ-ಲಿಕ್ವಿಡ್ ಬ್ರ್ಯಾಂಡ್‌ಗಳನ್ನು ವಿಮರ್ಶೆ ಮಾಡುವ ಕಂಟೆಂಟ್.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7087122246916556234
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false