ಹಿಂಸಾತ್ಮಕ ತೀವ್ರಗಾಮಿಗಳು ಅಥವಾ ಕ್ರಿಮಿನಲ್ ಸಂಸ್ಥೆಗಳ ಕುರಿತಾದ ನೀತಿ


ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ತೀವ್ರಗಾಮಿ ಅಥವಾ ಕ್ರಿಮಿನಲ್ ಸಂಸ್ಥೆಗಳನ್ನು ಹೊಗಳುವ, ಪ್ರಚಾರ ಮಾಡುವ ಅಥವಾ ನೆರವು ನೀಡುವ ಹಿಂಸಾತ್ಮಕ ತೀವ್ರಗಾಮಿ ಅಥವಾ ಕ್ರಿಮಿನಲ್ ಸಂಸ್ಥೆಗಳಿಗೆ YouTube ನಲ್ಲಿ ಅನುಮತಿಯಿಲ್ಲ. ನೇಮಕಾತಿ ಸೇರಿದಂತೆ, ಯಾವುದೇ ಉದ್ದೇಶಕ್ಕಾಗಿ YouTube ಅನ್ನು ಬಳಸಲು ಈ ಸಂಘಟನೆಗಳಿಗೆ ಅನುಮತಿಯಿಲ್ಲ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಯಾರಾದರೂ ತಕ್ಷಣ ಅಪಾಯಕ್ಕೆ ಈಡಾಗುವ ಸಾಧ್ಯತೆ ಉದೆ ಎಂದು ನೀವು ಭಾವಿಸಿದರೆ, ಸನ್ನಿವೇಶದ ಕುರಿತು ವರದಿ ಮಾಡಲು ನಿಮ್ಮ ಸ್ಥಳೀಯ ಕಾನೂನು ಜಾರಿ ಏಜೆನ್ಸಿಯನ್ನು ಸಂಪರ್ಕಿಸಿ.

ಇದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ಹಿಂಸಾತ್ಮಕ ತೀವ್ರಗಾಮಿ, ಕ್ರಿಮಿನಲ್ ಅಥವಾ ಭಯೋತ್ಪಾದಕ ಸಂಸ್ಥೆಗಳು ನಿರ್ಮಿಸಿದ ಕಂಟೆಂಟ್
  • ಇತರರು ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಪ್ರೋತ್ಸಾಹ ನೀಡುವುದಕ್ಕಾಗಿ ಪ್ರಮುಖ ಭಯೋತ್ಪಾದಕ, ತೀವ್ರಗಾಮಿ ಅಥವಾ ಕ್ರಿಮಿನಲ್ ವ್ಯಕ್ತಿಗಳನ್ನು ಹೊಗಳುವ ಅಥವಾ ಅವರ ಸ್ಮರಣಾರ್ಥವಾದ ಕಂಟೆಂಟ್
  • ಹಿಂಸಾತ್ಮಕ ತೀವ್ರಗಾಮಿ, ಕ್ರಿಮಿನಲ್ ಅಥವಾ ಭಯೋತ್ಪಾದಕ ಸಂಸ್ಥೆಗಳು ನಡೆಸುವ ಹಿಂಸಾತ್ಮಕ ಕೃತ್ಯಗಳನ್ನು ಹೊಗಳುವ ಅಥವಾ ಸಮರ್ಥಿಸುವ ಕಂಟೆಂಟ್
  • ಹಿಂಸಾತ್ಮಕ ತೀವ್ರಗಾಮಿ, ಕ್ರಿಮಿನಲ್ ಅಥವಾ ಭಯೋತ್ಪಾದಕ ಸಂಸ್ಥೆಗಳಿಗೆ ಹೊಸ ಸದಸ್ಯರನ್ನು ನೇಮಿಸುವ ಗುರಿಯನ್ನು ಹೊಂದಿರುವ ಕಂಟೆಂಟ್
  • ಒತ್ತೆಯಾಳುಗಳನ್ನು ತೋರಿಸುವ ಕಂಟೆಂಟ್ ಅಥವಾ ಒಂದು ಕ್ರಿಮಿನಲ್, ತೀವ್ರಗಾಮಿ ಅಥವಾ ಭಯೋತ್ಪಾದಕ ಸಂಸ್ಥೆಯ ಪರವಾಗಿ ಬೆದರಿಸುವ ಅಥವಾ ಭಯಹುಟ್ಟಿಸುವ ಕಂಟೆಂಟ್.
  • ಹಿಂಸಾತ್ಮಕ ತೀವ್ರಗಾಮಿ, ಕ್ರಿಮಿನಲ್ ಅಥವಾ ಭಯೋತ್ಪಾದಕ ಸಂಸ್ಥೆಗಳನ್ನು ಹೊಗಳುವ ಅಥವಾ ಅವುಗಳ ಕುರಿತು ಪ್ರಚಾರ ಮಾಡುವ ಉದ್ದೇಶದೊಂದಿಗೆ ಅವುಗಳ ಚಿಹ್ನೆಗಳು, ಲೋಗೋಗಳು ಅಥವಾ ಸಂಕೇತಗಳನ್ನು ಪ್ರದರ್ಶಿಸುವ ಕಂಟೆಂಟ್
  • ಶಾಲೆಯಲ್ಲಿ ಶೂಟಿಂಗ್‌ಗಳಂತಹ ಹಿಂಸಾತ್ಮಕ ದುರಂತಗಳನ್ನು ವೈಭವೀಕರಿಸುವ ಅಥವಾ ಪ್ರಚಾರ ಮಾಡುವ ಕಂಟೆಂಟ್

ಕ್ರಿಮಿನಲ್ ಅಥವಾ ಭಯೋತ್ಪಾದಕ ಸಂಘಟನೆಗಳು ಏನೆಂದು ನಿರ್ಧರಿಸಲು ಸರ್ಕಾರ ಮತ್ತು ಅಂತರಾಷ್ಟ್ರೀಯ ಸಂಸ್ಥೆಯ ಪದನಾಮಗಳು ಸೇರಿದಂತೆ ಹಲವಾರು ಅಂಶಗಳನ್ನು YouTube ಅವಲಂಬಿಸಿದೆ. ಉದಾಹರಣೆಗೆ, ಖಾತೆದಾರರು ವಿದೇಶಿ ಭಯೋತ್ಪಾದಕ ಸಂಘಟನೆ (ಯು.ಎಸ್.) ಅಥವಾ ವಿಶ್ವಸಂಸ್ಥೆಯಿಂದ ಗುರುತಿಸಲಾದ ಸಂಘಟನೆಯಂತಹ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂಬುದಾಗಿ ನಾವು ಸಮಂಜಸವಾದ ನಂಬಿಕೆ ಹೊಂದಿರುವ ಯಾವುದೇ ಚಾನಲ್ ಅನ್ನು ನಾವು ಕೊನೆಗೊಳಿಸುತ್ತೇವೆ.

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಉದ್ದೇಶಕ್ಕಾಗಿ ಭಯೋತ್ಪಾದನೆ ಅಥವಾ ಅಪರಾಧಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದಿದ್ದರೆ, ವೀಕ್ಷಕರು ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಹಾಗೆ ವೀಡಿಯೊದಲ್ಲಿ ಅಥವಾ ಆಡಿಯೋದಲ್ಲೇ ಸಾಕಷ್ಟು ಮಾಹಿತಿಯನ್ನು ಒದಗಿಸಲು ಮರೆಯದಿರಿ. ಸಾಕಷ್ಟು ಸಾಂದರ್ಭಿಕ ಮಾಹಿತಿ ಇರುವ ಗ್ರಾಫಿಕ್ ಅಥವಾ ವಿವಾದಾತ್ಮಕ ದೃಶ್ಯಾವಳಿಯ ಮೇಲೆ ವಯಸ್ಸಿನ ನಿರ್ಬಂಧ ಅಥವಾ ಎಚ್ಚರಿಕೆ ಸ್ಕ್ರೀನ್ ಅನ್ನು ಒಳಪಡಿಸಬಹುದು.

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿನ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಭಯೋತ್ಪಾದಕ, ಕ್ರಿಮಿನಲ್ ಅಥವಾ ತೀವ್ರಗಾಮಿ ಸಂಸ್ಥೆಗಳಿಂದ ರಚಿಸಲಾದ ಕಂಟೆಂಟ್ ಅನ್ನು ಕಚ್ಚಾ ಮತ್ತು ಮಾರ್ಪಡಿಸಿರದ ರೂಪದಲ್ಲಿ ಮರು-ಅಪ್‌ಲೋಡ್ ಮಾಡುವುದು
  • ಭಯೋತ್ಪಾದಕ ನಾಯಕರು ಅಥವಾ ಅವರ ಅಪರಾಧಗಳನ್ನು ಹಾಡುಗಳು ಅಥವಾ ಕಾರ್ಯಕ್ರಮದಲ್ಲಿ ಸಂಭ್ರಮಾಚರಿಸುವುದು
  • ಹಾಡುಗಳು ಅಥವಾ ಸ್ಮಾರಕಗಳಲ್ಲಿ ಭಯೋತ್ಪಾದಕ ಅಥವಾ ಕ್ರಿಮಿನಲ್ ಸಂಸ್ಥೆಗಳ ಕುರಿತು ಸಂಭ್ರಮಾಚರಿಸುವುದು
  • ಭಯೋತ್ಪಾದಕರ ಸಿದ್ಧಾಂತವನ್ನು ಪ್ರತಿಪಾದಿಸುವ ಸೈಟ್‌ಗಳಿಗೆ ಬಳಕೆದಾರರನ್ನು ನಿರ್ದೇಶಿಸುವ, ನಿಷೇಧಿತ ಕಂಟೆಂಟ್ ಅನ್ನು ಪ್ರಸರಣ ಬಳಸುವ ಅಥವಾ ನೇಮಕಾತಿಗಾಗಿ ಬಳಸಲಾಗುವ ಕಂಟೆಂಟ್
  • ಘೋರವಾದ ಅಥವಾ ಅತ್ಯಂತ ಹಿಂಸಾತ್ಮಕ ಘಟನೆಯ ಸಂದರ್ಭದಲ್ಲಿ ಆರೋಪಿಯು ಚಿತ್ರೀಕರಿಸಿದಂತಹ, ಶಸ್ತ್ರಾಸ್ತ್ರಗಳು, ಹಿಂಸೆ ಅಥವಾ ಗಾಯಾಳುಗಳು ಗೋಚರಿಸುವ ಅಥವಾ ಕೇಳಿಸುವ ದೃಶ್ಯಾವಳಿ
  • ಹಿಂಸಾತ್ಮಕ ದಾಳಿಕೋರರ ಪ್ರಣಾಳಿಕೆಗಳನ್ನು ಒಳಗೊಂಡಿರುವ ಬಾಹ್ಯ ಸೈಟ್‌ಗಳಿಗೆ ನಿರ್ದೇಶಿಸುವ ಲಿಂಕ್‌ಗಳು
  • ಒಂದು ಹಿಂಸಾತ್ಮಕ ಘಟನೆ, ಅದರ ಕಾರಣಕರ್ತರನ್ನು ವೈಭವೀಕರಿಸುವುದಕ್ಕಾಗಿ ಅಥ್ವಾ ಹಿಂಸಾತ್ಮಕ ತೀವ್ರಗಾಮಿ, ಕ್ರಿಮಿನಲ್ ಅಥವಾ ಭಯೋತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವುದಕ್ಕಾಗಿ ಅಭಿವೃದ್ಧಿಪಡಿಸಲಾದ ಅಥವಾ ಮಾರ್ಪಡಿಸಲಾದ (“ಮಾರ್ಪಾಟು ಮಾಡಲಾದ”) ವೀಡಿಯೊ ಗೇಮ್ ಕಂಟೆಂಟ್
  • ಪ್ರಜೆಗಳ ವಿರುದ್ಧ ಹಿಂಸೆಯನ್ನು ವೈಭವೀಕರಿಸುವುದು
  • ಹಿಂಸಾತ್ಮಕ ಕ್ರಿಮಿನಲ್, ತೀವ್ರಗಾಮಿ ಅಥವಾ ಭಯೋತ್ಪಾದಕ ಸಂಸ್ಥೆಗಳಿಗಾಗಿ ನಿಧಿ ಸಂಗ್ರಹಿಸುವುದು

ನೆನಪಿಡಿ, ಇವು ಕೇವಲ ಉದಾಹರಣೆಗಳು ಮಾತ್ರ. ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ.

ನೀವು ಇದೇ ಮೊದಲ ಬಾರಿಗೆ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡವಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯೊಂದನ್ನು ಸ್ವೀಕರಿಸುವಿರಿ. ಇದು ಮೊದಲ ಬಾರಿ ಅಲ್ಲದಿದ್ದರೆ, ನಿಮ್ಮ ಚಾನಲ್‌ನ ವಿರುದ್ಧ ಸ್ಟ್ರೈಕ್ ಅನ್ನು ಜಾರಿಗೊಳಿಸಬಹುದು. 90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ಸಿಸ್ಟಂ ಕುರಿತು ಇಲ್ಲಿ ನೀವು ಇನ್ನಷ್ಟು ತಿಳಿಯಬಹುದು.

ಉಲ್ಲಂಘನೆಗಳು ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳಿಗೆ ಅನುಗುಣವಾಗಿ ನಿಮ್ಮ ಯಾವುದೇ ಖಾತೆಗಳಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ನಿಷ್ಕ್ರಿಯಗೊಳಿಸಬಹುದು. ಇದು ಎಚ್ಚರಿಕೆಗಳನ್ನು ಸಹ ಒಳಗೊಂಡಿದೆ. ನೀವು ತಪ್ಪು ಎಂಬುದಾಗಿ ನೀವು ಭಾವಿಸಿದರೆ, ನೀವು ಮೇಲ್ಮನವಿಯನ್ನು ಸಲ್ಲಿಸಬಹುದು. ಉಲ್ಲಂಘನೆಯನ್ನು ರದ್ದುಗೊಳಿಸಿದರೆ, ನೀವು YouTube Studio ದಲ್ಲಿ ಅರ್ಹತೆ ಪಡೆದ ನಂತರ ಮಾನಿಟೈಸೇಶನ್‌ಗಾಗಿ ಅರ್ಜಿ ಸಲ್ಲಿಸಬಹುದು.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13868181938616108149
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false