YouTube ಹಾಗೂ YouTube TV ಯಲ್ಲಿ NBA ಲೀಗ್ ಪಾಸ್ ಅನ್ನು ವೀಕ್ಷಿಸಿ

ನೀವು NBA ಅಭಿಮಾನಿಯಾಗಿದ್ದರೆ, ನಿಮ್ಮ ಮೆಚ್ಚಿನ ಎಲ್ಲಾ ಗೇಮ್‌ಗಳನ್ನು ವೀಕ್ಷಿಸಲು ನೀವು NBA ಲೀಗ್ ಪಾಸ್ ಅನ್ನು ಖರೀದಿಸಬಹುದು. NBA ಲೀಗ್ ಪಾಸ್ ಬಳಸಿಕೊಂಡು, ನೀವು:

  • ಎಲ್ಲಾ ಔಟ್ ಆಫ್ ಮಾರ್ಕೆಟ್ (ನಿಮ್ಮ ಸ್ಥಳೀಯ ಪ್ರದೇಶದ ಹೊರಗೆ) ನಿಯಮಿತ ಸೀಸನ್ NBA ಗೇಮ್‌ಗಳನ್ನು ವೀಕ್ಷಿಸಬಹುದು. 
  • ಮನೆಯಂಗಳದ ಮತ್ತು ಹೊರಗಿನ ಗೇಮ್ ಕಾಮೆಂಟರಿಗಾಗಿ, ನಿಮ್ಮ ಮೆಚ್ಚಿನ ಅನೌನ್ಸರ್‌ಗಳನ್ನು ಆಲಿಸಬಹುದು.
  • YouTube TV ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ರೆಕಾರ್ಡ್ ಮಾಡಲು ನಿಮ್ಮ ಎಲ್ಲಾ ಮೆಚ್ಚಿನ ತಂಡಗಳನ್ನು ಸೆಟ್-ಅಪ್ ಮಾಡಿ.
  • NBA ಲೀಗ್ ಪಾಸ್ ಪುಟದಲ್ಲಿ ವೇಳಾಪಟ್ಟಿಯನ್ನು ನೋಡಿ ಅಥವಾ ತಪ್ಪಿಹೋದ ಗೇಮ್‌ಗಳನ್ನು ವೀಕ್ಷಿಸಿ.
  • ಮಲ್ಟಿವ್ಯೂ, ಮಲ್ಟಿಫೀಡ್ ಸೆಲೆಕ್ಟರ್ ಅನ್ನು ಬಳಸಿ ಮತ್ತು YouTube TV ಅಥವಾ YouTube ನಲ್ಲಿ ಕೀ ಪ್ಲೇಗಳನ್ನು ನೋಡಿ.
  • YouTube TV ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ರೆಕಾರ್ಡ್ ಮಾಡಲು ನಿಮ್ಮ ಎಲ್ಲಾ ಮೆಚ್ಚಿನ ತಂಡಗಳನ್ನು ಸೆಟ್-ಅಪ್ ಮಾಡಿ.

YouTube TV ಯಲ್ಲಿ ಕ್ರೀಡೆಗಳನ್ನು ವೀಕ್ಷಿಸುವುದು ಹೇಗೆ

ಗಮನಿಸಿ: NBA ಲೀಗ್ ಪಾಸ್ ರಾಷ್ಟ್ರೀಯ ಪ್ರಸಾರಗಳನ್ನು ತೋರಿಸುವುದಿಲ್ಲ. ರಾಷ್ಟ್ರೀಯವಾಗಿ ಪ್ರಸಾರವಾಗುವ ಗೇಮ್‌ಗಳನ್ನು, ನಿಮ್ಮ YouTube TV ಬೇಸ್ ಸದಸ್ಯತ್ವದಲ್ಲಿ ಒಳಗೊಂಡಿರುವ ರಾಷ್ಟ್ರೀಯ ನೆಟ್‌ವರ್ಕ್‌ಗಳಲ್ಲಿ ನೀವು ವೀಕ್ಷಿಸಬಹುದು.

NBA ಲೀಗ್ ಪಾಸ್ ಪಡೆಯಿರಿ

NBA ಲೀಗ್ ಪಾಸ್ ಅನ್ನು ಖರೀದಿಸಲು ಎರಡು ಮಾರ್ಗಗಳಿವೆ: ಮಾಸಿಕ ಪಾಸ್ ಅಥವಾ ಸಂಪೂರ್ಣ ಸೀಸನ್ ಪಾಸ್ ಅನ್ನು ಖರೀದಿಸಿ.

YouTube ನಲ್ಲಿ ಸೈನ್ ಅಪ್ ಮಾಡಲು:

  1. ನಿಮ್ಮ ಕಂಪ್ಯೂಟರ್‌ನಿಂದ, youtube.com ಗೆ ಹೋಗಿ.
  2. ನಿಮ್ಮ Google ಖಾತೆಯೊಂದಿಗೆ ಸೈನ್ ಇನ್ ಮಾಡಿ.
  3. NBA ಚಾನಲ್ ಪುಟಕ್ಕೆ ಹೋಗಿ ಮತ್ತು ನಂತರ, ಸೈನ್ ಅಪ್ ಮಾಡಿ (ಅಥವಾ ಇದನ್ನು ಉಚಿತವಾಗಿ ಬಳಸಿ ನೋಡಿ) ಎಂಬುದನ್ನು ಕ್ಲಿಕ್ ಮಾಡಿ.

YouTube TV ಯಲ್ಲಿ ಸೈನ್ ಅಪ್ ಮಾಡಲು:

  1. YouTube TV ಗೆ ಸೈನ್ ಇನ್ ಮಾಡಿ. 
  2. ನಿಮ್ಮ ಪ್ರೊಫೈಲ್ ಚಿತ್ರ ನಂತರ ಸೆಟ್ಟಿಂಗ್‌ಗಳು  ನಂತರ ಸದಸ್ಯತ್ವ ಎಂಬಲ್ಲಿಗೆ ಹೋಗಿ. 

ಗಮನಿಸಿ:

  • ಮಾಸಿಕ ಪಾಸ್ ಅನ್ನು ನೀವು ರದ್ದುಗೊಳಿಸುವವರೆಗೆ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ, ಮತ್ತು ಅದನ್ನು ನಿಮ್ಮ ಮಾಸಿಕ YouTube ಬಿಲ್‌ನಲ್ಲಿ ಸೇರಿಸಲಾಗುತ್ತದೆ.
  • ಸೀಸನ್ ಪಾಸ್ ಸ್ವಯಂಚಾಲಿತವಾಗಿ ನವೀಕರಣಗೊಳ್ಳುವುದಿಲ್ಲ. ನೀವು ಸೀಸನ್ ಪಾಸ್ ಖರೀದಿಸಿದಾಗ, ಪ್ರಸ್ತುತ ಸೀಸನ್‌ಗೆ ಆ್ಯಕ್ಸೆಸ್ ಹೊಂದಿರುತ್ತೀರಿ. ಮುಂಬರುವ ಸೀಸನ್‌ಗಳಿಗಾಗಿ ನೀವು ಬೇರೊಂದು ಸೀಸನ್ ಪಾಸ್ ಅನ್ನು ಖರೀದಿಸಬೇಕಾಗುತ್ತದೆ. 
  • ಮಾಸಿಕ ಪಾಸ್‌ನಿಂದ ಸೀಸನ್ ಪಾಸ್‌ಗೆ ಬದಲಾಯಿಸಲು, ಮೊದಲು ನಿಮ್ಮ ಮಾಸಿಕ ಪಾಸ್ ಅನ್ನು ರದ್ದುಗೊಳಿಸಿ, ತದನಂತರ ಸೀಸನ್ ಪಾಸ್‌ಗೆ ಪುನಃ ಸಬ್‌ಸ್ಕ್ರೈಬ್ ಮಾಡಿ.
  • ನೀವು NBA ಲೀಗ್ ಪಾಸ್ ಸೀಸನ್ ಪ್ರಕಾರವನ್ನು ಖರೀದಿಸಿ YouTube TV ಯನ್ನು ರದ್ದುಮಾಡಿದರೆ, ನೀವು ಆ್ಯಕ್ಸೆಸ್ ಕಳೆದುಕೊಳ್ಳುತ್ತೀರಿ. ಆದರೂ, ನೀವು ಸಬ್‌ಸ್ಕ್ರೈಬ್ ಮಾಡಿದ ಅದೇ ಸೀಸನ್‌ನಲ್ಲಿ YouTube TV ಗೆ ಪುನಃ ಸಬ್‌ಸ್ಕ್ರೈಬ್ ಮಾಡಿದರೆ, ನೀವು ಮತ್ತೊಮ್ಮೆ ಆ್ಯಕ್ಸೆಸ್ ಪಡೆದುಕೊಳ್ಳುತ್ತೀರಿ.

 

ಮಲ್ಟಿವ್ಯೂ ಮೂಲಕ ಏಕಕಾಲದಲ್ಲಿ ಅನೇಕ ಸ್ಟ್ರೀಮ್‌ಗಳನ್ನು ವೀಕ್ಷಿಸಿ

YouTube ನ ಮಲ್ಟಿವ್ಯೂ ಫೀಚರ್‌ನ ಮೂಲಕ ನೀವು ಸ್ಮಾರ್ಟ್ ಟಿವಿಯಲ್ಲಿ ಅಥವಾ Chromecast ಅಥವಾ Fire TV Stick ನಂತಹ ಸ್ಟ್ರೀಮಿಂಗ್ ಸಾಧನದಲ್ಲಿ, ಪ್ರೀ-ಸೆಲೆಕ್ಟ್ ಮಾಡಿದ ಅನೇಕ ಲೈವ್ ಗೇಮ್‌ಗಳನ್ನು ಏಕಕಾಲದಲ್ಲಿ ವೀಕ್ಷಿಸಬಹುದು. ಗೇಮ್‌ಗಳ ಆಯ್ದ ಸಂಯೋಜನೆಗಾಗಿ ಮಲ್ಟಿವ್ಯೂ ಅನ್ನು ಹುಡುಕಲು ಅತ್ಯಂತ ವೇಗದ ವಿಧಾನವೆಂದರೆ:

  1. ಒಂದು ಗೇಮ್ ಅನ್ನು ವೀಕ್ಷಿಸಲು ಆರಂಭಿಸಿ.
  2. ಮಲ್ಟಿವ್ಯೂ ಸಂಯೋಜನೆಗಳನ್ನು ನೋಡಲು ಡೌನ್ ಆ್ಯರೋ ಒತ್ತಿರಿ.
  3. ನಿಮ್ಮ ಆಯ್ಕೆಯ ಗೇಮ್ ಸಂಯೋಜನೆಯನ್ನು ಆಯ್ಕೆ ಮಾಡಿ.

ಮನೆಯಂಗಳದ ಮತ್ತು ಹೊರಗಿನ ವೀಡಿಯೊ ಫೀಡ್‌ಗಳ ನಡುವೆ ಬದಲಾಯಿಸಿ

ವೆಬ್ ಬ್ರೌಸರ್‌ನಲ್ಲಿ ಅಥವಾ ಮೊಬೈಲ್ ಸಾಧನದಲ್ಲಿ YouTube TV ಯಲ್ಲಿ, NBA ಲೀಗ್ ಪಾಸ್ ಪುಟಕ್ಕೆ ಹೋಗಿ ಮತ್ತು ಗೇಮ್‌ನ ಪಕ್ಕದಲ್ಲಿರುವ ಡೌನ್ ಆ್ಯರೋವನ್ನು ಆಯ್ಕೆ ಮಾಡಿ. ನಿಮ್ಮ ಟಿವಿಯಲ್ಲಿ, ಮನೆಯಂಗಳದ ಅಥವಾ ಹೊರಗಿನ ಗೇಮ್ ಕಾಮೆಂಟರಿ ಆಯ್ಕೆಗಳನ್ನು ಆರಿಸಲು, ಇನ್ನಷ್ಟು ಎಂಬುದನ್ನು ಆಯ್ಕೆ ಮಾಡಿ.

YouTube Primetime ಚಾನಲ್‌ನಲ್ಲಿ, ಸ್ಮಾರ್ಟ್ ಟಿವಿಯಲ್ಲಿ ಅಥವಾ Chromecast ಅಥವಾ Fire TV Stick ನಂತಹ ಸ್ಟ್ರೀಮಿಂಗ್ ಸಾಧನದಲ್ಲಿ ವೀಕ್ಷಣಾ ಪುಟದಲ್ಲಿ ನೇರವಾಗಿ ಪ್ರಸಾರಗಳ ಐಕಾನ್ (“ಪ್ಲೇಪಟ್ಟಿ” ಬಟನ್‌ನ ಪಕ್ಕದಲ್ಲಿದೆ) ಅನ್ನು ಆಯ್ಕೆ ಮಾಡುವ ಮೂಲಕ YouTube ನಲ್ಲಿ, ಮನೆಯಂಗಳದ ಮತ್ತು ಹೊರಗಿನ ಗೇಮ್‌ಗಳ ನಡುವೆ ನೀವು ಬದಲಾಯಿಸಬಹುದು.

YouTubeTV ಪ್ರಸಾರ ಐಕಾನ್‌ನ ಸ್ಥಾನ

NBA ಲೀಗ್ ಪಾಸ್‌ನ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯಿರಿ

  • YouTube TV ಯಲ್ಲಿ, NBA ಲೀಗ್ ಪಾಸ್ ಗೇಮ್‌ಗಳು ಪ್ರಾರಂಭವಾಗುವ 15 ನಿಮಿಷಗಳ ಮೊದಲು ಅವುಗಳನ್ನು ಹೋಮ್ ಟ್ಯಾಬ್‌ನಲ್ಲಿ ತೋರಿಸಲಾಗುವುದು ಮತ್ತು ಪ್ರಸಾರ ಮಾಡುವ 7 ದಿನಗಳ ಮೊದಲು ಲೈವ್ ಟ್ಯಾಬ್‌ನಲ್ಲಿ ತೋರಿಸಲಾಗುವುದು, ಇದರಿಂದ ನಿಮ್ಮ ರೆಕಾರ್ಡಿಂಗ್ ಆಯ್ಕೆಗಳನ್ನು ನೀವು ಸೆಟ್ ಮಾಡಬಹುದು ಮತ್ತು ಗೇಮ್ ದಿನದಂದು ಅವುಗಳನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಬಹುದು. YouTube Primetime ಚಾನಲ್‌ನಲ್ಲಿ, ಈವೆಂಟ್ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆಯ ಮೊದಲು NBA ಚಾನಲ್‌ನಲ್ಲಿ ಗೇಮ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಹೋಮ್ ಹಾಗೂ ಲೈವ್ ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳುತ್ತವೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15745112372955225138
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false