ಕಂಟೆಂಟ್ ಮ್ಯಾನೇಜರ್ ಜವಾಬ್ದಾರಿಗಳು ಮತ್ತು ಫೀಚರ್ ಆ್ಯಕ್ಸೆಸ್

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನೀವು YouTube ನ ನೀತಿಗಳನ್ನು ಉಲ್ಲಂಘಿಸಿದರೆ ಏನಾಗುತ್ತದೆ

YouTube ನ ನೀತಿಗಳನ್ನು ಅನುಸರಿಸಲು ವಿಫಲರಾಗುವ ಕಂಟೆಂಟ್ ಮ್ಯಾನೇಜರ್‌ಗಳ CMS ನ ದುರುಪಯೋಗವು ನಿರ್ಲಕ್ಷ್ಯದಿಂದ ಉಂಟಾಗಿದೆ, ಉದ್ದೇಶಪೂರ್ವಕವಾಗಿದೆ ಅಥವಾ ಹಾನಿಕಾರಕವಾಗಿದೆ ಎಂದು YouTube ನಿರ್ಧರಿಸಿದರೆ, ಅವರು ಅಧಿಕೃತ ಎಚ್ಚರಿಕೆಗಳನ್ನು ಸ್ವೀಕರಿಸಬಹುದು. ಜೊತೆಗೆ, YouTube ನ ನಿಯಮಗಳು ಅಥವಾ ನೀತಿಗಳನ್ನು ಉಲ್ಲಂಘಿಸುವ ಯಾವುದೇ ಹೋಸ್ಟ್ ಮಾಡಲಾದ ಅಥವಾ ಡೆಲಿವರ್ ಮಾಡಲಾದ ಕಂಟೆಂಟ್ ಅನ್ನು YouTube ತೆಗೆದುಹಾಕಬಹುದು. ಅಧಿಕೃತ ಎಚ್ಚರಿಕೆಗಳು ಕೆಲವು YouTube ಪ್ರೋಗ್ರಾಂಗಳು ಮತ್ತು CMS ಫೀಚರ್‌ಗಳಿಗೆ ಸಂಬಂಧಿಸಿದಂತೆ ನಿಮ್ಮ ಕಂಪನಿಯ ಅರ್ಹತೆಯ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ನಿಮ್ಮ ಸಿಸ್ಟಂಗಳಿಗೆ ಅನಧಿಕೃತ ಆ್ಯಕ್ಯೆಸ್ ಅನ್ನು ತಡೆಗಟ್ಟಲು ಮತ್ತು YouTube ನ ಎಲ್ಲಾ ನೀತಿಗಳು, ಮಾರ್ಗಸೂಚಿಗಳು ಮತ್ತು ಅವಶ್ಯಕತೆಗಳನ್ನು ಅನುಸರಿಸುವ ನಿಟ್ಟಿನಲ್ಲಿ ನೀವು ಸಾಕಷ್ಟು ಆಂತರಿಕ ನಿಯಂತ್ರಣಗಳನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ.

CMS ಫೀಚರ್‌ಗಳಿಗೆ ಆ್ಯಕ್ಸೆಸ್ ಕಳೆದುಕೊಳ್ಳುವ ಕುರಿತು

ಅಧಿಕೃತ ಎಚ್ಚರಿಕೆಗಳ ಜೊತೆಗೆ, CMS ಫೀಚರ್‌ಗಳನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ದುರ್ಬಳಕೆ ಮಾಡುವ ಪಾಲುದಾರರು ಆ ಫೀಚರ್‌ಗಳು ಅಥವಾ ಇತರ ಸಂಬಂಧಿತ ಫೀಚರ್‌ಗಳಿಗಿರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳಬಹುದು. ಸಾಮಾನ್ಯವಾಗಿ ಇದು ತಾತ್ಕಾಲಿಕವಾಗಿರುತ್ತದೆ ಮತ್ತು ನಿಗದಿತ ಅವಧಿಯವರೆಗೆ ಮಾತ್ರ ಇರುತ್ತದೆ. ಕಂಟೆಂಟ್ ಮ್ಯಾನೇಜ್‌ಮೆಂಟ್ ಪರಿಸರ ವ್ಯವಸ್ಥೆಗೆ ಸನ್ನಿಹಿತವಾದ ಹಾನಿಯನ್ನು ತಡೆಗಟ್ಟಲು ನಾವು CMS ಫೀಚರ್‌ಗಳಿಗಿರುವ ನಿಮ್ಮ ಆ್ಯಕ್ಸೆಸ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು. ಫೀಚರ್‌ಗೆ ಮರಳಿ ಆ್ಯಕ್ಸೆಸ್ ಅನ್ನು ಪಡೆಯುವುದಕ್ಕೂ ಮೊದಲು ಪಾಲುದಾರರು ಕಾಯಬೇಕಾದ ಸಮಯಾವಧಿಯು ಉಲ್ಲಂಘನೆಯ ತೀವ್ರತೆ, ಅದು ಸಂಭವಿಸಿದ ಕಾರಣ, ಪಾಲುದಾರರ ವ್ಯವಹಾರದ ಮೇಲಾಗುವ ಪರಿಣಾಮ ಮತ್ತು ಪಾಲುದಾರರ ಉಲ್ಲಂಘನೆಯ ಇತಿಹಾಸದಂತಹ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಕೆಲವು ಫೀಚರ್‌ಗಳ ಶಾಶ್ವತ ನಷ್ಟವು ಸೂಕ್ತವೆಂದು ನಾವು ಪರಿಗಣಿಸಬಹುದು. ನಿಮ್ಮ ಪಾಲುದಾರ ವ್ಯವಸ್ಥಾಪಕರು ನಿರ್ದಿಷ್ಟ ವಿವರಗಳು ಮತ್ತು ಮುಂದಿನ ಹಂತಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾರೆ. ನೀವು ಪಾಲುದಾರ ವ್ಯವಸ್ಥಾಪಕರನ್ನು ಹೊಂದಿಲ್ಲದಿದ್ದರೆ, ಹೆಚ್ಚಿನ ಮಾಹಿತಿಗಾಗಿ ನೀವು ರಚನೆಕಾರರ ಬೆಂಬಲ ತಂಡವನ್ನು ಸಂಪರ್ಕಿಸಬಹುದು.

ಓರ್ವ ಕಂಟೆಂಟ್ ಮ್ಯಾನೇಜರ್ ಆಗಿ ನಿಮ್ಮ ಜವಾಬ್ದಾರಿಗಳು

YouTube ನ ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ (CMS) ಎಂಬುದು ಶಕ್ತಿಯುತವಾದ ಟೂಲ್‌ಗಳ ಸ್ಯೂಟ್ ಆಗಿದ್ದು, ಅದನ್ನು ಅಸಮರ್ಪಕವಾಗಿ ಬಳಸಿದರೆ YouTube ಪರಿಸರ ವ್ಯವಸ್ಥೆಗೆ ಹಾನಿಯಾಗಬಹುದು. ಎಲ್ಲಾ ಹೋಸ್ಟ್ ಮಾಡಲಾದ ಮತ್ತು ಡೆಲಿವರ್ ಮಾಡಲಾದ ಕಂಟೆಂಟ್ (ಅಂದರೆ, ಚಾನಲ್‌ಗಳು, ವೀಡಿಯೊಗಳು, ಆರ್ಟ್ ಟ್ರ್ಯಾಕ್‌ಗಳು, ಸ್ವತ್ತಿನ ಮೆಟಾಡೇಟಾ, Content ID ಉಲ್ಲೇಖಗಳು, ಇತ್ಯಾದಿ.) ನಮ್ಮ ಸೇವಾ ನಿಯಮಗಳು, ಸಮುದಾಯ ಮಾರ್ಗಸೂಚಿಗಳು, ಮಾನಿಟೈಸೇಶನ್ ಅವಶ್ಯಕತೆಗಳು ಮತ್ತು ಕಂಟೆಂಟ್ ಮ್ಯಾನೇಜರ್ ನೀತಿಗಳು ಸೇರಿದಂತೆ, YouTube ನ ಎಲ್ಲಾ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಂಟೆಂಟ್ ಮ್ಯಾನೇಜರ್‌ಗಳು ಜವಾಬ್ದಾರರಾಗಿರುತ್ತಾರೆ.

ಪುನರಾವರ್ತಿತ ಮತ್ತು ತೀವ್ರವಾದ ಉಲ್ಲಂಘನೆಗಳು

ನಾವು ಈ ನೀತಿಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಕಂಟೆಂಟ್ ಮ್ಯಾನೇಜರ್ ನೀತಿಗಳನ್ನು ಪದೇ ಪದೇ ಅಥವಾ ತೀವ್ರವಾಗಿ ಉಲ್ಲಂಘಿಸುವ ಪಾಲುದಾರರು ಕಠಿಣವಾದ ದಂಡನೆಗಳನ್ನು ಎದುರಿಸಬೇಕಾಗುತ್ತದೆ. ಈ ದಂಡನೆಗಳು ಹೆಚ್ಚುವರಿ CMS ಫೀಚರ್‌ಗಳಿಗೆ ಇರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುವುದು, ದೀರ್ಘಕಾಲದವರೆಗೆ ನಿರ್ದಿಷ್ಟ ಫೀಚರ್‌ಗಳನ್ನು ಕಳೆದುಕೊಳ್ಳುವುದು ಅಥವಾ CMS ಗೆ ಇರುವ ಆ್ಯಕ್ಸೆಸ್ ಅನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು ಮತ್ತು YouTube ಜೊತೆಗಿನ ಯಾವುದೇ ಒಪ್ಪಂದಗಳನ್ನು ಕೊನೆಗೊಳಿಸುವುದನ್ನು ಒಳಗೊಂಡಿರಬಹುದು.

ಕೆಲವು ಸಂದರ್ಭಗಳಲ್ಲಿ, ನಮ್ಮ ನೀತಿಗಳನ್ನು ಅನುಸರಿಸಲು ನಾವು “ಅಂತಿಮ ಎಚ್ಚರಿಕೆಯನ್ನು” ನೀಡಬಹುದು. ಅಧಿಕೃತವಾದ ಅಂತಿಮ ಎಚ್ಚರಿಕೆ ನೋಟಿಫಿಕೇಶನ್ ಅನ್ನು ಪಡೆದಿರುವ ಕಂಟೆಂಟ್ ಮ್ಯಾನೇಜರ್‌ಗಳು ತರುವಾಯದ ವರ್ಷದೊಳಗಾಗಿ ದುರುಪಯೋಗಕ್ಕೆ ಸಂಬಂಧಿಸಿದ ಆಡಿಟ್‌ನಲ್ಲಿ ಅನುಮೋದಿತವಾಗುವವರೆಗೆ ತಮ್ಮ ಬಹುತೇಕ CMS ಫೀಚರ್‌ಗಳಿಗೆ ಇರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತಾರೆ. ತರುವಾಯದ ವರ್ಷದಲ್ಲಿ ನಮ್ಮ ಕಂಟೆಂಟ್ ಮ್ಯಾನೇಜರ್ ನೀತಿಗಳಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚುವರಿ ಉಲ್ಲಂಘನೆಗಳು ಕಂಡುಬಂದರೆ, ಹಾಗೆಯೇ ದುರುಪಯೋಗಕ್ಕೆ ಸಂಬಂಧಿಸಿದ ಆಡಿಟ್ ಅನ್ನು ವಿನಂತಿಸಲು ಮತ್ತು ಅದರಲ್ಲಿ ಅನುಮೋದಿತವಾಗಲು ವಿಫಲವಾದರೆ ಅವರ ಒಪ್ಪಂದಗಳು ಕೊನೆಯಾಗುವ ಅಪಾಯವನ್ನು ಎದುರಿಸಬೇಕಾಗುತ್ತದೆ.

ಬಹು ಕಂಟೆಂಟ್ ಮಾಲೀಕರ ಮಾಲೀಕತ್ವ

ಗಮನಿಸಿ, YouTube ನಲ್ಲಿ ಹಲವು ಕಂಟೆಂಟ್ ಮ್ಯಾನೇಜರ್‌ಗಳಲ್ಲಿ ನೀವು ನಿಯಂತ್ರಣ ಪಾಲನ್ನು ಹೊಂದಿದ್ದರೆ, ಒಂದು ಕಂಟೆಂಟ್ ಮ್ಯಾನೇಜರ್‌ನಲ್ಲಿ ಉಂಟಾದ ಉಲ್ಲಂಘನೆಗಳಿಂದಾಗಿ ನಿಮ್ಮ ಮಾಲೀಕತ್ವದ ಅಡಿಯಲ್ಲಿನ ಎಲ್ಲಾ ಕಂಟೆಂಟ್ ಮ್ಯಾನೇಜರ್‌ಗಳಿಗೂ ದಂಡನೆಯನ್ನು ವಿಧಿಸಬೇಕಾಗಬಹುದು. 

ಸಾಮಾನ್ಯ ಕಂಟೆಂಟ್ ಮ್ಯಾನೇಜರ್ ನೀತಿಗಳು

YouTube CMS ಗೆ ಆ್ಯಕ್ಸೆಸ್ ಹೊಂದಿರುವ ಪ್ರತಿ ಪಾಲುದಾರರಿಗೂ ಈ ನೀತಿಗಳು ಅನ್ವಯವಾಗುತ್ತವೆ

ಚಾನಲ್ ಹೊಣೆಗಾರಿಕೆ ನೀತಿ

ಎಲ್ಲಾ ಲಿಂಕ್ ಮಾಡಿದ ಚಾನಲ್‌ಗಳು YouTube ನ ಕಂಟೆಂಟ್ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಂಟೆಂಟ್ ಮ್ಯಾನೇಜರ್‌ಗಳು ಜವಾಬ್ದಾರರಾಗಿರುತ್ತಾರೆ. ಈ ನೀತಿಯು ಸ್ವಾಮ್ಯ ಮತ್ತು ನಿರ್ವಹಣೆಯಲ್ಲಿರುವ (O&O) ಚಾನಲ್‌ಗಳಿಗೆ ಮತ್ತು ಅಫಿಲಿಯೇಟ್ ಚಾನಲ್‌ಗಳಿಗೆ ಅಪ್‌ಲೋಡ್ ಮಾಡಿದ ಕಂಟೆಂಟ್‌ಗೆ ಅನ್ವಯವಾಗುತ್ತದೆ. 

ನೀತಿಯ ಅಗತ್ಯತೆಗಳು

  • ಕಂಟೆಂಟ್ ಮ್ಯಾನೇಜರ್‌ಗಳು 90 ದಿನಗಳ ಅವಧಿಯಲ್ಲಿ 30 ಕ್ಕಿಂತ ಕಡಿಮೆ ಆಕ್ಷೇಪಾರ್ಹ ಈವೆಂಟ್‌ಗಳನ್ನು ಹೊಂದಿರಬೇಕು (ಅಂದರೆ ಕೊನೆಗೊಳಿಸುವಿಕೆಗಳು, ಅಮಾನತುಗಳು ಅಥವಾ ಡಿಮಾನಿಟೈಸೇಶನ್‌ಗಳು). ಈ ನೀತಿಯು ನಿಮ್ಮ ಅಫಿಲಿಯೇಟ್ ಮತ್ತು ನಾನ್-ಅಫಿಲಿಯೇಟ್ ಖಾತೆಗಳಲ್ಲಿರುವ ಚಾನಲ್‌ಗಳಿಗೆ ಅನ್ವಯವಾಗುತ್ತದೆ. 
  • ಕಂಟೆಂಟ್ ಮ್ಯಾನೇಜರ್‌ಗಳು ತಮ್ಮ ನಾನ್-ಅಫಿಲಿಯೇಟ್ ಖಾತೆಗಳಲ್ಲಿ 90 ದಿನಗಳ ಅವಧಿಯಲ್ಲಿ 10 ಕ್ಕಿಂತ ಕಡಿಮೆ ಚಾನಲ್ ಆಕ್ಷೇಪಾರ್ಹ ಈವೆಂಟ್‌ಗಳನ್ನು ಹೊಂದಿರಬೇಕು.

ನೀತಿಯ ಉಲ್ಲಂಘನೆಗಳು

ಈ ಥ್ರೆಶೋಲ್ಡ್ ಅನ್ನು ಮೀರಿದರೆ ಈ ನೀತಿಯ ಒಂದು ಉಲ್ಲಂಘನೆ ಎಂಬುದಾಗಿ ಪರಿಗಣಿಸಲಾಗುತ್ತದೆ. 90 ದಿನಗಳ ಒಂದು ಅವಧಿಯಲ್ಲಿ ಒಂದು ಉಲ್ಲಂಘನೆಯು ಕಂಡುಬಂದರೆ, 1 ತಿಂಗಳ ಮಟ್ಟಿಗೆ ಅಮಾನತುಗೊಳಿಸಲಾಗುವುದು. ಅಮಾನತುಗೊಳಿಸಿದ ಅವಧಿಯಲ್ಲಿ, ಹೊಸ ಚಾನಲ್‌ಗಳನ್ನು ರಚಿಸಲು ಅಥವಾ ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. 

90 ದಿನಗಳ ಅವಧಿಯಲ್ಲಿ ಎರಡನೇ ಉಲ್ಲಂಘನೆಯು ಕಂಡುಬಂದರೆ, 2 ತಿಂಗಳ ಮಟ್ಟಿಗೆ ಅಮಾನತುಗೊಳಿಸಲಾಗುವುದು. ಮೂರನೇ ಮತ್ತು ಅಂತಿಮ ಉಲ್ಲಂಘನೆಯು ದೀರ್ಘಾವಧಿಯ ಅಮಾನತನ್ನು ಅಥವಾ YouTube ಜೊತೆಗಿನ ನಿಮ್ಮ ಒಪ್ಪಂದಗಳ ಕೊನೆಗೊಳಿಸುವಿಕೆಯನ್ನು ಒಳಗೊಂಡಿರಬಹುದಾದ ದಂಡನೆಗಳನ್ನು ವಿಧಿಸಲು ದಾರಿ ಮಾಡಿಕೊಡುತ್ತದೆ.

ನೀತಿಯನ್ನು ಅನುಸರಿಸಲು ನೀವು ಏನು ಮಾಡಬಹುದು

  • YouTube ನ ಸಮುದಾಯ ಮಾರ್ಗಸೂಚಿಗಳು ಮತ್ತು ಜಾಹೀರಾತು-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ಕುರಿತು ನೀವು ನಿರ್ವಹಿಸುವ ಚಾನಲ್‌ಗಳಿಗೆ ತಿಳಿಸಿಕೊಡಿ. ಅವುಗಳು YouTube ನ ಸೇವಾ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಆಕ್ಷೇಪಾರ್ಹ ಈವೆಂಟ್‌ಗಳಿಗಾಗಿ ನಿಯಮಿತವಾಗಿ ಪರಿಶೀಲಿಸಿ, ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ಲಿಂಕ್ ಮಾಡಿದ ಖಾತೆಗಳ ಮೇಲೆ ಹಚ್ಚು ಗಮನಹರಿಸಿ. 
  • ನಿಮ್ಮ ಕಂಟೆಂಟ್ ಮ್ಯಾನೇಜರ್ ಅಡಿಯಲ್ಲಿನ ಚಾನಲ್ ಕೊನೆಗೊಳಿಸುವಿಕೆ ಸಂಖ್ಯೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು, ನಿಮ್ಮ ಚಾನಲ್ ಪಟ್ಟಿಯನ್ನು ಎಕ್ಸ್‌ಪೋರ್ಟ್ ಮಾಡಿ.
  • ನೀವು ನಿರ್ವಹಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಚಾನಲ್‌ಗಳನ್ನು ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಬೇಡಿ.
  • ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಚಾನಲ್‌ಗಳನ್ನು ಸೇರಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.
ಚಾನಲ್ ಪ್ರವೇಶ ನೀತಿ
ಕಂಟೆಂಟ್ ಮ್ಯಾನೇಜರ್‌ಗಳು ತಮ್ಮ ನೆಟ್‌ವರ್ಕ್‌ಗೆ ಆ ಚಾನಲ್‌ಗಳನ್ನು ಸೇರಿಸುವ ಮೊದಲು ರಚನೆಕಾರರ ಚಾನಲ್‌ಗಳ ಜೊತೆಗೆ ಸಹಯೋಗ ಹೊಂದಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಇತರ ವಿಷಯಗಳ ಜೊತೆಗೆ, ಸ್ಪ್ಯಾಮ್ ಅಥವಾ ಅಪ್ರಾಮಾಣಿಕ ವಿಧಾನಗಳ ಮೂಲಕ ರಚನೆಕಾರರನ್ನು ಆನ್‌ಬೋರ್ಡ್ ಮಾಡಿಕೊಳ್ಳುವ ಅಥವಾ ಚಾನಲ್ ಲಿಂಕ್ ಮಾಡುವ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವ ಕಂಟೆಂಟ್ ಮ್ಯಾನೇಜರ್‌ಗಳು CMS ಫೀಚರ್‌ಗಳಿಗೆ ಇರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳಬಹುದು.

ನೀತಿಯ ಅಗತ್ಯತೆಗಳು:

  • ಕಂಟೆಂಟ್ ಮ್ಯಾನೇಜರ್‌ಗಳು ಪ್ರತಿ ತಿಂಗಳು ತಮ್ಮ ಚಾನಲ್ ಲಿಂಕ್ ಮಾಡುವ ಆಹ್ವಾನಗಳಿಗೆ ಸಂಬಂಧಿಸಿದಂತೆ 90% ಕ್ಕಿಂತ ಹೆಚ್ಚು ಸ್ವೀಕಾರ ದರವನ್ನು ಕಾಪಾಡಿಕೊಳ್ಳಬೇಕು.
  • ಕಂಟೆಂಟ್ ಮ್ಯಾನೇಜರ್‌ಗಳು 90% ಕ್ಕಿಂತ ಕಡಿಮೆ ಸ್ವೀಕಾರ ದರವನ್ನು ಪಡೆದರೆ, ಅವರ ಸಂಪೂರ್ಣ ಕಂಟೆಂಟ್ ಮಾಲೀಕರ ಕುಟುಂಬಕ್ಕಾಗಿ 1 ತಿಂಗಳ ಕಾಲ ಚಾನಲ್ ಆಹ್ವಾನಗಳನ್ನು ನಿಯಂತ್ರಿಸಲಾಗಬಹುದು.

ನೀತಿಯನ್ನು ಅನುಸರಿಸಲು ನೀವು ಏನು ಮಾಡಬಹುದು:

  • ತಿಂಗಳ ಆರಂಭದಲ್ಲಿ ನಿಮ್ಮ ಆಹ್ವಾನಗಳನ್ನು ಕಳುಹಿಸಿ. ಇದು ನಿಮ್ಮ ರಚನೆಕಾರರಿಗೆ ಆಹ್ವಾನವನ್ನು ಸ್ವೀಕರಿಸಲು ಸಾಕಷ್ಟು ಸಮಯವನ್ನು ನೀಡುತ್ತದೆ.
  • ನಿಮಗೆ ತಿಳಿದಿರುವ ಮತ್ತು ನೀವು ನಿಜವಾಗಿಯೂ ವ್ಯಾಪಾರದ ಸಂಬಂಧವನ್ನು ಹೊಂದಿರುವ ಚಾನಲ್‌ಗಳಿಗೆ ಮಾತ್ರ ಆಹ್ವಾನಗಳನ್ನು ಕಳುಹಿಸಿ.
  • ರಚನೆಕಾರರನ್ನು ಸಂಪರ್ಕಿಸಿ ಮತ್ತು ಅಗತ್ಯವಿದ್ದರೆ ಅವರ ಆಹ್ವಾನಗಳನ್ನು ಸ್ವೀಕರಿಸುವಂತೆ ನೆನಪಿಸಿ.
ವ್ಯವಸ್ಥೆಗಳನ್ನು ವಂಚಿಸುವುದಕ್ಕೆ ಸಂಬಂಧಿಸಿದ ನೀತಿಗಳು
ಕಂಟೆಂಟ್ ಮ್ಯಾನೇಜರ್‌ಗಳು ತಮ್ಮ ಕಂಟೆಂಟ್ ಮಾಲೀಕರ ಪರವಾಗಿ ಹಕ್ಕುಗಳು ಮತ್ತು ಕಂಟೆಂಟ್ ಅನ್ನು ನಿರ್ವಹಿಸುತ್ತಾರೆ, ತಮ್ಮ ನೆಟ್‌ವರ್ಕ್‌ನಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು YouTube CMS ಅನ್ನು ಜವಾಬ್ದಾರಿಯುತವಾಗಿ ಬಳಸುತ್ತಾರೆ ಎಂಬುದು ನಮ್ಮ ನಂಬಿಕೆ. ಆ ನಂಬಿಕೆಯು YouTube CMS ನಲ್ಲಿ ರಚಿಸಿದ ಫೀಚರ್‌ಗಳಿಗೂ ವಿಸ್ತರಿಸುತ್ತದೆ. YouTube ನ ಸ್ಥಾಪಿತ ವ್ಯವಸ್ಥೆಗಳು ಅಥವಾ ಪ್ರಕ್ರಿಯೆಗಳನ್ನು ವಂಚಿಸಲು ಈ ಫೀಚರ್‌ಗಳನ್ನು ದುರುಪಯೋಗಪಡಿಸಿಕೊಳ್ಳುವ ಕಂಟೆಂಟ್ ಮ್ಯಾನೇಜರ್‌ಗಳು ಆ ನಂಬಿಕೆಯನ್ನು ಉಲ್ಲಂಘಿಸುತ್ತಾರೆ ಮತ್ತು ಸಂಪೂರ್ಣ YouTube ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತಾರೆ.

ನೀತಿಯ ಅಗತ್ಯತೆಗಳು:

  • YouTube ನ ಸಿಸ್ಟಂಗಳು, ಪ್ರಕ್ರಿಯೆಗಳು ಅಥವಾ ನೀತಿಗಳಿಂದ ತಪ್ಪಿಸಿಕೊಳ್ಳಲು ಅಥವಾ ಅವುಗಳಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಚಟುವಟಿಕೆಗಳಿಂದ ಕಂಟೆಂಟ್ ಮ್ಯಾನೇಜರ್‌ಗಳನ್ನು ನಿಷೇಧಿಸಲಾಗಿದೆ.
  • ಈ ನೀತಿಯ ಉಲ್ಲಂಘನೆಯನ್ನು ತೀವ್ರವಾದ ದುರುಪಯೋಗ ಎಂದು ಪರಿಗಣಿಸಲಾಗಬಹುದು ಮತ್ತು ನಿಮ್ಮ ಸಂಪೂರ್ಣ ಕಂಟೆಂಟ್ ಮಾಲೀಕರ ಕುಟುಂಬವನ್ನು ಕೊನೆಗೊಳಿಸಲಾಗಬಹುದು.

ಈ ನೀತಿಯ ಉಲ್ಲಂಘನೆಯ ಉದಾಹರಣೆಗಳಲ್ಲಿ ಇವುಗಳು ಸೇರಿರಬಹುದು:

  • YouTube ನಲ್ಲಿ ಮಾನಿಟೈಸೇಶನ್‌ಗೆ ಅನರ್ಹವಾಗಿರುವ ಕಂಟೆಂಟ್‌ ಅನ್ನು ಮಾನಿಟೈಸ್ ಮಾಡಲು CMS ಅನ್ನು ಅಸಮರ್ಪಕವಾಗಿ ಬಳಸುವುದು. ಇದು ನಮ್ಮ ಸಮುದಾಯ ಮತ್ತು ಬ್ರ್ಯಾಂಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ, ಹಾಗೆಯೇ ಯಾವುದೇ ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳಿಂದ ನಿಷೇಧಿಸಲಾದ ಕಂಟೆಂಟ್‌ಗಳನ್ನು ಒಳಗೊಂಡಿರುತ್ತದೆ.
  • ನೀವು ತಾತ್ಕಾಲಿಕವಾಗಿಯೂ ಕಾನೂನುಬದ್ಧ ಬೌದ್ಧಿಕ ಸ್ವತ್ತು ಆಸಕ್ತಿಯನ್ನು ಹೊಂದಿಲ್ಲದಿರುವ Content ID ಸ್ವತ್ತುಗಳಿಗೆ ನಿಮ್ಮ ಮಾಲೀಕತ್ವವನ್ನು ಹಸ್ತಚಾಲಿತವಾಗಿ ಸೇರಿಸುವುದು.
  • ಕ್ಲೇಮ್ ವಿವಾದ ಪರಿಹಾರ ಪ್ರಕ್ರಿಯೆಯನ್ನು ವಂಚಿಸುವ ಸಲುವಾಗಿ ಹಸ್ತಚಾಲಿತ Content ID ಕ್ಲೇಮ್ ಚಟುವಟಿಕೆಯನ್ನು ಬಳಸುವುದು.
  • ಪೂರ್ವಾನುಮತಿಯ ಅಗತ್ಯವಿರುವ ಸಂದರ್ಭಗಳಲ್ಲಿ YouTube ನಿಂದ ಅನುಮೋದನೆ ಪಡೆಯದ ಯಾವುದೇ ಚಾನಲ್ ಅನ್ನು ನಿಮ್ಮ CMS ಗೆ ನೋಂದಾಯಿಸುವುದು.
  • ಅಮಾನ್ಯ ಅಥವಾ ವಂಚನೀಯ ವಿಧಾನಗಳ ಮೂಲಕ YouTube ನಲ್ಲಿ ನಿಮ್ಮ ಗಳಿಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ತಂತ್ರಗಳನ್ನು ಬಳಸುವುದು ಅಥವಾ ಅಂತಹ ಬಳಕೆಗಳಿಂದ ಲಾಭ ಪಡೆಯುವುದು ಅಥವಾ ಅವುಗಳಲ್ಲಿ ಭಾಗವಹಿಸುವುದು.        

ಕಂಟೆಂಟ್ ಮ್ಯಾನೇಜರ್ ಕೃತಿಸ್ವಾಮ್ವ ಸ್ಟ್ರೈಕ್‌ಗಳ ಕುರಿತಾದ ನೀತಿ
ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ವಿಧಿಸಿದಾಗ, ಚಾನಲ್-ಮಟ್ಟದ ದಂಡನೆಗಳು ಅನ್ವಯವಾಗುತ್ತವೆ. ಪಾಲುದಾರರು ತಾವು ನಿರ್ವಹಿಸುವ ಚಾನಲ್‌ಗಳಾದ್ಯಂತ ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಸಂಗ್ರಹವಾಗುವುದನ್ನು ತಪ್ಪಿಸಬೇಕು. ಹಾಗೆ ಮಾಡಲು ವಿಫಲವಾದರೆ, ಅಸ್ತಿತ್ವದಲ್ಲಿರುವ ಚಾನಲ್ ಸ್ಟ್ರೈಕ್ ನೀತಿಗಳಿಗೆ ಹೆಚ್ಚುವರಿಯಾಗಿ ಅವರ ಕಂಟೆಂಟ್ ಮ್ಯಾನೇಜರ್‌ಗೂ ದಂಡನೆಯನ್ನು ವಿಧಿಸಲಾಗುತ್ತದೆ. ಪಾಲುದಾರ ಸ್ಟ್ರೈಕ್ ದಂಡನೆಗಳು ಫೀಚರ್‌ಗಳಿಗೆ ಇರುವ ಆ್ಯಕ್ಸೆಸ್ ಅನ್ನು ಮಿತಿಗೊಳಿಸುತ್ತವೆ. ಇದು ಕಂಟೆಂಟ್ ಮಾಲೀಕರು ಮತ್ತು ಸಂಬಂಧಿತ ಕಂಟೆಂಟ್ ಮಾಲೀಕರು ಇಬ್ಬರ ಮೇಲೂ ಪರಿಣಾಮ ಬೀರುತ್ತದೆ.

ನೀತಿಯ ಅಗತ್ಯತೆಗಳು:

ಒಬ್ಬ ಪಾಲುದಾರರು, ತಾವು ನಿರ್ವಹಿಸುವ ಚಾನಲ್‌ಗಳಾದ್ಯಂತ 90 ದಿನಗಳ ಅವಧಿಯಲ್ಲಿ 10 ಕೃತಿಸ್ವಾಮ್ಯ ಸ್ಟ್ರೈಕ್‌ಗಳನ್ನು ಸ್ವೀಕರಿಸಿದರೆ, ಆ ಪಾಲುದಾರರನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಮತ್ತು ಇದರ ಫಲಿತಾಂಶಗಳು, ಚಾನಲ್‌ಗಳನ್ನು ಲಿಂಕ್ ಮಾಡುವ ಸಾಮರ್ಥ್ಯದ ನಷ್ಟ, ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಸಾಮರ್ಥ್ಯದ ನಷ್ಟ ಮತ್ತು ಪಾಲುದಾರಿಕೆ ಒಪ್ಪಂದದ ಕೊನೆಗೊಳಿಸುವಿಕೆಯನ್ನು ಒಳಗೊಂಡಿರಬಹುದು. 90 ದಿನಗಳ ನಂತರ, ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಅವಧಿ ಮುಗಿಯುತ್ತದೆ ಮತ್ತು ಚಾನಲ್ ಮತ್ತು ಕಂಟೆಂಟ್ ಮಾಲೀಕರ ಒಟ್ಟಾರೆ ಸ್ಟ್ರೈಕ್‌ಗಳಿಂದ ಅವುಗಳನ್ನು ತೆಗೆದುಹಾಕಲಾಗುತ್ತದೆ. YouTube, ತನ್ನ ಸ್ವಂತ ವಿವೇಚನೆಯ ಮೇರೆಗೆ ಯಾವುದೇ ಸಮಯದಲ್ಲಿ ದುರುಪಯೋಗವನ್ನು ಮೌಲ್ಯಮಾಪನ ಮಾಡುವ ಮತ್ತು ಅದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಹಕ್ಕನ್ನು ಕೂಡ ಕಾಯ್ದಿರಿಸಿಕೊಂಡಿದೆ.

ನೀತಿಯನ್ನು ಅನುಸರಿಸಲು ನೀವು ಏನು ಮಾಡಬಹುದು:

  • ನಿರ್ವಹಿಸಬೇಕಾದ ಹೊಸ ಚಾನಲ್‌ಗಳನ್ನು ಆಯ್ಕೆಮಾಡುವಾಗ ಕಾಳಜಿಯನ್ನು ವಹಿಸಿ. ನಿಮ್ಮ ಸ್ಟ್ರೈಕ್ ಪ್ರಮಾಣದ ಮೇಲೆ ಅಪಾಯವನ್ನುಂಟುಮಾಡಬಹುದಾದ ಚಾನಲ್‌ಗಳನ್ನು ಸೇರಿಸುವುದನ್ನು ತಪ್ಪಿಸಿ.
  • O&O ಕಂಟೆಂಟ್ ಮಾಲೀಕತ್ವದಲ್ಲಿರುವ ಚಾನಲ್‌ಗಳ ಸಂಖ್ಯೆಯನ್ನು 120 ಕ್ಕಿಂತ ಕಡಿಮೆ ಇರಿಸಿಕೊಳ್ಳುವ ಬಹುತೇಕ ಪಾಲುದಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
  • ಕೃತಿಸ್ವಾಮ್ಯದ ಕುರಿತು ನೀವು ನಿರ್ವಹಿಸುವ ಚಾನಲ್‌ಗಳಿಗೆ ಶಿಕ್ಷಣ ನೀಡಿ ಮತ್ತು ಅವುಗಳು YouTube ನ ನೀತಿಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಿ.
  • ನೀವು ನಿರ್ವಹಿಸುವ ಚಾನಲ್‌ಗಳ ಸಂಖ್ಯೆಯನ್ನು ಹೆಚ್ಚಿಸಿದಂತೆಲ್ಲಾ ನೀವು ಸರಿಯಾದ ಆಂತರಿಕ ನಿಯಂತ್ರಣಗಳನ್ನು ನಿರ್ವಹಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಯಾವುದೇ ಸಂಬಂಧಿತ ಕೃತಿಸ್ವಾಮ್ಯದ ಸ್ಟ್ರೈಕ್‌ಗಳು ಅಮಾನ್ಯವಾಗಿವೆ ಎಂದು ನಿಮಗೆ ಅನಿಸಿದರೆ, ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸುವ ಅಥವಾ ಕ್ಲೇಮ್ ಹಿಂಪಡೆಯುವಿಕೆಯನ್ನು ವಿನಂತಿಸುವ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಬಹುದು.
ನೀವು ಸಹಾಯ ಕೇಂದ್ರದಲ್ಲಿ ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.
ಹೊಣೆಗಾರಿಕೆಯಿರುವ ಆ್ಯಕ್ಸೆಸ್ ಮತ್ತು ಸ್ವಾಧೀನಪಡಿಸಿಕೊಳ್ಳುವ ಕುರಿತಾದ ನೀತಿ
ನಮ್ಮ ಪರಿಸರ ವ್ಯವಸ್ಥೆಯನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿಡುವ ಪ್ರಯತ್ನದ ಭಾಗವಾಗಿ, ಹೊಣೆಗಾರಿಕೆಯಿಲ್ಲದ ಅಥವಾ ನಿಷೇಧಿತ ಪಾರ್ಟಿಗಳಿಂದ ಅಪಾಯಕ್ಕೀಡಾಗಿವೆ ಎಂದು YouTube ನಂಬುವ CMS ಖಾತೆಗಳನ್ನು ಅದು ನಿರ್ಬಂಧಿಸಬಹುದು, ಅಮಾನತುಗೊಳಿಸಬಹುದು ಅಥವಾ ಕೊನೆಗೊಳಿಸಬಹುದು. 
  • ತಮ್ಮ CMS ಖಾತೆಯನ್ನು ಬಳಸಿಕೊಂಡು ತೆಗೆದುಕೊಳ್ಳುವ ಪ್ರತಿಯೊಂದು ಕ್ರಮಕ್ಕೆ ಕಂಟೆಂಟ್ ಮ್ಯಾನೇಜರ್‌ಗಳು ಜವಾಬ್ದಾರರಾಗಿರುತ್ತಾರೆ.
    • ನಿಮ್ಮ ಉದ್ಯೋಗಿಗಳ ಆ್ಯಕ್ಸೆಸ್ ಮತ್ತು ನಮ್ಮ ನೀತಿಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಸಾಕಷ್ಟು ಸುರಕ್ಷತೆಗಳನ್ನು ಕೈಗೊಂಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಕಂಪನಿಗಳು ಅವರವರ ಉದ್ಯೋಗಿಗಳ ಕ್ರಮಗಳಿಗೆ ಜವಾಬ್ದಾರರಾಗಿರುತ್ತವೆ.
    • ಈ ನೀತಿಯು CMS ಖಾತೆಯನ್ನು ನಿರ್ವಹಿಸಲು ನೇಮಕಗೊಂಡ ಥರ್ಡ್ ಪಾರ್ಟಿ ಕಂಪನಿಗಳಿಗೂ ಅನ್ವಯಿಸುತ್ತದೆ.
  • ಪರಿಹಾರ ಅಥವಾ ಇತರ ಲಾಭಕ್ಕಾಗಿ ನಿಮ್ಮ CMS ಖಾತೆಗೆ ಸಂಬಂಧವಿಲ್ಲದ ಅಥವಾ ನಿಷೇಧಿತ ಥರ್ಡ್ ಪಾರ್ಟಿಗೆ ಆ್ಯಕ್ಸೆಸ್ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
    • ನಿಮ್ಮ CMS ಖಾತೆಗೆ ಇರುವ ಆ್ಯಕ್ಸೆಸ್ ಅನ್ನು ಬಾಡಿಗೆಗೆ ನೀಡಬೇಡಿ, ಗುತ್ತಿಗೆ ನೀಡಬೇಡಿ ಅಥವಾ ಮಾರಾಟ ಮಾಡಬೇಡಿ.
    • ನಿಮ್ಮ ಪರವಾಗಿ ನಿಮ್ಮ CMS ಖಾತೆಯನ್ನು ನಿರ್ವಹಿಸಲು ನೀವು ಥರ್ಡ್ ಪಾರ್ಟಿಯ ಜೊತೆಗೆ ಪಾಲುದಾರರಾಗಿದ್ದರೆ, ಆ ಸಂಸ್ಥೆಯು ನಮ್ಮ ಜೊತೆಗೆ ನೇರ ಪಾಲುದಾರಿಕೆ ಒಪ್ಪಂದವನ್ನು ಹೊಂದಿರಬೇಕು. 
    • ದುರುಪಯೋಗದ ಇತಿಹಾಸವನ್ನು ಹೊಂದಿರುವ ಸಂಸ್ಥೆಗಳಿಗೆ (ಅಥವಾ ಸಂಬಂಧಿತ ವ್ಯಕ್ತಿಗಳಿಗೆ), ನಿಮ್ಮ CMS ಖಾತೆಗೆ ಆ್ಯಕ್ಸೆಸ್ ನೀಡಬೇಡಿ.
    • ನಿಮ್ಮ CMS ಖಾತೆಗೆ ಸಂಬಂಧವಿಲ್ಲದ ಅಥವಾ ನಿಷೇಧಿತ ಪಾರ್ಟಿಯು ಆ್ಯಕ್ಸೆಸ್ ಹೊಂದಿದ್ದಾರೆ ಎಂಬುದು YouTube ನ ಗಮನಕ್ಕೆ ಬಂದರೆ, YouTube ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ, YouTube ವೈಯಕ್ತಿಕ ಆ್ಯಕ್ಸೆಸ್ ಅನ್ನು ಹಿಂತೆಗೆದುಕೊಳ್ಳಬಹುದು ಅಥವಾ ಯಾವುದೇ ಸಂಬಂಧಿತ ಒಪ್ಪಂದಗಳನ್ನು ಕೊನೆಗೊಳಿಸಬಹುದು.
ಓರ್ವ ಕಂಟೆಂಟ್ ಮ್ಯಾನೇಜರ್ ಆಗಿ, ನಿಮ್ಮನ್ನು ಬೇರೊಂದು ಕಂಪನಿಯು ಸ್ವಾಧೀನಪಡಿಸಿಕೊಳ್ಳುತ್ತಿದ್ದರೆ ನೀವು ಆ ಕುರಿತು YouTube ಗೆ ಸೂಚಿಸಬೇಕು. ಒಂದು ವೇಳೆ CMS ಆ್ಯಕ್ಸೆಸ್ ಹೊಂದಿರುವ ಕಂಪನಿಯನ್ನು ನೀವು ಸ್ವಾಧೀನಪಡಿಸಿಕೊಳ್ಳುತ್ತಿದ್ದರೆ, ಅದಕ್ಕೆ ಸಂಬಂಧಿಸಿದಂತೆ YouTube ಗೆ ಸೂಚನೆಯನ್ನು ನೀಡಬೇಕು. ಸ್ವಾಧೀನಪಡಿಸಿಕೊಂಡ 30 ದಿನಗಳಲ್ಲಿ ಸೂಚನೆ ನೀಡತಕ್ಕದ್ದು.
ಸಂಗೀತ ಪಾಲುದಾರರ ಹೋಸ್ಟ್ ಮಾಡುವಿಕೆ ನೀತಿ
ಸಂಗೀತವಲ್ಲದ ಕಂಟೆಂಟ್, ಖಾತೆಯಲ್ಲಿ ಅಸ್ತಿತ್ವದಲ್ಲಿರುವ ಸಂಗೀತದ ಸ್ವತ್ತುಗಳಿಗೆ ಗಣನೀಯವಾಗಿ ಸಂಬಂಧಿಸಿರಬೇಕು.
  • ಉದಾಹರಣೆಗೆ, ಕಲಾವಿದರ ಸಂದರ್ಶನಗಳನ್ನು ಗಣನೀಯವಾಗಿ ಸಂಬಂಧಿಸಿವೆ ಎಂದು ಪರಿಗಣಿಸಬಹುದು.
  • ಚಾನಲ್‌ಗಳನ್ನು ಲಿಂಕ್ ಮಾಡುವ ಸಾಮರ್ಥ್ಯದಂತಹ ಫೀಚರ್ ಆ್ಯಕ್ಸೆಸ್‌ನ ಸಂಭಾವ್ಯ ನಷ್ಟವನ್ನು ತಪ್ಪಿಸಲು ಸಂಗೀತವಲ್ಲದ ಕಂಟೆಂಟ್ ಅನ್ನು ಹೊಂದಿರುವ ಸಂಗೀತ ಪಾಲುದಾರರು ತಮ್ಮ ಪಾಲುದಾರ ವ್ಯವಸ್ಥಾಪಕರ ಜೊತೆಗೆ ಸಂಭವನೀಯ ಪರಿಹಾರಗಳ ಕುರಿತು ಚರ್ಚಿಸಬೇಕು.

Content ID ಕುರಿತಾದ ನೀತಿಗಳು

Content ID ಹೊಂದಾಣಿಕೆ ಸಿಸ್ಟಂಗೆ ಆ್ಯಕ್ಸೆಸ್ ಅನ್ನು ಹೊಂದಿರುವ ಪಾಲುದಾರರಿಗೆ ಈ ನೀತಿಗಳು ಅನ್ವಯವಾಗುತ್ತವೆ. ಸಹಾಯ ಕೇಂದ್ರದಲ್ಲಿ, Content ID ಗೆ ಅರ್ಹತೆ ಪಡೆಯುವ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬಹುದು.

Content ID ಗೆ ಅರ್ಹವಾದ ಕಂಟೆಂಟ್ ನೀತಿ
YouTube ನಲ್ಲಿ ನಿಮ್ಮ ಹಕ್ಕುಗಳನ್ನು ನಿರ್ವಹಿಸಲು Content ID ಹೊಂದಾಣಿಕೆ ಸಿಸ್ಟಂ ಪ್ರಬಲ ಸಾಧನವಾಗಿದೆ. ಅದರ ಸಂಕೀರ್ಣತೆ ಮತ್ತು ಸೂಕ್ಷ್ಮ ಸ್ವಭಾವದ ಕಾರಣ, ಕಂಟೆಂಟ್ ಅನ್ನು ಉಲ್ಲೇಖ ಎಂಬುದಾಗಿ ಬಳಸಲು ಕಂಟೆಂಟ್ ಕೆಲವು ಅವಶ್ಯಕತೆಗಳನ್ನು ಪೂರೈಸಬೇಕು. ಈ ಅವಶ್ಯಕತೆಗಳನ್ನು ಅನುಸರಿಸುವುದು ಮತ್ತು ನಿಮ್ಮ ಉಲ್ಲೇಖವು ನಿಮ್ಮ ಬೌದ್ಧಿಕ ಸ್ವತ್ತನ್ನು ಹೊಂದಿರುವ ವೀಡಿಯೊಗಳನ್ನು ಮಾತ್ರ ಕ್ಲೇಮ್ ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.

ನೀತಿಯ ಅಗತ್ಯತೆಗಳು

  • ನೀವು ಮಾಲೀಕತ್ವವನ್ನು ಕ್ಲೇಮ್ ಮಾಡುವ ಪ್ರದೇಶಗಳಿಗಾಗಿ ಉಲ್ಲೇಖಿತ ಫೈಲ್‌ನಲ್ಲಿರುವ ಸಾಮಗ್ರಿಗೆ ನೀವು ಪ್ರತ್ಯೇಕ ಹಕ್ಕುಗಳನ್ನು ಹೊಂದಿರಬೇಕು.
    • ಉಲ್ಲೇಖ ಎಂಬಂತೆ ಬಳಸಲು ಅನರ್ಹವಾಗಿರುವ ಕಂಟೆಂಟ್‌ನ ಉದಾಹರಣೆಗಳು:
      • ಪ್ರಮುಖ ಕ್ರೀಡಾಕೂಟದ ಈವೆಂಟ್‌ನ ಪ್ರಾದೇಶಿಕ ಪ್ರಸಾರಗಳಂತಹ ಥರ್ಡ್ ಪಾರ್ಟಿಯಿಂದ ಪ್ರತ್ಯೇಕವಲ್ಲದ ರೂಪದಲ್ಲಿ ಪರವಾನಗಿ ಪಡೆದ ಕಂಟೆಂಟ್.
      • ಕ್ರಿಯೇಟಿವ್ ಕಾಮನ್ಸ್ ಅಥವಾ ಅಂತಹುದೇ ಉಚಿತ/ಮುಕ್ತ ಪರವಾನಗಿಗಳ ಅಡಿಯಲ್ಲಿ ಬಿಡುಗಡೆ ಮಾಡಲಾದ ಕಂಟೆಂಟ್.
      • ಸಾರ್ವಜನಿಕ ಡೊಮೇನ್‌ನಲ್ಲಿರುವ ಫೂಟೇಜ್, ರೆಕಾರ್ಡಿಂಗ್‌ಗಳು ಅಥವಾ ಸಂಗೀತ ಸಂಯೋಜನೆಗಳು.
      • ನ್ಯಾಯಯುತ ಬಳಕೆಯ ತತ್ವಗಳ ಅಡಿಯಲ್ಲಿ ಬಳಸಲಾದ ಇತರ ಮೂಲಗಳಿಂದ ಪಡೆದ ಕ್ಲಿಪ್‌ಗಳು.
      • ಇತರ ಕಾರ್ಯಗಳಲ್ಲಿ ಸಂಯೋಜಿಸಲು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾದ ಅಥವಾ ಪರವಾನಗಿ ನೀಡಲಾದ ನಿರ್ಮಾಣ ಸಂಗೀತದಂತಹ ಕಂಟೆಂಟ್.

ಈ ಅವಶ್ಯಕತೆಯು ನಿಮ್ಮ ಉಲ್ಲೇಖಿತ ಆಡಿಯೋ ಮತ್ತು ವಿಷುವಲ್ ಅಂಶಗಳೆರಡಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ, ನಿಮ್ಮ ಆಡಿಯೋವಿಷುವಲ್ ಉಲ್ಲೇಖವು ಪರವಾನಗಿ ಪಡೆಯದ ಥರ್ಡ್ ಪಾರ್ಟಿಯ ಆಡಿಯೋವನ್ನು ಹೊಂದಿದ್ದರೆ, ಆ ಕಂಟೆಂಟ್ ಅನ್ನು ಡೆಲಿವರಿ ಮಾಡುವ ಮೊದಲು ತೆಗೆದುಹಾಕಬೇಕು.

  • ನಿಖರವಾದ ಹೊಂದಾಣಿಕೆಯನ್ನು ಅನುಮತಿಸಲು ಎಲ್ಲಾ ಉಲ್ಲೇಖಿತ ಫೈಲ್‌ಗಳು ಸಾಕಷ್ಟು ವಿಭಿನ್ನವಾಗಿರಬೇಕು.
    • ಉಲ್ಲೇಖ ಎಂಬಂತೆ ಬಳಸಲು ಅನರ್ಹವಾಗಿರುವ ಕಂಟೆಂಟ್‌ನ ಉದಾಹರಣೆಗಳು:
      • ಕ್ಯಾರಿಯೋಕಿ ರೆಕಾರ್ಡಿಂಗ್‌ಗಳು, ರೀಮಾಸ್ಟರ್‌ಗಳು ಮತ್ತು ಒಂದೇ ರೀತಿ ಧ್ವನಿಸುವ ರೆಕಾರ್ಡಿಂಗ್‌ಗಳು.
      • ಸೌಂಡ್‌ ಎಫೆಕ್ಟ್‌ಗಳು, ಸೌಂಡ್‌ಬೆಡ್‌ಗಳು ಅಥವಾ ಪ್ರೊಡಕ್ಷನ್ ಲೂಪ್‌ಗಳು.
      • ಸಾರ್ವಜನಿಕ ಡೊಮೇನ್ ಅಥವಾ ಥರ್ಡ್ ಪಾರ್ಟಿ ಕಂಟೆಂಟ್‌ನ ಇತರ ಸೌಂಡ್ ರೆಕಾರ್ಡಿಂಗ್‌ಗಳಂತೆಯೇ ಇರುವ ಸೌಂಡ್ ರೆಕಾರ್ಡಿಂಗ್‌ಗಳು, ಉದಾಹರಣೆಗೆ ಶಾಸ್ತ್ರೀಯ ಸಂಗೀತ ಅಥವಾ ಕೆಲವು ರೀಮಿಕ್ಸ್‌ಗಳು.
  • ಎಲ್ಲಾ ಉಲ್ಲೇಖಿತ ಫೈಲ್‌ಗಳು ಪ್ರತ್ಯೇಕ ಬೌದ್ಧಿಕ ಸ್ವತ್ತನ್ನು ಪ್ರತಿನಿಧಿಸಬೇಕು.
    • ಉಲ್ಲೇಖ ಎಂಬಂತೆ ಬಳಸಲು ಅನರ್ಹವಾಗಿರುವ ಕಂಟೆಂಟ್‌ನ ಉದಾಹರಣೆಗಳು:
      • ಹಾಡುಗಳ ಸಂಕಲನಗಳು ಅಥವಾ ಕಿರು ರೂಪದ ವೀಡಿಯೊ ಕಂಟೆಂಟ್.
      • ಮ್ಯಾಶಪ್‌ಗಳು ಅಥವಾ ನಿರಂತರ DJ ಮಿಕ್ಸ್‌ಗಳು.
      • ಕೌಂಟ್‌ಡೌನ್ ಪಟ್ಟಿಗಳು ಅಥವಾ ಪೂರ್ಣ ಆಲ್ಬಮ್ ಸೌಂಡ್ ರೆಕಾರ್ಡಿಂಗ್‌ಗಳು.
  • ಕಂಟೆಂಟ್‌ ಅನ್ನು ಮಾನಿಟೈಸ್ ಮಾಡಲು ಬಳಸಲಾಗುವ ಎಲ್ಲಾ ಉಲ್ಲೇಖ ಫೈಲ್‌ಗಳು YouTube ನ ಕಂಟೆಂಟ್ ನೀತಿಗಳನ್ನು ಅನುಸರಿಸಬೇಕು.

ವೀಡಿಯೊ ಗೇಮ್ ಕಂಟೆಂಟ್ ಮೇಲೆ ವಿಶೇಷ ನಿರ್ಬಂಧಗಳು

  • ವೀಡಿಯೊ ಗೇಮ್ ಪ್ರಕಾಶಕರು ಮಾತ್ರ ಗೇಮ್‌ಪ್ಲೇ ಫೂಟೇಜ್ ಅಥವಾ ವೀಡಿಯೊ ಗೇಮ್ ಮೂಲ ಸೌಂಡ್‌ಟ್ರ್ಯಾಕ್‌ಗಳನ್ನು (OST ಗಳು) ಹೊಂದಿರುವ ಉಲ್ಲೇಖಗಳನ್ನು ಡೆಲಿವರ್ ಮಾಡಬಹುದು. 
    • ಮೂಲ ವೀಡಿಯೊ ಗೇಮ್ ಸೌಂಡ್‌ಟ್ರ್ಯಾಕ್‌ಗಳನ್ನು ನಿರ್ದಿಷ್ಟವಾಗಿ ವೀಡಿಯೊ ಗೇಮ್‌ಗಾಗಿ ರಚಿಸಲಾದ ಸೌಂಡ್ ರೆಕಾರ್ಡಿಂಗ್‌ಗಳು ಎಂದು ವ್ಯಾಖ್ಯಾನಿಸಲಾಗುತ್ತದೆ ಹೊರತು ಗೇಮ್‌ನಲ್ಲಿ ಸೇರಿಸಲು ಪರವಾನಗಿ ಪಡೆದ ಟ್ರ್ಯಾಕ್‌ಗಳು ಎಂದಲ್ಲ.
    • ಈ ನೀತಿಯು ಲೈವ್ ಸ್ಟ್ರೀಮ್ ಮಾಡಿದ ವೀಡಿಯೊ ಗೇಮ್ ಕಂಟೆಂಟ್‌ನ VOD ಗಳನ್ನು ಒಳಗೊಂಡಿದೆ. 
      • ಈ ಕಂಟೆಂಟ್ ಅನ್ನು ರಕ್ಷಿಸಲು Copyright Match Tool ಅಥವಾ ಹಸ್ತಚಾಲಿತವಾಗಿ ಕ್ಲೇಮ್ ಮಾಡುವ ವಿಧಾನವನ್ನು ಬಳಸಿ.
  • ವೀಡಿಯೊ ಗೇಮ್ OST ಗಳ ಕವರ್‌ಗಳಿಗಾಗಿ ಎಲ್ಲಾ ಸೌಂಡ್ ರೆಕಾರ್ಡಿಂಗ್ ಸ್ವತ್ತುಗಳು 'ಪರಿಶೀಲನೆಗೆ ನಿರ್ದೇಶಿಸಿ' ನೀತಿಯನ್ನು ಬಳಸಬೇಕು.
    • ಈ ಸ್ವತ್ತುಗಳ ಸಂದರ್ಭದಲ್ಲಿ, ಎಂಬೆಡೆಡ್ ಸಂಯೋಜನೆಗಳಿಗೆ ಮೆಲೋಡಿಯ ಹೊಂದಾಣಿಕೆಯು ವೀಡಿಯೊ ಗೇಮ್ ಪ್ರಕಾಶಕರ ಇಚ್ಛೆಗೆ ವಿರುದ್ಧವಾದ ಅನೇಕ ಅನುಚಿತ ಕ್ಲೇಮ್‌ಗಳನ್ನು ಉಂಟುಮಾಡಬಹುದು.
Content ID ಉಲ್ಲೇಖ ಡೆಲಿವರಿ ನೀತಿ
ಕಂಟೆಂಟ್ ಮ್ಯಾನೇಜರ್‌ಗಳು Content ID ಹೊಂದಾಣಿಕೆಗೆ ಸೂಕ್ತವಾದ ಉಲ್ಲೇಖ ಫೈಲ್‌ಗಳನ್ನು ಮಾತ್ರ ಡೆಲಿವರ್ ಮಾಡಬೇಕು. ಅಮಾನ್ಯವಾದ ಉಲ್ಲೇಖಗಳು ರಚನೆಕಾರರಿಗೆ ಮತ್ತು YouTube ನ ಹಕ್ಕುಗಳ ನಿರ್ವಹಣೆ ಪರಿಸರ ವ್ಯವಸ್ಥೆಗೆ ಹಾನಿಕಾರಕವಾಗಿರುತ್ತವೆ. ಸಹಾಯ ಕೇಂದ್ರದಲ್ಲಿ, ನೀವು ಯಾವ ಕಂಟೆಂಟ್ Content ID ಗೆ ಅರ್ಹವಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.

ನೀತಿಯ ಅಗತ್ಯತೆಗಳು:

  • ಎಲ್ಲಾ ಕಂಟೆಂಟ್ ಮ್ಯಾನೇಜರ್‌ಗಳು ಅಮಾನ್ಯವಾದ Content ID ಉಲ್ಲೇಖಗಳನ್ನು ತಮ್ಮ ಕಂಟೆಂಟ್ ಮಾಲೀಕರ ಕ್ಯಾಟಲಾಗ್‌ನ < 1% ನಷ್ಟು ಕಾಪಾಡಿಕೊಳ್ಳಬೇಕು ಮತ್ತು 30 ದಿನಗಳ ಅವಧಿಯಲ್ಲಿ 500 ಅಮಾನ್ಯ ಉಲ್ಲೇಖಗಳನ್ನು ಮೀರಬಾರದು.
  • ಇದನ್ನು ಮೀರುವ ಕಂಟೆಂಟ್ ಮಾಲೀಕರ ಉಲ್ಲೇಖದ ಡೆಲಿವರಿಯನ್ನು ನಿಯಂತ್ರಿಸಲಾಗಬಹುದು ಅಥವಾ ನಿಷ್ಕ್ರಿಯಗೊಳಿಸಲಾಗಬಹುದು.
Content ID ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವುದಕ್ಕೆ ಸಂಬಂಧಿಸಿದ ನೀತಿ

ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವುದರ ಕುರಿತು

ಹಸ್ತಚಾಲಿತವಾಗಿ ಕ್ಲೇಮ್ ಮಾಡುವ ವಿಧಾನವು ಕಂಟೆಂಟ್ ಮ್ಯಾನೇಜರ್‌ಗಳು ತಮ್ಮ ಕಂಟೆಂಟ್ ಅನ್ನು ಒಳಗೊಂಡಿರುವ ವೀಡಿಯೊಗಳ ಮೇಲೆ ಹಸ್ತಚಾಲಿತವಾಗಿ ಕ್ಲೇಮ್‌ಗಳನ್ನು ಇರಿಸಲು ಸಾಧ್ಯವಾಗಿಸುವ ಫೀಚರ್ ಆಗಿದೆ. Content ID ಗೆ ಅರ್ಹವಾಗಿರುವ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ಕ್ಲೇಮ್ ಮಾಡಿರದೇ ಇದ್ದಾಗ ಕ್ಲೇಮಿಂಗ್‌ ಕವರೇಜ್‌ನಲ್ಲಿನ ಅಂತರವನ್ನು ಸರಿಪಡಿಸಲು ಮಾತ್ರ ಇದನ್ನು ಬಳಸಬೇಕು. ಒಂದು ಪ್ರಕಾರದ ಕಂಟೆಂಟ್ Content ID ಗೆ ಅರ್ಹತೆ ಹೊಂದಿಲ್ಲದಿದ್ದರೆ, ಅದನ್ನು ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವ ಮೂಲಕ ಕ್ಲೇಮ್‌ ಮಾಡಬಾರದು.


ಆಳವಾದ ಅಗತ್ಯತೆಯನ್ನು ಪ್ರದರ್ಶಿಸಿರುವ ಪಾಲುದಾರರಿಗೆ ಮಾತ್ರ ಹಸ್ತಚಾಲಿತವಾಗಿ ಕ್ಲೇಮ್ ಮಾಡುವ ಟೂಲ್‌ನ ಆ್ಯಕ್ಸೆಸ್ ನೀಡಲಾಗುತ್ತದೆ. YouTube ನ ನಾಲ್ಕು ಸ್ವಾತಂತ್ರ್ಯಗಳ ಜೊತೆಗೆ ಸ್ಥಿರವಾಗಿರುವ ಆರೋಗ್ಯಕರ, ನ್ಯಾಯೋಚಿತ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವುದು ಅದರ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಅವಶ್ಯಕತೆಗಳನ್ನು ಹೊಂದಿದೆ.

ನೀವು ಯಾವ ಕಂಟೆಂಟ್ ಅನ್ನು ಕ್ಲೇಮ್ ಮಾಡಬಹುದು ಎಂಬುದರ ಕುರಿತಾದ ನಿರ್ಬಂಧಗಳು

 ನಿರ್ಬಂಧ  ವಿವರಗಳು
ನೀವು ಪ್ರತ್ಯೇಕವಾಗಿ ಒಡೆತನ ಹೊಂದಿರುವ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಒಳಗೊಂಡಿರುವ ವೀಡಿಯೊಗಳನ್ನು ಮಾತ್ರ ಕ್ಲೇಮ್ ಮಾಡಿ. ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿರುವ ಕಂಟೆಂಟ್ ಅನ್ನು ಮಾತ್ರ ಕ್ಲೇಮ್ ಮಾಡಿ.

ನಿಮ್ಮ ಒಡೆತನದಲ್ಲಿಲ್ಲದ ಕಂಟೆಂಟ್ ಅನ್ನು (ಅಥವಾ ಕಂಟೆಂಟ್‌ನ ಕೆಲವು ಭಾಗಗಳನ್ನು) ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ.


ಸೆನ್ಸಾರ್‌ಶಿಪ್‌ಗಾಗಿ ಹಸ್ತಚಾಲಿತವಾಗಿ ಕ್ಲೇಮ್ ಮಾಡುವ ವಿಧಾನವನ್ನು ದುರುಪಯೋಗಪಡಿಸಿಕೊಳ್ಳುವುದು ಇತರ ಸಂಭವನೀಯ ದಂಡನೆಗಳ ಜೊತೆಗೆ ಫೀಚರ್ ಅನ್ನು ತಕ್ಷಣದಲ್ಲಿ ಅಥವಾ ಶಾಶ್ವತವಾಗಿ ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು.

Content ID ಹೊಂದಾಣಿಕೆಯ ಮೂಲಕ ಸಮರ್ಥವಾಗಿ ಕ್ಲೇಮ್ ಮಾಡಬಹುದಾದ ವ್ಯಾಪ್ತಿಯೊಳಗೆ ಮಾತ್ರ ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವ ವಿಧಾನವನ್ನು ಬಳಸಿ.
 
Content ID ಹೊಂದಾಣಿಕೆ ಸಿಸ್ಟಂ, ಅಪ್‌ಲೋಡ್ ಮಾಡಿದವರ ವೀಡಿಯೊ ಮತ್ತು ಪಾಲುದಾರರು ಒದಗಿಸಿದ ಉಲ್ಲೇಖದ ಕಂಟೆಂಟ್ ನಡುವಿನ ಆಡಿಯೋ, ವಿಷುವಲ್‌ ಮತ್ತು ಮೆಲೋಡಿ ಹೊಂದಾಣಿಕೆಗಳನ್ನು ಕ್ಲೇಮ್ ಮಾಡುವುದನ್ನು ಮಾತ್ರ ಬೆಂಬಲಿಸುತ್ತದೆ. ಎಲ್ಲಾ ಹಸ್ತಚಾಲಿತ ಕ್ಲೇಮ್‌ಗಳು ಈ ಮೂಲ ಕಾರ್ಯಚಟುವಟಿಕೆಯ ಅನುಸಾರವೇ ಇರಬೇಕು.

ಥಂಬ್‌ನೇಲ್ ಅಥವಾ ಸ್ಥಿರ ಚಿತ್ರವನ್ನು ಆಧರಿಸಿ ವೀಡಿಯೊಗಳನ್ನು ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ.


ಟ್ರೇಡ್‌ಮಾರ್ಕ್, ಗೌಪ್ಯತೆ ಅಥವಾ ಇತರ ಕೃತಿಸ್ವಾಮ್ಯ-ಅಲ್ಲದ ಸಮಸ್ಯೆಗಳನ್ನು ನಿರ್ವಹಿಸಲು ಹಸ್ತಚಾಲಿತ ಕ್ಲೇಮ್‌ಗಳನ್ನು ಬಳಸಬೇಡಿ. 

ಅಪ್‌ಲೋಡ್ ಮಾಡುವವರು ರಚಿಸಿದ, ಕೃತಿಸ್ವಾಮ್ಯಕ್ಕೊಳಪಟ್ಟ ಪಾತ್ರಗಳ ಚಿತ್ರಣಗಳಿರುವ ವೀಡಿಯೊಗಳನ್ನು ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ.

ಲೈವ್ ಈವೆಂಟ್‌ಗಳ (ಉದಾಹರಣೆಗೆ, ನಾಟಕಗಳು, ಹಾಸ್ಯ ಪ್ರದರ್ಶನಗಳು, ಅಥವಾ ಕ್ರೀಡೆಗಳು) ಫ್ಯಾನ್ ರೆಕಾರ್ಡಿಂಗ್‌ಗಳ ಹಕ್ಕುಗಳನ್ನು ನೀವು ಹೊಂದಿರದ ಹೊರತು ಅಥವಾ ನೀವು ಸಂಗೀತ ಸಂಯೋಜನೆಯನ್ನು ಕ್ಲೇಮ್ ಮಾಡುವ ಸಂಗೀತ ಪ್ರಕಾಶಕರಾಗಿರದ ಹೊರತು, ಅಂತಹ ರೆಕಾರ್ಡಿಂಗ್‌ಗಳನ್ನು ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ. 

Content ID ಯು ಸಂಗೀತ ಸಂಯೋಜನೆಗಳಿಗೆ ಸಂಬಂಧಿಸಿದ ಹಕ್ಕುಗಳ ನಿರ್ವಹಣೆಯನ್ನು ಮಾತ್ರ ಬೆಂಬಲಿಸುತ್ತದೆಯೇ ಹೊರತು ಇತರ ರೀತಿಯ ಲಿಖಿತ ಅಥವಾ ಸ್ಕ್ರಿಪ್ಟ್ ಮಾಡಿದ ಕೃತಿಗಳಿಗೆ ಸಂಬಂಧಿಸಿದ ನಿರ್ವಹಣೆಯನ್ನು ಬೆಂಬಲಿಸುವುದಿಲ್ಲ. 

ಇತರ ಬಳಕೆ ಪ್ರಕರಣಗಳಿಗಾಗಿ, ಕಾನೂನುರೀತ್ಯಾ ತೆಗೆದುಹಾಕುವಿಕೆ ವಿನಂತಿ ಅಥವಾ ಗೌಪ್ಯತಾ ದೂರನ್ನು ಸಲ್ಲಿಸುವಂತೆ ನಾವು ಶಿಫಾರಸು ಮಾಡುತ್ತೇವೆ.

ಸ್ವತ್ತಿನ ಮೂಲಕ ಪ್ರಸ್ತುತವಾಗಿ ಅಥವಾ ಹಿಂದೆ ಕ್ಲೇಮ್ ಮಾಡಲಾದ ವೀಡಿಯೊಗಳನ್ನು ಅದೇ ಕಂಟೆಂಟ್‌ಗಾಗಿ ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ. ಒಂದೇ ಕಂಟೆಂಟ್‌ಗಾಗಿ ಸಲ್ಲಿಸಲಾದ ಹಿಂದಿನ ಕ್ಲೇಮ್ ಅನ್ನು ಯಶಸ್ವಿಯಾಗಿ ವಿವಾದಿಸಿರುವ ವೀಡಿಯೊಗಳನ್ನು ಹಸ್ತಚಾಲಿತವಾಗಿ ಕ್ಲೇಮ್ ಮಾಡುವುದು ಈ ನೀತಿಯಲ್ಲಿ ಸೇರಿದೆ.

ಹಸ್ತಚಾಲಿತವಾಗಿ ನಕಲಿ, ಸಂಘರ್ಷಿಸುವ ಕ್ಲೇಮ್‌ಗಳನ್ನು ರಚಿಸುವುದನ್ನು, ನಮ್ಮ ವ್ಯವಸ್ಥೆಗಳನ್ನು ವಂಚಿಸುವುದಕ್ಕೆ ಸಂಬಂಧಿಸಿದ ನೀತಿಯ ತೀವ್ರವಾದ ಉಲ್ಲಂಘನೆ ಎಂಬುದಾಗಿ ಪರಿಗಣಿಸಬಹುದು. 
ವೀಡಿಯೊದಲ್ಲಿ ಅಸ್ತಿತ್ವದಲ್ಲಿರುವ ಕ್ಲೇಮ್‌ಗಳ ನಡುವೆ ಅಮಾನ್ಯವಾದ ಆದಾಯ ಹಂಚಿಕೆ ವ್ಯವಸ್ಥೆಯನ್ನು ರಚಿಸಲು ಹಸ್ತಚಾಲಿತ ಕ್ಲೇಮ್‌ಗಳನ್ನು ಬಳಸಬೇಡಿ. ಈ ನೀತಿಯ ಉಲ್ಲಂಘನೆಯನ್ನು ನಮ್ಮ ವ್ಯವಸ್ಥೆಗಳನ್ನು ವಂಚಿಸುವುದಕ್ಕೆ ಸಂಬಂಧಿಸಿದ ನೀತಿಯ ತೀವ್ರವಾದ ಉಲ್ಲಂಘನೆ ಎಂದು ಪರಿಗಣಿಸಲಾಗಬಹುದು.
ನಿಮ್ಮ ಮಾಲೀಕತ್ವವು ಇತರ ಸ್ವತ್ತುಗಳಲ್ಲಿ ಎಂಬೆಡ್ ಆಗಿದ್ದರೆ ಅಥವಾ ಆಗಬೇಕಿದ್ದರೆ, ವೀಡಿಯೊಗಳನ್ನು ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ. ನಿಮ್ಮ ಸಂಯೋಜನೆಯನ್ನು ಹೊಂದಿರುವ ಸೌಂಡ್ ರೆಕಾರ್ಡಿಂಗ್ ಸ್ವತ್ತಿನ ಮೂಲಕ ಈಗಾಗಲೇ ಕ್ಲೇಮ್ ಮಾಡಿದ್ದರೆ, ವೀಡಿಯೊದ ಸೆಗ್ಮೆಂಟ್‌ನ ಮೇಲೆ ಹಸ್ತಚಾಲಿತ ಸಂಯೋಜನೆ ಕ್ಲೇಮ್ ಅನ್ನು ಮಾಡಬೇಡಿ. ಸಾಧ್ಯವಾದಾಗಲೆಲ್ಲಾ ಸೌಂಡ್ ರೆಕಾರ್ಡಿಂಗ್‌ಗಳಲ್ಲಿ ಸಂಯೋಜನೆ ಮಾಲೀಕತ್ವವನ್ನು ಎಂಬೆಡ್ ಮಾಡಬೇಕು.

ನೀವು ಕಂಟೆಂಟ್ ಅನ್ನು ಹೇಗೆ ಕ್ಲೇಮ್ ಮಾಡುತ್ತೀರಿ ಎಂಬುದರ ಕುರಿತಾದ ನಿರ್ಬಂಧಗಳು

ನಿರ್ಬಂಧ ವಿವರಗಳು
ಹಸ್ತಚಾಲಿತ ಕ್ಲೇಮ್ ಅನ್ನು ಸಲ್ಲಿಸುವ ಮೊದಲು, ನೀವು ಕ್ಲೇಮ್ ಮಾಡುತ್ತಿರುವ ಕಂಟೆಂಟ್ ಅನ್ನು ಹಸ್ತಚಾಲಿತವಾಗಿ ಪರಿಶೀಲಿಸಬೇಕು.
 
ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವ ಪ್ರಕ್ರಿಯೆಯ ಆಟೋಮೇಷನ್ ಅನ್ನು ಅನುಮತಿಸಲಾಗುವುದಿಲ್ಲ. ಹಸ್ತಚಾಲಿತ ಕಾರ್ಯ ನೀತಿಯನ್ನು ನೋಡಿ.
ಹಸ್ತಚಾಲಿತ ಕ್ಲೇಮ್‌ಗಳನ್ನು ಮಾಡಲು ಬಳಸಲಾಗುವ ಎಲ್ಲಾ ಸ್ವತ್ತುಗಳು ನಿಖರವಾದ, ಮಾನವರು-ಓದಬಲ್ಲ ಮೆಟಾಡೇಟಾ ಮತ್ತು ಮಾನ್ಯವಾದ ಉಲ್ಲೇಖಿತ ಕಂಟೆಂಟ್‌ಗಳನ್ನು ಹೊಂದಿರಬೇಕು. ಕ್ಲೇಮ್ ಮಾಡಲಾದ ಕಂಟೆಂಟ್‌ನ ಉಲ್ಲೇಖಿತ ವಿಷಯವು ಹೊಂದಾಣಿಕೆಗೆ ಸೂಕ್ತವಲ್ಲದಿದ್ದರೆ ಅಥವಾ ನಮ್ಮ ಉಲ್ಲೇಖ ನೀತಿಯಿಂದ ನಿಷೇಧಿಸಲ್ಪಟ್ಟಿದ್ದರೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗುತ್ತದೆ. 

ಈ ಸ್ವತ್ತುಗಳಿಗೆ ಉಲ್ಲೇಖಗಳ ಅಗತ್ಯವಿಲ್ಲದಿದ್ದರೂ, ಎಲ್ಲಾ ಕ್ಲೇಮ್‌ಗಳು ಒಂದೇ ರೀತಿಯ, ವಿಭಿನ್ನ ಕಂಟೆಂಟ್‌ಗಾಗಿ ಇರಬೇಕು ಮತ್ತು ಮೆಟಾಡೇಟಾದಿಂದ ನಿಖರವಾಗಿ ವಿವರಿಸಲ್ಪಟ್ಟಿರಬೇಕು. (ಉದಾ. 'ಬಕೆಟ್' ಅಥವಾ 'ಕ್ಯಾಚ್-ಆಲ್' ಸ್ವತ್ತುಗಳು ಇರಬಾರದು).

ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವುದರಲ್ಲಿ ಬಳಸಲಾದ ಸ್ವತ್ತುಗಳು ನಿಮ್ಮ ಮಾಲೀಕತ್ವದ ವ್ಯಾಪ್ತಿಯನ್ನು ನಿಖರವಾಗಿ ಪ್ರತಿಬಿಂಬಿಸಬೇಕು. ಉದಾಹರಣೆಗೆ, ನೀವು ಪರವಾನಗಿ ಪಡೆದ ಕಂಟೆಂಟ್‌ನ ಮರು-ಅಪ್‌ಲೋಡ್‌ಗಳನ್ನು ಕ್ಲೇಮ್‌ ಮಾಡುವ ಪ್ರಾದೇಶಿಕ ಪ್ರಸಾರಕರಾಗಿದ್ದರೆ, ನೀವು ಆ ಕಂಟೆಂಟ್‌ಗೆ ಸಂಬಂಧಿಸಿದ ಜಾಗತಿಕ ಹಕ್ಕುಗಳನ್ನು ಹೊಂದಿಲ್ಲದಿದ್ದರೆ, ಜಾಗತಿಕ ನಿರ್ಬಂಧದ ನೀತಿಯನ್ನು ವಿಧಿಸುವ ನಿಟ್ಟಿನಲ್ಲಿ ಹಸ್ತಚಾಲಿತವಾಗಿ ಕ್ಲೇಮ್‌ ಮಾಡುವುದನ್ನು ನೀವು ಬಳಸಲಾಗುವುದಿಲ್ಲ.

ಜೊತೆಗೆ, ಪರವಾನಗಿ ಪಡೆದ ಕಂಟೆಂಟ್ ಅನ್ನು ಒಂದು ಪ್ರದೇಶದಲ್ಲಿ ತೋರಿಸಲು ಪ್ರಸಾರಕರು ಹಕ್ಕುಗಳನ್ನು ಹೊಂದಿರಬಹುದು, ಆದರೆ ಇದರರ್ಥ ಆ ಪ್ರದೇಶದಲ್ಲಿ ಆ ಕಂಟೆಂಟ್ ಅನ್ನು ಒಳಗೊಂಡಿರುವ ವೀಡಿಯೊಗಳನ್ನು ಕ್ಲೇಮ್ ಮಾಡಲು ಅವರು ಯಾವಾಗಲೂ ಹಕ್ಕುಗಳನ್ನು ಹೊಂದಿರುತ್ತಾರೆ ಎಂದಲ್ಲ.
ಎಲ್ಲಾ ಹಸ್ತಚಾಲಿತ ಕ್ಲೇಮ್‌ಗಳು, ವೀಡಿಯೊದಲ್ಲಿ ಕ್ಲೇಮ್ ಮಾಡಿದ ಕಂಟೆಂಟ್ ಎಲ್ಲಿ ಅಸ್ತಿತ್ವದಲ್ಲಿದೆ ಎಂಬುದನ್ನು ಗುರುತಿಸುವ ನಿಖರವಾದ ಸಮಯಸ್ಟ್ಯಾಂಪ್‌ಗಳನ್ನು ಒಳಗೊಂಡಿರಬೇಕು. ಬೇರೆ ಬೇರೆ ಹೊಂದಾಣಿಕೆಯ ಸೆಗ್ಮೆಂಟ್‌ಗಳನ್ನು ಪ್ರತ್ಯೇಕ ಸಮಯಸ್ಟ್ಯಾಂಪ್‌ಗಳ ಮೂಲಕ ನಿರ್ದಿಷ್ಟಪಡಿಸಬೇಕು.

ಉದ್ದೇಶಪೂರ್ವಕವಾಗಿ ಅಥವಾ ಪದೇ ಪದೇ ತಪ್ಪುದಾರಿಗೆಳೆಯುವ ಸಮಯಸ್ಟ್ಯಾಂಪ್‌ಗಳನ್ನು ಒದಗಿಸುವುದನ್ನು ನಮ್ಮ ನೀತಿಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಬಹುದು.
YouTube ನ ಸಮುದಾಯ ಅಥವಾ ಬ್ರ್ಯಾಂಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು 'ಮಾನಿಟೈಸ್' ನೀತಿಯ ಮೂಲಕ ಹಸ್ತಚಾಲಿತವಾಗಿ ಕ್ಲೇಮ್ ಮಾಡಬೇಡಿ. ಇದನ್ನು ನಮ್ಮ ವ್ಯವಸ್ಥೆಗಳನ್ನು ವಂಚಿಸುವುದಕ್ಕೆ ಸಂಬಂಧಿಸಿದ ನೀತಿಯ ಉಲ್ಲಂಘನೆ ಎಂದು ಪರಿಗಣಿಸಲಾಗಬಹುದು. ಇಲ್ಲಿ ಇನ್ನಷ್ಟು ಓದಿ.
ವೀಡಿಯೊದ ಸಣ್ಣ ಭಾಗದಲ್ಲಿ ಮಾತ್ರ ಇರುವ ಆಡಿಯೋ ಕಂಟೆಂಟ್ ಮೇಲಿನ ಹಸ್ತಚಾಲಿತ ಕ್ಲೇಮ್‌ಗಳು ಬಹಳ ಸೀಮಿತ ಸಂದರ್ಭಗಳಲ್ಲಿ ಮಾತ್ರ ಮಾನಿಟೈಸ್ ನೀತಿಯನ್ನು ಬಳಸಬಹುದು. ಸಾಮಾನ್ಯವಾಗಿ, ಕ್ಲೇಮ್‌ ಮಾಡಲಾದ ಕಂಟೆಂಟ್ ಈ ಕೆಳಗಿನ ರೀತಿಯದ್ದಾಗಿರದ ಹೊರತು, ಆಡಿಯೋ ಕಂಟೆಂಟ್‌ನ ಸ್ವಲ್ಪ ಪ್ರಮಾಣದ ಬಳಕೆಗಳ ಮೇಲಿನ ಹಸ್ತಚಾಲಿತ ಕ್ಲೇಮ್‌ಗಳು ಬ್ಲಾಕ್ ಅಥವಾ ಟ್ರ್ಯಾಕ್ ನೀತಿಯನ್ನು ಮಾತ್ರ ಬಳಸಬಹುದು:
ವೀಡಿಯೊ ಕಂಪೈಲೇಶನ್, ಸಂಗೀತ ಕೌಂಟ್‌ಡೌನ್ ಅಥವಾ ಸಂಗೀತದ ಥೀಮ್‌ನ ಸವಾಲಿನ ಭಾಗವಾಗಿರದ ಹೊರತು.
  • ಚಾನಲ್ ಅನ್ನು ಬ್ರ್ಯಾಂಡ್ ಮಾಡಲು ಬಳಸಲಾಗುವ ಇಂಟ್ರೊ/ಔಟ್ರೊದ ಭಾಗವಾಗಿರದ ಹೊರತು.
  • ಈಗಾಗಲೇ ಮಾನಿಟೈಸ್ ನೀತಿಯೊಂದಿಗೆ ಅಸ್ತಿತ್ವದಲ್ಲಿರುವ, ಮಾನ್ಯವಾದ Content ID ಕ್ಲೇಮ್ ಹೊಂದಿರುವ ವೀಡಿಯೊದಲ್ಲಿರದ ಹೊರತು.
  • ಕ್ಲೇಮುದಾರರು ಪ್ರತಿನಿಧಿಸುವ ಅಧಿಕೃತ ಕಲಾವಿದರ ಚಾನಲ್‌ಗೆ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿರದ ಹೊರತು.
  • ವೀಡಿಯೊದ ಹೆಚ್ಚಿನ ಭಾಗವನ್ನು ರೂಪಿಸದ ಹೊರತು.
ಆಡಿಯೋ ಕಂಟೆಂಟ್‌ನ "ಉದ್ದೇಶಪೂರ್ವಕವಲ್ಲದ ಬಳಕೆ" ಮೇಲಿನ ಹಸ್ತಚಾಲಿತ ಕ್ಲೇಮ್‌ಗಳು 'ಮಾನಿಟೈಸ್' ನೀತಿಯನ್ನು ಬಳಸಬಾರದು, ಆದರೆ ನಿಮ್ಮ ಕಂಟೆಂಟ್‌ನ ಯಾವುದೇ ಬಳಕೆಯ ಮೇಲೆ ನೀವು ಸಾಮಾನ್ಯವಾಗಿ 'ಟ್ರ್ಯಾಕ್' ಅಥವಾ 'ಬ್ಲಾಕ್' ನೀತಿಯನ್ನು ಅನ್ವಯಿಸಬಹುದು. ಈ ನೀತಿಯ ಉದ್ದೇಶಗಳಿಗಾಗಿ, ನಾವು ಕೆಳಕಂಡ ರೀತಿಯ ಸಂದರ್ಭಗಳನ್ನು "ಉದ್ದೇಶಪೂರ್ವಕವಲ್ಲದ ಬಳಕೆ" ಎಂಬುದಾಗಿ ವ್ಯಾಖ್ಯಾನಿಸುತ್ತೇವೆ:
  • ಕಂಟೆಂಟ್ ಅನ್ನು ವೀಡಿಯೊಗೆ ರಚನೆಕಾರರು ಸೇರಿಸಿರಬಾರದು ಮತ್ತು
  • ರಚನೆಕಾರರು ಮತ್ತು ಕಂಟೆಂಟ್ ನಡುವೆ ಯಾವುದೇ ಪರಸ್ಪರ ಚಟುವಟಿಕೆಗಳಿರಬಾರದು.

“ಉದ್ದೇಶಪೂರ್ವಕವಲ್ಲದ ಬಳಕೆ” ಕುರಿತಾದ ಕೆಲವು ಉದಾಹರಣೆಗಳೆಂದರೆ:

  • ರಚನೆಕಾರರ ಮನೆ ಅಥವಾ ಕಚೇರಿಯ ಇನ್ನೊಂದು ಕೊಠಡಿಯಿಂದ ಕೇಳುವ ಟಿವಿಯ ಶಬ್ಧ.
  • ಹಾದುಹೋಗುವ ಕಾರಿನಿಂದ ಕೇಳಿಸುವ ಸಂಗೀತ.

ಬಳಕೆಯು ಉದ್ದೇಶಪೂರ್ವಕವಲ್ಲದ್ದು ಎಂದು ಪರಿಗಣಿಸಲಾಗದ ಸಂದರ್ಭದ ಉದಾಹರಣೆಗಳೆಂದರೆ:

  • ಸಂಗೀತದ ಜೊತೆಗೆ ಹಾಡುವುದು, ನೃತ್ಯ ಮಾಡುವುದು ಅಥವಾ ನುಡಿಸುವುದು.
  • ಪೋಸ್ಟ್-ಪ್ರೊಡಕ್ಷನ್ ಅಥವಾ ಎಡಿಟಿಂಗ್ ಸಾಫ್ಟ್‌ವೇರ್‌ನಲ್ಲಿ ಸೇರಿಸಲಾದ ಯಾವುದೇ ಕಂಟೆಂಟ್.
  • ರಚನೆಕಾರರು ಸಂಗೀತದ ಮೇಲೆ ನೇರ ನಿಯಂತ್ರಣ ಹೊಂದಿರುವ ಸ್ಥಳದಲ್ಲಿನ ಹಿನ್ನೆಲೆ ಸಂಗೀತ, ಅಥವಾ ಸಂಗೀತ ಕಚೇರಿಯಂತಹ ಸಂದರ್ಭದಲ್ಲಿನ ಆಡಿಯೋವನ್ನು ಸೆರೆಹಿಡಿಯುವುದು ವೀಡಿಯೊದ ಉದ್ದೇಶವಾಗಿರುವುದು.

Content ID ಮತ್ತು ವಿಮರ್ಶಾತ್ಮಕ ಕಂಟೆಂಟ್ ಅನ್ನು ಹಸ್ತಚಾಲಿತವಾಗಿ ನಿರ್ಬಂಧಿಸುವುದು

ವಿಮರ್ಶಾತ್ಮಕ ಕಂಟೆಂಟ್ ಅನ್ನು ನಿರ್ಬಂಧಿಸುವ ಉದ್ದೇಶಗಳಿಗಾಗಿ ಹಸ್ತಚಾಲಿತ Content ID ಕ್ರಮಗಳನ್ನು ಬಳಸಲು YouTube ನಲ್ಲಿ ಅನುಮತಿಸಲಾಗುವುದಿಲ್ಲ. Content ID ವ್ಯಾಪ್ತಿಯಲ್ಲಿ, ಈ ಕೆಳಗಿನ ರೀತಿಯ ಕಂಟೆಂಟ್ ಅನ್ನು ನಿರ್ಬಂಧಿಸುವುದಕ್ಕೆ ಕಾರಣವಾಗುವ ಹಸ್ತಚಾಲಿತ ಕ್ರಮಗಳನ್ನು ತೆಗೆದುಕೊಳ್ಳಬೇಡಿ: 1) ನಿಮ್ಮ ಅಥವಾ ನೀವು ಪ್ರತಿನಿಧಿಸುವ ಕ್ಲೈಂಟ್‌ಗಳ ಕುರಿತು ವಿಮರ್ಶಾತ್ಮಕವಾಗಿರುವಂತದ್ದು ಮತ್ತು 2) ನಿಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯ ಆಯ್ದ ಭಾಗಗಳನ್ನು ಒಳಗೊಂಡಿರುವಂತಿದ್ದು.
  • “ವಿಮರ್ಶಾತ್ಮಕ” ಎಂದರೆ ಕಂಟೆಂಟ್ ಅನ್ನು ಬಳಸುವ ಉದ್ದೇಶವು ಕಂಟೆಂಟ್ ಅನ್ನು ವಿಮರ್ಶಿಸುವುದು ಮತ್ತು/ಅಥವಾ ಕಂಟೆಂಟ್, ಅದರ ವಿಷಯಗಳು, ಅದರ ರಚನೆಕಾರರು ಅಥವಾ ಅದರ ಹಕ್ಕುದಾರರನ್ನು ನಕಾರಾತ್ಮಕವಾಗಿ ಅಥವಾ ಪ್ರಶಂಸೆಯಲ್ಲದ ರೀತಿಯಲ್ಲಿ ಚಿತ್ರಿಸುವುದು ಆಗಿರುತ್ತದೆ.
  • "ಹಸ್ತಚಾಲಿತ ಕ್ರಮ" ಎಂಬುದು ಹಸ್ತಚಾಲಿತ ಕ್ಲೇಮ್ ಅನ್ನು ಅನ್ವಯಿಸುವುದು ಅಥವಾ ಅಸ್ತಿತ್ವದಲ್ಲಿರುವ ಕ್ಲೇಮ್‌ನ ನೀತಿಯನ್ನು ಬ್ಲಾಕ್‌ಗೆ ಬದಲಾಯಿಸುವುದನ್ನು ಒಳಗೊಂಡಿರುತ್ತದೆ, ಆದರೆ ಇವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ.
  • ಕಂಟೆಂಟ್ ನಿಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯನ್ನು ಉಲ್ಲಂಘಿಸಿದೆ ಎಂದು ನೀವು ಭಾವಿಸಿದರೆ, DMCA ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿ.
  • ನಿಮ್ಮ DMCA ತೆಗೆದುಹಾಕುವಿಕೆ ವಿನಂತಿಯನ್ನು ತಿರಸ್ಕರಿಸಲಾದರೂ ಸಹ ಕಂಟೆಂಟ್ ಅನ್ನು ಕ್ಲೇಮ್ ಮಾಡಲು ಯಾವುದೇ ಹಸ್ತಚಾಲಿತ ಕ್ರಮಗಳನ್ನು ತೆಗೆದುಕೊಳ್ಳಲು ನಿಮಗೆ ಅನುಮತಿಸಲಾಗುವುದಿಲ್ಲ. ಇದು ಹಸ್ತಚಾಲಿತ ಕ್ಲೇಮ್ ಅನ್ನು ಸೇರಿಸುವುದು ಮತ್ತು ಕಂಟೆಂಟ್‌ನ ಮೇಲೆ ಬ್ಲಾಕ್ ನೀತಿಯನ್ನು ವಿಧಿಸುವುದನ್ನು ಒಳಗೊಂಡಿರುತ್ತದೆ, ಆದರೆ ಇವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ.
Content ID ಮತ್ತು ರಾಜಕೀಯ ಸೆನ್ಸಾರ್‌ಶಿಪ್
ನೀವು ಹಕ್ಕುಗಳನ್ನು ಹೊಂದಿರದ ರಾಜಕೀಯ ಸಂಬಂಧಿತ ಕಂಟೆಂಟ್‌ಗಳನ್ನು ನಿರ್ಬಂಧಿಸಲು Content ID ಅನ್ನು ಬಳಸುವ ಕಾರ್ಯವು ವಿಶೇಷವಾದ, ತೀವ್ರವಾದ ಉಲ್ಲಂಘನೆಯಾಗಿದೆ ಮತ್ತು YouTube ನಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಹಾಗೆ ಮಾಡಲು ಪ್ರಯತ್ನಿಸಿದರೆ, ಕಂಟೆಂಟ್ ಮ್ಯಾನೇಜರ್‌ಗಳ ಸಂಪೂರ್ಣ ಕಂಟೆಂಟ್ ಮಾಲೀಕರ ಕುಟುಂಬವನ್ನು ಕೊನೆಗೊಳಿಸಲಾಗಬಹುದು.

ಸಮಸ್ಯೆಗಳನ್ನು ತಪ್ಪಿಸಲು ಕೆಲವು ಸಲಹೆಗಳು:

  • ನಿಮ್ಮ "ನಿರ್ಬಂಧನೆ ಮಾತ್ರ" ಕ್ಲೇಮ್‌ಗಳ ಮೇಲೆ ನಿಗಾವಹಿಸಿ ಮತ್ತು ನಿಮಗೆ ಸಿಗುವ ಯಾವುದೇ ಸಮಸ್ಯೆಗಳನ್ನು ನೇರವಾಗಿ ನಿಮ್ಮ ಪಾಲುದಾರ ವ್ಯವಸ್ಥಾಪಕರಿಗೆ ವರದಿ ಮಾಡಿ.
Content ID ಹಸ್ತಚಾಲಿತ ಕ್ರಮ ನೀತಿ
Content ID, ಕಂಟೆಂಟ್ ಮ್ಯಾನೇಜರ್‌ಗಳು ನಡೆಸುವ ಹಲವಾರು ಹಸ್ತಚಾಲಿತ ಪರಿಶೀಲನೆ ಕ್ರಮಗಳನ್ನು ಅವಲಂಬಿಸಿದೆ. ಈ ಕ್ರಮಗಳು ಇವುಗಳನ್ನು ಒಳಗೊಂಡಿರುತ್ತವೆ, ಆದರೆ ಇವುಗಳಿಗೆ ಸೀಮಿತವಾಗಿರುವುದಿಲ್ಲ:
  • ಸ್ವತ್ತುಗಳು ಮತ್ತು ಉಲ್ಲೇಖಿತ ವಿಷಯಗಳ ಅಸ್ಪಷ್ಟ ಮಾಲೀಕತ್ವವನ್ನು ಪರಿಹರಿಸುವುದು.
  • ಸಂಭಾವ್ಯ ಮತ್ತು ವಿವಾದಿತ ಕೃತಿಸ್ವಾಮ್ಯ ಕ್ಲೇಮ್‌ಗಳನ್ನು ಪರಿಶೀಲಿಸುವುದು.

ನೀತಿಯ ಅಗತ್ಯತೆಗಳು

  • ಹಸ್ತಚಾಲಿತ ಕ್ರಮಗಳಿಗೆ ಮಾನವ ವಿಮರ್ಶೆಯ ಅಗತ್ಯವಿರುತ್ತದೆ ಮತ್ತು ಅವುಗಳನ್ನು ಆಟೋಮೇಟ್ ಅಥವಾ ಸ್ಕ್ರಿಪ್ಟ್ ಮಾಡಲು ಆಗುವುದಿಲ್ಲ.
  • ಸಂಭಾವ್ಯ ಅಥವಾ ವಿವಾದಿತ ಕ್ಲೇಮ್‌ಗಳನ್ನು ದೃಢೀಕರಿಸುವಂತಹ ಎಲ್ಲಾ ಹಸ್ತಚಾಲಿತ ಕ್ರಮಗಳು:
    • ನಿಮ್ಮ ಮಾಲೀಕತ್ವದ ವ್ಯಾಪ್ತಿಯನ್ನು ನಿಖರವಾಗಿ ಪ್ರತಿಬಿಂಬಿಸಬೇಕು.
    • ಎಲ್ಲಾ ಸಂಬಂಧಿತ ಕಾನೂನುಗಳು ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು.
    • ಮಾನಿಟೈಸೇಶನ್ ಅರ್ಹತೆ ಅವಶ್ಯಕತೆಗಳಂತಹ YouTube ನ ಎಲ್ಲಾ ನೀತಿಗಳನ್ನು ಅನುಸರಿಸಬೇಕು.

ನಿರ್ಬಂಧಗಳು

  • Content ID ವ್ಯಾಪ್ತಿಯಲ್ಲಿ, ಈ ಕೆಳಗಿನ ರೀತಿಯ ಕಂಟೆಂಟ್ ಅನ್ನು ನಿರ್ಬಂಧಿಸುವುದಕ್ಕೆ ಕಾರಣವಾಗುವ ಹಸ್ತಚಾಲಿತ ಕ್ರಮಗಳನ್ನು ತೆಗೆದುಕೊಳ್ಳಬೇಡಿ: 1) ನಿಮ್ಮ ಅಥವಾ ನೀವು ಪ್ರತಿನಿಧಿಸುವ ಕ್ಲೈಂಟ್‌ಗಳ ಕುರಿತು ವಿಮರ್ಶಾತ್ಮಕವಾಗಿರುವಂತದ್ದು ಮತ್ತು 2) ನಿಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯ ಆಯ್ದ ಭಾಗಗಳನ್ನು ಒಳಗೊಂಡಿರುವಂತಿದ್ದು.
    • “ವಿಮರ್ಶಾತ್ಮಕ” ಎಂದರೆ ಕಂಟೆಂಟ್ ಅನ್ನು ಬಳಸುವ ಉದ್ದೇಶವು ಕಂಟೆಂಟ್ ಅನ್ನು ವಿಮರ್ಶಿಸುವುದು ಮತ್ತು/ಅಥವಾ ಕಂಟೆಂಟ್, ಅದರ ವಿಷಯಗಳು, ಅದರ ರಚನೆಕಾರರು ಅಥವಾ ಅದರ ಹಕ್ಕುದಾರರನ್ನು ನಕಾರಾತ್ಮಕವಾಗಿ ಅಥವಾ ಪ್ರಶಂಸೆಯಲ್ಲದ ರೀತಿಯಲ್ಲಿ ಚಿತ್ರಿಸುವುದು ಆಗಿರುತ್ತದೆ.
    • "ಹಸ್ತಚಾಲಿತ ಕ್ರಮ" ಎಂಬುದು ಹಸ್ತಚಾಲಿತ ಕ್ಲೇಮ್ ಅನ್ನು ಅನ್ವಯಿಸುವುದು ಅಥವಾ ಅಸ್ತಿತ್ವದಲ್ಲಿರುವ ಕ್ಲೇಮ್‌ನ ನೀತಿಯನ್ನು ಬ್ಲಾಕ್‌ಗೆ ಬದಲಾಯಿಸುವುದನ್ನು ಒಳಗೊಂಡಿರುತ್ತದೆ, ಆದರೆ ಇವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ.
    • ಕಂಟೆಂಟ್ ನಿಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, DMCA ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿ.
    • ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ವಿನಾಯಿತಿಗಳನ್ನು ಪರಿಗಣಿಸುವಂತೆ ಕೇಳಿ ನಿಮ್ಮ DMCA ತೆಗೆದುಹಾಕುವಿಕೆ ವಿನಂತಿಯನ್ನು ತಿರಸ್ಕರಿಸಲಾದರೂ ಸಹ ಕಂಟೆಂಟ್‌ನ ಮೇಲೆ ನಿರ್ಬಂಧ ಕ್ಲೇಮ್‌ಗಳನ್ನು ವಿಧಿಸುವ ಸಲುವಾಗಿ ಯಾವುದೇ ಹಸ್ತಚಾಲಿತ ಕ್ರಮಗಳನ್ನು ತೆಗೆದುಕೊಳ್ಳಲು ನಿಮಗೆ ಅನುಮತಿಸಲಾಗುವುದಿಲ್ಲ. ಇದು ಹಸ್ತಚಾಲಿತ ಕ್ಲೇಮ್ ಅನ್ನು ಸೇರಿಸುವುದು ಮತ್ತು ಕಂಟೆಂಟ್‌ನ ಮೇಲೆ ಬ್ಲಾಕ್ ನೀತಿಯನ್ನು ವಿಧಿಸುವುದನ್ನು ಒಳಗೊಂಡಿರುತ್ತದೆ, ಆದರೆ ಇವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ.
Content ID ಜವಾಬ್ದಾರಿಯುತ ಸ್ವತ್ತು ನಿರ್ವಹಣೆ ನೀತಿ
ತಪ್ಪಾದ, ಓದಲಾಗದ ಅಥವಾ ನಕಲಿ ಸ್ವತ್ತುಗಳು Content ID ಸಿಸ್ಟಂನಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಈ ಕಾರಣಕ್ಕಾಗಿ, ಕಂಟೆಂಟ್ ಮ್ಯಾನೇಜರ್‌ಗಳು ತಮ್ಮ ಮಾಲೀಕತ್ವದಲ್ಲಿರುವ ಸ್ವತ್ತುಗಳಿಗೆ ಸಂಬಂಧಿಸಿದಂತೆ ಉತ್ತಮ ವ್ಯವಸ್ಥಾಪಕತ್ವವನ್ನು ಅನುಸರಿಸಬೇಕೆಂದು YouTube ನಿರೀಕ್ಷಿಸುತ್ತದೆ. ಅದನ್ನು ಅನುಸರಿಸದ ಸಂದರ್ಭದಲ್ಲಿ, ಕಂಟೆಂಟ್ ಮ್ಯಾನೇಜರ್‌ಗಳಿಗೆ ಇರುವ CMS ಫೀಚರ್‌ಗಳ ಆ್ಯಕ್ಸೆಸ್ ನಿಷ್ಕ್ರಿಯಗೊಳ್ಳಬಹುದು ಅಥವಾ ಅವರು ಇತರ ದಂಡನೆಗಳನ್ನು ಎದುರಿಸಬೇಕಾಗಬಹುದು.

ನೀತಿಯ ಅಗತ್ಯತೆಗಳು

  • ಎಲ್ಲಾ ಸ್ವತ್ತುಗಳು ನಿಖರವಾದ, ಸ್ಥಿರವಾದ, ಮಾನವರು-ಓದಬಲ್ಲ ಮೆಟಾಡೇಟಾವನ್ನು ಹೊಂದಿರಬೇಕು.
    • ಯಾವ ಕಂಟೆಂಟ್ ಅನ್ನು ಕ್ಲೇಮ್ ಮಾಡಲಾಗುತ್ತಿದೆ ಮತ್ತು ಆ ಕಂಟೆಂಟ್‌ನ ಮಾಲೀಕರು ಯಾರು ಎಂಬುದು ಅಪ್‌ಲೋಡ್ ಮಾಡಿರುವವರಿಗೆ ಸ್ಪಷ್ಟವಾಗಿ ತಿಳಿಯಬೇಕು. ನೀವು ಸೇರಿಸಬೇಕಾದ ಮೆಟಾಡೇಟಾದ ಕನಿಷ್ಠ ಪ್ರಮಾಣವು ಕಂಟೆಂಟ್‌ನ ಪ್ರಕಾರವನ್ನು ಅವಲಂಬಿಸಿರುತ್ತದೆ:
      • ಸೌಂಡ್ ರೆಕಾರ್ಡಿಂಗ್ ಅಥವಾ ಸಂಗೀತ ವೀಡಿಯೊ: ISRC, ಶೀರ್ಷಿಕೆ, ಕಲಾವಿದರು ಮತ್ತು ರೆಕಾರ್ಡ್ ಲೇಬಲ್ ಅನ್ನು ಸೇರಿಸಿ.
      • ಸಂಗೀತ ಸಂಯೋಜನೆ: ಶೀರ್ಷಿಕೆ ಮತ್ತು ಬರಹಗಾರರನ್ನು ಸೇರಿಸಿ.
      • ಟಿವಿ ಎಪಿಸೋಡ್: ಕಾರ್ಯಕ್ರಮದ ಶೀರ್ಷಿಕೆ ಮತ್ತು ಎಪಿಸೋಡ್ ಶೀರ್ಷಿಕೆ ಅಥವಾ ಎಪಿಸೋಡ್ ಸಂಖ್ಯೆಯನ್ನು ಸೇರಿಸಿ.
      • ಚಲನಚಿತ್ರ: ಶೀರ್ಷಿಕೆ ಮತ್ತು ನಿರ್ದೇಶಕರನ್ನು ಸೇರಿಸಿ.
      • ಕ್ರೀಡಾ ಪ್ರಸಾರ: ಪ್ರತಿಸ್ಪರ್ಧಿ ಅಥವಾ ತಂಡದ ಹೆಸರುಗಳು ಮತ್ತು ಪಂದ್ಯದ ದಿನಾಂಕವನ್ನು ಸೇರಿಸಿ.
      • ಇತರ ವೆಬ್ ಸ್ವತ್ತುಗಳು: ಸಂಬಂಧಿತ ಉಲ್ಲೇಖದ ಕಂಟೆಂಟ್ ಕುರಿತು ನಿಖರವಾಗಿ ವಿವರಿಸಬೇಕು.
    • ಕಂಟೆಂಟ್ ಡೆಲಿವರಿ ಮತ್ತು ಆರ್ಟ್ ಟ್ರ್ಯಾಕ್ ರಚನೆಯ ಉದ್ದೇಶಗಳಿಗಾಗಿ ತಾವು ಸೇರಿಸುವ ಮೆಟಾಡೇಟಾದ ನಿಖರತೆಗೆ ಸಂಗೀತ ಪಾಲುದಾರರು ಜವಾಬ್ದಾರರಾಗಿರುತ್ತಾರೆ.
    • ನೀವು ಡೆಲಿವರ್ ಮಾಡುವ ಮೆಟಾಡೇಟಾ ನಮ್ಮ ಗುಣಮಟ್ಟದ ಮಾನದಂಡಗಳನ್ನು ಪೂರೈಸದಿದ್ದರೆ, ಕಂಟೆಂಟ್ ಡೆಲಿವರಿಯನ್ನು ನಿರ್ಬಂಧಿಸುವ ಅಥವಾ ನಿಯಂತ್ರಿಸುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ.
  • ಕಂಟೆಂಟ್ ಮ್ಯಾನೇಜರ್‌ಗಳು ಸೂಕ್ತವಾದ ಸ್ವತ್ತಿನ ಪ್ರಕಾರವನ್ನು ಬಳಸಬೇಕು.
    • ಉದಾಹರಣೆಗೆ, ಪಾಲುದಾರರು ಸಂಗೀತದ ಕಂಟೆಂಟ್‌ಗಾಗಿ ವೆಬ್ ಸ್ವತ್ತುಗಳನ್ನು ರಚಿಸಬಾರದು. ಸಂಗೀತ ಲೇಬಲ್ ರಚಿಸದ ಲೈವ್ ಪ್ರದರ್ಶನಗಳ ರೆಕಾರ್ಡಿಂಗ್‌ಗಳಿಗಾಗಿ ಸಂಗೀತ ವೀಡಿಯೊ ಸ್ವತ್ತುಗಳನ್ನು ಬಳಸಲು ಸಾಧ್ಯವಿಲ್ಲ.
  • Content ID ಸಿಸ್ಟಂನಲ್ಲಿ ಒಂದು ಕಂಟೆಂಟ್‌ಗಾಗಿ ಸ್ವತ್ತು ಈಗಾಗಲೇ ಅಸ್ತಿತ್ವದಲ್ಲಿದ್ದರೆ ಆ ಕಂಟೆಂಟ್‌ಗಾಗಿ ನಕಲಿ ಸ್ವತ್ತುಗಳನ್ನು ರಚಿಸಬೇಡಿ. 
    • ಹೊಸದನ್ನು ರಚಿಸುವ ಬದಲು, ಅಸ್ತಿತ್ವದಲ್ಲಿರುವ ಸ್ವತ್ತುಗಳಿಗೆ ನಿಮ್ಮ ಮಾಲೀಕತ್ವವನ್ನು ಸೇರಿಸಿ.
  • ನೀವು ನಿಜವಾಗಿಯೂ ಆ ಬೌದ್ಧಿಕ ಸ್ವತ್ತಿನ ಮಾಲೀಕತ್ವವನ್ನು ಹೊಂದಿಲ್ಲದಿದ್ದರೆ, ನಿಮ್ಮ ಮಾಲೀಕತ್ವವನ್ನು ಸ್ವತ್ತಿಗೆ ಸೇರಿಸಬೇಡಿ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13977282719593997421
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false