YouTube Analytics ಬೇಸಿಕ್‌ಗಳು

YouTube Studio ದಲ್ಲಿನ ಪ್ರಮುಖ ಮೆಟ್ರಿಕ್‌ಗಳು ಮತ್ತು ವರದಿಗಳ ಮೂಲಕ ನಿಮ್ಮ ವೀಡಿಯೊ ಮತ್ತು ಚಾನಲ್‌ನ ಪರ್ಫಾರ್ಮೆನ್ಸ್ ಅನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನೀವು ವಿಶ್ಲೇಷಣೆಗಳನ್ನು ಬಳಸಬಹುದು.

ಗಮನಿಸಿ: ಭೌಗೋಳಿಕ ಪ್ರದೇಶ, ಟ್ರಾಫಿಕ್ ಮೂಲಗಳು ಅಥವಾ ಲಿಂಗದಂತಹ ಕೆಲವು ಡೇಟಾ ಸೀಮಿತವಾಗಿರಬಹುದು. YouTube Analytics ನಲ್ಲಿನ ಸೀಮಿತ ಡೇಟಾದ ಕುರಿತು ಇನ್ನಷ್ಟು ತಿಳಿಯಿರಿ.

 

YouTube Studio ದಲ್ಲಿ Analytics

YouTube Analytics ಗೆ ಭೇಟಿ ನೀಡಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಬದಿಯ ಮೆನುವಿನಿಂದ, Analytics  ಎಂಬುದನ್ನು ಕ್ಲಿಕ್ ಮಾಡಿ.

ನೀವು ವೀಡಿಯೊ ಹಂತದಲ್ಲಿ ವಿವಿಧ ವರದಿಗಳನ್ನು ಸಹ ವೀಕ್ಷಿಸಬಹುದು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್  ಎಂಬುದನ್ನು ಆಯ್ಕೆಮಾಡಿ.
  3. ನಿಮ್ಮ ವೀಡಿಯೊಗೆ ಪಾಯಿಂಟ್ ಮಾಡಿ ಮತ್ತು Analytics ಎಂಬುದನ್ನು ಆಯ್ಕೆಮಾಡಿ.
ಸೂಚನೆ: ನಿರ್ದಿಷ್ಟ ಡೇಟಾವನ್ನು ಪಡೆಯಲು, ಕಾರ್ಯಕ್ಷಮತೆಯನ್ನು ಹೋಲಿಸಲು ಮತ್ತು ಡೇಟಾವನ್ನು ರಫ್ತು ಮಾಡಲು ವಿಸ್ತೃತ ವಿಶ್ಲೇಷಣೆಯ ವರದಿಯನ್ನು ವೀಕ್ಷಿಸಲು ನೀವು ಇನ್ನಷ್ಟು ವೀಕ್ಷಿಸಿ ಅಥವಾ ಸುಧಾರಿತ ಮೋಡ್ ಅನ್ನು ಕ್ಲಿಕ್ ಮಾಡಬಹುದು.

YouTube Analytics ನಲ್ಲಿನ ಟ್ಯಾಬ್‌ಗಳ ಕುರಿತು ತಿಳಿಯಿರಿ

YouTube Analytics ನಲ್ಲಿ, ನಿಮ್ಮ ಡೇಟಾವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ವಿವಿಧ ಟ್ಯಾಬ್‌ಗಳನ್ನು ನೀವು ಕಂಡುಕೊಳ್ಳಬಹುದು.

ಗಮನಿಸಿ: ಕೆಲವು ವರದಿಗಳು ಮೊಬೈಲ್ ಸಾಧನಗಳಲ್ಲಿ ಲಭ್ಯವಿಲ್ಲದಿರಬಹುದು.

ಅವಲೋಕನ

ಅವಲೋಕನ ಟ್ಯಾಬ್ ನಿಮ್ಮ ಚಾನಲ್ ಮತ್ತು ವೀಡಿಯೊಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಸಾರಾಂಶವನ್ನು ನಿಮಗೆ ತೋರಿಸುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್ ನಿಮ್ಮ ವೀಕ್ಷಣೆಗಳು, ವೀಕ್ಷಣೆ ಸಮಯ, ಸಬ್‌ಸ್ಕ್ರೈಬರ್‌ಗಳು ಮತ್ತು ಅಂದಾಜು ಆದಾಯವನ್ನು (ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ) ತೋರಿಸುತ್ತದೆ.

ಗಮನಿಸಿ: ನಿಮ್ಮ ಸಾಮಾನ್ಯ ಕಾರ್ಯಕ್ಷಮತೆಗೆ ಮಾಡಿರುವ ಹೋಲಿಕೆಗಳನ್ನು ತೋರಿಸುವ ವೈಯಕ್ತಿಕಗೊಳಿಸಿದ ಅವಲೋಕನ ವರದಿಗಳನ್ನು ನೀವು ಪಡೆಯಬಹುದು. ನಿಮ್ಮ ವೀಕ್ಷಣೆಗಳು ಸಾಮಾನ್ಯಕ್ಕಿಂತ ಏಕೆ ಹೆಚ್ಚಿರಬಹುದು ಅಥವಾ ಕಡಿಮೆಯಾಗಿರಬಹುದು ಎಂಬುದನ್ನು ಈ ಒಳನೋಟಗಳು ವಿವರಿಸುತ್ತವೆ. ಈ ಟ್ಯಾಬ್‌ನಲ್ಲಿ, ನೀವು ಇವುಗಳಿಗೆ ಸಂಬಂಧಿಸಿದ ವರದಿಗಳನ್ನು ಸಹ ಪಡೆಯುತ್ತೀರಿ:

  • ಸಾಮಾನ್ಯ ಕಾರ್ಯಕ್ಷಮತೆ: ಚಾನಲ್ ಹಂತದಲ್ಲಿ, ಇದು ನಿಮ್ಮ ಚಾನಲ್‌ನ ಸಾಮಾನ್ಯ ಕಾರ್ಯಕ್ಷಮತೆಯ ಹೋಲಿಕೆಯಾಗಿದೆ. ವೀಡಿಯೊ ಹಂತದಲ್ಲಿ, ಇದು ನಿಮ್ಮ ವೀಡಿಯೊದ ಸಾಮಾನ್ಯ ಕಾರ್ಯಕ್ಷಮತೆಯ ಹೋಲಿಕೆಯಾಗಿದೆ.
  • ಈ ಅವಧಿಯಲ್ಲಿನ ನಿಮ್ಮ ಟಾಪ್ ಕಂಟೆಂಟ್: ನಿಮ್ಮ ಕಂಟೆಂಟ್ ಅನ್ನು ಕಳೆದ 28 ದಿನಗಳಲ್ಲಿನ ವೀಕ್ಷಣೆಗಳ ಪ್ರಕಾರವಾಗಿ ಶ್ರೇಣೀಕರಿಸಲಾಗಿದೆ.
  • ನೈಜ ಸಮಯ: ಕಳೆದ 48 ಗಂಟೆಗಳು ಅಥವಾ 60 ನಿಮಿಷಗಳಲ್ಲಿನ ನಿಮ್ಮ ಕಾರ್ಯಕ್ಷಮತೆ.
  • ಟಾಪ್ ರೀಮಿಕ್ಸ್ ಮಾಡಿರುವುದು: Shorts ರಚಿಸಲು ಬಳಸಲಾಗಿರುವ ನಿಮ್ಮ ಕಂಟೆಂಟ್. ಈ ವರದಿಯು ನಿಮ್ಮ ಕಂಟೆಂಟ್ ಅನ್ನು ಎಷ್ಟು ಬಾರಿ ರೀಮಿಕ್ಸ್ ಮಾಡಲಾಗಿದೆ ಮತ್ತು ರೀಮಿಕ್ಸ್ ವೀಕ್ಷಣೆಗಳ ಸಂಖ್ಯೆಯನ್ನು ತೋರಿಸುತ್ತದೆ.

ಗಮನಿಸಿ: ವೀಡಿಯೊ ಹಂತದಲ್ಲಿ, ನಿಮ್ಮ ನೈಜ ಸಮಯದ ವರದಿಗಾಗಿ ಮತ್ತು ಪ್ರೇಕ್ಷಕರ ರಿಟೆನ್ಶನ್‍ಗಾಗಿ ಪ್ರಮುಖ ಕ್ಷಣಗಳನ್ನು ನೀವು ಕಂಡುಕೊಳ್ಳಬಹುದು.

ಕಂಟೆಂಟ್ (ಚಾನಲ್ ಹಂತ)

ಕಂಟೆಂಟ್ ಟ್ಯಾಬ್, ನಿಮ್ಮ ಪ್ರೇಕ್ಷಕರು ನಿಮ್ಮ ಕಂಟೆಂಟ್ ಅನ್ನು ಹೇಗೆ ಹುಡುಕುತ್ತಾರೆ ಮತ್ತು ಹೇಗೆ ಅದರ ಜೊತೆಗೆ ಸಂವಹಿಸುತ್ತಾರೆ ಮತ್ತು ನಿಮ್ಮ ಪ್ರೇಕ್ಷಕರು ಯಾವ ಕಂಟೆಂಟ್ ಅನ್ನು ವೀಕ್ಷಿಸುತ್ತಾರೆ ಎಂಬುದರ ಸಾರಾಂಶವನ್ನು ನೀಡುತ್ತದೆ. ನೀವು ಎಲ್ಲಾ, ವೀಡಿಯೊಗಳು, Shorts, ಲೈವ್ ಮತ್ತು ಪೋಸ್ಟ್‌ಗಳ ಟ್ಯಾಬ್‌ಗಳಲ್ಲಿ ಕೆಳಗಿನ ವ್ಯಾಪ್ತಿ ಮತ್ತು ತೊಡಗಿಸಿಕೊಳ್ಳುವಿಕೆಯ ವರದಿಗಳನ್ನು ವೀಕ್ಷಿಸಬಹುದು:

  • ವೀಕ್ಷಣೆಗಳು: ವೀಡಿಯೊಗಳು, Shorts ಮತ್ತು ಲೈವ್ ಸ್ಟ್ರೀಮ್‌ಗಳಿಗೆ ಸಂಬಂಧಿಸಿದ ನಿಮ್ಮ ಕಂಟೆಂಟ್‌ನ ಕಾನೂನುಬದ್ಧ ವೀಕ್ಷಣೆಗಳ ಸಂಖ್ಯೆ.
  • ಇಂಪ್ರೆಷನ್‌ಗಳು ಮತ್ತು ಅವುಗಳು ವೀಕ್ಷಣೆಯ ಸಮಯಕ್ಕೆ ಹೇಗೆ ಕಾರಣವಾಗಿವೆ:YouTube ನಲ್ಲಿ ಥಂಬ್‌ನೇಲ್ ಅನ್ನು ವೀಕ್ಷಕರಿಗೆ ಎಷ್ಟು ಬಾರಿ ತೋರಿಸಲಾಗಿದೆ (ಇಂಪ್ರೆಷನ್‌ಗಳು), ಆ ಥಂಬ್‌ನೇಲ್‌ಗಳು ಎಷ್ಟು ಬಾರಿ ವೀಕ್ಷಣೆಗೆ ಕಾರಣವಾಗಿವೆ (ಕ್ಲಿಕ್-ಥ್ರೂ-ರೇಟ್) ಮತ್ತು ಆ ವೀಕ್ಷಣೆಗಳು ಅಂತಿಮವಾಗಿ ವೀಕ್ಷಣೆಯ ಸಮಯಕ್ಕೆ ಹೇಗೆ ಕಾರಣವಾಗಿವೆ.
ಗಮನಿಸಿ: ಚಾನಲ್ ಇಂಪ್ರೆಷನ್‌ಗಳನ್ನು ಹೊಸ ಮತ್ತು ಹಿಂತಿರುಗುತ್ತಿರುವ ಬಳಕೆದಾರರಿಂದ ವಿಂಗಡಿಸಲಾಗಿದೆ.
  • ಪ್ರಕಟಿಸಿರುವ ಕಂಟೆಂಟ್: ನೀವು YouTube ನಲ್ಲಿ ಪ್ರಕಟಿಸಿರುವ ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು ಮತ್ತು ಪೋಸ್ಟ್‌ಗಳ ಸಂಖ್ಯೆ.
  • ಫಾರ್ಮ್ಯಾಟ್‌ಗಳಾದ್ಯಂತದ ವೀಕ್ಷಕರು: ಫಾರ್ಮ್ಯಾಟ್‌ (ವೀಡಿಯೊಗಳು, Shorts ಮತ್ತು ಲೈವ್) ಪ್ರಕಾರ ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸುತ್ತಿರುವ ವೀಕ್ಷಕರ ಬ್ರೇಕ್‌ಡೌನ್ ಮತ್ತು ಓವರ್‌ಲ್ಯಾಪ್.
  • ವೀಕ್ಷಕರು ನಿಮ್ಮ ಕಂಟೆಂಟ್/ವೀಡಿಯೊಗಳು/Shorts/ಲೈವ್ ಸ್ಟ್ರೀಮ್‌ಗಳನ್ನು ಹೇಗೆ ಕಂಡುಕೊಂಡಿದ್ದಾರೆ:ನಿಮ್ಮ ವೀಕ್ಷಕರು ನಿಮ್ಮ ಕಂಟೆಂಟ್ ಅನ್ನು ಹೇಗೆ ಹುಡುಕಿದ್ದಾರೆ.
  • ಸಬ್‌ಸ್ಕ್ರೈಬರ್‌ಗಳು: ನೀವು ಈ ಕೆಳಗಿನ ಪ್ರತಿಯೊಂದು ಕಂಟೆಂಟ್ ಪ್ರಕಾರದಿಂದ ಪಡೆದುಕೊಂಡ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ: ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು, ಪೋಸ್ಟ್‌ಗಳು ಮತ್ತು ಇತರೆ. “ಇತರೆ”, YouTube ಹುಡುಕಾಟ ಹಾಗೂ ನಿಮ್ಮ ಚಾನಲ್ ಪುಟದ ಸಬ್‌ಸ್ಕ್ರಿಪ್ಶನ್‌ಗಳನ್ನು ಒಳಗೊಂಡಿರುತ್ತದೆ.
  • ಕೀ ಮೆಟ್ರಿಕ್ಸ್ ಕಾರ್ಡ್:ನಿಮ್ಮ ವೀಕ್ಷಣೆಗಳು, ಸರಾಸರಿ ವೀಕ್ಷಣೆ ಅವಧಿ, ಇಂಪ್ರೆಷನ್‌ಗಳು ಹಾಗೂ ಇಂಪ್ರೆಷನ್‌ಗಳ ಕ್ಲಿಕ್-ಥ್ರೂ-ರೇಟ್, ಸಬ್‌ಸ್ಕ್ರೈಬರ್‌ಗಳು, ಲೈಕ್‌ಗಳು ಮತ್ತು ಹಂಚಿಕೆಗಳ ವಿಷುವಲ್ ಅವಲೋಕನ.
  • ಪ್ರೇಕ್ಷಕರ ರಿಟೆನ್ಶನ್‌ಗಾಗಿ ಪ್ರಮುಖ ಕ್ಷಣಗಳು: ನಿಮ್ಮ ವೀಡಿಯೊದಲ್ಲಿನ ವಿಭಿನ್ನ ಕ್ಷಣಗಳು ವೀಕ್ಷಕರ ಗಮನವನ್ನು ಹೇಗೆ ಸೆಳೆದಿವೆ. ಇಷ್ಟೇ ಅವಧಿಯ ನಿಮ್ಮ 10 ಇತ್ತೀಚಿನ ವೀಡಿಯೊಗಳನ್ನು ಹೋಲಿಸಲು ನೀವು ಸಾಮಾನ್ಯ ರಿಟೆನ್ಶನ್ ಅನ್ನು ಸಹ ಬಳಸಬಹುದು.
  • ಟಾಪ್ ವೀಡಿಯೊಗಳು/Shorts/ಪೋಸ್ಟ್‌ಗಳು:ನಿಮ್ಮ ಅತ್ಯಂತ ಜನಪ್ರಿಯ ವೀಡಿಯೊಗಳು, Shorts ಮತ್ತು ಪೋಸ್ಟ್‌ಗಳು.
  • ಫೀಡ್‌ನಲ್ಲಿ ತೋರಿಸಿರುವುದು: ನಿಮ್ಮ Short ಅನ್ನು Shorts ಫೀಡ್‌ನಲ್ಲಿ ಎಷ್ಟು ಬಾರಿ ತೋರಿಸಲಾಗಿದೆ ಎಂಬ ಮಾಹಿತಿ.
  • ವೀಕ್ಷಿಸಿರುವುದು (ವರ್ಸಸ್ ಬೇಡವೆಂದು ಸ್ವೈಪ್ ಮಾಡಿರುವುದು):ವೀಕ್ಷಕರು ನಿಮ್ಮ Shorts ಅನ್ನು ಎಷ್ಟು ಬಾರಿ ವೀಕ್ಷಿಸಿದರು ಎಂಬುದಕ್ಕೆ ವಿರುದ್ಧವಾಗಿ ಅದನ್ನು ಎಷ್ಟು ಬಾರಿ ಬೇಡವೆಂದು ಸ್ವೈಪ್ ಮಾಡಿದ್ದಾರೆ ಎಂಬುದರ ಶೇಕಡಾವಾರು.
  • ಟಾಪ್ ರೀಮಿಕ್ಸ್ ಮಾಡಿರುವುದು:ನಿಮ್ಮ ರೀಮಿಕ್ಸ್ ವೀಕ್ಷಣೆಗಳು, ಒಟ್ಟು ರೀಮಿಕ್ಸ್‌ಗಳು ಮತ್ತು ಟಾಪ್ ರೀಮಿಕ್ಸ್ ಮಾಡಲಾದ ಕಂಟೆಂಟ್‌ನ ವಿಷುವಲ್ ಅವಲೋಕನ.
  • ಪೋಸ್ಟ್ ಇಂಪ್ರೆಷನ್‌ಗಳು: ನಿಮ್ಮ ಪೋಸ್ಟ್ ಅನ್ನು ವೀಕ್ಷಕರಿಗೆ ಎಷ್ಟು ಬಾರಿ ತೋರಿಸಲಾಗಿದೆ ಎಂಬ ಮಾಹಿತಿ.
  • ಪ್ರತಿಕ್ರಿಯೆಗಳು: ಸ್ಟ್ರೀಮ್ ಸಮಯದಲ್ಲಿ ಸಂಭವಿಸಿದ ಪ್ರತಿಕ್ರಿಯೆಗಳ ಸಂಖ್ಯೆ ಮತ್ತು ಯಾವ ರೀತಿಯ ಪ್ರತಿಕ್ರಿಯೆಗಳು.

ರೀಚ್ (ವೀಡಿಯೊ ಮಟ್ಟ)

ರೀಚ್ ಟ್ಯಾಬ್, ನಿಮ್ಮ ಪ್ರೇಕ್ಷಕರು ನಿಮ್ಮ ಚಾನಲ್ ಅನ್ನು ಹೇಗೆ ಅನ್ವೇಷಿಸುತ್ತಿದ್ದಾರೆ ಎಂಬುದರ ಸಾರಾಂಶವನ್ನು ನೀಡುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್ ನಿಮ್ಮ ಇಂಪ್ರೆಷನ್‌ಗಳು, ಇಂಪ್ರೆಷನ್‌ಗಳ ಕ್ಲಿಕ್-ಥ್ರೂ-ರೇಟ್, ವೀಕ್ಷಣೆಗಳು ಮತ್ತು ಅನನ್ಯ ವೀಕ್ಷಕರನ್ನು ತೋರಿಸುತ್ತದೆ.
ಈ ಟ್ಯಾಬ್‌ನಲ್ಲಿ, ನೀವು ಇವುಗಳಿಗೆ ಸಂಬಂಧಿಸಿದ ವರದಿಗಳನ್ನು ಸಹ ಪಡೆಯುತ್ತೀರಿ:
  • ಟ್ರಾಫಿಕ್ ಮೂಲ ಪ್ರಕಾರಗಳು: ವೀಕ್ಷಕರು ನಿಮ್ಮ ಕಂಟೆಂಟ್ ಅನ್ನು ಹೇಗೆ ಕಂಡುಕೊಂಡಿದ್ದಾರೆ.
  • ಬಾಹ್ಯ: ನಿಮ್ಮ ಚಾನಲ್‌ನಿಂದ ವೀಡಿಯೊಗಳನ್ನು ಎಂಬೆಡ್ ಮಾಡುವ ಅಥವಾ ಲಿಂಕ್ ಮಾಡುವ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳ ಟ್ರಾಫಿಕ್.
  • ಸಲಹೆಯಾಗಿ ನೀಡಲಾದ ವೀಡಿಯೊಗಳು: ಇತರ ವೀಡಿಯೊಗಳ ಪಕ್ಕದಲ್ಲಿ ಅಥವಾ ನಂತರ ತೋರಿಸುವ ಸಲಹೆಗಳಿಗೆ ಮತ್ತು ವೀಡಿಯೊ ವಿವರಣೆಗಳಲ್ಲಿನ ಲಿಂಕ್‌ಗಳಿಗೆ ಸಂಬಂಧಿಸಿದ ಟ್ರಾಫಿಕ್. ಈ ವೀಡಿಯೊಗಳು ನಿಮ್ಮ ಸ್ವಂತ ವೀಡಿಯೊಗಳಾಗಿರಬಹುದು ಅಥವಾ ಬೇರೆಯವರದ್ದಾಗಿರಬಹುದು.
  • ಪ್ಲೇಪಟ್ಟಿಗಳು: ನಿಮ್ಮ ವೀಡಿಯೊಗಳನ್ನು ಒಳಗೊಂಡಿರುವ ಅತಿ ಹೆಚ್ಚು ವೀಕ್ಷಿಸಿದ ಪ್ಲೇಪಟ್ಟಿಗಳಿಗೆ ಸಂಬಂಧಿಸಿದ ಟ್ರಾಫಿಕ್.
  • ಇಂಪ್ರೆಷನ್‌ಗಳು ಮತ್ತು ಅವು ವೀಕ್ಷಣೆಯ ಸಮಯಕ್ಕೆ ಹೇಗೆ ಕಾರಣವಾಗಿವೆ: YouTube ನಲ್ಲಿ ನಿಮ್ಮ ವೀಡಿಯೊದ ಥಂಬ್‌ನೇಲ್‌ಗಳನ್ನು ವೀಕ್ಷಕರಿಗೆ ಎಷ್ಟು ಬಾರಿ ತೋರಿಸಲಾಗಿದೆ (ಇಂಪ್ರೆಷನ್‌ಗಳು), ಆ ಥಂಬ್‌ನೇಲ್‌ಗಳು ಎಷ್ಟು ಬಾರಿ ವೀಕ್ಷಣೆಗೆ ಕಾರಣವಾಗಿವೆ (ಕ್ಲಿಕ್-ಥ್ರೂ ರೇಟ್) ಮತ್ತು ಆ ವೀಕ್ಷಣೆಗಳು ಅಂತಿಮವಾಗಿ ವೀಕ್ಷಣೆಯ ಸಮಯಕ್ಕೆ ಹೇಗೆ ಕಾರಣವಾಗಿವೆ.
  • ಕಳುಹಿಸಲಾದ ಬೆಲ್ ನೋಟಿಫಿಕೇಶನ್‌ಗಳು: ನಿಮ್ಮ ಚಾನಲ್‌ನಿಂದ ನೋಟಿಫಿಕೇಶನ್‌ಗಳನ್ನು ಪಡೆಯುವ ಸಬ್‌ಸ್ಕ್ರೈಬರ್‌ಗಳಿಗೆ ಕಳುಹಿಸಲಾದ ಬೆಲ್ ನೋಟಿಫಿಕೇಶನ್‌ಗಳ ಸಂಖ್ಯೆ.
  • YouTube ಹುಡುಕಾಟ: ನಿಮ್ಮ ಕಂಟೆಂಟ್‌ಗೆ ವೀಕ್ಷಕರನ್ನು ಕರೆತಂದ ಹುಡುಕಾಟದ ಪದಗಳಿಗೆ ಸಂಬಂಧಿಸಿದ ಟ್ರಾಫಿಕ್.

ತೊಡಗಿಸಿಕೊಳ್ಳುವಿಕೆ (ವೀಡಿಯೊ ಹಂತ)

ತೊಡಗಿಸಿಕೊಳ್ಳುವಿಕೆ ಟ್ಯಾಬ್, ನಿಮ್ಮ ಪ್ರೇಕ್ಷಕರು ನಿಮ್ಮ ವೀಡಿಯೊಗಳನ್ನು ಎಷ್ಟು ಸಮಯದವರೆಗೆ ವೀಕ್ಷಿಸುತ್ತಿದ್ದಾರೆ ಎಂಬುದರ ಸಾರಾಂಶವನ್ನು ನಿಮಗೆ ನೀಡುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್ ನಿಮ್ಮ ವೀಕ್ಷಣೆಯ ಸಮಯ ಮತ್ತು ಸರಾಸರಿ ವೀಕ್ಷಣೆಯ ಅವಧಿಯನ್ನು ತೋರಿಸುತ್ತದೆ.
ಈ ಟ್ಯಾಬ್‌ನಲ್ಲಿ, ನೀವು ಇವುಗಳಿಗೆ ಸಂಬಂಧಿಸಿದ ವರದಿಗಳನ್ನು ಸಹ ಪಡೆಯುತ್ತೀರಿ:
  • ಪ್ರೇಕ್ಷಕರ ರಿಟೆನ್ಶನ್: ನಿಮ್ಮ ವೀಡಿಯೊದ ವಿಭಿನ್ನ ಕ್ಷಣಗಳು ವೀಕ್ಷಕರ ಗಮನವನ್ನು ಹೇಗೆ ಸೆಳೆದಿವೆ. ಇಷ್ಟೇ ಅವಧಿಯ ನಿಮ್ಮ 10 ಇತ್ತೀಚಿನ ವೀಡಿಯೊಗಳನ್ನು ಹೋಲಿಸಲು ನೀವು ಸಾಮಾನ್ಯ ರಿಟೆನ್ಶನ್ ಅನ್ನು ಸಹ ಬಳಸಬಹುದು.
  • ಲೈಕ್‌ಗಳು (ವರ್ಸಸ್ ಡಿಸ್‌ಲೈಕ್‌ಗಳು): ನಿಮ್ಮ ವೀಡಿಯೊದ ಬಗ್ಗೆ ವೀಕ್ಷಕರ ಅಭಿಪ್ರಾಯವೇನು.
  • ಮುಕ್ತಾಯ ಸ್ಕ್ರೀನ್ ಎಲಿಮೆಂಟ್ ಕ್ಲಿಕ್ ರೇಟ್: ನಿಮ್ಮ ವೀಕ್ಷಕರು ಮುಕ್ತಾಯ ಸ್ಕ್ರೀನ್ ಎಲಿಮೆಂಟ್ ಅನ್ನು ಎಷ್ಟು ಬಾರಿ ಕ್ಲಿಕ್ ಮಾಡಿದ್ದಾರೆ.
  • ಟಾಪ್ ಟ್ಯಾಗ್ ಮಾಡಿರುವ ಉತ್ಪನ್ನಗಳು: ಅತಿ ಹೆಚ್ಚು ತೊಡಗಿಸಿಕೊಳ್ಳುವಿಕೆಯನ್ನು ಸ್ವೀಕರಿಸಿರುವ ನಿಮ್ಮ ವೀಡಿಯೊದಲ್ಲಿ ನೀವು ಟ್ಯಾಗ್ ಮಾಡಿರುವ ಉತ್ಪನ್ನಗಳು.

ಪ್ರೇಕ್ಷಕರು

ಪ್ರೇಕ್ಷಕರು ಟ್ಯಾಬ್, ನಿಮ್ಮ ವೀಡಿಯೊಗಳನ್ನು ಯಾವ ರೀತಿಯ ವೀಕ್ಷಕರು ವೀಕ್ಷಿಸುತ್ತಿದ್ದಾರೆ ಎಂಬುದರ ಸಾರಾಂಶವನ್ನು ನೀಡುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್, ನಿಮ್ಮ ಮರಳಿ ಭೇಟಿ ನೀಡುತ್ತಿರುವ ಮತ್ತು ಹೊಸ ವೀಕ್ಷಕರು, ಅನನ್ಯ ವೀಕ್ಷಕರು ಹಾಗೂ ಸಬ್‌ಸ್ಕ್ರೈಬರ್‌ಗಳನ್ನು ತೋರಿಸುತ್ತದೆ.
ಈ ಟ್ಯಾಬ್‌ನಲ್ಲಿ, ನೀವು ಇವುಗಳಿಗೆ ಸಂಬಂಧಿಸಿದ ವರದಿಗಳನ್ನು ಸಹ ಪಡೆಯುತ್ತೀರಿ:
  • ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸುವ ವೀಡಿಯೊಗಳು: ನಿಮ್ಮ ಚಾನಲ್‌ನಾದ್ಯಂತ ನಿಮ್ಮ ಪ್ರೇಕ್ಷಕರ ಆನ್‌ಲೈನ್ ಚಟುವಟಿಕೆ. ಈ ಡೇಟಾ ಕಳೆದ 90 ದಿನಗಳಲ್ಲಿ ಎಲ್ಲಾ ಸಾಧನಗಳಾದ್ಯಂತದ ನಿಮ್ಮ ಹೊಸ ವೀಕ್ಷಕರನ್ನು ಆಧರಿಸಿದೆ.
  • ನಿಮ್ಮ ವೀಕ್ಷಕರು YouTube ನಲ್ಲಿದ್ದಾಗ: ನಿಮ್ಮ ಚಾನಲ್ ಮತ್ತು ಎಲ್ಲಾ YouTube ನಾದ್ಯಂತ ನಿಮ್ಮ ಪ್ರೇಕ್ಷಕರ ಆನ್‌ಲೈನ್ ಚಟುವಟಿಕೆ. ಈ ಡೇಟಾ, ಕಳೆದ 28 ದಿನಗಳಲ್ಲಿ ಎಲ್ಲಾ ಸಾಧನಗಳಾದ್ಯಂತದ ನಿಮ್ಮ ವೀಕ್ಷಕರನ್ನು ಆಧರಿಸಿದೆ.
  • ಸಬ್‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್‌ಗಳು: ನಿಮ್ಮ ಎಷ್ಟು ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್‌ನಿಂದ ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ. ಎಷ್ಟು ಜನ ತಮ್ಮ YouTube ಮತ್ತು ಸಾಧನದ ಸೆಟ್ಟಿಂಗ್‌ಗಳ ಆಧಾರದ ಮೇಲೆ ಆ ನೋಟಿಫಿಕೇಶನ್‌ಗಳನ್ನು ನಿಜವಾಗಿ ಪಡೆಯಬಹುದು ಎಂಬುದನ್ನು ಸಹ ಟ್ಯಾಬ್ ತೋರಿಸುತ್ತದೆ.
  • ಸಬ್‌ಸ್ಕ್ರೈಬರ್‌ಗಳ ವೀಕ್ಷಣೆ ಸಮಯ: ಸಬ್‌ಸ್ಕ್ರೈಬರ್ ಅಲ್ಲದವರು ಮತ್ತು ಸಬ್‌ಸ್ಕ್ರೈಬರ್‌ಗಳ ನಡುವೆ ವಿಂಗಡಿಸಲಾಗಿರುವ ನಿಮ್ಮ ಪ್ರೇಕ್ಷಕರ ವೀಕ್ಷಣೆಯ ಸಮಯ.
  • ವಯಸ್ಸು ಮತ್ತು ಲಿಂಗ: ವಯಸ್ಸು ಮತ್ತು ಲಿಂಗದ ಪ್ರಕಾರ ನಿಮ್ಮ ಪ್ರೇಕ್ಷಕರು. ಈ ಡೇಟಾ, ಎಲ್ಲಾ ಸಾಧನಗಳಾದ್ಯಂತ ಸೈನ್ ಇನ್ ಮಾಡಿರುವ ವೀಕ್ಷಕರನ್ನು ಆಧರಿಸಿದೆ.
  • ಜನಪ್ರಿಯ ಚಾನಲ್‌ಗಳು: YouTube ನಲ್ಲಿನ ಇತರ ಚಾನಲ್‌ಗಳಾದ್ಯಂತ ನಿಮ್ಮ ಪ್ರೇಕ್ಷಕರ ವೀಕ್ಷಣೆಯ ಚಟುವಟಿಕೆ. ಈ ಡೇಟಾ, ಕಳೆದ 28 ದಿನಗಳಲ್ಲಿ ಎಲ್ಲಾ ಸಾಧನಗಳಾದ್ಯಂತದ ನಿಮ್ಮ ವೀಕ್ಷಕರನ್ನು ಆಧರಿಸಿದೆ.
  • ನಿಮ್ಮ ಪ್ರೇಕ್ಷಕರು ಏನನ್ನು ವೀಕ್ಷಿಸುತ್ತಾರೆ: ನಿಮ್ಮ ಚಾನಲ್‌ನ ಹೊರಗೆ ನಿಮ್ಮ ಪ್ರೇಕ್ಷಕರ ವೀಕ್ಷಣೆಯ ಚಟುವಟಿಕೆ. ಸಾಕಷ್ಟು ಡೇಟಾ ಇದ್ದರೆ, ನೀವು ವೀಡಿಯೊಗಳು, Shorts ಮತ್ತು ಲೈವ್ ಪ್ರಕಾರ ಫಿಲ್ಟರ್ ಮಾಡಬಹುದು. ಈ ಡೇಟಾ ಕಳೆದ 7 ದಿನಗಳಲ್ಲಿ ಎಲ್ಲಾ ಸಾಧನಗಳಾದ್ಯಂತದ ನಿಮ್ಮ ವೀಕ್ಷಕರನ್ನು ಆಧರಿಸಿದೆ.
  • ಫಾರ್ಮ್ಯಾಟ್‌ಗಳಾದ್ಯಂತ ಹೊಸ ಮತ್ತು ಮರಳಿ ಭೇಟಿ ನೀಡುವ ಬಳಕೆದಾರರು: ಯಾವ ಫಾರ್ಮ್ಯಾಟ್ ಅತಿ ಹೆಚ್ಚು ಹೊಸ ವೀಕ್ಷಕರನ್ನು ಆಕರ್ಷಿಸುತ್ತದೆ ಎಂದು ಅರ್ಥಮಾಡಿಕೊಳ್ಳಲು ನೀವು ಇದನ್ನು ಬಳಸಬಹುದು. ಜೊತೆಗೆ, ನಿಮ್ಮ ಚಾನಲ್‌ಗೆ ವೀಕ್ಷಕರು ಮರಳಿ ಭೇಟಿ ನೀಡುವಂತೆ ಮಾಡುವಲ್ಲಿ ಯಾವ ಫಾರ್ಮ್ಯಾಟ್‌ನ ಪಾತ್ರ ಹೆಚ್ಚಿದೆ ಎಂಬುದನ್ನು ನೋಡಲು ನೀವು ಇದನ್ನು ಬಳಸಬಹುದು. 
  • ನಿಮ್ಮ ವೀಕ್ಷಕರು YouTube ನಲ್ಲಿ ವೀಕ್ಷಿಸುವ ಫಾರ್ಮ್ಯಾಟ್‌ಗಳು: ವೀಡಿಯೊ, Short ಮತ್ತು ಲೈವ್ ಸ್ಟ್ರೀಮ್ ಫಾರ್ಮ್ಯಾಟ್‌ಗಳಾದ್ಯಂತ ನಿಮ್ಮ ಪ್ರೇಕ್ಷಕರ ವೀಕ್ಷಣೆಯ ಚಟುವಟಿಕೆ. ಈ ಡೇಟಾ ಕಳೆದ 28 ದಿನಗಳಲ್ಲಿ ನಿಮ್ಮ ಚಾನಲ್ ಅನ್ನು ಅನೇಕ ಬಾರಿ ವೀಕ್ಷಿಸಿರುವ ವೀಕ್ಷಕರು ಇತರ ಚಾನಲ್‌ಗಳಲ್ಲಿ ಏನನ್ನು ವೀಕ್ಷಿಸುತ್ತಾರೆ ಎಂಬುದನ್ನು ಆಧರಿಸಿದೆ.
  • ಟಾಪ್ ಭೌಗೋಳಿಕ ಪ್ರದೇಶಗಳು: ಭೌಗೋಳಿಕ ಪ್ರದೇಶದ ಪ್ರಕಾರ ನಿಮ್ಮ ಪ್ರೇಕ್ಷಕರು. ಈ ಡೇಟಾ IP ವಿಳಾಸವನ್ನು ಆಧರಿಸಿದೆ.
  • ಟಾಪ್ ಸಬ್‌ಟೈಟಲ್/CC ಭಾಷೆಗಳು: ಸಬ್‌ಟೈಟಲ್‌ನ ಭಾಷೆಯ ಪ್ರಕಾರ ನಿಮ್ಮ ಪ್ರೇಕ್ಷಕರು. ಈ ಡೇಟಾ, ಸಬ್‌ಟೈಟಲ್‌ಗಳು/CC ಬಳಕೆಯನ್ನು ಆಧರಿಸಿದೆ.

ಗಮನಿಸಿ: ವೀಡಿಯೊ ಹಂತದಲ್ಲಿ, ಸಬ್‌ಸ್ಕ್ರೈಬರ್‌ಗಳು, ಟಾಪ್ ಭೌಗೋಳಿಕ ಪ್ರದೇಶಗಳು, ಟಾಪ್ ಸಬ್‌ಟೈಟಲ್/CC ಭಾಷೆಗಳು ಮತ್ತು ವಯಸ್ಸು ಹಾಗೂ ಲಿಂಗಕ್ಕೆ ಸಂಬಂಧಿಸಿದ ವೀಕ್ಷಣೆಯ ಸಮಯದ ವರದಿಗಳನ್ನು ನೀವು ಕಾಣಬಹುದು.

ಆದಾಯ

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ಆದಾಯ ಟ್ಯಾಬ್ YouTube ನಲ್ಲಿನ ನಿಮ್ಮ ಗಳಿಕೆಗಳನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್ ನಿಮ್ಮ ಅಂದಾಜು ಆದಾಯವನ್ನು ತೋರಿಸುತ್ತದೆ. ಅಂತಿಮಗೊಳಿಸಿದ ಗಳಿಕೆಗಳು ಸಾಮಾನ್ಯವಾಗಿ ಮುಂದಿನ ತಿಂಗಳ 7ನೇ ಮತ್ತು 12ನೇ ದಿನದ ನಡುವೆ ನಿಮ್ಮ ಪಾವತಿಗಳನ್ನು YouTube ಗಾಗಿ AdSense ಗೆ ಸೇರಿಸಿದ ನಂತರ, YouTube Analytics ನಲ್ಲಿ ಗೋಚರಿಸುತ್ತವೆ. YouTube ಗಾಗಿ AdSense ನ ಪಾವತಿ ಟೈಮ್‌ಲೈನ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
ಈ ಟ್ಯಾಬ್‌ನಲ್ಲಿ, ನೀವು ಇವುಗಳಿಗೆ ಸಂಬಂಧಿಸಿದ ವರದಿಗಳನ್ನು ಸಹ ಪಡೆಯುತ್ತೀರಿ:
  • ನೀವು ಎಷ್ಟು ಗಳಿಸುತ್ತಿದ್ದೀರಿ: ಕಳೆದ 6 ತಿಂಗಳುಗಳಲ್ಲಿ ನಿಮ್ಮ ಚಾನಲ್ ಎಷ್ಟು ಗಳಿಸಿದೆ, ತಿಂಗಳು ಪ್ರಕಾರ ವಿಭಜಿಸಲಾಗಿದೆ.
  • ನೀವು ಹೇಗೆ ಹಣ ಗಳಿಸುತ್ತೀರಿ: ನೀವು YouTube ಮೂಲಕ ಹೇಗೆ ಹಣ ಗಳಿಸುತ್ತಿದ್ದೀರಿ. ಆದಾಯ ಮೂಲಗಳ ಉದಾಹರಣೆಗಳಲ್ಲಿ ವೀಕ್ಷಣಾ ಪುಟದ ಆ್ಯಡ್‌ಗಳು, Shorts ಫೀಡ್ ಆ್ಯಡ್‌ಗಳು, ಸದಸ್ಯತ್ವಗಳು, Supers, ಕನೆಕ್ಟೆಡ್ ಸ್ಟೋರ್‌ಗಳು ಮತ್ತು ಶಾಪಿಂಗ್ ಅಫಿಲಿಯೇಟ್‌ಗಳು ಸೇರಿವೆ. YouTube Premium ಆದಾಯವನ್ನು ವೀಕ್ಷಣಾ ಪುಟದ ಆ್ಯಡ್‌ಗಳು ಅಥವಾ Shorts ಫೀಡ್ ಆ್ಯಡ್‌ಗಳ ಪುಟಗಳ ಅಡಿಯಲ್ಲಿ ತೋರಿಸಲಾಗುತ್ತದೆ.
  • ವೀಡಿಯೊದ ಪರ್ಫಾರ್ಮೆನ್ಸ್:  ಈ ಸಮಯಾವಧಿಯಲ್ಲಿ ನಿಮ್ಮ ವೀಡಿಯೊಗಳು, Shorts ಮತ್ತು ಲೈವ್ ಸ್ಟ್ರೀಮ್‌ಗಳು ಎಷ್ಟು ಹಣ ಗಳಿಸಿವೆ. ಈ ವರದಿಯು ಪ್ರತಿ ಸಾವಿರ ವೀಕ್ಷಣೆಗಳಿಗೆ ಆದಾಯವನ್ನು (RPM) ಒಳಗೊಂಡಿದೆ.
  • ಟಾಪ್ ಹಣ ಗಳಿಸುವ ಕಂಟೆಂಟ್: ಈ ಸಮಯಾವಧಿಯಲ್ಲಿ ಅತ್ಯಧಿಕ ಅಂದಾಜು ಆದಾಯವನ್ನು ಹೊಂದಿರುವ ಕಂಟೆಂಟ್.

ಗಮನಿಸಿ:

  • ತೆರಿಗೆ ತಡೆಹಿಡಿಯುವಿಕೆಯು ಅನ್ವಯಿಸಿದರೆ, ತೆರಿಗೆ ತಡೆಹಿಡಿಯುವಿಕೆಯು ನಿಮ್ಮ ಅಂತಿಮಗೊಳಿಸಿದ ಗಳಿಕೆಗಳ ಮೇಲೆ ಪರಿಣಾಮ ಬೀರಬಹುದು. ತಡೆಹಿಡಿಯಲಾದ ಮೊತ್ತವು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಮಾತ್ರ ಗೋಚರಿಸುತ್ತದೆ.
  • ವೀಡಿಯೊ ಹಂತದಲ್ಲಿ ನಿಮ್ಮ ಆದಾಯದ ಪರ್ಫಾರ್ಮೆನ್ಸ್ ಅನ್ನು ಸಹ ನೀವು ಕಂಡುಕೊಳ್ಳಬಹುದು.
  • ವೀಡಿಯೊ ಹಂತದಲ್ಲಿನ RPM ಕಾರ್ಡ್‌ನಲ್ಲಿ, ನಿಮ್ಮ ಆದಾಯವು ಒಟ್ಟು ಅಂದಾಜು ಆದಾಯಕ್ಕೆ ಸೇರಿಸದಿರಬಹುದು. ಏಕೆಂದರೆ ಕೆಲವು ಆದಾಯ ಮೂಲಗಳು ನಿರ್ದಿಷ್ಟ ವೀಡಿಯೊಗೆ ಕಾರಣವಾಗಿಲ್ಲ. ಉದಾಹರಣೆಗೆ, ಚಾನಲ್ ಸದಸ್ಯತ್ವಗಳು ನಿರ್ದಿಷ್ಟ ವೀಡಿಯೊಗೆ ಕಾರಣವಾಗುವುದಿಲ್ಲ.

ಸಂಶೋಧನೆ (ಚಾನಲ್ ಹಂತ)

ಸಂಶೋಧನೆ ಟ್ಯಾಬ್, YouTube ನಾದ್ಯಂತ ನಿಮ್ಮ ಪ್ರೇಕ್ಷಕರು ಮತ್ತು ವೀಕ್ಷಕರು ಏನನ್ನು ಹುಡುಕುತ್ತಿದ್ದಾರೆ ಎಂಬುದರ ಸಾರಾಂಶವನ್ನು ನಿಮಗೆ ನೀಡುತ್ತದೆ. ಸಂಶೋಧನೆ ಟ್ಯಾಬ್‌ನಲ್ಲಿನ ಒಳನೋಟಗಳು, ವೀಕ್ಷಕರು ವೀಕ್ಷಿಸಲು ಬಯಸಬಹುದಾದ ವೀಡಿಯೊಗಳು ಮತ್ತು Shorts ಗೆ ಸಂಬಂಧಪಟ್ಟ ಕಂಟೆಂಟ್ ಗ್ಯಾಪ್‌ಗಳು ಹಾಗೂ ವೀಡಿಯೊ ಐಡಿಯಾಗಳನ್ನು ಅನ್ವೇಷಿಸಲು ನಿಮಗೆ ಸಹಾಯ ಮಾಡಬಲ್ಲವು.

ಈ ಟ್ಯಾಬ್‌ನಲ್ಲಿ, ನೀವು ಇವುಗಳಿಗೆ ಸಂಬಂಧಿಸಿದ ವರದಿಗಳನ್ನು ಸಹ ಪಡೆಯುತ್ತೀರಿ:

  • YouTube ನಾದ್ಯಂತದ ಹುಡುಕಾಟಗಳು: ಕಳೆದ 28 ದಿನಗಳಲ್ಲಿ YouTube ನಾದ್ಯಂತ ನೀವು ಎಕ್ಸ್‌ಪ್ಲೋರ್ ಮಾಡಿದ ಟಾಪ್ ಹುಡುಕಾಟದ ವಿಷಯಗಳು ಮತ್ತು ನಿಮ್ಮ ಪ್ರೇಕ್ಷಕರು ಹಾಗೂ ವೀಕ್ಷಕರು ಮಾಡಿದ ವಾಲ್ಯೂಮ್.
  • ನಿಮ್ಮ ವೀಕ್ಷಕರ ಹುಡುಕಾಟಗಳು: ಒಂದೇ ರೀತಿಯ ಚಾನಲ್‌ಗಳ ನಿಮ್ಮ ಪ್ರೇಕ್ಷಕರು ಮತ್ತು ವೀಕ್ಷಕರು ಕಳೆದ 28 ದಿನಗಳ ಅವಧಿಯಲ್ಲಿ YouTube ನಲ್ಲಿ ಹುಡುಕಾಡುತ್ತಿರುವ ಹುಡುಕಾಟದ ಪದಗಳು ಮತ್ತು ವಾಲ್ಯೂಮ್.
ರಚನೆಕಾರರಿಗಾಗಿ YouTube Analytics ಸಲಹೆಗಳನ್ನು ಪಡೆಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8647363142829139708
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false