ಚಾನಲ್ ಸದಸ್ಯತ್ವಗಳನ್ನು ಆನ್ ಅಥವಾ ಆಫ್ ಮಾಡಿ

ಚಾನಲ್ ಸದಸ್ಯತ್ವಗಳು
ಗಮನಿಸಿ ಚಾನಲ್ ಸದಸ್ಯತ್ವಗಳನ್ನು ಬಳಸುವಾಗ YouTube ನಿಯಮಗಳು ಮತ್ತು ನೀತಿಗಳು ಹಾಗೂ ಅನ್ವಯವಾಗುವ ಎಲ್ಲಾ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನೀವು ಜವಾಬ್ದಾರರಾಗಿರುತ್ತೀರಿ.

ನಿಮ್ಮ ಚಾನಲ್‌ಗೆ ಸದಸ್ಯತ್ವಗಳು

ಅರ್ಹ ಚಾನಲ್‌ಗಳು ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಬಹುದು

ಚಾನಲ್ ಸದಸ್ಯತ್ವಗಳಿಂದ ಆದಾಯವನ್ನು ಗಳಿಸಲು, ನೀವು (ಮತ್ತು ನಿಮ್ಮ MCN) ಮೊದಲಿಗೆ ವಾಣಿಜ್ಯ ಉತ್ಪನ್ನ ಮಾಡ್ಯೂಲ್ (CPM) ಅನ್ನು ಒಪ್ಪಿಕೊಳ್ಳಬೇಕು. CPM ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮYouTube ವಾಣಿಜ್ಯ ಉತ್ಪನ್ನಗಳ ಮಾನಿಟೈಶೇಶನ್ ನೀತಿಗಳನ್ನು ವೀಕ್ಷಿಸಿ. 

ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಲು ನೀವು ಕಂಪ್ಯೂಟರ್ ಅನ್ನು ಬಳಸಲು ಬಯಸಿದರೆ: 

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ಎಡ ಮೆನುವಿನಲ್ಲಿ, ಗಳಿಸಿ ಕ್ಲಿಕ್ ಮಾಡಿ.
  3. ಸದಸ್ಯತ್ವಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಚಾನಲ್ ಅರ್ಹವಾಗಿದ್ದರೆ ಮಾತ್ರ ಈ ಟ್ಯಾಬ್ ಕಾಣಿಸಿಕೊಳ್ಳುತ್ತದೆ.
  4. ಪ್ರಾರಂಭಿಸಿ ಕ್ಲಿಕ್ ಮಾಡಿ ಮತ್ತು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
  5. ಸದಸ್ಯತ್ವಗಳು ವಿಭಾಗವನ್ನು ನೀವು ಮೊದಲ ಬಾರಿಗೆ ಬಳಸುತ್ತಿರುವಿರಾದರೆ, ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPA) ಸಹಿ ಮಾಡಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಲು ನೀವು ನಿಮ್ಮ ಮೊಬೈಲ್ ಸಾಧನವನ್ನು ಬಳಸಲು ಬಯಸಿದರೆ:

  1. YouTube Studio ಮೊಬೈಲ್ ಆ್ಯಪ್ ಅನ್ನು ತೆರೆಯಿರಿ.
  2. ಸ್ಕ್ರೀನ್‌ನ ಕೆಳಭಾಗದಲ್ಲಿ ಗಳಿಸಿ ಟ್ಯಾಪ್ ಮಾಡಿ.
  3. ಸದಸ್ಯತ್ವಗಳು ಕಾರ್ಡ್ ಟ್ಯಾಪ್ ಮಾಡಿ ಮತ್ತು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ, ಒಂದು ವೇಳೆ ಸದಸ್ಯತ್ವಗಳು ಕಾರ್ಡ್ ಕಾಣಿಸದಿದ್ದಲ್ಲಿ, “ಸದಸ್ಯತ್ವಗಳು” ವಿಭಾಗದಲ್ಲಿ ಪ್ರಾರಂಭಿಸಿ ಅನ್ನು ಟ್ಯಾಪ್ ಮಾಡಿ.
  4. ನೀವು ಮೊದಲ ಬಾರಿಗೆ ಸದಸ್ಯತ್ವಗಳನ್ನು ಆನ್ ಮಾಡುತ್ತಿದ್ದೀರಿ ಎಂದಾದರೆ, ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPM) ಸೈನ್ ಇನ್ ಮಾಡಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ಅರ್ಹತೆ ಮತ್ತು ಚಾನಲ್ ಸದಸ್ಯತ್ವಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಚಾನಲ್ ಸದಸ್ಯತ್ವಗಳನ್ನು ಆಫ್ ಮಾಡಿ

ಸೂಚನೆ: ಚಾನಲ್ ಸದಸ್ಯತ್ವಗಳನ್ನು ಆಫ್ ಮಾಡಿದಾಗ, ಸದಸ್ಯರ ಎಲ್ಲಾ ಮರುಕಳಿಸುವ ಪಾವತಿಗಳನ್ನು ರದ್ದುಗೊಳಿಸಲಾಗುತ್ತದೆ. ಈ ಸದಸ್ಯರನ್ನು ಸ್ವಯಂಚಾಲಿತವಾಗಿ ಮರುಪಡೆಯಲಾಗುವುದಿಲ್ಲ. ವೀಕ್ಷಕರು ಸ್ವಯಂಪ್ರೇರಣೆಯಿಂದ ಮತ್ತೆ ನಿಮ್ಮ ಚಾನಲ್ ಸದಸ್ಯತ್ವವನ್ನು ಸೇರಿಕೊಳ್ಳಬೇಕು.
  1. ಕಂಪ್ಯೂಟರ್‌ನಲ್ಲಿ, ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. ಸದಸ್ಯತ್ವಗಳು ಪುಟಕ್ಕೆ ಹೋಗಿ.
  3. ಸೆಟ್ಟಿಂಗ್‍ಗಳು  ಅನ್ನು ಕ್ಲಿಕ್ ಮಾಡಿ ನಂತರ ಸದಸ್ಯತ್ವಗಳನ್ನು ಆಫ್ ಮಾಡಿ ನಂತರ ನಿಷ್ಕ್ರಿಯಗೊಳಿಸಿ.

ನೆನಪಿಡಿ, ನೀವು ಚಾನಲ್ ಸದಸ್ಯತ್ವಗಳನ್ನು ಆಫ್ ಮಾಡಿದರೆ, ಹಂತಗಳು ಮತ್ತು ಪರ್ಕ್‌ಗಳನ್ನು ಸೇವ್ ಮಾಡಲಾಗುವುದಿಲ್ಲ.

ಚಾನಲ್ ಮೂಲಕ ಕೊನೆಗೊಳಿಸುವಿಕೆ, YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕುವಿಕೆ ಅಥವಾ ದುರುಪಯೋಗ, ವಂಚನೆ ಅಥವಾ ನಮ್ಮ ನಿಯಮಗಳು ಅಥವಾ ನೀತಿಗಳ ಉಲ್ಲಂಘನೆಯ ಕಾರಣದಿಂದ ಚಾನಲ್‌ನ ಸದಸ್ಯತ್ವವನ್ನು ಕೊನೆಗೊಳಿಸಲಾಗಿದ್ದರೆ, ಎಲ್ಲಾ ಸಕ್ರಿಯ ಪಾವತಿಸುವ ಸದಸ್ಯರು ತಮ್ಮ ಕೊನೆಯ ಪಾವತಿಗೆ ಮರುಪಾವತಿಯನ್ನು ಪಡೆಯುತ್ತಾರೆ. ಚಾನಲ್‌ನ ಮರುಪಾವತಿ ಮಾಡಬೇಕಿರುವ ಆದಾಯದ ಭಾಗವನ್ನು ಚಾನಲ್‌ನಿಂದ ಕಡಿತಗೊಳಿಸಲಾಗುತ್ತದೆ.

ನಿಮ್ಮ ನೆಟ್‌ವರ್ಕ್‌ಗಾಗಿ ಚಾನಲ್ ಸದಸ್ಯತ್ವಗಳು

ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಲು ನೆಟ್‌ವರ್ಕ್ ಅನ್ನು ಅನುಮತಿಸಿ

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ಸೆಟ್ಟಿಂಗ್‌ಗಳಿಗೆ ಹೋಗಿ.
  3. "ಒಪ್ಪಂದಗಳು” ಅನ್ನು ಕ್ಲಿಕ್ ಮಾಡಿ ಮತ್ತು ವಾಣಿಜ್ಯ ಉತ್ಪನ್ನ ಮಾಡ್ಯೂಲ್ ಸಮ್ಮತಿಸಿ.

ರದ್ದುಮಾಡುವಿಕೆಗಳು, ಕೊನೆಗೊಳಿಸುವಿಕೆಗಳು ಮತ್ತು ಮರುಪಾವತಿಗಳು

ಸದಸ್ಯರು ಮರುಪಾವತಿಗೆ ವಿನಂತಿಸಿದರೆ, ಆ ಕ್ಲೇಮ್‌ನ ಸಿಂಧುತ್ವದ ಬಗ್ಗೆ YouTube ಸಂಪೂರ್ಣ ವಿವೇಚನೆಯನ್ನು ಹೊಂದಿರುತ್ತದೆ. ‌ನಾವು ಸದಸ್ಯರಿಗೆ ಮರುಪಾವತಿಯನ್ನು ನೀಡಿದಾಗ, ಮರುಪಾವತಿ ಮಾಡಿದ ಸದಸ್ಯರಿಗೆ ಮರುಪಾವತಿ ಮಾಡಲು ನಿಮ್ಮ ಪಾಲನ್ನು ನಿಮ್ಮ YouTube ಗಾಗಿ AdSense ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಪಾವತಿಸಿದ ಚಾನಲ್ ಸದಸ್ಯತ್ವಗಳಿಗಾಗಿ YouTube ನ ಮರುಪಾವತಿ ನೀತಿ ಕುರಿತು ತಿಳಿಯಿರಿ.

ಚಾನಲ್ ಕೊನೆಗೊಳಿಸುವಿಕೆ ಕಾರಣದಿಂದ ಚಾನಲ್‌ನ ಸದಸ್ಯತ್ವವನ್ನು ಕೊನೆಗೊಳಿಸಲಾಗಿದ್ದರೆ, ಎಲ್ಲಾ ಸಕ್ರಿಯ ಪಾವತಿಸುವ ಸದಸ್ಯರು ತಮ್ಮ ಕೊನೆಯ ಪಾವತಿಗೆ ಮರುಪಾವತಿಯನ್ನು ಪಡೆಯುತ್ತಾರೆ. ಮರುಪಾವತಿಸಬಹುದಾದ ಇತರ ಕಾರಣಗಳು, YouTube ಪಾಲುದಾರ ಕಾರ್ಯಕ್ರಮದಿಂದ ತೆಗೆದುಹಾಕುವಿಕೆ ಅಥವಾ ದುರುಪಯೋಗ, ವಂಚನೆ ಅಥವಾ ನಮ್ಮ ನಿಯಮಗಳು ಅಥವಾ ನೀತಿಗಳ ಉಲ್ಲಂಘನೆಯನ್ನು ಒಳಗೊಂಡಿವೆ. ಚಾನಲ್‌ನ ಮರುಪಾವತಿ ಮಾಡಬೇಕಿರುವ ಆದಾಯದ ಭಾಗವನ್ನು ಚಾನಲ್‌ನಿಂದ ಕಡಿತಗೊಳಿಸಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3113250322370586018
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false