ಚಾನಲ್ ಸದಸ್ಯತ್ವಗಳನ್ನು ಆನ್ ಅಥವಾ ಆಫ್ ಮಾಡಿ

ವೀಕ್ಷಕರು ಮಾಸಿಕ ಪಾವತಿಗಳ ಮೂಲಕ ನಿಮ್ಮ ಚಾನಲ್ ಅನ್ನು ಸೇರಿಕೊಳ್ಳಲು ಮತ್ತು ಅದಕ್ಕೆ ಪ್ರತಿಫಲವಾಗಿ ಬ್ಯಾಡ್ಜ್‌‌ಗಳು, ಎಮೋಜಿ ಮತ್ತು ಇತರ ಸರಕುಗಳ ಹಾಗೆ, ಸದಸ್ಯರಿಗೆ-ಮಾತ್ರ ಮೀಸಲಾದ ವಿಶೇಷ ಪರ್ಕ್‌ಗಳನ್ನು ಪಡೆಯಲು ಚಾನಲ್ ಸದಸ್ಯತ್ವಗಳು ಅವಕಾಶ ನೀಡುತ್ತವೆ.

ನಿಮ್ಮ ಚಾನಲ್‌ಗಾಗಿ ಸದಸ್ಯತ್ವಗಳನ್ನು ಪ್ರಾರಂಭಿಸಲು:

  1. ಚಾನಲ್ ಸದಸ್ಯತ್ವಗಳಿಗಾಗಿ ಇರಬೇಕಾದ ಅರ್ಹತೆಗಳು, ಸ್ಥಾನ ಲಭ್ಯತೆ, ಮತ್ತು ನೀತಿಗಳು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿ.
  2. ನಿಮ್ಮ ಚಾನಲ್‌ಗಾಗಿ ಅಥವಾ ನಿಮ್ಮ ನೆಟ್‌ವರ್ಕ್‌ಗಾಗಿ ಸದಸ್ಯತ್ವಗಳನ್ನು ಆನ್ ಮಾಡಿ.
  3. ನಿಮ್ಮ ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂಗಾಗಿ ಪರ್ಕ್‌ಗಳು ಮತ್ತು ಹಂತಗಳನ್ನು ರಚಿಸಿ.

ಚಾನಲ್ ಸದಸ್ಯತ್ವಗಳು

ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಿ

ಚಾನಲ್ ಸದಸ್ಯತ್ವಗಳಿಂದ ಆದಾಯವನ್ನು ಗಳಿಸಲು, ನೀವು (ಮತ್ತು ನಿಮ್ಮ MCN) ಮೊದಲಿಗೆ ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPM) ಸಮ್ಮತಿಸಬೇಕು. CPM ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ YouTube ವಾಣಿಜ್ಯ ಉತ್ಪನ್ನಗಳ ಮಾನಿಟೈಸೇಶನ್ ನೀತಿಗಳನ್ನು ವೀಕ್ಷಿಸಿ.

ನಿಮ್ಮ ಚಾನಲ್‌ಗಾಗಿ ಸದಸ್ಯತ್ವಗಳನ್ನು ಆನ್ ಮಾಡಿ:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ಸದಸ್ಯತ್ವಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಚಾನಲ್ ಅರ್ಹವಾಗಿದ್ದರೆ ಮಾತ್ರ ಈ ಟ್ಯಾಬ್ ಕಾಣಿಸಿಕೊಳ್ಳುತ್ತದೆ.
  4. ಪ್ರಾರಂಭಿಸಿ ಕ್ಲಿಕ್ ಮಾಡಿ ಮತ್ತು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
  5. ಸದಸ್ಯತ್ವಗಳು ವಿಭಾಗವನ್ನು ನೀವು ಮೊದಲ ಬಾರಿಗೆ ಬಳಸುತ್ತಿರುವಿರಾದರೆ, ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ (CPA) ಸಹಿ ಮಾಡಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ನಿಮ್ಮ ನೆಟ್‌ವರ್ಕ್‌ಗಾಗಿ ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಿ

ನೆಟ್‌ವರ್ಕ್‌ನಲ್ಲಿರುವ ಚಾನಲ್, ಚಾನಲ್ ಸದಸ್ಯತ್ವಗಳನ್ನು ಆನ್ ಮಾಡುವ ಮೊದಲು ಸದಸ್ಯತ್ವಗಳನ್ನು ಆನ್ ಮಾಡಲು ನೆಟ್‌ವರ್ಕ್, ಚಾನಲ್‌ಗಳಿಗೆ ಅನುಮತಿಸಬೇಕು.

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಕೆಳಗೆ ಎಡಬದಿಯಲ್ಲಿ, ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಒಪ್ಪಂದಗಳು ಎಂಬುದನ್ನು ಕ್ಲಿಕ್ ಮಾಡಿ.
  4. ವಾಣಿಜ್ಯ ಉತ್ಪನ್ನ ಮಾಡ್ಯೂಲ್‌ಗೆ ಸಮ್ಮತಿಸಿ.

ಚಾನಲ್ ಸದಸ್ಯತ್ವಗಳನ್ನು ಆಫ್ ಮಾಡಿ

ನಿಮ್ಮ ಚಾನಲ್‌ಗಾಗಿ ಸದಸ್ಯತ್ವಗಳನ್ನು ನೀವು ಯಾವಾಗ ಬೇಕಾದರೂ ಆಫ್ ಮಾಡಬಹುದು. ನೀವು ಚಾನಲ್ ಸದಸ್ಯತ್ವಗಳನ್ನು ಆಫ್ ಮಾಡಿದರೆ ನಿಮ್ಮ ಹಂತಗಳು, ಸದಸ್ಯರು ಮತ್ತು ಪರ್ಕ್‌ಗಳನ್ನು ಸೇವ್ ಮಾಡಲಾಗುವುದಿಲ್ಲ. ಸದಸ್ಯರಿಂದ, ಎಲ್ಲಾ ಮರುಕಳಿಸುವ ಮಾಸಿಕ ಪಾವತಿಗಳನ್ನು ರದ್ದುಗೊಳಿಸಲಾಗುವುದು ಮತ್ತು ನಿಮ್ಮ ಸದಸ್ಯರನ್ನು ನೀವು ಉಳಿಸಿಕೊಳ್ಳುವುದಿಲ್ಲ.

ನಿಮ್ಮ ಚಾನಲ್ ಸದಸ್ಯತ್ವಗಳನ್ನು ನೀವು ಮತ್ತೊಮ್ಮೆ ಆನ್ ಮಾಡಿದರೆ, ವೀಕ್ಷಕರು ನಿಮ್ಮ ಚಾನಲ್ ಸದಸ್ಯತ್ವದ ಪ್ರೋಗ್ರಾಂ ಅನ್ನು ಮತ್ತೊಮ್ಮೆ ತಾವಾಗಿ ಸೇರಿಕೊಳ್ಳಬೇಕು.

ನಿಮ್ಮ ಚಾನಲ್‌ಗಾಗಿ ಸದಸ್ಯತ್ವಗಳನ್ನು ಆಫ್ ಮಾಡಿ:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ಸದಸ್ಯತ್ವಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. “ನಿಮ್ಮ ಸದಸ್ಯತ್ವಗಳ ಆಫರ್” ಎಂಬುದರ ಪಕ್ಕದಲ್ಲಿ, ಇನ್ನಷ್ಟು ಎಂಬುದನ್ನು ಕ್ಲಿಕ್ ಮಾಡಿ.
  5. ಚಾನಲ್ ಸದಸ್ಯತ್ವಗಳನ್ನು ನಿಷ್ಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. “ನನಗೆ ಅರ್ಥವಾಗಿದೆ ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗಾಗಿ ನಾನು ಸದಸ್ಯತ್ವಗಳನ್ನು ಆಫ್ ಮಾಡಲು ಬಯಸುತ್ತೇನೆ” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡಿ ಮತ್ತು ಆಫ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನೀವು ಚಾನಲ್ ಸದಸ್ಯತ್ವಗಳನ್ನು ಆನ್ ಮಾಡಿದ ಬಳಿಕ ನಿಮ್ಮ ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂಗಾಗಿ ನೀವು ಪರ್ಕ್‌ಗಳು ಮತ್ತು ಹಂತಗಳನ್ನು ರಚಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10442181916260198062
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false