ನಿಮ್ಮ ಲೈವ್ ಸ್ಟ್ರೀಮ್‌ನಿಂದ ಮಾನಿಟೈಸ್ ಮಾಡಿ

ಇತ್ತೀಚಿನ ಅಪ್‌ಡೇಟ್‌ಗಳು

ನಿಮ್ಮ ಲೈವ್ ಸ್ಟ್ರೀಮ್‌ಗಳಲ್ಲಿ ಆದಾಯ ಗಳಿಸಲು ನೀವು ಹೀಗೆ ಮಾಡಬಹುದು:

ಕೆಲವು ಚಾನಲ್‌ಗಳು ತಮ್ಮ ವೀಕ್ಷಕರಿಗಾಗಿ ಚಾನಲ್ ಸದಸ್ಯತ್ವಗಳಿಗೆ ಕೂಡ ಆ್ಯಕ್ಸೆಸ್ ಒದಗಿಸಬಹುದು.
ಗಮನಿಸಿ: ಪ್ಲೇಯರ್ ಅನ್ನು ಬಾಹ್ಯ ಸೈಟ್‌ನಲ್ಲಿ ಸ್ವಯಂ ಪ್ರಾರಂಭದ ಜೊತೆಗೆ ಎಂಬೆಡ್ ಮಾಡಿದರೆ, ನಿಮ್ಮ ಲೈವ್ ಸ್ಟ್ರೀಮ್‌ಗಾಗಿ ಆ್ಯಡ್‌ಗಳನ್ನು ಆಫ್ ಮಾಡಲಾಗುತ್ತದೆ.

ಲೈವ್ ಸ್ಟ್ರೀಮ್‌ಗಳಲ್ಲಿ ಆ್ಯಡ್‌ಗಳು

ನಿಮ್ಮ ಚಾನಲ್ ಮಾನಿಟೈಸ್ ಮಾಡುತ್ತಿದ್ದರೆ ಮತ್ತು ನಿಮ್ಮ ಲೈವ್ ಸ್ಟ್ರೀಮ್ ಅರ್ಹವಾಗಿದ್ದರೆ, ಆ್ಯಡ್‌ಗಳನ್ನು ನಿಮ್ಮ ಕಂಟೆಂಟ್‌ನಲ್ಲಿ ಪ್ರಸಾರ ಮಾಡುವಂತೆ YouTube ಪ್ರಚೋದಿಸುತ್ತದೆ. ಆ್ಯಡ್ ಸರ್ವ್ ಮಾಡುವಿಕೆಯನ್ನು ಖಾತರಿಪಡಿಸಲಾಗಿಲ್ಲ ಮತ್ತು ಕೆಲವು ವೀಕ್ಷಕರಿಗೆ ಆ್ಯಡ್‌ಗಳು ಕಾಣಿಸದಿರಬಹುದು. ಲೈವ್ ಸ್ಟ್ರೀಮ್‌ಗಳು ಇವುಗಳಿಗೆ ಅರ್ಹವಾಗಿರಬಹುದು:

  • ಲೈವ್ ಸ್ಟ್ರೀಮ್‌ಗೆ ಮೊದಲು ಪ್ರಸಾರವಾಗುವ ಪ್ರೀ-ರೋಲ್ ಆ್ಯಡ್‌ಗಳು. ಈ ಆ್ಯಡ್‌ಗಳನ್ನು ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ವೀಕ್ಷಿಸಬಹುದಾಗಿದೆ. ಲೈವ್ ಸ್ಟ್ರೀಮ್‌ಗಳಿಗಾಗಿ ಪ್ರೀ-ರೋಲ್ ಆ್ಯಡ್‌ಗಳನ್ನು ಸ್ವಯಂಚಾಲಿತವಾಗಿ ಆನ್ ಮಾಡಲಾಗುತ್ತದೆ.
  • ಲೈವ್ ಸ್ಟ್ರೀಮ್ ಸಮಯದಲ್ಲಿ ಪ್ರಸಾರವಾಗುವ ಮಿಡ್-ರೋಲ್ ಆ್ಯಡ್‌ಗಳು. ಈ ಆ್ಯಡ್‌ಗಳನ್ನು ಸ್ವಯಂಚಾಲಿತವಾಗಿ ಅಥವಾ ಹಸ್ತಚಾಲಿತವಾಗಿ ಸೇರಿಸಬಹುದು.
  • ಕಂಟೆಂಟ್‌ನ ಪಕ್ಕದಲ್ಲಿ ಅಥವಾ ಅದರ ಮೇಲೆ ಪ್ರಸಾರವಾಗುವ ಡಿಸ್‌ಪ್ಲೇ ಆ್ಯಡ್‌ಗಳು. ಈ ಆ್ಯಡ್‌ಗಳನ್ನು ಕಂಪ್ಯೂಟರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಮಧ್ಯ-ರೋಲ್ ಆ್ಯಡ್‌ಗಳನ್ನು ಸೇರಿಸಿ

ಲೈವ್ ಸ್ಟ್ರೀಮ್ ಒಂದಕ್ಕಾಗಿ ಮಧ್ಯ-ರೋಲ್ ಆ್ಯಡ್‌ಗಳನ್ನು ಸೇರಿಸಿ:

  1. YouTube Studio ತೆರೆಯಿರಿ.
  2. ರಚಿಸಿ ನಂತರ ಲೈವ್ ಹೋಗಿ ಕ್ಲಿಕ್ ಮಾಡಿ.
  3. ಸ್ಟ್ರೀಮ್ ಟ್ಯಾಬ್‌ನಿಂದ ಇದೀಗ ಲೈವ್ ಸ್ಟ್ರೀಮ್ ಪ್ರಾರಂಭಿಸಿ ಅಥವಾ 'ನಿರ್ವಹಿಸಿ' ಟ್ಯಾಬ್‌ನಿಂದ ಲೈವ್ ಸ್ಟ್ರೀಮ್ ಅನ್ನು ನಿಗದಿಪಡಿಸಿ.
  4. ಮೇಲ್ಭಾಗದಲ್ಲಿ, ಎಡಿಟ್ ಮಾಡಿ ನಂತರ ಮಾನಿಟೈಸೇಶನ್ ಕ್ಲಿಕ್ ಮಾಡಿ.
  5. ಮಾನಿಟೈಸೇಶನ್ ಅನ್ನು ಆನ್ ಎಂಬುದಕ್ಕೆ ಸೆಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  6. ನಿಮ್ಮ ಲೈವ್ ಆ್ಯಡ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ:
    1. ನಿಮ್ಮ ಪರವಾಗಿ ಆ್ಯಡ್‌ಗಳನ್ನು ಸೇರಿಸಲು YouTube ಗೆ ಅನುಮತಿಸಿ: ಲೈವ್ ಸ್ಟ್ರೀಮ್‌ನ ಸಮಯದಲ್ಲಿ ಅನುಕೂಲಕರ ಕ್ಷಣಗಳಲ್ಲಿ YouTube ವೀಕ್ಷಕರಿಗೆ ಮಧ್ಯ-ರೋಲ್ ಆ್ಯಡ್‌ಗಳನ್ನು ಸರ್ವ್ ಮಾಡುತ್ತದೆ ಮತ್ತು ನೀವು ಆ್ಯಡ್ ವಿರಾಮಗಳ ಫ್ರೀಕ್ವೆನ್ಸಿಯ ಹಂತವನ್ನು ಆಯ್ಕೆಮಾಡಬಹುದು:
      1. ಮಿತವಾದ: ಅತಿ ಕಡಿಮೆ ಫ್ರೀಕ್ವೆನ್ಸಿ ಮತ್ತು ಅತಿ ಕಡಿಮೆ ಹಣ ಗಳಿಕೆಯು ಸಾಮರ್ಥ್ಯ
      2. ಸಮತೋಲಿತ: ಮಧ್ಯಮ-ಮಟ್ಟದ ಫ್ರೀಕ್ವೆನ್ಸಿ ಮತ್ತು ಮಧ್ಯಮ ಹಣ ಗಳಿಕೆಯ ಸಾಮರ್ಥ್ಯ
      3. ಆಕ್ರಮಣಶೀಲ: ಅತಿ ಹೆಚ್ಚು ಫ್ರೀಕ್ವೆನ್ಸಿ ಮತ್ತು ಅತಿ ಹೆಚ್ಚು ಹಣ ಗಳಿಕೆಯ ಸಾಮರ್ಥ್ಯ
      4.  ಗಮನಿಸಿ: ನೀವು ಆ್ಯಡ್ ಒಂದನ್ನು ಸ್ಕಿಪ್ ಮಾಡಲು ಬಯಸುವ ಪಕ್ಷದಲ್ಲಿ, ಅದನ್ನು ವೀಕ್ಷಕರೆದುರು ಪ್ರಸಾರಗೊಳ್ಳಲಿರುವಾಗ ನಾವು ನಿಮಗೆ ತಿಳಿಸುತ್ತೇವೆ
    2. ಆ್ಯಡ್‌ಗಳು ಹೇಗೆ ಗೋಚರಿಸುತ್ತವೆ ಎಂಬುದನ್ನು ಆಯ್ಕೆಮಾಡಿ: ನೀವು ಪ್ರತಿಯೊಂದು ಮಧ್ಯ-ರೋಲ್ ಆ್ಯಡ್ ವಿರಾಮವನ್ನು ಹಸ್ತಚಾಲಿತವಾಗಿ ಆಯ್ಕೆ ಮಾಡಬಹುದು ಅಥವಾ ಆ್ಯಡ್‌ಗಳ ನಡುವೆ ನೀವು ಎಷ್ಟು ಸಮಯ ಕಳೆಯಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಬಹುದು. ನೀವು ಟೈಮ್ ಸ್ಟ್ಯಾಂಪ್ ಮಾಡಿದ ಆ್ಯಡ್‌ಗಳನ್ನು ಸೆಟ್ ಮಾಡುವ ಆಯ್ಕೆಯನ್ನು ಮಾಡಿದರೆ, ನೀವು 6, 12, 18, 24, ಅಥವಾ 30 ನಿಮಿಷಗಳಲ್ಲಿ ಒಂದನ್ನು ಆಯ್ಕೆಮಾಡಬಹುದು.
      1. ಗಮನಿಸಿ: ನಿಮ್ಮ ಪರವಾಗಿ ಆ್ಯಡ್‌ಗಳನ್ನು ಸೇರಿಸಲು ನೀವು YouTube ಗೆ ಅನುಮತಿಸಿದಾಗ ನಿಮ್ಮ ಗಳಿಕೆಯ ಸಾಮರ್ಥ್ಯವು ಕಡಿಮೆಯಾಗಿರಬಹುದು.
  7. ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸೆಟ್ ಅಪ್ ಮಾಡುವುದನ್ನು ಮುಂದುವರಿಸಲು ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.
ಟಿಪ್ಪಣಿಗಳು:
  • ಎಲ್ಲಾ ವೀಕ್ಷಕರಿಗೆ ಮಧ್ಯ-ರೋಲ್ ಆ್ಯಡ್‌ಗಳು ದೊರೆಯುವ ಖಾತ್ರಿಯಿರುವುದಿಲ್ಲ. ಯಾವುದೇ ಆ್ಯಡ್ ರನ್ ಆಗದಿದ್ದರೆ, ಈ ವೀಕ್ಷಕರು ನಿಮ್ಮ ಲೈವ್ ಸ್ಟ್ರೀಮ್ ವೀಕ್ಷಿಸುವುದನ್ನು ಮುಂದುವರಿಸುತ್ತಾರೆ.  
  • ಒಬ್ಬ ವೀಕ್ಷಕರು ಆ್ಯಡ್ ಅನ್ನು ಸ್ಕಿಪ್ ಮಾಡಿದರೆ ಅಥವಾ ಆ್ಯಡ್ ಕೊನೆಗೊಂಡರೆ, ಅವರು ಲೈವ್ ಸ್ಟ್ರೀಮ್‌ಗೆ ಪುನಃ ಸೇರಿಕೊಳ್ಳುತ್ತಾರೆ.

ಮಧ್ಯ-ರೋಲ್ ಆ್ಯಡ್ ಅನ್ನು ವಿಳಂಬವಾಗಿಸಿ

ನೀವು ನಿಮ್ಮ ಪರವಾಗಿ ಮಧ್ಯ-ರೋಲ್ ಆ್ಯಡ್‌ಗಳನ್ನು ಸೇರಿಸಲು YouTube ಗೆ ಅನುಮತಿಸುವ ಆಯ್ಕೆಯನ್ನು ಮಾಡಿದರೆ, ವೀಕ್ಷಕರಿಗೆ ಅಡಚಣೆಯಾಗುವುದು ನಿಮಗೆ ಇಷ್ಟವಿಲ್ಲದ ಪ್ರಮುಖ ಕ್ಷಣಗಳಲ್ಲಿ ನೀವು ಮಧ್ಯ-ರೋಲ್ ಆ್ಯಡ್‌ಗಳನ್ನು ವಿಳಂಬಗೊಳಿಸಬಹುದು.

ಲೈವ್ ನಿಯಂತ್ರಣ ಕೊಠಡಿಯಲ್ಲಿ, ಮೇಲಿನ ಬಲಭಾಗಕ್ಕೆ ಹೋಗಿ ಮತ್ತು ಆ್ಯಡ್‌ಗಳನ್ನು ವಿಳಂಬಗೊಳಿಸಿ ಎಂಬುದನ್ನು ಆಯ್ಕೆಮಾಡಿ. ಮಿಡ್-ರೋಲ್ ಆ್ಯಡ್‌ಗಳನ್ನು ವೀಕ್ಷಕರಿಗೆ ಪ್ರದರ್ಶಿಸುವುದು 10 ನಿಮಿಷಗಳಷ್ಟು ವಿಳಂಬವಾಗುತ್ತದೆ. ಆ್ಯಡ್‌ಗಳು ಪುನರಾರಂಭವಾಗುವ ಮೊದಲು LCR ನಲ್ಲಿ ನಿಮಗಾಗಿ 5-ಸೆಕೆಂಡ್ ಕೌಂಟ್‌ಡೌನ್ ಕಾಣಿಸಿಕೊಳ್ಳುತ್ತದೆ.

ಗಮನಿಸಿ: ಆ್ಯಡ್‌ಗಳನ್ನು ವಿಳಂಬಗೊಳಿಸಿ ಫೀಚರ್ ಅನ್ನು ಆನ್ ಮಾಡಿದಾಗಲೂ ಹಸ್ತಚಾಲಿತವಾಗಿ ಇರಿಸಲಾದ ಮಿಡ್-ರೋಲ್ ಆ್ಯಡ್‌ಗಳು ಪ್ರದರ್ಶನಗೊಳ್ಳುತ್ತವೆ.

ಮಧ್ಯ-ರೋಲ್ ಆ್ಯಡ್‌ಗಳಿಗಾಗಿ ಚಾನಲ್ ಹಂತದ ಸೆಟ್ಟಿಂಗ್‌ಗಳು

ಹಕ್ಕುಗಳ ನಿರ್ವಹಣೆಯಿಲ್ಲದಿರುವ ಮಾನಿಟೈಸ್ ಮಾಡಲಾದ ಚಾನಲ್‌ಗಳು ಚಾನಲ್ ಹಂತದಲ್ಲಿ ಭವಿಷ್ಯದ ಲೈವ್ ಸ್ಟ್ರೀಮ್‌ಗಳಿಗಾಗಿ ಮಿಡ್-ರೋಲ್ ಆ್ಯಡ್ ಡೀಫಾಲ್ಟ್‌ಗಳನ್ನು ಸೆಟ್ ಮಾಡಬಹುದು. ಚಾನಲ್ ಹಂತದ ಸೆಟ್ಟಿಂಗ್‌ಗಳು, ಹೊಸದಾಗಿ ರಚಿಸಿರುವ ಯಾವುದೇ ಲೈವ್ ಸ್ಟ್ರೀಮ್‌ಗಳಿಗೆ ಡೀಫಾಲ್ಟ್ ಆಗಿರುವ ಮಾನಿಟೈಸೇಶನ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಲು ನಿಮಗೆ ಅನುವು ಮಾಡಿಕೊಡುತ್ತವೆ.

ನಿಮ್ಮ ಚಾನಲ್ ಹಂತದ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಲು: ಲೈವ್ ನಿಯಂತ್ರಣ ಕೊಠಡಿಯನ್ನು ನಂತರ ತೆರೆಯಿರಿ ಕೆಳಗಿನ-ಎಡಭಾಗದ ಮೂಲೆಯಲ್ಲಿ, ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.

ಲೈವ್ ಸ್ಟ್ರೀಮ್ ಆ್ಯಡ್ ಆದಾಯ

YouTube Analytics ನಲ್ಲಿ ಲೈವ್ ಸ್ಟ್ರೀಮ್‌ಗಳು ಮತ್ತು ಲೈವ್ ಮರುಪ್ಲೇಗಳಿಂದ ನೀವು ಗಳಿಸುವ ಆ್ಯಡ್ ಆದಾಯದ ಬ್ರೇಕ್‌ಔಟ್ ಒಂದನ್ನು ನೀವು ವೀಕ್ಷಿಸಬಹುದು. ಲೈವ್ ಸ್ಟ್ರೀಮ್‌ಗಳಿಗಾಗಿ ನಿಮ್ಮ ಆ್ಯಡ್ ಆದಾಯದ ಬ್ರೇಕ್‌ಔಟ್ ಅನ್ನು ವೀಕ್ಷಿಸಲು, ಲೈವ್ ಫಿಲ್ಟರ್ ಅನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6049380616917786725
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false