ವೀಡಿಯೊ ತೆಗೆದುಹಾಕುವಿಕೆಗೆ ಸಂಬಂಧಿಸಿದ ಸಮಸ್ಯೆಗಳ ಟ್ರಬಲ್‌ಶೂಟ್ ಮಾಡಿ

YouTube ನಿಂದ ತೆಗೆದುಹಾಕಲಾದ ವೀಡಿಯೊಗಳಿಗೆ ಸಂಬಂಧಿಸಿದಂತೆ ಸಹಾಯ ಒದಗಿಸುವುದು ಈ ಕಂಟೆಂಟ್‍ನ ಉದ್ದೇಶವಾಗಿದೆ. ವೀಡಿಯೊವನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ನಿಮಗೆ ಸಹಾಯ ಬೇಕಿದ್ದರೆ, ನಿಮ್ಮದೇ ವೀಡಿಯೊಗಳನ್ನು ಅಳಿಸುವುದು ಅಥವಾ ಅನುಚಿತವಾದ ಕಂಟೆಂಟ್ ಅನ್ನು ವರದಿ ಮಾಡುವುದು ಹೇಗೆ ಎಂದು ತಿಳಿಯಿರಿ.

ನೀವು ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ ಒಂದರ ಪಕ್ಕದಲ್ಲಿ "ವೀಡಿಯೊವನ್ನು ತೆಗೆದುಹಾಕಲಾಗಿದೆ" ಸಂದೇಶ ಕಾಣಿಸಿಕೊಂಡರೆ, ಆ ವೀಡಿಯೊ ನಮ್ಮ ನೀತಿಗಳನ್ನು ಉಲ್ಲಂಘಿಸಿದೆ ಎಂಬುದಾಗಿ ಕಂಡುಬಂದಿದೆ ಮತ್ತು ಅದನ್ನು YouTube ನಿಂದ ತೆಗೆದುಹಾಕಲಾಗಿದೆ ಎಂದು ಅರ್ಥ. ಈ ಸಮಸ್ಯೆಯನ್ನು ಬಗೆಹರಿಸಲು ನೀವೇನು ಮಾಡಬಹುದು ಎಂದು ತಿಳಿಯಲು ಕೆಳಗೆ ಒಂದು ವಿಭಾಗವನ್ನು ಕ್ಲಿಕ್ ಮಾಡಿ. 

ತೆಗೆದುಹಾಕುವಿಕೆಗೆ ಕಾರಣಗಳು ಮತ್ತು ನೀವೇನು ಮಾಡಬಹುದು

ಅನುಚಿತವಾದ ಕಂಟೆಂಟ್

ನೀವು ಅಪ್‌ಲೋಡ್ ಮಾಡಿದ ಒಂದು ವೀಡಿಯೊದ ಪಕ್ಕದಲ್ಲಿ "ವೀಡಿಯೊವನ್ನು ತೆಗೆದುಹಾಕಲಾಗಿದೆ: ಅನುಚಿತವಾದ ಕಂಟೆಂಟ್" ಸಂದೇಶ ಕಂಡುಬಂದರೆ, ಪ್ರಶ್ನೆಯಲ್ಲಿರುವ ವೀಡಿಯೊ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂಬುದಾಗಿ ಕಂಡುಬಂದಿದೆ ಎಂದು ಅರ್ಥ.

ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ

ಸೇವಾ ನಿಯಮಗಳ ಉಲ್ಲಂಘನೆ

ನಿಮ್ಮ ವೀಡಿಯೊಗಳಲ್ಲಿ ಒಂದರ ಪಕ್ಕದಲ್ಲಿ "ವೀಡಿಯೊ ತೆಗೆದುಹಾಕಲಾಗಿದೆ: ಬಳಕೆಯ ನಿಯಮಗಳ ಉಲ್ಲಂಘನೆ" ಸಂದೇಶವನ್ನು ನೀವು ನೋಡಿದರೆ, ಬಳಕೆಯ ನಿಯಮಗಳು ಅಥವಾ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದಾಗಿ ವೀಡಿಯೊವನ್ನು ತಿರಸ್ಕೃತಗೊಂಡಿರಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಸೇವಾ ನಿಯಮಗಳು ಹಾಗೂ ಈ ಕೃತಿಸ್ವಾಮ್ಯದ ಕುರಿತು ಸಾಮಾನ್ಯ ಸಂಗತಿಗಳನ್ನು ಪರಿಶೀಲಿಸಿ.

ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಹೊಂದಿದೆ

ನಿಮ್ಮ ಯಾವುದೇ ವೀಡಿಯೊದ ಪಕ್ಕದಲ್ಲಿ ನೀವು ಈ ಕೆಳಗಿನ ಸಂದೇಶಗಳನ್ನು ನೋಡಿದರೆ, ಕಂಟೆಂಟ್ ಮಾಲೀಕರು YouTube ನ Content ID ಸಿಸ್ಟಮ್ ಬಳಸಿಕೊಂಡು ನಿಮ್ಮ ವೀಡಿಯೋದಲ್ಲಿನ ಕಂಟೆಂಟ್ ಅನ್ನು ಕ್ಲೈಮ್ ಮಾಡಿದ್ದಾರೆಂದು ಅರ್ಥ.

  • ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಹೊಂದಿದೆ
  • ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್‌ನಿಂದಾಗಿ ಮ್ಯೂಟ್ ಮಾಡಲಾಗಿದೆ
  • ಪ್ರಪಂಚದಾದ್ಯಂತ ನಿರ್ಬಂಧಿಸಲಾಗಿದೆ
  • ಕೆಲವು ದೇಶಗಳು/ಪ್ರದೇಶಗಳಲ್ಲಿ ನಿರ್ಬಂಧಿಸಲಾಗಿದೆ

ನಿಮ್ಮ ವೀಡಿಯೊದ ಪಕ್ಕದಲ್ಲಿ ಕಾಣಿಸಿಕೊಳ್ಳುವ ಪಠ್ಯವನ್ನು ಆಯ್ಕೆ ಮಾಡಿ. ನಿಮ್ಮ ವೀಡಿಯೊದ ಮೇಲೆ ಪರಿಣಾಮ ಬೀರುವ ಕೃತಿಸ್ವಾಮ್ಯ ಕ್ಲೈಮ್‌ನ ಕುರಿತು ಹೆಚ್ಚಿನ ವಿವರಗಳಿರುವ ಪುಟಕ್ಕೆ ಈ ಲಿಂಕ್ ನಿಮ್ಮನ್ನು ಕರೆದೊಯ್ಯುತ್ತದೆ. "ಕೃತಿಸ್ವಾಮ್ಯದ ವಿವರಗಳು" ಎಂಬುದರ ಅಡಿಯಲ್ಲಿ, ನಿಮ್ಮ ವೀಡಿಯೊದಲ್ಲಿ ಗುರುತಿಸಲಾದ ಸಾಮಗ್ರಿಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ನೋಡಬಹುದು. 

ಕಂಟೆಂಟ್ ಐಡಿ ಕ್ಲೈಮ್‍ಗಳು ಎಂದರೆ ಯಾವುವು ಮತ್ತು ಅವುಗಳು ನಿಮ್ಮ ವೀಡಿಯೊ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ತಿಳಿಯಿರಿ.

ವೀಡಿಯೊವನ್ನು ತೆಗೆದುಹಾಕಲಾಗಿದೆ

ನಿಮ್ಮ ವೀಡಿಯೊವನ್ನು ತೆಗೆದುಹಾಕಲು ಕೃತಿಸ್ವಾಮ್ಯ ಮಾಲೀಕರು ನಮಗೆ ಸಂಪೂರ್ಣ ಕಾನೂನು ವಿನಂತಿಯನ್ನು ಕಳುಹಿಸಿದ ಕಾರಣ ಅದನ್ನು YouTube ನಿಂದ ತೆಗೆದುಹಾಕಲಾಗಿದೆ. ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಸಹ ಸ್ವೀಕರಿಸಿದ್ದೀರಿ. ಕೃತಿಸ್ವಾಮ್ಯ ಸ್ಟ್ರೈಕ್‌ಗಳು ನಿಮ್ಮ ಖಾತೆಯ ಮೇಲೆ ಹೇಗೆ ಪರಿಣಾಮ ಬೀರಬಲ್ಲವು ಎಂಬುದನ್ನು ತಿಳಿಯಿರಿ. 

ನಿಮ್ಮ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಲು ಮೂರು ವಿಧಾನಗಳಿವೆ. ಒಂದು ಸ್ಟ್ರೈಕ್ ಅನ್ನು ಹೊಂದಿರುವ ವೀಡಿಯೊವನ್ನು ಅಳಿಸಿದರೆ, ನಿಮ್ಮ ಸ್ಟ್ರೈಕ್ ಬಗೆಹರಿಯುವುದಿಲ್ಲ.

ಟ್ರೇಡ್‌ಮಾರ್ಕ್ ಸಮಸ್ಯೆ

"ವೀಡಿಯೊವನ್ನು ತೆಗೆದುಹಾಕಲಾಗಿದೆ - ಟ್ರೇಡ್‌ಮಾರ್ಕ್ ಸಮಸ್ಯೆ" ಸಂದೇಶ ಕಂಡುಬಂದರೆ, ವೀಡಿಯೊ ನಮ್ಮ ಟ್ರೇಡ್‌ಮಾರ್ಕ್ ನೀತಿಯನ್ನು ಉಲ್ಲಂಘಿಸಿದೆ ಎಂದರ್ಥ.

YouTube ಗೆ ಯಾವ ಕಂಟೆಂಟ್ ಅನ್ನು ಅಪ್‍ಲೋಡ್ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಟ್ರೇಡ್‍ಮಾರ್ಕ್ ನೀತಿಗಳನ್ನು ಪರಿಶೀಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4210047597820220278
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false