ವೀಡಿಯೊಗಳಲ್ಲಿ ಮುಕ್ತಾಯ ಪರದೆಯನ್ನು ಸೇರಿಸಿ

ವೀಡಿಯೊದ ಕೊನೆಯ 5–20 ಸೆಕೆಂಡ್‌ಗಳಲ್ಲಿ ಮುಕ್ತಾಯ ಪರದೆಗಳನ್ನು ಸೇರಿಸಬಹುದು. ಇತರ ವೀಡಿಯೊಗಳ ಕುರಿತು ಪ್ರಚಾರ ಮಾಡಲು, ವೀಕ್ಷಕರು ಸಬ್‌ಸ್ಕ್ರೈಬ್ ಮಾಡಲು ಪ್ರೋತ್ಸಾಹಿಸಲು ಮತ್ತು ಇನ್ನಷ್ಟು ಕಾರ್ಯಗಳಿಗಾಗಿ ನೀವು ಇವುಗಳನ್ನು ಬಳಸಬಹುದು. ಪ್ರಮಾಣಿತ 16:9 ದೃಶ್ಯಾನುಪಾತವನ್ನು ಹೊಂದಿರುವ ವೀಡಿಯೊಗಳಿಗಾಗಿ ನಿಮ್ಮ ಮುಕ್ತಾಯ ಪರದೆಯಲ್ಲಿ ಗರಿಷ್ಠ ನಾಲ್ಕು ಎಲಿಮೆಂಟ್‌ಗಳನ್ನು ಸೇರಿಸಬಹುದು. ಇತರ ದೃಶ್ಯಾನುಪಾತಗಳು ಕಡಿಮೆ ಮಿತಿಯನ್ನು ಹೊಂದಿರಬಹುದು.

ಗಮನಿಸಿ:

  • ಮುಕ್ತಾಯ ಪರದೆಯನ್ನು ಹೊಂದಿರಲು ನಿಮ್ಮ ವೀಡಿಯೊ ಕನಿಷ್ಠ 25 ಸೆಕೆಂಡ್‌ಗಳಷ್ಟು ದೀರ್ಘವಿರಬೇಕು.
  • ಕಾರ್ಡ್ ಟೀಸರ್‌ಗಳು ಮತ್ತು ವೀಡಿಯೊ ವಾಟರ್‌ಮಾರ್ಕ್‌ಗಳಂತಹ ಇತರ ಸಂವಹನಾತ್ಮಕ ಎಲಿಮೆಂಟ್‌ಗಳನ್ನು, ಮುಕ್ತಾಯ ಪರದೆಯ ಸಮಯದಲ್ಲಿ ನಿಗ್ರಹಿಸಲಾಗುತ್ತದೆ.
  • ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ವೀಡಿಯೊಗಳಲ್ಲಿ, YouTube music ಆ್ಯಪ್, ಫ್ಲ್ಯಾಶ್ ವೀಡಿಯೊಗಳು, ಮೊಬೈಲ್ ವೆಬ್ ಅಥವಾ 360 ವೀಡಿಯೊಗಳಲ್ಲಿ ಮುಕ್ತಾಯ ಸ್ಕ್ರೀನ್‌ಗಳು ಲಭ್ಯವಿರುವುದಿಲ್ಲ.

ನಿಮ್ಮ ವೀಡಿಯೊಗಳಿಗಾಗಿ ಮುಕ್ತಾಯ ಸ್ಕ್ರೀನ್‌ಗಳು

ಮುಕ್ತಾಯ ಪರದೆಯನ್ನು ಸೇರಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊದ ಶೀರ್ಷಿಕೆ ಅಥವಾ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಿಂದ ಎಡಿಟರ್ ಅನ್ನು ಆಯ್ಕೆ ಮಾಡಿ.
  5. ಮುಕ್ತಾಯ ಪರದೆಗಳು  ಎಂಬುದನ್ನು ಆಯ್ಕೆ ಮಾಡಿ ಮತ್ತು ನೀವು ಸೇರಿಸಲು ಬಯಸುವ ಎಲಿಮೆಂಟ್ ಅನ್ನು ಆಯ್ಕೆ ಮಾಡಿ:
    • ಟೆಂಪ್ಲೇಟ್ ಅನ್ನು ಅನ್ವಯಿಸಿ: ಟೆಂಪ್ಲೇಟ್‌ಗಳಲ್ಲಿ, ಮುಕ್ತಾಯ ಪರದೆಯನ್ನು ರಚಿಸಲು ನೀವು ಕಸ್ಟಮೈಸ್ ಮಾಡಬಹುದಾದ ಎಲಿಮೆಂಟ್‌ಗಳ ಗುಂಪುಗಳಿರುತ್ತವೆ.
    • ವೀಡಿಯೊ: ನಿಮ್ಮ ಇತ್ತೀಚಿನ ಅಪ್‌ಲೋಡ್, ವೀಕ್ಷಕರಿಗೆ ಅತ್ಯಂತ ಸೂಕ್ತವಾದುದು ಅಥವಾ ನಿರ್ದಿಷ್ಟ ವೀಡಿಯೊವನ್ನು ಪ್ರಸ್ತುತಪಡಿಸಿ.
    • ಪ್ಲೇಪಟ್ಟಿ: ಸಾರ್ವಜನಿಕ YouTube ಪ್ಲೇಪಟ್ಟಿಯನ್ನು ಪ್ರದರ್ಶಿಸಿ.
    • ಸಬ್‌ಸ್ಕ್ರೈಬ್ ಮಾಡಿ: ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಲು ಪ್ರೋತ್ಸಾಹಿಸಿ.
    • ಚಾನಲ್: ಕಸ್ಟಮ್ ಸಂದೇಶದೊಂದಿಗೆ ಬೇರೊಂದು ಚಾನಲ್‌ನ ಕುರಿತು ಪ್ರಚಾರ ಮಾಡಿ.
    • ಲಿಂಕ್ ಮಾಡಿ: ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ ನೀವು ಬಾಹ್ಯ ವೆಬ್‌ಸೈಟ್‌ಗೆ ಲಿಂಕ್ ಮಾಡಬಹುದು.
      • ಗಮನಿಸಿ: ಲಿಂಕ್ ಮಾಡಲಾದ ನಿಮ್ಮ ಬಾಹ್ಯ ವೆಬ್‌ಸೈಟ್, ನಮ್ಮ ಸಮುದಾಯ ಮಾರ್ಗಸೂಚಿಗಳು ಹಾಗೂ ಸೇವಾ ನಿಯಮಗಳು ಸೇರಿದಂತೆ ನಮ್ಮ ನೀತಿಗಳನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉಲ್ಲಂಘನೆಗಳು, ಕಾರ್ಡ್ ಅಥವಾ ಲಿಂಕ್ ತೆಗೆದುಹಾಕುವಿಕೆ, ಸ್ಟ್ರೈಕ್‌ಗಳು ಅಥವಾ ನಿಮ್ಮ Google ಖಾತೆಯನ್ನು ಕೊನೆಗೊಳಿಸಲು ಕಾರಣವಾಗಬಹುದು.

  6. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. 

ಇನ್ನಷ್ಟು ಆಯ್ಕೆಗಳು

  • ಎಲಿಮೆಂಟ್ ಪ್ರಕಾರವನ್ನು ತೆಗೆದುಹಾಕಿ: ಒಂದು ಎಲಿಮೆಂಟ್ ಪ್ರಕಾರವನ್ನು ತೆಗೆದುಹಾಕಲು, ಎಲಿಮೆಂಟ್ ಅನ್ನು ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ. ಬೇರೊಂದು ಮುಕ್ತಾಯ ಪರದೆ ಎಲಿಮೆಂಟ್ ಅನ್ನು ಆಯ್ಕೆ ಮಾಡಲು, ನೀವು ಎಲಿಮೆಂಟ್ ಎಂಬುದನ್ನು ಕ್ಲಿಕ್ ಮಾಡಬಹುದು.
  • ಎಲಿಮೆಂಟ್‌ನ ಟೈಮಿಂಗ್ ಅನ್ನು ಬದಲಾಯಿಸಿ: ಎಲಿಮೆಂಟ್ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಮುಕ್ತಾಯವಾಗುತ್ತದೆ ಎಂಬುದನ್ನು ಸೆಟ್ ಮಾಡಲು, ಟೈಮ್‌ಲೈನ್‌ನ ತುದಿಗಳನ್ನು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. ಎಲಿಮೆಂಟ್ ಅನ್ನು ಅಳಿಸಿ ಬಟನ್‌ನ ಪಕ್ಕದಲ್ಲಿರುವ ಬಾಕ್ಸ್‌ನಲ್ಲಿ ನೀವು ನಿರ್ದಿಷ್ಟ ಸಮಯವನ್ನು ಸಹ ನಮೂದಿಸಬಹುದು.
  • ಎಲಿಮೆಂಟ್ ಸ್ಥಾನ ನಿಯೋಜನೆಯನ್ನು ಬದಲಾಯಿಸಿ: ಬಾಕ್ಸ್‌ನ ಒಳಗೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. ವೀಡಿಯೊ ಪ್ರಿವ್ಯೂ‌ನ ಮೇಲೆ ಗ್ರಿಡ್ ಅನ್ನು ತೋರಿಸಲು ನೀವು ಪ್ಲೇಯರ್‌ನಲ್ಲಿ ಗ್ರಿಡ್ ಅನ್ನು ಕ್ಲಿಕ್ ಮಾಡಬೇಕು. ನಿಮ್ಮ ಎಲಿಮೆಂಟ್‌ಗಳ ಸ್ಥಾನ ನಿಯೋಜನೆ ಮಾಡಲು ಸಹಾಯಕ್ಕಾಗಿ “ಗ್ರಿಡ್‌ಗೆ ಸ್ನ್ಯಾಪ್ ಮಾಡಿ” ಮತ್ತು “ಎಲಿಮೆಂಟ್‌ಗೆ ಸ್ನ್ಯಾಪ್ ಮಾಡಿ” ಎಂಬುದನ್ನು ಸಹ ಆಯ್ಕೆ ಮಾಡಬಹುದು.
  • ನಿಮ್ಮ ಮುಕ್ತಾಯ ಪರದೆಯ ಪ್ರಿವ್ಯೂ ನೋಡಿ: ನಿಮ್ಮ ವೀಡಿಯೊ ಪ್ಲೇ ಆಗುತ್ತಿರುವಾಗ ನಿಮ್ಮ ಮುಕ್ತಾಯ ಪರದೆ ಹೇಗೆ ಕಾಣಿಸುತ್ತದೆ ಎಂಬುದನ್ನು ನೋಡಲು, ವೀಡಿಯೊ ಪ್ಲೇಯರ್‌ನಲ್ಲಿ ಪ್ಲೇ ಬಟನ್ ಅನ್ನು ಆಯ್ಕೆ ಮಾಡಿ.
  • ಮುಕ್ತಾಯ ಪರದೆ ಮೆಟ್ರಿಕ್‌ಗಳನ್ನು ನೋಡಿ: YouTube Analytics ನಲ್ಲಿ ವಿಸ್ತೃತ ವರದಿಯಲ್ಲಿ ನಿಮ್ಮ ಮುಕ್ತಾಯ ಪರದೆಗಳ ಕಾರ್ಯಕ್ಷಮತೆಯನ್ನು ನೀವು ಪರಿಶೀಲಿಸಬಹುದು.

ಮುಕ್ತಾಯ ಪರದೆಯನ್ನು ಕಸ್ಟಮೈಸ್ ಮಾಡಿ

ಎಲಿಮೆಂಟ್‌ಗಳು, ನಿಮ್ಮ ಮುಕ್ತಾಯ ಪರದೆಯಲ್ಲಿ ನೀವು ಸೇರಿಸುವ ಕಂಟೆಂಟ್‌ನ ತುಣುಕುಗಳಾಗಿವೆ. ನಿಮ್ಮ ಮುಕ್ತಾಯ ಪರದೆಯಲ್ಲಿ ಎಲಿಮೆಂಟ್‌ಗಳನ್ನು ಕಸ್ಟಮೈಸ್ ಮಾಡಲು ಅನೇಕ ಮಾರ್ಗಗಳಿವೆ. ನೀವು ಟೆಂಪ್ಲೇಟ್‌ಗಳನ್ನು ಅನ್ವಯಿಸಬಹುದು, ನಿಮ್ಮ ಎಲಿಮೆಂಟ್‌ಗಳ ಟೈಮಿಂಗ್ ಅನ್ನು ಬದಲಾಯಿಸಬಹುದು ಮತ್ತು ನಿಮ್ಮ ವೀಡಿಯೊದಲ್ಲಿ ಎಲಿಮೆಂಟ್‌ಗಳು ಎಲ್ಲಿ ಕಾಣಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬಹುದು.

ಟೆಂಪ್ಲೇಟ್ ಅನ್ನು ಅನ್ವಯಿಸಿ

ಟೆಂಪ್ಲೇಟ್‌ಗಳಲ್ಲಿ, ಮುಕ್ತಾಯ ಪರದೆಯನ್ನು ರಚಿಸಲು ನೀವು ಕಸ್ಟಮೈಸ್ ಮಾಡಬಹುದಾದ ಎಲಿಮೆಂಟ್‌ಗಳ ಗುಂಪುಗಳಿರುತ್ತವೆ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ನೀವು ಸಂಪಾದಿಸಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಿಂದ ಎಡಿಟರ್ ಅನ್ನು ಆಯ್ಕೆ ಮಾಡಿ.
  5. ನಿಮ್ಮ ಟೆಂಪ್ಲೇಟ್ ಅನ್ನು ಅನ್ವಯಿಸಲು ಎಲಿಮೆಂಟ್ ಅನ್ನು ಸೇರಿಸಿ  ಎಂಬುದನ್ನು ಕ್ಲಿಕ್ ಮಾಡಿ.
  6. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಎಲಿಮೆಂಟ್ ಪ್ರಕಾರವನ್ನು ತೆಗೆದುಹಾಕಿ

  1. ಒಂದು ಎಲಿಮೆಂಟ್ ಅನ್ನು ಎಡಿಟರ್‌ನ ಮುಕ್ತಾಯ ಪರದೆ ಸಾಲಿನಲ್ಲಿ ಕ್ಲಿಕ್ ಮಾಡುವ ಮೂಲಕ, ಅದನ್ನು ಆಯ್ಕೆ ಮಾಡಿ.
  2. ನಿಮ್ಮ ವೀಡಿಯೊದ ಎಡಬದಿಯಲ್ಲಿ, ಎಲಿಮೆಂಟ್ ಅನ್ನು ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ಬೇರೊಂದು ಮುಕ್ತಾಯ ಪರದೆ ಎಲಿಮೆಂಟ್ ಅನ್ನು ಆಯ್ಕೆ ಮಾಡಲು ಎಲಿಮೆಂಟ್ ಅನ್ನು ಸೇರಿಸಿ  ಎಂಬುದನ್ನು ಕ್ಲಿಕ್ ಮಾಡಿ.
  4. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಎಲಿಮೆಂಟ್ ಟೈಮಿಂಗ್ ಅನ್ನು ಬದಲಾಯಿಸಿ

ನಿಮ್ಮ ಮುಕ್ತಾಯ ಪರದೆ ಎಲಿಮೆಂಟ್‌ಗಳು ನಿಮ್ಮ ವೀಡಿಯೊದಲ್ಲಿ ಯಾವಾಗ ಕಾಣಿಸಿಕೊಳ್ಳಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು. ಮುಕ್ತಾಯ ಪರದೆ ಎಲಿಮೆಂಟ್‌ಗಳು, ಡೀಫಾಲ್ಟ್ ಆಗಿ ಒಂದೇ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತ್ಯೇಕ ಎಲಿಮೆಂಟ್‌ಗಳು ಬೇರೆ ಬೇರೆ ಸಮಯಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನೀವು ಕಸ್ಟಮೈಸ್ ಮಾಡಬಹುದು.

  1. ಒಂದು ಎಲಿಮೆಂಟ್ ಅನ್ನು ಎಡಿಟರ್‌ನ ಮುಕ್ತಾಯ ಪರದೆ ಸಾಲಿನಲ್ಲಿ ಕ್ಲಿಕ್ ಮಾಡುವ ಮೂಲಕ, ಅದನ್ನು ಆಯ್ಕೆ ಮಾಡಿ.
  2. ನಿಮ್ಮ ವೀಡಿಯೊದ ಎಡಬದಿಯಲ್ಲಿ, ಮುಕ್ತಾಯ ಪರದೆಯ ಸಮಯವನ್ನು ತೋರಿಸುವ ಬಾಕ್ಸ್‌ಗಳನ್ನು ಹುಡುಕಿ.
  3. ಎಲಿಮೆಂಟ್‌ನ ಪ್ರಾರಂಭದ ಸಮಯ ಅಥವಾ ಮುಕ್ತಾಯದ ಸಮಯವನ್ನು ಅಪ್‌ಡೇಟ್ ಮಾಡಿ.
  4. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಎಡಿಟರ್‌ನ ಮುಕ್ತಾಯ ಪರದೆ ಸಾಲಿನಲ್ಲಿ ನಿಮ್ಮ ಮುಕ್ತಾಯ ಪರದೆ ಎಲಿಮೆಂಟ್ ಅನ್ನು ಡ್ರ್ಯಾಗ್ ಮಾಡಲು ಆ್ಯರೋಗಳನ್ನು ಬಳಸುವ ಮೂಲಕವೂ ಅದರ ಟೈಮಿಂಗ್ ಅನ್ನು ನೀವು ಬದಲಾಯಿಸಬಹುದು.

ಎಲಿಮೆಂಟ್‌ನ ಸ್ಥಾನ ನಿಯೋಜನೆಯನ್ನು ಬದಲಾಯಿಸಿ

  1. ಒಂದು ಎಲಿಮೆಂಟ್ ಅನ್ನು ಎಡಿಟರ್‌ನ ಮುಕ್ತಾಯ ಪರದೆ ಸಾಲಿನಲ್ಲಿ ಕ್ಲಿಕ್ ಮಾಡುವ ಮೂಲಕ, ಅದನ್ನು ಆಯ್ಕೆ ಮಾಡಿ.
  2. ವೀಡಿಯೊ ಪ್ಲೇಯರ್‌ನಲ್ಲಿ, ಎಲಿಮೆಂಟ್ ಅನ್ನು ಅಪೇಕ್ಷಿತ ಸ್ಥಾನಕ್ಕೆ ಡ್ರ್ಯಾಗ್ ಮಾಡಿ.
  3. ಸೇವ್ ಎಂಬುದನ್ನು ಕ್ಲಿಕ್ ಮಾಡಿ.
ಸಲಹೆ: ವೀಡಿಯೊ ಪ್ರಿವ್ಯೂನ ಮೇಲೆ ಗ್ರಿಡ್ ಅನ್ನು ತೋರಿಸಲು ಪ್ಲೇಯರ್‌ನಲ್ಲಿ ಗ್ರಿಡ್  ಅನ್ನು ಕ್ಲಿಕ್ ಮಾಡಿ. ನಿಮ್ಮ ಎಲಿಮೆಂಟ್‌ಗಳ ಸ್ಥಾನ ನಿಯೋಜನೆ ಮಾಡಲು ಸಹಾಯಕ್ಕಾಗಿ “ಗ್ರಿಡ್‌ಗೆ ಸ್ನ್ಯಾಪ್ ಮಾಡಿ” ಮತ್ತು “ಎಲಿಮೆಂಟ್‌ಗೆ ಸ್ನ್ಯಾಪ್ ಮಾಡಿ” ಎಂಬುದನ್ನು ಸಹ ಆಯ್ಕೆ ಮಾಡಬಹುದು.

ನಿಮ್ಮ ಮುಕ್ತಾಯ ಪರದೆಯ ಪ್ರಿವ್ಯೂ ನೋಡಿ.

ನಿಮ್ಮ ವೀಡಿಯೊ ಪ್ಲೇ ಆಗುತ್ತಿರುವಾಗ ನಿಮ್ಮ ಮುಕ್ತಾಯ ಪರದೆ ಹೇಗೆ ಕಾಣಿಸುತ್ತದೆ ಎಂದು ನೋಡಲು, ವೀಡಿಯೊ ಪ್ಲೇಯರ್‌ನಲ್ಲಿ ಪ್ಲೇ ಬಟನ್  ಅನ್ನು ಆಯ್ಕೆ ಮಾಡಿ.

ನಿಮ್ಮ ಮುಕ್ತಾಯ ಪರದೆ ಏನನ್ನು ತೋರಿಸಬಹುದು

ಎಲಿಮೆಂಟ್‌ಗಳು, ನಿಮ್ಮ ಮುಕ್ತಾಯ ಪರದೆಯಲ್ಲಿ ನೀವು ಸೇರಿಸುವ ಕಂಟೆಂಟ್‌ನ ತುಣುಕುಗಳಾಗಿವೆ. ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುವುದಕ್ಕಾಗಿ ಕೆಲವು ಎಲಿಮೆಂಟ್‌ಗಳನ್ನು ವಿಸ್ತೃತಗೊಳಿಸಬಹುದು ಅಥವಾ ಹೋವರ್ ಮಾಡಬಹುದು. ಪ್ರಮಾಣಿತ 16:9 ದೃಶ್ಯಾನುಪಾತವನ್ನು ಹೊಂದಿರುವ ವೀಡಿಯೊಗಳಿಗಾಗಿ ನಿಮ್ಮ ಮುಕ್ತಾಯ ಪರದೆಯಲ್ಲಿ ಗರಿಷ್ಠ ನಾಲ್ಕು ಎಲಿಮೆಂಟ್‌ಗಳನ್ನು ಸೇರಿಸಬಹುದು. ಇತರ ದೃಶ್ಯಾನುಪಾತಗಳು ಕಡಿಮೆ ಮಿತಿಯನ್ನು ಹೊಂದಿರಬಹುದು.

ಎಲಿಮೆಂಟ್‌ಗಳು, ವಿವಿಧ ಪ್ರಕಾರಗಳ ಕಂಟೆಂಟ್ ಅನ್ನು ಪ್ರಸ್ತುತಪಡಿಸಬಹುದು:

  • ವೀಡಿಯೊ ಅಥವಾ ಪ್ಲೇಪಟ್ಟಿ:
    • ನೀವು ತೀರಾ ಇತ್ತೀಚೆಗೆ ಅಪ್‌ಲೋಡ್ ಮಾಡಿದ ವೀಡಿಯೊವನ್ನು ಪ್ರಸ್ತುತಪಡಿಸಿ.
    • ವೀಕ್ಷಕರ ಅಭಿರುಚಿಗೆ ತಕ್ಕಂತೆ ನಿಮ್ಮ ಚಾನಲ್‌ನಿಂದ ಒಂದು ವೀಡಿಯೊವನ್ನು ಆಯ್ಕೆ ಮಾಡಲು YouTubeಗೆ ಅನುಮತಿಸಿ.
    • ನಿಮ್ಮ ಅಥವಾ ಇತರ ಚಾನಲ್‌ನಿಂದ ಯಾವುದೇ ವೀಡಿಯೊ ಅಥವಾ ಪ್ಲೇಪಟ್ಟಿಯನ್ನು (ಸಾರ್ವಜನಿಕ ಅಥವಾ ಪಟ್ಟಿ ಮಾಡದಿರುವುದು) ಆಯ್ಕೆ ಮಾಡಿ.
  • ಸಬ್‌ಸ್ಕ್ರೈಬ್ ಮಾಡಿ: ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಲು ಪ್ರೋತ್ಸಾಹಿಸಿ.
  • ಚಾನಲ್: ಕಸ್ಟಮ್ ಸಂದೇಶದೊಂದಿಗೆ ಬೇರೊಂದು ಚಾನಲ್‌ನ ಕುರಿತು ಪ್ರಚಾರ ಮಾಡಿ.
  • ಬಾಹ್ಯ ವೆಬ್‌ಸೈಟ್‌ಗಳು: ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿ ಇದ್ದರೆ, ನೀವು ಬಾಹ್ಯ ವೆಬ್‌ಸೈಟ್‌ಗೆ ಲಿಂಕ್ ಮಾಡಬಹುದು.
ಗಮನಿಸಿ: ಲಿಂಕ್ ಮಾಡಲಾದ ನಿಮ್ಮ ಬಾಹ್ಯ ವೆಬ್‌ಸೈಟ್‌ಗಳು ನಮ್ಮ ಸಮುದಾಯ ಮಾರ್ಗಸೂಚಿಗಳು ಹಾಗೂ ಸೇವಾ ನಿಯಮಗಳು ಸೇರಿದಂತೆ ನಮ್ಮ ನೀತಿಗಳನ್ನು ಅನುಸರಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉಲ್ಲಂಘನೆಗಳು, ಕಾರ್ಡ್ ಅಥವಾ ಲಿಂಕ್ ತೆಗೆದುಹಾಕುವಿಕೆ, ಸ್ಟ್ರೈಕ್‌ಗಳು ಅಥವಾ ನಿಮ್ಮ Google ಖಾತೆಯನ್ನು ಕೊನೆಗೊಳಿಸಲು ಕಾರಣವಾಗಬಹುದು.
ಮುಕ್ತಾಯ ಪರದೆಗಳನ್ನು ರಚಿಸುವುದಕ್ಕಾಗಿ ಅತ್ಯುತ್ತಮ ಅಭ್ಯಾಸಗಳು
  • ವೀಡಿಯೊಗೆ ಪ್ರಸ್ತುತವಾದ ಎಲಿಮೆಂಟ್‌ಗಳನ್ನು ಪ್ರಸ್ತುತಪಡಿಸಿ.
  • ವಿವಿಧ ಮುಕ್ತಾಯ ಪರದೆ ಎಲಿಮೆಂಟ್‌ಗಳಿಗಾಗಿ, ಕೊಳ್ಳಲು ಕರೆಯನ್ನು ಬಳಸುವ ಮೂಲಕ ಕ್ಲಿಕ್ ಮಾಡಲು ವೀಕ್ಷಕರನ್ನು ಪ್ರೋತ್ಸಾಹಿಸಿ.
  • ನೀವು ಕಸ್ಟಮ್ ಚಿತ್ರವನ್ನು ಬಳಸುವುದಾದರೆ, ಕನಿಷ್ಠ 300 x 300 ಪಿಕ್ಸೆಲ್ ಅಗಲವಿರುವ ಚಿತ್ರವನ್ನು ಬಳಸಲು ನಾವು ಸಲಹೆ ನೀಡುತ್ತವೆ.
  • ವೀಡಿಯೊದ ಕೊನೆಯಲ್ಲಿ ಮುಕ್ತಾಯ ಪರದೆಗಾಗಿ ಸಾಕಷ್ಟು ಸ್ಥಳಾವಕಾಶ ಮತ್ತು ಸಮಯವನ್ನು ಮೀಸಲಿರಿಸಲು ಮರೆಯಬೇಡಿ. ವೀಡಿಯೊವನ್ನು ಎಡಿಟ್ ಮಾಡುವಾಗ ಅದರ ಕೊನೆಯ 20 ಸೆಕೆಂಡ್‌ಗಳನ್ನು ಪರಿಗಣಿಸಲು ಮರೆಯಬೇಡಿ.
  • ವಿವಿಧ ಮುಕ್ತಾಯ ಪರದೆ ಎಲಿಮೆಂಟ್‌ಗಳನ್ನು ವಿವಿಧ ಸಮಯಗಳಲ್ಲಿ ತೋರಿಸುವಂತೆ ಟೈಮಿಂಗ್ ಅನ್ನು ಹೊಂದಿಸುವುದನ್ನು ಪರಿಗಣಿಸಿ.
ಮುಕ್ತಾಯ ಪರದೆ ಮೆಟ್ರಿಕ್‌ಗಳನ್ನು ಪರಿಶೀಲಿಸಿ

YouTube Analytics ನ ತೊಡಗಿಸಿಕೊಳ್ಳುವಿಕೆ ಟ್ಯಾಬ್‌ನಲ್ಲಿ ನಿಮ್ಮ ಮುಕ್ತಾಯ ಪರದೆಗಳ ಕಾರ್ಯಕ್ಷಮತೆಯನ್ನು ನೀವು ಪರಿಶೀಲಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ Analytics ಅನ್ನು ಆಯ್ಕೆ ಮಾಡಿ.
  3. ಮೇಲಿನ ಮೆನುವಿನಿಂದ, ತೊಡಗಿಸಿಕೊಳ್ಳುವಿಕೆ ಎಂಬುದನ್ನು ಆಯ್ಕೆ ಮಾಡಿ.

ನಿಮ್ಮ ಸಂಪೂರ್ಣ ಚಾನಲ್‌ಗಾಗಿ ವಿಶ್ಲೇಷಣೆಯನ್ನು ನೀವು ವೀಕ್ಷಿಸುತ್ತಿದ್ದರೆ:

  • ವಿವಿಧ ಪ್ರಕಾರಗಳ ಎಲಿಮೆಂಟ್‌ಗಳ ಬಳಕೆಯ ಯಶಸ್ಸನ್ನು ಹೋಲಿಸಲು, “ಟಾಪ್ ಮುಕ್ತಾಯ ಪರದೆ ಎಲಿಮೆಂಟ್ ಪ್ರಕಾರಗಳು” ಕಾರ್ಡ್ ಅನ್ನು ಬಳಸಿ.
  • ವೀಕ್ಷಕರು ಅತಿ ಹೆಚ್ಚು ಕ್ಲಿಕ್ ಮಾಡಿದ ಮುಕ್ತಾಯ ಪರದೆಗಳನ್ನು ಹೊಂದಿರುವ ವೀಡಿಯೊಗಳನ್ನು ನೋಡಲು “ಮುಕ್ತಾಯ ಪರದೆಯ ಪ್ರಕಾರ ಟಾಪ್ ವೀಡಿಯೊಗಳು” ಕಾರ್ಡ್ ಅನ್ನು ಬಳಸಿ.

ನೀವು ನಿರ್ದಿಷ್ಟ ವೀಡಿಯೊದ ವಿಶ್ಲೇಷಣೆಯನ್ನು ವೀಕ್ಷಿಸುತ್ತಿದ್ದರೆ:

  • ನಿಮ್ಮ ಮುಕ್ತಾಯ ಪರದೆಯ ಎಲಿಮೆಂಟ್‌ಗಳನ್ನು ವೀಕ್ಷಕರು ಎಷ್ಟು ಬಾರಿ ಕ್ಲಿಕ್ ಮಾಡುತ್ತಾರೆ ಎಂಬುದನ್ನು ನೋಡಲು “ಮುಕ್ತಾಯ ಪರದೆ ಎಲಿಮೆಂಟ್ ಕ್ಲಿಕ್ ದರ” ಕಾರ್ಡ್ ಅನ್ನು ಬಳಸಿ.

ವೀಕ್ಷಕರಿಗಾಗಿ ಮುಕ್ತಾಯ ಪರದೆಯ ಅವಶ್ಯಕತೆಗಳು

ಈ ಸ್ಥಳಗಳಲ್ಲಿ ವೀಕ್ಷಕರಿಗೆ ನಿಮ್ಮ ಮುಕ್ತಾಯ ಪರದೆಗಳನ್ನು ನೋಡಲು ಸಾಧ್ಯವಾಗುವುದಿಲ್ಲ:

  • ಮೊಬೈಲ್ ವೆಬ್‌ನಲ್ಲಿ (ವಿನಾಯಿತಿ: iPad ಮೊಬೈಲ್ ವೆಬ್).
  • YouTube Music ಅಥವಾ YouTube Kids ಆ್ಯಪ್‌ಗಳಲ್ಲಿ.
  • ಫ್ಲ್ಯಾಶ್ ವೀಡಿಯೊಗಳಲ್ಲಿ.
  • 360 ವೀಡಿಯೊಗಳಲ್ಲಿ.

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ಮುಕ್ತಾಯ ಪರದೆಗಳು ಮತ್ತು ವೀಡಿಯೊಗಳಲ್ಲಿ

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ವೀಡಿಯೊಗಳಲ್ಲಿ ಮುಕ್ತಾಯ ಪರದೆಗಳು ಲಭ್ಯವಿಲ್ಲ.
ನೀವು ಈ ಹಿಂದೆ ನಿಮ್ಮ ವೀಡಿಯೊದಲ್ಲಿ ಮುಕ್ತಾಯ ಪರದೆಯನ್ನು ಸೇರಿಸಿದ್ದರೂ ಸಹ, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿದ್ದರೆ, ವೀಕ್ಷಕರಿಗೆ ಮುಕ್ತಾಯ ಪರದೆಗಳನ್ನು ತೋರಿಸಲಾಗುವುದಿಲ್ಲ.

ಗಮನಿಸಿ: ನಿಮ್ಮ ಮುಕ್ತಾಯ ಪರದೆಯು ಯಾವಾಗಲೂ ಕಾಣಿಸಿಕೊಳ್ಳದಿರಬಹುದು, ಅಥವಾ ವಿನ್ಯಾಸಗೊಳಿಸಿದ್ದಕ್ಕಿಂತ ಭಿನ್ನವಾಗಿ ಕಾಣಿಸಬಹುದು. ಕಾರ್ಯಕ್ಷಮತೆ, ವೀಕ್ಷಕರ ವರ್ತನೆ, ಸಾಧನ ಮತ್ತು ಸಂದರ್ಭವನ್ನು ಆಧರಿಸಿ ನಾವು ಮುಕ್ತಾಯ ಪರದೆಗಳನ್ನು ಸುಧಾರಿಸಿದಂತೆ ಈ ವ್ಯತ್ಯಾಸ ಉಂಟಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2571536592387464523
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false