Studio ಕಂಟೆಂಟ್ ಮ್ಯಾನೇಜರ್ ಕುರಿತು ತಿಳಿದುಕೊಳ್ಳಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

YouTube Studio ಕಂಟೆಂಟ್ ಮ್ಯಾನೇಜರ್ ಎಂಬುದು ಒಂದು ವೆಬ್-ಆಧಾರಿತ ಪರಿಕರವಾಗಿದ್ದು, YouTube ಪಾಲುದಾರರು YouTube ನಲ್ಲಿ ತಮ್ಮ ಕಂಟೆಂಟ್‌ಗಳು ಮತ್ತು ಹಕ್ಕುಗಳನ್ನು ನಿರ್ವಹಿಸಲು ಇದನ್ನು ಬಳಸುತ್ತಾರೆ. ನಿಮ್ಮ ಪಾತ್ರವನ್ನು ಆಧರಿಸಿ, ನೀವು ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೈನ್ ಇನ್ ಮಾಡಿದಾಗ ಇವುಗಳಲ್ಲಿ ಕೆಲವು ಅಥವಾ ಎಲ್ಲಾ ಆಯ್ಕೆಗಳು ಎಡಭಾಗದ ಮೆನುವಿನಲ್ಲಿರುತ್ತವೆ:

 ಡ್ಯಾಶ್‌ಬೋರ್ಡ್

ಮಾಲೀಕತ್ವದ ಸಂಘರ್ಷಗಳು ಮತ್ತು ಕ್ಲೈಮ್‌ಗಳಂತಹ ವಿವಿಧ ರೀತಿಯ ಕ್ರಮ ಕೈಗೊಳ್ಳಬೇಕಾಗಿರುವ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಿ. ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಕೇಳಿ ಬಂದಿರುವ ಚಾನಲ್‌ಗಳು, ಬಾಕಿ ಉಳಿದಿರುವ ಚಾನಲ್ ಆಹ್ವಾನಗಳು ಮತ್ತು ಅನುಮಾನಾಸ್ಪದ ಮಾನಿಟೈಸೇಶನ್ ಆಯ್ಕೆಯನ್ನು ಹೊಂದಿರುವ ಚಾನಲ್‌ಗಳನ್ನು ಸಹ ನೀವು ಮೇಲ್ವಿಚಾರಣೆ ಮಾಡಬಹುದು.

 ವೀಡಿಯೊಗಳು

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಆಗಿರುವ ಚಾನಲ್‌ಗಳು ಅಪ್‌ಲೋಡ್ ಮಾಡಿರುವ ಅಥವಾ ಲೈವ್ ಸ್ಟ್ರೀಮ್ ಮಾಡಿರುವ ವೀಡಿಯೊಗಳ ಪಟ್ಟಿಯನ್ನು ನೋಡಿ. ಇಲ್ಲಿಂದ, ನೀವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು, ಹಲವು ವೀಡಿಯೊಗಳನ್ನು ಅಳಿಸಬಹುದು, ನಿಮ್ಮ ವೀಡಿಯೊಗಳಲ್ಲಿ ಬಹುಸಂಖ್ಯೆಯ ಅಪ್‌ಡೇಟ್‌ಗಳನ್ನು ಮಾಡಬಹುದು. ಕೃತಿಸ್ವಾಮ್ಯ ಕ್ಲೈಮ್‌ಗಳು, ಸ್ಟ್ರೈಕ್‌ಗಳು ಕೇಳಿ ಬಂದಿರುವ ಮತ್ತು ಇತರ ಆ್ಯಟ್ರಿಬ್ಯೂಟ್‌ಗಳನ್ನು ಹೊಂದಿರುವ ವೀಡಿಯೊಗಳನ್ನು ನೋಡಲು, ನೀವು ಫಿಲ್ಟರ್  ಬಳಸಬಹುದು.

 ಸ್ವತ್ತುಗಳು

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಸಂಬಂಧಿಸಿದ ಸ್ವತ್ತುಗಳ ಕುರಿತು ಅವಲೋಕನವನ್ನು ಪಡೆಯಿರಿ. ನೀವು ಸ್ವತ್ತಿನ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡಬಹುದು, ಸ್ವತ್ತಿನ ಮೆಟಾಡೇಟಾವನ್ನು ವೀಕ್ಷಿಸಬಹುದು ಮತ್ತು ಎಡಿಟ್ ಮಾಡಬಹುದು ಹಾಗೂ ನಿಮ್ಮ ಸ್ವತ್ತುಗಳಿಗೆ ಬಲ್ಕ್ ಎಡಿಟ್‌ಗಳನ್ನು ಮಾಡಬಹುದು. ನೀವು ಎದುರು ನೋಡುತ್ತಿರುವ ಸ್ವತ್ತುಗಳನ್ನು ಹುಡುಕಲು, ಸ್ವತ್ತಿನ ಪ್ರಕಾರ, ಕ್ಲೈಮ್‌ಗಳು ಮತ್ತು ಇತರ ಆ್ಯಟ್ರಿಬ್ಯೂಟ್‌ಗಳ ಪ್ರಕಾರವಾಗಿ ಫಿಲ್ಟರ್ ಮಾಡಿ . ಸ್ವತ್ತುಗಳ ಕುರಿತು ಇನ್ನಷ್ಟು ತಿಳಿಯಿರಿ.

 ಸ್ವತ್ತಿನ ಲೇಬಲ್‌ಗಳು

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಸಂಬಂಧಿಸಿದ ಸ್ವತ್ತಿನ ಲೇಬಲ್‌ಗಳ ಪಟ್ಟಿಯನ್ನು ನೋಡಿ. ನಿರ್ದಿಷ್ಟ ಲೇಬಲ್ ಮೂಲಕ ಸ್ವತ್ತುಗಳ ಪ್ರಕಾರವಾಗಿ ರಚಿಸಲಾಗಿರುವ ಕ್ಲೈಮ್‌ಗಳನ್ನು ಸಹ ನೀವು ನೋಡಬಹುದು. ಸ್ವತ್ತಿನ ಲೇಬಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

 ಸಮಸ್ಯೆಗಳು

ನೀವು ಗಮನ ಕೊಡಬೇಕಾದಂತಹ ಮತ್ತು ನಿಮ್ಮ ಸ್ವತ್ತುಗಳು, ರೆಫರೆನ್ಸ್‌ಗಳು ಅಥವಾ ಕ್ಲೈಮ್‌ಗಳ ಮೇಲೆ ಪರಿಣಾಮ ಬೀರುತ್ತಿರಬಹುದಾದಂತಹ ಸಮಸ್ಯೆಗಳ ಕುರಿತು ಕ್ರಮ ತೆಗೆದುಕೊಳ್ಳಿ. ಸಂಭಾವ್ಯ, ವಿವಾದಿತ ಮತ್ತು ಮೇಲ್ಮನವಿ ಮಾಡಿದ ಕ್ಲೈಮ್‌ಗಳು, ಮಾಲೀಕತ್ವ ಸಂಘರ್ಷಗಳು ಮತ್ತು ವರ್ಗಾವಣೆಗಳು, ಅಮಾನ್ಯ ರೆಫರೆನ್ಸ್‌ಗಳು ಮತ್ತು ರೆಫರೆನ್ಸ್ ಓವರ್‌ಲ್ಯಾಪ್‌ಗಳು ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

 ಚಾನಲ್‌ಗಳು

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಸಂಬಂಧಿಸಿದ ಚಾನಲ್‌ಗಳ ಮೆಟ್ರಿಕ್‌ಗಳು ಮತ್ತು ಅನುಮತಿಗಳ ಪಟ್ಟಿಯನ್ನು ನೋಡಿ. ನಿಮ್ಮ ಕಂಟೆಂಟ್ ಮ್ಯಾನೇಜರ್, ಚಾನಲ್‌ಗಳನ್ನು ರಚಿಸುವ ಮೂಲಕ ಅಥವಾ ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಗೆ ಸೇರಲು ಇತರ ಚಾನಲ್‌ಗಳನ್ನು ಆಹ್ವಾನಿಸುವ ಮೂಲಕ ಬಹು ಚಾನಲ್‌ಗಳಿಗೆ ಲಿಂಕ್ ಮಾಡಬಹುದು.

 ಕ್ಲೈಮ್ ಮಾಡಿದ ವೀಡಿಯೊಗಳು

ಕ್ಲೈಮ್ ಮಾಡಿದ ವೀಡಿಯೊಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸ್ವತ್ತುಗಳ ಪಟ್ಟಿಯನ್ನು ನೋಡಿ. ಒಂದೇ ವೀಡಿಯೊದ ಮೇಲೆ ಕೇಳಿಬರುವ ಬಹು ಕ್ಲೈಮ್‌ಗಳನ್ನು ಗುಂಪು ಮಾಡಲಾಗಿದೆ ಆದ್ದರಿಂದ ನೀವು ಅವುಗಳನ್ನು ಸಮರ್ಥವಾಗಿ ಪರಿಶೀಲಿಸಬಹುದು ಮತ್ತು ಕ್ಲೈಮ್ ಸಮಸ್ಯೆಗಳನ್ನು ಪರಿಹರಿಸಬಹುದು. ಕ್ಲೈಮ್ ಮಾಡಿದ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

 ನೀತಿಗಳು

ನಿಮ್ಮ ಕಸ್ಟಮ್ ನೀತಿಗಳನ್ನು ಪರಿಶೀಲಿಸಿ ಮತ್ತು ಎಡಿಟ್ ಮಾಡಿ ಅಥವಾ ನಿಮ್ಮ ಕಂಟೆಂಟ್ ಮೇಲೆ ಇನ್ನಷ್ಟು ನಿಯಂತ್ರಣವನ್ನು ಸಾಧಿಸಲು ಹೊಸ ನೀತಿಗಳನ್ನು ರಚಿಸಿ. ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿಗದಿತ ನೀತಿಗಳನ್ನು ಸಹ ನೀವು ಸೇರಿಸಬಹುದು. ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

 Analytics

ವೀಡಿಯೊಗಳು, ಚಾನಲ್‌ಗಳು ಅಥವಾ ಸ್ವತ್ತುಗಳಂತಹ ವಿಭಿನ್ನ ಪರಿಮಾಣಗಳಲ್ಲಿ ನಿಮ್ಮ ಕಂಟೆಂಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. ಆದಾಯ, ಪ್ರೇಕ್ಷಕರ ಜನಸಂಖ್ಯಾ ಮಾಹಿತಿ, ಟ್ರಾಫಿಕ್ ಮೂಲಗಳು ಮತ್ತು ಅಪ್ ಟು ಡೇಟ್ ಆದ ಮೆಟ್ರಿಕ್‌ಗಳು ಮತ್ತು ವರದಿಗಳನ್ನು ಹೊಂದಿರುವ ಇತರ ಮಾಹಿತಿಯನ್ನು ನೀವು ಮೇಲ್ವಿಚಾರಣೆ ಮಾಡಬಹುದು. Analytics ಕುರಿತು ಇನ್ನಷ್ಟು ತಿಳಿಯಿರಿ.

 ಕ್ಯಾಂಪೇನ್‌ಗಳು

ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ಕ್ಯಾಂಪೇನ್‌ಗಳ ಪಟ್ಟಿಯನ್ನು ಮತ್ತು ಅವು ಯಾವ ಸ್ವತ್ತುಗಳನ್ನು ಆಧರಿಸಿವೆ ಎಂಬುದನ್ನು ವೀಕ್ಷಿಸಿ. ನೀವು ವೈಯಕ್ತಿಕ ಸ್ವತ್ತುಗಳನ್ನು ಆಯ್ಕೆ ಮಾಡಲು ಸ್ವತ್ತು-ಆಧಾರಿತ ಕ್ಯಾಂಪೇನ್‌ಗಳನ್ನು ಮತ್ತು ನಿರ್ದಿಷ್ಟ ಸ್ವತ್ತಿನ ಲೇಬಲ್‌ಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ಆಯ್ಕೆ ಮಾಡಲು ಲೇಬಲ್-ಆಧಾರಿತ ಕ್ಯಾಂಪೇನ್‌ಗಳನ್ನು ರಚಿಸಬಹುದು. ಕ್ಯಾಂಪೇನ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

 ಅನುಮತಿ ಪಟ್ಟಿ

ನಿಮ್ಮ ಕಂಟೆಂಟ್ ಮ್ಯಾನೇಜರ್‌ನ ಸ್ವತ್ತುಗಳ ಸ್ವಯಂಚಾಲಿತ ಕ್ಲೈಮ್‌ಗಳಿಂದ ವಿನಾಯಿತಿ ಪಡೆದಿರುವ ಚಾನಲ್‌ಗಳನ್ನು ಅನುಮತಿ ಪಟ್ಟಿಯು ತೋರಿಸುತ್ತದೆ. ನೀವು ಚಾನಲ್ ಐಡಿ ಅಥವಾ URL ಪ್ರಕಾರವಾಗಿ ಇನ್ನಷ್ಟು ಚಾನಲ್‌ಗಳನ್ನು ನಿಮ್ಮ ಅನುಮತಿ ಪಟ್ಟಿಗೆ ಸೇರಿಸಬಹುದು. ಅನುಮತಿ ಪಟ್ಟಿಗಳ ಕುರಿತು ಇನ್ನಷ್ಟು ತಿಳಿಯಿರಿ.

 ವರದಿಗಳು

ಆದಾಯ, ವೀಡಿಯೊಗಳು, ಸ್ವತ್ತುಗಳು, ರೆಫರೆನ್ಸ್‌ಗಳು, ಕ್ಲೈಮ್‌ಗಳು ಮತ್ತು ಕ್ಯಾಂಪೇನ್‌ಗಳ ಆಧಾರದಲ್ಲಿ ವರದಿಗಳನ್ನು ನೋಡಿ ಮತ್ತು ಡೌನ್‌ಲೋಡ್ ಮಾಡಿ. ವರದಿಗಳು ಸಾಪ್ತಾಹಿಕವಾಗಿ ಅಥವಾ ಮಾಸಿಕವಾಗಿ ಲಭ್ಯವಿವೆ. ವರದಿಗಳ ಕುರಿತು ಇನ್ನಷ್ಟು ತಿಳಿಯಿರಿ.

 ಕಂಟೆಂಟ್ ಡೆಲಿವರಿ

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಅಪ್‌ಲೋಡ್ ಮಾಡಿದ ಕಂಟೆಂಟ್‌ನ ಪ್ಯಾಕೇಜ್‌ಗಳನ್ನು ನೋಡಿ ಮತ್ತು ಡೌನ್‌ಲೋಡ್ ಮಾಡಿ. ನೀವು ಕಂಟೆಂಟ್ ಡೆಲಿವರಿ ಮತ್ತು ಅಪ್‌ಲೋಡ್ ಮಾಡುವುದಕ್ಕಾಗಿ ಟೆಂಪ್ಲೇಟ್‌ಗಳನ್ನು ಕಂಡುಕೊಳ್ಳಬಹುದು ಮತ್ತು ಈ ಪುಟದಿಂದ ಆ ಪ್ಯಾಕೇಜ್‌ಗಳನ್ನು ಅಪ್‌ಲೋಡ್ ಮಾಡಬಹುದು. YouTube ಗೆ ಫೈಲ್‌ಗಳನ್ನು ಡೆಲಿವರಿ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಸೆಟ್ಟಿಂಗ್‌ಗಳು

ಇಮೇಲ್ ನೋಟಿಫಿಕೇಶನ್‌ಗಳು ಮತ್ತು ಬಳಕೆದಾರರ ಆದ್ಯತೆಗಳು ರೀತಿಯ ಖಾತೆ ಸೆಟ್ಟಿಂಗ್‌ಗಳನ್ನು ನೋಡಿ ಮತ್ತು ಬದಲಾಯಿಸಿ. ಖಾತೆಯ ಅನುಮತಿಗಳನ್ನು ನಿರ್ವಹಿಸಲು, ಇಲ್ಲಿ ವಿವಿಧ ಬಳಕೆದಾರ ಪಾತ್ರಗಳನ್ನು ರಚಿಸಬಹುದು ಮತ್ತು ಎಡಿಟ್ ಮಾಡಬಹುದು. ಕಂಟೆಂಟ್ ಮ್ಯಾನೇಜರ್ ಖಾತೆಯ ಸೆಟ್ಟಿಂಗ್‌ಗಳು ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17519480442467197582
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false