ನಕಲಿ

YouTube ಸೇರಿದಂತೆ, ತನ್ನ ಉತ್ಪನ್ನಗಳಲ್ಲಿ ನಕಲಿ ಸರಕುಗಳ ಮಾರಾಟ ಅಥವಾ ಮಾರಾಟಕ್ಕಾಗಿ ಪ್ರಚಾರವನ್ನು Google ನಿಷೇಧಿಸುತ್ತದೆ. ನಕಲಿ ಸರಕುಗಳು ಒಳಗೊಂಡಿರುವ ಟ್ರೇಡ್‌ಮಾರ್ಕ್ ಅಥವಾ ಲೋಗೋ ಇನ್ನೊಂದರ ಟ್ರೇಡ್‌ಮಾರ್ಕ್‌ಗೆ ಸದೃಶವಾಗಿರುತ್ತದೆ ಅಥವಾ ಗಣನೀಯವಾಗಿ ಹೆಚ್ಚು ವ್ಯತ್ಯಾಸ ತೋರದ ರೀತಿಯಲ್ಲಿರುತ್ತದೆ. ಬ್ರ್ಯಾಂಡ್ ಮಾಲೀಕರ ನೈಜ ಉತ್ಪನ್ನದ ಹಾಗೆ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ, ನಕಲಿ ಸರಕುಗಳು, ಉತ್ಪನ್ನದ ಬ್ರ್ಯಾಂಡ್ ಫೀಚರ್‌ಗಳನ್ನು ಅನುಕರಿಸುತ್ತವೆ.

ನಕಲಿ ಸರಕುಗಳನ್ನು ಪ್ರಚಾರ ಮಾಡುವ ಅಥವಾ ಮಾರಾಟ ಮಾಡುವ ಚಾನಲ್‌ಗಳನ್ನು ಕೊನೆಗೊಳಿಸಬಹುದು.

ಒಂದು ವೀಡಿಯೊ ಅಥವಾ ಚಾನಲ್, ನಕಲಿ ಸರಕುಗಳನ್ನು ಮಾರಾಟ ಮಾಡುತ್ತಿದೆ ಅಥವಾ ಪ್ರಚಾರ ಮಾಡುತ್ತಿದೆ ಎಂದು ನೀವು ಭಾವಿಸಿದರೆ, ನಮ್ಮ ಆನ್‌ಲೈನ್ ಫಾರ್ಮ್‌ನ ಮೂಲಕ ನೀವು ನಕಲಿ ವಸ್ತುಗಳ ಬಗ್ಗೆ ದೂರನ್ನು ಸಲ್ಲಿಸಬಹುದು.

ನಕಲಿ ವಸ್ತುಗಳ ಬಗ್ಗೆ ದೂರನ್ನು ಸಲ್ಲಿಸಿ

ತನಿಖೆ ನಡೆಸಲು ನಿಮ್ಮ ದೂರನ್ನು ನಾವು ಈ ಫಾರ್ಮ್ಯಾಟ್‌ನಲ್ಲಿ ಸ್ವೀಕರಿಸಬೇಕು. ನಮ್ಮ ತಂಡ ನಿಮ್ಮ ದೂರನ್ನು ತನಿಖೆ ಮಾಡುತ್ತದೆ ಮತ್ತು Google ನಕಲಿ ವಸ್ತುಗಳಿಗೆ ಸಂಬಂಧಿಸಿದ ನೀತಿಯನ್ನು ಅದು ಉಲ್ಲಂಘಿಸಿದರೆ ಕಂಟೆಂಟ್ ಅನ್ನು ನಾವು ತೆಗೆದುಹಾಕುತ್ತೇವೆ.

ಫ್ರೀ-ಫಾರ್ಮ್ ನಕಲಿ ವಸ್ತುಗಳ ಬಗ್ಗೆ ಇಮೇಲ್, ಫ್ಯಾಕ್ಸ್ ಮತ್ತು ಅಂಚೆಯ ಮೂಲಕ ಸಲ್ಲಿಸಲಾದ ದೂರುಗಳನ್ನು ಸಹ ನಾವು ಸ್ವೀಕರಿಸುತ್ತೇವೆ.

ನೆನಪಿರಲಿ, ನಮ್ಮ ಕಾನೂನು ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುವುದು ನಿಮ್ಮ YouTube ಖಾತೆಯನ್ನು ಕೊನೆಗೊಳಿಸಲು ಕಾರಣವಾಗಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14803833550152489099
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false