YouTube ಚಾನಲ್‍ಗಳಿಗೆ ಸಬ್‌ಸ್ಕ್ರೈಬ್‌ ಮಾಡಿ

ನೀವು ಇಷ್ಟಪಡುವ ಚಾನಲ್‍ಗಳಿಂದ ಹೆಚ್ಚು ಕಂಟೆಂಟ್ ಅನ್ನು ನೋಡಲು ಆ ಚಾನಲ್‍ಗಳಿಗೆ ನೀವು ಸಬ್‌ಸ್ಕ್ರೈಬ್‌ ಮಾಡಬಹುದು. ಯಾವುದೇ YouTube ವೀಡಿಯೊದ ಕೆಳಗೆ ಅಥವಾ ಚಾನಲ್‌ನ ಪುಟದಲ್ಲಿ ಸಬ್‌ಸ್ಕ್ರೈಬ್ ಬಟನ್ ಅನ್ನು ನೀವು ನೋಡುವಿರಿ. ನೀವು ಒಂದು ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿದಾಗ, ಆ ಚಾನಲ್ ಪ್ರಕಟಿಸುವ ಯಾವುದೇ ಹೊಸ ವೀಡಿಯೊವನ್ನು ನಿಮ್ಮ ಸಬ್‌ಸ್ಕ್ರಿಪ್ಶನ್ ಫೀಡ್‌ನಲ್ಲಿ ತೋರಿಸಲಾಗುತ್ತದೆ.

ನೀವು ಸಬ್‌ಸ್ಕ್ರೈಬ್‌ ಮಾಡಿರುವ ಚಾನೆಲ್ ಹೊಸ ಕಂಟೆಂಟ್ ಅನ್ನು ಪ್ರಕಟಿಸಿದಾಗ ಸಹ ನಿಮಗೆ ನೋಟಿಫಿಕೇಶನ್‍ಗಳು ಬರಲು ಆರಂಭವಾಗಬಹುದು. ಡೀಫಾಲ್ಟ್ ಆಗಿ, ನಾವು ನಿಮಗೆ ಚಾನಲ್‌ನಿಂದ ಹೈಲೈಟ್‌ಗಳನ್ನು ಮಾತ್ರ ಕಳುಹಿಸುತ್ತೇವೆ. ನಿಮ್ಮ ನೋಟಿಫಿಕೇಶನ್‌ಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಪ್ರಾರಂಭಿಸುವುದು | YouTube ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗುವುದು ಹೇಗೆ ಮತ್ತು ಏಕೆ

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

YouTube ಚಾನಲ್‌ಗೆ ಸಬ್‌ಸ್ಕ್ರೈಬ್‌ ಮಾಡಿ

  1. YouTube ಆ್ಯಪ್ ತೆರೆಯಿರಿ ಅಥವಾ m.youtube.com ಗೆ ಹೋಗಿ.
  2. YouTube ಗೆ ಸೈನ್ ಇನ್ ಮಾಡಿ.
  3. ನೀವು ಹೋಮ್ ಟ್ಯಾಬ್‍ನಲ್ಲಿದ್ದರೆ :
    • ನೀವು ಸಬ್‌ಸ್ಕ್ರೈಬ್‌ ಮಾಡಲು ಬಯಸುವ ಚಾನಲ್‍ನ ವೀಡಿಯೊದ ಕೆಳಗೆ ಚಾನಲ್ ಐಕಾನ್ ಟ್ಯಾಪ್ ಮಾಡಿ.
    • ಸಬ್‌ಸ್ಕ್ರೈಬ್‌ ಟ್ಯಾಪ್ ಮಾಡಿ.
  4. ನೀವು ಸಬ್‌ಸ್ಕ್ರೈಬ್ ಮಾಡಲು ಬಯಸುವ ಚಾನಲ್‍ನ ವೀಡಿಯೊವನ್ನು ನೀವು ವೀಕ್ಷಿಸುತ್ತಿದ್ದರೆ:

ನೀವು ಯಾವಾಗ ನೋಟಿಫಿಕೇಶನ್‍ಗಳನ್ನು ಪಡೆಯುವಿರಿ

ನೀವು ಚಾನಲ್‌ವೊಂದಕ್ಕೆ ಸಬ್‌ಸ್ಕ್ರೈಬ್ ಮಾಡಿದಾಗ, ಆ ಚಾನಲ್‍ನ ಹೈಲೈಟ್‌ಗಳ ಬಗ್ಗೆ ನಾವು ನಿಮಗೆ ಸ್ವಯಂಚಾಲಿತವಾಗಿ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತೇವೆ. ನಿಮ್ಮ ನೋಟಿಫಿಕೇಶನ್‍ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ, ಪ್ರತಿ ಬಾರಿ. ಚಾನಲ್ ಕಂಟೆಂಟ್ ಅನ್ನು ಪ್ರಕಟಿಸುವಾಗ ನೀವು ನೋಟಿಫಿಕೇಶನ್ ಪಡೆಯುವಂತೆ ಆಯ್ಕೆ ಮಾಡಿಕೊಳ್ಳಬಹುದು. 

ನೀವು ಚಾನಲ್‌ವೊಂದರಿಂದ ಅನ್‌ಸಬ್‌ಸ್ಕ್ರೈಬ್ ಮಾಡಿ ನಂತರ ಅದಕ್ಕೆ ಮರು-ಸಬ್‌ಸ್ಕ್ರೈಬ್ ಮಾಡಿದರೆ, ನಿಮ್ಮ ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ರೀಸೆಟ್ ಮಾಡಲಾಗುತ್ತದೆ.

ಚಾನಲ್‌ನ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದರೆ ನೀವು ನೋಟಿಫಿಕೇಶನ್‌ಗಳನ್ನು ಪಡೆಯುವುದಿಲ್ಲ. ಜೊತೆಗೆ, ನೋಟಿಫಿಕೇಶನ್ ಬೆಲ್ ಅನ್ನು ಯಾವುದೇ ನೋಟಿಫಿಕೇಶನ್‌ಗಳಿಲ್ಲ ಎಂದು ಹೊಂದಿಸಲಾಗುವುದು. ನೀವು ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ. 

YouTube ಚಾನಲ್‌ನಿಂದ ಅನ್‌ಸಬ್‌ಸ್ಕ್ರೈಬ್‌‌ ಮಾಡಿ

  1. YouTube ಗೆ ಸೈನ್ ಇನ್ ಮಾಡಿ.
  2. ನೀವು ಅನ್‌ಸಬ್‌ಸ್ಕ್ರೈಬ್‌‌ ಮಾಡಲು ಬಯಸುವ ಚಾನಲ್‍ನ ವೀಡಿಯೊಗೆ ಹೋಗಿ.
  3. ವೀಡಿಯೊ ಪ್ಲೇಯರ್‌ನ ಅಡಿಯಲ್ಲಿ, ಸಬ್‌ಸ್ಕ್ರೈಬ್‌ ಮಾಡಲಾಗಿದೆ ನಂತರ ಅನ್‌ಸಬ್‌ಸ್ಕ್ರೈಬ್‌‌ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಸ್ಕ್ರೀನ್‌ನ ಕೆಳಭಾಗದಲ್ಲಿ, ನೀವು ಅನ್‌ಸಬ್‌ಸ್ಕ್ರೈಬ್‌‌ ಮಾಡಿದ್ದೀರಿ ಎಂಬುದನ್ನು ದೃಢಪಡಿಸುವ ನೋಟಿಫಿಕೇಶನ್ ಒಂದನ್ನು ಪಡೆಯುವಿರಿ.

ನಿಮ್ಮ YouTube ಸಬ್‌ಸ್ಕ್ರಿಪ್ಶನ್‌ಗಳನ್ನು ನಿರ್ವಹಿಸಿ

ಸಬ್‌ಸ್ಕ್ರೈಬ್‌ ಮಾಡಲು ಚಾನಲ್‍ಗಳನ್ನು ಹುಡುಕಿ

ಹೋಮ್ ಟ್ಯಾಬ್‍ನಲ್ಲಿ ಮತ್ತು ನೀವು ವೀಡಿಯೊ ವೀಕ್ಷಿಸಿದ ಬಳಿಕ, ನಿಮಗಿಷ್ಟವಾಗಬಹುದು ಎಂದು ನಮಗೆ ಅನಿಸುವಂತಹ ವೀಡಿಯೊಗಳು ಮತ್ತು ಚಾನಲ್‍ಗಳನ್ನು YouTube ಪ್ರಸ್ತುತಪಡಿಸುತ್ತದೆ. ನೀವು ಏನನ್ನು ವೀಕ್ಷಿಸಿದ್ದೀರಿ ಮತ್ತು ಯಾವುದು ಟ್ರೆಂಡಿಂಗ್‍ನಲ್ಲಿದೆ ಎಂಬ ಆಧಾರದಲ್ಲಿ ನಾವು ಈ ವೀಡಿಯೊಗಳನ್ನು ಶಿಫಾರಸು ಮಾಡುತ್ತೇವೆ.  

ನಾವು ಶಿಫಾರಸು ಮಾಡಿರುವುದು ನಿಮಗಿಷ್ಟವಾಗದಿದ್ದರೆ, ನಿಮಗೆಆಸಕ್ತಿಯಿಲ್ಲ ಎಂದು ನೀವು ನಮಗೆ ತಿಳಿಸಬಹುದು.

  • ವರ್ಗದ ಪ್ರಕಾರ ಬ್ರೌಸ್ ಮಾಡಿ: ನಿರ್ದಿಷ್ಟ ವಿಷಯದ ಕುರಿತಾದ ಚಾನಲ್‍ಗಳನ್ನು ಹುಡುಕಲು ನೀವು ಬಯಸುವಿರಾದರೆ, ವಿವಿಧ ವರ್ಗಗಳಾದ್ಯಂತ ಜನಪ್ರಿಯ ಚಾನಲ್‍ಗಳನ್ನು ನೋಡಲು ಚಾನಲ್‍ಗಳನ್ನು ಬ್ರೌಸ್ ಮಾಡಿ ಎಂಬಲ್ಲಿಗೆ ಹೋಗಿ.
  • ಹುಡುಕಾಟ ನಡೆಸಿ: YouTube ನಲ್ಲಿ ನಿಮ್ಮ ಆಸಕ್ತಿಯ ವಿಷಯಗಳನ್ನು ಹುಡುಕಲು ಪ್ರಯತ್ನಿಸಿ. ನೀವು ಹುಡುಕಿದ್ದಕ್ಕೆ ಸಂಬಂಧಪಟ್ಟ ಚಾನಲ್‍ಗಳನ್ನು ತೋರಿಸಲು ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ ನೀವು ಫಿಲ್ಟರ್ ಬಳಸಹುದು

ನಿಮ್ಮ YouTube ಸಬ್‌ಸ್ಕ್ರಿಪ್ಶನ್‌ಗಳನ್ನು ನೋಡಿ

ನೀವು ಚಾನಲ್‌ವೊಂದಕ್ಕೆ ಸಬ್‌ಸ್ಕ್ರೈಬ್ ಮಾಡಿದಾಗ, ನೀವು ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳ ಟ್ಯಾಬ್‍ನಲ್ಲಿ ಹೊಸ ವೀಡಿಯೊಗಳನ್ನು ನೋಡುವಿರಿ. ಹೋಮ್ ಟ್ಯಾಬ್ ನಿಮಗೆ ಆಸಕ್ತಿಯಿರಬಹುದಾದ ಚಾನಲ್‍ಗಳು ಅಥವಾ ವೀಡಿಯೊಗಳ ಶಿಫಾರಸುಗಳೊಂದಿಗೆ, ನಿಮ್ಮ ಸಬ್‌ಸ್ಕ್ರಿಪ್ಶನ್‍ಗಳಿಂದಲೂ ವೀಡಿಯೊಗಳನ್ನು ತೋರಿಸಬಹುದು.

ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಗೆ ಹೋಗಲು, ಈ ಸೂಚನೆಗಳನ್ನು ಅನುಸರಿಸಿ:

  1. YouTube ಆ್ಯಪ್ ಅನ್ನು ತೆರೆಯಿರಿ.
  2. YouTube ಗೆ ಸೈನ್ ಇನ್ ಮಾಡಿ.
  3. ಸಬ್‌ಸ್ಕ್ರಿಪ್ಶನ್‌ಗಳ ಟ್ಯಾಬ್ ಅನ್ನು ಟ್ಯಾಪ್ ಮಾಡಿ. 

ಎಲ್ಲಾ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಚಾನಲ್‍ಗಳ ಪಟ್ಟಿಯನ್ನು ನೀವು ನೋಡಬಹುದು, ಮತ್ತು ಮೇಲ್ಭಾಗದಲ್ಲಿರುವ ಡ್ರಾಪ್-ಡೌನ್ ಬಾಣದ ಗುರುತನ್ನು ಬಳಸಿ ನಿಮ್ಮ ಫಲಿತಾಂಶಗಳನ್ನು ಫಿಲ್ಟರ್ ಮಾಡಬಹುದು.

ನೀವು ಸಬ್‌ಸ್ಕ್ರೈಬ್‌ ಮಾಡಿರುವ ಚಾನಲ್‍ನಲ್ಲಿ ಹೊಸ ಕಂಟೆಂಟ್ ಬಂದಾಗ, ಚಾನಲ್ ಹೆಸರಿನ ಪಕ್ಕದಲ್ಲಿ ನೀವು ಒಂದು ಚುಕ್ಕೆಯನ್ನು ನೋಡುವಿರಿ. ನೀವು ಸಬ್‌ಸ್ಕ್ರೈಬ್‌ ಆಗಿರುವ ಚಾನಲ್, ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದರೆ, ನೀವು ಚಾನಲ್ ಹೆಸರಿನ ಪಕ್ಕದಲ್ಲಿ "ಲೈವ್" ಎಂಬ ಪದವನ್ನು ನೋಡುವಿರಿ.  

ನಿಮ್ಮ YouTube ಸಬ್‌ಸ್ಕ್ರಿಪ್ಶನ್‍ಗಳನ್ನು ವರ್ಗದ ಪ್ರಕಾರ ಫಿಲ್ಟರ್ ಮಾಡಿ

ನಿಮ್ಮ ಸಬ್‌ಸ್ಕ್ರಿಪ್ಶನ್‍ಗಳ ಪುಟದ ಮೇಲ್ಭಾಗದಲ್ಲಿ ನೀವು ವರ್ಗಗಳನ್ನು ನೋಡುವಿರಿ. ಈ ವರ್ಗಗಳು ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಂದ ಹೊಸ ಕಂಟೆಂಟ್ ಅನ್ನು ಹೆಚ್ಚು ಸುಲಭವಾಗಿ ನೋಡಲು ನಿಮಗೆ ಸಹಾಯ ಮಾಡುತ್ತವೆ.
ನಿಮ್ಮ ಸಬ್‌ಸ್ಕ್ರಿಪ್ಶನ್‍ಗಳನ್ನು ಫಿಲ್ಟರ್ ಮಾಡಲು, ಮೇಲ್ಭಾಗದಲ್ಲಿನ ಯಾವುದೇ ವರ್ಗಗಳನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಪುಟವು ಅದಕ್ಕೆ ಅನ್ೌಗುಣವಾಗಿ ಬದಲಾಗುತ್ತದೆ.

ನಿಮ್ಮ YouTube ಸಬ್‌ಸ್ಕ್ರಿಪ್ಶನ್‍ಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಟ್ರಬಲ್‌ಶೂಟ್ ಮಾಡಿ

YouTube ಸಬ್‌ಸ್ಕ್ರಿಪ್ಶನ್ ಮಿತಿಗಳು

"ತುಂಬಾ ಹೆಚ್ಚು ಸಬ್‌ಸ್ಕ್ರಿಪ್ಶನ್‍ಗಳು" ಎಂಬ ದೋಷ ಸಂದೇಶ ನಿಮಗೆ ಎದುರಾದರೆ, ನೀವು ನಿಮ್ಮ ಸಬ್‌ಸ್ಕ್ರಿಪ್ಶನ್ ಮಿತಿಯನ್ನು ತಲುಪಿದ್ದೀರಿ. ನೀವು ದಿನಕ್ಕೆ 75 ಚಾನಲ್‍ಗಳಿಗೆ ಮಾತ್ರ ಸಬ್‌ಸ್ಕ್ರೈಬ್‌ ಆಗಬಹುದು.

ಸಾಮಾನ್ಯವಾಗಿ, ನೀವು ಗರಿಷ್ಠ 2,000 ಚಾನಲ್‍ಗಳಿಗೆ ಸಬ್‍ಸ್ಕ್ರೈಬ್ ಆಗಬಹುದು. ಆದರೆ, ನಿಮ್ಮ YouTube ಚಾನಲ್ ಬೆಳೆದ ಪ್ರಕಾರವೇ ನಿಮ್ಮ ಸಬ್‌ಸ್ಕ್ರಿಪ್ಶನ್ ಮಿತಿ ಬೆಳೆಯುತ್ತದೆ—ಇದು ನಿಮ್ಮ ಚಾನಲ್‍ಗಿರುವ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಮತ್ತು ನಿಮ್ಮ ಖಾತೆ ಎಷ್ಟು ಸಮಯದಿಂದ ಇದೆ ಎಂಬುದನ್ನು ಅವಲಂಬಿಸಿರುತ್ತದೆ. ಕಾಲಾನಂತರ ನಿಮ್ಮ ನಿಖರ ಮಿತಿಗಳು ಬದಲಾಗಬಹುದು.

ಸಬ್‌ಸ್ಕ್ರಿಪ್ಶನ್ ಫೀಡ್ ಮತ್ತು ಚಾನಲ್ ಪಟ್ಟಿ ಅತ್ಯುತ್ತಮ ಅನುಭವ ನೀಡುವುದನ್ನು ದೃಢಪಡಿಸಲು ನಿಮ್ಮ ಖಾತೆಯನ್ನು 5,000 ಚಾನಲ್ ಸಬ್‌ಸ್ಕ್ರಿಪ್ಶನ್‍ಗಳಿಗೆ ಸೀಮಿತಗೊಳಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.

ಥರ್ಡ್ ಪಾರ್ಟಿ ವಿಸ್ತರಣೆಗಳು ನಿಮ್ಮ ಅನುಮತಿಯಿಲ್ಲದೆ ಚಾನಲ್‌ಗಳಿಗೆ ನಿಮ್ಮನ್ನು ಸಬ್‌ಸ್ಕ್ರೈಬ್ ಮಾಡುವುದು

ನೀವು ಸಬ್‌ಸ್ಕ್ರೈಬ್‌ ಮಾಡಿರದ ವೀಡಿಯೊಗಳು ಮತ್ತು ಚಾನಲ್‍ಗಳ ಕುರಿತು ಅಥವಾ ನೀವು ಅನ್‌ಸಬ್‌ಸ್ಕ್ರೈಬ್‌‌ ಮಾಡಿದ ಕಂಟೆಂಟ್‍ನ ಕುರಿತು ನೀವು ನೋಟಿಫಿಕೇಶನ್‍ಗಳನ್ನು ಪಡೆದರೆ, ಬ್ರೌಸರ್ ವಿಸ್ತರಣೆಯು ನಿಮ್ಮ ಅನುಮತಿಯಿಲ್ಲದೆ ನಿಮ್ಮನ್ನು ಸಬ್‌ಸ್ಕ್ರೈಬ್‌ ಮಾಡುವುದರಿಂದ ಹೀಗಾಗಿರಬಹುದು. ಬ್ರೌಸರ್ ವಿಸ್ತರಣೆಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ನೋಟಿಫಿಕೇಶನ್‌ಗಳು ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್ ನಡುವಿನ ವ್ಯತ್ಯಾಸ

ಸಬ್‌ಸ್ಕ್ರಿಪ್ಶನ್‌ಗಳ ಫೀಡ್, ಮೊಬೈಲ್ ಮತ್ತು ಕಂಪ್ಯೂಟರ್ ಎರಡರಲ್ಲೂ ಲಭ್ಯವಿದೆ, ಇದು ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಂದ ಇತ್ತೀಚೆಗೆ ಅಪ್‌ಲೋಡ್ ಮಾಡಿದ ಯಾವುದೇ ವೀಡಿಯೊಗಳನ್ನು ತೋರಿಸುತ್ತದೆ.

ನೋಟಿಫಿಕೇಶನ್‌ಗಳು ಹೊಸ ವೀಡಿಯೊಗಳು ಇದ್ದಾಗ ನಿಮಗೆ ತಿಳಿಸಬಹುದು, ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಂದ ಅಪ್‌ಡೇಟ್‌‌ಗಳನ್ನು ಹಂಚಿಕೊಳ್ಳಬಹುದು ಮತ್ತು ನೀವು ಇಷ್ಟಪಡಬಹುದಾದ ಕಂಟೆಂಟ್ ಕುರಿತು ಸಹ ನಿಮಗೆ ಹೇಳಬಹುದು. ನಾವು ಇಮೇಲ್‌ಗಳು, ಮೊಬೈಲ್‌ನಲ್ಲಿ ವೈಯಕ್ತೀಕರಣಗೊಳಿಸಿದ ನೋಟಿಫಿಕೇಶನ್‌ಗಳು ಅಥವಾ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿರುವ ಇನ್‌ಬಾಕ್ಸ್ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತೇವೆ. ನೀವು ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿದಾಗ, ಚಟುವಟಿಕೆಯ ಹೈಲೈಟ್‍ಗಳೊಂದಿಗೆ ನೀವು ಸ್ವಯಂಚಾಲಿತವಾಗಿ ವೈಯಕ್ತೀಕರಣಗೊಳಿಸಿದ ನೋಟಿಫಿಕೇಶನ್‌ಗಳನ್ನು ಪಡೆಯುತ್ತೀರಿ.

ಮೇಲ್ಭಾಗದಲ್ಲಿ ಹೊಸ ನೋಟಿಫಿಕೇಶನ್‌ಗಳೊಂದಿಗೆ, ಇನ್‌ಬಾಕ್ಸ್ ನೋಟಿಫಿಕೇಶನ್‌ಗಳನ್ನು ಸಮಯಕ್ಕೆ ಅನುಗುಣವಾಗಿ ಜೋಡಿಸಲಾಗುತ್ತದೆ. ಕೆಲವು ನೋಟಿಫಿಕೇಶನ್‌ಗಳನ್ನು “ಪ್ರಮುಖ” ವಿಭಾಗದಲ್ಲಿ ಹೊಸದರ ಮೇಲೆ ವೈಶಿಷ್ಟ್ಯಗೊಳಿಸಬಹುದು, ಇದು ನಿಮಗೆ ಹೆಚ್ಚು ಸೂಕ್ತವೆಂದು ನಾವು ಭಾವಿಸುವ ಅಧಿಸೂಚನೆಗಳನ್ನು ವೈಶಿಷ್ಟ್ಯಗೊಳಿಸಬಹುದು. ಪ್ರಮುಖ ನೋಟಿಫಿಕೇಶನ್‌ಗಳ ಉದಾಹರಣೆಗಳು ನಿಮ್ಮ ಪ್ರತಿಕ್ರಿಯೆಗೆ ಪ್ರತ್ಯುತ್ತರವನ್ನು ಒಳಗೊಂಡಿರಬಹುದು ಅಥವಾ ಜನರು ನಿಮ್ಮ ವೀಡಿಯೊಗಳನ್ನು ಹಂಚಿಕೊಂಡಾಗ.

ಸಬ್‌ಸ್ಕ್ರೈಬ್ ಮಾಡಿರುವ ಚಾನಲ್‌ನಿಂದ ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯಲು, ನೋಟಿಫಿಕೇಶನ್ ಬೆಲ್  ಅನ್ನು ಟ್ಯಾಪ್ ಮಾಡಿ. ನೀವು ಎಲ್ಲಾ ನೋಟಿಫಿಕೇಶನ್‌ಗಳನ್ನು ಆಯ್ಕೆಮಾಡಿದ್ದೀರಿ ಎಂಬುದನ್ನು ಸೂಚಿಸಲು ಬೆಲ್ ನಂತರ ರಿಂಗಿಂಗ್ ಬೆಲ್‌ಗೆ  ಬದಲಾಗುತ್ತದೆ.

ಚಾನಲ್‌ನ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಹೊಂದಿಸಿದರೆ ನೀವು ನೋಟಿಫಿಕೇಶನ್‌ಗಳನ್ನು ಪಡೆಯುವುದಿಲ್ಲ. ನೋಟಿಫಿಕೇಶನ್ ಬೆಲ್ ಅನ್ನು ಯಾವುದೇ ನೋಟಿಫಿಕೇಶನ್‌ಗಳಿಲ್ಲ ಎಂದು ಹೊಂದಿಸಲಾಗುವುದು. ನೀವು ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16510792214016084082
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false