ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ಹಿಂತೆಗೆದುಕೊಳ್ಳುವಿಕೆ

ನೀವು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ದೋಷದಿಂದಾಗಿ ಸಲ್ಲಿಸಿದ್ದರೆ, ನೀವು ಅದನ್ನು ಹಿಂತೆಗೆದುಕೊಳ್ಳಬಹುದು. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ಹಿಂತೆಗೆದುಕೊಳ್ಳುವಿಕೆಯು:

  • ಸ್ಟ್ರೈಕ್‌ಗೆ ಇತರ ಕಂಟೆಂಟ್ ಕೊಡುಗೆ ನೀಡದಿದ್ದರೆ, ಅಪ್‌ಲೋಡ್ ಮಾಡಿರುವವರ ಚಾನಲ್‌ನಿಂದ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ತೆರವುಗೊಳಿಸುತ್ತದೆ.
  • ಅಪ್‌ಲೋಡ್ ಮಾಡಿದವರು ಕಂಟೆಂಟ್ ಅನ್ನು ಅಳಿಸದ ಹೊರತು, ಅಪ್‌ಲೋಡ್ ಮಾಡಿದವರ ಕಂಟೆಂಟ್ ಅನ್ನು YouTube ನಲ್ಲಿ ಮರುಸ್ಥಾಪಿಸುತ್ತದೆ.

ತೆಗೆದುಹಾಕಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದವರು ನೀವಾಗಿದ್ದರೆ, ಹಿಂತೆಗೆದುಕೊಳ್ಳುವಿಕೆಯನ್ನು ವಿನಂತಿಸಿಕೊಳ್ಳಲು ನಿಮಗೆ ಸಾಧ್ಯವಾಗಬಹುದು.

ನೀವು ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ್ದರೆ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಹಿಂತೆಗೆದುಕೊಳ್ಳಲು 2 ವಿಧಾನಗಳಿವೆ:

  • YouTube Studio ದಲ್ಲಿ ಹಿಂತೆಗೆದುಕೊಳ್ಳಿ
  • ಇಮೇಲ್ ಮೂಲಕ ಹಿಂತೆಗೆದುಕೊಳ್ಳಿ
YouTube Studio ದಲ್ಲಿ ಹಿಂತೆಗೆದುಕೊಳ್ಳಿ

ನಿಮ್ಮ ತೆಗೆದುಹಾಕುವಿಕೆ ವಿನಂತಿಯು ಈಗಾಗಲೇ ಬಗೆಹರಿದಿದ್ದರೆ ಮತ್ತು ಕಂಟೆಂಟ್ ತೆಗೆದುಹಾಕುವಿಕೆಗೆ ಕಾರಣವಾಗಿದ್ದರೆ, YouTube Studio ದಲ್ಲಿ ನೀವು ಅದನ್ನು ಹಿಂತೆಗೆದುಕೊಳ್ಳಬಹುದು:

  1. ಕಂಪ್ಯೂಟರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕೃತಿಸ್ವಾಮ್ಯ ಎಂಬುದನ್ನು ಆಯ್ಕೆಮಾಡಿ.
  3. ತೆಗೆದುಹಾಕುವಿಕೆ ವಿನಂತಿಗಳು ಟ್ಯಾಬ್‌ನಲ್ಲಿ ತೆಗೆದುಹಾಕುವಿಕೆ ವಿನಂತಿಗಾಗಿ ನೀವು ಸಲ್ಲಿಸಿರುವ ವೀಡಿಯೊವನ್ನು ಹುಡುಕಿ.
  4. ವೀಡಿಯೊ ಕುರಿತು ಹೆಚ್ಚಿನ ವಿವರಗಳನ್ನು ತೋರಿಸಲು "ವಿಸ್ತೃತಗೊಳಿಸಿ" ಎಂಬುದನ್ನು ಕ್ಲಿಕ್ ಮಾಡಿ.
  5. ಈಗಾಗಲೇ ವೀಡಿಯೊವನ್ನು ತೆಗೆದುಹಾಕಿದ್ದರೆ, ತೆಗೆದುಹಾಕುವಿಕೆಯನ್ನು ಹಿಂತೆಗೆದುಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ. ನಿಗದಿಪಡಿಸಿದ ತೆಗೆದುಹಾಕುವಿಕೆ ವಿನಂತಿಯಿಂದಾಗಿ ವೀಡಿಯೊ ತೆಗೆದುಹಾಕುವಿಕೆಯು ಬಾಕಿಯಿದ್ದರೆ, ವಿನಂತಿಯನ್ನು ಹಿಂತೆಗೆದುಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
  6. ಪಾಪ್-ಅಪ್ ವಿಂಡೋದಲ್ಲಿ, ಹಿಂತೆಗೆದುಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
YouTube ಪಾಲುದಾರರಿಗೆ ಸೂಚನೆ: ನೀವು YouTube Studio ಕಂಟೆಂಟ್ ಮ್ಯಾನೇಜ​ರ್‌ಗೆ CVP ಖಾತೆಯನ್ನು ಅಥವಾ ಆ್ಯಕ್ಸೆಸ್ ಅನ್ನು ಹೊಂದಿದ್ದರೆ, ಈ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ನೀವು ತೆಗೆದುಹಾಕುವಿಕೆ ವಿನಂತಿಗಳನ್ನು ಹಿಂತೆಗೆದುಕೊಳ್ಳಬಹುದು ಅಥವಾ ರದ್ದುಮಾಡಬಹುದು. ಮೂಲ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿದ್ದ ಅದೇ Google ಖಾತೆಗೆ ನೀವು ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕ್ಲೈಮ್ ಅನ್ನು ಹಿಂತೆಗೆದುಕೊಂಡ ನಂತರ ಹೊಂದಾಣಿಕೆಯಾಗುವ ವೀಡಿಯೊಗಳಿಗೆ ಕ್ಲೈಮ್ ಮಾಡಲು ಆಗುವುದಿಲ್ಲ ಎಂಬುದನ್ನು ನೆನಪಿಡಿ.
ಇಮೇಲ್ ಮೂಲಕ ಹಿಂತೆಗೆದುಕೊಳ್ಳಿ

ಈ ಅವಶ್ಯಕತೆಗಳನ್ನು ಇಮೇಲ್ ಪೂರೈಸುವವರೆಗೂ ನೀವು ಇಮೇಲ್ ಮೂಲಕ ತೆಗೆದುಹಾಕುವಿಕೆ ವಿನಂತಿಯನ್ನು ಹಿಂತೆಗೆದುಕೊಳ್ಳಬಹುದು:

  1. ಇಮೇಲ್ ಅನ್ನು ಮೂಲ ಕ್ಲೇಮುದಾರರು ಅಥವಾ ಕ್ಲೇಮುದಾರರ ಪರವಾಗಿ ಅಧಿಕೃತ ಪ್ರತಿನಿಧಿಯು (ಉದಾಹರಣೆಗೆ ವಕೀಲರು) ಕಳುಹಿಸಬೇಕು.
  2. ಮೂಲ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಲು ಬಳಸಲಾಗಿದ್ದ ಅದೇ ಇಮೇಲ್ ವಿಳಾಸ ಅಥವಾ ಕಾರ್ಪೋರೇಟ್ ಡೊಮೇನ್‌ನಿಂದ ಇಮೇಲ್ ಕಳುಹಿಸಬೇಕು.
  3. ಇಮೇಲ್ ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರಬೇಕು:
    • ನಿಮ್ಮ ತೆಗೆದುಹಾಕುವಿಕೆ ವಿನಂತಿಯಿಂದ ಪಡೆದ ಕಂಟೆಂಟ್‌ಗೆ ಇರುವ ಫಾರ್ಮ್ಯಾಟ್ ಮಾಡಲಾದ ಲಿಂಕ್‌ಗಳು: ವೀಡಿಯೊಗಳಿಗಾಗಿ, ಮಾನ್ಯವಾದ URL ಫಾರ್ಮ್ಯಾಟ್ www.youtube.com/watch?v=xxxxxxxxxxx ಆಗಿದೆ. ವೀಡಿಯೊ-ಯೇತರ ಕಂಟೆಂಟ್‌ಗಾಗಿ, ಸೂಕ್ತವಾದ ಕಂಟೆಂಟ್ ಪ್ರಕಾರಕ್ಕೆ ಇಲ್ಲಿ ಪಟ್ಟಿ ಮಾಡಿರುವ URL ಫಾರ್ಮ್ಯಾಟ್ ಬಳಸಿ.
    • ಹಿಂತೆಗೆದುಕೊಳ್ಳುವಿಕೆಯ ಹೇಳಿಕೆ: ಉದಾಹರಣೆಗೆ, "ನಾನು ಈ ಮೂಲಕ ಕೃತಿಸ್ವಾಮ್ಯ ಉಲ್ಲಂಘನೆಯ ನನ್ನ ಕ್ಲೈಮ್ ಅನ್ನು ನಾನು ಹಿಂತೆಗೆದುಕೊಳ್ಳುತ್ತಿದ್ದೇನೆ." ನಾವು ತೆಗೆದುಹಾಕುವಿಕೆ ವಿನಂತಿಯ ಹಿಂತೆಗೆದುಕೊಳ್ಳುವಿಕೆಯನ್ನು ಮಾತ್ರ ಸ್ವೀಕರಿಸಬಹುದು ಎಂಬುದನ್ನು ನೆನಪಿಡಿ. “ನನ್ನ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ನಾನು ಹಿಂತೆಗೆದುಕೊಳ್ಳುತ್ತೇನೆ” ಎಂಬಂತಹ ಕೇವಲ ಕೃತಿಸ್ವಾಮ್ಯ ಸ್ಟ್ರೈಕ್‌ನ ಹಿಂತೆಗೆದುಕೊಳ್ಳುವಿಕೆಯನ್ನು ನಾವು ಸ್ವೀಕರಿಸಲು ಸಾಧ್ಯವಾಗದು.
    • ಎಲೆಕ್ಟ್ರಾನಿಕ್ ಸಹಿ: ಇಮೇಲ್‌ನ ಕೆಳಭಾಗದಲ್ಲಿ, ಕ್ಲೇಮುದಾರರು ಅಥವಾ ಅಧಿಕೃತ ಪ್ರತಿನಿಧಿಯು, ತಮ್ಮ ಕಾನೂನುಬದ್ಧವಾದ ಪೂರ್ಣ ಹೆಸರನ್ನು ತಮ್ಮ ಸಹಿಯನ್ನಾಗಿ ನಮೂದಿಸಬೇಕು. ಕಾನೂನುಬದ್ಧವಾದ ಪೂರ್ಣ ಹೆಸರು ಕಂಪನಿ ಹೆಸರು ಆಗಿರಲು ಸಾಧ್ಯವಿಲ್ಲ.
  4. ಇಮೇಲ್ ಅನ್ನು copyright@youtube.com ಗೆ ಕಳುಹಿಸಬೇಕು.
ಟಿಪ್ಪಣಿ: YouTube ಚಾನಲ್ ಪ್ರೊಫೈಲ್ ಚಿತ್ರಗಳನ್ನು Google ಮೂಲಕ ಹೋಸ್ಟ್ ಮಾಡಲಾಗಿದೆ. ಪ್ರೊಫೈಲ್ ಚಿತ್ರವೊಂದಕ್ಕಾಗಿ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಹಿಂತೆಗೆದುಕೊಳ್ಳಲು, ನಿಮ್ಮ ಮೂಲ ತೆಗೆದುಹಾಕುವಿಕೆ ವಿನಂತಿ ಗೆ ಸಂಬಂಧಿಸಿದಂತೆ ನೀವು Google ನಿಂದ ಸ್ವೀಕರಿಸಿದ ದೃಢೀಕರಣ ಇಮೇಲ್‌ಗೆ ಪ್ರತ್ಯುತ್ತರಿಸಿ. ಮೇಲೆ ಪಟ್ಟಿ ಮಾಡಲಾದ ಅವಶ್ಯಕತೆಗಳು 1-3 ಅನ್ನು ನಿಮ್ಮ ಇಮೇಲ್ ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
ನೆನಪಿಡಿ: ನಾವು ಮೇಲಿನ ವಿಭಾಗಗಳಲ್ಲಿ ವ್ಯಾಖ್ಯಾನಿಸಿದ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ YouTube Studio ದಲ್ಲಿ ಅಥವಾ ಇಮೇಲ್ ಮೂಲಕ ಸಲ್ಲಿಸಲಾದ ಹಿಂತೆಗೆದುಕೊಳ್ಳುವಿಕೆ ವಿನಂತಿಗಳನ್ನು ಮಾತ್ರ ಸ್ವೀಕರಿಸುತ್ತೇವೆ.

ನಿಮ್ಮ ಕಂಟೆಂಟ್ ಅನ್ನು ತೆಗೆದುಹಾಕಲಾಗಿದ್ದರೆ

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯಿಂದಾಗಿ ತೆಗೆದುಹಾಕಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದವರು ನೀವಾಗಿದ್ದರೆ, ನೀವು ನೇರವಾಗಿ ಕ್ಲೇಮುದಾರರನ್ನು ಸಂಪರ್ಕಿಸಬಹುದು ಮತ್ತು ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳಬಹುದು. ಕೆಲವು ರಚನೆಕಾರರು, ತಮ್ಮನ್ನು ಯಾವ ರೀತಿ ಸಂಪರ್ಕಿಸಬೇಕು ಎನ್ನುವುದರ ಮಾಹಿತಿಯನ್ನು ತಮ್ಮ ಚಾನಲ್‌ನಲ್ಲಿ ಪಟ್ಟಿ ಮಾಡುತ್ತಾರೆ.

ಕಾನೂನಿನ ಪ್ರಕಾರ ಕೃತಿಸ್ವಾಮ್ಯದ ಮಾಲೀಕತ್ವದ ವಿವಾದಗಳಲ್ಲಿ YouTube ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ.

 

ಹಿಂತೆಗೆದುಕೊಳ್ಳುವಿಕೆಯ ನಂತರ ಏನಾಗುತ್ತದೆ

ನೀವು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಹಿಂತೆಗೆದುಕೊಂಡ ನಂತರ, ತೆಗೆದುಹಾಕುವಿಕೆ ವಿನಂತಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಸುವ ಇಮೇಲ್ ನೋಟಿಫಿಕೇಶನ್ ಅನ್ನು ನೀವು ಪಡೆಯುವಿರಿ. ಸಂಬಂಧಿಸಿದ ಕೃತಿಸ್ವಾಮ್ಯ ಸ್ಟ್ರೈಕ್ ಮತ್ತು ಅವರ ತೆಗೆದುಹಾಕಲಾದ ಕಂಟೆಂಟ್‌ನ ಸ್ಥಿತಿಯ ಕುರಿತು ಸಹ ಅಪ್‌ಲೋಡ್‌ ಮಾಡಿದವರಿಗೆ ಸೂಚಿಸಲಾಗುವುದು.

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
246225875614133090
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false